ಎಡಿಟೋರಿಯಲ್

‘ಶಿಶು’ವಾಗಿಯೇ ಉಳಿದಿರುವ ಮುದ್ರಾ ಯೋಜನೆ

ಪ್ರೊ.ಆರ್.ಎಂ.ಚಿಂತಾಮಣಿ

 ದ್ಯಮಶೀಲ ವ್ಯಕ್ತಿಗಳು ಕೃಷಿಯೇತರ ವಲಯಗಳಲ್ಲಿ ತಮ್ಮದೇ ಆದ ಅತಿಸಣ್ಣ (ಲಘುಉದ್ದಿಮೆಗಳನ್ನು (micro undertakingsಆರಂಭಿಸಲು ಮತ್ತು ಮುನ್ನಡೆಸಲು ಸುಲಭವಾಗಿ ಆಧಾರ ಅಥವಾ ಅಡವುಗಳಿಲ್ಲದೆ ಹಣಕಾಸು ಒದಗಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಏಪ್ರಿಲ್ 8, 2015ರಂದು ಹೊಸದೊಂದು ಸಾಲ ಯೋಜನೆಯನ್ನು ಪ್ರಕಟಿಸಿದರುಅದೇ ಪ್ರ.ಮಂಮುದ್ರಾ ಯೋಜನೆ. ‘ಲಘು ಉದ್ದಿಮೆಗಳ ಅಭಿವೃದ್ಧಿ ಮತ್ತು ಮರುಹಣಕಾಸು ಸಂಸ್ಥೆ’ಯನ್ನು (micro undertakings development and redinance agencyಭಾರತೀಯ ಸಣ್ಣ ಉದ್ದಿಮೆಗಳ ಅಭಿವೃದ್ಧಿ ಬ್ಯಾಂಕಿನ ಅಂಗ ಸಂಸ್ಥೆಯಾಗಿ ಸ್ಥಾಪಿಸಲಾಗಿದೆಸಾಲ ಕೊಡುವ ಸಂಸ್ಥೆಗಳಿಗೆ ಮರು ಹಣಕಾಸು (refinanceವ್ಯವಸ್ಥೆಯೂ ಅಗ್ಗದ ದರದಲ್ಲಿ ಲಭ್ಯವಿದೆ.

ಯೋಜನೆಯ ಅಡಿಯಲ್ಲಿ ಲಘು ಉದ್ದಿಮೆದಾರರಿಗೆ 50,000ರೂ. (ಶಿಶು), 50,000 ರೂನಿಂದ 5 ಲಕ್ಷ ರೂ.ವರೆಗೆ (ಕಿಶೋರಮತ್ತು 5 ಲಕ್ಷ ರೂನಿಂದ 10 ಲಕ್ಷ ರೂ.ವರೆಗೆ (ತರುಣಹೀಗೆ ಮೂರು ಹಂತಗಳಲ್ಲಿ ಬ್ಯಾಂಕುಗಳುಬ್ಯಾಂಕೇತರ ಹಣಕಾಸು ಕಂಪೆನಿಗಳು ಮತ್ತು ಲಘು ಹಣಕಾಸು ಸಂಸ್ಥೆಗಳು ಸಾಲ ಒದಗಿಸುತ್ತವೆಬಡ್ಡಿ ದರಗಳು ತೀರಾ ಕಡಿಮೆ ಇದ್ದು ಶೇ.4 ರಿಂದ ಶೇ.7ರವರೆಗೆ ಆಕರಿಸಲಾಗುವುದು (ವಾರ್ಷಿಕ). ಸಾಲ ಮರು ಪಾವತಿ ಕಂತುಗಳ ವ್ಯವಸ್ಥೆಯೂ ಪಡೆದ ಉದ್ದಿಮೆದಾರನ ಅನುಕೂಲಕ್ಕೆ ತಕ್ಕಂತೆ ಇರುತ್ತದೆ.

ಸರ್ಕಾರ ಹೇಳಿರುವಂತೆ ಇಡೀ ಯೋಜನೆ ಮೂರು ತತ್ವಗಳನ್ನು ಆಧಾರವಾಗಿ ಇಟ್ಟುಕೊಂಡಿದೆಒಂದನೆಯದು ಬ್ಯಾಂಕುಗಳು ಹೋಗದೆ ಇದ್ದಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ಒಯ್ಯುವುದುಎರಡನೆಯದು ಬದುಕಿನಲ್ಲಿ ಭದ್ರತೆ ಇಲ್ಲದವರಿಗೆ ಭದ್ರತೆ ಒದಗಿಸುವುದುಮೂರನೆಯದಾಗಿ ಹಣಕಾಸು ಲಭ್ಯವಿಲ್ಲದವರಿಗೆ ಹಣಕಾಸು ದೊರಕಿಸಿ ಕೊಡುವುದು.

ಮೂರು ಹಂತಗಳಲ್ಲಿ ಸಾಲ ಒದಗಿಸುವ ಉದ್ದೇಶವೇನೆಂದರೆ ಶಿಶು ಬೆಳೆದು ಕಿಶೋರನಾಗಬೇಕುನಂತರ ತರುಣನಾಗಿ ತನ್ನ ಕಾಲ ಮೇಲೆ ತಾನು ನಿಲ್ಲುವ ಶಕ್ತಿ ಪಡೆದುಕೊಂಡು ಯೋಜನೆಯಿಂದ ಹೊರಗೆ ಹೋಗುವ ಸಾಮರ್ಥ್ಯ ಪಡೆಯಬೇಕುಸಣ್ಣ ಉದ್ದಿಮೆಯಾಗಿ ಬೆಳೆದು ಮಧ್ಯಮ ಗಾತ್ರಕ್ಕೆ ಏರುವಂತಾಗಬೇಕುಸಾಲ ಪಡೆದ ಲಘು ಉದ್ದೆಮೆಗಳಿಂದ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತದೆಂಬ ನಿರೀಕ್ಷೆಯೂ ಇದೆ.

ಎಂಟು ವರ್ಷಗಳ ಸಾಧನೆ

ಇದೇ ಏಪ್ರಿಲ್ 8ರಂದು ಕೇಂದ್ರ ಹಣಕಾಸು ಸಚಿವರು ಒಂದು ಪ್ರಕಟಣೆ ಹೊರಡಿಸಿ ಮುದ್ರಾ ಯೋಜನೆ ನಡೆದು ಬಂದ ದಾರಿಯ ವಿಷಯವಾಗಿ ವಿವರಗಳನ್ನು ಕೊಟ್ಟಿದ್ದಾರೆಈ ಮಾರ್ಚ್ 24ರ ಹೊತ್ತಿಗೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಒಟ್ಟು 40.82 ಕೋಟಿ ಫಲಾನುಭವಿಗಳಿಗೆ ಮುದ್ರಾ ಯೋಜನೆಯಡಿ 23.2 ಲಕ್ಷ ಕೋಟಿ ರೂ.ಗಳ ಸಾಲಗಳನ್ನು ಕೊಟ್ಟಿರುತ್ತವೆಇವುಗಳಲ್ಲಿ ಶೇ.83 ಖಾತೆಗಳು 50,000 ರೂ. (ಶಿಶುಸಾಲವಾಗಿದ್ದುಶೇ.15ರಷ್ಟು 5 ಲಕ್ಷ ರೂ.ವರೆಗಿನ ಕಿಶೋರ ಸಾಲಗಳಾಗಿವೆ ಮತ್ತು ಉಳಿದ ಶೇ.02 ಖಾತೆಗಳಲ್ಲಿ 10 ಲಕ್ಷ ರೂ.ವರೆಗಿನ ತರುಣ ಸಾಲಗಳಿವೆ.

ಸಾಲ ಪಡೆದವರಲ್ಲಿ ಶೇ.68ರಷ್ಟು ಮಹಿಳೆಯರಿದ್ದಾರೆಶೇ.51 ಜನ ಫಲಾನುಭವಿಗಳು ಅನುಸೂಚಿತ ಜಾತಿಅನುಸೂಚಿತ ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳವರು ಇದ್ದಾರೆಕೋವಿಡ್-19 ತೊಂದರೆ ಇದ್ದ ಎರಡು ವರ್ಷಗಳ ಅವಽಯನ್ನು ಹೊರತುಪಡಿಸಿದರೆ ಉಳಿದ ವರ್ಷಗಳಲ್ಲಿ ಗುರಿ ಮೀರಿ ಸಾಲ ಮಂಜೂರಾತಿಗಳಾಗಿವೆಯಂತೆಇಷ್ಟೊಂದು ದೊಡ್ಡ ಮೊತ್ತವನ್ನು ಹಳ್ಳಿ ಮತ್ತು ಪಟ್ಟಣಗಳಲ್ಲಿರುವ ದೊಡ್ಡ ಸಂಖ್ಯೆಯ ಅತಿಸಣ್ಣ ಉದ್ದಿಮೆದಾರರಿಗೆ (ಉದ್ಯಮಶೀಲರಿಗೆಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅತಿ ಸರಳ ಪ್ರಕ್ರಿಯೆಯಲ್ಲಿ ಅಡವುಗಳಿಲ್ಲದೆ ಒದಗಿಸುವುದು ಒಂದು ಸಾಧನೆ ಎಂದು ವರ್ಣಿಸಲಾಗಿದೆ.

ಮುದ್ರಾ ಯೋಜನೆಯನ್ನು ಹಣಕಾಸು ಒಳಗೊಳ್ಳುವಿಕೆ ಮತ್ತು ಗ್ರಾಮೀಣ ಲಘು ಉದ್ಯಮಗಳ ಬೆಳವಣಿಗೆ ದೃಷ್ಟಿಯಿಂದ ಇನ್ನೊಂದು ಮಹತ್ವದ ಹೆಜ್ಜೆ ಎಂಬುದರಲ್ಲಿ ಎರಡು ಮಾತಿಲ್ಲಉತ್ಪಾದಕ ವ್ಯವಹಾರಗಳಲ್ಲಿ ತೊಡಗುವ ಸಾಮರ್ಥ್ಯ ಮತ್ತು ಕೌಶಲಗಳುಳ್ಳ ಬಡ ಕುಟುಂಬಗಳು ಹಣಕಾಸು ಅವಶ್ಯಕತೆಗಳಿಗಾಗಿ ಶ್ರೀಮಂತ ಸಾಲ ಕೊಡುವವರನ್ನು ಅವಲಂಬಿಸುವುದನ್ನು ತಪ್ಪಿಸಿ ಕಡಿಮೆ ಬಡ್ಡಿ ದರದಲ್ಲಿ ಸಾಂಸ್ಥಿಕ ಹಣಕಾಸು ಪಡೆದು ಸ್ವಾವಲಂಬಿಗಳಾಗುವಂತೆ ಮಾಡುವಲ್ಲಿ ಮುದ್ರಾ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆಸಾಲಗಳ ಸದುಪಯೋಗವಾಗಬೇಕುಕೃಷಿಯಲ್ಲಿ ತೊಡಗಿರುವ ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಹೊರತಂದು ಇತರೆ ಹೆಚ್ಚು ಉತ್ಪಾದಕವಾಗಿರುವ ಲಘು ಉದ್ದೆಮೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಈ ಯೋಜನೆ ಸಹಕಾರಿಯಾಗಬೇಕುಹಳ್ಳಿ ಮತ್ತು ನಗರಗಳಲ್ಲಿಯ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳಲ್ಲಿ ಮೌಲ್ಯವರ್ಧನೆ ಮಾಡಿ ಹೆಚ್ಚು ಬೇಡಿಕೆ ಇರುವ ವಿನ್ಯಾಸ ಮತ್ತು ಗುಣಮಟ್ಟದಲ್ಲಿ ತಯಾರಿಸಿ ದೇಶಿ ಮತ್ತು ವಿದೇಶಿ ಪೇಟೆಗಳಲ್ಲಿ ಮಾರಾಟ ಮಾಡಲು ಈ ಯೋಜನೆಯು ಉಪಯುಕ್ತವಾಗಬೇಕು.

ಯೋಜನೆಯ ಜಾರಿ ಇನ್ನಷ್ಟು ಪರಿಣಾಮಕಾರಿಯಾಗಲಿ

40 ಕೋಟಿಗೂ ಹೆಚ್ಚು ಉದ್ಯಮಶೀಲರಿಗೆ ಅನುಕೂಲವಾಗಿದೆ ಎಂದು ಹೇಳಿರುವ ಅರ್ಥ ಸಚಿವರುಆ ಸಾಲದ ಉಪಯೋಗ ಹೇಗಾಗಿದೆ ಮತ್ತು ಅದರಿಂದ ಎಷ್ಟು ಉತ್ಪಾದನೆ ಹೆಚ್ಚಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲಮಂಜೂರಾದ ಸಾಲ ಎಲ್ಲವನ್ನೂ ಬಳಸಲಾಗಿದೆಯೇ ಎಂಬುದೂ ಮೇಲ್ನೋಟಕ್ಕೆ ತಿಳಿಯುವುದಿಲ್ಲ.

ಒಂದಂತೂ ನಿಜಎಂಟು ವರ್ಷಗಳ ನಂತರವೂ ಬರಿ 50,000 ರೂಸಾಲ ಪಡೆದ ಶಿಶು ಲಘು ಉದ್ಯಮಗಳ ಸಂಖ್ಯೆಯೇ ದೊಡ್ಡದಾಗಿದೆಕಿಶೋರ ಮತ್ತು ತರುಣ ಆಗಿ ಬೆಳೆಯಲೇ ಇಲ್ಲವೆಇಷ್ಟೊತ್ತಿಗೆ 5 ಲಕ್ಷ ರೂ., 10 ಲಕ್ಷ ರೂಸಾಲ ಪಡೆದು ಹೆಚ್ಚು ಜನರಿಗೆ ಕೆಲಸ ಕೊಡುವ ಸ್ಥಿತಿಗೆ ಹೆಚ್ಚು ಉದ್ಯಮಗಳು ಮೇಲೇರಬೇಕಿತ್ತುಆದರೆ ಹಾಗಾದಂತೆ ಕಂಡುಬರುವುದಿಲ್ಲಸಾಲ ಪಡೆದವರು ಬೆಳೆಯುವುದಿಲ್ಲವೋ ಅಥವಾ ದೊಡ್ಡ ಸಂಖ್ಯೆ ತೋರಿಸಲು ಅತಿ ಸಣ್ಣ ಸಾಲಗಳನ್ನೇ ಕೊಡಲಾಗಿದೆಯೋ ಎಂಬುದು ಖಚಿತವಾಗಬೇಕು.

ಸಣ್ಣ ಉದ್ಯಮಗಳ ಬಗ್ಗೆ ಹಿಂದೆ ಒಂದು ಮಾತಿತ್ತುತೆರಿಗೆ ಮತ್ತು ಇತರೆ ಸೌಲಭ್ಯಗಳನ್ನು ನಿರಂತರ ಬಳಸಿಕೊಳ್ಳಲು ಬೆಳೆಯುವ ಅವಕಾಶಗಳಿದ್ದರೂ ಸಣ್ಣ ಉದ್ಯಮಗಳಾಗಿಯೇ ಉಳಿಯುವ ಹುನ್ನಾರ ಕೆಲವು ಸಣ್ಣ ಉದ್ದಿಮೆದಾರರಿಂದ ನಡೆದ ಬಗ್ಗೆ ಸಾಕಷ್ಟು ಉದಾಹರಣೆಗಳಿದ್ದವುಈಗ ಮುದ್ರಾ ಯೋಜನೆಯ ದುರುಪಯೋಗ ಆಗಬಾರದುಮುದ್ರಾ ಸಂಸ್ಥೆ ಮತ್ತು ಹಣಕಾಸು ಸಂಸ್ಥೆಗಳು ಹೆಚ್ಚು ಸಕ್ರಿಯವಾಗಿದ್ದುಸಾಲಗಳ ನಿರಂತರ ಮೇಲ್ವಿಚಾರಣೆ ಮಾಡುವುದಲ್ಲದೆ ಸಾಲ ಪಡೆದವರು ಉದ್ಯಮ ಬೆಳೆಸಬೇಕೆನ್ನುವ ವಾತಾವರಣ ನಿರ್ಮಿಸಬೇಕುಸಾಲದ ಹಣ ಪರಭಾರೆಯಾಗದಂತೆ ಎಚ್ಚರವಹಿಸಬೇಕು.

ಎಷ್ಟೋ ಉದ್ಯಮಶೀಲರು ಸ್ವಉದ್ಯೋಗ ಆರಂಭಿಸಿ ಕುಟುಂಬದ ಸದಸ್ಯರ ಕೂಲಿಯಿಲ್ಲದ ಸೇವೆ ಬಳಸಿಕೊಂಡು ಅಷ್ಟಕ್ಕೆ ತೃಪ್ತಿಪಡುವವರಿರುತ್ತಾರೆಬೆಳೆದು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲಅಂಥವರ ಮನಸ್ಥಿತಿಯನ್ನು ಪರಿವರ್ತಿಸಿ ಬೆಳೆಯುವ ಕೌಶಲಗಳನ್ನು ಕಲ್ಪಿಸಿ ಹೆಚ್ಚು ಲಾಭ ಪಡೆಯಲು ತಯಾರಾಗುವಂತೆ ತರಬೇತಿ ನೀಡಬೇಕುಆಗಾಗ ಪ್ರಾತ್ಯಕ್ಷಿಕೆ ಗಳನ್ನು ವ್ಯವಸ್ಥೆ ಮಾಡಬೇಕುಮಾರುಕಟ್ಟೆ ಮಾಹಿತಿ ಒದಗಿಸುವುದಲ್ಲದೆ ಹೊಸ ತಂತ್ರಜ್ಞಾನಗಳನ್ನೂ ಪರಿಚಯಿಸಬೇಕುಹೊಸತನ ಮತ್ತು ನಾವೀನ್ಯತೆಗಳನ್ನು ಅಳವಡಿಸಲು ಪ್ರೋತ್ಸಾಹಿಸಬೇಕುಯಾವುದೇ ಕಾರಣದಿಂದ ತೊಂದರೆಗಳು ಕಂಡುಬಂದರೆ ಅವುಗಳನ್ನು ಸರಿಪಡಿಸಲು ಅವಕಾಶಗಳಿರಬೇಕು

ಒಟ್ಟಿನಲ್ಲಿ ಮುದ್ರಾ ಹತ್ತರೊಡನೆ ಹನ್ನೊಂದನೆ ಯೋಜನೆಯಾಗಬಾರದು.

 

andolanait

Recent Posts

ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್‌ ಒಡೆಯರ್‌

ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್  ಒಡೆಯರ್‌ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…

2 hours ago

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್‌ 12ರಂದು ದೆಹಲಿಗೆ…

2 hours ago

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

7 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

7 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

7 hours ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

7 hours ago