ಎಡಿಟೋರಿಯಲ್

ಮೋದಿಯಿಂದ ರಿಷಿಗೆ ಉಪದೇಶ ‘Go the raw way’

ಇಂಡೋನೆಷಿಯಾದ ಬಾಲಿಯಲ್ಲಿ ಜಿ೨೦ ಶೃಂಗಸಭೆ ಮುಗಿದ ನಂತರ ಒಂದೂವರೆ ಡಜನ್ನು ದೇಶಗಳ ನಾಯಕರು ಮನರಂಜನೆಗಾಗಿ ಕಡಲ ಕೀನಾರೆಗೆ ತೆರಳಿದ್ದರು. ಭಾರತದ ಪ್ರಧಾನಿ ಮೋದಿ ಮತ್ತು ಯುಕೆ ಪ್ರಧಾನಿ ರಿಷಿ ಉಬುದ್ ಮಂಕಿ ಫಾರೆಸ್ಟ್‌ಗೆ ತೆರಳಿ ಅಲ್ಲಿದ್ದ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಿರ್ಜನವಾದ ಪ್ರದೇಶದಲ್ಲಿ ಕುಳಿತು ಲೋಕಾಭಿರಾಮ ಮಾತನಾಡುತ್ತಿದ್ದರು.

‘ರಿಷಿ, ಅಭಿನಂದನೆಗಳು ನಿಮಗೆ ತುಂಬಾ ಕಡಿಮೆ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ಹೊತ್ತಿದ್ದೀರಿ.. ಈ ಜವಾಬ್ದಾರಿನಾ ನೀವು ಸಮರ್ಥವಾಗಿ, ಯಶಸ್ವಿಯಾಗಿ ನಿರ್ವಹಿಸುತ್ತೀರಿ ಅಂತಾ ನಂಗೆ ವಿಶ್ವಾಸ ಇದೆ’ ಎಂದು ಮೋದಿ ರಿಷಿ ಅವರ ಬೆನ್ನು ತಟ್ಟಿದರು.

ಕೈ ಮುಗಿದು ಕೃತಜ್ಞತೆ ಸಲ್ಲಿಸಿದ ರಿಷಿ, ‘ಮೋದಿಜಿ, ನಾನು ಪಾಲಿಟಿಕ್ಸ್‌ಗೆ ಬರೋಕು ಮುಂಚಿನಿಂದ ನಿಮ್ಮುನ್ನಾ ಫಾಲೋ ಮಾಡ್ತಾ ಇದ್ದೀನಿ. ನಂಗೆ ಏನಾಶ್ಚರ್ಯ ಗೊತ್ತಾ? ಅದೇಂಥದೇ ಪ್ರಾಬ್ಲಮ್ ಇರಲಿ, ನೀವು ಈಸಿಯಾಗಿ ಸಾಲ್ವ್ ಮಾಡಿ ಬಿಡ್ತೀರಿ.. ನಿಮ್ಮ ಜಾಣ್ಮೆ, ಪ್ರಬುದ್ಧತೆ ವಿಶ್ವದ ಯಾವ ನಾಯಕರಿಗೂ ಇಲ್ಲ..’ ಎಂದರು.

ರಿಷಿ ಹೊಗಳಿಕೆಗೆ ಮುನಿಯದ ಮೋದಿ, ಮುಗುಳ್ನಗೆ ಚೆಲ್ಲಿದರು.
‘ನಂಗೆ ಈ ರೀತಿಯ ಹೊಗಳಿಕೆಯೆಲ್ಲ ಇಷ್ಟಾ ಆಗೊದಿಲ್ಲಪಾ.. ನಿಮ್ಮಂತವರು ಹೇಳ್ತಾರೆ, ಮೋದಿನೇ ವಿಶ್ವಗುರು ಅಂತಾ.. ನಂಗೇನು ನಾನು ವಿಶ್ವಗುರು ಅಂತಾ ಅನ್ನಿಸ್ತಾ ಇಲ್ಲ. ನಂಗೆ ಗೊತ್ತಿರೋ ಸತ್ಯ ಏನು ಅಂದರೆ, ನಾವು ಹೋಗಿ ಸಮಸ್ಯೆ ಹೇಳಿಕೊಂಡು ಪರಿಹಾರ ಕೇಳಿಕೊಳ್ಳುವಂತಹ ಗುರುಗಳು ಯಾರೂ ನನ್ನ ಕಣ್ಣಿಗೆ ಬೀಳುತ್ತಿಲ್ಲ.. ನಮ್ಮ ದೇಶದ ಸಮಸ್ಯೆ ನಮಗೆ ಹೊರೇನೇ? ಅದುಕ್ಕೆ ನಾನೇ ಸಾಲ್ವ್ ಮಾಡಿಕೊಳ್ತೀನಿ..’ ಎಂದು ದೇಶಾವರಿ ನಗೆ ಬೀರಿದರು ಮೋದಿ.

ಮೋದಿಯವರನ್ನು ಅಭಿಮಾನದಿಂದ ಬಿಟ್ಟಕಣ್ಣಿನಿಂದ ನೋಡುತ್ತಿದ್ದ ರಿಷಿ, ‘ಮೋದಿಜಿ, ನಾನು ಪ್ರಧಾನಿ ಆಗಿದ್ದೇ ನಮ್ ದೇಶ ಸಮಸ್ಯೆಗಳಿಗೆ ಸಿಕ್ಕಾಕೊಂಡಿರೋದ್ರಿಂದ.. ಹೀಗಾಗಿ ನಾನು ಸುಖದ ಸುಪ್ಪತ್ತಿಗೆಯಲ್ಲಿ ಕೂರೋಕೆ ಆಗ್ತಾ ಇಲ್ಲ. ಸುಖದ ಸುಪ್ಪತ್ತಿಗೆಯಲ್ಲಿ ಕೂರೋವಷ್ಟು ಸಂಪತ್ತು ನನ್ನ ಬಳಿ ಇದ್ದರೂ ನಾನು ಕೂರಲಾರೆ. ನಾನೀಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ.. ದಯವಿಟ್ಟು ನೀವು ನನಗೆ ಮಾರ್ಗದರ್ಶನ ಮಾಡಬೇಕು ನಿಮ್ಮ ಮನೆಯ ಮಗ ಅಂತಾ ಅಂದುಕೊಳ್ಳಲು ನಿಮಗೆ ಮುಜುಗರ ಆಗಬಹುದೇನೋ ಮೋದಿಜಿ.. ಆದರೆ, ನಿಮ್ಮ ಮನೆಯ ಅಳಿಯಾ ಅಂತಾ ತಿಳಿದುಕೊಂಡು ನೀವು ನನಗೆ ಮಾರ್ಗದರ್ಶನ ಮಾಡಬೇಕು ಮೋದಿಜಿ..’ ಎಂದು ಅಂಗಲಾಚುವ ದನಿಯಲ್ಲಿ ಕೇಳಿದರು.

ಮೋದಿಯವರ ಮುಖದಲ್ಲಿ ಸಡನ್ನಾಗಿ ವಿಶ್ವಗುರುವಿನ ಕಳೆ ಬಂದೇ ಬಿಟ್ಟಿತು. ಅಷ್ಟಕ್ಕೂ ವಿಶ್ವದ ಐದನೇ ದೊಡ್ಡ ದೇಶದ ಪ್ರಧಾನಿಯೇ ಮಾರ್ಗದರ್ಶನ ಮಾಡಿ ಅಂತಾ ಅಂಗಲಾಚುತ್ತಿದ್ದಾರೆ ಎಂದರೆ ತಮಾಷೆನಾ?

ನೋಡಿ ರಿಷಿ ನೀವೇನೂ ತಲೆಕೆಡಿಸಿಕೊಳ್ಳಬೇಡಿ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇದೆ. ಆದರೆ ಪರಿಹಾರದ ಮಾರ್ಗವನ್ನು ನಾವು ಸರಿಯಾಗಿ ಹುಡುಕಿಕೊಳ್ಳಬೇಕು ಟ್ಠ ಞ್ಠಠಿ ಜಟ ಠಿಛಿ ್ಟಡಿ ಡಿ ಆಗಮಾತ್ರ ಸಮಸ್ಯೆಗಳಿಗೆ ಪರಿಹಾರವಿದೆ’ ಎಂದರು.

‘ಮೋದಿಜಿ.. ಜಟ ಠಿಛಿ ್ಟಡಿ ಡಿ ಅಂದರೆ ನಂಗೆ ಅರ್ಥ ಆಗಲಿಲ್ಲ’ ಗೊಂದಲಗೊಂಡ ರಿಷಿ ಕೇಳಿದರು.

‘ರಿಷಿ ನೀವು ಸಾಲುಗಳ ಮಧ್ಯದಲ್ಲಿನ ಅರ್ಥ ಹುಡುಕಲು ಹೋಗಬೇಡಿ.. ಟ್ಠ ಞ್ಠಠಿ ಜಟ ಠಿಛಿ ್ಟಡಿ ಡಿ ಅಂದರೆ ನೀವು ಕಚ್ಚಾ ದಾರಿಯಲ್ಲಿ ಹೋಗಬೇಕು.. ಆಗ ತ್ವರಿತ ಪರಿಹಾರ ಸಿಗುತ್ತದೆ’ ಎಂದರು ಮೋದಿ.

‘ನಂಗೆ ಸರಿಯಾಗಿ ಅರ್ಥ ಆಗಲಿಲ್ಲ ಮೋದಿಜಿ’ ರಿಷಿ ಕ್ಷಮೆಯಾಚಿಸುವ ದನಿಯಲ್ಲಿ ಹೇಳಿದರು.

‘ನೋಡಿ ರಿಷಿ, ಎಲ್ಲರೂ ಪಕ್ಕಾ ಅಂದರೆ ಸುವ್ಯವಸ್ಥಿತ ದಾರಿಯಲ್ಲೇ ಹೋಗುತ್ತಾರೆ ಆದರೆ, ನಾನು ಕಚ್ಚಾದಾರಿಯಲ್ಲಿ ಹೋಗುತ್ತೇನೆ. ಕಚ್ಚಾದಾರಿಯಲ್ಲೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಇದೆ’

ಎಂದರು ಮೋದಿಜಿ. ರಿಷಿಗೆ ಆಗಲೂ ಅರ್ಥವಾಗಲಿಲ್ಲ.

‘ಮೋದಿಜಿ ಸ್ವಲ್ಪ ಬಿಡಿಸಿ ಹೇಳ್ತೀರಾ’ ಎಂದು ರಿಷಿ ತಲೆಕೆರೆದುಕೊಂಡು ಕೇಳಿದರು.

‘ರಿಷಿ.. ನೀವು ಹಾರ್ವರ್ಡ್ ಎಜುಕೇಟೆಡ್, ತುಂಬಾ ಪಾಲಿಶ್ಡ್.. ರಾ ಅಂದರೆ ಗೊತ್ತಾಗಲ್ಲ .. ನೋಡಿ ನಮ್ಮ ದೇಶದಲ್ಲಿ ಕರಪ್ಶನ್ನು, ಬ್ಲಾಕ್ ಮನಿ ಸಮಸ್ಯೆಗಳಿದ್ವು.. ಅದುನ್ನಾ ನಾನು ಕಚ್ಚಾದಾರಿಯಲ್ಲಿ ಸಾಗಿ ಪರಿಹಾರ ಕಂಡುಕೊಂಡೆ.. ನೋಟ್ ಬ್ಯಾನ್ ಮಾಡಿದೆ.. ನಮ್ಮಲ್ಲಿ ತೆರಿಗೆ ವಂಚನೆ ಜಾಸ್ತಿ ಇತ್ತು. ತೆರಿಗೆ ವಂಚನೆ ತಪ್ಪಿಸೋಕೆ ಅಂತಾ ಮಧ್ಯರಾತ್ರಿ ಜಾಯಿಂಟ್ ಪಾರ್ಲಿಮೆಂಟ್ ಸೆಶನ್ ಕರೆದು ಜಿಎಸ್‌ಜಿ ಜಾರಿ ಮಾಡಿದೆ.. ಇತ್ತೀಚೆಗೆ ಕೋವಿಡ್ ಬಂದಾಗ ಸೋಂಕು ಹರಡೋಕು ಮುನ್ನವೇ ಲಾಕ್‌ಡೌನ್ ಮಾಡಿದೆ.. ಸೋಂಕನ್ನು ಪರಣಾಮಕಾರಿಯಾಗಿ ತಡೆಗಟ್ಟಿದೆ… ಈ ಎಲ್ಲಾ ನಿರ್ಧಾರಗಳು ಕಚ್ಚಾ ನಿರ್ಧಾರಗಳು. ಅವರಿವರ ಸಲಹೆ ಪಡೆಯುತ್ತಾ ಕುಳಿತರೆ ಕೆಲಸ ಆಗಲ್ಲ.. ಈ ಬ್ಯೂರೋಕ್ರಾಟುಗಳು ಬರೀ ಸಭೆಯಲ್ಲೇ ಕಾಲ ಕಳೀತಾರೆ, ಕೆಲಸ ಆಗಬೇಕು ಅಂದರೆ ನಾವೇ ತಕ್ಷಣ ನಿರ್ಧಾರ ತಗೋಬೇಕು.. ಇಂಪ್ಲಿಮೆಂಟ್ ಮಾಡಬೇಕು.. ಸಣ್ಣಪುಟ್ಟ ಲೋಪದೋಷ ಇದ್ದೆ ಇರುತೆ..್ತ ಕಚ್ಚಾ ದಾರಿ ಅಂದಮೇಲೆ ಎಡುವೋದು ಸಹಜ ತಾನೆ..?’

ಮೋದಿ ಮಾತುಗಳನ್ನು ಕೇಳಿ ರೋಮಾಂಚನಗೊಂಡ ರಿಷಿ ಮತ್ತೆ ಕೈಮುಗಿದು, ‘ಮೋದಿಜಿ ನಿಮ್ಮ ಸಲಹೆ, ಮಾರ್ಗದರ್ಶನದಿಂದ ಖಂಡಿತವಾಗಿಯೂ ನಾನು ನಮ್ಮ ದೇಶದ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳುತ್ತೇನೆ.. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ದೇಶದ ಆರ್ಥಿಕತೆಯು ವಿಶ್ವದ ಐದನೇ ದೊಡ್ಡ ಆರ್ಥಿಕತೆಯಾಗಿ ಮುಂದುವರೆಯುಂತೆ ನೋಡಿಕೊಳ್ಳುತ್ತೇನೆ.. ನಿಮ್ಮ ಭಾರತದ ಆರ್ಥಿಕತೆ ಆರನೇ ಸ್ಥಾನದಲ್ಲೇ ಇರುವಂತೆಯೂ ನೋಡಿಕೊಳ್ತೇನೆ’ ಎಂದರು.

ರಿಷಿ ಮಾತು ಕೇಳಿ ಮೋದಿ ಅವರಿಗೆ ಕಸಿವಿಸಿಯಾಯ್ತು. ಅಲ್ಲಾ ಈ ಮನುಷ್ಯಾ ನನ್ ಹತ್ರಾನೇ ಸಲಹೆ ತಗೊಂಡು ನನ್ ದೇಶಾನೇ ಐದನೇ ದೊಡ್ಡ ಆರ್ಥಿಕ ದೇಶಾ ಆಗೋಕೆ ಬಿಡಲ್ಲ ಅಂತಾನಲ್ಲಾ ಅಂದುಕೊಂಡರು. ಕೋಪಗೊಂಡರೂ ಸಮಾಧಾನದಿಂದಲೇ ನೂರು ಸೆಕೆಂಡುಗಳ ಕಾಲ ಹಸ್ತಲಾಘವ ಮಾಡಿದರು!

-‘ಅಷ್ಟಾವಕ್ರಾ’

andolana

Recent Posts

ಕದನ ವಿರಾಮ ಬೆನ್ನಲ್ಲೇ ಕಚ್ಚಾ ತೈಲದ ದರ ದಿಢೀರ್‌ ಕುಸಿತ

ವಾಷಿಂಗ್ಟನ್‌ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ…

18 mins ago

ಪೊನ್ನಂಪೇಟೆ | ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

ಮಡಿಕೇರಿ : ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಬಲಿಯಾದ ಘಟನೆ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲದಲ್ಲಿ ನಡೆದಿದೆ. ಆನೆ ದಾಳಿಯಲ್ಲಿ ಸಾವನ್ನಪ್ಪಿದವರನ್ನು…

33 mins ago

PUC RESULT | ನಾಳೆ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದ 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ…

40 mins ago

ಅಮೆರಿಕ ಎದುರು 10ಷರತ್ತು ಮುಂದಿಟ್ಟಿ ಇರಾನ್ ; ಷರತ್ತು ಒಪ್ಪಿಕೊಳ್ಳುತ್ತಾ ಟ್ರಂಪ್‌ ಆಡಳಿತ?

ಟೆಹ್ರಾನ್‌ : ಅಮೆರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಸಮರ ವಿರಾಮಕ್ಕೆ ಒಪ್ಪಂದವಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್…

2 hours ago

ಓದುಗರ ಪತ್ರ | ಬಸವರಾಜ ಬೊಮ್ಮಾಯಿ ನಿರ್ಧಾರ ಸ್ವಾಗತಾರ್ಹ

ಹಾವೇರಿ ವಿಶ್ವವಿದ್ಯಾಲಯವು ತಮಗೆ ಪ್ರಕಟಿಸಿದ್ದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿಕೆ…

2 hours ago

ಓದುಗರ ಪತ್ರ | ಅಮಾನವೀಯ ಲಿಫ್ಟ್ ಸಂಸ್ಕೃತಿ ಅಂತ್ಯವಾಗಲಿ

ನಗರಗಳಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿರುವ ಶ್ರೀಮಂತರು ಸ್ವಿಗ್ಗಿ, ಜೊಮ್ಯಾಟೋ ಮೊದಲಾದ ಆನ್‌ಲೈನ್ ಮೂಲಕ ಆಹಾರ ವಿತರಿಸುವ ಕಂಪೆನಿಗಳ ಡೆಲಿವರಿ ಬಾಯ್ಸ್‌ಗೆ ಲಿಫ್ಟ್…

2 hours ago