ಎಡಿಟೋರಿಯಲ್

ಮುಳುಗಿದವರನ್ನು ಮೇಲೆತ್ತುವ ಮಂಜುನಾಥ ನಾಯ್ಕ್ ಎಂಬ ಆಪದ್ಬಾಂಧವ

 

ಕುಂದಾಪುರ ತಾಲ್ಲೂಕಿನ ಕೊಡ್ಲಾಡಿ ಅನ್ನುವುದು ತೀರಾ ಹಿಂದುಳಿದ ಒಂದು ಪುಟ್ಟ ಗ್ರಾಮ. 1995ರ ಮಳೆಗಾಲದ ಒಂದು ದಿನ ಅದೇ ಗ್ರಾಮದ ಸಾಧು ಎನ್ನುವ ಹೆಂಗಸು ಬಾವಿಗೆ ಅಡ್ಡಲಾಗಿ ಹಾಕಿದ ಮರದ ದಂಡಿಗೆ ಮೇಲೆ ನಿಂತು ನೀರು ಸೇದುತ್ತಿದ್ದಾಗದಂಡಿಗೆ ಮುರಿದು ಬಾವಿಗೆ ಬಿದ್ದರುಅವರ ಕೂಗು ಕೇಳಿ ಆಚೀಚಿನವರು ಜಮಾಯಿಸಿದರುಆದರೆ ಅವರ‍್ಯಾರಿಗೂ ಈಜು ಬರುತ್ತಿರಲಿಲ್ಲವಾದುದರಿಂದ 20 ಅಡಿ ಆಳದ ನೀರು ತುಂಬಿದ ಬಾವಿಯೊಳಕ್ಕೆ ಇಳಿಯಲು ಯಾರೊಬ್ಬರೂ ಧೈರ್ಯ ತೋರಲಿಲ್ಲಆಗನೆರೆದ ಜಂಗುಳಿಯಿಂದ ಒಬ್ಬ ಯುವಕ ಮುಂದೆ ಬಂದು ಬಾವಿಗೆ ಇಳಿದುತಳ ಸೇರುತ್ತಿದ್ದ ಆ ಹೆಂಗಸನ್ನು ಮೇಲೆತ್ತಿ ತಂದರುಆಗಯುವಕನಿಗೆ ಸಹಾಯ ಮಾಡಲು ಕೆಲವರು ಮುನ್ನುಗ್ಗಿದಾಗ ಅವರಲ್ಲಿ ನಾಲ್ಕು ಜನ ಅದೇ ಬಾವಿಯೊಳಕ್ಕೆ ಬಿದ್ದರುಆ ಯುವಕ ಪುನಃ ಬಾವಿಗೆ ಇಳಿದುಒಬ್ಬೊಬ್ಬರನ್ನೇ ಮೇಲೆತ್ತಿ ತಂದು ರಕ್ಷಿಸಿದರುಹೀಗೆಒಂದೇ ದಿನ ಐವರನ್ನು ಸಾವಿನಿಂದ ಪಾರು ಮಾಡಿದ ಆ ಯುವಕ ಮುಂದೆ ಅಂತಹದೇ ದುರ್ಘಟನೆಗಳಿಗೆ ಸಿಕ್ಕಿಕೊಂಡ ನೂರಾರು ಜನರನ್ನು ಜೀವಂತವಾಗಿಮತ್ತುಳಿದ ಸಂದರ್ಭಗಳಲ್ಲಿ ಸತ್ತವರ ಶವಗಳನ್ನು ಹೊರ ತರುವ ಸಾಹಸದ ಕೆಲಸ ಮಾಡುತ್ತ ಸುತ್ತಮುತ್ತಲಿನವರಿಗೆ ಆಪದ್ಬಾಂಧವರಾಗಿ ನೆರವಾಗುತ್ತಿದ್ದಾರೆ.

ಈ ಯುವಕನ ಹೆಸರು ಮಂಜುನಾಥ ನಾಯ್ಕ್ ಕನ್ನೇರಿಕೊಡ್ಲಾಡಿ ಗ್ರಾಮದ ಕನ್ನೇರಿ ಎಂಬಲ್ಲಿನ ಮರಾಠಿ ಮಾತಾಡುವ ಕುಡುಬಿ ಜನಾಂಗಕ್ಕೆ ಸೇರಿದ ದೇವಪ್ಪ ನಾಯ್ಕ್ ಹಾಗೂ ಕನಕ ನಾಯ್ಕ್ ದಂಪತಿಗಳ ಮಗನಾದ ಮಂಜುನಾಥ ನಾಯ್ಕ್ ಓದಿದ್ದು ಕೇವಲ ಐದನೇ ತರಗತಿಯವರೆಗಾದರೂ ಬಾಲ್ಯದಿಂದಲೂ ಬಲು ಚೂಟಿಶಾಲೆಯನ್ನು ಅರ್ಧಕ್ಕೇ ಬಿಟ್ಟ ಮಂಜುನಾಥರನ್ನು ಸೆಳೆದದ್ದು ಯಕ್ಷಗಾನದ ಬಣ್ಣದ ಲೋಕಸಾಸ್ತಾನ ಎಂಬಲ್ಲಿನ ಗೋಳಿಗರಡಿ ಯಕ್ಷಗಾನ ಮೇಳವನ್ನು ಸೇರಿದ ಅವರುಅಲ್ಲಿ ಒಂದು ವರ್ಷ ಬಣ್ಣ ಹಚ್ಚಿದರುಮುಂದೆಮಾರಣಕಟ್ಟೆ ಯಕ್ಷಗಾನ ಮೇಳಕ್ಕೆ ಸೇರಿಅಲ್ಲಿಯೂ ಒಂದು ವರ್ಷ ಕುಣಿದುಮನೆಗೆ ವಾಪಸಾಗಿಕೃಷಿಯಲ್ಲಿ ತೊಡಗಿಸಿಕೊಂಡರುಮುಂದೆ, 1995ರಲ್ಲಿ ನಡೆದ ಆ ಘಟನೆ ಅವರ ಬದುಕನ್ನು ಮತ್ತೊಂದು ದಿಕ್ಕಿಗೆ ಸೆಳೆಯಿತು.

ಮಂಜುನಾಥ ನಾಯ್ಕ್ ಈಜುವುದನ್ನುಮುಳುಗುವುದನ್ನು ಯಾವ ಗುರುವಿನಿಂದಲೂ ಕಲಿತದ್ದಲ್ಲಕೃಷಿ ಜೊತೆಯಲ್ಲಿ ಮೀನುಗಾರಿಕೆ ಕಸುಬು ಮಾಡುತ್ತಿದ್ದಾಗ ತಾನೇ ಸ್ವಯಂ ಕಲಿತದ್ದುಕೊಡ್ಲಾಡಿಯಿಂದ ಕೆಲವು ಮೈಲಿ ದೂರದ ಅಂಪಾರು ಎಂಬ ಗ್ರಾಮದಲ್ಲಿ ಗಂಡ ಹೆಂಡತಿ ಜೋಡಿಯೊಂದು ಭಜನಾ ಮಂದಿರದ ಹತ್ತಿರದ ಬಹು ಆಳದ ಒಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿತ್ತುಅಗ್ನಿಶಾಮಕ ದಳದವರು ಬಂದುಬಹಳ ಹೊತ್ತು ಶೋಧ ನಡೆಸಿಬಾವಿಯಲ್ಲಿ ಶವಗಳಿಲ್ಲ ಎಂದು ವಾಪಸಾಗಿದ್ದರುಮರುದಿನ ಮಂಜುನಾಥ್‌ಗೆ ಯಾರೋ ಸುದ್ದಿ ಮುಟ್ಟಿಸಿಅವರು ಬಂದು ಬಾವಿಗೆ ಇಳಿದು ಶವಗಳನ್ನು ಶೋಧಿಸಿ ಮೇಲೆತ್ತಿ ತರುತ್ತಾರೆಕೆಲವು ವರ್ಷಗಳ ಹಿಂದೆಶಿವಮೊಗ್ಗದ ಪ್ರಭಾವಿ ಹಿರಿಯ ರಾಜಕಾರಣಿಯ ಸಂಬಂಧಿಕರ ಯುವಕನೊಬ್ಬ ಪಿಕ್‌ನಿಕ್‌ಗೆ ಹೋದಾಗನದಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿಮುಳುಗಿ ಸತ್ತಾಗಆ ಶವವನ್ನು ಮೇಲೆತ್ತಿ ತಂದವರೂ ಇದೇ ಮಂಜುನಾಥ ನಾಯ್ಕ್ಹತ್ತಿರದದೂರದ ಯಾರೇ ನೀರಿಗೆ ಬಿದ್ದು ಸತ್ತರೂ ಮಂಜುನಾಥ ನಾಯ್ಕ್‌ಗೆ ಫೋನ್ ಮಾಡಿ ಸುದ್ದಿ ಮುಟ್ಟಿಸಿದರೆ ಸಾಕುಏನೇ ಕೆಲಸ ಮಾಡುತ್ತಿರಲಿ ಅದನ್ನು ಬಿಟ್ಟು ಸಹಾಯಕ್ಕೆ ಧಾವಿಸುತ್ತಾರೆ.

ಪರೋಪಕಾರಾರ್ಥಂ ಇದಂ ಶರೀರಂ’ ಎಂಬ ಮಾತಿಗೆ ಮಂಜುನಾಥ ನಾಯ್ಕ್ ಒಂದು ಜೀವಂತ ಉದಾಹರಣೆನೀರಲ್ಲಿ ಮುಳುಗಿದವರ ಶವಗಳನ್ನು ಮೇಲೆತ್ತುವುದು ಮಾತ್ರವಲ್ಲದೆಶಾಲಾ ಬಡಮಕ್ಕಳಿಗೆ ಶಿಕ್ಷಣಕ್ಕೆ ಅವರಿವರಿಂದ ಹಣ ಹೊಂದಿಸಿ ಕೊಡುವುದುಅನಾರೋಗ್ಯ ಪೀಡಿತರಿಗೆ ಧನ ಸಹಾಯ ಕೊಡಿಸುವುದು ಮೊದಲಾಗಿ ಹಲವು ಸಾಮಾಜಿಕ ಸೇವೆಗಳನ್ನು ಮಾಡುತ್ತಾರೆಮಂಜುನಾಥ ನಾಯ್ಕ್ ಕೇವಲ ಐದನೇ ತರಗತಿಯ ತನಕ ಶಿಕ್ಷಣ ಕಲಿತ್ತಿದ್ದರೂ ಶಾಲಾ ಕಾಲೇಜು ಮಕ್ಕಳಿಗೆ ವಾರ್ಷಿಕೋತ್ಸವ ಮೊದಲಾದ ಸಂದರ್ಭಗಳಿಗೆ ಕಂಸಾಳೆಕೋಲಾಟವೀರಗಾಸೆಡೊಳ್ಳು ಕುಣಿತಯಕ್ಷಗಾನಲಂಬಾಣಿ ಕುಣಿತತನ್ನ ಮರಾಠಿ ಜನಾಂಗದ ಜಾನಪದ ಹಾಡುನೃತ್ಯ ಇತ್ಯಾದಿಗಳ ತರಬೇತಿ ನೀಡುತ್ತಾರೆಸಮಗ್ರ ಗ್ರಾಮೀಣ ಆಶ್ರಮದಂತಹ ಎನ್‌ಜಿಒ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಬೀದಿ ನಾಟಕಗಳನ್ನು ಆಡಿಸಿದ್ದಾರೆಈ ಕಲೆಗಳನ್ನೂ ಮಂಜುನಾಥ ನಾಯ್ಕ್ ತಾನೇ ಸ್ವಯಂ ಕಲಿತದ್ದುಇವುಗಳ ತರಬೇತಿಯಿಂದ ಬರುವ ಸಣ್ಣಪುಟ್ಟ ಆದಾಯವೇ ಮಂಜುನಾಥ ನಾಯ್ಕ್ ಬದುಕಿಗೆ ಆಸರೆಏಕೆಂದರೆನೀರಿನಲ್ಲಿ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತಿ ತಂದಾಗ ಇವರಿಗೆ ಹಣ ಕೊಡುವವರು ತೀರಾ ವಿರಳಅಂತಹ ದುರಂತದ ಸಮಯದಲ್ಲಿ ಹಣ ಕೇಳಲೂ ಇವರಿಗೂ ಮನಸ್ಸು ಬಾರದುಯಾರಾದರೂ ಅವರಾಗೇ ಕೊಟ್ಟರೆ ತೆಗೆದುಕೊಳ್ಳುತ್ತಾರೆಆದರೆಹಾಗೆ ಕೊಡುವವರು ಕಡಿಮೆಮನೆಯ ಕೃಷಿ ಚಟುವಟಿಕೆಗಳಿಂದ ಬರುವ ಆದಾಯವೂ ಭಾರೀ ದೊಡ್ಡದೇನಲ್ಲ.

ನೀರಲ್ಲಿ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತುವುದು ತೀರಾ ಸಾಹಸದ ಹಾಗೂ ಅಪಾಯದ ಕೆಲಸಈ ಸಾಹಸ ಮಾಡುವಾಗ ಎಷ್ಟೋ ಬಾರಿ ಮಂಜುನಾಥ ನಾಯ್ಕ್‌ರ ಜೀವವೇ ಅಪಾಯಕ್ಕೆ ಸಿಕ್ಕ ಉದಾಹರಣೆಗಳಿವೆಮೇಲೆ ಹೇಳಿದಶಿವಮೊಗ್ಗದ ರಾಜಕಾರಣಿಯ ಕುಟುಂಬದ ಯುವಕನ ಶವವನ್ನು ಶೋಧಿಸುವಾಗ ಇವರು ತಾವೇ ನೀರಿನ ಸುಳಿಗೆ ಸಿಕ್ಕಿಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿ ಬಂದಿದ್ದರುಮಂಜುನಾಥ ನಾಯ್ಕ್‌ರ ಈ ಸಾಮಾಜಿಕ ಕಾರ್ಯವನ್ನು ಗುರುತಿಸಿ ನೇಕ ಸಂಘಸಂಸ್ಥೆಗಳು ಅವರನ್ನು ಸನ್ಮಾನಿಸಿಶಾಲು ಹೊದಿಸಿಹೂಹಾರ ಹಾಕಿಪ್ರಮಾಣ ಪತ್ರಫಲಕಸ್ಮರಣಿಕೆಗಳನ್ನು ನೀಡಿ ಗೌರವಿಸಿವೆಅವೆಲ್ಲವನ್ನು ಅವರು ಕಪಾಟುಪೆಟ್ಟಿಗೆಗಳಲ್ಲಿ ಹಾಕಿ ಜೋಪಾನವಾಗಿರಿಸಿದ್ದಾರೆಆದರೆಅವರಿಗೆ ನಿಜಕ್ಕೂ ಅಗತ್ಯವಿರುವುದು ಜೀವರಕ್ಷಣೆ ಒದಗಿಸುವ ಸೇಫ್ಟಿ ಜಾಕೆಟ್ಆಕ್ಸಿಜನ್ ಸಿಲಿಂಡರ್ ನಂತಹ ಕೆಲವು ರಕ್ಷಣಾ ಸಾಮಗ್ರಿಗಳುಸರ್ಕಾರವಾಗಲಿ ಅಥವಾ ಯಾರಾದರೂ ದಾನಿಗಳಾಗಲಿ ಇಂತಹವುಗಳನ್ನು ಅವರಿಗೆ ನೀಡಿದರೆ ಅದು ಮಂಜುನಾಥ ನಾಯ್ಕ್‌ರ ಸೇವೆಗೆ ಸಲ್ಲುವ ನಿಜವಾದ ಕೃತಜ್ಞತೆಯಾಗಬಹುದು.

 

andolanait

Recent Posts

ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಸ್ಪೋಟ : ಓರ್ವ ಸಾವು, ನಾಲ್ವರು ಗಂಭೀರ

ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್‌ಗಾಗಿ ಬಳಸುತ್ತಿದ್ದ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…

7 hours ago

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

9 hours ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

10 hours ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

10 hours ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

10 hours ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

10 hours ago