Commercial Gas Cylinder Price Drops Again...
ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧಕ್ಕಿಂತಲ್ಲೂ ಹೆಚ್ಚು ಸದ್ದು ಮಾಡುತ್ತಿರುವುದು ಭಾರತದಲ್ಲಿನ ಎಲ್‌ಪಿಜಿ ಪೂರೈಕೆ ವಿಚಾರ. ಯುದ್ಧೋನ್ಮಾದ ವೈರತ್ವ ಹೊಂದಿರುವ ಎರಡು ರಾಷ್ಟ್ರಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನೆರೆಹೊರೆಯ ರಾಷ್ಟ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದಕ್ಕೆ ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸಾಕ್ಷಿಯಾಗಿದೆ. ಪ್ರತಿಯೊಂದು ರಾಷ್ಟ್ರವೂ ಭೌಗೋಳಿಕವಾಗಿ ಒಂದರ ಮೇಲೆ ಇನ್ನೊಂದು ಅವಲಂಬಿತ. ವ್ಯಾಪಾರ ವಹಿವಾಟುಗಳಲ್ಲಿ, ಕೊಡು ಕೊಳ್ಳುವಿಕೆಯಲ್ಲಿ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದೊಂದಿಗೆ ಸಂಬಂಧ ಹೊಂದಿರಲೇಬೇಕಾಗುತ್ತದೆ.
ನಮಗೆ ಯಾರ ಹಂಗೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಪ್ರಸ್ತುತ ಯಾವ ದೇಶವೂ ಇಲ್ಲ. ಹಾಗಾಗಿ ಎಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಮೇಲೆ ಹಗೆ ಕಟ್ಟಿಕೊಂಡರೆ ಅದರ ಪರಿಣಾಮ ಆಯಾ ರಾಷ್ಟ್ರಗಳ ನಾಗರಿಕರ ಮೇಲೆ ಉಂಟಾಗುತ್ತದೆ. ಆದ್ದರಿಂದ ಶಾಂತಿ-ಸಹಬಾಳ್ವೆ ಎಲ್ಲ ದೇಶಗಳ ಮೂಲಮಂತ್ರವಾಗಬೇಕಿದೆ. ಯುದ್ಧದ ಪರಿಣಾಮ ಅನಿಲ ವಾಹಕ ಹಡಗುಗಳು ಬರುವುದು ಕಡಿಮೆ ಆಗಿದೆ. ವಿದೇಶಗಳ ಅನಿಲ ಪೂರೈಕೆಯಿಂದಲೇ ದೇಶದ ಬೇಡಿಕೆ ಹೆಚ್ಚು ಈಡೇರುತ್ತಿವೆ. ಇರಾನ್ ಈಗ ಹಾರ್ಮುಜ್ ಜಲಸಂಽಯನ್ನು ಬಂದ್ ಮಾಡಿದೆ. ಸೌದಿ ಅರೇಬಿಯಾ, ಕುವೈತ್, ಯುಎಇಯಿಂದ ಅತಿ ಹೆಚ್ಚು ಅಡುಗೆ ಅನಿಲ ಪೂರೈಕೆಯಾಗುತ್ತದೆ. ಈಗ ಅಲ್ಲಿಂದ ಅಡುಗೆ ಅನಿಲ ಬರುತ್ತಿಲ್ಲ.
ಯುದ್ಧದ ಕಾರಣದಿಂದ ಭಾರತದಲ್ಲಿ ಎಲ್‌ಪಿಜಿ ಕೊರತೆ ಕಂಡು ಬಂದಿದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಸಿಗುತ್ತಿಲ್ಲ. ಇದರಿಂದ ಹೋಟೆಲ್‌ಗಳು ಮುಚ್ಚುತ್ತಿವೆ. ಇರುವ ಹೋಟೆಲ್‌ಗಳಲ್ಲಿ ಊಟ, ತಿಂಡಿ ಬೆಲೆ ಜಾಸ್ತಿಯಾಗಿದೆ. ಇದರಿಂದ ನಿಜಕ್ಕೂ ಆತಂಕಕ್ಕೆ ಒಳಗಾಗಿರುವವರು ನಗರಪ್ರದೇಶಗಳಲ್ಲಿ ಪಿಜಿಗಳಲ್ಲಿ ಉಳಿದುಕೊಂಡಿರುವ ಹಾಗೂ ಬಾಡಿಗೆ ರೂಂಗಳಲ್ಲಿ ವಾಸಿಸುವ ಯುವಜನತೆ ಹಾಗೂ ಹಾಸ್ಟೆಲ್‌ಗಳಲ್ಲಿರುವ ವಿದ್ಯಾರ್ಥಿಗಳು. ಏಕೆಂದರೆ ಈ ವರ್ಗದವರೇ ವಾಣಿಜ್ಯ ಸಿಲಿಂಡರ್‌ಗಳ ಮೇಲೆ ಅವಲಂಬಿತವಾಗಿರುವುದು. ಕಾರಣ ಸಿಲಿಂಡರ್ ಕೊರತೆ ಉಂಟಾಗಿರುವುದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸಿಗದಿರುವುದು, ಊಟ ತಿಂಡಿಯ ದರ ಹೆಚ್ಚಳದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಸರ್ಕಾರಗಳು ಆದಷ್ಟು ಬೇಗ ವಾಣಿಜ್ಯ ಸಿಲಿಂಡರ್ ಕೊರತೆಯನ್ನು ನೀಗಿಸಬೇಕಿದೆ.
ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಽಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ. ಮನೆ ಬಳಕೆ ಅನಿಲ ಪೂರೈಸುವುದು ಸರ್ಕಾರದ ಆದ್ಯತೆ ಆಗಿದೆ. ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆಯಿಂದಾಗಿ ಲಾಭಕೋರರು ಮನೆ ಬಳಕೆಯ ಸಿಲಿಂಡರ್ ಬಳಸಿಕೊಳ್ಳಲು\ಮುಂದಾಗುವುದು ಸಹಜ. ವಾಣಿಜ್ಯ ಸಿಲಿಂಡರ್ ಕೊರತೆ ಇಲ್ಲದಿದ್ದಾಗಲೂ ಹೋಟೆಲ್ ಉದ್ಯಮದ ಹಲವು ಮಂದಿ ಮನೆಬಳಕೆ ಸಿಲಿಂಡರ್ ಬಳಸುತ್ತಿರುವುದು ಮಾಮೂಲಿಯಾಗಿದೆ. ಇನ್ನು ವಾಣಿಜ್ಯ ಸಿಲಿಂಡರ್ ಕೊರತೆ ಉಂಟಾದಾಗ ಸುಮ್ಮನಿರುತ್ತಾರೆ. ಹಾಗಾಗಿ ಸ್ಥಳೀಯ ಆಡಳಿತ ಇದಕ್ಕೆ ಕಡಿವಾಣ ಹಾಕಬೇಕಿದೆ. ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ವಿತರಣೆ ಪುನರಾರಂಭವಾಗಿದೆ.
ದೇಶದಲ್ಲಿ ಗೃಹಬಳಕೆಗೆ ಬೇಕಾಗುವಷ್ಟು ದಾಸ್ತಾನು ಇದೆ. ಜನರು ಧಾವಂತಕ್ಕೆ ಒಳಗಾಗಿ ಎಲ್‌ಪಿಜಿ ಗ್ಯಾಸ್ ಬುಕ್ ಮಾಡುತ್ತಿದ್ದಾರೆ. ಈವರೆಗೂ ೫೫ ಲಕ್ಷವಿದ್ದ ಎಲ್‌ಪಿಜಿ ಬುಕಿಂಗ್ ಈಗ ೮೫ ಲಕ್ಷಕ್ಕೆ ಏರಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಯುದ್ಧ ತಕ್ಷಣಕ್ಕೆ ನಿಲ್ಲುವುದಿಲ್ಲ. ಹಾಗಾಗಿ ಸಿಲಿಂಡರ್ ಪೂರೈಕೆ ಸಮಸ್ಯೆ ಸದ್ಯಕ್ಕೆ ಬಗೆಹರಿಯುವುದಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮಗೆ ಸಿಲಿಂಡರ್ ಯಾವ ಕಾಲಕ್ಕೆ ಸಿಗುತ್ತದೆಯೋ ಎಂದು ಭಾವಿಸಿರುವ ಜನ ಸಹಜವಾಗಿ ಆತಂಕಕ್ಕೆ ಒಳಗಾಗಿ ಸಿಲಿಂಡರ್ ಸ್ಟಾಕ್ ಮಾಡಿಕೊಳ್ಳುವ ಭರದಲ್ಲಿ ಬುಕಿಂಗ್ ಮಾಡುತ್ತಿರಬಹುದು. ಇದು ಸಮೂಹ ಸನ್ನಿಯಂತಾಗಿರಬಹುದು. ಆದರೆ ಜನರ ಈ ಆತಂಕ ದೂರ ಮಾಡಬೇಕಾಗಿರುವುದು ಸರ್ಕಾರಗಳ ಜವಾಬ್ದಾರಿಯಲ್ಲವೆ? ಜನರಿಗೆ ಅಗತ್ಯ ಸಿಲಿಂಡರ್ ಸಿಗುತ್ತಿದೆ ಎಂಬ ಭರವಸೆ ಮೂಡಿಸುವುದು ಮುಖ್ಯವಲ್ಲವೆ? ಇದರೊಂದಿಗೆ ಮಾಧ್ಯಮಗಳೂ ಕೂಡ ವಾಸ್ತವಾಂಶಗಳನ್ನು ಹೇಳುವ ಮೂಲಕ ಜನರಲ್ಲಿನ ಆತಂಕ ದೂರ ಮಾಡಬೇಕಿದೆ. ಅಲ್ಲದೆ ಗ್ಯಾಸ್ ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸದೆ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಸಬೇಕಿದೆ. ಜೊತೆಗೆ ಅಧಿಕಾರಿಗಳೂ ಕೂಡ ಬುಕಿಂಗ್, ಸಿಲಿಂಡರ್ ಪೂರೈಕೆ ಮತ್ತು ದುರ್ಬಳಕೆ ತಡೆಯಲು ಮಾನಿಟರಿಂಗ್ ಮಾಡಬೇಕಿದೆ
” ಎಲ್‌ಪಿಜಿ ಕೊರತೆಯನ್ನು ನೆಪವಾಗಿಸಿಕೊಂಡು ಕಾಳಸಂತೆಯಲ್ಲಿ ಎಲ್‌ಪಿಜಿ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿ ಬಂದಿವೆ. ದೇಶದ ಕೆಲವೆಡೆ ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸಿಲಿಂಡರ್ ಜಪ್ತಿ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.”
ಜೇನುಕುರುಬರ ಡೋಬಿ, ಮಾವುತ ಮತ್ತು ಗಾಯಕ ದುಬಾರೆ ಆನೆ ಶಿಬಿರ ಬಡತನವಿದ್ದರೂ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಉಗಾದಿ ಸುಖ…
ಮಂಡ್ಯ : ತಾಲೂಕಿನ ಸೂನಗಹಳ್ಳಿ-ಬೂತನಹೊಸೂರು ನಡುವಿನ ಹೆಬ್ಬಾಳ ಕಟ್ಟೆ ಬಳಿ ಕಬ್ಬಿನ ಗದ್ದೆಯಲ್ಲಿ ಬುಧವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ.…
ಟೆಹ್ರಾನ್ : ಇರಾನ್ ಹಿಡಿತದಲ್ಲಿದ್ದ ಜಗತ್ತಿನ ಪ್ರಮುಖ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿದೆ. ಜಲಮಾರ್ಗದ ಬಳಿಕ…
ಬೆಂಗಳೂರು : ರಾಜ್ಯದಲ್ಲಿ ಮರ್ಯಾದೆಯ ಹೆಸರಿನಲ್ಲಿ ಹತ್ಯೆ, ಹಲ್ಲೆ ಮತ್ತು ಬೆದರಿಕೆ ಹಾಕುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ಬುಧವಾರ ಸಂಜೆ ಏಕಾಏಕಿ ಮಳೆ ಸುರಿದು ಬಿರು ಬಿಸಿಲಿನಿಂದ ಬಳಲಿದ್ದ ನಗರವನ್ನು ಸ್ವಲ್ಪ…
ಮೈಸೂರು : ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಜೋರಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಬ್ಬದ ಕಳೆಗಟ್ಟಿದೆ. ಅರಮನೆಯಲ್ಲಿ ವಿಶೇಷ ಸಾಂಸ್ಕೃತಿಕ…