ಎಡಿಟೋರಿಯಲ್

ಸ್ಟೀರಾಯ್ಡ್ ಮಾತ್ರೆ ಹೆಚ್ಚು ಕಾಲ ಬಳಸುವುದು ಮೂಳೆಗಳಿಗೆ ಅಪಾಯಕಾರಿ

ಡಾ.ದುಷ್ಯಂತ್

ವೃದ್ಧರಲ್ಲಿ ಮೂಳೆಗಳ ಸವೆತ (Osteoporosis) ಒಂದು ಗಂಭೀರ ಕಾಯಿಲೆ. ಇದು ಯಾರಿಗೂ ತಿಳಿಯದಂತೆ ಮುಂದುವರಿಯುತ್ತಾ ಒಮ್ಮಿಂದೊಮ್ಮೆಲೇ ಮೂಳೆ ಮುರಿತದಂತಹ ಲಕ್ಷಣದೊಂದಿಗೆ ಕಾಣಿಸಬಹುದು. ಇದು ಒಂದು ವಯೋ ಸಹಜ ರೋಗವಾಗಿದೆ. ನಮ್ಮ ದೇಹದಲ್ಲಿ ಮೂಳೆಗಳು ಸವೆದು , ಹೊಸ ಜೀವಕೋಶಗಳ ಮೂಲಕ ಪುನಃ ಉತ್ಪತ್ತಿ ಆಗುತ್ತಿರುತ್ತದೆ. ಇದು ಸಹಜ ಪ್ರಕ್ರಿಯೆ. ಆದರೆ ವೃದ್ಧರಲ್ಲಿ ಈ ಕಾರ್ಯ ಸರಿಯಾಗಿ ನಡೆಯದೆ ಮೂಳೆಗಳಲ್ಲಿ ಸವೆತ ಉಂಟಾಗುತ್ತದೆ.

ವೃದ್ಧರಲ್ಲಿ ಕೇವಲ ವಯಸ್ಸಿನ ಕಾರಣವಲ್ಲದೆ ಇತರ ಕಾರಣಗಳಿಂದಲೂ ಮೂಳೆ ಸವೆತ ಉಂಟಾಗಬಹುದು. ಮಹಿಳೆಯರಲ್ಲಿ ಇದು ಸಂಭವಿಸುವ ಸಾಧ್ಯತೆ ಹೆಚ್ಚು. ಮಹಿಳೆಯರ ವಯಸ್ಸು ೪೦ ವರ್ಷ ದಾಟುತ್ತಿದ್ದಂತೆ ಅವರಲ್ಲಿ ಈಸ್ಟ್ರೋಜೆನ್ ಹಾರ್ಮೋನ್ (Estrogen) ಕಡಿಮೆಯಾಗುತ್ತದೆ.

ಮೂಳೆಗಳು ಸವೆಯದಂತೆ ಅದರ ಬಲ ಹೆಚ್ಚಿಸಲು ಈಸ್ಟೋಜೆನ್ ಸಹಕಾರಿ. ಅದು ದೇಹದಲ್ಲಿ ಕಡಿಮೆಯಾದಂತೆ ಮೂಳೆಗಳ ಸವೆತವೂ ಹೆಚ್ಚುತ್ತದೆ. ಮೂಳೆಗಳ ಸವೆತಕ್ಕೆ ಮತ್ತೊಂದು ಪ್ರಮುಖ ಕಾರಣ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲಪಡಿಸಲು ಬೇಕಾದ ಅಂಶಗಳು, ಇವು ನಮಗೆ ಆಹಾರದಿಂದ ದೊರೆಯುತ್ತವೆ.

ವೃದ್ಧರು ಸೇವಿಸುವ ಆಹಾರದಲ್ಲಿ ಇವುಗಳು ಸರಿಯಾದಪ್ರಮಾಣದಲ್ಲಿ ಇಲ್ಲದೆ ಇದ್ದಾಗ, ಮೂಳೆಗಳ ಸವೆತ ಹೆಚ್ಚಾಗುತ್ತದೆ. ನಾವು ದೈಹಿಕ ಚಲನೆ ಮತ್ತು ವ್ಯಾಯಾಮ ಮಾಡದೆ ಇದ್ದರೆ, ಸ್ನಾಯುಗಳು ಬಲಹೀನವಾಗಿ ನಂತರ ಮೂಳೆಗಳ ಸವೆತ ಹೆಚ್ಚಾಗುತ್ತದೆ.

ನಾವು ದೈಹಿಕ ಚಲನೆ ಮತ್ತು ವ್ಯಾಯಾಮ ಮಾಡದೆ ಇದ್ದರೆ, ಸ್ನಾಯುಗಳು ಬಲಹೀನವಾಗಿ ನಂತರ ಮೂಳೆಗಳ ಸವೆತ ಉಂಟಾಗಬಹುದು. ವೃದ್ಧರು ದೀರ್ಘಾವಧಿ ಕಾಯಿಲೆಗಳಾದ ಡಯಾಬಿಟೀಸ್, ರಕ್ತದೊತ್ತಡ, ಆರ್ಥ್ರೈಟಿಸ್ ಇವುಗಳಿಂದ ಬಳಲುತ್ತಿದ್ದರೆ, ಅವರಲ್ಲಿ ಮೂಳೆಗಳ ಸವೆತ ಹೆಚ್ಚು. ಕೀಲು ನೋವಿಗೆ ಕೆಲವೊಮ್ಮೆ ವೃದ್ಧರು ತಪ್ಪು ಮಾಹಿತಿಯಿಂದ ವೈದ್ಯಕೀಯ ಸಲಹೆ  ಇಲ್ಲದೆ, ಸ್ಟೀರಾಯ್ಡ್ (ಖಠಿಛ್ಟಿಟಜಿb) ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ, ಇದು ಮೂಳೆಗಳಿಗೆ ಬಹಳ ಅಪಾಯಕಾರಿ. ಸ್ಟೀರಾಯ್ಡ್ ಮಾತ್ರೆ ಹೆಚ್ಚು ಕಾಲ ಬಳಸಿದರೆ, ಮೂಳೆಗಳು ಬೇಗನೆ ಸವೆದು ಮೂಳೆ ಮುರಿತ ಉಂಟಾಗಬಹುದು.

ಮೂಳೆಗಳ ಸವೆತ ಉಂಟಾಗಿದೆಯೇ ಎಂದು ತಿಳಿದುಕೊಳ್ಳಲು, Bone Mineral Density (BMD) ಈ ಪರೀಕ್ಷೆಯನ್ನು ಮಾಡಿಸಬಹುದು. ಇದು ನಮ್ಮ ದೇಹದಲ್ಲಿ ಇರುವ ವಿವಿಧ ಮೂಳೆಗಳ ಸಾಂದ್ರತೆಯನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಸವೆತ ಉಂಟಾಗಿದ್ದರೆ, ವೈದ್ಯಕೀಯ ಸಲಹೆ ಪಡೆಯಬೇಕು.

ಸವೆತದ ಪ್ರಮಾಣಕ್ಕೆ ತಕ್ಕಂತೆ, ಮಾತ್ರೆ ಅಥವಾ ಚುಚ್ಚು ಮದ್ದು ನೀಡಬೇಕಾಗುತ್ತದೆ. ಸಾಮಾನ್ಯವಾಗಿ ವೈದ್ಯರು ವೃದ್ಧರಿಗೆ ಅದರಲ್ಲೂ ಮಹಿಳೆಯರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಇದರಿಂದ ಪೌಷ್ಟಿಕಾಂಶದ ಕೊರತೆ ಕಡಿಮೆಯಾಗಿ ಮೂಳೆಗಳು ಬಲಗೊಳ್ಳಲು ಸಹಾಯವಾಗುತ್ತದೆ.

” ವೃದ್ಧರಲ್ಲಿ ಮೂಳೆ ಮುರಿತ ((Bone fracture) ಇದು ಒಂದು ಗಂಭೀರ ಸಮಸ್ಯೆ. ಮೂಳೆಗಳ ಸವೆತ ಉಂಟಾಗಿದ್ದರೆ ಸಣ್ಣ ಆಘಾತವು ವೃದ್ಧರಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುತ್ತದೆ ಮತ್ತು ಅದರಿಂದ ಗುಣಮುಖರಾ ಗಲೂ ಸಹ ವಿಳಂಬವಾಗುತ್ತದೆ. ಇದರಿಂದಾಗಿ ಇದರ ಬಗ್ಗೆ ಗಮನಹರಿಸಿ ಮೂಳೆಗಳ ಸವೆತವನ್ನು ತಡೆಗಟ್ಟುವುದು ಬಹಳ ಮುಖ್ಯ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಕೆಕೆಆರ್‌ಗೆ ಮುಖಭಂಗ ; ಮೊದಲ ಗೆಲುವು ದಾಖಲಿಸಿದ ಎಸ್‌ಆರ್‌ಎಚ್‌

ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ…

7 hours ago

ಮೈಸೂರು ಫಾಲ್ಕನ್ ಟೈರ್ಸ್‌ನ ಮಾಜಿ ಮಾಲೀಕ ರುಹಿಯಾ ಬಂಧನ

315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್‌ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…

9 hours ago

ಹೊರ್ಮುಜ್ ಕುರಿತು ಬ್ರಿಟನ್ ನೇತೃತ್ವದ ಸಭೆಯಲ್ಲಿ ಭಾರತ ಭಾಗವಹಿಸಲಿದೆ

ಲಂಡನ್‌ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…

9 hours ago

ಸಂವಿಧಾನ ಬದಲಾವಣೆ ಅಸಾಧ್ಯ : ಮುಖ್ಯಮಂತ್ರಿ ಚಂದ್ರು

ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…

10 hours ago

KSOU | ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…

10 hours ago

ನಕ್ಸಲ್ ಮುಕ್ತ ಮಾಡಿದ ಮೊದಲ ರಾಜ್ಯ ಕರ್ನಾಟಕ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…

11 hours ago