ಎಡಿಟೋರಿಯಲ್

ಬೆಳೆಯಲು ಬೇಕಾದ ಜೀವನ ಪಾಠಗಳು

ಮಕ್ಕಳನ್ನು ತಿದ್ದಿ ತೀಡಿ ಬುದ್ಧಿ ಹೇಳಬೇಕಾದ ಜವಾಬ್ದಾರಿ ಹೊಂದಿರುವ ಹೆತ್ತವರು ಇತ್ತೀಚಿನ ದಿನಗಳಲ್ಲಿ ಅಂಕಗಳಿಕೆಯ ಹಿಂದೆ ಬಿದ್ದು, ಮಕ್ಕಳನ್ನು ಪುಸ್ತಕದ ಹುಳುವಾಗಿಸುತ್ತಾ ಜೀವನ ಪಾಠವನ್ನು ಕಲಿಸುವುದನ್ನೇ ಮರೆಯುತ್ತಿದ್ದೇವೆ. ಚಿಕ್ಕ ವಯಸ್ಸಿನ ಮಕ್ಕಳಿರುವ ಹಿರಿಯರಿಬ್ಬರು ಸೇರಿದಾಗ ಮಾತುಕತೆ ಮಕ್ಕಳ ಓದಿನ ಕಡೆಗೆ ಹೊರಳಿದರೆ ಮುಗಿಯಿತು. ನನ್ನ ಮಗ/ಮಗಳು ಶಾಲೆಯಲ್ಲಿ ಎಲ್ಲರಿಗಿಂತ ಓದಿನಲ್ಲಿ ಮುಂದು, ಟೆಸ್ಟ್‌ಗಳಲ್ಲೂ ಔಟ್ ಆಫ್ ಔಟ್ ತೇಗಿಯೋದ್ರಿಂದ ಹೋಂ ವರ್ಕ್ ತುಂಬಾ ಇರುತ್ತದೆ ಎನ್ನುವುದರಿಂದ ನಮ್ಮ ಮನೆಯಲ್ಲಿ ಮಕ್ಕಳಿಗೆ ಕೆಳಗೆ ಬಿದ್ದ ಒಂದು ಕಡ್ಡಿಯನ್ನೂ ಎತ್ತಿಡಲೂ ಹೇಳುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದರಲ್ಲೇ ಸಾರ್ಥಕತೆ ಕಾಣುತ್ತಾರೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ… ಓದಿನ ಜತೆಗೆ ಎಳವೆಯಲ್ಲೇ ಮಕ್ಕಳನ್ನು ತಿದ್ದಿ ತೀಡಿ, ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದ ಸತ್ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಹೆತ್ತವರದ್ದು. ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಒಂದಷ್ಟು ಜೀವನ ಪಾಠ, ಸಾಮಾಜಿಕ ಮೌಲ್ಯಗಳನ್ನು ಕಲಿಸಿಕೊಡಬೇಕು. ಆ ಮೂಲಕ ಭವಿಷ್ಯದಲ್ಲಿ ಉತ್ತಮವಾಗಿ ಜೀವನವನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕಾಗುತ್ತದೆ. ಆಗ ಮಕ್ಕಳ ಭವಿಷ್ಯವೂ ಉತ್ತಮವಾಗಿ ರೂಪುಗೊಳ್ಳುತ್ತದೆ. ಅದರಲ್ಲೂ ಕೆಲವೊಂದು ವಿಷಯಗಳನ್ನು ಮಕ್ಕಳು ಪ್ರೌಢಾವಸ್ಥೆ ತಲುಪುವ ಮುನ್ನವೇ ಕಲಿಸಿದರೆ ಒಳಿತು.

ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ಮಣ್ಣಿನ ಮುದ್ದೆಯಂತೆ ಶಾಲೆಯಲ್ಲಿ ಗುರುಗಳು ಹೇಳಿಕೊಟ್ಟಿದ್ದನ್ನು ಚುರುಕಿನಿಂದ ಕಲಿತುಕೊಳ್ಳುವಂತೆ, ಪೋಷಕರು ಹೇಳಿದ್ದನ್ನೂ ಬಹುಬೇಗ ಗ್ರಹಿಸಿಬಿಡುತ್ತಾರೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳಿಗೆ ಯಾವ ರೂಪ ನೀಡುತ್ತಾರೋ ಅದರ ಮೇಲೆ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ.

ತಂದೆ ತಾಯಿ ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಿಕ್ಷಣದ ಜೊತೆ ಜೊತೆಗೆ ಎಲ್ಲಿ ಹೇಗಿರಬೇಕು ಯಾರ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬ ಒಂದಷ್ಟು ಮಾನವೀಯ ಮೌಲ್ಯಗಳು, ಜೀವನ ಪಾಠವನ್ನು ಕಲಿಸಿದರೆ, ಮುಂದೆ ಆ ಮಕ್ಕಳು ತಂದೆ ತಾಯಿಗೆ ಆದರ್ಶ ಮಕ್ಕಳಾಗಿ, ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳುವುದರಲ್ಲಿ ಸಂದೇಹವೇ ಬೇಡ. ಸಮಯ ನಿರ್ವಹಣೆ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಮಯ ನಿರ್ವಹಣೆಯ ಬಗ್ಗೆ ಕಲಿಸಬೇಕು. ಬೆಳಿಗ್ಗೆ ಬೇಗ ಎದ್ದೇಳುವುದು, ಬೇಗ ಹೋಮ್ ವರ್ಕ್ ಮಾಡಿ ಮುಗಿಸುವುದು, ಸಮಯಕ್ಕೆ ಸರಿಯಾಗಿ ಶಾಲೆಗೆ ಹೊರಡಲು ಸಿದ್ಧರಾಗುವುದು, ತಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿಳಿಸಿದರೆ ಮುಂದೆ ಜೀವನದಲ್ಲಿ ಸಮಯ ಪಾಲನೆಯ ಮಹತ್ವ ಅರಿವಾಗುತ್ತದೆ.

ಎಲ್ಲರನ್ನೂ ಗೌರವಿಸಿ ಹಿರಿಯರು- ಕಿರಿಯರು ಎನ್ನದೆ ಎಲ್ಲರನ್ನೂ ಗೌರವಿ ಸುವುದನ್ನು ಪೋಷಕರು ತಪ್ಪದೇ ತಮ್ಮ ಮಕ್ಕಳಿಗೆ ಕಲಿಸಿ ಕೊಡಬೇಕು. ಹಿರಿಯರ ಜೊತೆ ಹೇಗೆ ಮಾತನಾಡಬೇಕು? ತಮಗಿಂತ ಕಿರಿಯರನ್ನೂ ಹೇಗೆ ಗೌರವಯುತವಾಗಿ ಮಾತನಾಡಿಸಬೇಕು? ವಯಸ್ಸಾದವರ ಜೊತೆ ಹೇಗೆ ವರ್ತಿಸುವುದು ಮುಂತಾದ ಸೂಕ್ಷ್ಮ ವಿಚಾರಗಳನ್ನು ಕಲಿಸಬೇಕು. ಇವು ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ.

ಶಿಸ್ತು ಮಕ್ಕಳನ್ನು ಕೇವಲ ಮುದ್ದು ಮಾಡಿದರೆ ಸಾಲದು, ಶಿಸ್ತಿನ ಪಾಠವನ್ನೂ ಕಲಿಸಬೇಕು. ಹತ್ತು ವರ್ಷ ತುಂಬುವ ಮೊದಲೇ ಮಗುವಿಗೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಏಳುವುದು, ಬೆಡ್ ಶೀಟ್ ಮಡಚುವುದು, ಸಮಯಕ್ಕೆ ಸರಿ ಯಾಗಿ ತಿಂಡಿ-ಊಟ ಮಾಡುವುದು, ತಮ್ಮ ಆಟಿಕೆಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಇತ್ಯಾದಿ ಶಿಸ್ತಿನ ಪಾಠವನ್ನು ಪೋಷಕರು ಮಾಡಲೇ ಬೇಕಾಗುತ್ತದೆ. ಜೊತೆಗೆ ಅಚ್ಚುಕಟ್ಟು ತನ ಅಂದರೆ ನೈರ್ಮಲ್ಯದ ಪಾಠವನ್ನೂ ಹೇಳಿ ಕೊಡ ಬೇಕಾಗುತ್ತದೆ. ಹೊರಗಿನಿಂದ ಮನೆಗೆ ಬಂದ ಕೂಡಲೇ ಕೈ ಕಾಲು, ಮುಖ ತೊಳೆಯಬೇಕು, ಕೈ ತೊಳೆಯದೆ ಊಟ ಮಾಡಬಾರದು…ಹೀಗೆ ಒಂದಷ್ಟು ನೈರ್ಮಲ್ಯದ ಬಗ್ಗೆಯೂ ಮಕ್ಕಳಿಗೆ ತಿಳಿ ಹೇಳಬೇಕು.ಗಿಡಗಳಿಗೆ ನೀರು ಹಾಕುವುದನ್ನು ಕಲಿಸಿದರೆ ಮುಂದೆ ಈ ಅಭ್ಯಾಸ ಮಕ್ಕಳಲ್ಲಿ ಪ್ರಕೃತಿ ಪ್ರೇಮವನ್ನು ಬೆಳೆಸಲು ಸಹಕಾರಿಯಾಗಲಿದೆ. ಮಕ್ಕಳು ಹಠ ಮಾಡುತ್ತಾರೆಂದುಅವರು ಕೇಳಿದ್ದನ್ನೆಲ್ಲಾ ಕೊಡಿಸುವ ಬದಲಿಗೆ ಹಣ ಎಷ್ಟು ಮುಖ್ಯ, ಏಕೆ ದುಂದು ವೆಚ್ಚ ಮಾಡಬಾರದು ಎಂದು ಹೇಳಿಕೊಡಬೇಕು.

” ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಸಿ, ಯಾವುದೇ ಕೆಲಸ ಮಾಡುವ ಮೊದಲು ಎರಡು ಬಾರಿ ಯೋಚಿಸಿ ಸೂಕ್ತ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ಕಲಿಸಿ. ಇದು ಮಕ್ಕಳಲ್ಲಿ ಆಲೋಚನಾ ಕೌಶಲವನ್ನು ಹೆಚ್ಚಿಸುತ್ತದೆ. ಜೊತೆಗೆ ಅವರಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಲು ಸಹಾಯ ಮಾಡಲಿದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

5 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

5 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

6 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

7 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

8 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

9 hours ago