ಎಡಿಟೋರಿಯಲ್

ಬದುಕು ಮುಗಿಸಿದ ನಡೆದಾಡುವ ಇತಿಹಾಸ ಭಂಡಾರ

ಪ್ರೊ. ಷೇಕ್ ಅಲಿ ಅವರು ದೇಶ ಕಂಡ ಕೆಲವೇ ಕೆಲವು ಲೆಜೆಂಡರಿ ಇತಿಹಾಸಕಾರರಲ್ಲಿ ಒಬ್ಬರು

ಇಸ್ಮತ್ ಪಜೀರ್, ಲೇಖಕರು, ಮಂಗಳೂರು.

ಮಂಗಳೂರು ವಿಶ್ವವಿದ್ಯಾನಿಲಯದ ಕೂಗಳತೆಯ ದೂರದಲ್ಲೇ ಹುಟ್ಟಿ ಬೆಳೆದವನು ನಾನು. ನಾನು ಚಿಕ್ಕ ಹುಡುಗನಾಗಿದ್ದಾಗಿಂದಲೇ ಪ್ರೊ.ಬಿ.ಷೇಕ್ ಅಲಿ ರಸ್ತೆ ಎಂಬ ಪುಟ್ಟ ನಾಮಫಲಕವನ್ನು ನೋಡುತ್ತಿದ್ದೆ. ಪ್ರಾಥಮಿಕ ಶಾಲಾ ದಿನಗಳಲ್ಲಿ ಮಂಗಳೂರಿನಲ್ಲಿರುವ ಮುಸ್ಲಿಮ್ ಹೆಸರಿನ ರಸ್ತೆಗಳ ಬಗ್ಗೆ ನನಗೆ ಗೊತ್ತಿರಲಿಲ್ಲ.

ಮೈಸೂರಿನ ತಮ್ಮ ಅನುಗಾಲದ ಗೆಳೆಯ, ನಿವೃತ್ತ ಇಂಜಿನಿಯರ್ ಬಾಪು ಸತ್ಯನಾರಾಯಣ ಅವರೊಂದಿಗೆ ಪ್ರೊ. ಷೇಕ್ ಅಲಿ

ಆದುದರಿಂದ ಇಲ್ಲಿ ಮುಸ್ಲಿಮರೊಬ್ಬರ ಹೆಸರಲ್ಲಿ ರಸ್ತೆ ಇದೆ ಎನ್ನುವುದು ನನ್ನ ಕುತೂಹಲಕ್ಕೆ ಕಾರಣವಾಗಿತ್ತು. ಆಗಿಂದಲೂ ಆ ರಸ್ತೆಯನ್ನು ನಮ್ಮ ಹಳ್ಳಿ ಜನ ಡಬಲ್ ರೋಡ್ ಎನ್ನುತ್ತಿದ್ದರು. ಆಗೆಲ್ಲಾ ಈಗಿನಂತೆ ಮಂಗಳೂರಲ್ಲೆಲ್ಲೂ ದ್ವಿಪಥ ರಸ್ತೆಗಳಿರಲಿಲ್ಲ. ಆಗ ಈ ಷೇಕ್ ಅಲಿ ರಸ್ತೆ ನನ್ನ ಪಾಲಿಗೆ ಬಹಳ ವಿಶೇಷ ರಸ್ತೆಯಾಗಿತ್ತು. ಎಲ್ಲರೂ ಇದನ್ನು ಡಬಲ್ ರೋಡ್ ಎನ್ನುತ್ತಿದ್ದರೆ ನಾನು ಮಾತ್ರ ಷೇಕ್ ಅಲಿ ರೋಡ್ ಎಂದೇ ಹೇಳುತ್ತಿದ್ದೆ. ಅದಕ್ಕೆ ಕಾರಣವಿಷ್ಟೆ ‘ನನ್ನ ಸಮುದಾಯದವರ ಹೆಸರಲ್ಲೂ ಒಂದು ರಸ್ತೆ ಇಲ್ಲಿದೆ ಎನ್ನುವುದು ನನಗೆ ಅಭಿಮಾನದ ಸಂಗತಿಯಾಗಿತ್ತು. ಆದರೆ ಈ ಷೇಕ್ ಅಲಿ ಎಂದರೆ ಯಾರು , ಏನು, ಎತ್ತ ಇವ್ಯಾವುವೂ ನನಗೆ ತಿಳಿದಿರಲಿಲ್ಲ. ನಾನು ಹೈಸ್ಕೂಲ್ ದಾಟಿ ಕಾಲೇಜು ಮೆಟ್ಟಿಲೇರಿದ ಬಳಿಕವೇ ಗೊತ್ತಾಗಿದ್ದು ಈ ಷೇಕ್ ಅಲಿ ಎನ್ನುವವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿಗಳೆಂದು.
ಈ ಷೇಖ್ ಅಲಿ ರಸ್ತೆೆುಂಂದು ಹಾಕಿದ್ದ ನಾಮಫಲಕವನ್ನು ಕಾಂಪೌಂಡ್ ಹಾಲ್ ನವೀಕರಣ ಮತ್ತು ಹೊಸ ಗೇಟ್ ಅಳವಡಿಸುವ ಕಾಲದಲ್ಲಿ ತೆರವುಗೊಳಿಸಲಾಗಿತ್ತು. ಇದರಿಂದ ನನಗಂತೂ ಬಹಳ ಬೇಸರವಾಗಿತ್ತು. ಆಗ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ನಿವೃತ್ತರಾಗಿದ್ದರು. ಇನ್ನೂ ಹೊಸ ಕುಲಪತಿಯ ನೇಮಕವಾಗಿರಲಿಲ್ಲ. ನನ್ನ ಆತ್ಮೀಯ ಮಿತ್ರರೂ ಆದ ಪ್ರೊ.ಎ.ಎಂ.ಖಾನ್ ಯುನಿವರ್ಸಿಟಿಯ ರಿಜಿಸ್ಟ್ರಾರ್ ಆಗಿದ್ದರು. ಅವರಿಗೆ ಎಲ್ಲಾ ಚಾರ್ಜ್ ಇತ್ತು. ನಾನು ನೇರವಾಗಿ ಎ.ಎಂ.ಖಾನ್‌ರನ್ನು ಸಂಪರ್ಕಿಸದೇ ವಾರ್ತಾಭಾರತಿ ಪತ್ರಿಕೆಯಲ್ಲಿ ಷೇಕ್ ಅಲಿ ರಸ್ತೆಯ ನಾಮಫಲಕ ತೆರವುಗೊಳಿಸಿದ್ದರ ಬಗ್ಗೆ ಬರೆದು ಅದರ ಪ್ರತಿೊಂಂದನ್ನು ಎ.ಎಂ.ಖಾನ್ ರಿಗೆ ರವಾನಿಸಿದೆ. ಖಾನ್ ಅವರು ಮುತುವರ್ಜಿ ವಹಿಸಿ ನಾಮಫಲಕ ಶೀಘ್ರ ಮರು ಅಳವಡಿಕೆಯಾಗುವಂತೆ ಕ್ರಮ ಕೈಗೊಂಡಿದ್ದರು.
ಷೇಕ್ ಅಲಿ ಅವರು ಏಕ ಕಾಲಕ್ಕೆ ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾನಿಲಯಗಳ ಕುಲಪತಿಗಳಾಗಿದ್ದರು.ಆಗ ಕುಲಪತಿ ಹುದ್ದೆಗೆ ಈಗಿನಂತೆ ಪೈಪೋಟಿ ಇರಲಿಲ್ಲ. ಈಗಿನಂತೆ ಕೋಟಿ ರೂ. ಸುರಿದು ಪಡೆಯುವ ಲಾಭದಾಯಕ ಹುದ್ದೆಯಾಗಿರಲಿಲ್ಲ ಅದು. (ಕೆಲವು ಅಪವಾದಗಳ ಹೊರತಾಗಿ) ಆಗ ಅದೊಂದು ಅತ್ಯಂತ ಘನತೆಯ ಹುದ್ದೆಯಾಗಿತ್ತು. ಆದಾಗ್ಯೂ ಷೇಕ್ ಅಲಿಯವರಿಗೆ ಎರಡೆರಡು ವಿಶ್ವವಿದ್ಯಾನಿಲಯಗಳ ಕುಲಪತಿ ಹುದ್ದೆ ನಿಭಾಯಿಸಲು ಕಷ್ಟವಾಗುತ್ತದೆಂದು ಒಂದರಿಂದ ನನಗೆ ಮುಕ್ತಿ ಕೊಡಿ ಎಂದವರು ಸರ್ಕಾರವನ್ನು ವಿನಂತಿಸುತ್ತಿದ್ದರಂತೆ. ಯಾಕೆಂದರೆ ಅವರಿಗೆ ಹುದ್ದೆಗಿಂತ ತನ್ನ ಅಕಾಡೆಮಿಕ್ ಕೆಲಸವಾದ ಸಂಶೋಧನೆೆುೀಂ ಹೆಚ್ಚು ಪ್ರಿಯವಾದುದಾಗಿತ್ತು.
ಷೇಕ್ ಅಲಿಯವರನ್ನು ನಾನು ನೋಡಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೊಮ್ಮೆ ಮೈಸೂರಿನಲ್ಲಿ. ನಮ್ಮ ಕೋಮು ಸೌಹಾರ್ದ ವೇದಿಕೆಯೂ ಸೇರಿದಂತೆ ನಾವು ಪ್ರಗತಿಪರ ಸಂಘಟನೆಯವರು ಟಿಪ್ಪು ಸುಲ್ತಾನರ ಕುರಿತಂತೆ ಮೈಸೂರಿನಲ್ಲೊಂದು ದೊಡ್ಡ ಸಮಾವೇಶ ಹಮ್ಮಿಕೊಂಡಿದ್ದೆವು. ಅದರಲ್ಲಿ ಮುಖ್ಯ ಅತಿಥಿಗಳಾಗಿ ವೋಂವೃದ್ಧ, ಜ್ಞಾನ ವೃದ್ಧ ಷೇಕ್ ಅಲಿ ಭಾಗವಹಿಸಿ ಭಾಷಣ ಮಾಡಿದ್ದರು. ಆಗ ಷೇಕ್ ಅಲಿಯವರ ನೆನಪಿನ ಶಕ್ತಿ ಚೆನ್ನಾಗಿೆುೀಂ ಇತ್ತು. ಆದರೆ ಅವರ ಮಾತುಗಳು ಸ್ಪಷ್ಟವಾಗಿ ಅರ್ಥವಾಗುತ್ತಿರಲಿಲ್ಲ. ಆ ಕಾರ್ಯಕ್ರಮಕ್ಕೆ ಅವರು ಕಪ್ಪು ಸೂಟ್ ಧರಿಸಿೆುೀಂ ಕುಲಪತಿಯ ಗೆಟಪ್‌ನಲ್ಲೇ ಆಗಮಿಸಿದ್ದರು.
ಷೇಕ್ ಅಲಿ ದೇಶ ಕಂಡ ಕೆಲವೇ ಕೆಲವು ಲೆಜೆಂಡರಿ ಇತಿಹಾಸಕಾರರ ಲ್ಲೊಬ್ಬರಾಗಿದ್ದರು. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತಂತೆ ಅವರಷ್ಟು ಅಧಿಕಾರದ ಧ್ವನಿಯಲ್ಲಿ ಮಾತನಾಡಬಲ್ಲ ಇನ್ನೊಬ್ಬ ಇತಿಹಾಸಕಾರನಿರಲಿಲ್ಲ. ಟಿಪ್ಪು ಕುರಿತಂತೆ ಮಸುಕು ಮಸುಕಾಗಿದ್ದ ನೂರಾರು ಐತಿಹಾಸಿಕ ಸಂಗತಿಗಳಿಗೆ ಹೊಳಹು ನೀಡಿದವರು ಷೇಕ್ ಅಲಿ ಸಾಹೇಬರು. ಟಿಪ್ಪು ಕುರಿತಂತೆ ಅನೇಕ ದೇಶೀಯ ಇತಿಹಾಸಕಾರರು ಬ್ರಿಟಿಷ್ ಇತಿಹಾಸಕಾರರ ತಿರುಚಲ್ಪಟ್ಟ ದಾಖಲೆಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದ ಕಾಲದಲ್ಲಿ ಫ್ರೆಂಚ್ ಇತಿಹಾಸಕಾರರ ದಾಖಲೆಗಳು, ಸ್ಥಳೀಯ ದಾಖಲೆಗಳು ಇತ್ಯಾದಿಗಳನ್ನೆಲ್ಲಾ ಇಟ್ಟುಕೊಂಡು ತಾಳೆ ನೋಡಿ ಅಧ್ಯಯನ ಮಾಡಿ ಟಿಪ್ಪು ಕುರಿತಂತೆ ಇತಿಹಾಸ ಗರ್ಭದಲ್ಲಿ ಹೂತು ಹೋಗಿದ್ದ ಅದೆಷ್ಟೋ ಹೊಸ ಹೊಸ ಸಂಗತಿಗಳನ್ನು ಹೊರತೆಗೆದವರು ಷೇಕ್ ಅಲಿ. ಇಂದಿಗೂ ಟಿಪ್ಪುವಿನ ಮೇಲೆ ಮತಾಂಧತೆ, ಹಿಂದೂ ದ್ವೇಷಿ , ದೇವಸ್ಥಾನಗಳ ಭಂಜಕ ಎಂದೆಲ್ಲಾ ಸುಳ್ಳಾರೋಪ ಹೊರಿಸುವವರಿಗೆ ದೊಡ್ಡ ಮಟ್ಟದ ತಡೆಯಾಗಿರುವುದು ಷೇಕ್ ಅಲಿಯವರ ದಾಖಲೆಗಳು.
ಷೇಕ್ ಅಲಿ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಘನತೆ ತಂದವರು. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಗೆ ಎಸ್. ವಿ.ಪರಮೇಶ್ವರ ಭಟ್ಟರ ಹೆಸರನ್ನು ಹಾಕಿ ಒಂದು ಪ್ರತ್ಯೇಕ ಕಟ್ಟಡವನ್ನೇ ನಿರ್ಮಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಭದ್ರ ಬುನಾದಿ ಹಾಕಿದವರು ಮತ್ತು ದೇಶದ ಲೆಜೆಂಡರಿ ಇತಿಹಾಸಕಾರರಲ್ಲೊಬ್ಬರೂ ಆಗಿದ್ದ ಷೇಕ್ ಅಲಿ ಅವರ ಹೆಸರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಯನ ವಿಭಾಗಕ್ಕೆ ನಾಮಕರಣ ಮಾಡಿದಲ್ಲಿ ವಿಶ್ವವಿದ್ಯಾನಿಲಯದ ಗೌರವ ಹೆಚ್ಚುತ್ತದೆ. ಈ ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳು ಕಾರ್ಯಪ್ರವೃತ್ತರಾದರೆ ಅವರಿಗೂ ಗೌರವ ಬರುತ್ತದೆ.
ಷೇಕ್ ಅಲಿ ಅವರು ಇಂದು ಬದುಕಿನ ಶತಕದ ಹೊಸ್ತಿಲಲ್ಲಿ ನಿರ್ಗಮಿಸಿದ್ದಾರೆ. ಅವರು ಕನ್ನಡ ನಾಡಿನ ಕುರಿತಂತೆ, ಟಿಪ್ಪು ಸುಲ್ತಾನರ ಕುರಿತಂತೆ ನೂರಾರು ಅಪರೂಪದ ಐತಿಹಾಸಿಕ ದಾಖಲೆಗಳನ್ನು ಮುಂದಿನ ತಲೆಮಾರಿಗೆ ಒದಗಿಸಿ ನಿರ್ಗಮಿಸಿದ್ದಾರೆ. ಬಹುಶಃ ಕರ್ನಾಟಕದಲ್ಲಿ ಅಕಾಡೆಮಿಕ್ ಆಗಿ ಅವರನ್ನು ಮೀರಿಸುವ ಇತಿಹಾಸಕಾರರು ತೀರಾ ವಿರಳ. ಅವರ ಅಧ್ಯಯನಗಳು ಹತ್ತಾರು ಪಿಎಚ್.ಡಿ ಥೀಸ್‌ಸ್‌ಗಾಗುವಷ್ಟು ಸಮೃದ್ಧ. ಈ ನೆಲೆಯಲ್ಲಿ ಈಗಿನ ತಲೆಮಾರು ಪ್ರಯತ್ನಿಸಬಹುದು.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

51 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago