ಎಡಿಟೋರಿಯಲ್

ಎಲೆಗಳು ಸಂಗೀತವಾ ಹಾಡಿವೆ…

ಸಸ್ಯಗಳ ಜೈವಿಕ ಲಯಗಳನ್ನು ಬಳಸಿ ಸಂಗೀತ ಹೊಮ್ಮಿಸುವ ತಂತ್ರಜ್ಞಾನ ಹೊಸ ರಾಗಗಳ ಹುಟ್ಟಿಗೆ ಕಾರಣವಾಗಬಹುದು!

ಕಾರ್ತಿಕ್ ಕೃಷ್ಣ
ಶಿಲೆಗಳು ಸಂಗೀತವಾ ಹಾಡಿವೆ…’ ಎಂಬ ಹಾಡಿನ ಸಾಲುಗಳು ವಾಸ್ತವದಲ್ಲಿ ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಅದನ್ನೇ ಎಲೆಗಳು ಸಂಗೀತವಾ ಹಾಡಿವೇ ಎಂದು ಬದಲಿಸಿದರೆ ಸತ್ಯಕ್ಕೆ ತೀರಾ ಹತ್ತಿರವಾಗಬಲ್ಲದು. ಅರೆ ಇದೇನಿದು, ಶಿಲೆಗಳು ಸಂಗೀತವನ್ನು ಹೊಮ್ಮಿಸುತ್ತವೆ ಎಂದು ಕವಿ ರೂಪಕವಾಗಿ ಹೇಳಿದರೆ, ಎಲೆಗಳು ಸಂಗೀತವ ಹೊಮ್ಮಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಹುಟ್ಟುವುದರಲ್ಲಿ ತಪ್ಪಿಲ್ಲ ಬಿಡಿ. ಗಿಡಗಳೆಲ್ಲ ಒಂದೆಡೆ ಸೇರಿ ಒಂದೊಳ್ಳೆ ಸಂಗೀತ ಕಛೇರಿ ನೀಡುವುದನ್ನು ಊಹಿಸಲು ಒಂಚೂರು ಕಷ್ಟವಾಗಬಹುದು. ಆದರೆ ಮುಂದೆ ಓದುತ್ತಾ ಹೋದಂತೆ, ಎಲೆಗಳು ಹೊಮ್ಮಿಸುವ ಮಧುರ ಸಂಗೀತವನ್ನು ಕೇಳುವಂತೆ ನಿಮ್ಮ ಮನಸ್ಸು ಹಪಹಪಿಸಲೂಬಹುದು! ಹಾ ಇನ್ನೊಂದು ವಿಷಯ, ಇಲ್ಲಿ ಎಲೆಗಳೆಲ್ಲ ಬಾಯ್ತೆರೆದು ಹಾಡುತ್ತವೆಂದು ಅಂದುಕೊಳ್ಳಬೇಡಿ! ಅವುಗಳ ಜೈವಿಕ ಕ್ರಿಯೆಯನ್ನು ಕ್ರಿಯಾತ್ಮಕವಾಗಿ ಗಮನಿಸಿದ ಮನುಜ ಸೃಷ್ಟಿಸಿದ ವಿಸ್ಮಯವಿದು.
ನಿಮ್ಮ ಮನೆಯಲ್ಲಿ ನೀವು ಜೋಪಾನವಾಗಿ ಬೆಳೆಸುತ್ತಿರುವ ಗಿಡಗಳು ನಿಮ್ಮೊಡನೆ ಮಾತಾಡುವಂತಾದರೆ ಹೇಗಿರಬಹುದು? ಬೆಟ್ಟ ಗುಡ್ಡಗಳ ನೆತ್ತಿಯನ್ನೇರಿ ಸುತ್ತಲೂ ಹಬ್ಬಿರುವ ಹಸಿರ ರಾಶಿ ನಿಮ್ಮ ದನಿಗೆ ಓಗೊಟ್ಟರೆ ಹೇಗಿರಬಹುದು? ಸ್ವರ್ಗಕ್ಕೆ ಮೂರೇ ಗೇಣು ಅಲ್ಲವೇ! ನಿಸರ್ಗಪ್ರಿಯರಂತೂ ಮನುಷ್ಯರ ಜೊತೆ ಮಾತಾಡುವುದನ್ನೇ ನಿಲ್ಲಿಸಿ, ಗಿಡ-ಮರಗಳನ್ನೇ ಒಡನಾಡಿಯನ್ನಾಗಿ ಮಾಡಿಕೊಂಡಾರೇನೋ! ಅವುಗಳ ದನಿಯನ್ನು ಕೇಳಲಾಗದಿದ್ದರೂ, ಅವುಗಳ ಒಡಲಾಳದಲ್ಲಿ ನಡೆಯುತ್ತಿರುವ ಜೈವಿಕ ಪ್ರಕ್ರಿಯೆಗಳನ್ನು ಸಂಗೀತದಂತೆ ಕೇಳಿಸಿ, ಅವುಗಳೊಂದಿಗೆ ಒಡನಾಡುವ ಭಾಗ್ಯವನ್ನು ತಂತ್ರಜ್ಞಾನ ಒದಗಿಸಿಕೊಟ್ಟಿದೆ. ಅದರ ಹೆಸರೇ ‘ಟ್ಝಚ್ಞಠಿಡಿಛಿ’ ಎಂದು. ಇದು ಮೂಲತಃ ಸಂಗೀತ ಕಲಾವಿದರಾಗಿರುವ ಜಾನ್ ಪಾಟಿಟ್ಯೂಚಿ ಹುಟ್ಟುಹಾಕಿರುವ ಠಿ ಜಚ್ಟಛ್ಞಿ ಎಂಬ ಸಂಸ್ಥೆಯ ಸುಂದರ ಸೃಷ್ಟಿ.
ಮೊದಲೇ ತಿಳಿಸಿದ ಹಾಗೆ, ಇದು ಗಿಡಗಳಿಂದ ಹೊರಡುವ ಸಂಗೀತವಲ್ಲ. ಬದಲಾಗಿ, ಆ ಸಂಗೀತವನ್ನು ನಿಯಂತ್ರಿಸುವುದು ಗಿಡಗಳೆಂದರೆ ಸಮಂಜಸವೆನಿಸಬಹುದು.
ಸಸ್ಯಗಳಲ್ಲಿ ಹಲವಾರು ರೀತಿಯ ಚಲನವಲನಗಳಿರುತ್ತವೆ. ನೀರನ್ನು ಹೀರಿಕೊಳ್ಳುವಾಗ, ದ್ಯುತಿಸಂಶ್ಲೇಷಣೆಯ ವೇಳೆಯಲ್ಲಿ ಇಲ್ಲವೇ ಇನ್ನ್ಯಾವುದೇ ರೀತಿಯ ಚಯಾಪಚಯ ಕ್ರಿಯೆಯ ಸಮಯದಲ್ಲಿ ಸಂಭವಿಸುವ ಚಲನವಲನವನ್ನು ‘ಜೈವಿಕ ಲಯ’ ಎನ್ನುತ್ತಾರೆ. ಈ ಲಯವೇ ಟ್ಝಚ್ಞಠಿಡಿಛಿ ಸೂಸುವ ಸಂಗೀತದ ಮೂಲ. ಇದನ್ನು ಸೆರೆಹಿಡಿಯಲು ಎರಡು ಸಂವೇದಕಗಳನ್ನು ಎಲೆಗಳಿಗೆ ಅಂಟಿಸಿ, ಒಳಗೆ ಜರುಗುವ ಪ್ರತಿ ಚಲನೆಯನ್ನು ಸೆರೆಹಿಡಿಯಲಾಗುತ್ತದೆ. ನಂತರ ಅವುಗಳನ್ನು ಅಲೆಗಳಂತೆ ಪರಿವರ್ತಿಸಿ, ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಉಪಕರಣದೊಳಗೆ ಹರಿಬಿಡಲಾಗುತ್ತದೆ. ಆಗ ಶುರುವಾಗುತ್ತದೆ ನೋಡಿ ಸಂಗೀತ ಗೋಷ್ಠಿ! ಒಂದೊಂದು ಸಸ್ಯದಿಂದ ಒಂದೊಂದು ರೀತಿಯ ಸಂಗೀತವನ್ನು ಹೊರಹೊಮ್ಮಿಸುವುದು ಟ್ಝಚ್ಞಠಿಡಿಛಿನ ವಿಶೇಷತೆ.
ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಈ ಸಂಗೀತವು ಸಸ್ಯಗಳು ಇರುವ ವಾತಾವರಣದಿಂದ ನಿಯಂತ್ರಿಸಲ್ಪಡುತ್ತದೆ. ಯಾವ ಸಸ್ಯವು ಯಥೇಚ್ಛವಾದ ಗಾಳಿ ಹಾಗು ಬೆಳಕಿನಿಂದ ಪೋಷಿಸಲ್ಪಡುತ್ತವೆಯೋ ಅವುಗಳು ಹೊಮ್ಮಿಸುವ ಸಂಗೀತ ಮ್ಯಾಜಿಕಲ್ ಅನುಭವವನ್ನು ನೀಡುತ್ತದೆಯಂತೆ. ಕಡಿಮೆ ನೀರನ್ನು ಕಾಣುವ ಸಸ್ಯಗಳ ಸಂಗೀತ ಠುಸ್ ಪಟಾಕಿ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ! ಪ್ರಾಣ ಕಳೆದುಕೊಂಡು ಒಣಗಿರುವ ಸಸಿಗಳದ್ದಂತೂ ನೀರಸ ಪ್ರದರ್ಶನ.
ಪಾಟಿಟ್ಯೂಚಿ ತನ್ನ ಆಫೀಸ್ ನಲ್ಲಿರುವ ಸಸಿಗಳಿಗೆ ಟ್ಝಚ್ಞಠಿಡಿಛಿ ಉಪಕರಣವನ್ನು ಸಿಕ್ಕಿಸಿ, ಸಂಗೀತ ಹೊಮ್ಮಿಸುವ ಕೇಸ್ ಸ್ಟಡಿ ಒಂದಿದೆ. ಅದರಲ್ಲಿ ಆತ ಗಿಡಗಳಿಗೆ ನೀರುಣಿಸುತ್ತಾ ಹೋದಂತೆ ಉಪಕರಣ ಹೊಮ್ಮಿಸುವ ಸಂಗೀತದಲ್ಲೂ ಏರಿಳಿತ ಕಾಣಿಸುತ್ತದೆ. ಹಾಗೆಯೇ, ಒಂದೇ ಸಸ್ಯದ ಒಂದೊಂದು ಎಲೆಯೂ ವಿಧ ವಿಧವಾದ ನಾದವನ್ನು ಹೊಮ್ಮಿಸುವುದನ್ನು ನಾವು ಕೇಳಬಹುದು!
ಪಾಟಿಟ್ಯೂಚಿ ಈ ಉಪಕರಣವನ್ನು ಅಭಿವೃದ್ಧಿ ಪಡಿಸುವುದನ್ನು ಆರಂಭಿಸಿದ್ದು ೨೦೧೧ರಲ್ಲಿ. ತನ್ನ ತಂಡದಲ್ಲಿರುವ ನುರಿತ ಅಭಿಯಂತರ ತಯಾರಿಸಿದ ಸಸ್ಯಗಳ ಜೈವಿಕ ಲಯವನ್ನು ದಾಖಲಿಸುವ ಸಾಧನದಿಂದ ಕ್ಝೃಚ್ಞಠಿಡಿಛಿ ಜೀವತಳೆಯಿತು ಎಂದು ಪಾಟಿಟ್ಯೂಚಿ ನೆನಪಿಸಿಕೊಳ್ಳುತ್ತಾರೆ. ಅದೆಲ್ಲ ಸರಿ, ಉಪಕರಣ ಸಿದ್ಧವಾಯ್ತು, ಸಸಿಗಳ ಜೈವಿಕ ಲಯಗಳು ರೆಕಾರ್ಡ್ ಆಗುತ್ತಿವೆ, ಅಷ್ಟಕ್ಕೇ ಸಂಗೀತ ಹೊಮ್ಮುವುದೇ? ಇಲ್ಲ. ಅದಕ್ಕೊಂದು ಎಸಗುಬಗೆ (ಅ್ಝಜಟ್ಟಜಿಠಿಞ)ಯ ಅವಶ್ಯಕತೆಯಿದೆ. ಅದನ್ನು ಸೃಷ್ಟಿಸಿದ್ದು ಪಾಟಿಟ್ಯೂಚಿ. ಈ ಎಸಗುಬಗೆಯ ಮೂಲಕ ಸಂಗ್ರಹಿಸಲ್ಪಟ್ಟ ಮಾಹಿತಿಗಳು ಹರಿದು, ಶುಶ್ರಾವ್ಯ ನಾದವು ಹೊಮ್ಮುತ್ತದೆ. ಪಾಟಿಟ್ಯೂಚಿ ಮೊದಲ ಬಾರಿಗೆ ಟ್ಝಚ್ಞಠಿಡಿಛಿ ಉಪಕರಣವನ್ನು ನಾಲ್ಕು ಸಸಿಗಳಿಗೆ ಸಿಕ್ಕಿಸಿ, ಫಿಲೆಡೆಲ್ಫಿಯಾದ ಕಲಾ ತೋರುಮನೆಯಲ್ಲಿ ಪ್ರದರ್ಶನಕ್ಕಿಟ್ಟು , ಒಂದು ಸಣ್ಣ ಸಂಗೀತ ಕಛೇರಿಯನ್ನು ಏರ್ಪಡಿಸಿದಾಗ ಅದಕ್ಕೆ ಜನರಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತ್ತಂತೆ. ಆ ಸ್ವಾಗತದೊಂದಿಗೆ ಅದರ ಸೃಷ್ಟಿಯೂ ಅರ್ಥಪೂರ್ಣವಾಯ್ತು.
ಆತ ಈ ಉಪಕರಣದ ಸಹಾಯದಿಂದ ಸಸ್ಯಗಳ ಅಂತರಾಳದ ಸಂಗೀತವನ್ನು ಸುಶ್ರಾವ್ಯವನ್ನಾಗಿ ಕೇಳಿಸುವ ಹಿಂದೆ ಕೆಲವೊಂದು ಧ್ಯೇಯಗಳಿವೆ. ಅದೇನು ಗೊತ್ತ, ಆತನಿಗೆ ಮನುಷ್ಯರು ಸಸ್ಯಗಳು ಹಾಗೂ ನಿಸರ್ಗವನ್ನು ಇನ್ನಷ್ಟು ಇಷ್ಟಪಡುವಂತಾಗಬೇಕಂತೆ. ಹಾಗೆಯೆ ಮನುಜರು ನಲ್ಬೆಣಿಗೆ (ಗ್ಯಾಜೆಟ್) ಗಳ ಲೋಕದಿಂದ ಹೊರಬಂದು ಮತ್ತೆ ಪ್ರಕೃತಿಯೊಡನೆ ಬೇರೆಯಬೇಕೆಂಬುದು ಆತನ ಮಹದಾಸೆ.
ನಿಮಗೆ ಬೆಂಗಳೂರಿನ ‘ವೃಕ್ಷ ವೈದ್ಯ’ ವಿಜಯ್ ನಿಶಾಂತ್ ಬಗ್ಗೆ ತಿಳಿದಿರಬಹದು. ವೃಕ್ಷಗಳನ್ನು ರಕ್ಷಿಸುವ ಕೈಂಕರ್ಯದಿಂದ ಕ್ಟೃಟ್ಜಛ್ಚಿಠಿ ್ಖ್ಟ್ಠ ಊಟ್ಠ್ಞಠಿಜಿಟ್ಞ ಎಂಬ ಪ್ರತಿಷ್ಠಾನವನ್ನು ನಡೆಸುತ್ತಿರುವ ಇವರು ಕೂಡ ಸಸ್ಯಗಳು ಹೊಮ್ಮಿಸುವ ಸಂಗೀತವನ್ನು ಗಮನಿಸಿ ಅಧ್ಯಯನ ನಡೆಸಿದ್ದಾರೆ. ಸಸ್ಯದ ಎಲೆಗಳ ಮೇಲ್ಮೈಯಲ್ಲಿರುವ ವಿದ್ಯುತ್ಕಾಂತೀಯ ಅಲೆಗಳನ್ನು ಸಂಗೀತದ ಸ್ವರಗಳಾಗಿ ಪರಿವರ್ತಿಸುವ ಐಈಐ (ಮ್ಯೂಸಿಕಲ್ ಇನ್ಸ್ಟ್ರುಮೆಂಟ್ ಡಿಜಿಟಲ್ ಇಂಟರ್ಫೇಸ್) ತಂತ್ರಜ್ಞಾನವನ್ನು ಬಳಸುವ ಯಂತ್ರಗಳನ್ನು ಬಳಸಿಕೊಂಡು ಸಸ್ಯದ ಶಬ್ದಗಳನ್ನು ರೆಕಾರ್ಡ್ ಮಾಡುವ ಕೆಲಸವನ್ನು ವಿಜಯ್ ಮಾಡಿದ್ದಾರೆ. ‘ವೃಕ್ಷಧ್ವನಿ’ ಎಂದು ಕರೆಯಲ್ಪಡುವ ಈ ಯೋಜನೆಯಲ್ಲಿ ವಿಜಯ್ ತಮ್ಮ ತಂಡದೊಂದಿಗೆ ೧೦೦ ಜಾತಿಯ ಸಸ್ಯಗಳ ಧ್ವನಿಗಳನ್ನು ದಾಖಲಿಸಿ, ಸಂರಕ್ಷಣಾ ಪ್ರಯತ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದಲ್ಲದೆ, ಮಣ್ಣಿನ ಪರಿಸ್ಥಿತಿಗಳು ಮತ್ತು ಹವಾಮಾನದಂತಹ ಪರಿಸರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಗುರಿಯನ್ನು ಹೊಂದಿದ್ದಾರೆ.
ಮರಗಳು ಮತ್ತು ಸಸ್ಯಗಳನ್ನು ನಕ್ಷೆ ಮಾಡಲು ಮತ್ತು ಸಸ್ಯದ ಶಬ್ದಗಳನ್ನು ರೆಕಾರ್ಡ್ ಮಾಡಲು ವಿಜ್ಞಾನಿಗಳು ಮತ್ತು ಸಂಸ್ಥೆಗಳ ಸಹಕಾರವನ್ನು ಎದುರು ನೋಡುತ್ತಿದ್ದೇನೆ ಎಂದು ವಿಜಯ್ ಹೇಳುತ್ತಾರೆ. ಇದೆಲ್ಲ ಪೂರ್ಣವಾಗಿ ಕಾರ್ಯಗತಗೊಳ್ಳಲು ಹಲವು ವರುಷಗಳೇ ಹಿಡಿದರೂ ಈ ನಿಟ್ಟಿನಲ್ಲಿ ಆಗುವ ಕೆಲಸಗಳು ನಿರ್ಣಾಯಕವಾಗಿದ್ದು ಜನರನ್ನು ಮತ್ತೆ ಪರಿಸರದ ಬಳಿ ಸೆಳೆಯಲು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಸಸ್ಯಗಳ ಜೈವಿಕ ಲಯವನ್ನು ಸಂಗೀತವನ್ನಾಗಿಸುವ ಪ್ರಕ್ರಿಯೆಯನ್ನು ತಂತ್ರಜ್ಞಾನದ ಸಾರ್ಥಕ ಬಳಕೆ ಎಂದರೆ ತಪ್ಪಾಗಲಾರದು. ನಲ್ಬೆಣಿಗೆಗಳು ಮನು ಕುಲಕ್ಕೆ ಕುಣಿಕೆಯಾಗಿ ದಿನೇ ದಿನೇ ಹಿಡಿತ ಹೆಚ್ಚಿಸುತ್ತಿರುವ ಕಾಲದಲ್ಲಿ ಅದೆಲ್ಲೋ ಕೂತು ನಿಸರ್ಗದ ಜೊತೆಗೆ ಮತ್ತೆ ನಮ್ಮನ್ನು ಬೆರೆಯಲು ಸುಂದರ ಕೊಂಡಿಗಳನ್ನು ನಿರ್ಮಿಸುತ್ತಿರುವ ಮನುಜರಿಗೆ ಇಲ್ಲಿಂದಲೇ ನಮಸ್ಕರಿಸೋಣ. ಅಂದಹಾಗೆ, ನೀವು ನಿಸರ್ಗದೊಂದಿಗೆ ಬೆರೆಯಲು ಮರೆತಿದ್ದರೆ, ಈ ಬರಹವೊಂದು ನೆಪವಾಗಿ ನಿಸರ್ಗದ ಮಡಿಲಿನಲ್ಲಿ ಪುನಃ ಬೆರೆಯುವಂತಾಗಲಿ.

andolanait

Recent Posts

ಓದುಗರ ಪತ್ರ: ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…

10 mins ago

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

21 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

44 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

1 hour ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

3 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

3 hours ago