ಎಡಿಟೋರಿಯಲ್

ಇದು ನಮ್ಮ ಬೊಂಬೆ ಮನೆ : ದಸರಾ ಮೆರುಗು ಹೆಚ್ಚಿಸುವ ಮನೆ ಮನೆ ಬೊಂಬೆ

ಮೈಸೂರು :  ದಸರಾ ಹಬ್ಬಕ್ಕೆ ಬೊಂಬೆ ಕೂರಿಸುವ ಪದ್ಧತಿ ಸುಮಾರು 18ನೇ ಶತಮಾನದಿಂದಲೂ ಜಾರಿಯಲ್ಲಿದೆ ಎನ್ನಲಾಗಿದೆ. ನವರಾತ್ರಿ ವೇಳೆಯಲಿ ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಬೊಂಬೆ ಕೂರಿಸುವುದು ವಾಡಿಕೆ.

ಈ ರೀತಿಯಾಗಿ 25 ವರ್ಷಗಳಿಂದಲೂ ತಮ್ಮ ಮನೆಯಲ್ಲಿ ದಸರಾ ಬೊಂಬೆ ಕೂರಿಸುತ್ತಾ ಬಂದಿರುವ ಮೈಸೂರಿನ ಟೀಕೆ ಲೇಔಟ್ ನ ಸುಮಾ ಅವರು ಈ ಬಾರಿ ಸುಮಾರು 1500ಕ್ಕೂ ಹೆಚ್ಚು ಬೊಂಬೆಗಳನ್ನು ಕೂರಿಸಿದ್ದಾರೆ.

ನಮಗೆ ಮೈಸೂರಿನ ಮಹಾರಾಜರು ದೇವರ ಸಮಾನ, ಹೀಗಾಗಿ ಮಹಾರಾಜರು ಅಂಬಾರಿ ಏರುವ ವೇಳೆಗೆ, ಕುಶಾಲು ತೋಪು ಬರುವ ವೇಳೆಗೆ ಮಹಾರಾಜರ ಶಕ್ತಿ, ಶೌರ್ಯ ಪ್ರದರ್ಶನ ಮಾಡುವ ಬೊಂಬೆಗಳನ್ನು ಕೂರಿಸುತ್ತೇವೆ.

ಮಹಾರಾಜರು ಅಂಬಾರಿಯಿಂದ ಇಡಿಯುವ ವೇಳೆಗೆ ಬೊಂಬೆಗಳನ್ನು ಮಲಗಿಸಿ ಅವರಿಗೆ ಗೌರವ ಸೂಚಿಸುತ್ತೇವೆ ಎಂದು ತಮ್ಮ ಮನೆಯ ಬೊಂಬೆಗಳ ಬಗ್ಗೆ ಹೇಳುತ್ತಾರೆ ಸುಮಾ.

 

ಬೊಂಬೆಗಳನ್ನು ಸಾಮಾನ್ಯವಾಗಿ 9 7 5 ಹೀಗೆ ಹಲವು ಹಂತಗಳಲ್ಲಿ ಕೂರಿಸುತ್ತಾರೆ. ಸುಮಾ ಅವರು ಈ ಬಾರಿ 9 ಹಂತಗಳಲ್ಲಿ ಬೊಂಬೆ ಕೂರಿಸಿದ್ದಾರೆ.

ಗಮನ ಸೆಳೆಯುವ ಬೊಂಬೆಗಳು : 

ಅರಮನೆ, ಪೌರಾಣಿಕ ಕಥೆಗಳನ್ನು ಬಿಂಬಿಸುವ ಬೊಂಬೆಗಳು, ನವರಾತ್ರಿ ಹಬ್ಬಕ್ಕೆ ಸಂಬಂಧಿಸಿದ ಬೊಂಬೆಗಳ ಪ್ರದರ್ಶನ ಇದ್ದೇ ಇರುತ್ತದೆ. ಇದರ ಜೊತೆಗೆ ಈ ಬಾರಿ ಕೊರೋನ ವಾರಿಯರ್ಸ್, ಕೋವಿಡ್ ಸಂಬಂಧಿತ ಬೊಂಬೆಗಳು, ಪುನೀತ್ ರಾಜಕುಮಾರ್, ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೊಂಬೆಗಳು, ಪಟ್ಟದ ರಾಜಾರಾಣಿಯ ದರ್ಬಾರ್, ಈಶ್ವರ, ಕೃಷ್ಣ ದಂತಹ ಬೊಂಬೆಗಳು ಹೈಲೈಟ್ ಎನ್ನುತ್ತಾರೆ ಸುಮಾ.

 

andolanait

Recent Posts

T 20 World Cup : ನಮೀಬಿಯ ವಿರುದ್ಧ ಭಾರತಕ್ಕೆ 93 ರನ್‌ಗಳ ಭರ್ಜರಿ ಜಯ

ಹೊಸದಿಲ್ಲಿ : ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ…

34 mins ago

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಕ್ಕೆ ಅನುಮತಿ : ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಲಾಗಿದೆ ಎಂದು  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಚಿವ ಸಂಪುಟ…

53 mins ago

ಅಧಿಕಾರ ಹಂಚಿಕೆ ಚರ್ಚೆ ಮಧ್ಯೆ ರಾಜ್ಯ ಬಜೆಟ್‌ಗೆ ದಿನಾಂಕ ನಿಗದಿ

ಬೆಂಗಳೂರು : ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಚ್ 6 ರಂದು ದಾಖಲೆಯ 17ನೇ ಹಾಗೂ ಪ್ರಸಕ್ತ…

2 hours ago

ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಐತಿಹಾಸಿಕ : ಟ್ರಂಪ್ ಬಣ್ಣನೆ

ನ್ಯೂಯಾರ್ಕ್ : ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕವು ದೇಶಕ್ಕೆ ಮತ್ತು…

4 hours ago

ಬಿಕ್ಲು ಶಿವ ಕೊಲೆ ಪ್ರಕರಣ : ಪೊಲೀಸರ ವಶವಾದ ಬೈರತಿ ಬಸವರಾಜು

ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ (ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರಂ ಕ್ಷೇತ್ರದ…

4 hours ago

ಸರ್ಕಾರಿ ಅಧಿಕಾರಿಗಳಿಗೆ ಲೋಕಾ ಶಾಕ್‌ : ಮೈಸೂರು ಸೇರಿ ಹಲವೆಡೆ ದಾಳಿ

ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ…

5 hours ago