ಎಡಿಟೋರಿಯಲ್

ಕೆಪಿಎಸ್‌ಸಿ: ಉದ್ಯೋಗಾಕಾಂಕ್ಷಿಗಳ ವಿಶ್ವಾಸಾರ್ಹತೆಗೆ ಧಕ್ಕೆ

ಆಯೋಗಕ್ಕೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು

ಜಿ. ಎಂ. ಪ್ರಸಾದ್
ಇತ್ತೀಚೆಗೆ ಕರ್ನಾಟಕ ಲೋಕಸೇವಾ ಆಯೋಗವು ಸುದ್ದಿಯಲ್ಲಿದೆ. ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ೨೦೨೪ರ ಫೆಬ್ರವರಿ ಯಲ್ಲಿ ಅಽಸೂಚನೆ ಹೊರಡಿಸಿ, ಆಗಸ್ಟ್ ೨೯ರಂದು ಪೂರ್ವಭಾವಿ ಪರೀಕ್ಷೆ ಯನ್ನು ಆಯೋಜಿಸಿತ್ತು. ಅಂದು ನಡೆದ ಪರೀಕ್ಷೆಯಲ್ಲಿ ಕೇಳ ಲಾದ ಪ್ರಶ್ನೆಗಳ ಭಾಷಾಂತರದಲ್ಲಿ ಸಾಕಷ್ಟು ಗೊಂದಲ ಉಂಟಾದ ಪರಿಣಾಮವಾಗಿ ಪರೀಕ್ಷೆಯನ್ನು ರದ್ದುಪಡಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುನಃ ಪರೀಕ್ಷೆ ನಡೆಸಲು ಸೂಚಿಸಿದ್ದರ ಮೇರೆಗೆ ಕೆಪಿಎಸ್‌ಸಿ ಕಳೆದ ಡಿಸೆಂಬರ್ ೨೯ರಂದು ಪೂರ್ವಭಾವಿ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಿತು. ಈ ಪರೀಕ್ಷೆಯಲ್ಲಿಯೂ ೪-೫ ಪ್ರಶ್ನೆಗಳಲ್ಲಿ ಗೊಂದಲಗಳಿದ್ದ ಪರಿಣಾಮ ಕೆಪಿಎಸ್‌ಸಿ ನಡವಳಿಕೆ ಬಗ್ಗೆ ಸಾರ್ವಜನಿಕರಲ್ಲಿ ವಿಶೇಷವಾಗಿ ಅಭ್ಯರ್ಥಿಗಳಲ್ಲಿ ಅನುಮಾನ ಮೂಡುವುದು ಸಹಜ.

ಕಳೆದ ವರ್ಷ ಲೋಕಸೇವಾ ಆಯೋಗದ ಕಾನೂನು ಕೋಶದ ಮುಖ್ಯಸ್ಥರ ನೇಮಕದ ಸಂದರ್ಭದಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಕಾರ್ಯ ದರ್ಶಿಗಳ ನಡುವೆ ಶೀತಲ ಸಮರ ಏರ್ಪಟ್ಟಿದ್ದನ್ನು ಜನರು ಗಮನಿಸಿದ್ದಾರೆ. ಹೀಗೆ ಸದಾ ಒಂದಿಲ್ಲೊಂದು ಕಾರಣ ದಿಂದ ಆಯೋಗವು ಅನಗತ್ಯವಾದ ಸುದ್ದಿಯಲ್ಲಿದೆ. ಇದರಿಂದ ಸರ್ಕಾರಿ ಹುದ್ದೆಪಡೆಯಬೇಕೆಂಬ ಅಸಂಖ್ಯಾತ ಉದ್ಯೋಗಕಾಂಕ್ಷಿಗಳಿಗೆ ಭ್ರಮನಿರಸನವಾಗಿದೆ. ಕಾರಣ ಗಳೇನೇ ಇರಲಿ, ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿಳಂಬವಾಗುತ್ತಿದೆ. ಇತ್ತ ಕರ್ನಾಟಕ ಪರೀಕ್ಷಾ ಪ್ರಾಽ ಕಾರವೂ (ಕೆಇಎ) ಒಂದು ನೇಮಕಾತಿ ಸಂಸ್ಥೆಯಾಗಿದ್ದು, ೨೦೨೪ರಲ್ಲಿ ಎರಡು ಪಿಎಸ್‌ಐ ಪರೀಕ್ಷೆ, ವಿವಿಧ ನಿಗಮ- ಮಂಡಳಿಗಳಲ್ಲಿ ಹುದ್ದೆಗಳ ನೇಮಕಾತಿ ಪರೀಕ್ಷೆ, ಗ್ರಾಮ ಆಡಳಿತಾಽಕಾರಿಗಳ ನೇಮಕಾತಿ ಪರೀಕ್ಷೆ, ಕೆ-ಸೆಟ್ ಪರೀಕ್ಷೆ ಸೇರಿದಂತೆ ೧೭ ನೇಮಕಾತಿ ಪ್ರಕ್ರಿಯೆಗಳನ್ನು ಯಾವುದೇ ದುರಾಚಾರಗಳಿಲ್ಲದೆ, ಪ್ರಾಮಾಣಿಕವಾಗಿ ನಿರ್ವಹಿಸಿದೆ. ಆದರೆ ಸಾಂವಿಧಾನಿಕ ಸಂಸ್ಥೆಯಾದ ಕೆಪಿಎಸ್‌ಸಿಗೆ ಏಕೆ ಇದು ಸಾಧ್ಯವಾಗುತ್ತಿಲ್ಲ?

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಣಕಾಸು ಇಲಾಖೆಯ ಒಪ್ಪಿಗೆ ಪಡೆದು, ಭರ್ತಿ ಮಾಡುವುದು ನಿಯಮಾವಳಿಯಾಗಿದೆ. ಸಾಮಾನ್ಯವಾಗಿ ಈ ಕೆಲಸವನ್ನು ಆಯೋಗವು ಮಾಡುತ್ತದೆ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಲೋಕ ಸೇವಾ ಆಯೋಗವು ಕಾರ್ಯ ನಿರ್ವಹಿಸುವ ರೀತಿಯಲ್ಲಿ, ರಾಜ್ಯಗಳಲ್ಲಿ ರಾಜ್ಯ ಲೋಕ ಸೇವಾ ಆಯೋಗ ಕೆಲಸ ಮಾಡುತ್ತದೆ. ಇವು ಸಾಂವಿಧಾ ನಿಕ ಸಂಸ್ಥೆಗಳಾಗಿದ್ದು, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ. ಅಖಿಲ ಭಾರತ ಮಟ್ಟದ ನಾಗರಿಕ ಸೇವೆಗಳಾದ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಇನ್ನಿತರ ಸೇವೆಗಳಿಗೆ ಯುಪಿಎಸ್‌ಸಿ ಪ್ರತಿವರ್ಷವೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡುತ್ತದೆ. ಪಾರದರ್ಶಕತೆ ಮತ್ತು ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳಿಸುವುದು ಮತ್ತಿತರ ವಿಷಯಗಳಲ್ಲಿ ಇಂದಿಗೂ ಯುಪಿಎಸ್‌ಸಿ ಕಾರ್ಯದಕ್ಷತೆಯನ್ನು ಮೆರೆದಿದೆ. ನೇಮಕಾತಿ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸುಮಾರು ಒಂದು ವರ್ಷದೊಳಗೆ ಇಡೀ ಪ್ರಕ್ರಿಯೆ ಸುಸೂತ್ರವಾಗಿ ಮುಗಿದುಬಿಡುತ್ತದೆ. ಯುಪಿಎಸ್‌ಸಿ ಇದುವರೆಗೂ ಒಂದೇ ಒಂದು ಪ್ರಮಾದವನ್ನೂ ಮಾಡಿಲ್ಲವೆನ್ನುವುದು ಗಮನಾರ್ಹ.

ಯುಪಿಎಸ್‌ಸಿ ಕಾರ್ಯನಿರ್ವಹಣೆಗೆ ಹೋಲಿಸಿದರೆ, ಕೆಪಿಎಸ್‌ಸಿ ಕಾರ್ಯನಿರ್ವಹಣೆ ಅತ್ಯಂತ ಕಳಪೆಯಾಗಿದೆ. ಅದರ ಕರ್ಮಕಾಂಡ ಹೇಳತೀರದು. ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಈ ಹಿಂದೆ ಕೆಪಿಎಸ್‌ಸಿ ನಡೆಸಿದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ. ಇಂದಿಗೂ ಕೆಪಿಎಸ್‌ಸಿ ನಡೆಸುವ ನೇಮಕಾತಿ ಪರೀಕ್ಷೆಗಳು ಅಽಸೂಚನೆ ಪ್ರಕಟಗೊಂಡ ದಿನದಿಂದ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗುವವರೆಗೆ ಹಲವಾರು ವರ್ಷಗಳೇ ಕಳೆದುಹೋಗಿರುತ್ತದೆ. ಈ ವಿಳಂಬದಿಂದ ಸಹಸ್ರಾರು ಅಭ್ಯರ್ಥಿಗಳು ಅನುಭವಿಸುವ ಪಾಡು ಹೇಳತೀರದು. ಪಾರದರ್ಶಕವಾಗಿ, ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಮುಗಿಸುವ ಸಂಸ್ಥೆಯಾಗಿ ಈಗಿರುವ ಕೆಪಿಎಸ್‌ಸಿ ರೂಪುಗೊಳ್ಳಲು ಎಲ್ಲ ಸಿಬ್ಬಂದಿ ವರ್ಗದವರು ಮತ್ತು ಸರ್ಕಾರ ಕ್ಷಿಪ್ರವಾಗಿ ಕ್ರಮಕೈಗೊಳ್ಳಬೇಕು.

ಯುವಪೀಳಿಗೆ ಸರ್ಕಾರಿ ಹುದ್ದೆ ಪಡೆಯುವ ಸಲುವಾಗಿ, ಪರೀಕ್ಷೆ ಪಾಸು ಮಾಡಬೇಕೆಂದು ತಯಾರಿ ನಡೆಸುತ್ತಿರುತ್ತಾರೆ. ಈ ಪ್ರಕ್ರಿಯೆಗೆ ಸಾಕಷ್ಟು ಹಣ ಮತ್ತು ಸಂಪನ್ಮೂಲವನ್ನು ವಿನಿಯೋಗಿಸಿರುತ್ತಾರೆ. ಪರೀಕ್ಷೆಯ ಗೊಂದಲಗಳಿಂದಾಗಿ ಅವರ ಅಭ್ಯಾಸ ಮತ್ತು ಭವಿಷ್ಯ ಹಳಿ ತಪ್ಪುವ ಅಪಾಯವೂ ಇರುತ್ತದೆ. ಹೀಗಾಗಿ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿರುವುದು ಇಂದಿನ ತುರ್ತು ಅಗತ್ಯ.

ಸರ್ಕಾರದ ಕೆಲಸ ಕಾರ್ಯಗಳು ಸುಗಮವಾಗಿ ಸಾಗಬೇಕೆಂದರೆ ಸಾಕಷ್ಟು ಮಾನವ ಸಂಪನ್ಮೂಲ ಅಗತ್ಯ. ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿಕೊಂಡರೆ, ಇರುವ ಅಧಿಕಾರಿ, ನೌಕರರುಗಳ ಮೇಲೆ ಒತ್ತಡ ಹೆಚ್ಚಾಗಿ, ಅವರ ವೈಯಕ್ತಿಕ ಜೀವನ ಮತ್ತು ಕಚೇರಿ ಕೆಲಸ – ಎರಡರ ಮೇಲೂ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಅತಿಯಾದ ಕೆಲಸದೊತ್ತಡದಿಂದ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಗಳೂ ನಮ್ಮ ಮುಂದಿವೆ. ಹೀಗಾಗಿ ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಬೇಕು; ಸರ್ಕಾರಿ ಆಡಳಿತಯಂತ್ರ ಸುಗಮವಾಗಿ ಸಾಗಬೇಕು. ಇದಕ್ಕೆ ಪೂರಕವಾಗಿ ಕೆಪಿಎಸ್‌ಸಿಗೆ ಕಾಯಕಲ್ಪ ನೀಡುವ ಸಂಬಂಧ ಉನ್ನತ ಮಟ್ಟದ ಸಮಿತಿಯನ್ನು ರಚಿಸಬೇಕು. ಆ ಮೂಲಕ ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವ ಯುವಸಮೂಹದಲ್ಲಿ ಕೆಪಿಎಸ್‌ಸಿ ಬಗ್ಗೆ ವಿಶ್ವಾಸಾರ್ಹತೆ ಮೂಡಿಸಬೇಕಾಗಿದೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಚರಂಡಿ ಸ್ವಚ್ಛಗೊಳಿಸಿ

ಮೈಸೂರು ತಾಲ್ಲೂಕು ಸಿದ್ದಲಿಂಗಪುರ ಗ್ರಾಪಂ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಚರಂಡಿಯಲ್ಲಿ ಹೂಳುತುಂಬಿದ್ದು, ಸರಾಗವಾಗಿ ನೀರು ಹರಿಯದೇ ಇರುವುದರಿಂದ ಸೊಳ್ಳೆ, ನೊಣಗಳ…

38 mins ago

ಓದುಗರ ಪತ್ರ: ಮೊಬೈಲ್ ಬಿಟ್ಟು, ಪುಸ್ತಕ ಹಿಡಿಯಲಿ

ಇಂದು ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗಿದ್ದು, ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಫೇಸ್ ಬುಕ್, ಸ್ನಾಪ್ ಚಾಟ್, ಎಕ್ಸ್ , ಟೆಲಿಗ್ರಾಂಗಳನ್ನು…

41 mins ago

ಓದುಗರ ಪತ್ರ: ಇಷ್ಟೊಂದು ಸಿಗ್ನಲ್ ಲೈಟ್‌ಗಳು ಅಗತ್ಯವೇ?

ಮೈಸೂರಿನ ಬಹುತೇಕ ಎಲ್ಲ ವೃತ್ತಗಳಲ್ಲೂ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಸಾಂಸ್ಕೃತಿಕ ನಗರಿಯಾಗಿರುವ ಮೈಸೂರು ಸಿಗ್ನಲ್ ಲೈಟ್‌ಗಳ ನಗರಿಯಾಗಿ ಮಾರ್ಪಾಡಾಗಿದೆ. ಸಂಚಾರ…

45 mins ago

ಓದುಗರ ಪತ್ರ: ಪಿಜ್ಜಾ,ಬರ್ಗರ್ ಸೆಂಟರ್ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಇರಲಿ

ಮೈಸೂರಿನ ಜಯಲಕ್ಷ್ಮಿಪುರಂ ಮೂಲಕ ಹಾದು ಹೋಗುವ ಗೋಕುಲಂನ ಮುಖ್ಯರಸ್ತೆಯಲ್ಲಿ ಕೆಲ ರೆಸ್ಟೋರೆಂಟ್‌ಗಳು, ಕೆಫೆ,ಪಿಜ್ಜಾ ಹಾಗೂ ಬರ್ಗರ್ ಸೆಂಟರ್‌ಗಳು ಇವೆ. ಈ…

48 mins ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ದೆಹಲಿ ಶೃಂಗ ಸಭೆ ಹೊರ ಹಾಕಿದ ಎಐ ಒಳನೋಟ

ಇದು ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಯುಗ. ಅರವತ್ತರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ಜಾರಿಗೆ ತಂದ ಜಪಾನ್ ಮಾದರಿಯ ನಾಟಿ, ಕಳೆಕೀಳುವ…

2 hours ago

ದ್ವಿತೀಯ ಪಿಯುಸಿ: 5, 255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ

ನವೀನ್ ಡಿಸೋಜ ಮಡಿಕೇರಿ: ಫೆ.೨೮ರಿಂದ ಮಾ.೧೭ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜಿಲ್ಲೆಯ ೧೮ ಪರೀಕ್ಷಾ ಕೇಂದ್ರಗಳಲ್ಲಿ ೫,೨೫೫ ವಿದ್ಯಾರ್ಥಿಗಳು…

2 hours ago