ಎಡಿಟೋರಿಯಲ್

ಕನ್ನಡ ಚಿತ್ರರಂಗವೂ ಡಿಜಿಟಲ್ ಪ್ರಚಾರ ವ್ಯವಸ್ಥೆಯೂ

 

 ಚಿತ್ರಮಂದಿರಗಳಿಗೆ ಬಂದು ಕನ್ನಡ ಚಿತ್ರಗಳನ್ನು ನೋಡುವವರ ಸಂಖ್ಯೆ ತೀರಾ ಇಳಿಮುಖವಾಗಿದೆಪರಭಾಷಾ ಚಿತ್ರಗಳನ್ನು ನೋಡುವವರ ಸಂಖ್ಯೆ ಅಷ್ಟೇನೂ ಕಡಿಮೆಯಾಗಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತುನಿಜವೂ ಕೂಡಕಳೆದ ವಾರದವರೆಗೆ ತೆರೆಕಂಡ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಗೆದ್ದ ಚಿತ್ರಗಳೆಷ್ಟುಬೆರಳೆಣಿಕೆಯವುಇದಕ್ಕೇನು ಕಾರಣಚಿತ್ರದ ಗುಣಮಟ್ಟವೇಪ್ರಚಾರದ ಕೊರತೆಯೇಹೀಗೆ ಪ್ರಶ್ನೆಗಳು ಏಳುತ್ತಲೇ ಇರುತ್ತವೆ.

ಬರೇ ಪ್ರಚಾರ ಮಾತ್ರದಿಂದ ಚಿತ್ರಗಳು ಗೆಲ್ಲುತ್ತವೆಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆಗಲ್ಲಾಪೆಟ್ಟಿಗೆ ತುಂಬುತ್ತದೆ ಎನ್ನುವುದಾದರೆಅದ್ಧೂರಿ ಪ್ರಚಾರ ಮಾಡಿದ ಚಿತ್ರಗಳೆಲ್ಲ ಗಲ್ಲಾಪೆಟ್ಟಿಗೆ ಲೂಟಿ ಮಾಡಬೇಕಾಗಿತ್ತುಹಾಗಾಗುತ್ತಿಲ್ಲಎರಡನೇ ಪ್ರದರ್ಶನಕ್ಕೇ ಪ್ರೇಕ್ಷಕ ವಿಮುಖನಾದ ಸಾಕಷ್ಟು ಚಿತ್ರಗಳಿವೆ.

ಕಳೆದ ವಾರ ತೆರೆಕಂಡ ‘ಆದಿಪುರುಷ್’ ಚಿತ್ರವನ್ನೇ ತೆಗೆದುಕೊಳ್ಳಿವಾರಾಂತ್ಯದ ಗಳಿಕೆ ಸಾಕಷ್ಟಿತ್ತುನಿಜಆದರೆ ಸೋಮವಾರ ದಿಢೀರನೆ ಗಳಿಕೆ ಪ್ರತಿಶತ 75ರಷ್ಟು ಇಳಿಮುಖವಾಯಿತುರಾಮಾಯಣವನ್ನು ಇಂದಿನ ಮಂದಿಗೆ ಬೇಕಾದಂತೆತಾಂತ್ರಿಕ ಶ್ರೀಮಂತಿಕೆಯೊಂದಿಗೆ ಅದ್ಧೂರಿಯಾಗಿ ನಿರ್ಮಿಸಿನೀಡಿದ್ದೇವೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕರು ಹೇಳಿದರೇನೋ ಹೌದುಗ್ರಾಫಿಕ್ಸ್ವಿಶೇಷ ಪರಿಣಾಮಗಳಿಗಾಗಿಒಟ್ಟು ನಿರ್ಮಾಣ ವೆಚ್ಚದ ಅರ್ಧದಷ್ಟನ್ನು ವ್ಯಯಿಸಿದ್ದೂ ಹೌದುಆದರೆ ಅವೆಲ್ಲ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆಹಲವಾರು ದೃಶ್ಯಗಳು ಹಾಲಿವುಡ್ ಚಿತ್ರಗಳವುಗಳನ್ನು ಹೋಲುತ್ತವೆ ಎಂದು ಆ ದೃಶ್ಯಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳಿದ್ದವುಉಡುಗೆ ತೊಡುಗೆಗಳುಸಂಭಾಷಣೆಗಳ ಕುರಿತೂ.

ರಾಮಾಯಣದಂತಹ ಮಹಾಕೃತಿಗೆ ಅವಮಾನವಾಗುವಂತಹ ಚಿತ್ರ ಇದು ಎನ್ನುವವರೆಗೆ ಆಕ್ಷೇಪಗಳಿದ್ದವುಒಂದೆರಡು ಸಂಭಾಷಣೆಗಳು ತೀರಾ ಕೀಳು ಅಭಿರುಚಿಯವುಗಳಾಗಿದ್ದು ಅವುಗಳನ್ನು ಚಿತ್ರ ಬಿಡುಗಡೆಯ ನಂತರ ಬದಲಾಯಿಸಿದ ಪ್ರಸಂಗವೂ ನಡೆಯಿತುನೇಪಾಳದಲ್ಲಿ ಆ ಚಿತ್ರದ ಬಿಡುಗಡೆಗೆ ಬಿಡಲಿಲ್ಲ.

ಭಾರತದಲ್ಲಿ ಅಖಿಲ ಭಾರತೀಯ ಕಾರ್ಮಿಕರ ಸಂಘಟನೆಯೊಂದುಈ ಚಿತ್ರವನ್ನು ಬಹಿಷ್ಕರಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದೆಹಿಂದೆ ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಸರಣಿಯಲ್ಲಿ ಪಾಲ್ಗೊಂಡಿದ್ದವರಲ್ಲಿ ಹಲವರು ತರಹೇವಾರಿ ಟೀಕೆಗಳನ್ನು ಮಾಡತೊಡಗಿದ್ದಾರೆಮುಖ್ಯವಾಗಿ ಚಿತ್ರದ ಸಂಭಾಷಣೆಯ ಕುರಿತಂತೆ ಹೆಚ್ಚು ವಿರೋಧ ವ್ಯಕ್ತವಾಗಿದೆ.

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿಹೆಚ್ಚು ವೆಚ್ಚವಾದ ಚಿತ್ರ ಇದು ಎನ್ನಲಾಗಿದ್ದುಅದರ ಗಳಿಕೆಯ ಕುರಿತಂತೆ ಈಗಾಗಲೇ ತರಹೇವಾರಿ ಅಭಿಪ್ರಾಯಗಳು ಇವೆನಿರ್ಮಾಪಕರು ಚಿತ್ರದ ಪ್ರವೇಶ ದರವನ್ನು ಇಳಿಸಿದ್ದಾರೆನಿನ್ನೆ ಮತ್ತು ಇಂದು ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಅದರ ಪ್ರವೇಶ ದರವನ್ನು 150 ರೂ.ಗಳಿಗೆ ಇಳಿಸಿದ ಪ್ರಕಟಣೆಯನ್ನು ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಟಿಸೀರೀಸ್ ಮಾಡಿದೆ!

ಚಿತ್ರ ಚೆನ್ನಾಗಿರಲಿಚೆನ್ನಾಗಿಲ್ಲದೆ ಇರಲಿಪ್ರೇಕ್ಷಕ ಚಿತ್ರಮಂದಿರಕ್ಕೆ ಬರಲು ಪ್ರವೇಶ ದರ ಮುಖ್ಯ ಎನ್ನುವುದನ್ನು ಟಿ ಸೀರೀಸ್ ಮನಗಂಡಿದೆ ಎನ್ನುವುದನ್ನು ಬೇರೆ ಹೇಳಬೇಕಾಗಿಲ್ಲಇದು ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ಚಿತ್ರಗಳ ಪ್ರೇಕ್ಷಕರಿಗೆ ಅನ್ವಯಿಸುವ ಮಾತುತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಚಿತ್ರಮಂದಿರಗಳ ಪ್ರವೇಶ ದರಕ್ಕೆ ಸರ್ಕಾರದ ನಿಯಂತ್ರಣವಿದೆಮಲ್ಟಿಪ್ಲೆಕ್ಸ್‌ಗಳ ಸೌಲಭ್ಯಗಳಿಗೆ ಅನುಗುಣವಾಗಿ ಇದನ್ನು ಆಯಾ ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆಎಲ್ಲೂ ಪ್ರವೇಶ ದರ 200 ರೂ.ಗಳನ್ನು ಮೀರುವುದಿಲ್ಲಅಷ್ಟೇ ಅಲ್ಲಮುಂದಿನ ಎರಡು ಮೂರು ಸಾಲುಗಳಿಗೆ ಅದು 60 ರೂಮೀರದು.

ಅದ್ಧೂರಿ ಚಿತ್ರಗಳುನೂರು ಕೋಟಿ ರೂ.ಗಳಿಗೂ ಅಧಿಕ ನಿರ್ಮಾಣ ವೆಚ್ಚದ ಚಿತ್ರಗಳು ಸರ್ಕಾರದ ಅನುಮತಿ ಪಡೆದು ಪ್ರವೇಶ ದರವನ್ನು ಏರಿಸಿಕೊಳ್ಳಬಹುದುಅದು ಕೂಡ ಸೀಮಿತ ವಾರಗಳಿಗೆ ಮಾತ್ರಆ ರಾಜ್ಯಗಳಲ್ಲಿ ಇರುವಂತೆ ಇಲ್ಲಿ ಸರ್ಕಾರದ ನಿಯಂತ್ರಣ ಇಲ್ಲಅದರಲ್ಲೂ ಮಲ್ಟಿಪ್ಲೆಕ್ಸ್‌ಗಳ ಪ್ರವೇಶ ದರಅದ್ಧೂರಿ ಚಿತ್ರಗಳು ತೆರೆಕಂಡಾಗ ಮನಸೋ ಇಚ್ಛೆ ಪ್ರವೇಶದರ ಅಲ್ಲಿರುತ್ತವೆಜನಸಾಮಾನ್ಯರಿಗೆ ಇದು ಎಟಕದುತಿಂಗಳ ಸಂಬಳ ಕೆಲವೇ ಸಾವಿರ ರೂಪಡೆಯುವ ಉದ್ಯೋಗಿಗಳು ತಮ್ಮ ಕುಟುಂಬದ ಜೊತೆ ಈ ದುಬಾರಿ ಪ್ರವೇಶ ಶುಲ್ಕ ಭರಿಸಿ ವಾರಕ್ಕೊಂದು ಚಿತ್ರ ನೋಡುವುದು ಸಾಧ್ಯವಿಲ್ಲದ ಮಾತುಯಾವುದೇ ಚಿತ್ರ ತೆರೆಕಂಡರೂ ಕೆಲವೇ ವಾರಗಳಲ್ಲಿ ಅದು ಒಟಿಟಿಯಲ್ಲೋಕಿರುತೆರೆಯಲ್ಲೋ ಪ್ರಸಾರವಾಗುತ್ತದೆ ಅಲ್ಲಿ ನೋಡಿದರಾಯಿತು ಎಂದುಕೊಳ್ಳುವವರೇ ಹೆಚ್ಚು.

ಇನ್ನು ಕನ್ನಡದ ವಿಷಯಕ್ಕೆ ಬರುವುದಾದರೆಕಳೆದ 24 ವಾರಗಳಲ್ಲಿ ನೂರಕ್ಕೂ ಹೆಚ್ಚು ಕನ್ನಡ ಚಿತ್ರಗಳು ತೆರೆಕಂಡಿವೆಸರಾಸರಿ ವಾರಕ್ಕೆ ನಾಲ್ಕಕ್ಕೂ ಮೀರಿಚಿತ್ರರಂಗದ ಮಂದಿಅದಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆಚಿತ್ರಮಂದಿರಗಳಿಗೆ ಹೋಗಿ ವಾರದಲ್ಲಿ ನಾಲ್ಕು ಚಿತ್ರಗಳನ್ನು ನೋಡುವ ಕುಟುಂಬಗಳಾಗಲೀವ್ಯಕ್ತಿಗಳಾಗಲೀ ಅಪರೂಪಅದು ಕೂಡ ಪ್ರತಿ ದಿನ ಕಿರುತೆರೆಯಲ್ಲಿ ಸಾಕಷ್ಟು ಚಿತ್ರಗಳನ್ನು ನೋಡಲು ಅವಕಾಶ ಇರುವ ಈ ದಿನಗಳಲ್ಲಿ!

ಅದ್ಧೂರಿ ವೆಚ್ಚದ ಚಿತ್ರಗಳಿರಲಿಸಾಧಾರಣ ವೆಚ್ಚದವುಗಳಾಗಿರಲಿಪ್ರಚಾರದ ಕೊರತೆ ಚಿತ್ರದ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಮಾತು ಈಗ ಹೆಚ್ಚಾಗಿ ಕೇಳಿಬರುತ್ತಿದೆಇತ್ತೀಚಿನ ದಿನಗಳಲ್ಲಿಸಾಧಾರಣ ಚಿತ್ರಕ್ಕಾಗಿ ಖರ್ಚು ಮಾಡುತ್ತಿರುವ ಮೊತ್ತಕ್ಕಿಂತಲೂ ಹೆಚ್ಚು ಹಣ ಪ್ರಚಾರಕ್ಕೆ ಬೇಕು ಎನ್ನುವುದು ಕೇಳಿಬರುತ್ತಿರುವ ಮಾತು.

ಸಾಂಪ್ರದಾಯಿಕ ಪ್ರಚಾರ ವ್ಯವಸ್ಥೆಗಳಾದಭಿತ್ತಿಪತ್ರಗಳುಕಟೌಟ್‌ಗಳುಪತ್ರಿಕೆಗಳಲ್ಲಿ ಜಾಹೀರಾತುಟಿವಿಗಳಲ್ಲಿ ಜಾಹೀರಾತುಗಳ ಜೊತೆಗೆ ಈಗ ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಪ್ರತ್ಯೇಕ ವೆಚ್ಚ ಮಾಡಬೇಕಾಗಿದೆಇವುಗಳನ್ನು ನೋಡಿಕೊಳ್ಳುವ ಮಧ್ಯವರ್ತಿಗಳೂ ಸಾಕಷ್ಟು ಮಂದಿ ಇದ್ದಾರೆ.

ಮೂಲಗಳ ಪ್ರಕಾರಪತ್ರಿಕೆ ಜಾಹೀರಾತುಟಿವಿ ಜಾಹೀರಾತುಭಿತ್ತಿಪತ್ರಗಳ ಮುದ್ರಣಕಟೌಟ್‌ಗಳು ಇವುಗಳ ವೆಚ್ಚ ಸಾಕಷ್ಟು ಮಂದಿ ನಿರ್ಮಾಪಕರುವಿತರಕರಿಗೆ ಗೊತ್ತುಆದರೆ ಡಿಜಿಟಲ್ ಮಾರ್ಕೆಟಿಂಗ್ ಕುರಿತಂತೆ ಇದಮಿತ್ಥಂ ಎನ್ನುವಂತೆ ಹೇಳುವವರು ಇಲ್ಲಆ ಕಾರಣದಿಂದಲೇ ಡಿಜಿಟಲ್ ಪ್ರಚಾರದ ಹೆಸರಲ್ಲಿ ನಿರ್ಮಾಪಕರ ಸಾಕಷ್ಟು ಹಣ ಪೋಲಾಗುತ್ತದೆ ಎನ್ನಲಾಗಿದೆಜಾಲತಾಣಗಳುಇನ್‌ಸ್ಟಾಗ್ರಾಂಗಳುಟ್ರೋಲ್‌ಗಳುಮೀಮ್‌ಗಳುರೀಲ್‌ಗಳಲ್ಲಿ ಪ್ರಚಾರಕ್ಕೆ ಕೊಡುವ ಮೊತ್ತದಿಂದ ಆಗುವ ಅನುಕೂಲಗಳ ಕುರಿತಂತೆ ಯಾರಿಗೂ ಏನೂ ಹೇಳಲಾಗದುಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟವಾಗುವುದರ ಮೂಲಕ ಒಂದು ಚಿತ್ರದ ಬಿಡುಗಡೆ ಆಗಿದೆ ಎಂದು ತಿಳಿಯುತ್ತದೆಅದರ ಪ್ರಸಾರದ ಮೇಲೆ ಅದು ಎಷ್ಟು ಜನರನ್ನು ತಲುಪುತ್ತದೆ ಎಂದು ಹೇಳಬಹುದು.

ಡಿಜಿಟಲ್ ಜಾಹೀರಾತುಗಳದೂ ಅದೇ ರೀತಿ ಆದರೂಹೊಸ ತಂತ್ರಜ್ಞಾನಈ ಸಂಖ್ಯೆಯನ್ನು ತಮಗೆ ಬೇಕಾದಂತೆ ಮಾಡಿಕೊಳ್ಳುವ ಅವಕಾಶವನ್ನೂ ಕೊಟ್ಟಿದೆಉದಾಹರಣೆಗೆ ಹೊಸ ಚಿತ್ರವೊಂದರ ಹಾಡು ಅಥವಾ ಟ್ರ್ತ್ಯೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಅದನ್ನು ನೋಡಿದವರ ಸಂಖ್ಯೆ ಲಕ್ಷಗಟ್ಟಲೆ ಆಗಿದೆ ಎಂದು ತೋರಿಸಲಾಗುತ್ತದೆಅಂತೆಯೇ ಪ್ರಚಾರವೂ ಆಗುತ್ತದೆಅದಕ್ಕಾಗಿ ಪ್ರತ್ಯೇಕ ಮೊತ್ತ ಪಾವತಿಸಬೇಕುಅದಕ್ಕೂ ಒಂದು ಸ್ಲ್ಯಾಬ್ ಇದೆ ಎನ್ನಲಾಗಿದೆಈ ಮಧ್ಯವರ್ತಿಗಳಿಗೆ ನಿರ್ಮಾಪಕ ಪ್ರಚಾರದ ಹೆಸರಲ್ಲಿ ಎಷ್ಟೇ ಹಣ ಕೊಟ್ಟರೂ ಅದರಿಂದಚಿತ್ರ ಬಿಡುಗಡೆಯಾದಾಗ ಆಗುವ ಪರಿಣಾಮ ಅಷ್ಟಕ್ಕಷ್ಟೇ.

ಇತ್ತೀಚೆಗೆ ತೆರೆಕಂಡ ‘ಡೇರ್ ಡೆವಿಲ್ ಮುಸ್ತಫಾ’ ಮತ್ತು ‘ಪಿಂಕಿ ಎಲ್ಲಿ?’ ಚಿತ್ರಗಳನ್ನೇ ತೆಗೆದುಕೊಳ್ಳಿಮುಸ್ತಫಾ ಚಿತ್ರಕ್ಕೆ ಚಿತ್ರ ತಂಡವೇ ಸಾಕಷ್ಟು ಪ್ರಚಾರವನ್ನು ತನ್ನದೇ ಆದ ರೀತಿಯಲ್ಲಿ ಮಾಡಿತುಕೊನೆಗಳಿಗೆಯಲ್ಲಿ ಸರ್ಕಾರವೂ ಅದಕ್ಕೆ ತೆರಿಗೆ ವಿನಾಯಿತಿ ನೀಡಿದೆಈ ಹಂತದಲ್ಲಿ ಚಿತ್ರದ ಗಳಿಕೆಗೆ ಅದು ಎಷ್ಟು ನೆರವಾಗಿದೆಆಗುತ್ತದೆ ಎನ್ನುವುದನ್ನು ಮುಂದಿನ ದಿನಗಳೇ ಹೇಳಬೇಕು. ‘ಪಿಂಕಿ ಎಲ್ಲಿ?’ ಚಿತ್ರದ ಡಿಜಿಟಲ್ ಪ್ರಚಾರಕ್ಕಾಗಿ ಸಾಕಷ್ಟು ಹಣ ವಿನಿಯೋಗಿಸಿದ್ದಾಗಿ ಅದರ ನಿರ್ಮಾಪಕರು ಹೇಳುತ್ತಾರೆಅದರಿಂದ ಚಿತ್ರದ ಗಳಿಕೆಗೆ ಎಷ್ಟು ಅನುಕೂಲ ಆಯಿತು ಎನ್ನುವುದನ್ನು ಅವರೇ ಹೇಳಬೇಕು.

ಚಿತ್ರ ನಿರ್ಮಾಣದ ಹಂತಕ್ಕಿಂತಲೂ ಅದರ ಬಿಡುಗಡೆಯ ಹಂತ ಸಂಬಂಧಪಟ್ಟ ಎಲ್ಲರಲ್ಲೂ ಆತಂಕ ತಂದಿದೆಚಿತ್ರಮಂದಿರಗಳ ಸಮಸ್ಯೆಪ್ರಚಾರದ ಹೊಸ ರೀತಿದುಬಾರಿ ಪ್ರವೇಶದರ ಇವೆಲ್ಲವುಗಳ ಕುರಿತಂತೆ ಉದ್ಯಮದ ಮಂದಿ ಒಟ್ಟಾಗಿ ಕುಳಿತು ಚರ್ಚಿಸಿಪರಿಹಾರ ಕಂಡುಕೊಳ್ಳಬೇಕಿದೆಆ ನಿಟ್ಟಿನಲ್ಲಿ ಉದ್ಯಮದ ಪ್ರಾತಿನಿಽಕ ಸಂಘಟನೆಗಳು ಮುಂದಾಗಬೇಕು.

 

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

6 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

6 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

7 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

7 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

7 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

7 hours ago