ಎಡಿಟೋರಿಯಲ್

ನ್ಯಾಯನಿಷ್ಠುರಿ: ಪ್ರೊ.ಜಿ.ಎಚ್.ನಾಯಕ

ಜಿ.ಪಿ.ಬಸವರಾಜು

  ನ್ಯಾಯ ನಿಷ್ಠುರಿದಾಕ್ಷಿಣ್ಯಪರ ನಾನಲ್ಲ

ಲೋಕವಿರೋಧಿ ಶರಣನಾರಿಗಂಜುವನಲ್ಲ

ಬಸವಣ್ಣನವರ ವಚನದ ಈ ಸಾಲುಗಳು ಪ್ರಸಿದ್ಧವಾಗಿದ್ದರೂನ್ಯಾಯನಿಷ್ಠುರಿಗಳು ಸಿಕ್ಕುವುದು ತೀರಾ ಅಪರೂಪ. 88 ವರ್ಷಗಳ ತುಂಬು ಬಾಳನ್ನು ಬಾಳಿ ಈ ಭೂಮಿಗೆ ವಿದಾಯ ಹೇಳಿದ (ಮೇ 272023ಪ್ರೊ.ಜಿ.ಎಚ್.ನಾಯಕರ ಬದುಕನ್ನುಅವರ ಒಳಬಾಳಿನ ತಿರುಳನ್ನುನಿಲುವು ನೋಟಗಳನ್ನುಹೋರಾಟದ ಕೆಚ್ಚನ್ನು ಕಂಡವರಿಗೆ ಬಸವಣ್ಣನವರ ‘ನ್ಯಾಯ ನಿಷ್ಠುರಿ’ ನಮ್ಮ ನಾಯಕರೇ ಎಂದೆನಿಸುತ್ತದೆ.

ನಾಯಕರು ಅಂಕೋಲೆಯ ಸೂರ್ವೆಯವರುಸ್ವಾತಂತ್ರ್ಯ ಹೋರಾಟದ ಮನೆತನಕ್ಕೆ ಸೇರಿದವರುಅವರ ಅಪ್ಪಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದವರುತಮ್ಮ ಜಮೀನು ಕಳೆದುಕೊಂಡವರುಇಡೀ ಕುಟುಂಬವೇ ಇದಕ್ಕಾಗಿ ಹಲಬಗೆಯ ಕಷ್ಟ ನಷ್ಟಗಳಿಗೆ ಎದೆಕೊಟ್ಟದ್ದು ಬರೆಯದ ಇತಿಹಾಸದ ಪುಟಗಳನ್ನು ತುಂಬಿದೆಕುಟುಂಬ ನಂಬಿಕೊಂಡಿದ್ದ ಮೌಲ್ಯಗಳುಸಮುದಾಯ ನಿಷ್ಠೆತ್ಯಾಗಬುದ್ಧಿಹೋರಾಟದ ಕೆಚ್ಚು– ಎಲ್ಲವೂ ನಾಯಕರಲ್ಲಿದ್ದವುಅಂಕೋಲೆಯಿಂದ ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬರಿಗೈಲಿ ಬಂದುಏಳು ದಶಕಗಳ ಅವಧಿಯಲ್ಲಿ ನಾಯಕರು ಬೆಳೆದ ರೀತಿ ಮೈಸೂರು ಮಾತ್ರವಲ್ಲ ಇಡೀ ಕರ್ನಾಟಕವನ್ನು ಆವರಿಸಿದ ರೀತಿ ಮಹಾನ್ ಸಾಧಕನೊಬ್ಬ ನೆಲಮುಗಿಲಿಗೆ ನಿಂತ ಚಿತ್ರವನ್ನು ಮನದಲ್ಲಿ ಮೂಡಿಸುತ್ತದೆ.

ಇಡೀ ಬದುಕಿನಲ್ಲಿ ನಾಯಕರು ನ್ಯಾಯಕ್ಕಾಗಿ ಸೆಣಸಿದರುತಮ್ಮ ವೃತ್ತಿಜೀವನದಲ್ಲಿ ತಮಗೆ ಅನ್ಯಾಯವಾಗಿಅದರಿಂದ ಅಪಾರ ಮಾನಸಿಕ ಸಂಕಟತೊಳಲಾಟಗಳಿಗೆ ಈಡಾದರೂ ನಾಯಕರು ಎಂದೂ ರಾಜಿಗೆಹೊಂದಾಣಿಕೆಗೆ ಮುಂದಾಗಲಿಲ್ಲಅವರ ಬದುಕಿನ ನಿಷ್ಠೆಆದರ್ಶಗಳಲ್ಲಿ ಎಲ್ಲಿಯೂ ಒಳದಾರಿಗಳಿರಲಿಲ್ಲಅವರು ನಡೆದದ್ದು ನ್ಯಾಯದತೆರೆದ ದಾರಿಅಲ್ಲಿ ಮುಚ್ಚು ಮರೆಗಳಿರಲಿಲ್ಲಪಾರದರ್ಶಕತೆ ಎನ್ನುವುದು ಅವರ ಒಳಹೊರಗುಗಳನ್ನು ಸದಾ ತೋರಿಸುತ್ತಿತ್ತುತಮ್ಮ ನಡೆನುಡಿಯ ನಡುವೆ ಬಿರುಕಿಲ್ಲದಂತೆ ಬಾಳಬೇಕೆಂಬುದೇ ಅವರ ಬದುಕಿನ ಬಹುದೊಡ್ಡ ಆದರ್ಶವಾಗಿತ್ತುಹೋರಾಟದ ಕೆಚ್ಚಿನಂತೆಯೇ ಧೀರ ನಿಲುವು ಅವರ ವ್ಯಕ್ತಿತ್ವದ ಮುಖ್ಯ ಅಂಶಗಳೇ ಆಗಿದ್ದವು.

ಅವರ ವೈಚಾರಿಕ ಚಿಂತನೆಗಾಂಧಿ, ಲೋಹಿಯಾಅಂಬೇಡ್ಕರ್ ಚಿಂತನೆಗಳಿಂದ ರೂಪುಗೊಂಡಿತ್ತುಅವರ ಕಾಳಜಿಯ ಹಿಂದೆ ಅಂಬೇಡ್ಕರ್ ಅವರ ಚಿಂತನೆ ಸ್ಪಷ್ಟವಾಗಿ ಇರುವುದು ಕಾಣುತ್ತಿತ್ತುಸಂವಿಧಾನವನ್ನು ಎದೆಯಲ್ಲಿಟ್ಟುಕೊಂಡೇ ಅವರು ನಮ್ಮೆಲ್ಲರ ಬದುಕಿನ ಆಗುಹೋಗುಗಳನ್ನುಸ್ಥಿತಿಗತಿಗಳನ್ನು ಕುರಿತು ಚಿಂತಿಸುತ್ತಿದ್ದರುನ್ಯಾಯಬದ್ಧ ಹೋರಾಟಗಳು ಈ ಚೌಕಟ್ಟಿನಲ್ಲಿಯೇ ನಡೆಯಬೇಕೆಂಬ ಹಟವೂ ಅವರಲ್ಲಿತ್ತುಇಂಥ ಹೋರಾಟಗಳಲ್ಲಿ ಅವರು ಮುಂಚೂಣಿಯಲ್ಲಿಯೇ ಇರುತ್ತಿದ್ದರುಕನ್ನಡಕ್ಕಾಗಿ ನಡೆದ ಗೋಕಾಕ್ ಚಳವಳಿಕೋಮು ಸಾಮರಸ್ಯಕ್ಕಾಗಿ ಮೈಸೂರಿನಲ್ಲಿ ನಡೆದ ‘ದ್ವೇಷಬಿಟ್ಟು ದೇಶಕಟ್ಟು’ ಹೋರಾಟದಲಿತ ಚಳವಳಿಯ ದಿಕ್ಕುದಿಸೆಯನ್ನು ನಿರ್ಧರಿಸುವ ಚಿಂತನ ಗೋಷ್ಠಿಗಳುವಿಚಾರಸಂಕಿರಣಗಳುಸಭೆಗಳುಸರಳ ವಿವಾಹದ ಚಟುವಟಿಕೆಗಳುಮಹಿಳಾಪರ ಹೋರಾಟಗಳುಚಿಂತನೆಗಳು ಎಲ್ಲ ಕಡೆಯಲ್ಲೂ ನಾಯಕರ ಧ್ವನಿ ಮುಖ್ಯಧ್ವನಿಯೇ ಆಗಿರುತ್ತಿತ್ತುನಾಯಕರ ಬಾಳ ಸಂಗಾತಿ ಮೀರಾ ನಾಯಕರು ಇತರ ಮಹಿಳಾ ಹೋರಾಟಗಾರ್ತಿಯರ ಜೊತೆ ಪ್ರತಿ ಬುಧವಾರವೂ ನಡೆಸುತ್ತಿದ್ದ ಸಭೆಗೆ ನಾಯಕರ ಮನೆಯೇ ಕೇಂದ್ರಸ್ಥಾನವಾಗಿತ್ತು.

ನಾಯಕರ ಚಿಂತನೆ ಸದಾ ವಿಶಿಷ್ಟವೂವಿಭಿನ್ನವೂ ಆಗಿತ್ತುಆಳಕ್ಕಿಳಿದುಸೂಕ್ಷ ವಾಗಿಸ್ವೋಪಜ್ಞವಾಗಿ ಚಿಂತಿಸುವುದುಬರೆಯುವುದುಸಮಾಜಮುಖಿಯಾಗಿ ನಿಲುವು ತಳೆಯುವುದು ಅವರ ನಿಷ್ಠೆಯನ್ನು ತೋರಿಸುವಂತಿರುತ್ತಿತ್ತುಅಂಬೇಡ್ಕರ್ ನೀಡಿದ ಸಂವಿಧಾನ ಬಹುದೊಡ್ಡ ಕೊಡುಗೆಅದನ್ನು ಬಹಳ ನಿಷ್ಠೆಯಿಂದ ನೋಡಬೇಕುನಮ್ಮ ಸರ್ಕಾರಗಳ ನಿಲುವು ಅದಕ್ಕೆ ಬದ್ಧವಾಗಿರಬೇಕೆಂದೇ ನಾಯಕರು ಬಯಸುತ್ತಿದ್ದರುಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಚಾಮುಂಡಿ ವಿಗ್ರಹವನ್ನಿಟ್ಟು ಮೆರವಣಿಗೆ ಮಾಡುವುದನ್ನು ಅವರು ವಿರೋಧಿಸಿದ್ದರುಅದಕ್ಕೆ ಕಾರಣಸರ್ಕಾರ ನಡೆಸುವ ದಸರಾ ಜಾತ್ಯತೀತ ತತ್ವವನ್ನು ಪಾಲಿಸುವಂತಿರಬೇಕುಎಲ್ಲ ಸಮುದಾಯಗಳುಎಲ್ಲ ಧಾರ್ಮಿಕ ನಂಬಿಕೆಯವರು ಇದರಲ್ಲಿ ಭಾಗವಹಿಸುವಾಗಹಿಂದೂ ದೇವತೆಯಾದ ಚಾಮುಂಡೇಶ್ವರಿಯನ್ನು ಕೂರಿಸಿ ಮೆರವಣಿಗೆ ಮಾಡುವುದು ಎಷ್ಟು ಸರಿಮೂರ್ತಿ ಪೂಜೆಯನ್ನೇ ನಿರಾಕರಿಸುವ ಸಮುದಾಯಗಳು ಇದರಿಂದ ಕಸಿವಿಸಿಗೊಳ್ಳುವುದಿಲ್ಲವೇಎಂಬ ಪ್ರಶ್ನೆಯನ್ನು ಎತ್ತುತ್ತಿದ್ದ ನಾಯಕರ ಈ ವಿಚಾರ ಸಾಕಷ್ಟು ವಿವಾದವನ್ನೇ ಎಬ್ಬಿಸಿತ್ತುಆದರೂ ನಾಯಕರು ತಮ್ಮ ನಿಲುವಿನಿಂದ ಅಲ್ಲಾಡಿರಲಿಲ್ಲ.

ಜನಪ್ರಿಯವಾದ ಆಚರಣೆಗಳನ್ನು ವಿವೇಚನೆ ಇಲ್ಲದೆ ಒಪ್ಪಿಕೊಳ್ಳಬಾರದೆಂಬ ಮನೋಧರ್ಮವೂ ನಾಯಕರ ಚಿಂತನೆಯಲ್ಲಿ ಇರುತ್ತಿತ್ತುಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆನಮ್ಮ ರಾಷ್ಟ್ರಪತಿಗಳಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವುದು ತಪ್ಪುಯಾಕೆಂದರೆ ರಾಧಾಕೃಷ್ಣನ್ ಅವರದು ಶುಭ್ರಶೀಲ ವ್ಯಕ್ತಿತ್ವವಲ್ಲಅವರ ಮಗನೇ ಬರೆದ ಪುಸ್ತಕದಲ್ಲಿ ರಾಧಾಕೃಷ್ಣನ್ ಅವರ ಶೀಲ ಎಂಥದೆಂಬುದು ದಾಖಲಾಗಿದೆನೋಡಿ ಎಂದು ನಾಯಕರು ವಾದಿಸುತ್ತಿದ್ದರುಈ ನಿಲುವು ಕೂಡ ವಿವಾದಕ್ಕೆ ಕಾರಣವಾಗಿತ್ತುಎಂಥ ವಿರೋಧವನ್ನೂ ಎದುರಿಸಿ ನಿಲ್ಲುವ ಎದೆಗಾರಿಕೆ ನಾಯಕರಲ್ಲಿತ್ತು.

ತಳ ಸಮುದಾಯಗಳಿಗೆದಲಿತರಿಗೆಮಹಿಳೆಯರಿಗೆಅಲ್ಪಸಂಖ್ಯಾತರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿಗಬೇಕಾದ ನ್ಯಾಯ ಸಿಗಲೇಬೇಕುಅವರ ಪಾಲು ಅವರದೇ ಆಗಬೇಕು ಎಂಬುದು ಅವರ ನಿಲುವಾಗಿತ್ತುಅವರ ಚಿಂತನೆಯ ದಿಕ್ಕೂ ಇದೇ ಆಗಿತ್ತುಅದಕ್ಕಾಗಿ ಅವರು ಎಂಥ ನಿಷ್ಠುರತೆಗೂ ಸಿದ್ಧವಾಗಿಯೇ ಇರುತ್ತಿದ್ದರುವಿಮರ್ಶೆ ಎನ್ನುವುದು ನಾಯಕರಿಗೆ ಕೇವಲ ಸಾಹಿತ್ಯಕ್ಕೆ ಮೀಸಲಾದ ಸಂಗತಿಯಾಗಿರಲಿಲ್ಲಸಾಹಿತ್ಯಸಂಸ್ಕ ತಿರಾಜಕೀಯಸಾಮಾಜಿಕ ವಿದ್ಯಮಾನಗಳುಧಾರ್ಮಿಕ ಆಚರಣೆಗಳು ವಿಚಾರಗಳು ಎಲ್ಲವನ್ನೂ ಹರಿತವಾದನ್ಯಾಯಬದ್ಧವಾದಸಮುದಾಯಗಳ ಸಮಗ್ರ ದೃಷ್ಟಿ ಧೋರಣೆಯಿಂದ ನೋಡುವ ವಿಧಾನವೇ ವಿಮರ್ಶೆ ಎಂದು ಗಾಢವಾಗಿ ನಂಬಿದ್ದ ನಾಯಕರು ಆ ದಿಕ್ಕಿನ ಕಡೆಗೆ ಚಲಿಸಲು ನೋಡುತ್ತಿದ್ದರು.

ಆಳವಾದ ಪಾಂಡಿತ್ಯಸೂಕ್ಷ ಸಂವೇದನೆಖಚಿತ ಮತ್ತು ಸ್ಪಷ್ಟ ನಿಲುವುಅಪರೂಪದ ಒಳನೋಟಗಳು ನಾಯಕರ ವಿಮರ್ಶೆಗೆ ಘನತೆಯನ್ನುಗೌರವವನ್ನು ತಂದಿದ್ದವುನಾಯಕರ ಒಂದು ಮಾತಿಗಾಗಿಅಭಿಪ್ರಾಯಕ್ಕಾಗಿ ಕಾತರಿಸುವ ಲೇಖಕರಓದುಗರ ಸಮುದಾಯವೇ ಇತ್ತು ಎಂಬುದು ನಾಯಕರ ವಿಮರ್ಶೆಯ ಸ್ಥಾನವನ್ನು ಕೂಡ ಪರೋಕ್ಷವಾಗಿ ಸೂಚಿಸುತ್ತದೆವ್ಯಕ್ತಿಯಾಗಿ ನಾಯಕರು ಬಹಳ ವಿನಯವಂತರುನಾಚಿಕೆಯ ಸ್ವಭಾವದವರುಅಪಾರ ಪ್ರೀತಿಯನ್ನು ಒಡಲಲ್ಲಿ ತುಂಬಿಕೊಂಡವರುಅವರ ಮೊದಲ ಮಗಳ ಹೆಸರು ಪ್ರೀತಿಮನೆಯ ಹೆಸರು ಕೂಡ ಪ್ರೀತಿಯೇಹತ್ತಿರದಿಂದ ಬಲ್ಲವರಿಗೆ ಈ ಪ್ರೀತಿಯ ಸ್ವರೂಪ ತಿಳಿದೇ ಇರುತ್ತದೆದಿಟ್ಟ ನಿಲುವುವೈಚಾರಿಕ ಚಿಂತನೆಕೆಚ್ಚೆದೆಯ ಹೋರಾಟಗಳ ನಾಯಕರನ್ನು ಮುಖಾಮುಖಿಯಾಗುವುದು ಹೇಗೆ ಎಂದು ಹೆದರಿ ಅವರ ಮನೆಗೆ ಬಂದವರಿಗೆ ನಾಯಕರ ಮೃದುತ್ವಬೆಚ್ಚನೆಯ ಪ್ರೀತಿಸ್ನೇಹ ತಿಳಿಯುತ್ತಿದ್ದವು.

ಪದವಿಟ್ಟಳಿಪದೊಂದಗ್ಗಳಿಕೆ’ ಕುಮಾರವ್ಯಾಸನದು. ‘ಪದವಿಟ್ಟಳಿಪುದು’ ನಾಯಕರ ಹೆಗ್ಗಳಿಕೆಬರೆದುಒಡೆದು ಹಾಕಿಮತ್ತೆ ಬರೆದುಮತ್ತೆ ತೆಗೆದುಹಾಕಿ ನಾಯಕರು ಬರೆದುದಕ್ಕಿಂತ ಒಡೆದು ಹಾಕಿದ ಪುಟಗಳೇ ಹೆಚ್ಚುಇದಕ್ಕೆ ಮುಖ್ಯ ಕಾರಣತಾವು ಬರೆದದ್ದರಲ್ಲಿ ಒಂದಿಷ್ಟೂ ಲೋಪ ಇಣುಕಬಾರದು ಮತ್ತು ಬರಹ ಪರಿಪೂರ್ಣವಾಗಿರಬೇಕು ಎಂಬ ನಾಯಕರ ನಿಲುವುಅವರಿನ್ನೂ ಬರೆಯುವುದು ಬಹಳವಿತ್ತುಗೋಪಾಲಕೃಷ್ಣ ಅಡಿಗರ ನಿಲುವನ್ನು ವಿರೋಧಿಸಿಯೂ ಅಡಿಗರಿಗೆ ಅತ್ಯಂತ ಆಪ್ತರಾಗಿದ್ದ ನಾಯಕರುಅವರ ಬಗ್ಗೆ ಬರೆಯುತ್ತೇನೆಂದು ಹೇಳಿ ಬರೆಯಲಾಗದೇ ಹೋದರುಕುಮಾರವ್ಯಾಸನ ಭಕ್ತಿಯನ್ನು, ‘ತಲೆಕೆಳಗಾದ ಭಕ್ತಿ’ ಎಂದು ಹೇಳುತ್ತಿದ್ದರೂಬರೆಯದೇ ಹೋದರುಬೇಂದ್ರೆ ಕಾವ್ಯವನ್ನು ಬಹಳ ಇಂಪಾಗಿ ಹಾಡುತ್ತಿದ್ದ ನಾಯಕರುಬೇಂದ್ರೆ ಕಾವ್ಯದ ಬಗ್ಗೆ ಬಹಳ ಬರೆಯುವುದಿದೆ ಎಂದು ಹೇಳಿದ್ದರೂಬರೆಯದೇ ಹೋದರುಇದು ಕನ್ನಡ ಸಾಹಿತ್ಯಕ್ಕೆ ಆದ ‘ನಿಜದನಿ’ಯ ನಷ್ಟ

andolanait

Recent Posts

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ: ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷದ ಮೇಲೆ ಜನರಿಗೆ ಭರವಸೆಯಿದ್ದು, ಈ ಬಾರಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ…

5 hours ago

ಕೆ.ಆರ್‌.ನಗರ: ಮಾಜಿ ಸಚಿವ ಸಾ.ರಾ. ಮಹೇಶ್ ಪುತ್ರ ಹಾಗೂ ಉದ್ಯಮಿ ಸಾ.ರಾ.ಜಯಂತ್‌ ಹುಟ್ಟುಹಬ್ಬ ಆಚರಣೆ

ಭೇರ್ಯ ಮಹೇಶ್:‌ ಕೆ.ಆರ್‌.ನಗರ ತಾಲ್ಲೂಕು ವರದಿಗಾರರು  ಕೆ.ಆರ್.ನಗರ : ಜಾತಿ ಬೇದವಿಲ್ಲದೆ ನೊಂದವರಿಗೆ ದ್ವನಿಯಾಗಿ, ಸಂಕಷ್ಟದಲ್ಲಿರುವವರುಗೆ ಆರ್ಥಿಕ ನೆರವು ನೀಡಿ,…

6 hours ago

ಮಾ.28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ: 140 ಬಸ್‌ಗಳ ಕಾರ್ಯಾಚರಣೆ

ಮಂಡ್ಯ: ಮಾರ್ಚ್.‌28ರಂದು ಮೇಲುಕೋಟೆ ವೈರಮುಡಿ ಜಾತ್ರಾ ಮಹೋತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ 140 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಜಾತ್ರಾ…

6 hours ago

ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್‌ ಕದನ ವಿರಾಮ ಘೋಷಣೆ: ಇರಾನ್‌ ಖಡಕ್‌ ತಿರುಗೇಟು

ಟೆಹರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೇರಿಕಾ ಈಗ ಕದನ ವಿರಾಮ ಘೋಷಣೆ ಮಾಡಿದ ಎಂದು ಇರಾನ್‌ ತಿರುಗೇಟು ನೀಡಿದೆ.…

7 hours ago

ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕ ಸಾವು

ಮಂಡ್ಯ: ಕೃಷಿ ಹೊಂಡದಲ್ಲಿ ಈಜಲು ಹೋಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಂದೀಪುರ ಗ್ರಾಮದಲ್ಲಿ ನಡೆದಿದೆ.…

7 hours ago

ಕೆಪಿಎಸ್‌ಸಿ ಬದಲಿಗೆ ಕೆಇಎ ಮೂಲಕ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು: ಕಳೆದ ವರ್ಷ ಕೃಷಿ ಇಲಾಖೆಯ ಸಮಾರು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು…

7 hours ago