ಎಡಿಟೋರಿಯಲ್

ಜೇಮ್ಸ್ ವೆಬ್ ದೂರದರ್ಶಕ : ಇದು ಭೂತಕಾಲಕ್ಕೆ ಹಿಡಿದ ಕೈಗನ್ನಡಿ!

ಕಾರ್ತಿಕ್ ಕೃಷ್ಣ

ಕಳೆದ ವಾರ ವಿಶ್ವದ ಗಮನ ಸೆಳೆದ ಕೆಲ ಚಿತ್ರಗಳನ್ನ ನೀವು ನೋಡಿರಬಹುದು. ಕಪ್ಪು ಕ್ಯಾನ್ವಾಸಿನ ಮೇಲೆ ವಿವಿಧ ಬಣ್ಣಗಳನ್ನು ಎರಚಿ ಸಿದ್ಧಪಡಿಸಿದ ಸುಂದರ ಕಲಾಕೃತಿಯಂತಿದ್ದ ಪಟಗಳನ್ನು ಕಂಡು ವಿಜ್ಞಾನಿಗಳಿಂದ ಹಿಡಿದು ಸಾಮಾನ್ಯ ಜನರೂ ಮೂಕವಿಸ್ಮಿತರಾಗಿದ್ದರು. ವಿಜ್ಞಾನದ ಅಸಂಖ್ಯಾತ ಸಾಧ್ಯತೆಗಳನ್ನು ಕಂಡು ಬೆರಗಾಗಿದ್ದರು. ಅದನ್ನು ಸೆರೆಹಿಡಿದು ಭೂಮಿಗೆ ಕಳುಹಿಸಿದ್ದು, ಕಳೆದ ಡಿಸೆಂಬರ್ ೨೫ಕ್ಕೆ ನಭಕ್ಕೆ ಹಾರಿದ್ದ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ(ಒಖ). ವೆಬ್ ಕಳುಹಿಸಿರುವ ಚಿತ್ರದಲ್ಲಿ ತಾರೆಗಳಿವೆ, ಇಲ್ಲಿಯ ತನಕ ಮಾನವನಿಗೆ ಗೋಚರವಾಗದಿದ್ದ ನಕ್ಷತ್ರ ಪುಂಜಗಳಿವೆ. ಆದರೆ ಅದು ಜಗತ್ತಿನ ಪೂರ್ತಿ ಚಿತ್ರಣವಲ್ಲ. ಸರಳವಾಗಿ ಹೇಳಬೇಕೆಂದರೆ, ಒಂದು ಪ್ಲೇಟಿನಲ್ಲಿ ಕೆಲವು ಮರಳಿನ ಕಣಗಳನ್ನು ಜೋಡಿಸಿ, ಅದನ್ನು ಕೈಯಳತೆಯಷ್ಟು ಎತ್ತರದಿಂದ ನೋಡಿದಾಗ ಹೇಗೆ ಕಾಣುತ್ತದಯೇ ಹಾಗಿದೆ ವೆಬ್ ಕಳುಹಿಸಿರುವ ಫೋಟೋಗಳು. ಮರಳಿನ ಕಣವನ್ನು ಗ್ಯಾಲಕ್ಸಿಗಳಿಗೆ ಹೋಲಿಸಿದರೆ, ಪ್ಲೇಟಿನ ಖಾಲಿ ಜಾಗವನ್ನು ಬ್ರಹ್ಮಾಂಡ ಎಂದುಕೊಳ್ಳಬಹುದು!

ವೆಬ್ ದೂರದರ್ಶಕ ಸುಮಾರು ೪೮ ತಾರಾಗಣಗನ್ನು ಸೂಕ್ಷವಾಗಿ ಗಮನಿಸಿ ಅದನ್ನು ತನ್ನ ಘೆಛಿಚ್ಟ ಐ್ಞ್ಛ್ಟಚ್ಟಛಿ ಖಛ್ಚಿಠ್ಟಿಟಜ್ಟ (ಘೆಐ್ಕಖಛ್ಚಿ) ಮೈಕ್ರೋಶಟರ್‌ನಿಂದ ಸೆರೆಹಿಡಿದು ನಾಸಾ ಗೆ ಕಳುಹಿಸಿಕೊಟ್ಟಿದೆ. ಈ ತಂತ್ರಜ್ಞಾನ ಇದೆ ಮೊದಲ ಬಾರಿಗೆ ಅಂತರಿಕ್ಷದಲ್ಲಿ ಬಳಕೆಯಾಗಿದ್ದು, ಅಷ್ಟೂ ತಾರಾಗಣಗಳ ವಿರಳವಾದ ಮಾಹಿತಿಗಳು ಖಗೋಳ ವಿಜ್ಞಾನಿಗಳಿಗೆ ದೊರೆತಿದೆ. ಅಂದ ಹಾಗೆ, ಆ ಚಿತ್ರಗಳು ೪೬೦ ಕೋಟಿ ವರುಷಗಳ ಹಿಂದಿನದು! ಆ ಸಮಯದಲ್ಲಿ ವಿಶ್ವ ಹೇಗಿತ್ತೋ, ಅದನ್ನು ನಾವೀಗ ನೋಡುತ್ತಿದ್ದೇವೆ. ಅಂದರೆ ನಾವು ಭವಿಷ್ಯದಲ್ಲಿ ಕೂತು ಭೂತಕಾಲವನ್ನು ಕೆದಕುತ್ತಿದ್ದೇವೆ. ಎಲ್ಲಾ ಬೆಳಕಿನ ಆಟ!

ಅವೆಗೆಂಪು(ಐ್ಞ್ಛ್ಟ-್ಕಛಿ) ತರಂಗಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾದ ಈ ದೂರದರ್ಶಕ ಸದ್ಯಕ್ಕೆ ಬಾಹ್ಯಾಕಾಶದಲ್ಲಿರುವ ಅತಿ ದೊಡ್ಡ ದೂರದರ್ಶಕ. ದಶಕಗಳಿಂದ ಬಾಹ್ಯಾಕಾಶದಲ್ಲಿರುವ ಹಬಲ್ ದೂರದರ್ಶಕ ನಡೆಸಿದ್ದ ಅನ್ವೇಷಣೆಗಳನ್ನು ವೆಬ್ ಪೂರ್ಣಗೊಳಿಸಲಿದೆ ಹಾಗೂ ಅಂತರಿಕ್ಷದ ಕುರಿತಾದ ನಮ್ಮ ನೋಟವನ್ನು ಇನ್ನಷ್ಟು ವಿಸ್ತರಿಸಲಿದೆ. ವೆಬ್ ಅದೆಷ್ಟು ಶಕ್ತಿಶಾಲಿಯೆಂದರೆ, ಅದರ ತರಂಗಾಂತರಗಳು ಸಹಸ್ರಾರು ವರುಷಗಳ ಹಿಂದೆ ಸಾಗಿ ವಿಶ್ವದಲ್ಲಿ ಮೊದಲ ನಕ್ಷತ್ರಪುಂಜಗಳ ಉದಯವನ್ನು ಅಭ್ಯಸಿಸಬಹುದಂತೆ ಹಾಗೆಯೇ ಧೂಳಿನ ಮೋಡಗಳೊಳಗೆ ಇಣುಕಿ ಹೊಸ ನಕ್ಷತ್ರಗಳು ಹಾಗು ಅವುಗಳ ಗ್ರಹಗಳ ರಚನಾ ಕ್ರಿಯೆಯನ್ನೂ ವೀಕ್ಷಿಸಬಹುದಂತೆ!

ಹಬಲ್ ಮತ್ತು ಇತರ ದೂರದರ್ಶಕಗಳ ಆವಿಷ್ಕಾರಗಳು ಖಗೋಳಶಾಸ್ತ್ರದಲ್ಲಿ ಹೊಸ ಕ್ರಾಂತಿಯನ್ನು ಉಂಟು ಮಾಡಿ, ಶಕ್ತಿಯುತ ದೂರದರ್ಶಕದಿಂದ ಮಾತ್ರ ಬಗೆಹರಿಯಬಲ್ಲ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿತು. ಈ ಸಮಸ್ಯೆಯನ್ನು ಬಗೆಹರಿಸಲು ವಿಜ್ಞಾನಿಗಳು ೧೯೯೬ರಲ್ಲಿ ಹಬಲ್ ನ ಕಾರ್ಯಕ್ಷೇತ್ರವನ್ನು ವಿಸ್ತರಿಸಬಲ್ಲ ದೂರದರ್ಶಕದ ಯೋಜನೆಯನ್ನು ಮಂಡಿಸಿದ್ದರು. ಆಗ ಅದನ್ನು ಘೆಛ್ಡಿಠಿ ಎಛ್ಞಿಛ್ಟಿಠಿಜಿಟ್ಞ ಖಚ್ಚಛಿ ಛ್ಝಿಛಿಠ್ಚಟಛಿ ಅಥವಾ ಘೆಎಖ ಎಂದು ಕರೆದಿದ್ದರು. ಯಾಕೆಂದರೆ, ಇದರ ಮೂಲ ಉದ್ದೇಶ ಹಬಲ್ ದೂರದರ್ಶಕ ಇದುವರೆಗೆ ನಡೆಸಿದ್ದ ಪರಿಶೊಧನೆಗಳನ್ನು ಮುಂದುವರೆಸುವುದಾಗಿತ್ತು. ಸೆಪ್ಟೆಂಬರಾ ೧೦, ೨೦೦೨ ರಂದು ಜೇಮ್ಸ್ ವೆಬ್ಬ್ ಎಂಬ ನಾಸಾ ವಿಜ್ಞಾನಿಯ ನೆನಪಿನಲ್ಲಿ ಘೆಎಖಯನ್ನು, ಒಞಛಿ ಛಿಚಿಚಿ ಖಚ್ಚಛಿ ಠಿಛ್ಝಿಛಿಠ್ಚಟಛಿ ಎಂದು ಮರುನಾಮಕರಣ ಮಾಡಿದರು. ನಾಸಾದ ಎರಡನೇ ನಿರ್ವಾಹಕರಾಗಿದ್ದ ಜೇಮ್ಸ್ ವೆಬ್ಬ್ , ಮನುಷ್ಯನನ್ನು ಚಂದ್ರನ ಮೇಲೆ ಇಳಿಸಿದ್ದ ಅಪೊಲೊ ಮಿಷನ್ ಗಳನ್ನೂ ಸೇರಿದಂತೆ ಸುಮಾರು ೭೫ ಲಾಂಚ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದವರು. ಅಂದಹಾಗೆ, ವೆಬ್ ದೂರದರ್ಶಕ್ಕೆ ತಗುಲಿದ ವೆಚ್ಚ ಬರೋಬ್ಬರಿ ೧೦೦೦ ಕೋಟಿ ಡಾಲರ್!

ವಿನ್ಯಾಸ ಹಾಗು ಕಾರ್ಯವ್ಯಾಪ್ತಿಯಲ್ಲಿ ಹಬಲ್ ದೂರದರ್ಶಕಕ್ಕಿಂತ ಸಾಕಷ್ಟು ಶಕ್ತಿಶಾಲಿಯಾಗಿರುವ ವೆಬ್ ದೂರದರ್ಶಕದ ಪ್ರಾಥಮಿಕ ಕನ್ನಡಿ ಬೆರಿಲಿಯಂ ಎಂಬ ಲೋಹದಿಂದ ನಿರ್ಮಿಸಲ್ಪಟ್ಟಿದೆ. ಹಬಲ್ ದೂರದರ್ಶಕದ ಕನ್ನಡಿಗಿಂತ ಇದು ೨.೭ ರಷ್ಟು ಅಧಿಕ ವ್ಯಾಸವನ್ನು ಹೊಂದಿದ್ದು ವಿಸ್ತೀರ್ಣದಲ್ಲಿ ಆರು ಪಟ್ಟು ಹಿರಿದಾಗಿದೆ. ಇದರಲ್ಲಿರುವ ಅತಿಗೆಂಪು ತರಂಗಗಳ ಉಪಕರಣಗಳು ದೀರ್ಘ ತರಂಗಾಂತರದ ವ್ಯಾಪ್ತಿಯನ್ನು ಹೊಂದಿದ್ದು, ಹಬಲ್ಗಿಂತ ಹೆಚ್ಚು ಸೂಕ್ಷ್ಮವಾಗಿವೆ. ಇನ್ನೊಂದು ವಿಷಯ, ಹಬಲ್ ದೂರದರ್ಶಕವಿರುವುದು ಭೂಮಿಯಿಂದ ೫೭೦ ಕಿಮಿ ದೂರದಲ್ಲಿ, ಆದರೆ ಭೂಮಿ ಹಾಗೂ ವೆಬ್ ನಡುವಿನ ಅಂತರ ಸುಮಾರು ೧೫ ಲಕ್ಷ ಕಿಮೀ! ಔ೨ (ಔಜ್ಟಚ್ಞಜಛಿ ಟಜ್ಞಿಠಿ ೨) ಎಂದು ಕರೆಯಲ್ಪಡುವ ಈ ಬಿಂದು, ಸೂರ್ಯನಿಂದ ನೋಡಿದಾಗ, ನೇರವಾಗಿ ಭೂಮಿಯ ’ಹಿಂದೆ’ ೧೫ಲಕ್ಷ ಕಿಮೀ ದೂರದಲ್ಲಿದೆ.

ವೆಬ್ ದೂರದರ್ಶಕದ ಫೋಟೋಗಳಲ್ಲಿ ಹಳದಿ ಬಣ್ಣದ ತಟ್ಟೆಯಂತಿರುವ ಉಪಕರಣವನ್ನು ನೋಡಿರುತ್ತೀರಿ. ಅದು ವೆಬ್ ದೂರದರ್ಶಕದ ಪ್ರಾಥಮಿಕ ಕನ್ನಡಿ. ೧೮ ಷಡ್ಭುಜೀಯ ಆಕೃತಿಯಲ್ಲಿ ಜೋಡಿಸಲ್ಪಟ್ಟಿರುವ ಬೆರಿಲಿಯಮ್ ನಿಂದ ತಯಾರಿಸಲ್ಪಟ್ಟ ಕನ್ನಡಿಗಳು ಅತಿಗೆಂಪು ತರಂಗಗಳನ್ನು ಓದಬಲ್ಲವು. ಹಳದಿ ಬಣ್ಣಕ್ಕೆ ಕಾರಣ ಕನ್ನಡಿಗಳ ಮೇಲಿರುವ ಚಿನ್ನದ ಲೇಪನ. ಅಲ್ಯೂಮಿನಿಯಂ ಅಥವಾ ಬೆಳ್ಳಿಗೆ ಹೋಲಿಸಿದರೆ ಚಿನ್ನ ಕೆಂಪು ಬಣ್ಣವನ್ನು ಹೆಚ್ಚಾಗಿ ಪ್ರತಿಬಿಂಬಿಸುವುದರಿಂದ ವೆಬ್ ದೂರದರ್ಶಕದ ಪ್ರತಿಬಿಂಬಕಗಳಲ್ಲಿ ಚಿನ್ನವನ್ನು ಬಳಸಲಾಗಿದೆ. ಅವುಗಳ ಮೇಲಿನ ಚಿನ್ನವನ್ನು ಕೆರೆದು ತೆಗೆದರೆ ಒಂದು ಗಾಲ್ಫ್ ಬಾಲಿನಷ್ಟಾಗುತ್ತದೆಯಂತೆ! ಅಂದರೆ ಸುಮಾರು ೪೨.೫ ಗ್ರಾಂ ಚಿನ್ನ ವೆಬ್ ದೂರದರ್ಶಕದಲ್ಲಿದೆ.

ನಾಸಾ ಸಂಸ್ಥೆಯು ವೆಬ್ ದೂರದರ್ಶಕವನ್ನು ನಭಕ್ಕೆ ಕಳುಹಿಸುವುದರ ಹಿಂದೆ ನಾಲ್ಕು ಮುಖ್ಯ ಧ್ಯೇಯಗಳಿವೆ. ಬಿಗ್ ಬ್ಯಾಂಗಿನ ನಂತರ ರೂಪುಗೊಂಡ ಮೊದಲ ನಕ್ಷತ್ರ ಪುಂಜಗಳನ್ನು ಹುಡುಕುವುದು, ನಕ್ಷತ್ರ ಪುಂಜಗಳು ಅವುಗಳ ರಚನೆಯಿಂದ ಇಂದಿನವರೆಗೆ ಹೇಗೆ ವಿಕಸನಗೊಂಡಿವೆ ಎಂಬುದನ್ನು ಅಭ್ಯಸಿಸುವುದು, ನಕ್ಷತ್ರಗಳ ರಚನೆಯ ಮೊದಲ ಹಂತದಿಂದ ಅವುಗಳ ಗ್ರಹ ವ್ಯವಸ್ಥೆಗಳ ರಚನೆಯವರೆಗೆ ಗಮನಿಸುವುದು, ಗ್ರಹಗಳ ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಅಳೆದು ಅವುಗಳು ಜೀವಿಸಲು ಯೋಗ್ಯವೇ ಎಂದು ಪತ್ತೆ ಹಚ್ಚುವುದು – ಇವುಗಳೇ ವೆಬ್ ದೂರದರ್ಶಕದ ಇಪ್ಪತ್ತು ವರ್ಷಗಳ ಜೀವಿತಾವಧಿಯ ಗುರಿ! ಅದರ ನೋಟದ ಶಕ್ತಿ ಎಷ್ಟಿದೆಯೆಂದರೆ, ರಾತ್ರಿಗಳಲ್ಲಿ ಆಕಾಶವನ್ನು ದಿಟ್ಟಿಸಿದಾಗ ಕಾಣುವ ಕೋಟ್ಯಂತರ ನಕ್ಷತ್ರಗಳಲ್ಲಿ ಅತಿ ಚಿಕ್ಕದಾದ ಒಂದು ನಕ್ಷತ್ರವನ್ನು ವೆಬ್ ದೂರದರ್ಶಕದ ಮೂಲಕ ನೋಡಿದರೆ, ಅದು ಸಾವಿರ ಕೋಟಿ ಬಾರಿ ಜೂಮ್ ಆಗಿ ಕಾಣಿಸುತ್ತದೆಯಂತೆ!

ಮೊದಲೇ ತಿಳಿಸಿದಂತೆ ವೆಬ್ ದೂರದರ್ಶಕ ಭೂಮಿಯಿಂದ ೧೫ ಲಕ್ಷ ಕಿಮಿ ದೂರವಿರುವ ಔ೨ ಬಿಂದುವಿನಲ್ಲಿದೆ.

ಅಷ್ಟೊಂದು ದೂರದಲ್ಲಿ ವೆಬ್ ಬೀಡು ಬಿಡಲು ಹಲವಾರು ಕಾರಣಗಳಿವೆ. ಅದನ್ನು ತಿಳಿಯೋಣ ಬನ್ನಿ. ವೆಬ್ ಪ್ರಾಥಮಿಕವಾಗಿ ಮಸುಕಾಗಿ ಕಾಣುವ ಹಾಗು ಅತಿ ದೂರದಲ್ಲಿರುವ ಅಂತರಿಕ್ಷ ಕಾಯಗಳಿಂದ ಹೊರಹೊಮ್ಮುವ ಅವೆಗೆಂಪು ಬೆಳಕನ್ನು ವೀಕ್ಷಿಸುತ್ತದೆ. ಅವೆಗೆಂಪು ಮೂಲತಃ ಶಾಖದ ವಿಕಿರಣವಾದುದರಿಂದ ದೂರದರ್ಶಕವು ಶಾಖ ಹೆಚ್ಚಿರುವ ಬಿಂದುವಿನಲ್ಲಿದ್ದರೆ, ಅದರಿಂದ ಕೂಡ ಅವೆಗೆಂಪು ವಿಕರಣ ಹೊರಹೊಮ್ಮುವ ಸಾಧ್ಯತೆಗಳಿವೆ. ದೂರದ ಕಾಯಗಳಿಂದ ಬರುವ ವಿಕಿರಣಗಳ ಜೊತೆಗೆ ದೂರದರ್ಶಕದ ಅವೆಗೆಂಪು ವಿಕಿರಣ ಸೇರಿಕೊಂಡು ಕರಾರುವಾಕ್ ಮಾಹಿತಿ ಕಲೆಹಾಕುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ತಪ್ಪಿಸಲು ದೂರದರ್ಶಕ ತಂಪಾದ ಪ್ರದೇಶದಲ್ಲಿರಬೇಕು. ಸೂರ್ಯ ಸೂಸುವ ಬೆಳಕಿನಿಂದ ದೂರದರ್ಶಕ ಬಿಸಿಯಾಗುವ ಸಂಭವಿದೆ. ಅದಕ್ಕೆ ದೂರದರ್ಶಕದ ತಳದಲ್ಲಿ ಐದು ಪದರದ ರಕ್ಷಾ ಫಲಕವಿದೆ. ಇದರ ಕೆಲಸ ಸೂರ್ಯ ಹಾಗು ಭೂಮಿಯಿಂದ ಬರುವ ಬೆಳಕು ಹಾಗು ಶಾಖದಿಂದ ದೂರದರ್ಶಕವನ್ನು ರಕ್ಷಿಸುವುದು. ಇದನ್ನು ಸಾಧಿಸಲು ಔ೨ ಸರಿಯಾದ ಜಾಗ. ಅಂದ ಹಾಗೆ, ಈಗ ವೆಬ್ ಇರುವ ಪ್ರದೇಶದ ತಾಪಮಾನ -೨೨೩ ಡಿಗ್ರಿ ಸೆಲ್ಷಿಯಸ್!

ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು ಹೇಗಿದ್ದವು, ನಕ್ಷತ್ರ ಮಂಡಲಗಳ ಹುಟ್ಟು ಹೇಗಾಯಿತು, ಅವುಗಳ ಅಂತ್ಯ ಹೇಗೆ ನಡೆಯುತ್ತದೆ ಎಂಬ ಹಲವು ಪ್ರಶ್ನೆಗಳಿಗೆ ನಿಖರವಾದ ಉತ್ತರಗಳು ವೆಬ್ ದೂರದರ್ಶಕದ ಮುಖಾಂತರ ಸಿಗಲಿದೆ. ವಿಜ್ಞಾನದ ಇಂತಹ ಸೃಷ್ಟಿಗಳಿಂದಲೇ ಯಾವುದು ಒಂದು ಕಾಲದಲ್ಲಿ ಅಸಾಧ್ಯವಾಗಿತ್ತೋ ಅವುಗಳೆಲ್ಲ ಇಂದು ಜೀವ ಪಡೆದುಕೊಳ್ಳುತ್ತಿರುವುದು! ಸಂಶೋಧನೆಗಳು ಇದೇ ಗತಿಯಲ್ಲಿ ಮುಂದುವರೆದರೆ, ಅದೆಲ್ಲೋ ಅಡಗಿ ಕುಳಿತಿರುವ ಅನ್ಯಗ್ರಹ ಜೀವಿಗಳಿಗೆ ‘ನಮಸ್ತೆ’ ಹೇಳುವ ಘಳಿಗೆಯೂ ಆದಷ್ಟು ಬೇಗ ಬರಬಹುದು!

 

andolana

Recent Posts

ಓದುಗರ ಪತ್ರ: ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…

11 mins ago

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

22 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

46 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

1 hour ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

3 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

3 hours ago