ಎಡಿಟೋರಿಯಲ್

ಸಾಂಸ್ಕೃತಿಕ ಮೈಸೂರಿನ ಘನತೆ ಉಳಿಸಿವುದು ಅಗತ್ಯ

ಆತಂಕ ಮೂಡಿಸುತ್ತಿರುವ ದುಷ್ಕೃತ್ಯಗಳು 

-ಅನಿಲ್ ಅಂತರಸಂತೆ

ಅರಮನೆಗಳ ನಗರ, ಸಾಂಸ್ಕೃತಿಕ ನಗರ ಎಂಬ ಖ್ಯಾತಿಯ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಸಾಹಿತಿಗಳು, ಪ್ರಜ್ಞಾವಂತರು, ಹೋರಾಟಗಾರರು ಇರುವ ಮೈಸೂರು ಎತ್ತ ಸಾಗುತ್ತಿದೆ ಎಂಬ ಅನುಮಾನ ಮೂಡುವಂತೆ ಇತ್ತೀಚೆಗೆ ಕೆಲ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಸದ್ಯದ ಉದಾಹರಣೆ ಎಂದರೆ ಭಾನುವಾರ ರಾತ್ರಿ ಯುವಕನೊಬ್ಬ ಮೂವರು ನಾಗರಿಕರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ.

ಅಷ್ಟಕ್ಕೂ ಅವರ ಮಾಡಿದ ತಪ್ಪು ಏನು? ಆ ಯುವಕನಿಗೆ ಕಾರನ್ನು ಎರ್ರಾಬಿರ್ರಿ ಓಡಿಸಬೇಡ ಎಂದು ಹಿತನುಡಿ ಹೇಳಿದ್ದಷ್ಟೆ ಅದನ್ನೇ ಆ ಯುವಕ ತಪ್ಪೆಂದು ಭಾವಿಸಿ ಕಾರನ್ನು ಅವರ ಮೇಲೆ ಹತ್ತಿಸಲು ಎಂಬುದು ವರದಿಯಾಗಿದೆ.

ನಾಗರಿಕ ಸಮಾಜದಲ್ಲಿ ಮನುಷ್ಯನು ಹಿರಿಯರಿಗೆ ಗೌರವ ಕೊಡುವುದಿರಲಿ ಕ್ಷುಲ್ಲಕ ಕಾರಣಗಳಿಗೆ ಅವರೊಂದಿಗೆ ಅವಾನವೀಯವಾಗಿ ನಡೆದುಕೊಳ್ಳುವುದು, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದು, ಕೊಲ್ಲುವ ಪ್ರಕರಣಗಳೂ ಹೆಚ್ಚಾಗತೊಡಗಿವೆ. ಇವುಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಶ್ರಮಿಸುತ್ತಿದೆ. ಆದರೆ, ಮತ್ತಷ್ಟು ಕಠಿಣ ಕ್ರಮಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಲ ವರ್ಷಗಳಿಂದ ಮೈಸೂರು ಸಾಕಷ್ಟು ಅಪರಾಧ ವಿಚಾರಗಳಿಂದಾಗಿ ಸದಾ ಸುದ್ದಿಯಲ್ಲಿದೆ. ಇಲ್ಲಿ ಆಗಾಗ ಕೊಲೆಗಳು, ಸುಲಿಗೆಗಳು, ಅತ್ಯಾಚಾರ, ಕಳ್ಳತನದಂತಹ ಪ್ರಕರಣಗಳು ಹೆಚ್ಚಾಗತೊಡಗಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಮೈಸೂರಿನ ಮಾನಸಗಂಗೋತ್ರಿಯ ಆವರಣದಲ್ಲಿ ನಡೆದ ಇಡಿ ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿಯವರ ಕೊಲೆ ಪ್ರಕರಣ. ಕೇವಲ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಅವರನ್ನು ಕೊಲ್ಲುವ ಮಟ್ಟಕ್ಕೆ ದುಷ್ಕರ್ಮಿಗಳು ಮುಂದಾಗಿದ್ದದ್ದು, ಮೈಸೂರಿನಲ್ಲಿ ಭಯದ ವಾತಾವರಣವನ್ನೇ ನಿರ್ಮಿಸಿದೆ. ಇದೀಗ ಕೇವಲ ಬೇಕಾಬಿಟ್ಟಿ ಕಾರುಚಾಲನೆ ಮಾಡದಂತೆ ಬುದ್ದಿವಾದ ಹೇಳಿದ್ದಕ್ಕೆ ೨೪ರ ಹರಯದ ಯುವಕನೊಬ್ಬ ತನ್ನ ತಂದೆ ತಾಯಿ ಜೊತೆಯಲ್ಲಿದ್ದರೂ, ಮೂವರು ಯುವಕರ ಮೇಲೆ ಕಾರು ಹತ್ತಿಸಿ ಅಟ್ಟಹಾಸ ಮೆರೆದಿರುವುದು ಜನರು ನೆಮ್ಮದಿಯಾಗಿ ಓಡಾಡುವುದೂ ಕಷ್ಟ ಎಂಬಂತಾಗಿದೆ.

ಮೈಸೂರು ವ್ಯಾಪ್ತಿಯಲ್ಲಿ ಈ ಮಾದರಿಯ ಪ್ರಕರಣಗಳು ಹೊಸದೇನಲ್ಲ. ಗ್ರಾಮಾಂತರ ಭಾಗಗಳಲ್ಲಿಯೂ ಆಗಾಗ ಕೊಲೆ, ಗಲಾಟೆಗಳು, ಮಾರಣಾಂತಿಕ ಹಲ್ಲೆಗಳು ಹೆಚ್ಚಾಗಿವೆ. ೨೦೨೧ರಲ್ಲಿಯೂ ಬೋಗಾದಿಯ ಸಮೀಪ ಕ್ಷುಲಕ್ಷ ಕಾರಣಕ್ಕೆ ಕುಡಿದ ಅಮಲಿನಲ್ಲಿ ಜೋಡಿ ಕೊಲೆ ನಡೆದ ಪ್ರಕರಣ, ಅಲ್ಲದೇ ಚಾಮುಂಡಿಬೆಟ್ಟದ ತಪ್ಪಲಿನಲ್ಲಿಯೂ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು. ಈ ಸಂದರ್ಭದಲ್ಲಿಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಆದರೆ, ಇಂತಹ ಅಪರಾಧ ಕೃತ್ಯಗಳನ್ನು ತಡೆಯಲು ದೂರದೃಷ್ಟಿಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ಕೈಗೊಳ್ಳುವ ಅಗತ್ಯ ಇದೆ.

ಮೈಸೂರಿನ ವಿವಿಧೆಡೆ ರಾತ್ರಿ ವೇಳೆ ತೆರೆದಿರುವ ಅಂಗಡಿ ಮುಂಗಟ್ಟುಗಳ ಮುಂದೆ ಯುವಕರು ಹೆಚ್ಚಾಗಿ ಸೇರುತ್ತಿರುತ್ತಾರೆ. ಜೊತೆಗೆ ಅಲ್ಲಿ ಮದ್ಯವ್ಯಸನಿಗಳು ಬರುವುದರಿಂದ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳಾಗಿ ಅದು ಕೊಲೆಯ ಹಂತಕ್ಕೆ ತಲುಪುವ ಸಾಧ್ಯತೆಗಳೂ ಇರುತ್ತವೆ. ಅಂತಹ ಅಡ್ಡೆಗಳ ಮೇಲೆ ಪೊಲೀಸರು ಕಣ್ಣಿಡುವುದು ಅಗತ್ಯ. ಹೆಚ್ಚಿನ ಸಿಬ್ಬಂದಿಗಳನ್ನು ಅಂತಹ ಸ್ಥಳದ ಕಡೆ ನಿಯೋಜನೆ ಮಾಡಬೇಕು. ಅಪರಾಧ ಪ್ರಕರಣಗಳು ಸುಳಿವು ಪಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾತ್ಮಿದಾರರನ್ನು ಪೊಲೀಸರು ಗುರುತಿಸಿಕೊಳ್ಳುವುದು ಸೂಕ್ತ. ಒಟ್ಟಾರೆ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಪೊಲೀಸರು ಕಟ್ಟೆಚ್ಚರವಹಿಸಬೇಕು. ಅದಕ್ಕೆ ಸಾಧ್ಯವಾದಷ್ಟು ನಾಗರಿಕರೂ ಕೈಜೋಡಿಸಬೇಕು. ತಮ್ಮಕಣ್ಣೆದುರು ನಡೆಯುವು ಅನಾಹುತ, ಅಪಘಾತಗಳ ಬಗ್ಗೆ ಪೊಲೀಸರ ಗಮನಕ್ಕೆ ತರಬೇಕು.

ಮೈಸೂರಿನ ಸಂಸ್ಕೃತಿ, ಪರಂಪರೆಗೆ ಮಸಿ ಬಳಿಯುವಂತಹ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮತ್ತಷ್ಟು ಬಿಗಿಯಾಗಬೇಕಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ಮತ್ತಷ್ಟು ಹೆಚ್ಚಿನ ಪ್ರಮಾಣದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಪ್ರತಿಭಾಗದ ಚಲನವಲನದ ಮೇಲೆ ಇಲಾಖೆಯು ನಿಗಾ ವಹಿಸಬೇಕಿದೆ. ಇದರೊಂದಿಗೆ ನಿರ್ಜನ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳ ನಿಯೋಜನೆಯ ಜೊತೆಗೆ ಗಸ್ತು ಸುತ್ತುಗಳನ್ನು ಹೆಚ್ಚಿಸಬೇಕಾಗಿದೆ.

andolana

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

57 mins ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

1 hour ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

1 hour ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

2 hours ago