ಎಡಿಟೋರಿಯಲ್

ಚುನಾವಣಾ ಪ್ರಣಾಳಿಕೆ ಭರವಸೆ ಮಾತ್ರವೇ?

ಚುನಾವಣಾ ಪೂರ್ವ ಘೋಷಣೆಗಳ ಈಡೇರಿಕೆ ಕಡ್ಡಾಯವಾಗಬೇಕು

ಸತೀಶ್ ಗೌಡ, ರಾಜ್ಯ ಉಪಾಧ್ಯಕ್ಷಜಯ ಕರ್ನಾಟಕ.

ದೇಶದ ಪ್ರಜಾಪ್ರಭುತ್ವಕ್ಕೆ ಸಂವಿಧಾನವಿದ್ದಂತೆ ಚುನಾವಣೆ ಪ್ರಣಾಳಿಕೆ ಎನ್ನುವುದು ಪಕ್ಷಗಳು ಮತದಾರನಿಗೆ ನೀಡುವ ಲಿಖಿತ ವಾಗ್ದಾನಪಕ್ಷದ ಸೈದ್ಧಾಂತಿಕ ತಳಹದಿಯಾದ ಪ್ರಣಾಳಿಕೆ ಜನರ ಮುಂದಿಡುವ ಕಾರ‍್ಯ ಸೂಚಿಯೂ ಹೌದುಇತ್ತೀಚೆಗೆ ರಾಜಕೀಯ ಪಕ್ಷಗಳು ಪ್ರಣಾಳಿಕೆಯ ಈ ಪಾವಿತ್ರ್ಯತೆಗೆ ಬೆಲೆ ನೀಡಿಲ್ಲ ಎನ್ನುವುದು ಸತ್ಯ ಸಂಗತಿಹಾಗೆಂದು ಚುನಾವಣಾ ಪೂರ್ವ ಪ್ರಣಾಳಿಕೆ ಪೊಳ್ಳು ಭರವಸೆಗಳೆನ್ನುವುದು ನಾವು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ನಂಬಿಕೆ ಕಳೆದುಕೊಂಡಂತೆಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ನಾವು ಪ್ರಣಾಳಿಕೆಯ ಜಾರಿಯನ್ನು ಖಾತರಿಪಡಿಸಬೇಕುಜಾರಿ ಮಾಡದ ಪಕ್ಷಗಳನ್ನು ಪ್ರಶ್ನಿಸಬೇಕುಸುಮಾರು 80ರ ದಶಕದವರೆಗೂ ಪ್ರಣಾಳಿಕೆಯ ತಳಹದಿಯಲ್ಲಿಯೇ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿತ್ತು ಎನ್ನುವುದನ್ನು ನಾವು ಮರೆಯಬಾರದು.

ಇಂದಿರಾ ಗಾಂಧಿ ಅವಧಿಯಲ್ಲಿ ಜಾರಿಯಾದ 20 ಅಂಶಗಳ ಕಾರ್ಯಕ್ರಮಗರೀಬಿ ಹಠಾವೋ ಕಾರ‍್ಯಕ್ರಮಗಳ ಹಿಂದೆ ಇದ್ದ ಸಾಮಾಜಿಕ ಕಳಕಳಿಯನ್ನು ನಾವು ಮರೆಯುವಂತಿಲ್ಲರಾಮಕೃಷ್ಟ ಹೆಗಡೆಯವರ ಕಾಲದಲ್ಲಿ ಜಾರಿಯಾದ ‘ಹಸಿರು ಪಡಿತರ ಚೀಟಿ’ , ‘ಪಂಚಾಯತ್ ರಾಜ್ ವ್ಯವಸ್ಥೆಬಂಗಾರಪ್ಪನವರ ಕಾಲದ ಆಶ್ರಯ ಯೋಜನೆಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕೃಪಾಂಕ,ಯಡಿಯೂರಪ್ಪನವರ ಸೈಕಲ್ ವಿತರಣೆಭಾಗ್ಯಲಕ್ಷಿ ಬಾಂಡ್ ಯೋಜನೆಕುಮಾರ ಸ್ವಾಮಿಸಿದ್ದರಾಮಯ್ಯನವರ ಸಾಲಮನ್ನಾಅನ್ನಭಾಗ್ಯ ಯೋಜನೆಗಳ ಹಿಂದೆ ಇದ್ದ ಜನಪರ ಕಾಳಜಿಯನ್ನು ನಾವು ಮರೆಯುವಂತಿಲ್ಲ.

ಹಾಗೆಂದು ನೂರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ಈಡೇರಿಸದೆ ವಂಚಿಸಿರುವ ಸರ್ಕಾರಗಳೂ ನಮ್ಮ ನಡುವೆ ಇವೆಪಕ್ಷವೊಂದು ತಾನು ನೀಡಿದ ವಾಗ್ದಾನಗಳನ್ನು ಈಡೇರಿಸದಿರುವುದು ಜನರಿಗೆ ದ್ರೋಹ ಬಗೆದಂತೆಆದರೆ ಪಕ್ಷಗಳು ಇತ್ತೀಚೆಗೆ ನೀಡುವ ಭರವಸೆಗಳು ಈಡೇರಿಸದ ರೀತಿಯಲ್ಲಿಯೇ ಇವೆ ಎನ್ನುವುದು ನಿಜದೂರದೃಷ್ಟಿಯುಳ್ಳದೀರ್ಘಾವಧಿಯಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳನ್ನು ಪಕ್ಷಗಳು ಪ್ರಣಾಳಿಕೆಯ ರೂಪದಲ್ಲಿ ಪ್ರಕಟಿಸಬೇಕುಮತಗಳಿಕೆಯ ಉದ್ದೇಶದಿಂದ ತಾತ್ಕಾಲಿಕವಾಗಿ ಪ್ರಯೋಜನ ನೀಡುವ ಯೋಜನೆಗಳನ್ನು ಮುಂದಿಡಬಾರದುಈ ಬಗ್ಗೆ ಮತದಾರರು ಪ್ರಶ್ನಿಸುವಂತಾಗಬೇಕುಹಿಂದೆ ಬಂಗಾರಪ್ಪ ಅವರ ಅವಧಿಯಲ್ಲಿ ಸೀರೆ ಭಾಗ್ಯ ಯೋಜನೆ ಜಾರಿಗೆ ಬಂದಾಗ ಅದು ವಿಲ ಯೋಜನೆಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದುಹಾಗೆಯೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯುವ ಮುನ್ನ ನೀಡಿದ ಅಭಿವೃದ್ಧಿ ಕೇಂದ್ರಿತ ಯೋಜನೆಗಳ ಭರವಸೆಗಳಲ್ಲಿ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರುಹಸಿವು ಮುಕ್ತ ಕರ್ನಾಟಕ ಮಾಡುವ ಪಣ ತೊಟ್ಟಿದ್ದ ಅವರು ನುಡಿದಂತೆ ‘ಅನ್ನಭಾಗ್ಯ ಯೋಜನೆ’ಯನ್ನು ಜಾರಿಗೆ ತಂದರುಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಪೂರಕವಾದ ಕ್ಷೀರಭಾಗ್ಯವಿದ್ಯಾಸಿರಿಮನಸ್ವಿನಿ ಯೋಜನೆಮೈತ್ರಿ ಯೋಜನೆಇಂದಿರಾ ಕ್ಯಾಂಟೀನ್ ನಂತಹ ಯೋಜನೆಳು ಜನಪರವಾಗಿತ್ತೆನ್ನುವುದರಲ್ಲಿ ಎರಡು ಮಾತಿಲ್ಲಹಾಲಿ ಬಿಜೆಪಿ ಸರಕಾರ ಈ ಹಿಂದೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಯೋಜನೆಗಳನ್ನು ಜಾರಿಗೊಳಿಸಿದ್ದರೆ ಜನ ಕಲ್ಯಾಣಕ್ಕೆ ಅನುಕೂಲವಾ ಗುತ್ತಿತ್ತುರೈತವಿದ್ಯಾನಿಽಯಂಹ ಯೋಜನೆ ದೀರ್ಘಕಾಲ ದಲ್ಲಿ ಪರಿಣಾಮ ಬೀರುವಂತಹ ಯೋಜನೆ ಎನ್ನುವುದರಲ್ಲಿ ಅನುಮಾನವಿಲ್ಲ.

ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ತಮ್ಮ ಹಿಂದಿನ ಪ್ರಣಾಳಿಕೆಯಲ್ಲಿ ಎಷ್ಟನ್ನು ಈಡೇರಿಸಿದ್ದೇವೆ ಎನ್ನುವ ಪಟ್ಟಿ ಮುಂದಿಡಬೇಕುಇದನ್ನು ಕೇಳುವ ಹಕ್ಕು ಜನರಿಗಿದೆಮತದಾರರು ಕ್ಷಣಿಕ ಆಸೆಆಮಿಷಗಳಿಗೆ ಬಲಿಯಾಗದೆ ಇಂತಹ ಪ್ರಶ್ನೆಗಳನ್ನು ಕೇಳಿದಾಗಲೇ ರಾಜಕೀಯ ಪಕ್ಷಗಳನ್ನು ಉತ್ತರದಾಯಿಯನ್ನಾಗಿ ಮಾಡಲು ಸಾಧ್ಯಇಲ್ಲವಾದರೆ ಆಕರ್ಷಕ ಮಾತಿನಲ್ಲಿ ಮೋಡಿ ಮಾಡಿ ಮತ ದೋಚಿ ಅಽಕಾರಕ್ಕೇರುವ ಪಕ್ಷಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ.

 

ಪ್ರತಿಪಕ್ಷಗಳು ಸುಖಾಸುಮ್ಮನೆ ಆರೋಪಗಳನ್ನು ಹೊರಿಸುವ ಬದಲು ಆಡಳಿತ ಪಕ್ಷ ನೀಡಿದ ಭರವಸೆಗಳು ಈಡೇರಿವೆಯೇಅದರಿಂದ ಎಷ್ಟು ಪ್ರಯೋಜನವಾಗಿದೆ ಎಂಬ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು.

 

ರಾಜಕೀಯ ಪಕ್ಷಗಳ ಪ್ರಣಾಳಿಕೆ ಘೋಷಣೆ ಕೇವಲ ಪೊಳ್ಳು ಭರವಸೆಯಷ್ಟೇ

ಡಾ.ಬಿ.ಪಿ.ಮಹೇಶ ಚಂದ್ರ ಗುರು,

ವಿಶ್ರಾಂತ ಪ್ರಾಧ್ಯಾಪಕರುಪತ್ರಿಕೋದ್ಯಮ ಮತ್ತು ಸಮೂಹ ಸಂವಹನಮೈವಿವಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ನಾಗರಿಕ ಸಮಾಜ ಕಲ್ಯಾಣ ಮತ್ತು ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಹಲವಾರು ಭರವಸೆಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆಐದು ವರ್ಷ ಆಳ್ವಿಕೆ ನಡೆಸಲು ಪ್ರಜೆಗಳಿಂದ ಅಧಿಕಾರ ಪಡೆದ ರಾಜಕೀಯ ಪಕ್ಷ ಸಹಜವಾಗಿ ಜನರ ಕಲ್ಯಾಣಕ್ಕಾಗಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಅವಕಾಶವನ್ನು ಹೊಂದಿರುತ್ತದೆಆದರೆಇಂತಹ ಅವಕಾಗಳನ್ನು ಆಡಳಿತಾವಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳದೇ ಚುನಾವಣೆಗೆ ಕೆಲವೇ ತಿಂಗಳಿದೆ ಎನ್ನುವಾಗ ಚುನಾವಣಾ ಪೂರ್ವ ಘೋಷಣೆಗಳನ್ನು ಹೊರಡಿಸಿ ಜನರ ಗಮನವನ್ನು ಆಡಳಿತಾತ್ಮಕ ಹಾಗೂ ಅಭಿವೃದ್ಧಿ ವೈಫಲ್ಯತೆಗಳಿಂದ ಬೇರೆಡೆಗೆ ಸೆಳೆಯುವ ಸಂಚುಗಾರಿಕೆಯನ್ನು ಆಡಳಿತ ಪಕ್ಷವಿರೋಧ ಪಕ್ಷ ಮತ್ತು ಇತರ ಪಕ್ಷಗಳು ನಡೆಸುತ್ತಿರುವುದು ಅಸಾಂವಿಧಾನಿಕ ನಡೆಯಾಗಿದೆ.

ವಿವಿಧ ಅಭಿವೃದ್ಧಿ ಯೋಜನೆಗಳನ್ನು ಐದು ವರ್ಷಗಳ ಅವಧಿಯಲ್ಲಿ ಜನರ ಕ್ರಿಯಾಶೀಲ ಸಹಭಾಗಿತ್ವದಿಂದ ಅನುಷ್ಠಾನಗೊಳಿಸಲಾಗದ ಆಡಳಿತ ಪಕ್ಷ ಚುನಾವಣೆಗೆ ಕೆಲವೇ ತಿಂಗಳಿದೆ ಎನ್ನುವಾಗ ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವುದು ಖಂಡನೀಯಎಲ್ಲ ರಾಜಕೀಯ ಪಕ್ಷಗಳಿಗೂ ಚುನಾವಣೆಗೂ ಮೊದಲೇ ತಮ್ಮ ಸಿದ್ಧಾಂತಗಳು ಮತ್ತು ಧೋರಣೆಗಳಿಗೆ ಅನುಸಾರವಾಗಿ ಪ್ರಣಾಳಿಕೆ ಮೂಲಕವೇ ಮಂಡಿಸುವ ಪ್ರಜಾಸತ್ತಾತ್ಮಕ ಅಧಿಕಾರವಿರುವಾಗ ಇಂತಹ ಘೋಷಣೆಗಳು ಮತ್ತು ಪೊಳ್ಳು ಭರವಸೆಗಳು ರಾಜಕೀಯ ಪಕ್ಷಗಳ ಮೇಲಿನ ವಿಶ್ವಾಸಾರ್ಹತೆಯನ್ನು ಸಹಜವಾಗಿ ಕುಗ್ಗಿಸುತ್ತವೆರಾಜ ಕೀಯ ಪಕ್ಷಗಳು ಎಲ್ಲರನ್ನೂ ಎಲ್ಲ ಕಾಲಕ್ಕೂ ವಂಚಿಸಲು ಸಾಧ್ಯವಿಲ್ಲವೆಂಬ ಪರಮಸತ್ಯವನ್ನು ಅರಿತು ನಡೆ ಯುವುದರಿಂದ ಅವರ ವಿಶ್ವಾಸಾರ್ಹತೆ ಹೆಚ್ಚುತ್ತದೆವಿದೇಶಗಳಲ್ಲಿ ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ರೂಪಿಸುವ ಪ್ರಣಾಳಿಕೆಗಳು ಗಂಭೀರ ಸಾರ್ವಜನಿಕ ಚರ್ಚೆಗಳು ಮತ್ತು ಸಂವಾದಿಗಳಿಗೆ ಗುರಿಯಾಗುವ ಪ್ರವೃತ್ತಿ ಯೂರೋಪ್ಅಮೆರಿಕಾ ಮೊದಲಾದ ದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ.

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಧಿಕಾರ ಸಿಕ್ಕಿದಾಗ ಭರವಸೆಗಳನ್ನು ಈಡೇರಿಸದೆ ಅಧಿಕಾರ ಕಳೆದುಕೊಳ್ಳುವ ಅಂಚಿನಲ್ಲಿ ಚುನಾವಣಾಪೂರ್ವ ಘೋಷಣೆಗಳು ಮತ್ತು ಭರವಸೆಗಳನ್ನು ಮಂಡಿಸುವುದು ಹಾಸ್ಯಾಸ್ಪದ ಸಂಗತಿ ಯಾಗಿದೆ. 2019ರಿಂದ ಇಂದಿನ ತನಕ ಡಬಲ್ ಎಂಜಿನ್ ಸರ್ಕಾರ ಈಡೇರಿಸದ ಭರವಸೆಗಳ ಪಟ್ಟಿ ಹನುಮಂತನ ಬಾಲದಂತೆ ಉದ್ದ ಬೆಳೆಯುತ್ತಿರುವುದು ಜನರಲ್ಲಿ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವನ್ನು ತಗ್ಗಿಸುತ್ತಿದೆಲಕ್ಷಾಂತರ ಮಂದಿ ಯುವಕರಿಗೆ ಉದ್ಯೋಗಾವಕಾಶಗಳುನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿದಮನಿತ ಸಮುದಾಯಗಳ ಬದುಕು ಪ್ರಕಾಶಿಸುವುದುಶಿಕ್ಷಣಆರೋಗ್ಯಗ್ರಾಮೀಣಾ ಭಿವೃದ್ಧಿಕೃಷಿ ಮೊದಲಾದ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ ಅಸಮರ್ಪಕವಾಗಿರುವುದು ಇವುಗಳು ಆಳುವ ಪಕ್ಷಗಳ ಚುನಾವಣಾ ಪೂರ್ವ ಭರವಸೆಗಳು ಸುಳ್ಳು ಭರವಸೆಗಳೆಂದೇ ಜನಜನಿತವಾಗಿವೆ.

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಬಹುತೇಕ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಕೇಂದ್ರಿತ ಭರವಸೆಗಳನ್ನು ಈಡೇರಿಸಿದೆಕರ್ನಾಟಕದಲ್ಲಿ ಹಸಿವು ಮುಕ್ತನಿರುದ್ಯೋಗ ಮುಕ್ತಅನಾರೋಗ್ಯ ಮುಕ್ತ ಮತ್ತು ಅಸುರಕ್ಷತೆ ಮುಕ್ತ ಚುನಾವಣಾ ಪೂರ್ವ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಟಾನ ಗೊಳಿಸಿ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ವನ್ನು ಮಾದರಿ ರಾಜ್ಯವನ್ನಾಗಿ ರೂಪಿಸಿದ ಹೆಗ್ಗಳಿಕೆ ಹೊಂದಿದೆಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ನಿವಾರಣೆಗಿಂತ ಬಡತನ ನಿವಾರಣೆನಗರಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಸುರಕ್ಷಿತ ಬದುಕುಆರ್ಥಿಕ ಬಂಡವಾಳಕ್ಕಿಂತ ಸಾಮಾಜಿಕ ಬಂಡವಾಳ ಅಭಿವೃದ್ಧಿಉದ್ಯಮಿಗಳ ಅಭಿವೃದ್ಧಿಗಿಂತ ರೈತರು ಮತ್ತು ಕಾರ್ಮಿಕರ ಅಭಿವೃದ್ಧಿ ಸರಿಯಾದ ಪ್ರಮಾಣದಲ್ಲಿ ಆಗಿಲ್ಲದಿರುವುದು ಅನುಭವವೇದ್ಯವಾ ಗಿದೆನಮ್ಮನ್ನು ಆಳುವ ಸರ್ಕಾರ ಚುನಾವಣಾ ಪೂರ್ವ ಘೋಷಣೆಗಳಿಗಿಂತ ಸಿಕ್ಕಿರುವ ಕಾಲಾವಕಾಶವನ್ನು ಸದುಪ ಯೋಗಪಡಿಸಿಕೊಂಡು ಜನರ ಅಭಿವೃದ್ಧಿಯನ್ನು ಸಾಧಿಸಿ ರಾಜ್ಯಾಧಿಕಾರ ಕೊಟ್ಟವರ ಋಣವನ್ನು ತೀರಿಸುವುದು ಅತ್ಯವಶ್ಯಕ.

 

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago