ಸೌಮ್ಯಕೋಠಿ, ಮೈಸೂರು
ವಿಮಲಾ ಐಟಿ ಕಂಪೆನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದವರು, ಇಂದು ಅವರ ನಿವೃತ್ತಿಯ ದಿನ. ಅವರಿಗೆ ನಾಳೆಯಿಂದ ನಾನು ದಿನ ಕಳೆಯುವುದು ಹೇಗೆ ಎಂಬ ಚಿಂತೆ ಆವರಿಸುತ್ತದೆ. ಸಹೋದ್ಯೋಗಿಗಳಿಂದಬೀಳ್ಕೊಡುಗೆ ತೆಗೆದುಕೊಂಡು ಮನೆಗೆ ಹೋಗುತ್ತಾರೆ. ಮನೆಗೆ ಹೋದಾಗ ಅದೇ ಕಾಲಿಂಗ್ ಬೆಲ್ ಆದರೆ ಆಶ್ಚರ್ಯವೆಂದರೆ ಅವರ ಮನೆಯವರೆಲ್ಲ ಅವರನ್ನು ಸ್ವಾಗತಿಸಿದ ರೀತಿ. ಎಲ್ಲರೂ ನಿನ್ನ ಬಾಲ್ಯಕ್ಕೆ ನಿನಗೆ ಸ್ವಾಗತ ಎಂದು ಕರೆಯುತ್ತಾರೆ. ಅಷ್ಟೇ ಅಲ್ಲ ಅವರ ನೆಚ್ಚಿನ ಗೆಳತಿಯೊಬ್ಬರು ಅವರಿಗೆ ನೀಡಿದ ಉಡುಗೊರೆ ಅವರಿಗೆ ಆಶ್ಚರ್ಯವೆನಿಸುತ್ತದೆ. ಕಾರಣ ಆ ಉಡುಗೊರೆಯಲ್ಲಿ ಇದ್ದುದ್ದು ಒಂದು ಪುಟ್ಟ ಕಾಮೆರಾ, ನೆನಪಿದ್ಯಾ ನೀನು ನಮ್ಮೆಲ್ಲರ ಫೋಟೋಗ್ರಾಫರ್ ಆಗಿದ್ದೆ, ನನ್ನ ಮದುವೆಯಲ್ಲಿ ನೀನೆ ನನ್ನ ಅತಿ ಹೆಚ್ಚು ಸುಂದರವಾದ ಫೋಟೋಗಳನ್ನು ತೆಗೆದಿದ್ದು, ಆದರೆ ಈ ಸಮಯವಿಲ್ಲದ ಉದ್ಯೋಗದಲ್ಲಿ ನಿನ್ನ ಹವ್ಯಾಸವನ್ನು ಮರೆತಿದ್ದೀಯಾ. ನಿನ್ನ ಮುಂದೆ ನಿನ್ನ ಸಮಯ ನಿನಗಾಗಿ ಕಾಯುತ್ತಿದೆ. ಮತ್ತೆ ನಿನ್ನ ಹವ್ಯಾಸವನ್ನು ಪೂರೈಸು ಎಂದು ಆಕೆ ಹಾರೈಸಿದಳು . ಹೌದು ವಿದ್ಯಾರ್ಥಿಗಳಾಗಿದ್ದಾಗ ಪ್ರತಿಯೊಬ್ಬರೂ ಕೇಳುವುದು ನಿನ್ನ ಹವ್ಯಾಸವೇನು ಎಂದು. ಆದರೆ ನಿವೃತ್ತಿಯಾದವರಿಗೆ ನಾವು ಕೇಳಬೇಕು ನಿಮ್ಮ ಹವ್ಯಾಸವೇನೆಂದು. ಕಾರಣ ನಮ್ಮ ವೃತ್ತಿಗೆ ನಿವೃತ್ತಿ ಇದೆ ಆದರೆ ಹವ್ಯಾಸಕ್ಕೆ ಖಂಡಿತವಾಗಿಯೂ ಇಲ್ಲ, ಅಷ್ಟೇ ಅಲ್ಲ ನಮ್ಮ ಹವ್ಯಾಸವನ್ನು ನಾವು ಮತ್ತೆ ನೀರೆರೆದು ಪೋಷಿಸುವ ಸುಸಂದರ್ಭ ನಮ್ಮ ನಿವೃತ್ತಿ.
ರಾಜು ಚಿಕ್ಕಪ್ಪನಿಗೂ ಅಷ್ಟೇ, ತಾನು ಮಾಸ್ಟರ್ ಆಗಬೇಕು ಎಂಬ ಆಸೆ ಇತ್ತು. ಆದರೆ ಅವರಾಗಿದ್ದು ಇಂಜಿನಿಯರ್. ಓದಿನ ಸಾಲ ಹಾಗೂ ಮನೆಯ ಜವಾಬ್ದಾರಿ ಕೆಲಸ ಮಾಡಲೇಬೇಕಾಗಿತ್ತು. ನಿವೃತ್ತಿಯ ನಂತರ ಅವರು ತಮ್ಮ ಹಳ್ಳಿಗೆ ಹೋಗಿ ಅಲ್ಲಿರುವ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಿಕೊಡುತ್ತಿದ್ದರು ಅವರು ಅಲ್ಲಿನ ವಿದ್ಯಾರ್ಥಿಗಳ ನೆಚ್ಚಿನ ಮಾಸ್ತರಾಗಿದ್ದರು ಎಂದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ .
ಹೌದು ನಮ್ಮ ನಿವೃತ್ತಿಯ ಕಾಲಕ್ಕೆ ನಾವು ತೋಟವನ್ನು ಮಾಡಬಹುದು, ಪಕ್ಷಿಗಳನ್ನು ಸಾಕಬಹುದು, ಪೇಂಟಿಂಗ್ ಮಾಡಬಹುದು. ಅಷ್ಟೇ ಅಲ್ಲ ನನಗೆ ತಿಳಿದ ಡಾಕ್ಟರ್ ಒಬ್ಬರು ಅವರ ನಿವೃತ್ತಿಯ ಕಾಲಕ್ಕೆ ನೃತ್ಯ ಹಾಗೂ ಸಂಗೀತವನ್ನು ಕಲಿತರು. ನನ್ನ ಮಗಳನ್ನು ನಾನು ಅವರ ಬಳಿ ಕರೆದುಕೊಂಡು ಹೋದಾಗ ಅವರು ಹೇಳಿದರು, ನೀನೂ ಸಹ ನಿನ್ನ ಹವ್ಯಾಸವನ್ನು ಬೇಗ ಆರಂಭಿಸು ಎಂದು ನಾನು ಈ ವಯಸ್ಸಿನಲ್ಲ ಅಂದಾಗ ಹವ್ಯಾಸಕ್ಕೆ ವಯಸ್ಸಿಲ್ಲ ಎಂದು ಹೇಳಿದ್ದರು. ಹೌದು ಅವರ ಪ್ರೇರಣೆಯು ಬಹಳ ಬೇಗ ನಾನು ಸಹ ನನ್ನ ಹವ್ಯಾಸವಾದ ಬರವಣಿಗೆಯನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿಯಾಯಿತು. ಓದುವುದು, ಬರೆಯುವುದು, ಹಾಡು ಹೇಳುವುದು ಹೀಗೆ ನಮ್ಮ ಹವ್ಯಾಸ ನಮ್ಮ ದಿನಚರಿಯನ್ನು ಬದಲಾಯಿಸುತ್ತೆ. ಅಷ್ಟೇ ಅಲ್ಲದೆ ನಮ್ಮ ಬದುಕಿಗೆ ಒಂದಷ್ಟು ಹೊಸತನವನ್ನು ಖಂಡಿತವಾಗಿಯೂ ತರುತ್ತದೆ.
ಬಹಳ ಬೇಗ ನೀವು ಸಹ ಯೋಚಿಸಿ ನಿಮ್ಮ ನಿವೃತ್ತಿಯ ಸಮಯದಲ್ಲಿ ನೀವು ನಿಮ್ಮ ಯಾವ ಹವ್ಯಾಸಕ್ಕೆ ನೀರೆರೆಯುತ್ತೀರಿ ಎಂದು. ಕಾರಣ ಸಮಯ, ಹಣ ಎರಡರ ಕೊರತೆಯಿಂದ ನಮ್ಮ ಹವ್ಯಾಸವನ್ನು ನಾವು ಬದಿಗೊತ್ತಿರುತ್ತೇವೆ, ಈಗ ನಮ್ಮ ಸಮಯ ನಮಗಾಗಿ ಮೀಸಲಿಡೋಣ. ಅಷ್ಟೇ ಅಲ್ಲ ನಾವು ಇನ್ನೊಬ್ಬರಿಗೆ ಮಾದರಿಯಾಗೋಣ. ವಯಸ್ಸು ಕೇವಲ ಅಂಕಿಗಳಿಂದ ಮಾತ್ರ. ನಾವು ನಮ್ಮ ಮನಸ್ಸಿನಿಂದ ಸದಾ ಯುವಕರಾಗಿರೋಣ ಹಾಗೂ ಇಂದಿನ ಮೊಬೈಲ್ ಹಿಡಿಯುವ ಯುವಕರಿಗೆ ಮಾದರಿಯಾಗೋಣ. ಏನೇನುತ್ತೀರಾ ಒಮ್ಮೆ ಯೋಚಿಸಿ.
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಷ್ಟ್ರಕವಿ ಕುವೆಂಪು ಅವರು ವಾಸವಿದ್ದ ನಿವಾಸವನ್ನು ಸ್ಮಾರಕ ಮತ್ತು ಮ್ಯೂಸಿಯಂ ಮಾಡಲು ಸರ್ಕಾರ…
ಬೆಂಗಳೂರು : ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳ ಸಭೆ ಮಾಡುವುದರೊಂದಿಗೆ ರೈತರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ ವಿಮೆ…
ಮೈಸೂರು : ಹಲವಾರು ವರ್ಷಗಳಿಂದ ಕಣ್ತಪ್ಪಿನಿಂದ ಹಾಗೂ ಬೇನಾಮಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿರುವ ನಿವೇಶನಗಳನ್ನು ಗುರುತಿಸಿ ರಕ್ಷಣೆ ಮಾಡುವುದಕ್ಕೆ ಎಂಡಿಎ…
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮೂಡ)ದಲ್ಲಿ ನಿವೇಶನ ಪಡೆದ ಪ್ರಕರಣ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದವರಿಗೆ ಕಾನೂನು…
ಲಿಂಗಾಂಬುದಿಕೆರೆಗೆ ಹರಿಯುವ ಯುಜಿಡಿ ನೀರು ತಡೆಗೆ ಶೀಘ್ರ ಶಾಶ್ವತ ಪರಿಹಾರ ಮೈಸೂರು : ಹಲವು ತಿಂಗಳುಗಳಿಂದ ಒಳಚರಂಡಿ ನೀರು ಹರಿಯುವ…
ಬೆಂಗಳೂರು : ಬೆಂಗಳೂರಿನ ಸಿನಿಮಾ ಪ್ರೇಮಿಗಳು ಕುತೂಹಲ ಮತ್ತು ನಿರೀಕ್ಷೆಯಿಂದ ಕಾಯುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಅವತರಣಿಕೆಗೆ ವೇದಿಕೆ…