ಎಡಿಟೋರಿಯಲ್

ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ

ಕೆ.ಜಿ.ಕೆಂಪರಾಜು, ಕಾಗಲವಾಡಿ

ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಬಡವರು, ದಲಿತರ ಮೇಲೆ ದಬ್ಬಾಳಿಕೆ, ಶೋಷಣೆ, ಅಸಮಾನತೆಗಳು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಂದಿಗೂ ಅಳಿಸಲು ಸಾಧ್ಯವಾ-ಗುತ್ತಿಲ್ಲ. ಇಂತಹ ಸಮಾಜದ ಪಿಡುಗುಗಳನ್ನು ತೊಡೆದು ಹಾಕಲು ಮಹಾತ್ಮರು ತಮ್ಮ ಜೀವನದುದ್ದಕ್ಕೂ ಹೋರಾಟ ಗಳನ್ನೇ ಮಾಡಿದ್ದಾರೆ. ಅಂತಹ ಪ್ರಮುಖರಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಶಿಕ್ಷಣಕ್ಕಾಗಿ ಬುದ್ಧ, ಬಸವರಾದಿಯಾಗಿ ಹೋರಾಡಿದ ಫುಲೆ ದಂಪತಿಗಳು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರು ಅಗ್ರಗಣ್ಯರು.

ಮಹಾತ್ಮ ಜ್ಯೋತಿ ಬಾ -ಲೆಯವರ ಸಾಂಗತ್ಯದಲ್ಲಿ ಅರಿವಿನ ಮಾರ್ಗದರ್ಶನ ಪಡೆದು ಸಮತೆಯ ಜ್ಯೋತಿ ಹಿಡಿದು ಅರಿವಿಲ್ಲದವರಿಗೆ ಅಕ್ಷರದೀಪ ಹಚ್ಚಿದ ‘ದೇಶದ ಮೊಟ್ಟ ಮೊದಲ ಶಿಕ್ಷಕಿ’, ‘ಅಕ್ಷರದವ್ವ’ ಅನಿಸಿಕೊಂಡವರು ಸಾವಿತ್ರಿಬಾಯಿ ಫುಲೆ.

ಆಧುನಿಕ ಭಾರತದಲ್ಲಿ ಶೋಷಿತರಿಗೆ ಅಕ್ಷರದ ಜ್ಞಾನವನ್ನು ಬಿತ್ತರಿಸುವಲ್ಲಿ ಶ್ರಮಿಸಿದವರಲ್ಲಿ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾಯಿ ಫುಲೆ ಪ್ರಮುಖರು. ಜ.೩, ೧೮೩೧ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂವ್‌ದಲ್ಲಿ ತಳ ಸಮುದಾಯದಲ್ಲಿ ಜನಿಸಿದ ಸಾವಿತ್ರಿ ಬಾಯಿ ಫುಲೆ ತಮ್ಮ ೯ನೇ ವರ್ಷದಲ್ಲಿಯೇ ಜ್ಯೋತಿ ಬಾ ಫುಲೆಯವರೊಡನೆ ವಿವಾಹವಾದರು. ಶಿಕ್ಷಣದ ಹಂಬಲದೊಂದಿಗೆ ಅನೇಕ ನೋವುಗಳನ್ನು ಅನುಭವಿಸಿದ್ದ ಸಾವಿತ್ರಿ ಬಾಯಿ ಫುಲೆ ಮನೆಯಲ್ಲಿಯೇ ಶಿಕ್ಷಣ ಕಲಿಯಲು ಆರಂಭಿಸಿದರು.

೧೮೪೬ರಲ್ಲಿ -ಲೆ ಸಂಬಂಽಯಾದ ಸುಗಣಾಬಾಯಿ ಮಹಾರ್ ವಾಡೆಯಲ್ಲಿ ದಲಿತರಿಗಾಗಿ ಶಾಲೆಯೊಂದನ್ನು ಪ್ರಾರಂಭಿಸಿದರು. ಆದರೆ ಅಲ್ಲಿ ಬ್ರಾಹ್ಮಣರ ಗುಂಪೊಂದು ಜನರನ್ನು ಮತಾಂತರ ಮಾಡಿಸಲು ಶಾಲೆ ತೆರೆದಿದ್ದಾರೆ ಎಂದು ಅಪಪ್ರಚಾರ ಮಾಡಿ ಶಾಲೆಯನ್ನೇ ಮುಚ್ಚಿಸಿದರು. ಈ ವೇಳೆ ಜ್ಯೋತಿ ಬಾ ಫುಲೆ ಪುಣೆಯಲ್ಲಿ ಡಿ.೨೫, ೧೮೪೬ರಲ್ಲಿಯೇ ಬಹಿರಂಗ ಸಭೆ ನಡೆಸಿ ‘ದಲಿತರು-ಮಹಿಳೆಯರು-ಶೂದ್ರರು ಅಕ್ಷರ ಕಲಿಯದಂತೆ ಪುರೋಹಿತಶಾಹಿಯು ಮಾಡಿದ ಕುತಂತ್ರ’ವೆಂದು ಕೂಗಿದರು. ಅದೇ ವೇಳೆ ಸಭೆಗೆ ಬಂದಿದ್ದ ‘ಭಿಡೆ’ ಎಂಬ ಬ್ರಾಹ್ಮಣರೊಬ್ಬರು ಹೆಣ್ಣು ಮಕ್ಕಳಿಗಾಗಿ ತಮ್ಮ ಮನೆ ಕೊಡಲು ಮುಂದೆಬಂದರು. ಭಿಡೆಯವರ ಮನೆಯನ್ನು ಶಾಲೆಯಾಗಿ ಮಾಡಿಕೊಳ್ಳಲಾಯಿತು.

೧೮೪೭ರಲ್ಲಿ ಅಹಮದ್‌ನಗರದಲ್ಲಿದ್ದ ಮಿಚಲ್‌ನವರ ‘ನಾರ‍್ಮನ್’ (ನಿರ್ಮಲ್) ಶಾಲೆಯಲ್ಲಿ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿ ಬಾಯಿ ಫುಲೆಯವರು ಮಹಾರಾಷ್ಟ್ರದಲ್ಲಿ ತರಬೇತಿ ಪಡೆದ ಏಕೈಕ ಮಹಿಳಾ ಶಿಕ್ಷಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

೧೮೪೮ರಲ್ಲಿ ಫುಲೆ ದಂಪತಿ ಪುಣೆಯಲ್ಲಿ ಶಾಲೆಯನ್ನು ತೆರೆದರು. (ಇದು ಭಾರತದಲ್ಲಿ ಎರಡನೆಯದು, ಮೊದಲನೆಯದು ಕೊಲ್ಕತ್ತಾದಲ್ಲಿ ಸ್ಥಾಪನೆಯಾಯಿತು.) ಶಾಲೆಗೆ ಸಾವಿತ್ರಿ ಬಾಯಿ ಫುಲೆಯವರು ಶಿಕ್ಷಕಿಯಾಗಿದ್ದರು. ಮೇಲ್ಜಾತಿಗೆ ಸೇರಿದ ಹೆಣ್ಣು ಮಕ್ಕಳು ಸೇರಿದಂತೆ ೯ ಮಕ್ಕಳಿಂದ ಆರಂಭವಾದ ಶಾಲೆ ಮುಂದೆ ಅನೇಕ ಬಾಲಕಿಯರಿಗೆ ವಿದ್ಯಾಕೇಂದ್ರವಾಯಿತು.

ಫುಲೆ ದಂಪತಿ ೧೮೪೮-೧೮೫೦ರವರೆಗೆ ೧೮ ಶಾಲೆಗಳನ್ನು ಸ್ಥಾಪಿಸಿದರು. ಬ್ರಿಟಿಷ್ ಸರ್ಕಾರವೂ ಸಾವಿತ್ರಿ ಬಾಯಿ ಫುಲೆ ಅವರ ಶೈಕ್ಷಣಿಕ ಸಾಧನೆಗಾಗಿ ಶಿಕ್ಷಣ ಇಲಾಖೆಯಿಂದ ನ.೧೬, ೧೮೫೨ರಲ್ಲಿ ಸನ್ಮಾನಿಸಿ ಸಾವಿತ್ರಿ ಬಾಯಿ ಫುಲೆಯವರಿಗೆ ‘ಇಂಡಿಯನ್ ಫಸ್ಟ್ ಲೇಡಿ ಟೀಚರ್’ ಎಂದೂ ಬಿರುದು ನೀಡಿತು.

ಫುಲೆ ದಂಪತಿ, ಅನಕ್ಷರತೆ ಬಗ್ಗೆ ಮಾತ್ರವಲ್ಲದೆ ಸಾಮಾಜಿಕ ಅನಿಷ್ಟತೆ ನಿವಾರಣೆ ಹಾಗೂ ಸಮಾಜ ಸುಧಾರಣೆಗಳಿಗೂ ಹೆಚ್ಚು ಒತ್ತು ಕೊಟ್ಟರು. ೧೮೫೪ರಲ್ಲಿ ಫುಲೆ ದಂಪತಿ ‘ಕಾವ್ಯಾ ಫೂಲೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಅದರಲ್ಲಿ ‘ಆಳುವ ವರ್ಗದವರಿಗೆ ಮಾತ್ರ ಓದು, ಶಿಕ್ಷಣವೆಂಬುದಾಗಿದ್ದರೆ ಅದು ಉರಿದು

ಹೋಗುವ ಬತ್ತಿಯಂತೆ’ ಎಂದು ಇಲ್ಲದವರು ಮತ್ತು ಉಳ್ಳವರನ್ನು ಕುರಿತು ಹೇಳಿದ್ದಾರೆ. ಜೊತೆಗೆ ಎಲ್ಲರೂ ಸಮಾನರು ಎನ್ನುವ ಧೋರಣೆಯನ್ನು ದಿಟ್ಟವಾಗಿ ಎತ್ತಿ ಹಿಡಿದಿದ್ದಾರೆ.

andolanait

Recent Posts

ರಸ್ತೆಯಲ್ಲಿ ರಾಗಿ ಒಕ್ಕಣೆ | ಮುಗುಚಿ ಬಿದ್ದ ಕಾರು ; ಓರ್ವ ಸಾವು

ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…

26 mins ago

ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ

ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…

1 hour ago

ಮೈಸೂರು | ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮಾಚರಣೆ

ಮೈಸೂರು : ಮೈಸೂರು ಜಿಲ್ಲೆಯಾದ್ಯಂತ ಕ್ರೈಸ್ತ ಭಾಂದವರು ಕ್ರಿಸ್‌ಮಸ್‌ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು. ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದ ಐತಿಹಾಸಿಕ…

1 hour ago

ಕೆ.ಆರ್.ಪೇಟೆ | ವೇತನದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಲ್ಪಿಸಿದ ಶಿಕ್ಷಕ

ಕೆ.ಆರ್.ಪೇಟೆ : ತಾಲ್ಲೂಕಿನ ತೆಂಡೇಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಸ್.ರಾಜು ಅವರು ತಮ್ಮ ಒಂದು ತಿಂಗಳ ವೇತನದಲ್ಲಿ…

1 hour ago

ತುರ್ತು ನಿರ್ಗಮನದ ಬಾಗಿಲು ಇಲ್ಲದಿದ್ದರೆ ಎಫ್‌ಸಿ ಇಲ್ಲ ; ಸಚಿವ ರಾಮಲಿಂಗಾ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು : ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದೆ ಇದ್ದರೆ ಭೌತಿಕ ಕ್ಷಮತೆಯ ದೃಢೀಕರಣ ಪತ್ರ…

2 hours ago

ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು : ವಾಹನ ಸವಾರರಿಗೆ ಮುನ್ನೆಚ್ಚರಿಕೆ

ಬೆಂಗಳೂರು : ರಾಜ್ಯದಲ್ಲಿ ತೀವ್ರ ಚಳಿ, ಶೀತಗಾಳಿಯ ಜೊತೆಗೆ ಬೆಳಗಿನ ವೇಳೆ ಕೆಲವೆಡೆ ದಟ್ಟವಾದ ಮಂಜು ಆವರಿಸುತ್ತಿದೆ. ಬೆಳಗಿನ ವೇಳೆಯಲ್ಲಿ…

2 hours ago