ಎಡಿಟೋರಿಯಲ್

ಭಾರತಕ್ಕೆ ಬುಲ್ಡೋಜರ್ ಪ್ರಜಾಪ್ರಭುತ್ವ , ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಬೇಡ

ಡಾ.ಬಿ.ಪಿ.ಮಹೇಶ ಚಂದ್ರ ಗುರು

ಎ.ಬಿ.ವಾಜಪೇಯಿ ಸರ್ಕಾರ ಹಿಂದುತ್ವ ಅಜೆಂಡಾಗೆ ಅನುಗುಣವಾಗಿ ಸಂವಿಧಾನವನ್ನು ಪರಾಮರ್ಶೆ ಮಾಡುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿ ರಚಿಸಿದರು. ಇಂತಹ ನಡೆಯ ವಿರುದ್ಧ ಮಾಧ್ಯಮಗಳು ಮತ್ತು ನಾಗರೀಕ ಸಮಾಜಗಳಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಯಿತು. ಆಗ ಕೂಡಲೇ ಎಚ್ಚೆತ್ತ ಕೆ.ಆರ್.ನಾರಾಯಣನ್ ಅಂದಿನ ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೆ ‘ಸಂವಿಧಾನ ವಿಫಲಗೊಂಡಿದೆಯೋ ಅಥವಾ ಸಾಂವಿಧಾನಿಕ ಆಶಯಗಳನ್ನು ಜಾರಿಗೆ ತರುವಲ್ಲಿ ನೀವು ವಿಫಲಗೊಂಡಿದ್ದೀರೋ’ ಎಂಬ ಬಹುದೊಡ್ಡ ಪ್ರಶ್ನೆಯನ್ನು ಮುಂದಿಟ್ಟರು. ಇವರ ಪ್ರಶ್ನೆಗೆ ಸಮಂಜಸ ಉತ್ತರ ನೀಡುವಷ್ಟು ಶಕ್ತಿ ಇಲ್ಲದ ಕಾರಣ ಸಂವಿಧಾನ ಪರಾಮರ್ಶೆ ನಡೆಯನ್ನು ವಾಜಪೇಯಿ ಸರ್ಕಾರ ಕೈಬಿಟ್ಟು ತನ್ನ ಸಂವಿಧಾನ ನಿಷ್ಠೆಯನ್ನು ಅಭಿವ್ಯಕ್ತಗೊಳಿಸಿತು.

ಭಾರತದಲ್ಲಿ ಸದ್ಯದಲ್ಲೇ  ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದ್ದು ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಹಿರಿಯ ಮುತ್ಸದ್ದಿ ಯಶವಂತ್ ಸಿನ್ಹಾ ಸ್ಪರ್ಧಿಸಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಲವಾರು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನಿತ ಸಮುದಾಯಗಳ ಮೇಲಿನ ದೌರ್ಜನ್ಯಗಳಿಗೆ ಮೂಕ ಸಾಕ್ಷಿಯಾಗಿ ಉಳಿದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಇದುವರೆವಿಗೂ ರಾಷ್ಟ್ರಪತಿಯಾಗಿ ಇಂತಹ ದಯನೀಯ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿದ ವ್ಯಕ್ತಿ ಭಾರತದ ಗಣತಂತ್ರದ ಇತಿಹಾಸದಲ್ಲಿ ಕಂಡು ಬಂದಿಲ್ಲ. ಹಿಂದೆ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಸ್.ನಿಜಲಿಂಗಪ್ಪ ಮತ್ತು ಸಿಂಡಿಕೇಟ್ ರಾಷ್ಟ್ರಪತಿ ಹುದ್ದೆಗೆ ನೀಲಂ ಸಂಜೀವರೆಡ್ಡಿಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದರು. ಇದೇ ಸಂದರ್ಭದಲ್ಲಿ ಕಮ್ಯುನಿಷ್ಟ್ ನಾಯಕ ಮತ್ತು ಮಾನವ ಹಕ್ಕುಗಳ ಹೋರಾಟಗಾರ ವರಾಹಗಿರಿ ವೆಂಕಟಗಿರಿ ಕೂಡ ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರು.

ಆಗ ಇಂದಿರಾಗಾಂಧಿ ಕಾಂಗ್ರೆಸ್ ಪಕ್ಷದ ಬಲಾಢ್ಯ ಶಕ್ತಿಗಳ ಪ್ರತಿನಿಧಿ ನೀಲಂ ಸಂಜೀವರೆಡ್ಡಿಯವರಿಂದ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಇರುವ ಹಿನ್ನೆಲೆಯಲ್ಲಿ ಸ್ವಪಕ್ಷದ ಚುನಾಯಿತ ಸದಸ್ಯರಿಗೆ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವಂತೆ ಕರೆ ನೀಡಿದರು. ಇವರ ಪ್ರಜಾಪ್ರಭುತ್ವ ಕೇಂದ್ರಿತ ಕಳಕಳಿಯನ್ನು ಅರಿತ ಕಾಂಗ್ರೆಸ್ ಪಕ್ಷದ ಇಂಡಿಕೇಟ್ ಗುಂಪಿಗೆ ಸೇರಿದ ಚುನಾಯಿತ ಸದಸ್ಯರು ವಿ.ವಿ.ಗಿರಿ ಅವರನ್ನು ಪ್ರಜ್ಞಾಪೂರ್ವಕವಾಗಿ ಗೆಲ್ಲಿಸಿದರು. ಇವರು ಆಗಸ್ಟ್ ೨೪, ೧೯೬೯ ರಿಂದ ಆಗಸ್ಟ್ ೨೪, ೧೯೭೪ರ ತನಕ ಭಾರತದ ನಾಲ್ಕನೇ ರಾಷ್ಟ್ರಪತಿಯಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿದರು.

೯೦ರ ದಶಕದಲ್ಲಿ ಭಾರತದಲ್ಲಿ ಹಿಂದುತ್ವವಾದಿ ಶಕ್ತಿಗಳು ಉದಯಿಸುವ ಸಂದರ್ಭದಲ್ಲಿ ಹಿರಿಯ ರಾಜತಾಂತ್ರಿಕ ಮತ್ತು ವಿದ್ವಾಂಸ ಕೆ.ಆರ್.ನಾರಾಯಣನ್ ಶೇ.೯೫ರಷ್ಟು ಮತಗಳನ್ನು ಪಡೆದು ಜುಲೈ ೧೯೯೭ರಂದು ಭಾರತದ ರಾಷ್ಟ್ರಪತಿ ಹುದ್ದೆಯನ್ನು ಅತ್ಯಂತ ಗೌರವಪೂರ್ವಕವಾಗಿ ಅಲಂಕರಿಸಿದರು. ಅಲ್ಪಸಂಖ್ಯಾತ ಸರ್ಕಾರ ಹಿರಿಯ ಮುತ್ಸದ್ದಿ ಎ.ಬಿ.ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಇವರು ದೇಶದ ಮೊಟ್ಟಮೊದಲ ದಲಿತ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಎ.ಬಿ.ವಾಜಪೇಯಿ ಸರ್ಕಾರ ಹಿಂದುತ್ವ ಅಜೆಂಡಾಗೆ ಅನುಗುಣವಾಗಿ ಸಂವಿಧಾನವನ್ನು ಪರಾಮರ್ಶೆ ಮಾಡುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿ ರಚಿಸಿದರು. ಇಂತಹ ನಡೆಯ ವಿರುದ್ಧ ಮಾಧ್ಯಮಗಳು ಮತ್ತು ನಾಗರೀಕ ಸಮಾಜಗಳಲ್ಲಿ ಪ್ರಬಲ ಪ್ರತಿರೋಧ ವ್ಯಕ್ತವಾಯಿತು. ಆಗ ಕೂಡಲೇ ಎಚ್ಚೆತ್ತ ಕೆ.ಆರ್.ನಾರಾಯಣನ್ ಅಂದಿನ ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೆ ‘ಸಂವಿಧಾನ ವಿಫಲಗೊಂಡಿದೆಯೋ ಅಥವಾ ಸಾಂವಿಧಾನಿಕ ಆಶಯಗಳನ್ನು ಜಾರಿಗೆ ತರುವಲ್ಲಿ ನೀವು ವಿಫಲಗೊಂಡಿದ್ದೀರೋ’ ಎಂಬ ಬಹುದೊಡ್ಡ ಪ್ರಶ್ನೆಯನ್ನು ಮುಂದಿಟ್ಟರು. ಇವರ ಪ್ರಶ್ನೆಗೆ ಸಮಂಜಸ ಉತ್ತರ ನೀಡುವಷ್ಟು ಶಕ್ತಿ ಇಲ್ಲದ ಕಾರಣ ಸಂವಿಧಾನ ಪರಾಮರ್ಶೆ ನಡೆಯನ್ನು ವಾಜಪೇಯಿ ಸರ್ಕಾರ ಕೈಬಿಟ್ಟು ತನ್ನ ಸಂವಿಧಾನ ನಿಷ್ಠೆಯನ್ನು ಅಭಿವ್ಯಕ್ತಗೊಳಿಸಿತು.

ಅಂದು ಕೆ.ಆರ್.ನಾರಾಯಣನ್ ತಾವು ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಅಲ್ಲ ಸಂವಿಧಾನದ ಪರಮರಕ್ಷಕ ಎಂಬುದನ್ನು ನಿರ್ಭೀಡೆಯಿಂದ ಸಾಬೀತುಪಡಿಸಿ ದೇಶದ ರಾಜಕೀಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದರು.
ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನವಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಕ್ರಿಯಾಶೀಲವಾಗಿ ಬಳಸಿಕೊಂಡು ಹಿಂದುತ್ವ ಅಜೆಂಡಾವನ್ನು ದೇಶದಲ್ಲಿ ಜಾರಿಗೊಳಿಸುವ ಭರವಸೆ ನೀಡಿ ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿರುವುದು ಇತಿಹಾಸದ ಭಾಗವೇ ಆಗಿದೆ. ಮೋದಿಯವರು ಮೇಲ್ಜಾತಿ ಪ್ರಭುತ್ವ ಮತ್ತು ಬಂಡವಾಳಶಾಹಿ ಪ್ರಭುತ್ವಗಳ ಪರಮರಕ್ಷಕರಾಗಿ ಆಡಳಿತ ನಡೆಸಿ ದೇಶದ ಮೂಲನಿವಾಸಿಗಳು ಮತ್ತು ದಮನಿತ ಸಮುದಾಯಗಳ ಹಿತವನ್ನು ಕಡೆಗಣಿಸಿದರು. ಹಲವಾರು ಬಗೆಯ ಮಾನವ ಹಕ್ಕುಗಳ ದಮನಕಾರಿ ಬೆಳವಣಿಗೆಗಳು ದೇಶದ ಉದ್ದಗಲಕ್ಕೂ ಪ್ರಭುತ್ವದ ಬಲದಿಂದ ಜರುಗಿದವು. ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್ ಮೇಲಿನ ಹಲ್ಲೆ, ಅಧಿಕಾರಶಾಹಿಯ ನಿರಂತರ ವಿಜೃಂಭಣೆ, ಪಾಟಿಯಾಲ ಹೌಸ್‌ನಲ್ಲಿ ಆಡಳಿತ ಪಕ್ಷ ನಿಷ್ಠ ವಕೀಲರ ದುರ್ನಡತೆ, ಏಕತ್ವವಾದಿಗಳಿಂದ ಬಹುತ್ವಕ್ಕೆ ಧಕ್ಕೆ, ಹಿಂದುತ್ವವಾದಿಗಳಿಂದ ಧರ್ಮನಿರಪೇಕ್ಷತೆಗೆ ಸಂಚಕಾರ, ಪೌರತ್ವ ತಿದ್ದುಪಡಿ ಮಸೂದೆಯ ಹೆಸರಿನಲ್ಲಿ ಮೂಲನಿವಾಸಿಗಳ ಅತಂತ್ರ, ಗೋರಕ್ಷಣೆಯ ಹೆಸರಿನಲ್ಲಿ ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ, ಒಳಗೊಳ್ಳುವ ಅಭಿವೃದ್ಧಿಗೆ ಬದಲಾಗಿ ದಮನಿತರನ್ನು ಮುಖ್ಯವಾಹಿನಿಯಿಂದ ಹೊರದಬ್ಬುವಿಕೆ, ಅಭಿವ್ಯಕ್ತ ಸ್ವಾತಂತ್ರ್ಯ ಪ್ರತಿಪಾದಕರನ್ನು ಜೈಲಿಗೆ ದಬ್ಬುವುದು, ಯೋಗಿಯವರ ಬುಲ್ಡೋಜರ್ ಪ್ರಭುತ್ವವನ್ನು ವಿರೋಧಿಸುವ ಕನಿಷ್ಟ ಬದ್ಧತೆ ಇಲ್ಲದಿರುವುದರಿಂದ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಾವೊಬ್ಬ ರರ್ಬ್ಬ ಸ್ಟಾಂಪ್ ರಾಷ್ಟ್ರಪತಿ ಎಂಬುದನ್ನು ಸಾಬೀತುಪಡಿಸಿದರು.

ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇರುವುದಾಗಿ ಹಿರಿಯ ನಾಯಕ ಕಪಿಲ್‌ಸಿಬಲ್ ಎಚ್ಚರಿಸಿದ್ದಾರೆ. ವಿಶೇಷವಾಗಿ ಆಲ್ಟ್ ನ್ಯೂಸ್ ಪತ್ರಿಕೆಯ ಸಹಸಂಸ್ಥಾಪಕ ಮೊಹಮದ್ ಜುಬೇರ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ಥಾ ಸಿತಲ್ವಾಡ್ ಬಂಧನದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ತೀವ್ರ ಹಾನಿಯುಂಟಾಗಿರುವುದಾಗಿ ಸಿಬಲ್ ವಿಷಾದಿಸಿದ್ದಾರೆ. ಇತ್ತೀಚೆಗೆ ಸಂವಿಧಾನಕ್ಕೆ ಆಳುವ ಪಕ್ಷ ಉತ್ತರದಾಯಿಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಂಗ ಸಂವಿಧಾನಕ್ಕೆ ಮಾತ್ರ ಉತ್ತರದಾಯಿಯಾಗಿರುವುದು ಅತ್ಯಂತ ಭರವಸೆ ಮೂಡಿಸಿದೆ.

ಇಂದು ದ್ರೌಪದಿ ಮುರ್ಮು ಎಂಬ ಆದಿವಾಸಿಗಳ ನಾಯಕಿಯನ್ನು ರಾಷ್ಟ್ರಪತಿಗೆ ಹುದ್ದೆಗೆ ಎನ್‌ಡಿಎ ಸರ್ಕಾರ ಅಭ್ಯರ್ಥಿಯಾಗಿ ನೇಮಿಸಿದೆ. ಪ್ರಸ್ತುತ ಸಂದರ್ಭದಲ್ಲಿ ಮತಗಳ ಬಲಾಬಲ ನೋಡಿದರೆ ಎನ್‌ಡಿಎ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿದೆ. ಇವರು ಒಂದು ವೇಳೆ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸಂವಿಧಾನಕ್ಕೆ ಉತ್ತರದಾಯಿತ್ವ ಹೊಂದದೇ ಹಿಂದುತ್ವ ಮತ್ತು ಶಕ್ತಿ ರಾಜಕಾರಣಕ್ಕೆ ಶರಣಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸುವ ಯಾವುದೇ ಭರವಸೆ ಇವರ ರಾಜಕೀಯ ಹಿನ್ನೆಲೆಯನ್ನು ಬಲ್ಲವರಿಗೆ ಇಲ್ಲವೇ ಇಲ್ಲ. ಮೊನ್ನೆಯ ತನಕ ದಲಿತರ ಓಲೈಕೆ, ಇಂದು ಆದಿವಾಸಿಗಳ ಓಲೈಕೆ ಮೊದಲಾದ ತಂತ್ರಗಾರಿಕೆಗಳಿಂದ ಮೋದಿ ಪ್ರಭುತ್ವ ದೇಶದ ಹಿತಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ.

ಪ್ರಜಾಪ್ರಭುತ್ವ ಕವಲುದಾರಿಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಅಂದು ಇಂದಿರಾಗಾಂಧಿ ನೀಡಿದ ಆತ್ಮಸಾಕ್ಷಿಗೆ ಅನುಗುಣವಾಗಿ ಚುನಾಯಿತ ಪ್ರತಿನಿಧಿಗಳು ಮತದಾನ ಮಾಡಿ ಸಂವಿಧಾನ ಮತ್ತು ಪ್ರಜಾಸತ್ತೆಗಳ ರಕ್ಷಣೆಗೆ ಯಶವಂತ ಸಿನ್ಹಾ ಅವರನ್ನು ರಾಷ್ಟ್ರಪತಿಯಾಗಿ ಚುನಾಯಿಸಬೇಕು. ‘ಒಂದು ವೇಳೆ ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿರುತ್ತೇನೆ’ ಎಂಬ ದಿಟ್ಟ ನಿಲುವು ಹೊಂದಿರುವ ಹಿರಿಯ ಮುತ್ಸದ್ದಿ ಯಶವಂತ್ ಸಿನ್ಹಾರವರಿಗೆ ಅಂದು ವಿ.ವಿ.ಗಿರಿಗೆ ನೀಡಿದಂತೆ ಆತ್ಮಸಾಕ್ಷಿ ಮತಗಳನ್ನು ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ನೀಡಿ ಭಾರತದ ಪ್ರಜಾಪ್ರಭುತ್ವವನ್ನು ರಕ್ಷಿಸಲೇಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ.

(ಇದು ಲೇಖಕರ ವೈಯಕ್ತಿಕ ಅಭಿಪ್ರಾಯ, ಪತ್ರಿಕೆಯ ಅಭಿಪ್ರಾಯವಲ್ಲ).

andolanait

Recent Posts

ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕುಡಿಯುವ ನೀರಿಗೆ ಅಭಾವ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಕಪಿಲಾ ನದಿ ಪಕ್ಕದಲ್ಲೇ ಇದ್ದರೂ ಜನತೆಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಳ್ಳಿಗಳಿಗೆ ನದಿ…

3 hours ago

ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವವ ಮಧ್ಯ…

3 hours ago

ಓದುಗರ ಪತ್ರ: ಸರಗಳ್ಳತನಕ್ಕೆ ಕಡಿವಾಣ ಹಾಕಿ

ಇತ್ತೀಚೆಗೆ ಮೈಸೂರಿನಲ್ಲಿ ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಮಹಿಳೆಯರು ಒಂಟಿಯಾಗಿ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಎರಡು ದಿನಗಳ ಹಿಂದಷ್ಟೇ ನಮ್ಮ ಸಂಬಂಧಿಕರೊಬ್ಬರು…

4 hours ago

ಓದುಗರ ಪತ್ರ: ಬಿಗ್‌ಬಾಸ್ ಕಾರ್ಯಕ್ರಮ ನಿಲ್ಲಲಿ

ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ. ವಿವಿಧ…

4 hours ago

ಓದುಗರ ಪತ್ರ: ಪೊಲೀಸರಿಗೆ ಧನ್ಯವಾದಗಳು

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ಜನ ಸಾಗರವೇ ಹರಿದು ಬಂದಿತ್ತು. ದಸರಾ ಅಂಗವಾಗಿ ಆಯೋಜಿಸಿದ್ದ ಯುವ ಸಂಭ್ರಮ, ಯುವ…

4 hours ago

ಓದುಗರ ಪತ್ರ: ಮುಷ್ಕರ ಮುಂದುವರಿದಿದೆ

ಸರ್ಕಾರವೇ ನಮ್ಮ ದೇವರಾಗಿದೆ ಮೇಲಾಧಿಕಾರಿಗಳ ಮೇಲೆ ಗೌರವವಿದೆ ಜನರ ಸಮಸ್ಯೆಗಳ ಅರಿವಿದೆ ಅವರಿಗಾದ ಅಡಚಣೆಗೆ ವಿಷಾದವಿದೆ ನಮಗೂ ಬದುಕಿದೆ. ನಮ್ಮದೂ…

4 hours ago