ಎಡಿಟೋರಿಯಲ್

ಬಜೆಟ್ ಪ್ರಕ್ರಿಯೆಯಲ್ಲಿ ಜನಾಭಿಪ್ರಾಯಗಳ ಪ್ರಾಮುಖ್ಯತೆ

ಗೋಧಿ ರಫ್ತು ನಿರ್ಬಂಧ ತೆರವು, ಬೆಂಬಲ ಬೆಲೆ ಹೆಚ್ಚಳ, ಸಕಾಲದಲ್ಲಿ ಸಾಕಷ್ಟು ರಸಗೊಬ್ಬರಗಳ ಪೂರೈಕೆ ಮಾಡಬೇಕೆಂಬುದು ರೈತರ ಮನವಿ  

ಪ್ರೊ. ಆರ್.ಎಂ.ಚಿಂತಾಮಣಿ

ಹೊಸ ಪೆನ್ಷನ್ ಸ್ಕೀಮ್ ಗೊಂದಲ ರಾಜ್ಯ ಸರ್ಕಾರಗಳಲ್ಲಿ ಇನ್ನೂ ಇತ್ಯಾರ್ಥವಾಗದೇ ಮುಂದುವರಿಯುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ.೬೦ರಷ್ಟು ಬೇಕೆಂದೂ ಜಿಎಸ್ಟಿ ಪರಿಹಾರ ಧನವನ್ನು ಇನ್ನೈದು ವರ್ಷ ಮುಂದುವರಿಸಬೇಕೆಂದು ರಾಜ್ಯಗಳು ಕೇಳಿವೆ. ಕೇಂದ್ರದ ಸೆಸ್ ಮತ್ತು ಸರ್ಚಾರ್ಜಗಳ ಮೇಲೂ ರಾಜ್ಯಗಳ ಕಣ್ಣು ಬಿದ್ದಿದೆ. ಜಿಎಸ್‌ಟಿ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಮೋದಿ ಸರ್ಕಾರದ ಈ ಅವಧಿಯ ಕೊನೆಯ ಪೂರ್ಣಾವಧಿ ಮುಂಗಡ ಪತ್ರವನ್ನು ೨೦೨೩-೨೪ಕ್ಕಾಗಿ ಹಣಕಾಸು ಮಂತ್ರಿಗಳು ಇದೇ ಫೆಬ್ರವರಿ ಒಂದರಂದು ಸಂಸತ್ತಿನಲ್ಲಿ ಮಂಡಿಸಬೇಕು. ಅದಕ್ಕಾಗಿ ಮೊದಲ ಎರಡು ತ್ರೈಮಾಸಿಕ ವರದಿಗಳಿಂದ ಅಂಕಿ-ಸಂಖ್ಯೆಗಳು ಲಭ್ಯವಾಗಿರುತ್ತವೆ. ಡಿಸೆಂಬರ್ ಕೊನೆಯವರೆಗೆ ದೊರೆಯುವ ಮಾಹಿತಿಗಳ ಆಧಾರದಲ್ಲಿ ಹಾಲಿ ವರ್ಷದ ಅಂದಾಜುಗಳನ್ನು ತಯಾರಿಸುವ ಕಾರ್ಯ ಹಣಕಾಸು ಇಲಾಖೆಯಲ್ಲಿ ನಡೆಯುತ್ತಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರು ಈ ವರ್ಷದ ಆರ್ಥಿಕ ಸಮೀಕ್ಷೆಯನ್ನು ತಯಾರಿಸುತ್ತಾರೆ. ಅದನ್ನು ಅರ್ಥ ಮಂತ್ರಿಗಳು ಬಜೆಟ್ ಮಂಡನೆಯ ಹಿಂದಿನ ದಿನ ಸಂಸತ್ತಿನಲ್ಲಿ ಮಂಡಿಸುತ್ತಾರೆ. ಇವುಗಳನ್ನೆಲ್ಲ ಬಳಸಿಕೊಂಡು ಅರ್ಥ ವ್ಯವಸ್ಥೆಯ ವಾರ್ಷಿಕ ಅವಶ್ಯಕತೆಗಳಿಗನುಸಾರವಾಗಿ ಬಜೆಟ್ ಅಂದಾಜುಗಳನ್ನು ತಯಾರಿಸಲಾಗಿರುತ್ತದೆ. ಇದು ಮಹತ್ವದ ದಾಖಲೆಯಾಗಿದ್ದು, ಇದರ ಮಂಡನೆಯನ್ನು ದೇಶ ಕುತೂಹಲದಿಂದ ಕಾಯುತ್ತಿರುತ್ತದೆ.

ಬಜೆಟ್ (ಮುಂಗಡ ಪತ್ರ) ಸರ್ಕಾರದ ವಾರ್ಷಿಕ ಮತ್ತು ಖರ್ಚು ವೆಚ್ಚಗಳ ಲೆಕ್ಕ ಮಾತ್ರ ಆಗಿರದೇ ದೀರ್ಘಾವಧಿ ಆರ್ಥಿಕ ನೀತಿಯ ವಾರ್ಷಿಕ ಗುರಿ ಮತ್ತು ಸಾಧನೆಗಳ ಮುನ್ನೋಟವಾಗಿರುತ್ತದೆ. ಅದು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳನ್ನು ಆಶೋತ್ತರಗಳನ್ನು ಈಡೇರಿಸುವ, ಅಭಿವೃದ್ಧಿಯ ಗತಿಯನ್ನು ನಿರ್ಧರಿಸುವ ಮತ್ತು ಸರ್ಕಾರದ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸುವ ಒಂದು ಪ್ರಮುಖ ಆರ್ಥಿಕ ಸಾಧನವಾಗಿದೆ. ಇದೆ ಕಾರಣದಿಂದ ಬಜೆಟ್ ಮಂಡನೆಯ ದಿನಾಂಕಕ್ಕಿಂತ ಮೊದಲು ತಿಂಗಳುಗಟ್ಟಲೆ ವಿವಿಧ ವಲಯಗಳಲ್ಲಿ ಚರ್ಚೆಗಳು ನಡೆಯುತ್ತವೆ.

ಮಾಧ್ಯಮಗಳಲ್ಲಿ ವರದಿಗಳು ಮತ್ತು ವಿಶ್ಲೇಷಣೆಗಳು ಪ್ರಕಟವಾಗುತ್ತವೆ. ಹಿಂದಿನ ಬಜೆಟ್ ಜಾರಿಯಲ್ಲಿ ನಡೆದಿರುವ ತಪ್ಪು ಒಪ್ಪುಗಳ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ಪ್ರಕಟಿಸಲಾಗುತ್ತದೆ. ಆರ್ಥಿಕ ತಜ್ಞರಿಂದ ಬೇರೆ ಬೇರೆ ವಲಯಗಳಿಂದ ತಜ್ಞರ ಲೇಖನಗಳು ಪ್ರಕಟವಾಗುತ್ತವೆ. ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ಅಂಶಗಳ ಬಗ್ಗೆ ಸಲಹೆಗಳೂ ಪ್ರಕಟವಾಗುತ್ತವೆ. ಇನ್ನೂ ಕೆಲವರು ಹಣಕಾಸು ಇಲಾಖೆಗೆ ನೇರವಾಗಿ ಪತ್ರ ಬರೆದು ಉಪಯುಕ್ತವೆನಿಸುವ ಸಲಹೆಗಳನ್ನು ಕೊಟ್ಟಿರುತ್ತಾರೆ. ಮತ್ತೆ ಕೆಲವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿರುತ್ತಾರೆ. ಇವೆಲ್ಲವನ್ನೂ ಗಮನಿಸಿ ಟಿಪ್ಪಣಿ ಮಾಡಿಕೊಳ್ಳಲು ಅರ್ಥ ಖಾತೆಯಲ್ಲಿ ಒಂದು ವಿಭಾಗವೇ ಇರುತ್ತದೆ. ಈ ಟಿಪ್ಪಣಿಗಳು ಬಜೆಟ್ ತಯಾರಿಸುವಾಗ ಉಪಯುಕ್ತ ಆಧಾರಗಳಾಗಿರುತ್ತವೆ.

ಅರ್ಥ ಸಚಿವರ ಚರ್ಚೆಗಳು

ಇದಲ್ಲದೆ ಒಟ್ಟಾರೆ ಸಮಾಜದ ನಾಡಿ ಮಿಡಿತಗಳನ್ನು ಅರಿಯಲು ಪ್ರತಿ ವರ್ಷ ಬಜೆಟ್ಗೆ ಪೂರ್ವಭಾವಿಯಾಗಿ ವಿತ್ತ ಮಂತ್ರಿಗಳು ಆಸಕ್ತ ವಲಯಗಳ ಪ್ರತಿನಿಧಿಗಳ ಅಥವಾ ಸಂಘಟನೆಗಳ ಆಶಯಗಳು ಮತ್ತು ಅಹವಾಲುಗಳನ್ನು ತಿಳಿದುಕೊಳ್ಳಲು ಚರ್ಚೆಗಳನ್ನು ಏರ್ಪಡಿಸುತ್ತಾರೆ. ಈ ಚರ್ಚೆಗಳಲ್ಲಿ ಅವರು ಮುಕ್ತವಾಗಿ ತಮ್ಮ ತೊಂದರೆಗಳನ್ನು ಹೇಳಿಕೊಳ್ಳುತ್ತಾರೆ ಮತ್ತು ಬಜೆಟ್ ತಮಗೆ ಯಾವ ರೀತಿ ಅನುಕೂಲ ಮಾಡಿಕೊಡಬಹುದೆಂಬುದನ್ನು ತಿಳಿಸುತ್ತಾರೆ. ಇಲಾಖೆಯ ಅಧಿಕಾರಿಗಳು ದಾಖಲಿಕೊಳ್ಳುತ್ತಾರೆ.

ರೈತರು, ಉದ್ಯಮಿಗಳು, ವ್ಯಾಪಾರಿಗಳು, ಆದಾಯ ತೆರಿಗೆದಾರರು, ಪ್ರವಾಸೋದ್ಯಮಿಗಳು, ಹೋಟೆಲ್ ಉದ್ಯಮಿಗಳು, ರಫ್ತು ಮತ್ತು ಆಮದು ವ್ಯವಹಾರಗಳಲ್ಲಿ ತೊಡಗಿರುವವರು, ಶೇರುಪೇಟೆಗಳಲ್ಲಿ ವ್ಯವಹರಿಸುವವರು. ಬ್ಯಾಂಕು ಮತ್ತು ಹಣಕಾಸು ವಲಯದಲ್ಲಿರುವವರು, ಗ್ರಾಹಕರು ಮತ್ತು ಠೇವಣಿದಾರರು ಮುಂತಾದ ಎಲ್ಲ ಆರ್ಥಿಕ ಸಾಮಾಜಿಕ ಮತ್ತು ರಾಜಕೀಯ ವಲಯಗಳ ಪ್ರತಿನಿಧಿಗಳು ಪ್ರತ್ಯೇಕವಾಗಿ ಅರ್ಥ ಸಚಿವರನ್ನು ಬೇಟಿಯಾಗಿ ತಮ್ಮ ಅಭಿಪ್ರಾಯಗಳನ್ನು ಮನವಿ ಮೂಲಕ ಸಲ್ಲಿಸುತ್ತಾರೆ. ನಮ್ಮದು ಒಕ್ಕೂಟ ವ್ಯವಸ್ಥೆಯಾಗಿರುವುದರಿಂದ ಕೇಂದ್ರ ಮತ್ತು ರಾಜ್ಯಗಳ ಹಣಕಾಸು ಸಂಬಂಧ ಸಂವಿಧಾನ ಬದ್ಧವಾಗಿರುತ್ತದೆ.

ಕೇಂದ್ರದಿಂದ ತೆರಿಗೆ ಆದಾಯದಲ್ಲಿ ಪಾಲು, ಅನುದಾನಗಳು ಮತ್ತು ವಿಶೇಷ ಅನುದಾನಗಳಲ್ಲದೆ ಕೇಂದ್ರ ಯೋಜನೆಗಳ ಅನುಷ್ಠಾನದಲ್ಲಿ ವೆಚ್ಚಗಳಲ್ಲಿ ಪಾಲು ಹೀಗೆ ಹಲವು ರೀತಿಯಲ್ಲಿ ರಾಜ್ಯಗಳು ಪಡೆಯುತ್ತಿರುತ್ತವೆ. ಆದ್ದರಿಂದ ಅರ್ಥ ಸಚಿವರು ರಾಜ್ಯ ಸರ್ಕಾರಗಳೊಡನೆಯೂ ಚರ್ಚಿಸುತ್ತಾರೆ.

ಅನೇಕ ಸಂದರ್ಭಗಳಲ್ಲಿ ಈ ಮನವಿಗಳು ಒಂದಕ್ಕೊಂದು ವಿರೋಧಾಭಾಸಗಳಿಂದ ಕೂಡಿರಲೂಬಹುದು. ಅತಿಯಾದ ನಿರೀಕ್ಷೆಗಳೂ ಇರಬಹುದು. ಬಜೆಟ್ನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗದೆ ಇರುವಂಥವುಗಳೂ ಇರಬಹುದು. ಕಾಯ್ದೆಬದ್ದ ಅಲ್ಲದಿರಬಹುದು.

ಹಣಕಾಸು ಮಂತ್ರಿಗಳು ಇವುಗಳನ್ನೆಲ್ಲ ಕ್ರೋಢೀಕರಿಸಿ ಅನವಶ್ಯಕ ಎನ್ನಿಸಿದವುಗಳನ್ನು ಬಿಟ್ಟು ತಮ್ಮ ಸರ್ಕಾರದ ನೀತಿಗೆ ಹೊಂದಿಕೊಳ್ಳುವಂಥವುಗಳನ್ನು ಪರಿಗಣಿಸಿ ಅಂದಿನ ಸ್ಥಿತಿಯಲ್ಲಿ ಜನ ಕಲ್ಯಾಣಕ್ಕೆ ಕಾಯ್ದೆ ಪ್ರಕಾರ ಉಪಯುಕ್ತವಾದವುಗಳನ್ನು ತಕ್ಕ ರೀತಿಯಲ್ಲಿ ಬಜೆಟ್ನಲ್ಲಿ ಅಳವಡಿಸಿಕೊಳ್ಳಬಹುದು. ಜನಾಭ್ರಿಪಾಯಕ್ಕೆ ಮನ್ನಣೆ ಕೊಟ್ಟಂತೆಯೂ ಆಗಿರಬೇಕು. ಸರ್ಕಾರಕ್ಕೆ ಮತ್ತು ಹಣಕಾಸು ವ್ಯವಸ್ಥೆಗೆ ಭಾರವೂ ಆಗಿರಬಾರದು.

ಈ ವ್ಯವಸ್ಥೆಯಂತೆ ಈ ಸಲವೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರದಿಂದಲೇ ಆಸಕ್ತ ವಲಯಗಳೊಡನೆ ಸಂವಾದಗಳನ್ನು ನಡೆಸುತ್ತಿದ್ದಾರೆ.

ಈಗಾಗಲೇ ರೈತರು, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೋದ್ಯಮಿಗಳೊಡನೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿಯೂ ಮುಂದುವರೆಬಹುದು.

ರೈತರು ಗೋಧಿ ನಿರ್ಯಾತದ ಮೇಲಿನ ನಿರ್ಬಂಧಗಳನ್ನು ಕಡಿಮೆ ಮಾಡಬೇಕೆಂದೂ, ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ಹೆಚ್ಚಿಸುವುದಲ್ಲದೆ ಇನ್ನಷ್ಟು ಉತ್ಪನ್ನಗಳಿಗೆ ಬೆಂಬಲ ಬೆಲೆ ಬೇಕೆಂದೂ ಮನವಿ ಸಲ್ಲಿಸಿದ್ದಾರೆ. ರಸಗೊಬ್ಬರಗಳ ಪೂರೈಕೆ ಅಡೆತಡೆ ಇಲ್ಲದೆ ಅವಶ್ಯವಿರುವ ಸಮಯದಲ್ಲಿ ಸಾಕಷ್ಟಿರಬೇಕೆಂದು ಕೇಳಿದ್ದಾರೆ.

ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ (ಸಿಐಐ) ಮನವಿಯಲ್ಲಿ
೧. ಉದ್ಯೋಗಾವಕಾಶ ಸೃಷ್ಟಿ ಆಧಾರದ ಮೇಲೆ ಉತ್ತೇಜನ ಯೋಜನೆ ಜಾರಿಗೊಳಿಸಬೇಕು. ೨. ತೆರಿಗೆ ವ್ಯಾಜ್ಯವನ್ನು ಬೇಗ ಇತ್ಯಾರ್ಥಗೊಳಿಸಬೇಕು ಮತ್ತು ವ್ಯಾಜ್ಯಗಳು ಅವಕಾಶವಾಗದಂತೆ ತೆರಿಗೆದಾರ ಸ್ನೇಹಿ ತೆರಿಗೆ ನೀತಿ ಸರಳವಾಗಿರಬೇಕು. ೩. ಕಂಪನಿಯ ಆಧಾಯ ತೆರಿಗೆ ಮಟ್ಟವನ್ನು ಈಗಿನ ಕೆಳಮಟ್ಟದಲ್ಲಿ ಎಲ್ಲ ಕಂಪನಿಗಳಿಗೂ ಅನ್ವಯವಾಗುವಂತಿರಬೇಕು. ಹೀಗೆ ಹಲವು ಸಲಹೆಗಳನ್ನು ಕೊಟ್ಟಿರುತ್ತದೆ.

ಹೊಸ ಪೆನ್ಷನ್ ಸ್ಕೀಮ್ ಗೊಂದಲ ರಾಜ್ಯ ಸರ್ಕಾರಗಳಲ್ಲಿ ಇನ್ನೂ ಇತ್ಯಾರ್ಥವಾಗದೇ ಮುಂದುವರಿಯುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ.೬೦ರಷ್ಟು ಬೇಕೆಂದೂ ಜಿಎಸ್ಟಿ ಪರಿಹಾರ ಧನವನ್ನು ಇನ್ನೈದು ವರ್ಷ ಮುಂದುವರಿಸಬೇಕೆಂದು ರಾಜ್ಯಗಳು ಕೇಳಿವೆ. ಕೇಂದ್ರದ ಸೆಸ್ ಮತ್ತು ಸರ್ಚಾರ್ಜಗಳ ಮೇಲೂ ರಾಜ್ಯಗಳ ಕಣ್ಣು ಬಿದ್ದಿದೆ. ಜಿಎಸ್‌ಟಿ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ತಮ್ಮದೇ ನಡೆಯಬೇಕೆಂದು ಯಾರು ಮನವಿ ಸಲ್ಲಿಸಿರುವುದಿಲ್ಲ. ತಮ್ಮ ಅಭಿಪ್ರಾಯಕ್ಕೂ ಸರ್ಕಾರದಲ್ಲಿ ಅವಕಾಶವಿದೆ ಎಂದು ಜನಾಭಿಪ್ರಾಯ ಗೌರವಿಸಲ್ಪಡುತ್ತದೆ ಎಂದೂ ಸಮಾಧಾನ ಪಟ್ಟುಕೊಂಡು ಸರ್ಕಾರದ ನಿರ್ಧಾರಗಳನ್ನು ಗೌರವಿಸುತ್ತಾರೆ. ಬಜೆಟ್ ಜನರಿಗೆ ಇನ್ನಷ್ಟು ಸಮೀಪವಾಗುತ್ತದೆ. ಅನುಷ್ಠಾನ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ. ತೆರಿಗೆ ಸಂಗ್ರಹ ಮತ್ತು ಯೋಜನೆಗಳ ಜಾರಿ ಇನ್ನಷ್ಟು ಉತ್ತಮಗೊಂಡು ಆಡಳಿತ ವೆಚ್ಚಗಳೂ ಕಡಿಮೆಯಾಗುವ ಸಾಧ್ಯತೆ ಇದೆ. ತಾವು ಬಜೆಟ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತೃಪ್ತಿ ಆಸಕ್ತರಿಗಿರುತ್ತದೆ.

andolana

Recent Posts

ಕಾಫಿ ಬೆಳೆಗಾರರಿಗೆ ಗುಡ್‌ನ್ಯೂಸ್‌ ನೀಡಿದ ಕೇಂದ್ರ ಸಚಿವ ಎಚ್‌ಡಿಕೆ

ಹಾಸನ/ಸಕಲೇಶಪುರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಕಾಫಿ ಬೆಳೆಗಾರರಿಗೆ ಪರಿಹಾರಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆಶ್ವಾಸನೆ ನೀಡಿದ್ದಾರೆ. ಹಾಸನ…

13 mins ago

ಬಿಜೆಪಿ ಬೆಳಗಾವಿ ಚಲೋಗೆ ಅನುಮತಿ ಕೊಡಲ್ಲ: ಸಚಿವ ಜಿ.ಪರಮೇಶ್ವರ್‌

ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…

27 mins ago

ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್‌ ಸರ್ಕಾರ ರೈತರ…

1 hour ago

ಹಾಸನಕ್ಕೆ ಎಚ್‌ಡಿಡಿ ಕುಟುಂಬ ನೀಡಿದ ಕೊಡುಗೆ ಏನೆಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ

ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ…

2 hours ago

ಫೇಕ್‌ ಎನ್‌ಕೌಂಟರ್‌: ಪ್ರಹ್ಲಾದ್‌ ಜೋಶಿ ಹೇಳಿಕೆಗೆ ಎಚ್.ಸಿ.ಮಹದೇವಪ್ಪ ತಿರುಗೇಟು

ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್‌ ಎನ್‌ಕೌಂಟರ್‌ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ…

2 hours ago

ಗ್ರೇಟರ್ ಮೈಸೂರು ಯೋಜನೆಗೆ ನವೀನ ಕಾರ್ಯತಂತ್ರ ಅಗತ್ಯ

50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…

3 hours ago