ಎಡಿಟೋರಿಯಲ್

ಮಾನವ ಕಾಡಾನೆ ಸಂಘರ್ಷಕ್ಕೆ ಕೊನೆ ಎಂದು?

ಅನಿಲ್ ಅಂತರಸಂತೆ 

ಕಾಡಾನೆಗಳ ದಾಳಿಯಿಂದ ಬೆಳೆ ಹಾನಿ, ವ್ಯಕ್ತಿಯ ಮೇಲೆ ದಾಳಿ ನಡೆಸಿ ಬಲಿ ಪಡೆದ ಕಾಡಾನೆ, ಆಸ್ತಿಪಾಸ್ತಿ ನಷ್ಟ, ಗ್ರಾಮಕ್ಕೆ ನುಗ್ಗಿ ದಾಂದಲೆ ಸೃಷ್ಟಿಸಿದ ಸಲಗ. ಇದು ಪ್ರತಿ ನಿತ್ಯ ನಾಗರಹೊಳೆ, ಬಂಡೀಪುರ ಸೇರಿದಂತೆ ಕಾಡಂಚಿನ ಭಾಗಗಳಿಂದ ಕೇಳಿಬರುವ ಮಾನವ ಮತ್ತು ಕಾಡಾನೆ ಸಂಘರ್ಷದ ಚಿತ್ರಣ.

ಕೆಲ ತಿಂಗಳ ಹಿಂದಷ್ಟೇ ಎಚ್.ಡಿ.ಕೋಟೆ ಸಮೀಪದ ಬೂದನೂರು ಗ್ರಾಮಕ್ಕೆ ಕಾಡನೆಯೊಂದು ಬೆಳಂಬೆಳಗ್ಗೆ ನುಗ್ಗಿ ದಾಂದಲೆ ಸೃಷ್ಟಿಸಿದ್ದು, ಆಗಾಗೇ ವೀರನಹೊಸಹಳ್ಳಿ ಸಮೀಪದ ಗ್ರಾಮಗಳಿಗೆ ಹಾಗೂ ಶಾಲೆಗೂ ಕಾಡಾನೆ ನುಗ್ಗಿ ಆತಂಕ ಸೃಷ್ಟಿಸಿದ್ದು, ಬಂಡೀಪುರ ವ್ಯಾಪ್ತಿಯ ನಗು, ಮೊಳೆಯೂರು, ಯಡಿಯಾಲ ಭಾಗಗಲ್ಲಿ ನಿರಂತರವಾಗಿ ದಾಳಿ ನಡೆಸಿ ರೈತರ ಬೆಳೆ ನಾಶದ ಜೊತೆಗೆ ಸಾಕಷ್ಟು ಜೀವಗಳನ್ನು ಬಲಿ ಪಡೆದಿದ್ದು ಒಂದೆಡೆಯಾದರೆ. ಅದೇ ಕಾಡನೆಗಳು ಆಹಾರ ಅರಸಿ ನಾಡಿಗೆ ಬಂದ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸಾವನ್ನಪ್ಪಿರುವುದು, ಬ್ಯಾರೀಗೇಟ್‌ಗೆ ಸಿಲುಕಿ ಹಸುನೀಗಿರುವುದು, ಟ್ರಂಚ್‌ನಲ್ಲಿ ಬಿದ್ದು ಅಂತ್ಯ ಕಂಡಿರುವ ವರದಿಗಳು ಮಾನವ ಮತ್ತು ಕಾಡಾನೆಗಳ ಸಂಘರ್ಷಕ್ಕೆ ಹಿಡಿದ ಕನ್ನಡಿಯಾಗಿದೆ.

ಸಂಕುಚಿತಗೊಳ್ಳುತ್ತಿರುವ ಕಾಡಿನಿಂದಾಗಿ ಮಾನವನೊಂದಿಗೆ ಆನೆಗಳು ಸಂಘರ್ಷಕ್ಕೆ ನಿಲ್ಲುವಂತಾಗಿದೆ. ಈ ಕಾಡಾನೆಗಳ ಚಲನವಲಗಳು, ಅವುಗಳ ಬದುಕಿನ ಕ್ರಮವನ್ನು ಸಾಕಷ್ಟು ವರ್ಷಗಳ ಅವುಗಳ ಅಧ್ಯಯನದಲ್ಲಿ ತೊಡಗಿ ಆನೆಗಳ ಸಂಚಾರದ ವಿಸ್ತೀರ್ಣವನ್ನು ಅಂದಾಜು ಮಾಡಲೆಂದು ಆನೆಗಳಿಗೆ ಕಾಲರ್‌ಗಳನ್ನು ಅಳವಡಿಸಿ ಅವುಗಳ ದಾಳಿಯ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ನಿಯಂತ್ರಿಸಲು ಪರಿಹಾರೋಪಯಗಳನ್ನು ಪಡೆಯಲು ಇಲಾಖೆ ಮತ್ತು ಸರ್ಕಾರಕ್ಕೆ ಸಂಪರ್ಕದಂತಿದ್ದವರು ಆನೆಗಳ ತಜ್ಞರಾದ ಅಜಯ್‌ ದೇಸಾಯಿರವರು. ಆದರೆ ಅವರ ನಿರ್ಗಮನ ಇಂದು ಬಹುದೊಡ್ಡ ನಷ್ಟವಾಗಿದೆ.

ಸಧ್ಯ ಸಂಘರ್ಷವನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ನಾನಾ ಪ್ರಯತ್ನಗಳನ್ನು ಮಾಡಿದರು ಸಹ ಶಾಶ್ವತವಾಗಿ ಸಂಘರ್ಷ ತಪ್ಪಿಸಲು ಸಾಧ್ಯವಾಗಿಲ್ಲ. ವರ್ಷಕ್ಕೆ ಸುಮಾರು ೪೦೦-೧,೨೦೦ಚ.ಕಿ.ಮೀ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಸಂಚರಿಸುತ್ತಾ ಬದುಕುವ ಆನೆಗಳಿಗೆ ಕಾಡಿನಿಂದ ಕಾಡಿಗೆ ಸಂಪರ್ಕ ಬಲವಾಗಿದ್ದರೆ ಮಾತ್ರ ಸಂಘರ್ಷದಂತಹ ಸಮಸ್ಯೆಗಳು ತಪ್ಪುತ್ತಿದ್ದವು ಎಂಬುದು ತಜ್ಞರ ವಾದ.

ಆನೆಗಳನ್ನು ಕಾಡಿನಿಲ್ಲೆ ತಡೆಯಲು ಸರ್ಕಾರ ಕೋಟ್ಯಾಂತರ ರೂ. ವೆಚ್ಚಿಸುತ್ತಿದ್ದು, ಆನೆಗಳನ್ನು ತಡಗಟ್ಟದೆ ಪರ್ಯಾಯ  ಮಾರ್ಗವೇ ಇಲ್ಲ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ಕಾಲುವೆಯಂತಹ ಗುಂಡಿಗಳು. ೯೦ರ ದಶಕದಲ್ಲಿ ಆರಂಭವಾದ ಈ ಟ್ರಂಚ್‌ಗಳ ನಿರ್ಮಾಣ ಆನೆಗಳು ದಾಟಲಾರದಂತೆ ೨ ಮೀ ಆಳವುಳ್ಳ ಹಳ್ಳಗಳನ್ನು ತೆಗೆಯಲಾಯಿತು. ಆದರೆ ಕ್ರಮೇಣ ನಿರ್ವಹಣೆಯಿಲ್ಲದೆ ಆ ಟ್ರಂಚ್‌ಗಳು ಕುಸಿತಕೊಂಡ ಕಾರಣ ಆನೆಗಳು ಸುಲಭವಾಗಿ ದಾಟಿ ನಾಡಿನತ್ತ ಬರಲು ಆರಂಭಿಸಿದವು. ವಿಪರ್ಯಾಸ ಕೆಲಬಾರಿ ಟ್ರಂಚ್‌ನಲ್ಲಿ ಸಿಲುಕಿ ಆನೆಗಳು ಪ್ರಾಣ ಕಳೆದುಕೊಂಡ ವರದಿಗಳು ಸಾಕಷ್ಟಿವೆ. ಇದಾದ ಬಳಿಕ ಇತ್ತೀಚಿಗೆ ಅರಣ್ಯ ಇಲಾಖೆ ೨ ಮೀ ಆಳದ ಟ್ರಂಚ್‌ಗಳನ್ನು ಕೊಂಚ ವಿಸ್ತರಿಸಿ ೩ ಮೀ ಮಾಡಿದರೂ, ಕಲ್ಲಿನಂತಹ ಭೂರಚನೆ ಇರುವ ಪ್ರದೇಶಗಳಲ್ಲಿ ಇವುಗಳು ಯಶಸ್ವಿಯಾದರೆ ಮಣ್ಣಿನ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಮಣ್ಣು ಕುಸಿದ ಟ್ರಂಚ್‌ಗಳು ಮುಚ್ಚಿ ಹೋಗುತ್ತಿವೆ.

ಸೋಲಾರ್ ತಂತಿಬೇಲಿ ಅಳವಡಿಕೆ: ಟ್ರಂಚ್‌ನ ನಂತರ ಅರಣ್ಯ ಇಲಾಖೆ ಸೋಲಾರ್ ವಿದ್ಯುತ್ ತಂತಿ ಬೇಲಿಗಳನ್ನು ನಿರ್ಮಾಣ ಮಾಡಲು ಮುಂದಾಯಿತು. ೨೦೦೮-೦೯ರ ಅವಧಿಯಲ್ಲಿ ಆರಂಭವಾದ ಈ ಯೋಜನೆ ಕೆಲ ವರ್ಷಗಳು ಯಶಸ್ವಿಯಾದರೂ, ಬುದ್ಧಿವಂತೆ ಆನೆ ಸಂಸತಿ ಅವುಗಳನ್ನು ಮುರಿದು ಹೊರಬರಲು ಆರಂಭಿಸಿದವು. ತಮ್ಮ ದಂತ ಹಾಗೂ ಕಾಲಿನ ತುದಿಯಿಂದ ಬೇಲಿಯನ್ನು ತಗ್ಗಿಸುವ ಅಲ್ಲದೇ ಮರದ ದಿಮ್ಮಿಗಳ ಸಹಾಯದಿಂದ ಸೋಲಾರ್ ಮುರಿದು ಹಾಕಿ ಹೊರಬರಲಾರಂಭಿಸಿದವು. ೧ಕಿಮೀ ಗೆ ಸುಮಾರು ೬ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಈ ಸೋಲಾರ್ ಬೇಲಿಯೂ ಆನೆಗಳ ತಡೆಗೆ ಎಲ್ಲ ಭಾಗದಲ್ಲಿಯೂ ಯಶಸ್ವಿಯಾಗದಿದ್ದರೂ ಕೆಲವು ಸ್ಥಳಗಳಲ್ಲಿ ಯಶಸ್ವಿಯಾಗುತ್ತದೆ ಎಂಬುದು ಕೆಲ ಅಧಿಕಾರಿಗಳ ಮಾತಾಗಿದೆ.

ರೈಲ್ವೆ ಕಂಬಿ ಬ್ಯಾರಿಗೇಟ್ಸ್ ಅಳವಡಿಕೆ: ಇದಾದ ಬಳಿಕ ಮತ್ತಷ್ಟು ಕೋಟಿ ರೂ. ಮೀಸಲಿಟ್ಟ ಇಲಾಖೆ ಆನೆಗಳ ತಡೆಗೆ ಕಾಡಿನ ಸುತ್ತ ನೂರಾರು ಕಿಮೀ ನಷ್ಟು ರೈಲ್ವೆ ಕಂಬಿ ಬ್ಯಾರಿಗೇಟ್‌ಗಳನ್ನು ಅಳವಡಿಸಲು ಆರಂಭಿಸಿತು. ೨೦೧೪-೧೫ರಲ್ಲಿ ಆರಂಭವಾದ ಈ ಯೋಜನೆಗೆ ೨೦೧೬ರ ರಾಜ್ಯ ಬಜೆಟ್‌ನಲಗಲಿಯೂ ಸಹ ೧೦೦ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ ರೈಲ್ವೆ ಕಂಬಿ ಬ್ಯಾರೀಗೇಟ್‌ಗಳು ಅಳವಡಿಕೆ ಆರಂಭವಾಯಿತು. ಈ ಕಂಬಿಗಳು ಒಂದಿಷ್ಟು ಕಡೆ ಆನೆಗಳ ಹೊರಬರದಂತೆ ತಡೆುುಂವಲ್ಲಿ ಯಶಸ್ವಿಯಾಗಿ ದಶಕಗಳಿಂದ ಆನೆಗಳ ಉಪಟಳವಿದ್ದ ಸ್ಥಳಗಳಲ್ಲಿ ಇವುಗಳ ಸಮಸ್ಯೆ ತಗ್ಗಿತಾದರೂ ಒತ್ತಡಕ್ಕೆ ಸಿಲುಕಿದ ಆನೆಗಳು ಬ್ಯಾರಿಗೇಟ್ಸ್ ಸಡಿಲವಿರುವ ಸ್ಥಳಗಳಲ್ಲಿ ಒಮ್ಮೆಲೆ ಹೊರಬರಲಾರಂಭಿಸಿದವು. ಅದರೊಂದಿಗೆ ಕಾಡಿನ ದೈತ್ಯ ಜೀವಿಯ ಶಕ್ತಿಯ ಮುಂದೆ ಈ ರೈಲ್ವೆ ಕಂಬಿ ಬ್ಯಾರಿಗೇಟ್ಸ್‌ಗಳು ಸಹ ಮುರಿದುಹೋದವು. ಕಂಬಿಗಳನ್ನು ಗುದ್ದಿ ಮುರಿದು ಹಾಕಿ ಇಲ್ಲವೆ ಕಂಬಿಗಳ ನಡುವಿನಿಂದ ನುಸುಳುವ ಮೂಲಕ ಆನೆಗಳು ಹೊರಬಂದಿರುವ ಉದಾಹರಣೆಗಳಿವೆ. ಈ ವೇಳೆ ಸಾಕಷ್ಟು ಆನೆಗಳು ಸಹ ತಮ್ಮ ಜೀವವನ್ನೇ ಕಳೆದುಕೊಂಡಿರುವ ವರದಿಗಳು ಸಾಕಷ್ಟಿವೆ. ಇಂತಹ ರೈಲ್ವೆ ಕಂಬಿ ಬ್ಯಾರಿಗೇಟ್ಸ್‌ಗಳನ್ನು ಕರ್ನಾಟಕದಲ್ಲಿ ಸುಮಾರು ೬,೦೦೦ ಕಿ.ಮೀ.ನಷ್ಟು ನಿರ್ಮಾಣ ಮಾಡಲು  ಅರಣ್ಯ ಇಲಾಖೆ ಮುಂದಾಗಿದ್ದು, ಇದರ ವೆಚ್ಚ ಪ್ರತಿ ಕಿಮೀಗೆ ಸುಮಾರು ೧.೬೫ ಲಕ್ಷ ರೂ. ವೆಚ್ಚ ತಗುಲುವುದರಿಂದ ಹಂತ ಹಂತವಾಗಿ ಯೋಜನೆ ಜಾರಿಯಾಗುತ್ತಿದೆ.

ವೈಯರ್ ರೋಪ್ ಬ್ಯಾರಿಗೇಟ್ಸ್ ಪ್ರಾಯೋಗಿಕವಾಗಿ  ಅಳವಡಿಕೆ: ಸದ್ಯ ಈಗ ಸಾಕಷ್ಟು ಕಡೆ ರೈಲ್ವೆ ಕಂಬಿ ಬ್ಯಾರಿಗೇಟ್‌ಗಳು ಕೊಂಚ ಸಫಲತೆ ಕಾಣುವಲ್ಲಿ ಯಶಸ್ವಿಯಾಗದಿದ್ದರೂ ಅದರ ಬದಲಿಗೆ ವೆಚ್ಚ ತಗ್ಗಿಸುವ ಹಾಗೂ ಅಧಿಕ ಫಲಿತಾಂಶ ಕಾಣುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ತಮಿಳುನಾಡು  ಮಾದರಿಯ ವೈಯರ್ ರೋಪ್ ಬ್ಯಾರೀಗೇಟ್‌ಗಳನ್ನು ಅಳವಡಿಸುವ ಬಗ್ಗೆ ಯೋಜಿಸುತ್ತಿದೆ. ಈಗಾಗಲೇ ನಾಗರಹೊಳೆಯ ವೀರನಹೊಸಹಳ್ಳಿ ಬಳಿ ಪ್ರಾಯೋಗಿಕವಾಗಿ ಸುಮಾರು ೪.೫ ಕಿ.ಮೀ ಅಳವಡಿಸಲಾಗಿದೆ. ಇದರ ವೆಚ್ಚವು ಸಹ ಕಿಮಿಗೆ ಸುಮಾರು ೬೦-೭೦ ಲಕ್ಷ ರೂ. ತಗುಲುತ್ತಿದ್ದು, ರೈಲ್ವೆ ಕಂಬಿ ಬ್ಯಾರೀಗೇಟ್‌ಗಿಂತ ಕಡಿಮೆ ವೆಚ್ಚವಿರುವುದರಿಂದ ಯಶಸ್ವಿಯಾದರೆ ಈ ವೈಯರ್ ರೋಪ್ ಬ್ಯಾರಿಗೇಟ್‌ಗಳನ್ನೇ ಅಳವಡಿಸುವ ಬಗ್ಗೆ ಅರಣ್ಯ ಇಲಾಖೆಯಲ್ಲಿ ಚಿಂತನೆ ವ್ಯಕ್ತವಾಗಿದೆ. ಇದರೊಂದಿಗೆ ಟೆಂಕ್ಟಿಕಲ್ ಬ್ಯಾರಿಗೇಟ್ಸ್‌ಗಳನ್ನು ಸಹ  ಪ್ರಾಯೋಗಿಕವಾಗಿ ಅಳವಡಿಸಿ ಪರೀಕ್ಷೆ ನಡೆಸುತ್ತಿದೆ.
ಎಲಿಫೆಂಟ್ ಕಾರಿಡಾರ್ ನಿರ್ಮಾಣ ತಜ್ಞರ ಸಲಹೆ: ನೀಲಗಿರಿ ಜೈವಿಕ ವಲಯದಿಂದ ಬಂಡೀಪುರ-ನಾಗರಹೊಳೆ-ಶಿವಮೊಗ್ಗ-ಭದ್ರದ ಮೂಲಕ ಉತ್ತರ ಕರ್ನಾಟಕದ ಕಾಡುಗಳವರೆಗೂ ಸಂಪರ್ಕದಲ್ಲಿದ್ದ ಕಾಡುಗಳು ಕ್ರಮೇಣ ತಮ್ಮ ನಡುವಿನ ಸಂಪರ್ಕಕೊಂಡಿ ಕಳೆದುಕೊಂಡವು. ಈ ವೇಳೆ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುವ ಆನೆಗಳಿಗೆ ಮಾನವನೊಂದಿಗೆ ಸಂಘರ್ಷಕ್ಕೆ ಅನಿವಾರ್ಯವಾಗಿತ್ತು. ಈ ಸಂಘರ್ಷ ತಪ್ಪಿಸಲು ಸರ್ಕಾರ ಆನೆಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಇದಕ್ಕಾಗಿ ಎಲಿಫೆಂಟ್ ಕಾರಿಡಾರ್‌ಗಳು ನಿರ್ಮಾಣವಾಗಬೇಕು ಎಂಬುದು ತಜ್ಞರ ಸಲಹೆಯಾಗಿದೆ. ಆದರೆ ಅವುಗಳ ನಿರ್ಮಾಣಕ್ಕೆ ಎಷ್ಟು ಸವಾಲುಗಳು ಎದುರಾಗಿದ್ದು, ನಿರ್ಮಾಣ ಸದ್ಯಕ್ಕೆ ದೂರಾದ ಮಾತಾಗಿದೆ.
ಇದರ ಮಧ್ಯೆದಲ್ಲೇ ಕಾಡಂಚಿನಲ್ಲಿ ನಿರಂತರ ಆನೆಗಳ ದಾಳಿ ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರು ರೈಲ್ವೆಕಂಬಿ ಬ್ಯಾರೀಗೇಟ್‌ನ ವೆಚ್ಚದಲ್ಲಿ ಆನೆಗಳು ಹೆಚ್ಚಾಗಿ ದಾಟುವ ಸ್ಥಳಗಳಲ್ಲಿ ಬಲವಾಗಿ ಸಿಮೆಂಟ್ ಮತ್ತು ಕಲ್ಲಿನಿಂದ ಗೋಡೆಗಳನ್ನು  ನಿರ್ಮಾಣ ಮಾಡಬಹುದು ಎಂಬ ಬೇಡಿಕೆಯನ್ನು ವ್ಯಕ್ತ ಪಡಿಸಿದ್ದಾರೆ.
ಒಟ್ಟಾರೆ ಯಾವುದೇ ಒಂದು ಜೀವಿಯ ಸಂರಕ್ಷಣೆಯಾಗಲಿ ಅವುಗಳಿಂದ ಸಮಸ್ಯೆಯನ್ನು ತಗ್ಗಿಸಲು ಅವುಗಳ ಸ್ವಾಭಾವವನ್ನು ಅರಿತಾಗಲೇ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಭಾರತೀಯ ವನ್ಯಜೀವಿ ಪ್ರಾಣಿ ಸಂರಕ್ಷಣಾ ತಜ್ಞರಾದ ಅಜ್ಯ್‌ ದೇಸಾಯರನ್ನು ಮರೆಯುವಂತಿಲ್ಲ. ಕಾಡಾನೆಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡು ಅವುಗಳ ಬದುಕನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆನೆಗಳು ಎದುರಿಸುತ್ತಿರುವ ಇಂತಹ ನೂರಾರು ಸಮಸ್ಯೆಗಳನ್ನು ಪರಿಹಾರಿಸಲು ಸರ್ಕಾರ ತೆಗೆದುಕೊಳ್ಳಬೇಕಾದ ಪರಿಹಾರೋಪಾಯ ಮಾರ್ಗಗಳಿಗೆ ಅವರ ಸಲಹೆ ಇಲ್ಲದೆ. ಇಂದು ಆನೆಗಳ ಸಂರಕ್ಷಣೆ ಸವಾಲಿನ ಕೆಲಸವಾಗಿದೆ.
ಸದ್ಯ ಈಗ ಆನೆಗಳ ಸಂಘರ್ಷ ತಪ್ಪಿಸಲು ಬಸವರಾಜ  ಬೊಮ್ಮಾಯಿರವರ  ನೇತೃತ್ವದ ಸರ್ಕಾರ ಆನೆ ಟಾಸ್ಕ್ ಫೋರ್ಸ್ ರಚಿಸಿದೆ. ಸದ್ಯ ಈಗಾಗಲೇ ಸಾಕಷ್ಟು ಕಡೆ ಈ ಟಾಸ್ಕ್ ಪೋರ್ಸ್‌ಗಳು ಕಾರ್ಯ ಆರಂಭಿಸಿದ್ದು, ಎಷ್ಟರ ಮಟ್ಟಿಗೆ ಸಫಲತೆ ಕಾಣಲಿದೆ ಎಂಬುದನ್ನು ಕಾದುನೋಡಬೇಕಿದೆ.

andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

6 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

6 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

7 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

7 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

7 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

7 hours ago