ಗೌತಮ್ ಮೌರ್ಯ,
ಎನ್‌ಎಸ್‌ಯುಐ, ಮೈಸೂರು ಜಿಲ್ಲಾ ಉಪಾಧ್ಯಕ್ಷ .
ಇತ್ತೀಚೆಗೆ ಸರ್ಕಾರದಿಂದ ರೂಪಿತಗೊಳ್ಳುತ್ತಿರುವ ಸಾಕಷ್ಟು ಯೋಜನೆಗಳು ಜನರ ಬದುಕು ಕಟ್ಟಿಕೊಡುವ ಬದಲು ಸಂಕಷ್ಟಕ್ಕೆ ದೂಡುತ್ತಿವೆ. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯನ್ನು ಏರಿಸಿ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುವ ಸರ್ಕಾರ ಇದೀಗ ವಿದ್ಯಾರ್ಥಿ-ಗಳನ್ನೂ ಶಿಕ್ಷಣದಿಂದ ವಂಚಿಸಲು ಮುಂದಾಗಿದೆ ಎನಿಸುತ್ತದೆ.
ಸರ್ಕಾರ ೨೦೨೨-೨೩ನೇ ಸಾಲಿನ ೧ರಿಂದ ೮ನೇ ತರಗತಿವರೆಗಿನ ಪ.ಜಾತಿ ಮತ್ತು ಪ.ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳ ವೇತನವನ್ನು ರದ್ದುಮಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಸರ್ಕಾರಕ್ಕೆ ವಿದ್ಯಾರ್ಥಿಗಳ ವೇತನವನ್ನು ನಿಲ್ಲಿಸುವ ಪ್ರಮೇಯವಾದರೂ ಏನಿದೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ರಾಜ್ಯ ಸರ್ಕಾರ ಸರ್ವಾಽಕಾರಿ ಧೋರಣೆಯಿಂದ ಬಡವರ ಪರವಾಗಿದ್ದ ಯೋಜನೆಗಳೆಲ್ಲವನ್ನ್ನೂ ನಿಲ್ಲಿಸಲು ಮುಂದಾಗುತ್ತಿದೆ. ಇದೇ ಹಾದಿಯಲ್ಲಿ ಈಗ ವಿದ್ಯಾರ್ಥಿ ವೇತನವನ್ನೂ ಸ್ಥಗಿತಗೊಳಿಸಿದ್ದು, ಬಡ ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಗ್ರಾಮೀಣ ಮಕ್ಕಳು ಆರ್ಥಿಕವಾಗಿ ಹಿಂದುಳಿದಿರುವುದರಿಂದ ವಿದ್ಯಾರ್ಥಿ ವೇತನವನ್ನೇ ನಂಬಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅದಕ್ಕೇ ಕತ್ತರಿ ಹಾಕಿರುವ ಸರ್ಕಾರಕ್ಕೆ ಹಳ್ಳಿಗಾಡಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿದ್ಯಾರ್ಥಿವೇತನವೇ ಆರ್ಥಿಕ ಬೆನ್ನೆಲುಬು ಎಂಬುದು ತಿಳಿದಿಲ್ಲವೇ? ಬಡಮಕ್ಕಳು ಮೂಲ ಸೌಕರ್ಯಗಳನ್ನು ಕಂಡುಕೊಳ್ಳಲು ವಿದ್ಯಾರ್ಥಿ ವೇತನ ಆಸರೆ ಎಂಬುದರ ಅರಿವಿಲ್ಲವೇ? ಅವರ ಭವಿಷ್ಯಕ್ಕೆ ಸಹಾಯಕ ಎಂಬುದು ಸರ್ಕಾರದ ಗಮನದಲ್ಲಿಲ್ಲ್ಲವೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.
ಅಷ್ಟಕ್ಕೂ ಸರ್ಕಾರ ಪ.ಜಾತಿ, ಪ.ಪಂಗಡಗಳ ವಿದ್ಯಾರ್ಥಿಗಳ ವೇತನ ನಿಲ್ಲಿಸುವುದರ ಉದ್ದೇಶವಾದರೂ ಏನು? ಈ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದು, ಮುಖ್ಯವಾಹಿನಿಗೆ ಬರುವುದನ್ನು ತಡೆಯಲು ಸರ್ಕಾರ ಹೀಗೆ ಮಾಡಿರಬಹುದೇ? ಜೊತೆಗೆ ಹಿಂದುಳಿದ ಸಮುದಾಯಗಳ ಮಕ್ಕಳನ್ನು ಆರ್ಥಿಕವಾಗಿ ದುರ್ಬಲರನ್ನಾಗಿಸುವ, ಆರ್ಥಿಕ ಕೊರತೆ ಉಂಟಾಗಿ ಶಿಕ್ಷಣದಿಂದ ಮಕ್ಕಳು ದೂರ ಉಳಿಯುವಂತೆ ಮಾಡುವ ಉದ್ದೇಶ ಸರ್ಕಾರದ್ದೇ ಎನ್ನುವ ಅನುಮಾನಗಳನ್ನು ಸೃಷ್ಟಿಸಿದೆ.
ಹೌದು..! ಸರ್ಕಾರ ಈ ರೀತಿಯ ನಡೆ ಅನುಸರಿಸಿದಾಗಲೆಲ್ಲ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟ ಎದುರಿಸಿ ಶಿಕ್ಷಣ ಬಿಟ್ಟು ದುಡಿಮೆಯ ಹಾದಿ ಹಿಡಿಯುತ್ತಾರೆ. ಈ ಬೆಳವಣಿಗೆ ಮಕ್ಕಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಕುಗ್ಗುವಂತೆ ಮಾಡುತ್ತದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸರ್ಕಾರಗಳು ಮಕ್ಕಳಿಗೆ ಆರಂಭಿಕ ಹಂತದಲ್ಲೇ ಉಚಿತ ಶಿಕ್ಷಣ, ಹೆಚ್ಚಿನ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಬೇಕಿತ್ತು. ಆದರೆ ಈಗಿನ ಸರ್ಕಾರ ಮಕ್ಕಳ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿ, ಅವರನ್ನು ಶಾಲೆ ಬಿಡಿಸುವ ಪ್ರಯತ್ನಕ್ಕೆ ಮುಂದಾಗಿದೆ.
ಪ್ರಸ್ತುತ ಸರ್ಕಾರ ತನ್ನ ದುರಾಡಳಿತವನ್ನು ಮರೆಮಾಚಲು ಧರ್ಮಗಳ ನಡುವೆ ಭಿನ್ನ್ನಾಭಿಪ್ರಾಯ ಮೂಡಿಸುವುದು, ಗಡಿ ವಿವಾದ ಸೃಷ್ಟಿಸುವುದು, ಗುಂಬಜ್‌ವಿವಾದ, ಟಿಪ್ಪು ಹೆಸರಿನ ಬದಲಾವಣೆ ಇಂತಹ ಕೆಲಸಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಶಿಕ್ಷಣ, ಆರೋಗ್ಯ, ನಾಗರಿಕ ಸೇವೆಗಳಿಗೆ ಆದತೆ ನೀಡಬೇಕಾದ ಸರ್ಕಾರ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಹಾದಿ ಹಿಡಿಯುತ್ತಿದೆಯೇ ಎನಿಸುತ್ತದೆ. ರಾಜ್ಯ ಸರ್ಕಾರ ಇನ್ನಾದರೂ ಬಡವರು, ರೈತರು, ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿಗಳ ಪರವಾಗಿ ಯೋಜನೆಗಳನ್ನು ರೂಪಿಸುವಂತಾಗಲಿ.
ಮಡಿಕೇರಿ: ಪಾಂಡಂಡ ಕುಟ್ಟಪ್ಪ ಅವರ ಕನಸಿನ ಕೂಸಾದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಬೆಳ್ಳಿ ಮಹೋತ್ಸವವನ್ನು ಆಚರಿಸಿಕೊಂಡ ಹಿನ್ನೆಲೆಯಲ್ಲಿ ಕೊಡವ…
ಗಿರೀಶ್ ಹುಣಸೂರು ೨೦೨೫ನೇ ಸಾಲಿನಲ್ಲಿ ದೇಶ, ರಾಜ್ಯದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಭಾರತ ಮೂಲದ ಶುಭಾಂಶು ಶುಕ್ಲಾ ಬಾಹ್ಯಾಕಾಶದಲ್ಲಿ ೧೮…
ಕೆ.ಬಿ.ರಮೇಶನಾಯಕ ಮೈಸೂರು: ಮಾನವ-ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಸಫಾರಿಗೆ ನಿರ್ಬಂಧ ವಿಧಿಸಿರುವುದರ ನಡುವೆಯೂ ಕ್ರಿಸ್ಮಸ್,…
ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…
ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…
ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…