ಎಡಿಟೋರಿಯಲ್

ಹೊಸ ಯೋಜನೆಗಳಿಗೆ ದುಡ್ಡೆಷ್ಟು ಉಳಿಯುವುದು?

 

ಪ್ರೊ.ಆರ್.ಎಂ.ಚಿಂತಾಮಣಿ

   ಕೇಂದ್ರ ಅರ್ಥ ಸಚಿವರು ಫೆ.01ರಂದು ಮಂಡಿಸಿದ 2023-24ನೇ ವರ್ಷದ ಮುಂಗಡ ಪತ್ರದಲ್ಲಿ ಬಂಡವಾಳ ವೆಚ್ಚವನ್ನು 10,00,961 ಕೋಟಿ ರೂಎಂದು ನಿಗದಿ ಮಾಡಿದ್ದಾರೆಇದು ಈವರೆಗಿನ ಅತಿ ದೊಡ್ಡ ಮೊತ್ತವಾಗಿದೆಹಾಲಿ ವರ್ಷದ (2022-23ಪರಿಷ್ಕ ತ ಅಂದಾಜಿಗಿಂತ 2,27,687 ಕೋಟಿ ರೂಹೆಚ್ಚಾಗಿದ್ದು, 2021-22ರ ಪ್ರತ್ಯಕ್ಷ (ACTUALSಬಂಡವಾಳ ವೆಚ್ಚಗಳಿಗಿಂತ 4,08,087 ಕೋಟಿ ರೂ.ಗಳಷ್ಟು ಏರಿಕೆಯಾಗಿದೆಆದ್ದರಿಂದ ಇದನ್ನು ‘ಹೂಡಿಕೆ ಬಜೆಟ್’ ಎಂದೇ ಬಿಂಬಿಸಲಾಗುತ್ತಿದ್ದುಆಸಕ್ತ ವಲಯಗಳಲ್ಲಿ ಹಲವಾರು ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಿವೆಹೊಸ ಯೋಜನೆಗಳ ಕನಸು ಕಾಣಲಾಗುತ್ತಿದೆ.

ಇದಲ್ಲದೆ ರಾಜ್ಯ ಸರ್ಕಾರಗಳಿಗೆ ಉಪಯುಕ್ತ ಮತ್ತು ಉತ್ಪಾದಕ ಆಸ್ತಿಗಳ ನಿರ್ಮಾಣಕ್ಕಾಗಿ 3,69,988 ಕೋಟಿ ರೂಅನುದಾನ ಒದಗಿಸುವ ಘೋಷಣೆಯೂ ಬಜೆಟ್‌ನಲ್ಲಿದೆಇಷ್ಟೊಂದು ದೊಡ್ಡ ಬಂಡವಾಳದೊಂದಿಗೆ ‘ಇನ್‌ಫ್ರಾಸ್ಟ್ರಕ್ಚರ್ ಪೈಪ್‌ಲೈನ್’ನಲ್ಲಿನ ಯೋಜನೆಗಳೊಂದಿಗೆ ಇತರ ಎಲ್ಲ ರಂಗಗಳಲ್ಲಿಯೂ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಎನ್ನಲಾಗಿದೆಇದರಿಂದ ಉದ್ಯೋಗಾವಕಾಶಗಳು ಹೆಚ್ಚುವುದಲ್ಲದೆಆರ್ಥಿಕ ಬೆಳವಣಿಗೆಯ ಗತಿ ಇನ್ನೂ ತೀವ್ರಗೊಳ್ಳಲಿದೆ ಎಂದು ನಂಬಲಾಗಿದೆಇದೆಲ್ಲವೂ ಅಂದುಕೊಂಡಂತೆ ನಡೆಯುವುದು ಮತ್ತು ಎಲ್ಲ ಹಂತಗಳಲ್ಲೂ ಪ್ರಾಮಾಣಿಕ ಸಮಯಬದ್ಧ ಕಾರ್ಯನಿರ್ವಹಣೆ ಇಲ್ಲಿ ಮುಖ್ಯವಾಗುತ್ತದೆ.

ವಿಳಂಬ ಅನುಷ್ಠಾನದಿಂದ ವೆಚ್ಚಗಳ ಹೆಚ್ಚಳ

ಕಳೆದ ವಾರ ಕೇಂದ್ರ ಅಂಕಿಸಂಖ್ಯಾ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯವು (Ministry of statistics and propramme implemenationನಿಧಾನ ಗತಿಯಲ್ಲಿ ನಡೆಯುತ್ತಿರುವ ಯೋಜನೆಗಳ ವಿವರಗಳನ್ನು ಪ್ರಕಟಿಸಿದೆಸಾಮಾನ್ಯವಾಗಿ 150 ಕೋಟಿ ರೂಮೌಲ್ಯದ ಮತ್ತು ಅದಕ್ಕಿಂತ ಹೆಚ್ಚು ಮೌಲ್ಯದ ಯೋಜನೆಗಳನ್ನು ಸ್ವತಃ ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ.

ಅಧಿಕೃತ ವರದಿಗಳ ಪ್ರಕಾರ ಫೆಬ್ರವರಿ ಕೊನೆಯ ಹೊತ್ತಿಗೆ 20.380 ಲಕ್ಷ ಕೋಟಿ ರೂಮೂಲ ಅಂದಾಜು ವೆಚ್ಚಗಳ 1423 ಯೋಜನೆಗಳು ಮುಂದುವರಿಯುತ್ತಿವೆಇವುಗಳ ಇಂದಿನ ಪರಿಷ್ಕೃತ ಅಂದಾಜು ವೆಚ್ಚ ಒಟ್ಟು 24..85 ಲಕ್ಷ ಕೋಟಿ ರೂಅಂದರೆ ಮೂಲ ಅಂದಾಜುಗಳಿಂತ ಈಗಲೇ 4.47 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಾಗಿದೆಶೇ.20ಕ್ಕಿಂತ ಹೆಚ್ಚು ಏರಿಕೆಜನವರಿ ಕೊನೆಯವರೆಗೆ 2022-23 ರಲ್ಲಿಯೇ 1.68 ಲಕ್ಷ ಕೋಟಿ ರೂಮೌಲ್ಯದ 199 ಹೊಸ ಯೋಜನೆಗಳನ್ನು ಇವುಗಳಿಗೆ ಸೇರಿಸಲಾಗಿದೆ.

ಮುಂದುವರಿಯುತ್ತಿರುವ ಯೋಜನೆಗಳಿಗಾಗಿ ಸರ್ಕಾರವು ಫೆಬ್ರವರಿವರೆಗೆ 13.63 ಲಕ್ಷ ಕೋಟಿ ರೂಖರ್ಚು ಮಾಡಿದೆಇವುಗಳನ್ನು ಪೂರ್ಣಗೊಳಿಸಲು ಇಂದಿನ ಪರಿಷ್ಕ ತ ಅಂದಾಜಿನಂತೆ ಇನ್ನೂ 11.22 ಲಕ್ಷ ಕೋಟಿ ರೂಖರ್ಚು ಮಾಡಬೇಕಾಗಬಹುದುಇಂದಿನ ಬೆಲೆಗಳಿದ್ದಾಗಲೇ ಪೂರ್ಣಗೊಂಡರೆ ಮಾತ್ರ ಈ ಸ್ಥಿತಿವಿಳಂಬವಾಗುವುದಾದರೆ ಖರ್ಚುಗಳು ಇನ್ನೂ ಹೆಚ್ಚಾಗಬಹುದುಹೆಚ್ಚು ತಡವಾದಷ್ಟು ವೆಚ್ಚಗಳು ಇನ್ನೂ ಹೆಚ್ಚು. 2023-24ರ ಬಜೆಟ್ ಅಂದಾಜಿನಲ್ಲಿ ವರ್ಷದಲ್ಲಿ ಪೂರ್ಣಗೊಳ್ಳುವ ಮತ್ತು ಮುಂದುವರಿಯುವ ಯೋಜನೆಗಳಿಗೆ ವಾರ್ಷಿಕ ವೆಚ್ಚಗಳಿಗಾಗಿ ಹಣ ಒದಗಿಸಿದ ನಂತರ ಉಳಿದುದರಲ್ಲಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆತಡವಾಗುವುದೆಂದರೇನು?

ಯಾವುದೇ ಯೋಜನೆಯನ್ನು ರೂಪಿಸುವಾಗ ಅವಶ್ಯವಿರುವ ಹಣಕಾಸುಭೌತಿಕ ಮತ್ತು ಬೌದ್ಧಿಕ ಸಂಪನ್ಮೂಲಗಳು ಮತ್ತು ಅವುಗಳ ಲಭ್ಯತೆಗಳನ್ನು ಕೂಲಂಕಷವಾಗಿ ದಾಖಲಿಸಿ ಒಟ್ಟು ವೆಚ್ಚ ಮತ್ತು ಪೂರ್ಣಗೊಂಡು ಉಪಯೋಗಕ್ಕೆ ಲಭ್ಯವಾಗುವ ಸಮಯವನ್ನು ನಿಗದಿಪಡಿಸಿ ಕಾರ್ಯಯೋಜನೆಯನ್ನು ರಚಿಸಲಾಗುವುದುಈ ಸಮಯವನ್ನೇ ‘ಸೆಡ್ಯೂಲ್ಡ್ ಟೈಮ್’ ಎನ್ನಲಾಗುವುದುಈ ಸಮಯದಲ್ಲಿ ಯೋಜನೆ ಪೂರ್ಣಗೊಂಡರೆ ವೆಚ್ಚದಲ್ಲಿ ದೊಡ್ಡ ಏರುಪೇರಾಗುವುದಿಲ್ಲವಿಳಂಬವಾದರೆ ಹಣದುಬ್ಬರದ ಪರಿಣಾಮ ಮತ್ತು ಸಂಪನ್ಮೂಲ ಲಭ್ಯತೆಯಲ್ಲಿ ತೊಂದರೆಗಳುಂಟಾಗಿ ಹೆಚ್ಚಾಗಬಹುದುಸಮಯಕ್ಕೆ ಸರಿಯಾಗಿ ಈ ಆಸ್ತಿ ಅಥವಾ ಸೇವೆ ಲಭ್ಯವಾಗದೆ ಇದ್ದುದರಿಂದ ಇನ್ನೊಂದು ರೀತಿಯಲ್ಲಿ ತೊಂದರೆಯಾಗುತ್ತದೆ.

ಈಗ ವಿಳಂಬವಾಗಿ ನಡೆಯುತ್ತಿರುವ ಕೇಂದ್ರ ಸರ್ಕಾರದ ಯೋಜನೆಗಳ ಕಡೆಗೆ ಗಮನ ಹರಿಸೋಣಈ ವರ್ಷದ ಒಟ್ಟು ಮುಂದುವರಿಯುತ್ತಿರುವ ಯೋಜನೆಗಳಲ್ಲಿ ೮೨೩ ಸೆಡ್ಯೂಲ್ಡ್ ಟೈಮ್ ಮೀರಿ ಪೂರ್ಣಗೊಳ್ಳದೆ ಕಾರ್ಯಾಚರಣೆಯಲ್ಲಿವೆಇವುಗಳಲ್ಲಿ ಶೇ.60ರಷ್ಟು ಎರಡು ವರ್ಷಕ್ಕಿಂತ ಹೆಚ್ಚು ಸಮಯದಿಂದ ನಿಧಾನ ಗತಿಯಲ್ಲಿ ನಡೆಯುತ್ತಿವೆಫೆಬ್ರವರಿಯಲ್ಲಿಯೇ ಇಂಥ 46 ಯೋಜನೆಗಳು ಪೂರ್ಣಗೊಂಡಿವೆ ಮತ್ತು ವಿಳಂಬದ ಪಟ್ಟಿಗೆ 12 ಸೇರಿಕೊಂಡಿವೆವಿಳಂಬದ ಸಮಯ ಹೆಚ್ಚಾದಷ್ಟು ವೆಚ್ಚಗಳು ಹೆಚ್ಚುತ್ತಾ ಹೋಗುತ್ತವೆಸರ್ಕಾರದ ಮೇಲೆ ಭಾರ ಹೆಚ್ಚುತ್ತದೆಇದರಿಂದ ಆಯಾ ವರ್ಷ ಹೊಸ ಯೋಜನೆಗಳಿಗೆ ದೊರೆಯಬೇಕಾಗಿರುವ ಮೊತ್ತದಲ್ಲಿ ಕಡಿತಗೊಳ್ಳಲು ಕಾರಣವಾಗುತ್ತದೆ.

2021-22ರಲ್ಲಿ ಜಾರಿಯಲ್ಲಿರುವ ಕೇಂದ್ರ ಯೋಜನೆಗಳ ಸಂಖ್ಯೆ 1565 ಇದ್ದು ಇವುಗಳಲ್ಲಿ ವಿಳಂಬವಾಗಿ ನಡೆಯುತ್ತಿರುವ ಹಳೆಯ ಯೋಜನೆಗಳ ಸಂಖ್ಯೆ 657 ಮಾತ್ರ ಇತ್ತುಆದರೆ ಎರಡು ವರ್ಷಕ್ಕಿಂತ ಹೆಚ್ಚು ಅವಧಿ ತಡವಾಗಿ ಮುಂದುವರಿದ ಯೋಜನೆಗಳೇ ಹೆಚ್ಚಾಗಿದ್ದವುಅವುಗಳಲ್ಲಿ ಕೆಲವು ತಿಂಗಳಿಂದ ಅತಿ ಹೆಚ್ಚು ಅವಧಿಯವರೆಗೆ ತಡವಾಗಿರುವ ಯೋಜನೆಗಳೂ ಇದ್ದವುಹೀಗಾಗಿ ಸರಾಸರಿ 42.6 ತಿಂಗಳು ವಿಳಂಬವಾಗಿ ನಡೆಯುತ್ತಿರುವ ಯೋಜನೆಗಳು ಮುಂದುವರಿಯುತ್ತಿದ್ದವುಈ ವರ್ಷ ನಡೆಯುತ್ತಿರುವ ಯೋಜನೆಗಳಲ್ಲಿ ಸರಾಸರಿ ವಿಳಂಬದ ಅವಧಿ ಸ್ವಲ್ಪ ಕಡಿಮೆಯಾಗಿದ್ದು೩೮.೬೩ ತಿಂಗಳೆಂದು ಸರ್ಕಾರ ಹೇಳಿದೆಇದು ಮತ್ತು ವಿಳಂಬವಾಗುವ ಯೋಜನೆಗಳು ಕಡಿಮೆಯಾದಷ್ಟು ಸರ್ಕಾರಗಳ ಹಣಕಾಸು ಹೆಚ್ಚು ಉತ್ಪಾದಕವಾಗುವುದಲ್ಲದೆ ಆರ್ಥಿಕ ಬೆಳವಣಿಗೆಯ ಗತಿ ಇನ್ನೂ ಹೆಚ್ಚು ಚುರುಕುಗೊಳ್ಳಲು ಪೂರಕವಾಗುತ್ತದೆ.

ರಾಜ್ಯಗಳಲ್ಲಿ ಪ್ರೊಜೆಕ್ಟ್‌ಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲಕೆಲವು ಯೋಜನೆಗಳು ದಶಕಗಟ್ಟಲೆ ನಿಧಾನ ಗತಿಯಲ್ಲಿ ಮುಂದುವರಿದ ಉದಾಹರಣೆಗಳಿವೆಕೈಗಾರಿಕಾ ಪ್ರದೇಶಗಳ ನಿರ್ಮಾಣ ಮತ್ತು ಅಭಿವೃದ್ಧಿ ವರ್ಷಗಟ್ಟಲೆ ಸಮಯ ತೆಗೆದುಕೊಂಡದ್ದುಂಟುಹೈವೆಯಂತಹ ಮೂಲ ಸೌಲಭ್ಯ ಕಾಮಗಾರಿಗಳು ಭೂಮಿ ವಶಪಡಿಸಿಕೊಳ್ಳುವ ಸಮಸ್ಯೆಯಲ್ಲದೆ ಹಲವು ಇತರ ಸಮಸ್ಯೆಗಳು ಎದುರಾಗಿ ಪೂರ್ಣಗೊಳ್ಳುವ ಹೊತ್ತಿಗೆ ಆರಂಭ ಮಾಡಿದ ಭಾಗ ಹಾಳಾಗಿ ರಿಪೇರಿಗೆ ಬಂದಿರುತ್ತದೆಅಂದಾಜು ವೆಚ್ಚ ಮೂಲ ಅಂದಾಜಿನ ಮೂರ‍್ನಾಲ್ಕು ಪಟ್ಟು ಹೆಚ್ಚಾಗಿ ಅಂತಿಮವಾಗಿ ಇತರ ಯೋಜನೆಗಳಿಗೆ ಉಪಯೋಗವಾಗಬೇಕಾದ ಹಣವನ್ನೂ ನುಂಗಿಹಾಕಿರುತ್ತದೆ.

ಮಾಧ್ಯಮ ವರದಿಗಳನ್ನಾಧರಿಸಿ ಒಂದು ಉದಾಹರಣೆಬೀದರ್ ಜಿಲ್ಲೆಯ ಗೊರಟಾ ಗ್ರಾಮದಲ್ಲಿ 2014ರ ಕೊನೆಯಲ್ಲಿ ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ‘ಹುತಾತ್ಮರ ಸ್ಮಾರಕ’ಕ್ಕಾಗಿ ಭೂಮಿ ಪೂಜೆ ಮಾಡಿದ್ದರಂತೆಒಂದೇ ವರ್ಷದಲ್ಲಿ ಪೂರ್ಣಗೊಳ್ಳಬೇಕಿದ್ದ ಸ್ಮಾರಕ ನಿರ್ಮಾಣ ಎಂಟು ವರ್ಷಗಳ ನಂತರ ಈಗ ತಯಾರಾಗಿ ಅವರೇ ಈಗ ಗೃಹ ಮಂತ್ರಿಯಾಗಿ ಉದ್ಘಾಟನೆ ಮಾಡಿದರಂತೆಇಷ್ಟು ತಡವಾದರೆ ಏನು ಹೇಳಬೇಕು?

ಸಮಯಬದ್ಧವಾಗಿ ಯೋಜನೆಗಳು ಪೂರ್ಣಗೊಳ್ಳಬೇಕು

ನಮ್ಮ ಆಡಳಿತಗಾರರು ಮತ್ತು ಆಡಳಿತಯಂತ್ರ ಇಬ್ಬರೂ ಯೋಜನೆಗಳ ತಯಾರಿಕೆ ಮತ್ತು ಅನುಷ್ಠಾನದಲ್ಲಿ ಸಮಾನ ಜವಾಬ್ದಾರರುಮೊದಲೇ ಎಲ್ಲ ಆಯಾಮಗಳನ್ನೂ ಗಮನದಲ್ಲಿಟ್ಟುಕೊಂಡು ರೂಪರೇಷೆಗಳನ್ನು ಎಚ್ಚರಿಕೆಯಿಂದ ತಯಾರಿಸಬೇಕುಬರಬಹುದಾದ ಅಡೆತಡೆಗಳನ್ನು ನಿರೀಕ್ಷಿಸಿ ಅವುಗಳಿಗೆ ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆಒಮ್ಮೆ ಪ್ರಾಜೆಕ್ಟ್ ಆರಂಭವಾದ ಮೇಲೆ ಅದು ಸಮಯಬದ್ಧವಾಗಿ ಕಾಮಗಾರಿ ಮುಗಿದು ಆಸ್ತಿಯಾಗಲಿಸೇವೆಯಾಗಲಿ ನಿಗದಿಪಡಿಸಿದ ಉದ್ದೇಶಗಳಿಗೆ ಉಪಯೋಗವಾಗುವಂತಾಗಬೇಕುಆಗ ಹೂಡಿದ ಬಂಡವಾಳ ಮತ್ತು ಪಟ್ಟಶ್ರಮ ಸಾರ್ಥಕವಾಗುತ್ತವೆಈ ದೃಷ್ಟಿಯಿಂದ ನೋಡಿದಾಗ ೨೦೨೩೨೪ರ ಮುಂಗಡಪತ್ರದಲ್ಲಿ ಪ್ರಕಟವಾಗಿರುವ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣದಲ್ಲಿ ಹೊಸ ಯೋಜನೆಗಳಿಗೆ ಎಷ್ಟು ಸಿಕ್ಕಿತು ಎಂಬುದು ತಿಳಿಯುತ್ತದೆ.

 

andolanait

Share
Published by
andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

2 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

3 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

4 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

4 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

5 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

6 hours ago