ಎಡಿಟೋರಿಯಲ್

ಕ್ಯಾನ್ಸರ್ ಪೀಡಿತ ಬಡವರ ಅನ್ನದಾನಿ ಹರಕ್ ಚಂದ್ ಸಾವ್ಳ

  ಮುಂಬೈಯ ಪರೇಲ್ ಎಂಬಲ್ಲಿರುವ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯ ಎದುರಿನ ಫುಟ್‌ಪಾತಿನಲ್ಲಿ ಮುಖದಲ್ಲಿ ಅಸಹಾಯಕತೆಸಾವಿನ ಭಯ ತುಂಬಿಕೊಂಡು ನಿಂತ ಜನರ ಸಾಲು ಕಾಣಿಸುವುದು ದಿನನಿತ್ಯದ ದೃಶ್ಯಅವರೆಲ್ಲ ದೇಶದ ಯಾವ ಯಾವುದೋ ಮೂಲೆಗಳಿಂದ ರಿಯಾಯಿತಿ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ಬಂದ ರೋಗಿಗಳುಮತ್ತು ಅವರ ಸಂಬಂಧಿಕರು ಅಥವಾ ಕುಟುಂಬಿಕರುಒಬ್ಬೊಬ್ಬರದು ಒಂದೊಂದು ಗೋಳಿನ ಕತೆವಸತಿಗೆ ದುಡ್ಡಿಲ್ಲದೆ ವಾರತಿಂಗಳುಗಟ್ಟಲೆ ಕಾಲ ಫುಟ್‌ಪಾತ್‌ಗಳಲ್ಲಿ ಮಲಗುತ್ತಾರೆಊಟಕ್ಕಿಲ್ಲದೆ ಹಸಿದ ಹೊಟ್ಟೆಯಲ್ಲಿ ದಿನದೂಡುತ್ತಾರೆಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುತ್ತಾರೆ.

40 ವರ್ಷ ಪ್ರಾಯದ ಹರಕ್ ಚಂದ್ ಸಾವ್ಳ ಪ್ರತಿದಿನ ಆ ದೃಶ್ಯವನ್ನು ಕಾಣುತ್ತ ಮನೆಗೆ ಬಂದು ಮರುಗುತ್ತಿದ್ದರುಆದರೆತಾನು ಹೀಗೆ ಬರೀ ಮರುಗುವುದರಿಂದ ಅವರಿಗೇನೂ ಪ್ರಯೋಜನವಾಗದುಬದಲಿಗೆಆ ಬಡಪಾಯಿಗಳಿಗೆ ತಾನು ಅನುಕೂಲವಾಗುವಂತಹದೇನಾದರೂ ಮಾಡಿದರಷ್ಟೇ ಅವರ ಬಗೆಗಿನ ತನ್ನ ಅನುಕಂಪಕ್ಕೆ ಕಿಂಚಿತ್ತಾದರೂ ಅರ್ಥ ಬಂದೀತು ಎಂದು ಅನಿಸಿದ್ದೇ ಅವರು ಆ ನಿಟ್ಟಿನಲ್ಲಿ ಕಾರ್ಯತತ್ಪರರಾದರುಚಿಕ್ಕದೊಂದು ಅಡುಗೆ ಮನೆ ಕಟ್ಟಿಸಿಅಲ್ಲಿ ಆಹಾರ ತಯಾರಿಸಿಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಽಕರಿಗೆ ಮಧ್ಯಾಹ್ನ ಮತ್ತು ಸಂಜೆ ಎರಡು ಹೊತ್ತು ಉಚಿತವಾಗಿ ಊಟ ಒದಗಿಸಲು ಪ್ರಾರಂಭಿಸಿದರು.

ಹೀಗೆ ಮುಂದಿನ 12 ವರ್ಷಗಳ ಕಾಲ ಹರಕ್ ಚಂದ್ ಸಾವ್ಳ ತನ್ನ ಸ್ವಂತ ಹಣದಿಂದ ಆ ಯೋಜನೆಯನ್ನು ಮುಂದುವರಿಸಿದರುಆದರೆಪ್ರಾರಂಭದಲ್ಲಿ ಉಚಿತ ಊಟಕ್ಕೆ ಬರುತ್ತಿದ್ದ 50 ಜನ ಕ್ಯಾನ್ಸರ್ ರೋಗಿಗಳು ಮತ್ತು ಅವರ ಸಂಬಂಧಿಕರ ಸಂಖ್ಯೆ ನೂರಾಗಿನೂರು ಇನ್ನೂರಾಗಿಏಳು ನೂರು ದಾಟಿದಾಗ ಅವರಿಗೆ ತನ್ನೊಬ್ಬನ ಕಿಸೆ ಸಾಲದು ಎಂಬ ಅರಿವಾಯಿತುಹರಕ್ ಚಂದ್ ಸಾವ್ಳ ಜೀವನ ನಿರ್ವಹಣೆಗೆ ಒಂದು ಹೋಟೆಲ್ ನಡೆಸುತ್ತಿದ್ದರುಹೋಟೆಲು ಬಹಳ ಚೆನ್ನಾಗಿ ನಡೆಯುತ್ತಿತ್ತುಆ ಹೋಟೆಲನ್ನು ಬೇರೊಬ್ಬರಿಗೆ ನಡೆಸಲು ಕೊಟ್ಟುಅದರಿಂದ ಬಂದ ಹಣವನ್ನು ವಿನಿಯೋಗಿಸಿಟಾಟಾ ಆಸ್ಪತ್ರೆ ಎದುರಿಗಿನ ಕೊಂಡಾಜಿ ಕಟ್ಟಡದಲ್ಲಿ ‘ಜೀವನ್ ಜ್ಯೋತ್ ಕ್ಯಾನ್ಸರ್ ರಿಲೀಫ್ ಅಂಡ್ ಕೇರ್ ಟ್ರಸ್ಟ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿರಿಜಿಸ್ಟ್ರಿಗೊಳಿಸಿದರು.

ಅಂದು ಹುಟ್ಟಿಕೊಂಡ ಜೀವನ್ ಜ್ಯೋತ್ ಟ್ರಸ್ಟ್ ಇಂದು ಪ್ರತೀ ತಿಂಗಳು ಲಕ್ಷಾಂತರ ರೂಪಾಯಿ ವ್ಯಯಿಸಿ, 80ಕ್ಕೂ ಹೆಚ್ಚು ಸಾಮಾಜಿಕ ಯೋಜನೆಗಳನ್ನು ನಡೆಸುತ್ತಿದೆಅವುಗಳಲ್ಲಿ 30ಕ್ಕೂ ಹೆಚ್ಚು ಯೋಜನೆಗಳು ಕ್ಯಾನ್ಸರ್ ರೋಗಿಗಳಿಗೆ ಮುಡಿಪಾಗಿವೆಬೇಸಿಗೆ ಇರಲಿಚಳಿಗಾಲವಿರಲಿಮಳೆಗಾಲವಿರಲಿ ಉಚಿತ ಊಟ ಒಂದು ದಿನವೂ ತಪ್ಪುವುದಿಲ್ಲಕಾಯಿಲೆ ಉಲ್ಬಣಿಸಿ ಅನ್ನ ನುಂಗಲಾಗದವರಿಗೆ ಅರಿಶಿನ ಮಿಶ್ರಿತ ಹಾಲನ್ನು ನೀಡುತ್ತದೆಕೇವಲ ಟಾಟಾ ಆಸ್ಪತ್ರೆ ಎದುರಲ್ಲದೆ ಜೆ.ಜೆ.ಆಸ್ಪತ್ರೆಸೇಂಟ್ ಜಾರ್ಜ್ ಆಸ್ಪತ್ರೆ ಮತ್ತು ಕಾಮಾ ಆಸ್ಪತ್ರೆಗೂ ಉಚಿತ ಊಟದ ವ್ಯವಸ್ಥೆಯನ್ನು ವಿಸ್ತರಿಸಿದೆಉಚಿತ ಔಷಧಿಯನ್ನು ಒದಗಿಸುವ ‘ಮೆಡಿಕಲ್ ಬ್ಯಾಂಕ್’ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಉಚಿತ ಆಟಿಕೆಗಳನ್ನು ಒದಗಿಸುವ ‘ಟಾಯ್ ಬ್ಯಾಂಕ್’ ಮೊದಲಾದವುಗಳನ್ನು ನಡೆಸುತ್ತಿದೆಕ್ಯಾನ್ಸರ್ ರೋಗಿಗಳು ಆಸ್ಪತ್ರೆಯಲ್ಲಿದ್ದರೆ ಅವರೊಂದಿಗೆ ಬರುವ ಬಡ ಸಂಬಂಧಿಗಳು ಫುಟ್‌ಪಾತ್‌ಗಳಲ್ಲಿ ಮಲಗಬೇಕಾಗುತ್ತದೆಅಂತಹವರಿಗೆ ಉಳಿದುಕೊಳ್ಳಲು ಉಚಿತ ವಸತಿಯನ್ನೂ ಒದಗಿಸುತ್ತಿದೆಇವುಗಳನ್ನೆಲ್ಲ ವ್ಯವಸ್ಥಿತವಾಗಿ ನಡೆಸಲು ನೂರೈವತ್ತಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದೆತುರ್ತು ಸಂದರ್ಭಗಳಲ್ಲಿ ರೋಗಿಗಳನ್ನು ರವಾನಿಸಲು ಆಂಬ್ಯುಲೆನ್ಸ್‌ಗಳನ್ನೂ ನೇಮಿಸಿದೆಕಡಿಮೆ ದರದಲ್ಲಿ ಮಾರಲು ಜನರಿಕ್ ಔಷಧಿ ಅಂಗಡಿಗಳನ್ನು ತೆರೆದಿದೆಕಲ್ಯಾಣ್ ಎಂಬಲ್ಲಿ 50 ಎಕರೆ ಜಮೀನನ್ನು ಖರೀದಿಸಿಕೊನೆಯ ಹಂತದ ಕ್ಯಾನ್ಸರಿನಿಂದ ಬಳಲುವ ರೋಗಿಗಳಿಗೆ ಕೊನೆಗಾಲದಲ್ಲಿ ಆಶ್ರಯ ನೀಡಲು ಧರ್ಮಶಾಲೆಯೊಂದನ್ನು ತೆರೆಯುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದೆ.

ಸದ್ಯ ಎರಡು ಕೋಟಿ ರೂಪಾಯಿ ಬಜೆಟ್‌ನಲ್ಲಿ ತನ್ನ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿರುವ ಜೀವನ್ ಜ್ಯೋತ್ ಟ್ರಸ್ಟ್ಮುಂದೆ ಈ ಬಜೆಟನ್ನು ಐದು ಕೋಟಿ ರೂಪಾಯಿಗೆ ವಿಸ್ತರಿಸಲು ಆಲೋಚಿಸುತ್ತಿದೆಜೀವನ್ ಜ್ಯೋತ್ ಟ್ರಸ್ಟಿನ ಬೆಂಬಲಕ್ಕೆ ಸುತ್ತಮುತ್ತಲ ಸಾಮಾನ್ಯರೂ ತಮ್ಮ ಕೈಲಾದ ರೀತಿಯ ಬೆಂಬಲ ನೀಡುತ್ತಾರೆಅವರು ತಮ್ಮ ಹಳೆಯ ಬಟ್ಟೆದಿನಪತ್ರಿಕೆಮಕ್ಕಳ ಆಟಿಕೆ ಮೊದಲಾದವುಗಳನ್ನು ದಾನ ನೀಡುತ್ತಾರೆಕಳೆದ ಏಳೆಂಟು ವರ್ಷಗಳಲ್ಲಿ ಜನರು ದಾನ ನೀಡಿದ ಹಳೇ ಪೇಪರನ್ನು ಮಾರಿ ಜೀವನ್ ಜ್ಯೋತ್ ಟ್ರಸ್ಟ್ 1.25 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ.

ಸದಾ ಬಿಳಿ ಕುರ್ತಾ ಪೈಜಾಮಾ ಧರಿಸುವ ಹರಕ್ ಚಂದ್ ಸಾವ್ಳ ತಮ್ಮ 65ರ ಇಳಿವಯಸ್ಸಿನಲ್ಲೂ ಪ್ರತಿದಿನ ಟಾಟಾ ಆಸ್ಪತ್ರೆಯ ಆವರಣದಲ್ಲಿ ತಿರುಗಾಡುತ್ತಸಾವಿನ ನೆರಳಲ್ಲಿ ಜೀವ ಹಿಡಿದುಕೊಂಡು ಕೊನೇ ದಿನಗಳನ್ನು ಎದುರು ನೋಡುವ ಕ್ಯಾನ್ಸರ್ ರೋಗಿಗಳನ್ನು ಸಂತೈಸುತ್ತಾರೆನಿರ್ಗತಿಕ ರೋಗಿಗಳು ಕ್ಯಾನ್ಸರಿಗೆ ಬಲಿಯಾಗಿ ಸತ್ತರೆ ಉಚಿತವಾಗಿ ಅವರ ಶವಸಂಸ್ಕಾರವನ್ನೂ ಮಾಡುತ್ತಾರೆಹರಕ್ ಚಂದ್ ಸಾವ್ಳರಿಗೆ ಮಕ್ಕಳೆಂದರೆ ಬಲು ಪ್ರೀತಿಕ್ಯಾನ್ಸರ್ ರೋಗದಿಂದ ಬಳಲುವ ಮಕ್ಕಳನ್ನು ಕಂಡಾಗ ಮಮ್ಮಲ ಮರುಗುತ್ತಾರೆಅಂತಹ ಮಕ್ಕಳ ನೋವನ್ನು ತುಸುವಾದರೂ ಕಡಿಮೆಗೊಳಿಸುವ ಉದ್ದೇಶದಿಂದ ಅವರನ್ನು ಆಗಾಗ್ಗೆ ವಿಹಾರಕ್ಕೆ ಕರೆದುಕೊಂಡು ಹೋಗುತ್ತಾರೆಹರಕ್ ಚಂದ್ ಸಾವ್ಳರಿಗೆ ಅಸಹಾಯಕರಿಗೆ ನೆರವಿನ ಹಸ್ತ ಚಾಚುವ ಗುಣ ಬಾಲ್ಯದಿಂದಲೇ ಬಂದುದುಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಬಡ ಕುಟುಂಬದಿಂದ ಬಂದ ಸಹಪಾಠಿ ಹುಡುಗನೊಬ್ಬ ಶಾಲಾ ಫೀಸು ಕಟ್ಟಲಾಗದೆಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವನಿದ್ದನುಆಗ ಹನ್ನೊಂದು ವರ್ಷ ಪ್ರಾಯದ ಹರಕ್ ಚಂದ್ ಮೂರು ವರ್ಷ ಪ್ರತಿದಿನ 5 ಕಿ.ಮೀನಡೆದು ಶಾಲೆಗೆ ಹೋಗಿತಂದೆ ಕೊಡುತ್ತಿದ್ದ ಬಸ್ ಟಿಕೆಟ್ ಹಣವನ್ನು ಉಳಿಸಿಅದನ್ನು ಆ ಸ್ನೇಹಿತನಿಗೆ ಕೊಟ್ಟು ಅವನ ವಿದ್ಯಾಭ್ಯಾಸ ನಿಲ್ಲದಂತೆ ನೋಡಿಕೊಂಡಿದ್ದರು.

andolanait

Share
Published by
andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago