ಎಡಿಟೋರಿಯಲ್

ಬುಡಕಟ್ಟು ಜನಾಂಗಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ಹೆಣ್ಣು ಮಕ್ಕಳು

  ರಡು ವರ್ಷಗಳ ಹಿಂದೆಕೊಯಂಬತೂರು ಸಮೀಪಕೇರಳತಮಿಳುನಾಡು ಗಡಿ ಪ್ರದೇಶದಲ್ಲಿರುವ ಚಿನ್ನಂಪಟ್ಟಿ ಎಂಬ ಕುಗ್ರಾಮದ ಕಲ್ಕೊತಿಯಾ ಬುಡಕಟ್ಟಿಗೆ ಸೇರಿದ ಸಂಧ್ಯಾ ಷಣ್ಮುಗಂ (ಚಿತ್ರದಲ್ಲಿರುವವರು), ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯದಲ್ಲಿ ಬ್ಯಾಚ್ಯುಲರ್ ಡಿಗ್ರಿ ಗಳಿಸಿದಾಗ ಇಡೀ ಗ್ರಾಮ ಸಂಭ್ರಮಾಚರಣೆ ನಡೆಸಿತುಏಕೆಂದರೆಸಂಧ್ಯಾ ಷಣ್ಮುಗಂ ಆ ಹಳ್ಳಿಯ ಕಲ್ಕೊತಿಯಾ ಜನಾಂಗದಲ್ಲಿ ಕಾಲೇಜು ಡಿಗ್ರಿ ಪಡೆದ ಪ್ರಪ್ರಥಮ ಮತ್ತು ಏಕಮಾತ್ರ ವ್ಯಕ್ತಿ!

ಇತರ ಅದೆಷ್ಟೋ ಬುಡಕಟ್ಟು ಜನಾಂಗಗಳಂತೆ ಕಲ್ಕೊತಿಯಾ ಜನಾಂಗದಲ್ಲೂ ಜನ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವ ಅಷ್ಟಕ್ಕಷ್ಟೇಬಡತನ ಮತ್ತು ಅರಿವಿನ ಕೊರತೆಯ ಕಾರಣ ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ ತಮ್ಮೊಂದಿಗೆ ಕೂಲಿನಾಲಿ ಮಾಡಲು ಕರೆದುಕೊಂಡು ಹೋಗುತ್ತಾರೆಹೀಗಾಗಿಕಲ್ಕೊತಿಯಾ ಜನಾಂಗದಲ್ಲಿ ಮಕ್ಕಳು ಐದನೇ ತರಗತಿ ದಾಟಿ ವಿದ್ಯಾಭ್ಯಾಸ ಮಾಡುವುದು ಅಪರೂಪಅಂತಹದೊಂದು ಸಮುದಾಯದಲ್ಲಿ ಹುಟ್ಟಿ ಬೆಳೆದ ಸಂಧ್ಯಾಕಂಪ್ಯೂಟರ್ ಅಪ್ಲಿಕೇಷನ್ಸ್ ನಂತಹ ಅತ್ಯಾಧುನಿಕ ವಿಷಯದಲ್ಲಿ ಡಿಗ್ರಿ ಪಡೆದಿರುವುದು ಅವಳ ಮಟ್ಟಿಗೆ ಒಂದು ಅಮೋಘ ಸಾಧನೆಯೇ!

ಸಂಧ್ಯಾ ಈ ಸಾಧನೆಗೈದ ದಾರಿ ಸುಲಭವೇನಾಗಿರಲಿಲ್ಲಇದರಲ್ಲಿ ಮುಖ್ಯ ಪಾತ್ರ ವಹಿಸಿದವರು ಅವಳ ತಾಯಿಆಕೆ ಇತರ ಮಕ್ಕಳ ತಾಯಿಯಂತಲ್ಲದೆ ತನ್ನ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಅಪಾರ ನಿಗಾ ವಹಿಸಿದರುಅವರು ವಾಸಿಸುವ ಪರಿಸರದಲ್ಲಿ ಸಂಚರಿಸುವ ಒಂದೇ ಒಂದು ಸರ್ಕಾರಿ ಬಸ್ಸಿನ ಮೂಲಕ ಸಂಧ್ಯಾ ಶಾಲೆ ತಲುಪಬೇಕಿತ್ತುಮಳೆಗಾಲದ ಸಮಯದಲ್ಲಿ ಆ ಬಸ್ಸು ಬಾರದಿರುವುದುಬಂದರೂ ಸರಿಯಾದ ಸಮಯಕ್ಕೆ ಬಾರದಿರುವುದು ಸಾಮಾನ್ಯವಾಗಿತ್ತುಯಾವುದೇ ಕಾರಣಕ್ಕೆ ಆ ಬಸ್ಸು ಬಾರದ ದಿನಹೆಜ್ಜೆ ಹೆಜ್ಜೆಗೂ ಕಾಡು ಪ್ರಾಣಿಗಳ ಭಯದಲ್ಲಿ ಜೀವ ಕೈಯಲ್ಲಿ ಹಿಡಿದು ಕಾಡಿನ ನಡುವೆ ಏಳು ಕಿ.ಮೀನಡೆದು ಶಾಲೆಗೆ ಹೋಗಬೇಕಾಗುತ್ತಿತ್ತುಇದೆಲ್ಲದರ ನಡುವೆಯೂ ಸಂಧ್ಯಾ ತನ್ನೊಬ್ಬಳ ಶಿಕ್ಷಣಕ್ಕಷ್ಟೇ ತನ್ನ ಸಾಧನೆಯನ್ನು ಮಿತಿಗೊಳಿಸಲಿಲ್ಲಅವಳು ತನ್ನ ಗ್ರಾಮದ ಇತರ ಮಕ್ಕಳೂ ತನ್ನಂತೆಯೇ ಶಿಕ್ಷಿತರಾಗುವಂತೆ ಮಾಡಲು ಅವರನ್ನುಅವರ ಹೆತ್ತವರನ್ನು ಪ್ರೇರೇಪಿಸುತ್ತಿದ್ದಾಳೆಸುಮಾರು ಮೂವತ್ತು ಮಕ್ಕಳನ್ನು ಒಂದೆಡೆ ಕಲೆಹಾಕಿಅವರಿಗೆ ದಿನಾ ಆಟ ಪಾಠ ಹೇಳಿಕೊಡುತ್ತಿದ್ದಾಳೆಮತ್ತುಮುಂದೆ ತಾನೊಬ್ಬಳು ಐಎಎಸ್ ಅಽಕಾರಿಯಾಗುವ ಗುರಿ ಹಾಕಿಕೊಂಡುಪರೀಕ್ಷೆಗೆ ತಯಾರಿ ನಡೆಸಿದ್ದಾಳೆ.

***

ಕಟ್ಟುನಾಯಕನ್ ಎಂಬುದು ಕೇರಳದ ಪುರಾತನ ಬುಡಕಟ್ಟು ಜನಾಂಗಗಳಲ್ಲಿ ಒಂದುವಯನಾಡಿನಲ್ಲಿ ಅವರನ್ನು ಕಟ್ಟು ನಾಯಕನ್ ಎಂದು ಕರೆದರೆಮಲ್ಲಪುರಂ ಜಿಲ್ಲೆಯಲ್ಲಿ ಅವರನ್ನು ಚೋಳನಾಯಕನ್ ಮತ್ತು ಪಟ್ಟಿನಾಯಕನ್ ಎಂಬ ಹೆಸರುಗಳಿಂದ ಕರೆಯುತ್ತಾರೆಇಂದಿಗೂ ಹೆಚ್ಚುಕಡಿಮೆ ಅರಣ್ಯವಾಸಿಗಳಾಗಿರುವ ಕಟ್ಟು ನಾಯಕನ್ ಬುಡಕಟ್ಟಿನ ಮಕ್ಕಳು ಶಾಲೆಗೆ ಹೋಗುವುದು ಅಪರೂಪದ ವಿದ್ಯಮಾನಇಂತಹ ಜನಸಮುದಾಯಕ್ಕೆ ಸೇರಿದ ಶ್ರುತಿ ರಾಜ್ ಎಂಬ ಹೆಣ್ಣು ಮಗಳೊಬ್ಬಳು ಇಂಜಿನಿಯರಿಂಗ್ ಪದವಿ ಪಡೆದಿರುವುದು ಎಂತಹ ಸಾಧನೆ ಎಂಬುದು ಯಾರಿಗೂ ಅರ್ಥವಾದೀತು!

ಶ್ರುತಿ ರಾಜ್ಕೇರಳದ ಕಟ್ಟಿಕುಲಂ ಎಂಬಲ್ಲಿನ ಚೇಳೂರಿನ ರಾಜು ಮತ್ತು ಸುನೀತಾ ಎಂಬ ಕೂಲಿಕಾರ ದಂಪತಿಯ ಮಗಳುಕಟ್ಟಿಕುಲಂನ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ 86ಮಾರ್ಕುಗಳನ್ನು ಪಡೆದುಸ್ಕಾಲರ್‌ಶಿಪ್ ಗಿಟ್ಟಿಸಿವಯನಾಡಿನ ಸರ್ಕಾರಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ತರಗತಿಗೆ ಸೇರಿದಳುಆದರೆಮೊದಲ ವರ್ಷ ಎರಡು ಬಾರಿ ಮೈಕ್ರೊಪ್ರೊಸೆಸ್ಸರ್ ಮತ್ತು ಕಂಟ್ರೋಲರ್ ವಿಷಯದಲ್ಲಿ ಅನುತ್ತೀರ್ಣಳಾದಳುಆದರೂ ಛಲ ಬಿಡದೆ ಮೂರನೇ ಪ್ರಯತ್ನದಲ್ಲಿ ಅವುಗಳನ್ನು ಪಾಸು ಮಾಡುವಲ್ಲಿ ಯಶಸ್ವಿಯಾದಳುಈಗ ಶ್ರುತಿ ರಾಜ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ತಯಾರಾಗುತ್ತಿದ್ದಾಳೆಮುಂದೆ ಯಾವುದಾದರೂ ಸರ್ಕಾರಿ ಹುದ್ದೆ ಪಡೆದುತನ್ನ ಕುಟುಂಬದ ಮತ್ತು ಸಮುದಾಯದ ಇತರರಿಗೆ ಆರ್ಥಿಕವಾಗಿ ನೆರವಾಗುವುದು ಅವಳ ಗುರಿ.

***

ಇರುಳರು ಅಥವಾ ಇರುಳಿಗರು ಕರ್ನಾಟಕಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಂಚಿ ಹೋಗಿರುವ ಒಂದು ಬುಡಕಟ್ಟು ಜನಾಂಗಈ ಸಮುದಾಯಕ್ಕೆ ಸೇರಿದ ಚಿನ್ನ ಸ್ವಾಮಿ ಬಡತನದ ಕಾರಣ ಏಳನೇ ತರಗತಿಗೇ ಶಾಲಾ ಕಲಿಕೆಗೆ ವಿದಾಯ ಹೇಳಿಒಂದು ಇಟ್ಟಿಗೆ ಕಾರ್ಖಾನೆಯಲ್ಲಿ ಜೀತದಾಳಾಗಿ ಕೆಲಸಕ್ಕೆ ಸೇರಬೇಕಾಯಿತುಇಟ್ಟಿಗೆ ಕಾರ್ಖಾನೆಯು ಅವರ ಹಳ್ಳಿಯಿಂದ ದೂರವಿದ್ದುದರಿಂದ ಆತ ತನ್ನ ಕುಟುಂಬದಿಂದ ದೂರವಾಗಿ ಬದುಕುತ್ತಿದ್ದನುಅಲ್ಲಿ ಅನೇಕ ವರ್ಷಗಳಿಂದ ಜೀತದಾಳಾಗಿ ದುಡಿದ ಚಿನ್ನ ಸ್ವಾಮಿಒಂದು ದಿನ ಅಧಿಕಾರಿಗಳುಸಮಾಜ ಸೇವಾ ಕಾರ್ಯಕರ್ತರು ಆ ಇಟ್ಟಿಗೆ ಕಾರ್ಖಾನೆಯ ಮೇಲೆ ನಡೆಸಿದ ದಾಳಿಯ ಪರಿಣಾಮವಾಗಿ ಇತರ ಹಲವರು ಜೀತದಾಳುಗಳೊಂದಿಗೆ ತಾನೂ ಬಿಡುಗಡೆ ಹೊಂದಿತನ್ನ ಮನೆಗೆ ವಾಪಸ್ಸಾದನುಆಗ ಅವನ ಹಿರಿ ಮಗಳು ಸಂಗೀತಾಳಿಗೆ ಏಳು ವರ್ಷ ಪ್ರಾಯ.

ಚಿನ್ನಸ್ವಾಮಿ ಜೀತದಾಳು ಆಗಿದ್ದಾಗಲೂಮತ್ತು ಜೀತಮುಕ್ತನಾಗಿ ಮನೆಗೆ ಬಂದ ನಂತರವೂ ತನ್ನ ಮೂವರು ಹೆಣ್ಣು ಮಕ್ಕಳಮುಖ್ಯವಾಗಿ ಸಂಗೀತಾಳ ವಿದ್ಯಾಭ್ಯಾಸದ ಬಗ್ಗೆ ಅಪಾರ ಕಾಳಜಿ ವಹಿಸುತ್ತಿದ್ದನುಅವರಿವರಿಂದ ಸಾಲ ಮಾಡಿಯಾದರೂ ಸಕಾಲಕ್ಕೆ ಆಕೆಯ ಶಿಕ್ಷಣಕ್ಕೆ ಬೇಕಾದ ಹಣಕಾಸಿನ ನೆರವು ಸಿಗುವಂತೆ ನೋಡಿಕೊಳ್ಳುತ್ತಿದ್ದನುಉಳಿದ ತಂದೆತಾಯಂದಿರು ತಮ್ಮ ಹೆಣ್ಣು ಮಕ್ಕಳ ಮದುವೆಗೆ ಸಾಲಸೋಲ ಮಾಡಿ ಸಾಲಗಾರರಾದರೆಚಿನ್ನಸ್ವಾಮಿ ತನ್ನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಾಲ ಮಾಡಿ ಸಾಲಗಾರನಾದನುಸಂಗೀತಾಳೂ ತಾನೂ ಅಪ್ಪನಗೇನೂ ಕಡಿಮೆ ಇಲ್ಲವೆಂಬಂತೆಬಹಳ ಶ್ರಮಪಟ್ಟು ಕಲಿಯುತ್ತಿದ್ದಳುಎಷ್ಟೋ ಬಾರಿ ಮನೆಯಲ್ಲಿ ಉಣ್ಣಲು ಏನೂ ಇಲ್ಲದೆ ಹಸಿದ ಹೊಟ್ಟೆಯಲ್ಲಿ ಅವಳು ಶಾಲೆಗೆ ಹೋದದ್ದೂ ಇದೆಅದರ ಫಲವೋ ಎಂಬಂತೆ ಸಂಗೀತಾ ಶೈಕ್ಷಣಿಕವಾಗಿ ತನ್ನ ಬುಡಕಟ್ಟಿನ ಇತರ ಯಾವ ಮಕ್ಕಳೂ ಸಾಧಿಸದನ್ನು ತಾನು ಸಾಧಿಸಿದಳುಶಾಲಾ ಶಿಕ್ಷಣ ಮುಗಿಸಿನರ್ಸಿಂಗ್‌ನಲ್ಲಿ ಬಿಎಸ್‌ಸಿ ಮಾಡಿಆ ಮೂಲಕ ಅವಳು ಶಾಲೆ ಮತ್ತು ಕಾಲೇಜು ಮೆಟ್ಟಲು ಹತ್ತಿದ ಪ್ರಪ್ರಥಮ ಇರುಳ ಹುಡುಗಿ ಎನಿಸಿಕೊಂಡಳು!

 

ಸಂಗೀತಾ ಚಿನ್ನಸ್ವಾಮಿ ಕೇವಲ ತಾನೊಬ್ಬಳು ಮಾತ್ರ ಶಿಕ್ಷಿತಳಾಗುವುದಕ್ಕೆ ತನ್ನ ಸಾಧನೆಯನ್ನು ಮಿತಿಗೊಳಿಸಲಿಲ್ಲಬದಲಿಗೆತನ್ನ ಬುಡಕಟ್ಟಿನ ಇತರ ಹೆಣ್ಣು ಮಕ್ಕಳೂ ತನ್ನಂತೆಯೇ ಶಿಕ್ಷಣ ಪಡೆಯುವಂತೆ ಮಾಡಲು ಅವರನ್ನು ಮತ್ತು ಅವರ ಹೆತ್ತವರನ್ನು ಉತ್ತೇಜಿಸುತ್ತಿದ್ದಾಳೆ.

andolanait

Recent Posts

ಬಂಡೀಪುರ ಅರಣ್ಯದಲ್ಲಿ ನೀರಿನ ಸಮಸ್ಯೆಗೆ ಬ್ರೇಕ್: ಸೋಲಾರ್‌ ಬೋರ್‌ವೆಲ್‌ ಮೂಲಕ ನೀರು ತುಂಬಿಸಲು ಪ್ಲಾನ್‌

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್‌ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…

21 mins ago

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿದೆ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.…

45 mins ago

ನಟಿ ರನ್ಯಾ ರಾವ್‌ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌

ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…

1 hour ago

ಕೌಟುಂಬಿಕ ಕಲಹ: ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…

1 hour ago

ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಎಚ್.ಡಿ.ಕುಮಾರಸ್ವಾಮಿ ವಿರೋಧ

ಬೆಂಗಳೂರು: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…

2 hours ago

ಓದುಗರ ಪತ್ರ: ಸಮತೋಲನದ ಬಜೆಟ್!…

ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…

5 hours ago