garkeshwariyalli old Garkeshwara temple
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಗ್ರಾಮದಲ್ಲಿರುವ ಶ್ರೀ ಪ್ರಸನ್ನ ಪಾರ್ವತಿ ಸಮೇತ ಗಾರ್ಗೇಶ್ವರ ದೇವಸ್ಥಾನ ಈ ಭಾಗದ ಜನರ ಶ್ರದ್ಧಾ, ನಂಬಿಕೆಯ ಕೇಂದ್ರವಾಗಿದೆ. ಗರ್ಗೇಶ್ವರಿ ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಈ ದೇವಸ್ಥಾನದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದಾರೆ.
ಶ್ರೀ ಗಾರ್ಗ್ಯರು ತಪವನ್ನು ಆಚರಿಸಲು ವಿಘ್ನೇಶ್ವರನನ್ನು ಪ್ರತಿಷ್ಠಾಪಿಸಿದ್ದರು. ಶ್ರೀ ಶಂಕರಾಚಾರ್ಯರು ಪರಕಾಯ ಪ್ರವೇಶ ಮಾಡಿದಾಗ, ಅವರು ಗಣಪತಿಗೆ ಯಂತ್ರವನ್ನು ಹಾಕಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಅಂದಿನಿಂದ ಇದು ಶ್ರೀ ಯಂತ್ರಪ್ರಶ್ನೆ ಮಹಾಗಣಪತಿ ಎಂದು ಪ್ರಸಿದ್ಧಿಯಾಯಿತು.
ದೇವಸ್ಥಾನದ ಮಹಾದ್ವಾರಕ್ಕೆ ಸೇರಿದಂತೆ ಹನ್ನೆರಡು ಕಂಬಗಳ ಬೃಹತ್ ಮಂಟಪವನ್ನು ಕಟ್ಟಲಾಗಿದೆ. ಹೊರ ಪ್ರಾಕಾರದ ಗೋಡೆಯನ್ನು ೧೫ ಅಡಿಗಳಷ್ಟು ಎತ್ತರವಾಗಿ ನಿರ್ಮಿಸಲಾಗಿದೆ. ದೇವಸ್ಥಾನದ ಎರಡನೇ ಬಾಗಿಲಿನಲ್ಲಿ ಒಂದು ಮಂಟಪ ನಿರ್ಮಿಸಿರುತ್ತಾರೆ. ಈ ಮಂಟಪದಲ್ಲಿ ಅನೇಕ ಭಕ್ತಾದಿಗಳು ಮದುವೆ, ಮುಂಜಿ ಮೊದಲಾದ ಶುಭ ಕಾರ್ಯಗಳನ್ನು ಆಯೋಜಿಸುತ್ತಾರೆ. ಒಳಗಡೆ ನವರಂಗ ಅಂಕಣವನ್ನು ನಿರ್ಮಿಸಲಾಗಿದೆ. ಗಾರ್ಗ್ಯ ಮುನಿ ಧ್ಯಾನ ನಿರತರಾಗಿದ್ದಾಗ ಯವನರಾಜ ದಂಪತಿ ಹಲವಾರು ವರ್ಷ ರಾಜ್ಯಭಾರ ನಡೆಸಿ ಅವಸಾನದ ಕಾಲದಲ್ಲಿ ಶ್ರೀ ಪ್ರಸನ್ನ ಪಾರ್ವತಿ ಸಮೇತ ಗಾರ್ಗೇಶ್ವರಸ್ವಾಮಿ ದೇವಾಲಯದ ಪಾದ ಬಳಿ ಬಂದು ಸೇವೆ ಮಾಡಿದ್ದರು. ಆ ನೆನಪಿಗಾಗಿ ಯವನರಾಜ ದಂಪತಿ ಉತ್ಸವದ ಗುಡಿಯನ್ನು ನಿರ್ಮಿಸಿದರು ಎನ್ನಲಾಗಿದೆ.
ನಂತರ ಆ ಗುಡಿಯ ಇನ್ನುಳಿದ ಕಟ್ಟಡದ ಭಾಗವನ್ನು ಪಾಳೇಗಾರರು ಮುಖಾಶುರ ಪಟ್ಟಣವನ್ನು ಸೂರೆ ಮಾಡಿದ ಬಳಿಕ ನಿರ್ಮಿಸಿದರು ಎಂದು ಹೇಳಲಾಗಿದೆ. ಪಾಳೇಗಾರರು ಸೈನ್ಯದಿಂದ ಗೆದ್ದು ಹಿಂದಿರುಗಿ ಬರುವಾಗ ಅದೇ ಸೈನ್ಯದಿಂದ ಶ್ರೀ ಪಾರ್ವತಿ ಪರಮೇಶ್ವರ ಅಥವಾ ಅರ್ಧನಾರೀಶ್ವರ ಆಕಾರದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಮಹಾದ್ವಾರದಲ್ಲಿ ಅರ್ಧಚಂದ್ರ ಮತ್ತು ಯವನರಿಬ್ಬರು ನಮಾಜು ಮಾಡುವ ಚಿಹ್ನೆಯನ್ನು, ಹೆಬ್ಬಾಗಿಲಿಗೆ ಸೇರಿದಂತೆ ಕಮಲದ ಚಿಹ್ನೆಯನ್ನು ಮತ್ತು ಬಳ್ಳಿಯನ್ನು ಸರಪಣಿ ಆಕಾರದಲ್ಲಿ ರಚಿಸಲಾಗಿದೆ.
ಗರ್ಭಗುಡಿಯ ಹಿಂಭಾಗದಲ್ಲಿ ಪಶ್ಚಿಮದ ಗೋಡೆಯಲ್ಲಿ ಮಯೂರ ಚಿತ್ರ ರಚಿಸಿದ್ದರೆ, ಒಳಭಾಗದ ಗೋಡೆಯಲ್ಲಿ ಆಂಜನೇಯ ಚಿತ್ರವನ್ನು ಬಿಡಿಸಲಾಗಿದೆ. ಪ್ರತಿವರ್ಷದ ಮಹಾಶಿವರಾತ್ರಿ ದಿನದಂದು ಈ ದೇವಾಲಯದಲ್ಲಿ ಬಹಳ ವಿಜೃಂಭಣೆಯಿಂದ ಪೂಜೆ ನಡೆಯುತ್ತದೆ
ಗಣಪತಿ ಎತ್ತಲು ಕಾಣಿಕೆ: ಮನಸ್ಸಿನಲ್ಲಿ ಹೊತ್ತ ಹರಕೆ ಈಡೇರಲಿದೆಯೋ, ಇಲ್ಲವೋ ಎನ್ನುವುದನ್ನು ತಿಳಿಯಲು ೫೦ ರೂ. ಕಾಣಿಕೆ ಕೊಟ್ಟು ಗಣಪತಿ ಮೂರ್ತಿಯನ್ನು ಎತ್ತಬಹುದಾಗಿದೆ. ಇಷ್ಟಾರ್ಥಸಿದ್ಧಿ ನೆರವೇರಿದರೆ ಸುಲಭವಾಗಿ ಗಣಪತಿ ಎತ್ತಬಹುದು ಎಂಬ ಪ್ರತೀತಿ ಇದೆ
ಕ್ಷೇತ್ರಕ್ಕೆ ಹೋಗುವುದು ಹೇಗೆ?: ಮೈಸೂರಿನಿಂದ ಗರ್ಗೇಶ್ವರಿ ಕ್ಷೇತ್ರಕ್ಕೆ ತೆರಳಲು ೨೬ ಕಿ.ಮೀ. ಪ್ರಯಾಣಿಸಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್‌ಗಳ ಸೌಕರ್ಯ ಇದೆ. ಖಾಸಗಿ ಬಸ್ಸಿನಲ್ಲಿ ಗರ್ಗೇಶ್ವರಿಗೆ ತಲುಪಬಹುದು. ನಂಜನಗೂಡಿನಿಂದ ೩೦ ಕಿ. ಮೀ., ಕೊಳ್ಳೇಗಾಲದಿಂದ ೩೦ ಕಿ.ಮೀ., ಚಾಮರಾಜನಗರದಿಂದ ೩೨ಕಿ.ಮೀ. ಬೆಂಗಳೂರಿನಿಂದ ೧೪೦ ಕಿ.ಮೀ., ತಿ.ನರಸೀಪುರದಿಂದ ಗರ್ಗೇಶ್ವರಿಗೆ ಮೂರು ಕಿ.ಮೀ. ತಿರುಮಕೂಡಲು ಕ್ಷೇತ್ರದಿಂದ ೧.೫.ಕಿ.ಮೀ., ತಲಕಾಡಿನಿಂದ ೩೦ ಕಿ.ಮೀ. ಆಗುತ್ತದೆ.
ಹೊಸದಿಲ್ಲಿ : ವೋಟ್ ಚೋರಿ ವಿರುದ್ಧ ಮತ್ತೆ ರಾಷ್ಟ್ರ ಮಟ್ಟದಲ್ಲಿ ಅಬ್ಬರಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು…
ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…
ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…
ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬಹಳ…
ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…
ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…