ಬಿ.ಕೆ.ಬಸವರಾಜ,
ನಿವೃತ್ತ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ.
ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ೫ನೇ ಮತ್ತು ೮ನೇ ತರಗತಿ ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟವನ್ನು ಸುಧಾರಿಸುವ ಸಲುವಾಗಿ ವಾರ್ಷಿಕ ಪರೀಕ್ಷೆಯನ್ನು ನಡೆಸುವುದಾಗಿ ಆದೇಶಿಸಿದ್ದು, ಮಕ್ಕಳ ಕಲಿಕಾ ದೃಷ್ಟಿಯಿಂದ ಇದು ಉತ್ತಮ ನಿರ್ಧಾರ ಎನ್ನಬಹುದು.
ಮಕ್ಕಳಿಗೆ ಯಾವುದೇ ಒಂದು ಪ್ರಾಯೋಗಿಕ ಕೆಲಸಗಳನ್ನು ನೀಡುವುದರ ಉದ್ದೇಶ ಅವರ ಕಲಿಕಾ ಕೊರತೆಯನ್ನು ನೀಗಿಸುವುದು ಮತ್ತು ಕಲಿಕೆಯ ಸುಧಾರಣೆ ಹೇಗಿದೆ ಎಂಬುದನ್ನು ತಿಳಿಯುವುದಾಗಿರುತ್ತದೆ. ಆದ್ದರಿಂದ ಈ ಬಾರಿ ಸರ್ಕಾರ ೫ನೇ ಮತ್ತು ೮ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನೀಡುತ್ತಿರುವುದು ಒಂದೆಡೆ ಸ್ವಾಗತಾರ್ಹವಾದರೂ, ಅದು ಯಾವ ರೀತಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ಒಂದು ಅಥವಾ ಎರಡು ವರ್ಷಗಳ ಬಳಿಕವಷ್ಟೇ ಚರ್ಚಿಸುವುದು ಸೂಕ್ತವೆನಿಸುತ್ತದೆ.
ಪ್ರಸ್ತುತ ೧ ರಿಂದ ೯ನೇ ತರಗತಿವರೆಗೆ ಮಕ್ಕಳನ್ನು ಪಾಸ್ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕಾ ಆಸಕ್ತಿ ಕಡಿಮೆಯಾಗಿದೆ ಎಂಬ ಆಪಾದನೆಯೂ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ರೀತಿಯ ವಾರ್ಷಿಕ ಪರೀಕ್ಷೆಗಳು ಸೂಕ್ತ ವಿಧಾನಎನ್ನಬಹುದು. ಇದರಿಂದ ಮಕ್ಕಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧನಾ ವಿಧಾನವನ್ನು ಅನುಸರಿಸಲು ಸಹಾಯಕವಾಗಿದೆ. ಮಕ್ಕಳ ಬೌದ್ಧಿಕ ಮಟ್ಟ ಹೇಗಿದೆ? ಯಾವ ವಿಧಾನದಲ್ಲಿ ಮಕ್ಕಳಿಗೆ ಬೋಧನೆ ಮಾಡಬೇಕು? ಎಂಬುದಾಗಿ ಶಿಕ್ಷಕರನ್ನು ಕಾಡುವ ಪ್ರಶ್ನೆಗಳಿಗೆ, ಉತ್ತರ ದೊರೆಯಲೂ ಇದು ಸಹಕಾರಿಯಾಗಲಿದೆ.
ಸರ್ಕಾರ ಕೂಡ ಯೋಜನೆ ಜಾರಿಗೊಳಿಸುವ ಮುನ್ನವೇ ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡಿರುತ್ತದೆ. ಮಕ್ಕಳ ಕಲಿಕೆಯ ಸುಧಾರಣೆಗಾಗಿ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡರೂ ಏಕಾಏಕಿ ಸಾರ್ವಜನಿಕರು ಅದರ ಸಾಧಕ ಬಾಧಕಗಳನ್ನು ವಿಶ್ಲೇ ಷಿಸುವುದು ಅಷ್ಟು ಸಮಂಜಸ ಅನಿಸುವುದಿಲ್ಲ. ಅದಕ್ಕೆ ಸಾಕಷ್ಟು ಸಮಯಾ ವಕಾಶ ಬೇಕಾಗುತ್ತದೆ. ಯಾವುದೇ ನೂತನ ಶಿಕ್ಷಣ ವ್ಯವಸ್ಥೆಗಳು ಜಾರಿಯಾದಾ ಗಲೂ ಅದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದು ಒಂದು ಅಥವಾ ಎರಡು ವರ್ಷಗಳು ಕಳೆದ ಬಳಿಕವಷ್ಟೇ ಅರ್ಥವಾಗುತ್ತದೆ.
ಮುಂದಿನ ಪರೀಕ್ಷೆಗಳು ಅಂದರೆ ಮಕ್ಕಳು ತಮ್ಮ ಭವಿಷ್ಯದಲ್ಲಿ ಎದುರಿಸಬಹುದಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸೂಕ್ತ ತಯಾರಿ ನಡೆಸಲು ಈ ಯೋಜನೆ ಸೂಕ್ತವಾಗಬಹುದಾಗಿದೆ. ಅಂತಹ ಸಂದರ್ಭಗಳನ್ನು ಎದುರಿಸಲು ಮಕ್ಕಳಲ್ಲಿ ಕಲಿಕೆ ಮಟ್ಟ ಹಾಗೂ ಅವರಲ್ಲಿನ ಕೊರತೆಯನ್ನು ತಿಳಿದು, ಅದನ್ನು ನಿವಾರಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಯೋಜಿಸಲು ಸರ್ಕಾರಕ್ಕೆ ಅನುಕೂಲವಾಗುತ್ತದೆ.
ಇನ್ನು ಕೋವಿಡ್ ಸಂದರ್ಭದಲ್ಲಿ ಮಕ್ಕಳಿಗೆ ೨ವರ್ಷಗಳು ಶಾಲೆ ಇಲ್ಲದೆ ಕಲಿಕಾ ಮಟ್ಟ ತೀರಾ ಕುಸಿದಿತ್ತು. ಈ ಸಂಧರ್ಭದಲ್ಲಿ ಸರ್ಕಾರ ಆನ್‌ಲೈನ್ ತರಗತಿಗಳನ್ನು ನಡೆಸಿತಾದರೂ ೨ ವರ್ಷದಲ್ಲಿ ಪಠ್ಯಕ್ರಮ ಚಟು ವಟಿಕೆಗಳಲ್ಲಿ ಉಂಟಾದ ಏರುಪೇರುಗಳನ್ನು ಸರಿದೂಗಿಸಲು ಶಾಲೆಗಳು ಪುನಾರಂಭವಾಗ ಬೇಕಾಯಿತು. ಅದರಿಂದ ಮಕ್ಕಳು ಮರಳಿ ತಮ್ಮ ಪಠ್ಯ ಚಟುವಟಿಕೆಗಳ ಕಡೆ ಆಸಕ್ತಿ ವಹಿಸಲು ಸಹಾಯಕವಾಯಿತು.
ಇನ್ನು ಈ ವಾರ್ಷಿಕ ಪರೀಕ್ಷೆ ಜಾರಿಯಿಂದ ಶಿಕ್ಷಕರಿಗೂ ಒಂದು ಪ್ರತಿಕ್ರಿಯೆ ದೊರಕುತ್ತದೆ ಎಂದರೆ ತಪ್ಪಾಗಲಾರದು. ಮಕ್ಕಳಿಗೆ ತಾವು ಯಾವ ವಿಚಾರ ವನ್ನು ಹೇಗೆ ಬೋಽಸಬೇಕು? ಎಷ್ಟು ಪ್ರಮಾಣದಲ್ಲಿ ಅದನ್ನು ಅರ್ಥೈ ಸಿಕೊಳ್ಳಲು ಸಾಧ್ಯವೆಂಬುದನ್ನು ಶಿಕ್ಷಕರು ತಿಳಿದು ಮುಂದಿನ ಹಂತದ ತಯಾರಿ ಗೆ ಅನುಕೂಲ ಕಲ್ಪಿಸುತ್ತದೆ. ಒಟ್ಟಾರೆ ಇದು ಯಾವ ರೀತಿ ಪರಿಣಾಮ ಕಾರಿಯಾಗಲಿದೆ ಎಂಬುದನ್ನು ಒಂದೆರಡು ವರ್ಷಗಳು ಕಾದು ನೋಡಬೇಕಿದೆ.
ನಿರೂಪಣೆ: ಅನಿಲ್ ಅಂತರಸಂತೆ
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…
ಇತ್ತೀಚಿನ ದಿನಗಳಲ್ಲಿ, ಟೂತ್ ಪೇಸ್ಟ್‌ಗಳಲ್ಲಿ ತಂಬಾಕು ಮತ್ತು ನಿಕೋಟಿನ್ ಅಂಶ ಪತ್ತೆಯಾಗಿದ್ದು, ಇದರ ಸೇವನೆಯಿಂದ ಹಲವು ಮಕ್ಕಳು ತೊಂದರೆಗೊಳಗಾಗಿರುವ ಘಟನೆಗಳು…
ಮೈಸೂರಿನ ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ರಸ್ತೆ, ಗದ್ದಿಗೆ ರಸ್ತೆ, ವಿಶ್ವಮಾನವ ಜೋಡಿ ರಸ್ತೆ, ವಿದ್ಯಾರಣ್ಯಪುರಂ -…
ಆಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ನಾಲ್ಕು ವರ್ಷಗಳ ಹಿಂದೆ ಜಾರಿಗೆ ತಂದ ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ…
ತಿ.ನರಸೀಪುರ : ಬೈಕ್ ಗೆ ಎದುರಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಮೃತಪಟ್ಟಿ ಘಟನೆ ತಾಲೂಕಿನ…