ಎಡಿಟೋರಿಯಲ್

ಚುನಾವಣಾ ಕಣ: ಕೈ ಕಮಲ ದಳವೂ, ವರ್ಚಸ್ವೀ ತಾರೆಯರೂ

 

  ರಾಜಕೀಯ ಪ್ರವೇಶಿಸುವ ತಾರೆಯರ ಸುದ್ದಿ ಒಂದೆಡೆಯಾದರೆಚುನಾವಣಾ ಕಾಲದಲ್ಲಿ ಪ್ರಚಾರಕ್ಕಾಗಿ ತಮ್ಮ ಕಾಲವನ್ನು ಮೀಸಲಿಡುವವರ ಸುದ್ದಿ ಇನ್ನೊಂದೆಡೆಪಕ್ಷಗಳಲ್ಲಿ ಸಕ್ರಿಯರಾಗಿದ್ದುಕೊಂಡು ಸಾಕಷ್ಟು ಕಾಲ ಕೆಲಸ ಮಾಡಿ ಚುನಾವಣೆಗೆ ಸ್ಪರ್ಧಿಸುವ ತಾರೆಯರು ನಮ್ಮಲ್ಲೂ ಸಾಕಷ್ಟು ಮಂದಿ ಇದ್ದಾರೆಈಗಾಗಲೇ ವಿವಿಧ ಪಕ್ಷಗಳಲ್ಲಿ ಕೆಲಸ ಮಾಡಿರುವಮಾಡುತ್ತಿರುವವರಲ್ಲಿ ಈಗ ಸಂಸದರಾಗಿರುವ ಜಗ್ಗೇಶ್ಸುಮಲತಾಸಚಿವರಾಗಿರುವ ಬಿ.ಸಿ.ಪಾಟೀಲ್ಮುನಿರತ್ನಮಾಜಿ ಸಚಿವರಾದ ಸಿ.ಪಿ.ಯೋಗೇಶ್ವರ್ಉಮಾಶ್ರೀಡಾ.ಜಯಮಾಲಕುಮಾರ್ ಬಂಗಾರಪ್ಪಮಧು ಬಂಗಾರಪ್ಪತಾರಾಶ್ರುತಿಭಾವನಾಹಿರಿಯ ನಟ ಶ್ರೀನಾಥ್ ಹೀಗೆ ಪಟ್ಟಿ ಬೆಳೆಯುತ್ತದೆಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೃತ್ತಿ ಆರಂಭಿಸಿದ್ದು ಚಿತ್ರೋದ್ಯಮಿಯಾಗಿಯೇಪ್ರದರ್ಶಕವಿತರಕನಿರ್ಮಾಪಕರಾಗಿ.

ಚುನಾವಣೆಯ ಸಂದರ್ಭದಲ್ಲಿ ಪಕ್ಷದ ತತ್ವಕಾರ್ಯಕ್ರಮಗಳನ್ನು ಒಪ್ಪಿಕೊಂಡು ಬರುವವರದು ಒಂದು ವರ್ಗವಾದರೆತಮ್ಮ ಆತ್ಮೀಯರಿಗಾಗಿಕಷ್ಟಕಾಲದಲ್ಲಿ ನೆರವಾದವರಿಗಾಗಿ ಪ್ರಚಾರದಲ್ಲಿ ತೊಡಗುವವರದು ಇನ್ನೊಂದು ವರ್ಗಇದು ಬಹಳ ಚಿಕ್ಕ ಬಳಗರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರಚಾರಕ್ಕೆ ತಾರಾ ಆಕರ್ಷಣೆಯನ್ನು ಬಯಸುತ್ತವೆಅದಕ್ಕೆ ಸಹಜವಾದ ಕಾರಣವೂ ಇರುತ್ತದೆನ್ನಿಆಡಳಿತ ಪಕ್ಷಗಳಿಗೆ ತಮ್ಮ ಆಡಳಿತಾವಧಿಯಲ್ಲಿ ಮಾಡಿದ ಜನಪರ ಕೆಲಸಗಳನ್ನು ಈ ಸಂದರ್ಭದಲ್ಲಿ ಮತದಾರರಿಗೆ ತಲುಪಿಸುವ ಕೆಲಸ ಆಗಬೇಕುಪ್ರಚಾರದ ಸಭೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಬೇಕುಜನಪ್ರಿಯ ತಾರೆಯರು ಹೀಗೆ ಜನರನ್ನು ಸೆಳೆಯಬಲ್ಲರು ಎನ್ನುವ ಕಾರಣಕ್ಕಾಗಿ ಅವರ ಬೆನ್ನುಬೀಳುವುದೂ ಉಂಟುವಿರೋಧಪಕ್ಷಗಳಿಗೆಆಡಳಿತ ವಿರೋಧಿ ಪ್ರಚಾರ ಮಾಡಿ ಆ ಮೂಲಕ ಮತದಾರರನ್ನು ಸೆಳೆಯಬೇಕುಇದಕ್ಕೂ ತಾರೆಯರಿದ್ದರೆ ಚೆನ್ನ ಅನ್ನೋ ಯೋಚನೆ.

ಕಳೆದ ಲೋಕಸಭಾ ಚುನಾವಣೆಯ ಸಮಯರಾಜಕೀಯ ಪಕ್ಷದ ಹುರಿಯಾಳು ಒಬ್ಬರು ತಮ್ಮ ಪಕ್ಷದ ಪ್ರಚಾರಕ್ಕೆ ತಾರೆಯರನ್ನು ಕರೆಸಲು ಉದ್ದೇಶಿಸಿದ್ದರುಅದಕ್ಕಾಗಿ ಸಂಬಂಧಪಟ್ಟವರನ್ನು ಸಂಪರ್ಕಿಸಿದರಂತೆ. ‘ಕಳೆದ ಚುನಾವಣೆಯಲ್ಲಿ ನಾವು ದಿನಕ್ಕೆ ಇಷ್ಟು ಅಂತ ಪಡೆದುಕೊಳ್ಳುತ್ತಿದ್ದೆವುಸಾಧ್ಯವಾದರೆ ಸ್ವಲ್ಪ ಸೇರಿಸಿ ಕೊಡಿಮನೆಗೆ ಕಾರು ಕಳುಹಿಸಿಕೊಡಿಎಷ್ಟು ದಿನ ಬೇಕಾದರೂ ಬರುತ್ತೇವೆಯಾವ ಪಕ್ಷವಾದರೂ ಪರವಾಗಿಲ್ಲ’ – ಇದು ಅವರಿಗೆ ಸಿಕ್ಕ ಉತ್ತರಅವರ ಈ ಮಾತುಗಳನ್ನು ಕೇಳಿದಾಗಎಲ್ಲ ಪಕ್ಷಗಳ ಭಿತ್ತಿಪತ್ರಬ್ಯಾನರ್ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಪಕ್ಷಭೇದವಿಲ್ಲದೆ ಒದಗಿಸುವ ಮುದ್ರಣ ಕೇಂದ್ರಗಳ ನೆನಪಾದದ್ದಂತೂ ಸುಳ್ಳಲ್ಲ.

ಅದು ಹಾಗಿರಲಿಈ ಚುನಾವಣೆಯ ಪ್ರಕಟಣೆಗೆ ಮೊದಲೇ ಆಡಳಿತ ಪಕ್ಷ ಜನಪ್ರಿಯ ಕಲಾವಿದರನ್ನು ತಮ್ಮ ಪಕ್ಷದ ಕಕ್ಷೆಗೆ ಸೇರಿಸಲು ಪ್ರಯತ್ನಿಸಿದ್ದು ಗುಟ್ಟಾಗಿ ಉಳಿದಿಲ್ಲಮಂಡ್ಯದ ಸಂಸದೆಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಿಸಿದ ತಾರೆ ಸುಮಲತಾ ಅಂಬರೀಶ್ ಅವರ ಬೆಂಬಲ ಪಡೆಯುವುದರಲ್ಲಿ ಪಕ್ಷ ಯಶಸ್ವಿಯಾಗಿದೆಆ ಪಕ್ಷಕ್ಕೆ ತಮ್ಮ ಬೆಂಬಲವನ್ನು ಅವರು ಘೋಷಿಸಿದ್ದಾರೆಒಂದು ವೇಳೆ ಪಕ್ಷವನ್ನು ಸೇರುವುದೇ ಆದರೆಸಂಸದೆ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸೇರಬೇಕಾಗಿರುವುದರಿಂದ ಸದ್ಯದ ಮಟ್ಟಿಗೆ ಅವರು ಬೆಂಬಲವನ್ನು ಪ್ರಕಟಿಸಿದ್ದಾರೆತಮ್ಮ ಬೆಂಬಲಿಗರ ಸಲಹೆ ಪಡೆದು ಈ ನಿಲುವು ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆಚುನಾವಣೆಯ ಸಂದರ್ಭದಲ್ಲಿ ನಟರಾದ ದರ್ಶನ್ ಮತ್ತು ಯಶ್ ಅವರ ಜೊತೆಯಾಗಿದ್ದರುಅವರೀಗ ಆಡಳಿತ ಪಕ್ಷಕ್ಕೆ ಬೆಂಬಲ ಘೋಷಿಸಿದ ನಂತರ ದರ್ಶನ್ ಮತ್ತು ಯಶ್ ಅವರುಸುಮಲತಾ ಅವರ ರಾಜಕೀಯ ನಿಲುವನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕುಕುಮಾರಸ್ವಾಮಿ ಅವರ ಮಗನಟ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸಿದ್ದರು.

ಆಡಳಿತ ಪಕ್ಷಕ್ಕೆ ಸೇರಿಯೇ ಸೇರುತ್ತಾರೆ ಎಂದು ಪ್ರಚಾರವಾಗಿಆ ಸುದ್ದಿ ಸುಳ್ಳಾದದ್ದು ಹಿರಿಯ ನಟ ಅನಂತನಾಗ್ ವಿಚಾರದಲ್ಲಿ. ‘ಅನಂತನಾಗ್ ಅವರು ಇಂದು ಬಿಜೆಪಿ ಸೇರಲಿದ್ದಾರೆ’ ಎಂದು ಎಲ್ಲ ಮಾಧ್ಯಮಗಳಲ್ಲೂ ಪ್ರಸಾರ/ಪ್ರಕಟಣೆ ಆಯಿತುಅನಂತನಾಗ್ ಅವರು ಈ ಹಿಂದೆ ರಾಜಕೀಯದಲ್ಲಿ ಇದ್ದವರುಸಚಿವರಾಗಿ ಕೆಲಸ ಮಾಡಿದವರುಹಾಗಾಗಿ ಈ ಸುದ್ದಿ ನಿಜ ಇದ್ದರೂ ಇರಬಹುದು ಎಂದು ನಂಬಿದವರೇ ಹೆಚ್ಚುಆದರೆ ಆ ಸುದ್ದಿ ಸುಳ್ಳಾಯಿತು.

ಹಾಗಾದರೆ ಆ ಸುದ್ದಿ ಹೇಗೆ ಬಂತುಅನಂತನಾಗ್ ಅವರು ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆಒಂದೆರಡು ಕಡೆ ಬಹಿರಂಗವಾಗಿ ಅದನ್ನು ಹೇಳಿದ್ದೂ ಇದೆಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಸೇರುವಂತೆ ಒತ್ತಾಯವನ್ನೂ ಮಾಡಲಾಗಿತ್ತುಆದರೆ ಅವರು ಪಕ್ಷ ಸೇರುತ್ತೇನೆ ಎಂದು ಹೇಳಿರಲಿಲ್ಲವಂತೆಹಾಗಾದರೆ ಅನಂತನಾಗ್ ಪಕ್ಷ ಸೇರುತ್ತಾರೆ ಎನ್ನುವ ಸುದ್ದಿ ಹೇಗೆ ಬಂತುಯಾರಾದರೂ ಖಚಿತಪಡಿಸಿರಲೇ ಬೇಕಲ್ಲಇದಕ್ಕೆ ಯಾರಿಂದಲೂ ಉತ್ತರ ಇಲ್ಲಮಾಧ್ಯಮಗಳು ಪ್ರಕಟಿಸುವ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಅನುಮಾನ ಬರುವ ಇಂತಹ ಎಷ್ಟೋ ಪ್ರಸಂಗಗಳಿವೆ.

ಮೊನ್ನೆ ಸುದೀಪ್ ಕುರಿತ ವರ್ತಮಾನ ಬಂದಾಗಲೂ ಅವರನ್ನು ಹತ್ತಿರದಿಂದ ಬಲ್ಲವರು, ‘ಸುದೀಪ್ ಪಕ್ಷ ಸೇರುವ ಸಾಧ್ಯತೆ ಕಡಿಮೆ’ ಎಂದೇ ಹೇಳುತ್ತಿದ್ದರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿ ಕರೆದದ್ದುಅವರ ಪಕ್ಷದ ಕಚೇರಿಯಲ್ಲಿ ಅಲ್ಲಅಲ್ಲಿ ಶಾಲುಧ್ವಜಗಳೂ ಇರಲಿಲ್ಲಅಷ್ಟರ ಮಟ್ಟಿಗೆ ಅದು ಪಕ್ಷದ ಪತ್ರಿಕಾಗೋಷ್ಠಿ ಅಲ್ಲ ಎನ್ನುವಂತೆ ಇತ್ತು.

ತಮ್ಮ ಕಷ್ಟದ ದಿನಗಳಲ್ಲಿ ತಮಗೆ ನೆರವಾದವರಲ್ಲಿ ಬಸವರಾಜ ಬೊಮ್ಮಾಯಿ ಅವರೂ ಒಬ್ಬರುಅವರನ್ನು ‘ಮಾಮ’ ಎಂದು ಕರೆಯುವ ಸುದೀಪ್ಕೃತಜ್ಞತೆಯ ಕುರುಹಾಗಿಚುನಾವಣೆಯಲ್ಲಿ ಅವರ ಪರವಾಗಿಅವರು ಹೇಳುವ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಎಂದರೆಅದು ಪಕ್ಷಕ್ಕೆ ಬೆಂಬಲ ಎಂದೇ ಅರ್ಥ ಎಂದೂ ಅಲ್ಲಿ ವ್ಯಾಖ್ಯಾನಿಸಲಾಯಿತುಪ್ರಶ್ನಿಸಲಾಯಿತುಹಣ ಪಡೆದುಕೊಂಡು ಪ್ರಚಾರಕ್ಕೆ ಬಂದಿರಾಎಂದು ಕೇಳಿದವರಿಗೆಸಿನಿಮಾ ರಂಗದಿಂದಲೇ ಸಾಕಷ್ಟು ದುಡ್ಡು ಬರುವುದಿದೆ ಎಂದು ಚಿತ್ರೋದ್ಯಮದ ಮುಖಕ್ಕೂ ಅಲ್ಲಿ ಕನ್ನಡಿ ಹಿಡಿದರುಆ ಪತ್ರಿಕಾಗೋಷ್ಠಿ ಅಲ್ಲಿನವರ ಭಾವಕ್ಕೆ ತಕ್ಕಂತೆ ಆಯಿತೆನ್ನಿತಮಗೆ ಕಷ್ಟಕಾಲದಲ್ಲಿ ನೆರವಾದವರುಚುನಾವಣೆಯಲ್ಲಿ ಸ್ಪಧಿರ್ಸಿದರೆಅವರು ಬೇರೆ ಪಕ್ಷದಲ್ಲಿದ್ದರೂ ಪ್ರಚಾರಕ್ಕೆ ಹೋಗುತ್ತೇನೆ ಎನ್ನುವುದರ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು ಸುದೀಪ್.

ತಮ್ಮ ಆತ್ಮೀಯರಿಗಾಗಿ ಪಕ್ಷಕ್ಕೆ ಸೇರದೆಯೂ ಪ್ರಚಾರ ಮಾಡಿದವರಿದ್ದಾರೆಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ನಂತರ ಚುನಾಯಿತರಾದವಿಷ್ಣುವರ್ಧನ್‌ರ ಅಭಿಮಾನಿಯಾಗಿಆತ್ಮೀಯ ಮಿತ್ರರಾಗಿದ್ದ ವಿಜಯಕುಮಾರ್ ಅವರು ಒಮ್ಮೆ ಚೆನ್ನಪಟ್ಟಣ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರುಚುನಾವಣಾ ಪ್ರಚಾರಕ್ಕೆ ವಿಷ್ಣುವರ್ಧನ್ ಅವರು ತೆರಳಿದ್ದರು. “ನಾನು ಬಿಜೆಪಿ ಪಕ್ಷದವನಲ್ಲನನ್ನ ಸ್ನೇಹಿತ ವಿಜಯಕುಮಾರ್‌ಗಾಗಿ ಪ್ರಚಾರಕ್ಕೆ ಹೋಗುತ್ತಿದ್ದೇನೆ’ ಎಂದು ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.

 

ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರಾಗಿರುವ ಅಮಿತಾಭ್ ಬಚ್ಚನ್ ರಾಜೀವ್ ಗಾಂಧಿ ಪ್ರಧಾನಿಯಾದ ಮೇಲೆಅವರಿಗೆ ನೆರವಾಗಲು ರಾಜಕೀಯಕ್ಕೆ ಇಳಿದದ್ದುಲೋಕಸಭೆಗೆ ಸ್ಪರ್ಧಿಸಿಚುನಾವಣಾ ಇತಿಹಾಸದಲ್ಲೇ ಅತ್ಯಽಕ ಮತಗಳನ್ನು ಪಡೆದು ಗೆದ್ದದ್ದುಅತ್ಯಲ್ಪ ಸಮಯದಲ್ಲೇ ರಾಜಕೀಯದಿಂದ ದೂರ ಸರಿದು ಅದನ್ನು ದೂರಿದ್ದು ಎಲ್ಲವೂ ಇತಿಹಾಸವ್ಯವಹಾರದಲ್ಲಿ ಇನ್ನಿಲದ ನಷ್ಟ ಅನುಭವಿಸಿದ ಅಮಿತಾಭ್ ಅವರ ಮನೆಗಳು ಏಲಂ ಆಗುವ ಸ್ಥಿತಿ ಬಂದಾಗಅಮರ್ ಸಿಂಗ್ ನೆರವಿಗೆ ಬಂದರುಅಮಿತಾಭ್ ಬಚ್ಚನ್ ಮತ್ತೆ ರಾಜಕೀಯವನ್ನು ಅಪ್ಪಿಕೊಳ್ಳಲಿಲ್ಲಆದರೆ ಅವರಿಬ್ಬರೂ ಈಗ ಆಪ್ತಮಿತ್ರರುಕಷ್ಟಕಾಲದಲ್ಲಿ ನೆರವಿಗೆ ಬಂದ ಅಮರ್ ಸಿಂಗ್ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ ಅಮಿತಾಭ್.

andolanait

Recent Posts

ಚಾಮರಾಜನಗರ| ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ

ಚಾಮರಾಜನಗರ: ಇಟ್ಟಿಗೆ ಬೇಯಿಸಲು ಮರಗಳ ಮಾರಣಹೋಮ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಹಲವು ಗ್ರಾಮಗಳಲ್ಲಿ…

5 mins ago

ಸಿಎಂ ಸಿದ್ದರಾಮಯ್ಯ ತವರಲ್ಲಿ ದಲಿತ ಸಿಎಂ ಕೂಗು

ಮೈಸೂರು: ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ದಲಿತ ಮುಖ್ಯಮಂತ್ರಿ ಕೂಗು ಜೋರಾಗಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಸಿಎಂ ಮಾಡುವಂತೆ…

43 mins ago

ಎಂಇಎಸ್‌ ನಿಷೇಧಿಸುವಂತೆ ಆಗ್ರಹಿಸಿ ವಾಟಾಳ್‌ ನಾಗರಾಜ್‌ ಪ್ರತಿಭಟನೆ

ಮೈಸೂರು : ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧಿಸಬೇಕೆಂದು ಆಗ್ರಹಿಸಿ ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಪ್ರತಿಭಟನೆ ನಡೆಸಿದರು.…

56 mins ago

ಅನಾಥ ಅಸ್ವಸ್ಥರ ನೆರವಿಗೆ ಧಾವಿಸುವ ಮಾನವೀಯ ತಂಡ: ನಿವೃತ್ತ ಶಿಕ್ಷಕ ಸುಂದ್ರಪ್ಪ ತಂಡದ ಕಾರ್ಯ ಪ್ರೇರಣದಾಯಕ

ಮಂಡ್ಯ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ಎಲ್ಲರಿಗೂ ಅವರದ್ದೇ ಆದ ಅವಸರಗಳು. ತನ್ನ ಸುತ್ತಮುತ್ತಲಿನ ನೊಂದವರು, ಸಂಕಷ್ಟದಲ್ಲಿರುವವರ ಕಡೆ ಕಣ್ಣೆತ್ತಿಯೂ…

58 mins ago

ಹೊಸ ವರ್ಷ ಆಚರಣೆಗೆ ಜನರ ಪ್ರವಾಸ: ಕರ್ನಾಟಕದ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ

ಬೆಂಗಳೂರು: ಹೊಸ ವರ್ಷದ ಆಚರಣೆಗೆ ಜನ ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಕರ್ನಾಟಕದ ಪ್ರವಾಸಿ ತಾಣಗಳು ಜನ ಜಂಗುಳಿಯಿಂದ ತುಂಬಿ…

1 hour ago

ಅರಮನೆ ಬಳಿ ಹೀಲಿಯಂ ಸ್ಫೋಟ ಪ್ರಕರಣ: ಎನ್‌ಐಎ ತನಿಖೆಗೆ ಪ್ರಮೋದ್‌ ಮುತಾಲಿಕ್‌ ಆಗ್ರಹ

ಮೈಸೂರು: ಅರಮನೆ ಬಳಿ ಹೀಲಿಯಂ ಸಿಲಿಂಡರ್‌ ಸ್ಫೋಟ ಸಂಭವಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಪ್ರತಿಕ್ರಿಯೆ ನೀಡಿದ್ದು,…

2 hours ago