ಎಡಿಟೋರಿಯಲ್

ಬೆಳಕೂ ಕೂಡ ಮಾಲಿನ್ಯ ಮಾಡಬಲ್ಲದು ಗೊತ್ತೇ?

-ಕಾರ್ತಿಕ್ ಕೃಷ್ಣ

ಕೆಲವು ವಾರಗಳ ಹಿಂದೆ ಒಂದು ವಿಡಿಯೋ ತುಣುಕು ಟ್ವಿಟ್ಟರ್‌ನಲ್ಲಿ ವೈರಲ್ ಆಗಿತ್ತು. ಆರೇಳು ತರುಣರ ತಂಡವೊಂದು ಪ್ಯಾರಿಸ್ ನಗರದ ಕತ್ತಲ ಬೀದಿಗಳಲ್ಲಿ ಕಸರತ್ತು ಮಾಡುತ್ತಾ, ಝಗಮಗಿಸುವ ಸೈನ್ ಬೋರ್ಡಿನ ದೀಪಗಳನ್ನು ನಂದಿಸುತ್ತಿದ್ದುದನ್ನು ಅದರಲ್ಲಿ ಕಾಣಬಹುದಾಗಿತ್ತು. ಓಡುತ್ತಾ ಬಂದು, ಗೋಡೆಯ ಮೇಲೆ ಕಾಲಿರಿಸಿ, ಚಂಗನೆ ನೆಗೆದು, ದೀಪಗಳನ್ನು ನಂದಿಸುತ್ತಿದ್ದ ಅವರ ಸ್ಟಂಟ್‌ಗಳನ್ನು ನೋಡಿ ಹಲವರು ಕರತಾಡನವನ್ನೂ ಮಾಡುತಿದ್ದರು. parkour ಎಂದು ಕರೆಯಲ್ಪಡುವ ಇವರ ಕಸರತ್ತು ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಕಾರಣಕ್ಕೆ ಸಂಚಲನ ಸೃಸ್ಟಿಸಿತ್ತು.

ಕೆಲವರು ಅವರ ಜಿಮ್ಟ್ಯಾಸ್ಟಿಕ್ಸ್ ತಾಕತ್ತನ್ನು ಹೊಗಳಿದರೆ, ಇನ್ನೂ ಕೆಲವರು parkour ಆಟವನ್ನು ಮುನ್ನೆಲೆಗೆ ತರುತ್ತಿರುವ ಇವರ ಶ್ರಮವನ್ನು ಪ್ರಶಂಸಿಸಿದ್ದರು. ಇವರು ಹೀಗೆ ಗೋಡೆಗಳನ್ನು ಏರಿ, ಯಾರದ್ದೋ ಅಂಗಡಿಯ ದೀಪವನ್ನು ಆರಿಸುವುದು ತಪ್ಪ ಎಂದೂ ಕೆಲವರು ವಾದಿಸಿದ್ದರು. ಆದರೆ ‘wizzy gang‘ ಎಂದು ಕರೆಯಲ್ಪಡುವ ಈ ತಂಡದ ಉದ್ದೇಶವೇ ಬೇರೆಯಾಗಿತ್ತು. ಅವರು ಆ ಕಸರತ್ತನ್ನು ಕೇವಲ ಜನರ ಗಮನ ಸೆಳೆಯಲಷ್ಟೇ ಬಳಸಿದ್ದರೇ ಹೊರತು ಅದರ ಹಿಂದಿನ ನೈಜ ಉದ್ದೇಶ ನಮ್ಮ ಅರಿವಿಗೇ ಬಾರದಂತೆ ಅಗಾಧವಾಗಿ ವ್ಯಾಪಿಸುತ್ತಿರುವ ‘ಬೆಳಕಿನ ಪ್ರದೂಷಣೆ‘ಯ ಬಗ್ಗೆ ಅರಿವು ಮೂಡಿಸುವುದಾಗಿತ್ತು.

ವಾಯು-ಜಲ-ಶಬ್ದ ಮಾಲಿನ್ಯ ಗೊತ್ತು, ಇದ್ಯಾವುದು ಬೆಳಕಿನ ಮಾಲಿನ್ಯ ಎಂದು ಯೋಚಿಸುತ್ತಿದ್ದೀರಾ? ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಬೆಳಕಿನ ಮಾಲಿನ್ಯ ಎಂದರೆ ಯಾವುದೇ ಅನಪೇಕ್ಷಿತ, ಅಸಮಂಜಸವಾದ, ಅಳತೆ ಮೀರಿದ ಪ್ರಮಾಣದಲ್ಲಿರವ ಕೃತಕ ಬೆಳಕು. ನಟ್ಟಿರುಳಿನ ರಾತ್ರಿಯಲ್ಲಿ ನೀವು ಹೈ ವೇಗಳಲ್ಲಿ ಪ್ರಯಾಣ ಮಾಡಿದ್ದರೆ, ಕಣ್ಣು ಕೋರೈಸುವ ಬೆಳಕನ್ನು ಸೂಸುವ ನಾಮಫಲಕಗಳು ನಿಮ್ಮ ಕಣ್ಣಿಗೆ ಬಿದ್ದಿರಬಹುದು. ಪಟ್ಟಣಗಳಲ್ಲಂತೂ ಈಗೀಗ ರಾತ್ರಿಗಳನ್ನೇ ನೋಡುವುದಿಲ್ಲ ಬಿಡಿ. ರಾತ್ರಿಗಳು ಅಂದರೆ, ಯಾವುದೇ ಬೆಳಕಿರದ ನೀರವ ಕತ್ತಲು! ಹೋಟೆಲುಗಳು, ಶಾಪಿಂಗ್ ಕೇಂದ್ರಗಳ ನಾಮಫಲಕಗಳು, ಕಣ್ಣು ಕೋರೈಸುವ ಬೆಳಕು ಸೂಸುವ ಬಲ್ಬುಗಳಿಂದ ಅಲಂಕೃತಗೊಂಡು ರಾತ್ರಿ ಪೂರ್ತಿ ಜಗಮಗಿಸುತ್ತವೆ. ಇದರ ಜೊತೆಗೆ ಬೃಹದಾಕಾರದ ಜಾಹೀರಾತಿನ ಫಲಕಗಳೂ ತಾವೇನು ಕಡಿಮೆಯಿಲ್ಲ ಎಂದು ಬೆಳಕನ್ನು ಸೂಸುತ್ತಿರುತ್ತವೆ.

ತನ್ನ ಪಾಡಿಗೆ ಅದು ಹೊತ್ತಿಕೊಂಡರೆ ನಮಗೇನು ನಷ್ಟ ಎಂದು ನೀವಂದುಕೊಳ್ಳಬಹುದು. ಆಕಾಶವನ್ನು ದಿಟ್ಟಿಸಿ ನೋಡಿದರೆ ಫಳ ಫಳ ಹೊಳೆಯುವ ನಕ್ಷತ್ರಗಳು ಕೋಟಿಗಟ್ಟಲೆ ಕಾಣ ಸಿಗುತ್ತಿದ್ದ ಕಾಲವೊಂದಿತ್ತು. ಈಗ ಅದರ ಅರ್ಧದದಷ್ಟೂ ಬರಿಗಣ್ಣಿಗೆ ಗೋಚರವಾಗುವುದಿಲ್ಲ. ಇದಕ್ಕೆ ಬೆಳಕಿನ ಮಾಲಿನ್ಯವೂ ಒಂದು ಕಾರಣ. ಮೊದಲು ಬರಿಗಣ್ಣಿಗೆ ಕಾಣುತ್ತಿದ್ದ ಸುಮಾರು ೯೫% ಕ್ಕೂ ಅಧಿಕ ನಕ್ಷತ್ರಗಳು ಇಂದು ನಮಗೆ ಅಗೋಚರವಾಗಿವೆಯಂತೆ! ನಿಮಗೆ ತಿಳಿದಿರಲಿ, ಯಾವುದೇ ಬೆಳಕು ಮೇಲಕ್ಕೆ, ಕೆಳಕ್ಕೆ ಅಥವಾ ಮೇಲ್ಮುಖವಾಗಿ ಪ್ರತಿಫಲಿಸಿದಾಗ, ಅದು ವಾತಾವರಣದಲ್ಲಿನ ಪದರಗಳಲ್ಲಿ ಚದುರಿಹೋಗಿ ರಾತ್ರಿಯ ಕತ್ತಲೆಯನ್ನು ಕಡಿಮೆ ಮಾಡುವ ಹೊಳಪನ್ನು ಸೃಷ್ಟಿಸುತ್ತದೆ. ಇದರಿಂದ ಹೊರ ಮೈಯಲ್ಲಿರುವ ನಕ್ಷತ್ರಗಳು ಕ್ರಮೇಣ ದೃಷ್ಟಿಗೆ ಬೀಳುವುದಿಲ್ಲ.

ಆ ಅಂಕಿಅಂಶದ ಪ್ರಕಾರ ಜಗತ್ತಿನ ೮೦% ಕ್ಕೂ ಹೆಚ್ಚು ಜನರು ‘ಹೊಳೆಯುವ ಆಕಾಶ‘ದ ಕೆಳಗೆ ವಾಸಿಸುತ್ತಿದ್ದಾರಂತೆ! ಪಾಶ್ಚಿಮಾತ್ಯ ದೇಶಗಳಲ್ಲಿ ೯೯% ಕ್ಕೂ ಹೆಚ್ಚು ಜನರು ಈ ಸ್ಥಿತಿಯಲ್ಲಿದ್ದಾರೆ ಎಂದರೆ ಅಚ್ಚರಿಪಡಲೇಬೇಕು. ಚಿಂತಿಸಬೇಕಾದ ಇನ್ನೊಂದು ಸಂಗತಿೆುೀಂನೆಂದರೆ, ಭೂಮಿಯ ಮೇಲ್ಮೈಯಲ್ಲಿ ಕೃತಕ ಬೆಳಕಿನ ಪ್ರಮಾಣವು ಪ್ರತಿ ವರ್ಷ ಕನಿಷ್ಠ ೨ ಪ್ರತಿಶತದಷ್ಟು ಹೆಚ್ಚುತ್ತಿದೆಯಂತೆ! ಇದನ್ನೇ ಬೆಳಕಿನ ಪ್ರದೂಷಣೆ ಎನ್ನವುದು. ಅಸಲಿಗೆ ಈಗೀಗ ಸಂಪೂರ್ಣ ಕತ್ತಲೆ ಎಂಬುದೇ ಇಲ್ಲ ! earth doesn’t sleep at all!

ಬೆಳಕಿನ ಮಾಲಿನ್ಯ ನಕ್ಷತ್ರಗಳನ್ನು ನಮ್ಮ ಕಣ್ಣಿನ ರೇಡಾರ್‌ನಿಂದ ದೂರ ಮಾಡುವುದಷ್ಟೇ ಅಲ್ಲದೆ, ಮನುಷ್ಯನ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆೆುಂಂದು ಸಂಗತಿ ಬೆಳಕಿಗೆ ಬಂದಿದೆ. ಮನುಷ್ಯರ ಜಾಗೃತ ಹಾಗೂ ನಿದ್ರೆಯ ಕಾರ್ಯ ವಿಧಾನವನ್ನು ನಿರ್ಧರಿಸುವ circadian rhythm ಎಂಬ ಚಲನ ಕ್ರಿಯೆಯೊಂದಿದೆ. ನಮ್ಮ ಸರ್ಕಾಡಿಯನ್ ರಿದಮ್ ಅತಿಯಾಗಿ ಕೃತಕ ಬೆಳಕಿಗೆ ಒಡ್ಡಿಕೊಂಡಾಗ ನಿದ್ರೆಯನ್ನು ನಿಯಂತ್ರಿಸುವ ಮೆಲಟೋನಿನ್ ಎಂಬ ಒಳಹರಿಗೆಯ (ಹಾರ್ಮೋನ್) ಉತ್ಪಾದನೆಯು ವಿಳಂಬವಾಗುತ್ತದೆ ಎಂದು ಸಂಶೋಧಕರು ಗಮನಿಸಿದ್ದಾರೆ. ಇದರಿಂದ ರಾತ್ರಿ ನಿದ್ರಿಸಲು ನಾವು ಹೆಚ್ಚು ಸಮಯ ತೆಗೆದುಕೊಳ್ಳುತ್ತೇವೆ ಹಾಗೂ ಆ ನಿದ್ರೆಯೂ ಅಷ್ಟೊಂದು ಆಹ್ಲಾದಕರವಾಗಿರುವುದಿಲ್ಲ. ಮಲಗುವ ಮುನ್ನ ಅತಿಯಾಗಿ ಫೋನ್ ಬಳಸುವವರು ನಿದ್ರಾಹೀನತೆಯಿಂದ ಬಳಲುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಪ್ರಮುಖ ಕಾರಣ ನಮ್ಮ ಬದುಕಿಗೆ ಲಗ್ಗೆ ಇಟ್ಟಿರುವ ಕೃತಕ ಬೆಳಕು!

ಬೆಳಕಿನ ಪ್ರದೂಷಣೆಯಿಂದ ಮನುಷ್ಯನಿಗಿಂತ ಹೆಚ್ಚಾಗಿ ಬಳಲುತ್ತಿರುವುದು ಪ್ರಾಣಿ-ಪಕ್ಷಿ-ಕೀಟ ಪ್ರಪಂಚ. ಪ್ರಪಂಚದಾದ್ಯಂತ ಕೃತಕ ದೀಪಗಳು ಹೆಚ್ಚುತ್ತಿರುವುದರಿಂದ ಕತ್ತಲಿನ ಪ್ರದೇಶಗಳು ಕಡಿಮೆಯಾಗಿ ಹಲವಾರು ಕೀಟಗಳು ಹಾಗೂ ಪ್ರಾಣಿಗಳ ಪಂಗಡಗಳು ತಮ್ಮ ಆವಾಸ ಸ್ಥಾನಗಳನ್ನೇ ಕಳೆದುಕೊಳ್ಳುತ್ತಿವೆ. ರಾತ್ರಿ ಹೊತ್ತು ಆಕಾಶದ ಹೊಳಪು ಹೆಚ್ಚಿದಂತೆ, ನಿಶಾಚಾರಿಗಳ ವಲಸೆಯ ಮಾದರಿಗಳು, ಪರಸ್ಪರ ಸಂವಹನಗಳು, ಸಸ್ಯವರ್ಗದ ಪ್ರಕ್ರಿೆುಂಗಳು ಏರುಪೇರಾಗಿ ಪರಿಸರ ವ್ಯವಸ್ಥೆಯು ಅಸಮತೋಲನಗೊಳ್ಳುತ್ತಿದೆ. ಬೆಳಕಿನ ಮಾಲಿನ್ಯದಿಂದ ಮಿಂಚುಹುಳಗಳ ಸಂತಾನೋತ್ಪತ್ತಿಯು ಕುಂಟುತ್ತಿದೆೆುಂಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಮಿಂಚುಹುಳಗಳು ಬೋಂಲುಮಿನೆಸೆನ್ಸ್ ಮೂಲಕ ಸಂತಾನೋತ್ಪತ್ತಿಯ ಸಮಯದಲ್ಲಿ ಬೇಕಾದ ಸಂವಹನವನ್ನು ನಡೆಸುತ್ತವೆ. ಬೋಂಲುಮಿನೆಸೆನ್ಸ್ ಎಂದರೆ ಬೆಳಕನ್ನು ಉತ್ಪಾದಿಸುವ ಒಂದು ರಾಸಾಯನಿಕ ಕ್ರಿಯೆ. ಮಿಂಚುಹುಳಗಳು ತಮ್ಮ ಮಿಲನದ ಸಮಯದಲ್ಲಿ ಸಂಗಾತಿಯನ್ನು ಅರಸಲು, ಸೂರ್ಯಾಸ್ತ ಆದ ಕೆಲವೇ ಘಳಿಗೆಯಲ್ಲಿ ಬೆಳಕನ್ನು ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಹೊರಸೂಸುತ್ತದೆಯಂತೆ. ಕೃತಕ ಬೆಳಕು ಹೆಚ್ಚಿದ್ದರೆ, ಮಿಂಚುಹುಳಗಳು ಇನ್ನಷ್ಟು ಶಕ್ತಿ ಉಪೋಂಗಿಸಿ ಬೆಳಕನ್ನು ಹೊಮ್ಮಿಸಬೇಕಾಗುತ್ತದೆ. ತೈವಾನ್ ಹಾಗೂ ಚೀನಾದಲ್ಲಿ ಕಂಡುಬರುವ ಅಕ್ವಾಟಿಕಾ ಫೀಕ್ಟ ಎಂಬ ಜಾತಿಯ ಮಿಂಚುಹುಳಗಳ ಮೇಲೆ ೨೦೧೮ರಲ್ಲಿ ಸಂಶೋಧನೆೊಂಂದನ್ನು ನಡೆಸಲಾಗಿದ್ದು, ಮಿಂಚುಹುಳಗಳು ಕೃತಕ ಬೆಳಕಿನೊಂದಿಗೆ ಸ್ಪರ್ಧಿಸಲು ಪ್ರಕಾಶಮಾನವಾಗಿ ಮಿನುಗಲು ಪ್ರಯತ್ನಿಸುವುದರಿಂದ ಹೊಳಪಿನ ನಡುವಿನ ಮಧ್ಯಂತರಗಳು ಹೆಚ್ಚಾಗಿ ಸಂಗಾತಿಯನ್ನು ಹುಡುಕುವ ಸಾಧ್ಯತೆಯು ಕಡಿಮೆಯಾಗಿದ್ದು, ಇದು ಸಂತಾನೋತ್ಪತ್ತಿಯ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಿದೆೆುಂಂದು ತಿಳಿದುಬಂದಿದೆ. ಇದಕ್ಕೆ ಪೂರಕವೆಂಬಂತೆ, ಆಂಧ್ರಪ್ರದೇಶದ ಬರ್ರಾನ್ಕುಲ ಗ್ರಾಮದಲ್ಲಿ ೧೯೯೬ರಲ್ಲಿ ಪ್ರತಿ ೧೦ ಮೀಟರ್ ವ್ಯಾಪ್ತಿಯಲ್ಲಿ ೫೦೦ಕ್ಕೂ ಹೆಚ್ಚಿದ್ದ ಮಿಂಚುಹುಳುಗಳ ಸಂಖ್ಯೆ ಇಂದು ಕೇವಲ ೨೦ಕ್ಕೆ ಇಳಿದಿದೆಯಂತೆ!

ವಲಸೆ ಹಕ್ಕಿಗಳ ಮೇಲೆ ಬೆಳಕಿನ ಮಾಲಿನ್ಯ ಹೇಗೆ ಪ್ರಭಾವ ಬೀರುತ್ತಿದೆಯೆಂಬುದು ೨೦೨೨ರ ವಿಶ್ವ ವಲಸೆ ಹಕ್ಕಿಗಳ ದಿನಾಚರಣೆಯ ಪ್ರಮುಖ ಉದ್ದೇಶವಾಗಿತ್ತು. ಬೆಳಕಿನ ಮಾಲಿನ್ಯದಿಂದ ಪರಿಸರ ವ್ಯವಸ್ಥೆಯಲ್ಲಿ ಬೆಳಕು ಮತ್ತು ಕತ್ತಲೆಯ ನೈಸರ್ಗಿಕ ಮಾದರಿಗಳು ಬದಲಾಗುತ್ತಿದೆ. ಇದರಿಂದ ಪಕ್ಷಿಗಳ ವಲಸೆಯ ನಮೂನೆ, ಆಹಾರದ ಶೈಲಿ ಮತ್ತು ಸಂವಹನ ಬದಲಾಗುತ್ತಿದೆ. ವಲಸೆ ಸಮಯದಲ್ಲಿ ಪಕ್ಷಿಗಳು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವಾಗ, ಕೃತಕ ಬೆಳಕಿನಿಂದ ಆಕರ್ಷಿತಗೊಳ್ಳುವ ಸಾಧ್ಯತೆಯಿರುತ್ತದೆ. ಇದರಿಂದ ವಲಸೆಯ ಪಥ ಬದಲಾಗಿ ಪ್ರಕಾಶಿಸುವ ಪ್ರದೇಶಗಳಲ್ಲೇ ಗಿರಕಿ ಹೊಡೆಯುತ್ತಾ, ತನ್ನ ಶಕ್ತಿೆುಂಲ್ಲ ಉಡುಗಿ, ತನ್ನ ಗುಂಪಿನೊಂದಿಗೆ ಸಂವಹನ ಸಾಧ್ಯವಾಗದೆ ಪ್ರತಿ ವರ್ಷ ಲಕ್ಷಾಂತರ ವಲಸೆ ಹಕ್ಕಿಗಳು ಸಾವಿಗೀಡಾಗುತ್ತಿವೆಯಂತೆ!

ಬೆಳಕಿನ ಮಾಲಿನ್ಯದಿಂದ ಕಡಲ ಆಮೆಗಳೂ ಸಂಕಷ್ಟಕ್ಕೆ ಒಳಗಾಗುತ್ತಿವೆ ಎಂಬುದು ದುಃಖದ ಸಂಗತಿ. ಕತ್ತಲಿನ ವೇಳೆಯಲ್ಲಿ ಮೊಟ್ಟೆಯಿಂದ ಹೊರಬರುವ ಮರಿಗಳ ಜೀವ, ಕಡಲು ಸೇರುವ ತನಕ ತೂಗುಯ್ಯಾಲೆಯಲ್ಲಿಯೇ ಇರುತ್ತದೆ. ಅವುಗಳಿಗೆ ಕಂಟಕವಾಗುವುದೇ ಕಡಲ ತಡಿಯಲ್ಲಿ ಹೆಚ್ಚುತ್ತಿರುವ ಕೃತಕ ಬೆಳಕು. ಮೊಟ್ಟೆಯಿಂದ ಹೊರ ಬಂದ ಕೂಡಲೇ ಬೆಳಕಿಗೆ ಆಕರ್ಷಿತಗೊಳ್ಳುವ ಎಷ್ಟೋ ಮರಿಗಳು ಕಡಲು ಸೇರದೆ, ಇನ್ನೆಲ್ಲೋ ಸಾಗಿ ಪ್ರಾಣ ಕಳೆದುಕೊಳ್ಳುತ್ತಿವೆಯಂತೆ.

ಬೆಳಕಿನ ಮಾಲಿನ್ಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅನಾವಶ್ಯಕವಾಗಿ ಕೃತಕ ಬೆಳಕನ್ನು ಎಲ್ಲೆಂದರಲ್ಲಿ ಬಳಸುವುದು ಕಡಿಮೆಯಾಗಬೇಕು. ಕಣ್ಣು ಕೋರೈಸುವ ಬೆಳಕನ್ನು ಸೂಸುವ ಬಲ್ಬುಗಳ ಬಳಕೆಯೇ ನಿಷಿದ್ಧವಾಗಬೇಕು. ಪಟ್ಟಣಗಳಲ್ಲಿ ಸುರಕ್ಷತೆಯ ನಿಟ್ಟಿನಲ್ಲಿ ರಾತ್ರಿಯೆಲ್ಲಾ ದೀಪಗಳ ಬಳಕೆ ಸರಿಯೆನಿಸಿದರೂ, ನಾಮಫಲಕಗಳಲ್ಲಿ ಜಗಮಗಿಸುವ ದೀಪಗಳ ಮಿತಿಯಿಲ್ಲದ ಬಳಕೆಯನ್ನು ನಿಯಂತ್ರಿಸಬೇಕು. ಕೆಲಹೊತ್ತಾದರೂ ಸಂಪೂರ್ಣ ಕತ್ತಲಿದ್ದರೆಯೇ ಭೂಮಿಗೆ ಒಳಿತು! ಈ ನಿಟ್ಟಿನಲ್ಲಿ ಕೃತಕ ಬೆಳಕನ್ನು ನಿಯಮಿತವಾಗಿ ಬಳಸಿ, ನಮ್ಮ ಆರೋಗ್ಯದೊಂದಿಗೆ ಇತರ ಜೀವಿಗಳನ್ನೂ ಕಾಪಾಡೋಣ!

 

andolana

Recent Posts

ಓದುಗರ ಪತ್ರ: ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…

11 mins ago

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

22 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

45 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

1 hour ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

3 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

3 hours ago