ಡಾ. ಎನ್. ಎಸ್. ರಂಗರಾಜು
ಪಾರಂಪರಿಕ ನಗರ ಮೈಸೂರಿನಲ್ಲಿ ನೂರು ವರ್ಷಗಳನ್ನು ಪೂರ್ಣಗೊಳಿಸಿರುವ ನೂರಕ್ಕೂ ಹೆಚ್ಚು ಪಾರಂಪರಿಕ ಕಟ್ಟಡ ಗಳಿವೆ. ಇವುಗಳೆಲ್ಲವೂ ಮೈಸೂರು ರಾಜ ವಂಶಸ್ಥರಾದ ಮುಮ್ಮಡಿ ಕೃಷ್ಣರಾಜ ಒಡೆಯರ್, ಹತ್ತನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಶ್ರೀ ಜಯಚಾಮರಾಜ ಒಡೆಯರ್ (೧೭೯೯ ರಿಂದ ೧೯೪೭) ಕಾಲದಲ್ಲಿ ನಿರ್ಮಿಸಿದ ಕಟ್ಟಡಗಳಾಗಿವೆ.
ಇವುಗಳಲ್ಲಿ ಪ್ರಪಂಚಕ್ಕೇ ಮಾದರಿಗಳಾದ ದೇವರಾಜ ಮಾರುಕಟ್ಟೆ ಅಲ್ಲಿಂದ ೨೫೦ ಮೀ. ಅಂತರದಲ್ಲಿ ಲ್ಯಾನ್ ಡೌನ್ ಬಜಾರ್ ಮತ್ತು ಈ ಎರಡು ಮಾರುಕಟ್ಟೆಗಳ ಮಧ್ಯದಲ್ಲಿ ಚಿಕ್ಕಗಡಿಯಾರದಲ್ಲಿರುವ ಸುಂದರ ಕಾರಂಜಿ ಮತ್ತು ಈಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಲ್ಪದ ವೃತ್ತದ ಸ್ಥಳದಲ್ಲಿ ಎಲಿಗೆಂಟ್ ಕಾರಂಜಿ ಇದ್ದು, ಸಂಜೆ ವೇಳೆ ಈ ಮಾರುಕಟ್ಟೆಗಳಿಗೆ ಬರುವವರಿಗೆ ಮನೋರಂಜನೆಗಾಗಿ ನಿರ್ಮಿಸಲಾಗಿತ್ತು.
ಸಾರ್ವಜನಿಕರ ಉಪಯೋಗಕ್ಕಾಗಿ ವಾಣಿವಿಲಾಸ ಮಾರುಕಟ್ಟೆ ಮತ್ತು ಮಂಡಿ ಮಾರುಕಟ್ಟೆಗಳನ್ನು ಕೂಡ ನಿರ್ಮಿಸಿದ್ದಾರೆ. ಮೈಸೂರು ರಾಜರು ನಿರ್ಮಿಸಿದ ಈ ಮಾರುಕಟ್ಟೆಗಳ ನಂತರ ನಮ್ಮ ಯಾವ ಸರ್ಕಾರಗಳು, ವಿಶಾಲವಾಗಿ ಬೆಳೆಯುತ್ತಿರುವ ಪಾರಂಪರಿಕ ನಗರದ ಯಾವ ಭಾಗದಲ್ಲೂ ಇಂತಹ ಮಾರುಕಟ್ಟೆಗಳನ್ನು ಇದುವರೆವಿಗೂ ನಿರ್ಮಿಸದಿರುವುದು ದುರಂತವೇ ಸರಿ.
ದೇವರಾಜ ಮಾರುಕಟ್ಟೆಯ ಕಲೆ ಮತ್ತು ವಾಸ್ತುಶಿಲ್ಪ: ಸುಮಾರು ೧೨೫ ವರ್ಷಗಳ ಹಿಂದೆ ಮೈಸೂರಿಗೆ ಕಾವೇರಿ ನದಿಯನ್ನು ಹರಿಸಲು ದಿವಾನ್ ಪೂರ್ಣಯ್ಯನವರ ಕಾಲದಲ್ಲಿ ಹಳ್ಳವನ್ನು ತೋಡಿಸಲಾಗಿತ್ತು. ಆದರೆ, ಕಾರಣಾಂತರದಿಂದ ಆ ಕೆಲಸ ಸ್ಥಗಿತಗೊಂಡಿತ್ತು. ಆ ಹಳ್ಳವನ್ನು ಮೈಸೂರಿಗೆ ಬರುತ್ತಿದ್ದ ರೈಲುಗಳಲ್ಲಿ ಬಳಸುತ್ತಿದ್ದ ಕಲ್ಲಿದ್ದಲಿನ ಬೂದಿಯನ್ನು ತುಂಬುವುದಕ್ಕೆ ಉಪಯೋಗಿಸಿಕೊಳ್ಳಲಾ ಯಿತು. ಕಾಲಾನಂತರದಲ್ಲಿ ಅದೇ ಸ್ಥಳದಲ್ಲಿ ದೇವರಾಜ ಮಾರುಕಟ್ಟೆಯನ್ನು ನಿರ್ಮಿಸಲಾಯಿತು.
ದೇವರಾಜ ಮಾರುಕಟ್ಟೆಗೆ ನಾಲ್ಕು ಕಡೆ ಗೋಡೆಗಳನ್ನು (ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ, ಶಿವರಾಂಪೇಟೆ ರಸ್ತೆ ಮತ್ತು ಆನೆ ಸಾರೋಟ್ ರಸ್ತೆ), ನಾಲ್ಕು ಪಾರಂಪರಿಕ ರಸ್ತೆಗಳ ಮಧ್ಯ ಭಾಗದಲ್ಲಿ ನಿರ್ಮಿಸಿ ಹೊರಗೋಡೆಯಲ್ಲಿ ಕಚ್ಚುಗಾರೆಯ ಅಲಂಕರಣ, ಕಮಾನುಗಳನ್ನು ನಿರ್ಮಿಸಿ, ಸುಮಾರು ೨ ಅಡಿಗಳಿಗೂ ಹೆಚ್ಚು ದಪ್ಪನಾದ ಗೋಡೆಗಳನ್ನು ನಿರ್ಮಿಸಿ ಎರಡು ಭಾಗಗಳಲ್ಲಿ ನಾಲ್ಕು ಗೋಡೆಗಳಲ್ಲಿ ವ್ಯಾಪಾರಕ್ಕಾಗಿ ಅನೇಕ ಅಂಗಡಿಗಳನ್ನು ಮತ್ತು ಗೂಡುಗಳನ್ನು ನಿರ್ಮಿಸಿದ್ದು, ಮಧ್ಯಭಾಗದಲ್ಲಿ ತೆರೆದ ಮಾರುಕಟ್ಟೆಗಾಗಿ ಮಂಟಪವನ್ನು ನಿರ್ಮಿಸಿ ದಿನಬಳಕೆಯ ವಸ್ತುಗಳ ಅಂಗಡಿಗಳಿಗೆ ಮೀಸಲಿಟ್ಟಿದ್ದಾರೆ.
ಮಾರುಕಟ್ಟೆಗೆ ಬಂದ ದುಸ್ಥಿತಿ: ಮೈಸೂರು ಮಹಾನಗರ ಪಾಲಿಕೆಯವರು ಇದರ ನಿರ್ವಹಣೆಯನ್ನು ಸರಿಯಾಗಿ ಮಾಡದೇ ಧನ್ವಂತರಿ ರಸ್ತೆ, ಸಯ್ಯಾಜಿರಾವ್ ರಸ್ತೆ ಕಡೆಯ ಕೆಲವು ಅಂಗಡಿಗಳಿರುವ ಭಾಗದಲ್ಲಿ ಸಣ್ಣ ಕುಸಿತ ಕಂಡಿತು. ಆಗ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ದೇವರಾಜ ಮಾರುಕಟ್ಟೆಯ ಸಂರಕ್ಷಣೆಗೆ ೯ ಕೋಟಿ ರೂ. ಮತ್ತು ಲ್ಯಾನ್ಸ್ ಡೌನ್ ಕಟ್ಟಡದ ಸಂರಕ್ಷಣೆಗೆ ೬ ಕೋಟಿ ರೂ. ಗಳನ್ನು ಮಂಜೂರು ಮಾಡಿ ‘ಸಾವನಿ ಸಂರಕ್ಷಣಾ ಕಂಪೆನಿ’ಗೆ ವಹಿಸಲಾಗಿತ್ತು.
ಸಂರಕ್ಷಣಾ ತಜ್ಞ ಇಂಜಿನಿಯರ್ ರವಿ ಗುಂಡೂರಾವ್ ಅವರು, ನಿಗಾವಹಿಸಿ ನಿಯಮಗಳ ಪ್ರಕಾರ ಸಂರಕ್ಷಣಾ ಕಾರ್ಯ ನಡೆಯುತ್ತಿತ್ತು. ಆದರೆ ೨೦೧೬ರಲ್ಲಿ ಸಂರಕ್ಷಣಾ ಕಾರ್ಯ ನಡೆಯುತ್ತಿದ್ದ ಧನ್ವಂತರಿ ರಸ್ತೆಯ ಕಡೆಯ ಕಮಾನಿಗೆ ಗ್ರಿಲ್ಲಿಂಗ್ ಯಂತ್ರವನ್ನು ಬಳಸಿ ಕೊರೆಯಲು ಪ್ರಾರಂಭಿಸಿದರು. ಆಗ ಆ ಕಮಾನು ಮಾತ್ರ ಕುಸಿಯಿತು.
ಇದೇ ಸಂದರ್ಭವನ್ನು ಬಳಸಿಕೊಂಡ ನಗರಪಾಲಿಕೆಯವರು ಅಕ್ಕಪಕ್ಕದ ಗಟ್ಟಿಮುಟ್ಟಾಗಿದ್ದ ಅಂಗಡಿಗಳನ್ನೂ ಕೆಡವಿ ಹಾಕಿದರು. ಈ ಕಮಾನು ಮತ್ತು ಅಂಗಡಿಗಳನ್ನು ಕೆಡವಿ ಹಾಕಿದ್ದರೂ ಯಾವ ರೀತಿಯ ತನಿಖೆಯನ್ನಾಗಲಿ ಅಥವಾ ಎಫ್‌ಐಆರ್ ಹಾಕಿ ಸತ್ಯಾಂಶವನ್ನು ಹೊರತೆಗೆಯುವ ಕೆಲಸವನ್ನು ನಗರಪಾಲಿಕೆಯಾಗಲಿ ಅಥವಾ ಸರ್ಕಾರವಾಗಲಿ ಮಾಡಲೇ ಇಲ್ಲ, ಇದ್ಕಕೆ ಕಾರಣವೇನು ಎಂಬುದನ್ನು ಅಧಿಕಾರಿಗಳೇ ತಿಳಿಸಬೇಕು!
ಕುಸಿದು ಬಿದ್ದದ್ದು ದೇವರಾಜ ಮಾರುಕಟ್ಟೆಯ ಕಮಾನು ಮಾತ್ರ. ಆದರೆ, ಯಾವುದೇ ತೊಂದರೆಯಿಲ್ಲದೆ, ಇದೇ ಮುಖ್ಯಮಂತ್ರಿಗಳು ನೀಡಿದ್ದ ೬ ಕೋಟಿ ರೂ.ಗಳಿಂದ ತೃಪ್ತಿಕರವಾಗಿ ಅರ್ಧಕ್ಕೂ ಹೆಚ್ಚು ಭಾಗದ ಸಂರಕ್ಷಣಾ ಕಾರ್ಯ ನಡೆದಿದ್ದು, ಲ್ಯಾನ್ಸ್ ಡೌನ್ ಕಟ್ಟಡದ ಕಾಮಗಾರಿಯನ್ನು ತಕ್ಷಣ ನಿಲ್ಲಿಸಿಬಿಟ್ಟರು? ಇದಕ್ಕೆ ಕಾರಣ ತಿಳಿಯಲಿಲ್ಲ.
ಇಷ್ಟೆಲ್ಲಾ ಸಂರಕ್ಷಣಾ ಕಾರ್ಯಗಳೂ ಪಾರಂಪರಿಕ ನಗರದಲ್ಲಿ ವೈಜ್ಞಾನಿಕವಾಗಿ ನಡೆಯುತ್ತಿದ್ದರೂ ನಮ್ಮ ಅಽಕಾರಿಗಳಿಗೆ ಮತ್ತು ರಾಜಕೀಯ ವ್ಯಕ್ತಿಗಳಿಗೆ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಮಾಡಬಹುದಾಗಿದ್ದು ಮತ್ತು ಸಂರಕ್ಷಣೆ ಮಾಡುವ ಇಲಾಖೆಗಳು,ನುರಿತ ತಜ್ಞರು ಮೈಸೂರಿನಲ್ಲೇ ಇದ್ದರೂ ಯಾವ ಕಾರಣಕ್ಕೆ ಅವರುಗಳನ್ನು ಬಳಸಿಕೊಳ್ಳದೇ ಕಟ್ಟಡಗಳನ್ನು ನೆಲಸಮ ಮಾಡಿ ಬೇರೆ ಕಟ್ಟಡಗಳನ್ನು ಕಟ್ಟಲು ಇಷ್ಟು ಉತ್ಸಾಹ ಯಾಕೆ? ಬೆಂಗಳೂರಿನ ಮಾರುಕಟ್ಟೆಯ ಸ್ಥಿತಿಯನ್ನು ನೋಡಿ. ‘ಆನೆ ಇದ್ದರೂ ಕೋಟಿ; ಸತ್ತರೂ ಕೋಟಿ’ ಎಂಬ ಗಾದೆಯಂತೆ ಬೇರೆ ಏನಾದರೂ ಕಾರ್ಯಕ್ರಮಗಳಿವೆಯೇ? . . . ತಿಳಿಯದು.
ಸಂರಕ್ಷಿಸಬಹುದಾದ ಕಟ್ಟಡ
೨೦೧೬ರಿಂದ ಮಳೆಗಾಲ ಇತ್ಯಾದಿಗಳ ಒತ್ತಡವಿದ್ದರೂ ಇಲ್ಲಿಯವರೆಗೂ ದೇವರಾಜ ಮಾರುಕಟ್ಟೆಯ ಒಂದು ಇಟ್ಟಿಗೆ ಕೂಡ ಬಿದ್ದಿಲ್ಲ. ಭಾರತದಲ್ಲಿ ಇದಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿರುವ ಪಾರಂಪರಿಕ ಕಟ್ಟಡಗಳು ಮತ್ತು ದೇವಾಲಯಗಳಿದ್ದು ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಇಲಾಖೆಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ೨೭೫ಕ್ಕೂ ಹೆಚ್ಚು ಪುರಾತನ ದೇವಾಲಯಗಳ ಸಂರಕ್ಷಣಾ ಕಾರ್ಯಗಳು ನಡೆಯುತ್ತಿದೆ.
ಯಾವ ಭಾಗದಲ್ಲಿ ಸಂರಕ್ಷಣೆಯಾಗಬೇಕು?
ಸೂಕ್ಷ ವಾಗಿ ಗಮನಿಸಬೇಕಾದ ಅಂಶಗಳು
ಮೈಸೂರಿನಲ್ಲಿ ಈಗ ಸಂರಕ್ಷಣಾ ಕಾರ್ಯ ನಡೆಯುತ್ತಿರುವ ಪಾರಂಪರಿಕ ಕಟ್ಟಡಗಳು
(ಲೇಖಕರು, ಪರಂಪರೆ ಸಂರಕ್ಷಣಾ ಸಮಿತಿ ಸದಸ್ಯರು, ಮೈಸೂರು)
ಬೆಂಗಳೂರು: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಅಧಿವೇಶನದ ಮೊದಲ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ಗೈರಾಗಿದ್ದಾರೆ. ಇಂದಿನಿಂದ ಡಿಸೆಂಬರ್.19ರವರೆಗೆ ಅಧಿವೇಶನ…
ಬೆಂಗಳೂರು: ನಾಯಕತ್ವ ಬದಲಾವಣೆ ಗೊಂದಲ, ಸರ್ಕಾರದಲ್ಲಿ ಶೇಕಡಾ.63 ರ್ಷಟು ಕಮಿಷನ್ ಕುರಿತು ಉಪಲೋಕಾಯುಕ್ತರ ಹೇಳಿಕೆ, ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ…
ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ…
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣವಾಯಿತೇ ಹೈಕಮಾಂಡ್ ಮೌನ? ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಗೊಂದಲ ಬಿಜೆಪಿ ಮತ್ತು ಜಾ.ದಳ ಪಾಳೆಯಗಳ ಆತ್ಮವಿಶ್ವಾಸ…
ಏ.೨ರಿಂದ ೨೮ ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ; ೩೦೦ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಮಡಿಕೇರಿ:ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ…
ಮೈಸೂರು: ನಗರದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿರುವ ಹಲವು ಪ್ರದೇಶಗಳನ್ನು ಸೇರಿಸಿ ಗ್ರೇಡ್- ೧ ಮೈಸೂರು ಮಹಾನಗರ ಪಾಲಿಕೆಯನ್ನಾಗಿ ರಚಿಸಲು ರಾಜ್ಯಸರ್ಕಾರ…