ಎಡಿಟೋರಿಯಲ್

ಸಾಮಾಜಿಕ ನ್ಯಾಯದ ಹರಿಕಾರ ನಮ್ಮೂರ ಅರಸು

ಕರ್ನಾಟಕದ ರೈತರಿಗೆ ನೆಲದ ಒಡೆತನದ ಹಕ್ಕು ಕೊಟ್ಟವರು ಡಿ.ದೇವರಾಜ ಅರಸು. ನಾವಿಂದು (೨೦ನೇ ಆಗಸ್ಟ್ ೧೯೧೫) ಅವರ ೧೦೮ನೇ ವರ್ಷದ ಹುಟ್ಟು ಹಬ್ಬದ ಆಚರಣೆಯಲ್ಲಿದ್ದೇವೆ. ಅರಸು ಮುಖ್ಯಮಂತ್ರಿಗಳಾಗಿ ೫೦ ವರ್ಷಗಳು ಕಳೆದಿವೆ. ಆದರೆ ಅವರು ಕರ್ನಾಟಕ ಜನತೆಯ ಹೃದಯದಲ್ಲಿ  ಶಾಶ್ವತ ಸ್ಥಾನ ಪಡೆದಿದ್ದಾರೆ. ತಾನು ಯಾವ ಹಕ್ಕುದಾರಿಕೆಯೂ ಇಲ್ಲದೆ ವರ್ಷಗಳಿಂದ ಉಳುತ್ತಿದ್ದ ಹೊಲದ ಒಡೆತನವನ್ನು ನೀಡಿದ ಅವರನ್ನು ಜನರು ಎಂದೂ ಮರೆಯಲು ಸಾಧ್ಯವಿಲ್ಲ.  ಕರ್ನಾಟಕವನ್ನು ಹಲವು ರಾಜರು ಆಳಿದ್ದಾರೆ. ಮುಖ್ಯಮಂತ್ರಿಗಳು, ಮಂತ್ರಿಗಳು ಬಂದು ಹೋಗಿದ್ದಾರೆ. ಆದರೆ ಅರಸು ಅಪರೂಪದ ಜನಸೇವಕರಾಗಿ ಜನಮಾನಸದಲ್ಲಿ ಇಂದಿಗೂ ಕಂಗೊಳಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸ್ಥಾನ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. ಸಾರ್ವಜನಿಕ ಜೀವನದಲ್ಲಿ ಆಸಕ್ತಿ ಮುಖ್ಯ. ಅದೊಂದು ನಿರಂತರ ಹೋರಾಟ, ಅಂತಹ ಹೋರಾಟ ಮಾಡಿದವರಲ್ಲಿ ದೇವರಾಜ ಅರಸು ಪ್ರಮುಖರು. ಗ್ರಾಮಪಂಚಾಯಿತಿ ಮುಖ್ಯಸ್ಥರಿಂದ ಕರ್ನಾಟಕದ ಮುಖ್ಯಮಂತ್ರಿಯಾಗಿ, ನಿರ್ವಂಚನೆಯಿಂದ ತಮ್ಮ ವಿವೇಕಯುತ ತೀರ್ಮಾನದಿಂದ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಶೋಷಣೆ ಮತ್ತು ಬಡತನದ ನಿವಾರಣೆಗೆ ಪಣತೊಟ್ಟಿ ಹೋರಾಡಿದ ಮಹಾನ್ ನಾಯಕ ಅವರು.  ಅವರು ಕೊಟ್ಟ ಒಂದೊಂದು ೋಂಜನೆಗಳು ಇಂದಿಗೂ ಮುಂದುವರೆದುಕೊಂಡು ಬರುತ್ತಿವೆ. ಶತಮಾನಗಳಿಂದಲೂ ಈ ನೆಲದ ಮೇಲೆ ಬದುಕಿದ್ದು, ಕೂರಲು, ನಿಲ್ಲಲು, ಮಲಗಲು ಮತ್ತು ಸತ್ತಾಗ ಹೂಳಲು ನೆಲ – ನೆಲೆ ಇಲ್ಲದವರಿಗೆ ಅರಸು ಒಂದು ನೆಲೆ ಕೊಟ್ಟರು. ಓದಿನಲ್ಲಿ, ನೌಕರಿಯಲ್ಲಿ ಅವಕಾಶ ಮಾಡಿಕೊಟ್ಟು ,ಕತ್ತಲೆ ಮನೆಗಳಿಗೆ ಭಾಗ್ಯಜ್ಯೋತಿಯಾದರು. ದೇಹ ಮತ್ತು ಮನಸನ್ನು ಉಳ್ಳವರಿಗೆ ಜೀತವಿಟ್ಟುಕೊಂಡು ನರಳಿದವರು ಇದೇ ಅರಸರಿಂದ ಮುಕ್ತರಾದರು.

ಒಡನಾಡಿ ಖ್ಯಾತ ಸಾಹಿತಿ ಡಾ. ಚದುರಂಗ ಅವರ ಮಾತಿನಲ್ಲಿ ಹೇಳುವುದಾದರೆ, ಪ್ರಸ್ತುತ ಭಾರತದಲ್ಲಿ ವರ್ಗಕ್ಕಿಂತ ಜಾತಿ ಮುಖ್ಯ ಎಂಬ ತೀರ್ಮಾನಕ್ಕೆ ಅರಸು ಬಂದಿದ್ದರು. ಈ ಒಂದು ತೀರ್ಮಾನದಿಂದ ಶತಮಾನಗಳಿಂದಲೂ ಅಮಾನವೀಯವಾಗಿ ತುಳಿಯಲ್ಪಟ್ಟಿದ್ದ ಹಿಂದುಳಿದ ಜಾತಿ, ಉಪಜಾತಿಗಳ ಜನರನ್ನು ಮೇಲೆತ್ತಬೇಕೆಂಬ ಸಂಕಲ್ಪದಿಂದ ಅವರು ‘ಹಾವನೂರು ಆಯೋಗ’ ರಚಿಸಿದರು. ನನಗೆ ಸಿಕ್ಕಿದಾಗ ಒಂದು ಸಲ ದೇವರಾಜ ಅರಸು ಹೀಗೆ ಹೇಳಿದರು. ‘‘ನಾನು ಅಧಿಕಾರದಲ್ಲಿದ್ದು ಬೇರೆ ಏನನ್ನು ಮಾಡಿದೆನೋ ಬಿಟ್ಟೆನೋ, ಅದು ಮುಖ್ಯವಲ್ಲ. ಒಂದು ಮಾತಂತೂ ಸತ್ಯ. ಹಾವನೂರು ಆಯೋಗ ರಚಿಸಿ, ಮಾತು ಹೋಗಿದ್ದ ಜನರಿಗೆ ಮಾತು ಬರುವಂತೆ ಮಾಡಿದ್ದೇನೆ. ಇನ್ನು ಮುಂದೆ ಮೇಲ್ಜಾತಿಯವರು ಎಂದೆಂದಿಗೂ ಈ ಹಿಂದುಳಿದ ಜನಾಂಗವನ್ನು ಮೆಟ್ಟಿ ಹಾಕಲು ಸಾಧ್ಯವೇ ಇಲ್ಲ. ಇವರೀಗ ಕುಂಭಕರ್ಣ ನಿದ್ದೆಯಿಂದ ಎಚ್ಚೆತ್ತಿದ್ದಾರೆ. ಎದ್ದು ಬೆನ್ನು ಸೆಟೆಸಿ ನಿಂತಿದ್ದಾರೆ. ಈಗ ಅವರನ್ನು ತುಳಿದಿಡಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಅಧಿಕಾರ ಹೋಗಬಹುದು, ನಾನು ಸಾಯಲೂ ಬಹುದು, ಆದರೆ ಈ ಒಂದು ಸಣ್ಣ ಕೆಲಸ ನನಗೆ ಅಪಾರ ನೆಮ್ಮದಿ, ತೃಪ್ತಿಯನ್ನು ತಂದುಕೊಟ್ಟಿದೆ’’.

ಈ ಮೇಲಿನ ಸಾಲುಗಳು ಬಡತನ ಮತ್ತು ಶೋಷಣೆಯನ್ನು ಹೋಗಲಾಡಿಸುವ ಅರಸರ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಭಾರತದ ರಾಜಕಾರಣದ ಇತಿಹಾಸದಲ್ಲೇ ಒಂದು ಹೊಸ ಮೈಲಿಗಲ್ಲು. ಹಿಂದುಳಿದ ವರ್ಗಗಳ ಆೋಂಗ ರಚಿಸಿದ ಕೀರ್ತಿ ಡಿ.ದೇವರಾಜ ಅರಸುರವರಿಗೆ ಸಲ್ಲುತ್ತದೆ. ಹಾವನೂರ್ ಆೋಂಗವು ಕರ್ನಾಟಕ ರಾಜ್ಯದಲ್ಲಿ ಸಂಚಲನ ಮೂಡಿಸಿ ಹೊಸ ರಾಜಕೀಯ ವಾತಾವರಣ ಸೃಷ್ಟಿಯಾಗಲು ಕಾರಣವಾಯಿತು. ಅರಸರ ಒಂದೊಂದು ಕಾರ್ಯಕ್ರಮವು ನಿರ್ಗತಿಕರ, ಅಸಹಾಯಕರ ಬಗೆಗಿನ ಪ್ರೀತಿ, ಅಂತಕರಣ,  ಮಾನವೀಯತೆಯನ್ನು ತೋರಿಸುತ್ತದೆ.

೧೯೭೦ರ ದಶಕವನ್ನು ದೇವರಾಜ ಅರಸು ಅವರ ಯುಗವೆಂದು ಕರೆಯಲಾಗುತ್ತದೆ. ೧೯೭೨ರಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಅಧಿಕಾರ ಸಿಕ್ಕಾಗ ರಾಜಕೀಯ ಇಚ್ಛಾಶಕ್ತಿಯನ್ನು ಹೇಗೆ ಉಪೋಂಗಿಸಬೇಕೆಂದು ತೋರಿಸಿದ ಅಪರೂಪದ ರಾಜಕಾರಣಿ. ಜನಹಿತ ಸಾಧಿಸಲು ಶ್ರಮಿಸಿದ ಶ್ರೇಷ್ಠ ಮುಖ್ಯಮಂತ್ರಿ. ಆಧುನಿಕ ಕನ್ನಡ ನಾಡಿನ ಸಮಕಾಲಿನ ಇತಿಹಾಸದಲ್ಲಿ ಕರ್ನಾಟಕಕ್ಕೆ ಘನತೆ, ಗೌರವ ತಂದ ಕೀರ್ತಿಶಾಲಿ, ಅರಸು ಒಬ್ಬ ಅತ್ಯುತ್ತಮ ವಾಗ್ಮಿ. ಹತ್ತಾರು ಜನರ ಸಣ್ಣ ಗುಂಪಾಗಲಿ, ಸಾವಿರಾರು ಜನರ ಮಹಾಸಭೆಯನ್ನಾಗಲೀ ಎಲ್ಲರೂ ತಲೆದೂಗುವಂತೆ ಮಾತನಾಡುವ ಕಲೆ ಅವರಿಗೆ ಕರಗತವಾಗಿತ್ತು. ವ್ಯಾಪಕವಾದ ಅಧ್ಯಯನ ಅನುಭವ, ಪುರಾಣ, ಪುಣ್ಯಕಥೆಗಳನ್ನು ಸಮೋಂಚಿತವಾಗಿ ಉಪೋಂಗಿಸುವ ಜಾಣ್ಮೆ, ಸಮಯ ಪ್ರಜ್ಞೆ ಇದ್ದುದರಿಂದ ಗಂಟೆಗಟ್ಟಲೆ ಮಾತನಾಡುವ ಕಲೆ ಅವರಿಗೆ ಕರಗತವಾಗಿತ್ತು.

ಕೇಂದ್ರದ ೨೦ ಅಂಶಗಳು ಸೇರಿದಂತೆ ನೂರಾರು ಕಾನೂನು, ಕಾಯಿದೆಗಳನ್ನು ಮಾಡಿ ಪ್ರಜಾಪ್ರಭುತ್ವದ ನಿಜಮೌಲ್ಯಗಳನ್ನು ಪ್ರತಿಪಾದಿಸಿದ ದೇವರಾಜ ಅರಸು ಸಾಮಾಜಿಕ ನ್ಯಾಯದ ರೂವಾರಿಯಾದರು. ಭೂಸುಧಾರಣಾ ಕಾಯಿದೆ, ಹಾವನೂರು ವರದಿ, ವೃದ್ಧಾಪ್ಯವೇತನ, ಕೃಷಿ ಬ್ಯಾಂಕುಗಳ ಸ್ಥಾಪನೆ, ವಿಧವಾವೇತನ, ಬಡವರಿಗೆ ಉಚಿತ ಭಾಗ್ಯಜ್ಯೋತಿ ೋಂಜನೆ, ಅಮಾನವೀಯ ಮಲ ಹೊರುವ ಪದ್ಧತಿ ರದ್ದು, ಜೀತಪದ್ಧತಿ ವಿಮುಕ್ತಿ, ಅಂಗವಿಕಲರ ವೇತನ, ನಿರುದ್ಯೋಗಿ ಪದವೀಧರರಿಗೆ ಸ್ಟೈಫಂಡ್, ಕೃಷಿಕಾರ್ಮಿಕರಿಗೆ ಕನಿಷ್ಠವೇತನ ನಿಗದಿ, ಕರ್ನಾಟಕ ರಾಜ್ಯದ ನಾಮಕರಣ, ವಿಶ್ವವಿದ್ಯಾನಿಲಯಗಳಿಗೆ ಸ್ವಾಯತ್ತೆ ನೀಡುವ ಸಲುವಾಗಿ ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೬ರ ಕಾಯಿದೆ ಅನುಷ್ಠಾನ, ಲಕ್ಷಾಂತರ ಮಕ್ಕಳ ವಿದ್ಯಾರ್ಜನೆಗೆ ವಿದ್ಯಾರ್ಥಿನಿಲಯಗಳ ಸ್ಥಾಪನೆ, ವಿದ್ಯಾರ್ಥಿಗಳ ಶಿಷ್ಯವೇತನ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.

ಡಿ.ದೇವರಾಜ ಅರಸುರವರು ರೈತರಲ್ಲಿ ಒಬ್ಬರಾಗಿ ಜೀವನವನ್ನು ಕಂಡಿದ್ದರು, ಅಲ್ಲದೆ ಅವರ ಜೀವನದುದ್ದಕ್ಕೂ ಉಳುವವನೆ ಒಡೆಯನಾಗಬೇಕೆಂದು ಅಚಲವಾಗಿ ನಂಬಿದ್ದವರು. ರಾಜಕೀಯ ದೇವರಾಜ ಅರಸುರವರಿಗೆ ಹವ್ಯಾಸ ಅಥವಾ ವೃತ್ತಿಯಾಗಿರದೆ ಅವರ ಜೀವನದ ಧ್ಯೇಯವಾಗಿತ್ತು. ಹೀಗಾಗಿ ಅರಸು ತಮ್ಮದೇ ಆದ ರೀತಿಯಲ್ಲಿ ಅಮರರಾಗಿದ್ದಾರೆ.

ಪ್ರಸ್ತುತ ಸರ್ಕಾರಗಳ ಆಡಳಿತವನ್ನು ಗಮನಿಸಿದರೆ ರಾಜಕಾರಣ, ರಾಜಕೀಯ ಪಕ್ಷಗಳ ಬಗ್ಗೆ ಜನತೆಯಲ್ಲಿ ಅಪನಂಬಿಕೆ ಉಂಟಾಗಿದೆ. ಪ್ರಜಾಪ್ರಭುತ್ವದ ಸರ್ಕಾರ ಜನರಿಗಾಗಿ ಎಂಬುದು ಸುಳ್ಳಾಗಿದೆ. ಹಾಗಾಗಿ ದೇವರಾಜ ಅರಸುರವರು ಎಂದೆಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.

ದೇವರಾಜ ಅರಸು ಅವರ ೬೦ನೇ ಹುಟ್ಟುಹಬ್ಬದ ಆಚರಣೆಯ ಸಮಾರಂಭದಲ್ಲಿ ಕೆಂಗಲ್ ಹನುಮಂತಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಆಗ ಅರಸು ಹೇಳಿದ ಮಾತುಗಳಿವು. ‘‘

ನಾನು, ನನ್ನ ಪತ್ನಿ, ನನ್ನ ಮಕ್ಕಳು ಎಲ್ಲಾ ನಮ್ಮ ಹಳ್ಳಿಗೆ ಹೋಗಿ ಬಂದೆವು. ಬಹುಶಃ ಇದರಲ್ಲಿ ಒಂದು ವಿಚಾರ ಇದೆ ಎಂದು ಕಾಣುತ್ತದೆ. ಈ ೬೦ ವರ್ಷದ ಒಂದು ಚಕ್ರ ಮುಗಿದ ಮೇಲೆ, ಯಾವ ಹಳ್ಳಿಯಲ್ಲಿ ನಾನು ಹುಟ್ಟಿದೆನೊ ಅದೇ ಹಳ್ಳಿಗೆ ಹೋಗಿ, ಯಾವ ಮಣ್ಣಿನಿಂದ ಬಂದಿದ್ದೆನೋ ಅದೇ ಮಣ್ಣಿಗೆ ಹೋಗಿ, ಆ ಮಣ್ಣಿನ ತಾಯಿಗೆ ನಮಸ್ಕಾರ ಮಾಡಿ, ಆ ಮಣ್ಣನ್ನು ಸ್ಪರ್ಶಿಸಿ ಆ ಊರಿಗೆ ನಮಸ್ಕಾರ ಮಾಡಿ ಬರಬೇಕೆಂಬುದು ಅವರ ಆಶಯವಾಗಿರಬೇಕು. ಹಾಗೆ ಮಾಡಿದ್ದರಿಂದ ಹೊಸ ಚೈತನ್ಯ ಸಿಕ್ಕಿದೆ ಎಂಬುದು ನನ್ನ ಭಾವನೆ. ನಿಮ್ಮ ಆಶೀರ್ವಾದ ಬಲದಿಂದ ಈ ಎಲ್ಲಾ ಕಾರಣಗಳಿಂದ ನನಗೆ ಹೊಸ ಚೈತನ್ಯವೇನೋ ಸಿಕ್ಕಿದೆ. ಅದನ್ನು ಸಂಪೂರ್ಣವಾಗಿ ಜನತೆಗೋಸ್ಕರ, ದೇಶಕ್ಕೋಸ್ಕರ ಉಪೋಂಗ ಮಾಡುತ್ತೇನೆ ಎಂದು ವಚನ ಕೊಡಬಯಸುತ್ತೇನೆ’’. ಅರಸರು ಕೊನೆಯವರೆಗೂ ತಮ್ಮ ಮಾತಿಗೆ ಬದ್ಧರಾಗಿ ನಡೆದುಕೊಂಡರು.

-ಎಚ್.ಎ.ವೆಂಕಟೇಶ್, ನ್ಯಾಯವಾದಿ, ಮೈಸೂರು

 

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

50 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago