ಎಡಿಟೋರಿಯಲ್

ಅನಾಥಳಾದರೂ ಬದುಕು ಕಟ್ಟಿಕೊಂಡು ಡಾಕ್ಟರಾಗುತ್ತಿರುವ ಶಬನಾ

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಇಇಟಿ ಪರೀಕ್ಷೆಯಲ್ಲಿ ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಳು
ಪಂಜುಗಂಗೊಳ್ಳಿ

ಶಬನಾ ಎರಡು ವರ್ಷಗಳ ಹಿಂದೆಯೇ ಎನ್‌ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್‌ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು. ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.

ಹದಿನೆಂಟು ವರ್ಷಗಳ ಹಿಂದೆ, ಮುಂಬೈಯ ಒಂದು ಆಸ್ಪತ್ರೆಯ ಬಳಿ ಹೆತ್ತವರು ಬಿಟ್ಟು ಹೋದ ಕಾರಣ ತನ್ನ ತಮ್ಮನೊಂದಿಗೆ ಅನಾಥಳಾದ ಶಬನಾ ಶೇಖ್ಳನ್ನು ಯಾರೋ ಪುಣ್ಯಾತ್ಮರು ಮುಂಬೈ ಹೊರ ವಲಯದ ಬದ್ಲಾಪುರ ಎಂಬಲ್ಲಿನ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಎಂಬ ಬಾಲಾಶ್ರಮಕ್ಕೆ ಸೇರಿಸುತ್ತಾರೆ. ಸಮಾಜ ಸಾಮಾನ್ಯವಾಗಿ ಇಂತಹ ಮಕ್ಕಳ ಬಗ್ಗೆ ಒಂದಷ್ಟು ಕರುಣೆ ತೋರುವುದರ ಹೊರತಾಗಿ ಹೆಚ್ಚೇನೂ ಮಾಡದು. ಆದರೆ, ಸೂಕ್ತ ಪೋಷಣೆ ಸಿಕ್ಕರೆ ಇಂತಹ ಮಕ್ಕಳೂ ಅಸಮಾನ್ಯವಾದುದನ್ನು ಸಾಧಿಸಬಲ್ಲರು ಎನ್ನುವುದನ್ನು ಶಬನಾ ಶೇಖ್ ತೋರಿಸಿಕೊಟ್ಟಿದ್ದಾಳೆ.

ಶಬನಾ ಶೇಖ್ ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ಸೇರಿದ ಪ್ರಾರಂಭದ ದಿನಗಳಲ್ಲಿ ಯಾರೊಂದಿಗೂ ಮಾತಾಡದೆ, ಯಾರೊಂದಿಗೂ ಬೆರೆಯದೆ ತನ್ನಷ್ಟಕ್ಕೆ ತಾನಿರುತ್ತಿದ್ದಳು. ಆದರೆ, ಕಲಿಕೆಯಲ್ಲಿ ಅವಳು ಇತರ ಮಕ್ಕಳಿಗಿಂತ ಯಾವತ್ತೂ ಮುಂದಿರುತ್ತಿದ್ದುದು ಅಲ್ಲಿನ ಸಿಬ್ಬಂದಿಗಳ ಗಮನಕ್ಕೆ ಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ. ‘ಮುಂದೆ ದೊಡ್ಡವಳಾದ ಮೇಲೆ ನೀನು ಏನಾಗಬೇಕು ಅಂತಿದ್ದಿಯಾ?’ ಎಂದು ಯಾರಾದರೂ ಕೇಳಿದರೆ, ‘ನಾನು ಡಾಕ್ಟರಾಗುತ್ತೇನೆ’ ಅನ್ನುತ್ತಿದ್ದಳು. ಸಹಜವಾಗಿಯೇ ಯಾರೊಬ್ಬರೂ ಅವಳ ಉತ್ತರವನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.

ಆದರೆ, ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆದ ಎನ್‌ಇಇಟಿ (ಘೆಅಐಘೆಅಔ ಉಔಐಎಐಆಐಔಐಖ್ಗ ಇಖಿ ಉಘೆಖ್ಕಅಘೆಇಉ ಉಖ) ಪರೀಕ್ಷೆಯಲ್ಲಿ ಅವಳು ಪಾಸಾಗಿ, ಔರಂಗಾಬಾದಿನ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಪಡೆದಾಗ ಅವರೆಲ್ಲರಿಗೂ ಸಂತೋಷದ ಜೊತೆ ಆಶ್ಚರ್ಯವಾದುದರಲ್ಲಿ ಅಸಹಜವಾದುದೇನೂ ಇಲ್ಲ.

ಶಬನಾಳಿಗೆ ಈಗ ೨೨ ವರ್ಷ ಪ್ರಾಯ. ಕಲಿಕೆಯಲ್ಲಿ ಅವಳಿಗಿರುವ ಆಸಕ್ತಿ ಮತ್ತು ಚುರುಕುತನ ಕಂಡು ‘ಬಾಂಬೇ ಟೀನ್ ಚಾಲೆಂಜ್ ಒರ್ಫಾನೇಜ್’ ನ ಟ್ರಸ್ಟಿಗಳು ಅವಳ ಡಾಕ್ಟರಾಗುವ ಕನಸಿಗೆ ಒತ್ತಾಸೆಯಾಗಿ ನಿಂತರು. ಅವಳಿಗೆ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಒದಗಿಸಿಕೊಟ್ಟರು.

ಶಬನಾ ಎರಡು ವರ್ಷಗಳ ಹಿಂದೆಯೇ ಎನ್‌ಇಇಟಿ ಪರೀಕ್ಷೆಯಲ್ಲಿ ಕುಳಿತುಕೊಂಡಿದ್ದಳು. ಆ ಪರೀಕ್ಷೆಯಲ್ಲಿ ಪಾಸಾಗಿದ್ದರೂ ತಾನು ಪಡೆದ ಅಂಕಗಳ ಬಗ್ಗೆ ಅವಳಿಗೆ ತೃಪ್ತಿಯಿಲ್ಲದ ಕಾರಣ ಪುನಃ ಕಳೆದ ವರ್ಷದ ಪರೀಕ್ಷೆಯಲ್ಲಿ ಕುಳಿತುಕೊಂಡಳು. ಈ ಬಾರಿ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಸಫಲಳಾದಳು. ಮತ್ತು, ಔರಂಗಾಬಾದ್‌ನ ಒಂದು ಸರ್ಕಾರಿ ಮೆಡಿಕಲ್ ಕಾಲೇಜಲ್ಲಿ ಸೀಟು ಕೂಡಾ ಸಿಕ್ಕಿತು.

ಶಬನಾ ಶೇಖ್ ಗೆ ತನ್ನ ತಾಯಿ, ತಂದೆ ಅಥವಾ ತನ್ನ ಕುಟುಂಬದ ಯಾವ ನೆನಪೂ ಇಲ್ಲ. ಆಕೆಯ ಹೆತ್ತವರು ಅವಳನ್ನು ಆಸ್ಪತ್ರೆಯ ಬಳಿ ಬಿಟ್ಟು ಅನಾಥಗೊಳಿಸಿ ಹೋದಾಗ ಅವಳಿಗಿನ್ನೂ ನಾಲ್ಕು ವರ್ಷ ಪ್ರಾಯ ಮತ್ತು, ಅವಳ ತಮ್ಮ ಒಂದು ವರ್ಷದ ಹಸುಗೂಸು.

‘ನನ್ನನ್ನು ಮತ್ತು ನನ್ನ ತಮ್ಮನನ್ನು ಬೀದಿ ಪಾಲು ಮಾಡಿದ ನನ್ನ ಹೆತ್ತವರು ಯಾರೆಂಬುದು ನನಗೆ ತಿಳಿದಿಲ್ಲ. ನನ್ನ ಆ ಹಿಂದಿನ ಪರಿಸ್ಥಿತಿಯನ್ನು ನೆನೆಯುತ್ತ ನನ್ನ ಬಗ್ಗೆ ನಾನೇ ಕನಿಕರ ಪಡುತ್ತ ಕುಳಿತುಕೊಳ್ಳುವುದರ ಬದಲಿಗೆ ನನಗೊಂದು ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳುವುದರ ಬಗ್ಗೆ ನನ್ನ ಗಮನವನ್ನು ಕೇಂದ್ರೀಕರಿಸತೊಡಗಿದೆ. ನನ್ನ ಈ ಪ್ರಯತ್ನಕ್ಕೆ ನನ್ನ ಮನೆಯೇ ಆಗಿರುವ ಈ ಬಾಲಾಶ್ರಮ ಉದ್ದಕ್ಕೂ ನನ್ನ ಬೆಂಬಲಕ್ಕೆ ನಿಂತಿತು. ಆಶ್ರಮದ ನನ್ನ ಗೆಳತಿಯರು ನನ್ನ ಬಗ್ಗೆ ಬರೀ ಹೆಮ್ಮೆ ಪಟ್ಟುಕೊಳ್ಳುವುದು ಮಾತ್ರವಲ್ಲ, ನನ್ನ ದಿನನಿತ್ಯದ ಕೆಲಸಗಳನ್ನು ಅವರು ವಹಿಸಿಕೊಂಡು ನನಗೆ ಓದಲು ಹೆಚ್ಚು ಸಮಯ ಸಿಗುವಂತೆ ನೋಡಿಕೊಂಡರು. ಅವರ ಈ ಸಹಾಯದಿಂದಾಗಿಯೇ ನನಗೆ ದಿನಾಲು ಎಂಟು-ಹತ್ತು ಗಂಟೆಗಳ ಕಾಲ ಓದಲು ಸಾಧ್ಯವಾಗಿ, ಒಳ್ಳೆಯ ಅಂಕಗಳನ್ನು ಪಡೆದೆ’ ಎನ್ನುವ ಶಬನಾಳಿಗೆ ಸಂಗೀತ ಅಚ್ಚುಮೆಚ್ಚಿನ ಹವ್ಯಾಸ. ಮುಂದೆ ಗೈನಾಕಾಲಾಜಿಸ್ಟ್ ಆಗಿ ತನ್ನಂತೆಯೇ ನಿರಾಶ್ರಿತರು, ದುರ್ಬಲ ಜನಗಳ ಸೇವೆ ಮಾಡುವುದು ತನ್ನ ಮುಖ್ಯ ಗುರಿ ಎನ್ನುತ್ತಾಳೆ.

andolana

Recent Posts

ಸಾರಿಗೆ ನೌಕರರ ಒತ್ತಡಕ್ಕೆ ಮಣಿದ ಸರ್ಕಾರ : ವೇತನ ಪರಿಷ್ಕರಣೆಗೆ ಒಪ್ಪಿದೆ ; ರದ್ದಾಗುತ್ತಾ ಮುಷ್ಕರ?

ಬೆಂಗಳೂರು : ರಾಜ್ಯ ಸರ್ಕಾರವು ರಾಜ್ಯ ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ಸಿಬ್ಬಂದಿಗೆ 26 ತಿಂಗಳ ಬಾಕಿ…

7 hours ago

ಮಹಾರಾಷ್ಟ್ರ | ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ಮೀಸಲಾತಿ ರದ್ದು

ಮುಂಬೈ : ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇಕಡಾ 5ರಷ್ಟು ಮೀಸಲಾತಿಯನ್ನು…

8 hours ago

ಮೈಸೂರು | ಹೀಲಿಯಂ ಅನಿಲ ಬಲೂನ್‌ ನಿಷೇಧ ; ಕಮಿಷನರ್‌ ಆದೇಶ

ಮೈಸೂರು : ಇತ್ತೀಚಿಗೆ ನಗರದ ಅರಮನೆ ಸಮೀಪದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಪೋಟ ಘಟನೆಗೆ ಸಂಬಂಧಿದಂತೆ, ಸಾರ್ವಜನಿಕ ಶಾಂತಿ, ಸುರಕ್ಷತೆ…

8 hours ago

ನಮೀಬಿಯಾ ವಿರುದ್ಧ ಗೆಲುವು : ಸೂಪರ್‌ 8 ಸುತ್ತಿಗೆ ಎಂಟ್ರಿ ಕೊಟ್ಟ ಪಾಕಿಸ್ತಾನ

ಕೊಲಂಬೊ : ಐಸಿಸಿ ಪುರುಷರ ಟಿ20 ವರ್ಲ್ಡ್ ಕಪ್ 2026ರಲ್ಲಿ ಪಾಕಿಸ್ತಾನ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾವನ್ನು…

8 hours ago

ಸೇನಾ ವಿಚಾರ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ: ಲೋಕಸಭೆಯಲ್ಲಿ ಗದ್ದಲ, ಕೋಲಾಹಲ

ನವದೆಹಲಿ: ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದ ಕುರಿತು ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಲೇಖನದ ಪ್ರತಿಯನ್ನು ರಾಹುಲ್‌ ಗಾಂಧಿ ಸದನದಲ್ಲಿ ಪ್ರದರ್ಶಿಸಿದರು. ಈ…

8 hours ago

ಭಾರತದಲ್ಲಿ ಎಐ ಪ್ರಯಾಣ ಅಸಾಧಾರಣವಾಗಿರಲಿದೆ : ಗೂಗಲ್‌ ಸಿಇಒ ಸುಂದರ್‌ ಪಿಚೈ

ಹೊಸದಿಲ್ಲಿ : ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತದ ಕೃತಕ ಬುದ್ಧಿಮತ್ತೆ (AI) ಪ್ರಯಾಣವು "ಅಸಾಧಾರಣ" ಆಗಿರುವುದಾಗಿ ಹೇಳಿದ್ದಾರೆ.…

8 hours ago