ಬಡ ವರ್ಗದವರು ಅಂದಂದಿನ ಖರ್ಚಿಗೇ ಪರದಾಡುವ ಸ್ಥಿತಿ ಇದೆ. ಸಾಲ ಮಾಡಿ ಖರೀದಿಸುವ ಸ್ಥಿತಿಯಲ್ಲಿ ಯಾರು ಇಲ್ಲ!
ರಿಜರ್ವ್ ಬ್ಯಾಂಕು ತನ್ನ ಇತ್ತೀಚಿನ ಹಣಕಾಸು ನೀತಿ ಪ್ರಕಟಿಸುತ್ತ ಹಣ ದುಬ್ಬರ ಶೇ.೪.೦ ಮಟ್ಟಕ್ಕೆ ಬರಬೇಕಾದರೆ ಇನ್ನೂ ಎರಡು ವರ್ಷಗಳೇ ಬೇಕಾಗುವುವೆಂದು ಹೇಳಿದೆ.
ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿಯಿಂದ ಗ್ರಾಮೀಣ ಜನರ ಆದಾಯಗಳಲ್ಲಿ ಅನಿಶ್ಚಿತತೆ ಕಾಣುತ್ತಿದೆ. ಹೀಗಾಗಿ ಅವರ ಖರ್ಚು ಮಾಡುವ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ. ಇರುವುದನ್ನು ಮುಂಬರುವ ದಿನಗಳಿಗಾಗಿ ಕಾಯ್ದಿಡುವ ಚಿಂತನೆಯೂ ಇರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಉಕ್ರೇನ್ ಯುದ್ಧ ಮತ್ತು ಮಿತಿ ಮೀರಿದ ಹಣದುಬ್ಬರದಿಂದ ಪೂರೈಕೆ ಸರಪಳಿಗೆ ಏಟು ಬಿದ್ದು ಆರ್ಥಿಕ ಹಿಂಜರಿತದ ಭಯ ಕಾಡುತ್ತಿದೆ.
ಆನ್‌ಲೈನ್ ಮಾರಾಟ ಪ್ಲ್ಯಾಟ್‌ಫಾರ್ಮಗಳಿಗೆ ಉಗ್ರಾಣ (ಗೊಡೌನ್), ಸರಕು ದಾಸ್ತಾನು ಮುಂತಾದ ಸೇವೆಗಳನ್ನು ಒದಗಿಸುವ ‘ಈಜಿ ಇಕಾಮ್’ ಕಂಪನಿಯು ತನ್ನ ಮಾಹಿತಿ ಕಣಜದಲ್ಲಿನ ದಾಖಲೆಗಳನ್ನು ಆಧರಿಸಿ ದಸರಾ ಹಬ್ಬದ ಮೊದಲ ಏಳು ದಿನಗಳಲ್ಲಿ ದೇಶದ ಎರಡು ಮತ್ತು ಮೂರನೇ ದರ್ಜೆಯ ಹತ್ತು ನಗರಗಳಲ್ಲಿ ಆನ್‌ಲೈನ್ ಮಾರಾಟ ಕಳೆದ ವರ್ಷದ ಈ ಅವಧಿಗಿಂತ ಶೇ.೩೦ರಷ್ಟು ಹೆಚ್ಚಾಗಿದೆ ಎಂದು ಪ್ರಕಟಿಸಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಹೇಳಬಹುದು.
ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿಂದ ಎಲ್ಲ ಧರ್ಮಗಳ ಹಬ್ಬಗಳು ಸಾಲು ಸಾಲಾಗಿ ಜನವರಿ ಮಧ್ಯದವರೆಗೆ ಬರುವುದರಿಂದ ಫ್ಯಾಕ್ಟರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುವುದೆಂದು ನಿರೀಕ್ಷಿಸಲಾಗುತ್ತದೆ. ಆನ್‌ಲೈನ್ ವ್ಯವಹಾರ ಈಗ ಬೆಳೆಯುವ ಹಂತದಲ್ಲಿದ್ದು, ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ವಿಸ್ತರಣೆಯಾಗಬೇಕಿದೆ. ಸಧ್ಯ ಅದು ಒಟ್ಟು ಬೇಡಿಕೆಯ ಸಣ್ಣ ಭಾಗ ಮಾತ್ರ, ಅದರ ಏಳು ದಿನಗಳ ವ್ಯವಹಾರದ ಆಧಾರದ ಮೇಲೆ ಅದೇ ಪ್ರಮಾಣದಲ್ಲಿ ಬೇಡಿಕೆ ಹೆಚ್ಚುತ್ತದೆ ಎಂದು ಗ್ರಹಿಸುವುದು ತಪ್ಪಾದೀತು. ಆನ್‌ಲೈನ್ ಮಾರಾಟವು ಮುಂದಿನ ದಿನಗಳಲ್ಲಿ ಇದೇ ಪ್ರಮಾಣದಲ್ಲಿ ಹೆಚ್ಚುವುದೆಂದು ಭಾವಿಸುವುದೂ ಸಮಂಜಸವಲ್ಲ.
ಈಗ ಹಣದುಬ್ಬರ (ಬೆಲೆ ಏರಿಕೆ) ಗ್ರಾಹಕರನ್ನು ಘಾಸಿಗೊಳಿಸಿದ್ದರೆ ಉತ್ಪಾದನಾ ವೆಚ್ಚಗಳು ಹೆಚ್ಚುತ್ತಿರುವದು ಕಂಪೆನಿಗಳನ್ನು ಕಾಡುತ್ತಿದೆ. ನಿರುದ್ಯೋಗ ಮತ್ತು ಅರೆ ಉದ್ಯೋಗ ಹಳ್ಳಿ ಪಟ್ಟಣಗಳಲ್ಲಿ ಯುವಕರನ್ನು ಕುಟುಕುತ್ತಿದೆ. ರಿಜರ್ವ್ ಬ್ಯಾಂಕು ತನ್ನ ಇತ್ತೀಚಿನ ಹಣಕಾಸು ನೀತಿ ಪ್ರಕಟಿಸುತ್ತ ಹಣ ದುಬ್ಬರ ಶೇ.೪.೦ ಮಟ್ಟಕ್ಕೆ ಬರಬೇಕಾದರೆ ಇನ್ನೂ ಎರಡು ವರ್ಷಗಳೇ ಬೇಕಾಗುವುವೆಂದು ಹೇಳಿದೆ. ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳು ಏರುಮುಖವಾಗಿಯೇ ಮುಂದುವರೆದಿವೆ.
ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಅನಾವೃಷ್ಟಿಯಿಂದ ಗ್ರಾಮೀಣ ಜನರ ಆದಾಯಗಳಲ್ಲಿ ಅನಿಶ್ಚಿತತೆ ಕಾಣುತ್ತಿದೆ. ಹೀಗಾಗಿ ಅವರ ಖರ್ಚು ಮಾಡುವ ಸಾಮರ್ಥ್ಯ ಕಡಿಮೆಯಾಗುವ ಸಾಧ್ಯತೆ ಇದೆ. ಇರುವುದನ್ನು ಮುಂಬರುವ ದಿನಗಳಿಗಾಗಿ ಕಾಯ್ದಿಡುವ ಚಿಂತನೆಯೂ ಇರಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಉಕ್ರೇನ್ ಯುದ್ಧ ಮತ್ತು ಮಿತಿ ಮೀರಿದ ಹಣದುಬ್ಬರದಿಂದ ಪೂರೈಕೆ ಸರಪಳಿಗೆ ಏಟು ಬಿದ್ದು ಆರ್ಥಿಕ ಹಿಂಜರಿತದ ಭಯ ಕಾಡುತ್ತಿದೆ. ಇದರ ಪರಿಣಾಮವೂ ನಮ್ಮ ಪೇಟೆಯ ಮೇಲೆ ಆಗುತ್ತಿರುವುದನ್ನು ಬೇರೆ ಹೇಳಬೇಕಾಗಿಲ್ಲ.
ಈ ಹಬ್ಬಗಳ ಹಂಗಾಮಿನಲ್ಲಿ ಈ ಎಲ್ಲ ಕಾರಣಗಳಿಂದ ಗೃಹೋಪಯೋಗಿ ವಿದ್ಯುನ್ಮಾನ ಸಲಕರಣೆಗಳಿಗೆ, ಗೃಹ ಬಳಕೆ ಉಪಕರಣಗಳಿಗೆ ಮತ್ತು ತೀವ್ರ ಮಾರಾಟವಾಗುವ ಉಪಭೋಗಕರ ಉತ್ಪನ್ನಗಳಿಗೆ ನಿರೀಕ್ಷಿಸಿದಷ್ಟು ಬೇಡಿಕೆ ಬರಲಿಕ್ಕಿಲವೆಂಬ ಒಂದು ಅಭಿಪ್ರಾಯವೂ ಇದೆ. ಇದಕ್ಕೆ ಪುಷ್ಟಿ ಕೊಡುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿಲ್ಲವೆಂದು ಅಧಿಕೃತ ವರದಿಗಳಿಂದ ತಿಳಿದು ಬರುತ್ತದೆ. ಹಬ್ಬದ ಸೀಜನ್ನಿನಲ್ಲಿ ಹೆಚ್ಚಬಹುದೆಂಬ ಆಶಾಭಾವನೆ ಇರುವುದಂತು ನಿಜ. ಇದನ್ನೆ ನಂಬಿ ಕಂಪನಿಗಳು ಮತ್ತು ಮಾರಾಟಗಾರರು ಹಲವು ರೀತಿಯ ಆಕರ್ಷಣೆಗಳನ್ನು ಒಡ್ಡುತ್ತಾರೆ. ‘ಬೆಲೆಯಲ್ಲಿ ದೊಡ್ಡ ಡಿಸ್ಕೌಂಟ್’ ‘ಎರಡು ಕೊಂಡರೆ ಒಂದು ಫ್ರೀ’ ಹತ್ತರ ಬೆಲೆಯಲ್ಲಿ ಹನ್ನೆರಡು ಹೀಗೆ ಅನೇಕ ಆಮಿಷಗಳನ್ನು ಮುಂದಿಡುತ್ತಾರೆ.
ಈ ಸೌಲಭ್ಯ ಇಂತಿಷ್ಟು ದಿನಗಳವರೆಗೆ ಮಾತ್ರ ಎಂದೂ ಇರುತ್ತದೆ. ಇಲ್ಲಿ ಒಂದು ಪ್ರಶ್ನೆ. ಹಬ್ಬಗಳ ಸೀಜನ್ನಿನಲ್ಲಿ ಡಿಸ್ಕೌಂಟ್ ಮುಂತಾದ ಅನುಕೂಲತೆಗಳಿವೆ ಎಂದು ಹೆಚ್ಚಾಗಿಕೊಳ್ಳುವವರು ಯಾರು?
ಗ್ರಾಹಕ ಪಿರೆಮಿಡ್
ವ್ಯವಹಾರ ನಿರ್ವಹಣೆ ಮತ್ತು ಮಾರಾಟ ಶಾಸ್ತ್ರಗಳಲ್ಲಿ ಜಾಗತಿಕ ಖ್ಯಾತಿ ಪಡೆದಿದ್ದ ಭಾರತೀಯ ಪ್ರೊ.ಸಿ.ಕೆ.ಪ್ರಹ್ಲಾದರವರು ಗ್ರಾಹಕ ಸಮುದಾಯದ ಲಕ್ಷಣಗಳ ಬಗ್ಗೆ ಒಂದು ಸಿದ್ಧಾಂತವನ್ನು ಮುಂದಿಡುತ್ತಾರೆ. ಅದು ತ್ರಿಕೋನಾಕಾರದಲ್ಲಿದ್ದು ಚಿತ್ರದಲ್ಲಿ ತೋರಿಸಿರುವಂತೆ ಈಜಿಪ್ತಿನ ಪಿರೆಮಿಡ್ ಆಕಾರದಲ್ಲಿ ನಿಂತಿರುತ್ತದೆ. ಅವರೇ ಹೇಳುವಂತೆ ಗ್ರಾಹಕರನ್ನು ಅವರ ಆರ್ಥಿಕ ಸ್ಥಿತಿಯನ್ನಾಧರಿಸಿ ನಾಲ್ಕು ಗುಂಪುಗಳಾಗಿ ವಿಂಗಡಿಸಬಹುದು.
ಮೇಲಿನ ಶ್ರೀಮಂತರ ಸಂಖ್ಯೆ ಕಡಿಮೆ ಇದ್ದು ಖರೀದಿ ಗಾತ್ರ ದೊಡ್ಡದಾಗಿರುತ್ತದೆ. ಖರೀದಿ ಮೇಲಿಂದ ಮೇಲೆ ಇರುವುದಿಲ್ಲ.
ದೊಡ್ಡ ಮೊತ್ತದಿಂದಾಗಿ ಪ್ರಸಿದ್ಧರಾಗಿರುವ ಇವರಿಗೆ ಅಂಗಡಿಯವರೇ ಕೆಲವು ರೀತಿಯ ರಿಯಾಯಿತಿಗಳನ್ನು ಕೊಡುತ್ತಾರೆ. ಇವರು ಹಬ್ಬಗಳ ಆಫರ್‌ಗಳಿಗಾಗಿ ಕಾಯುವ ಸಾಧ್ಯತೆ ಇಲ್ಲ. ಇವರಿಗೆ ಬ್ರ್ಯಾಂಡುಗಳು ಮುಖ್ಯ.
ಮೇಲ್ಮಧ್ಯಮ ವರ್ಗದವರೂ ಬ್ರ್ಯಾಂಡ್ ಪ್ರಿಯರು. ಖರೀದಿ ಗಾತ್ರವೂ ದೊಡ್ಡದು. ಸಾಮಾನ್ಯವಾಗಿ ಕೆಲವು ಅಂಗಡಿಗಳ ಖಾಯಂ ಗ್ರಾಹಕರು, ಅಲ್ಲಿಯೇ ಕೇಳದೆ ಅನುಕೂಲಗಳು ದೊರೆಯುತ್ತವೆ. ಹಣಕಾಸಿಗೆ ಚಿಂತಿಸಬೇಕಿಲ್ಲ. ಇವರಲ್ಲಿ ಬಹುತೇಕರು ಸೀಜನಲ್ ಆಫರ್‌ಗಳಿಗೆ ಕಾಯಬೇಕಿಲ್ಲ.
ಮೂರನೇ ಕೆಳ ಮಧ್ಯಮ ವರ್ಗದವರು ಹಣದ ಬಗ್ಗೆ ಲೆಕ್ಕ ಹಾಕುವವರು. ಇವರ ಸಂಖ್ಯೆಯೂ ದೊಡ್ಡದು. ಗೃಹೋಪಯೋಗಿ ಉಪಕರಣಗಳು ಮತ್ತು ಸಲಕರಣೆಗಳ ಖರೀದಿಗಾಗಿ ಆಫರ್‌ಗಳಿಗೆ ಕಾಯ್ದು ಕಡಿಮೆ ಬೆಲೆ ಇದ್ದಲ್ಲಿ ಖರೀದಿಸುತ್ತಾರೆ. ಗೃಹೋಪಯೋಗಿ ವಸ್ತುಗಳಿಗೆ ಇವರೇ ಹಬ್ಬದ ಆಫರ್ ಇದ್ದಾಗ ದೊಡ್ಡ ಗ್ರಾಹಕ ದಂಡು. ನಿತ್ಯೋಪಯೋಗಿ ಉಪಭೋಗದ ಸರಕುಗಳನ್ನು ಆಫರ್ ಇದ್ದಾಗ ಹೆಚ್ಚು ಖರೀದಿಸುವವರು.
ಉಳಿದವರು ಅತಿ ದೊಡ್ಡ ಸಂಖ್ಯೆಯಲ್ಲಿರುವ ಕಡಿಮೆ ಮತ್ತು ಅನಿಯಮಿತ ಆದಾಯದವರು. ಇವರದು ಸಣ್ಣ ಗಾತ್ರದ ಖರೀದಿ. ನಿತ್ಯವೂ ಏನಾದರೂ ಕೊಳ್ಳುವವರು. ಇಡೀ ವರ್ಷ ಹಣ ಉಳಿಸಿ ಗೃಹಪಯೋಗಿ ವಸ್ತುಗಳನ್ನು ಆಸ್ತಿಗಳಂತೆ ಹಬ್ಬದ ಆಫರ್‌ಗಳಲ್ಲಿ ಕೊಳ್ಳುವವರು. ಆಫರ್‌ಗಳಿಗೆ ಇವರ ಕಾಣಿಕೆಯೂ ಹೆಚ್ಚು. ಆದರೆ, ಒಟ್ಟು ಮೊತ್ತ ಕಡಿಮೆ.
ಇಂದಿನ ಸ್ಥಿತಿ
ಅಂತೂ ಮೂರನೇ ಮತ್ತು ನಾಲ್ಕನೇ ಗುಂಪಿನವರೇ ಹಬ್ಬಗಳ ಆಫರ್‌ಗಳಿಗಾಗಿ ಕಾಯ್ದು ಹಬ್ಬದ ಸೀಜನ್ ಬೇಡಿಕೆ ಹೆಚ್ಚಿಸುವವರು. ಆದರೆ, ಇವರ ಹಣಕಾಸು ಸ್ಥಿತಿ ಅಂದುಕೊಂಡಷ್ಟು ಉತ್ತಮವಾಗಿಲ್ಲ. ಕೋವಿಡ್-೧೯ ನಿರ್ಬಂಧಗಳಿಂದ ಘಾಸಿಗೊಂಡು ಕೆಳಗೆ ನೂಕಲ್ಪಟ್ಟಿದ್ದ ಮಧ್ಯಮ ವರ್ಗದವರು ಇತ್ತೀಚೆಗೆಷ್ಟೇ ಸುಧಾರಿಸಿಕೊಳ್ಳುತ್ತಿದ್ದು ಇವರ ಮೇಲೆ ಹಣ ದುಬ್ಬರದ ಹೊಡೆತ ಬಿತ್ತು. ಇನ್ನು ಬಡ ವರ್ಗದವರು ಅಂದಂದಿನ ಖರ್ಚಿಗೇ ಪರದಾಡುವ ಸ್ಥಿತಿ ಇದೆ. ಸಾಲ ಮಾಡಿ ಖರೀದಿಸುವ ಸ್ಥಿತಿಯಲ್ಲಿ ಯಾರು ಇಲ್ಲ. ಆದ್ದರಿಂದ ಹಬ್ಬದ ಸೀಜನ್ ಬೇಡಿಕೆ ೨೦೧೯ರ ಮಟ್ಟಕ್ಕೆ ಬಂದರೆ ಅದೇ ಹೆಚ್ಚು ಎಂದು ಹಲವು ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಆದರೂ ಮ್ಯಾರಿಕೋ ಮತ್ತು ಗೋದ್ರೆಜ್ ನಿರೀಕ್ಷೆಯಂತೆ ಹಬ್ಬಗಳ ಹಂಗಾಮಿನ ಬೇಡಿಕೆ ನಿರೀಕ್ಷಿಗಿಂತ ಹೆಚ್ಚಾದರೆ ಅದು ಅರ್ಥವ್ಯವಸ್ಥೆಯ ಚೇತರಿಕೆಗೆ ಟಾನಿಕ್ ಕೊಟ್ಟಂತಾಗುತ್ತದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…