ಎಲ್ಲರಿಗೂ ಈ ಮಾತನ್ನು ಹೇಳಿದ ತಕ್ಷಣ ಕಣ್ಣಲ್ಲಿ ನೀರು ಬರುತ್ತದೆ, ಆತ್ಮೀಯರಿಗೆ ಕೋಪ ಬರುತ್ತದೆ. ಅದೊಂದು ರೀತಿಯ ಸಾತ್ವಿಕ ಕೋಪ. ಆ ಕೋಪಕ್ಕೆ ನಾವೆಲ್ಲರೂ ಶರಣಾಗಬೇಕು ಕಾರಣ ಅದರಲ್ಲಿ ತುಂಬಾ ಪ್ರೀತಿ ಇರುತ್ತದೆ . ಸಾಮಾನ್ಯವಾಗಿ ಕೊನೆಯ ಪಯಣ ಎಂದಾಕ್ಷಣ ನಮ್ಮೆಲ್ಲರ ನೆನಪಿಗೆ ಬರುವುದುವಿಲ್ಲು. ನಮ್ಮ ಆಸ್ತಿ ಯಾವ ಮಕ್ಕಳಿಗೆ ಹೋಗಬೇಕು, ಹೆಂಡತಿಗೆ ಎಷ್ಟು ಹೋಗಬೇಕು ಈ ರೀತಿಯಾಗಿ ಎಲ್ಲರೂ ಕೂಡ ಯೋಚಿಸುವುದು ಸಹಜ ಗುಣ.
ನಮ್ಮ ಆಸ್ತಿ , ಒಡವೆ , ಅಂತಸ್ತು , ಗಾಡಿ ಇದೆಲ್ಲ ಬಿಟ್ಟು ನಮ್ಮ ಬಳಿ ಒಂದು ದೊಡ್ಡ ಆಸ್ತಿ ಇದೆ. ಅದಾವುದು ಎಂದು ಯಾರಾದರೂ ಯೋಚಿಸಿದ್ದೀರಾ ಅದು ನಮ್ಮ ದೇಹ. ಹೌದು, ನಾವು ಸತ್ತ ಮೇಲೆ ನಮ್ಮ ದೇಹವನ್ನು ಏನು ಮಾಡಬೇಕು ಎಂದು ಮೊದಲೇ ತೀರ್ಮಾನಿಸು ವುದು ಬಹಳ ಒಳ್ಳೆಯದು.
ಹೌದ, ಏನು ಮಾಡ್ತಾರೆ ಅಂತ್ಯಸಂಸ್ಕಾರ ಮಾಡುತ್ತಾರೆ ಅಷ್ಟೇ ಈ ರೀತಿಯಾದ ಯೋಚನೆ ನಮಗೆ ಬರುತ್ತದೆ. ಇಲ್ಲ ಇದಕ್ಕೂ ಮುಂಚೆ ನಾವು ನಮ್ಮ ನೇತ್ರಗಳನ್ನು ದಾನ ಮಾಡಬಹುದು,ಅಂಗಾಂಗ ದಾನ ಮಾಡಬಹುದು ಹಾಗೂ ದೇಹವನ್ನು ದಾನ ಮಾಡಬಹುದು.
ಇದರಿಂದ ಏನು ಪ್ರಯೋಜನ ಎಂದು ಸಾಕಷ್ಟು ಜನ ಪ್ರಶ್ನೆ ಮಾಡುವುದೇ ಹೆಚ್ಚು, ಹೌದು ನಮ್ಮ ನೇತ್ರಗಳನ್ನು ದಾನ ಮಾಡುವುದರಿಂದ ದೃಷ್ಟಿ ಹೀನರಿಗೆ ನಮ್ಮ ಕಣ್ಣುಗಳು ದೃಷ್ಟಿಯ ವರದಾನವನ್ನು ಕೊಡುತ್ತವೆ. ಅಷ್ಟೇ ಅಲ್ಲ ಅಂಗಾಂಗ ದಾನ ಮಾಡುವುದರಿಂದ ಎಷ್ಟೋ ಬಾರಿ ನಮ್ಮ ದೇಹದ ಅಂಗವನ್ನು ತೆಗೆದು ಕಸಿಮಾಡಿ ಜೀವವನ್ನು ರಕ್ಷಿಸಬಹುದು. ಅಷ್ಟೇ ಅಲ್ಲ ನಮ್ಮ ದೇಹವನ್ನು ದಾನ ಮಾಡುವುದರಿಂದ ಮೆಡಿಕಲ್ ಸ್ಟೂಡೆಂಟ್‌ಗಳಿಗೆ ಬಹಳ ಸಹಾಯವಾಗುತ್ತದೆ. ಇರುವಾಗ ನಾವು ಎಷ್ಟು ಒಳ್ಳೆಯ ಕೆಲಸ ಮಾಡಿದೆವೋ ತಿಳಿದಿಲ್ಲ, ಆದರೆ ಸತ್ತ ಮೇಲೆ ನಮ್ಮ ದೇಹದಿಂದ ಒಂದಿಬ್ಬರಿಗಾದರೂ ಸಹಾಯವಾಗುತ್ತದೆ ಎಂದರೆ ಏಕೆ ಮಾಡಬಾರದು. ಇದನ್ನು ಒಮ್ಮೆ ಯಾರಾದರೂ ಯೋಚಿಸಿದ್ದೀರಾ. ಇದು ಒಂದು ಸತ್ಯ ಘಟನೆ ನನ್ನ ಕಣ್ಣ ಮುಂದೆ ನಡೆದಂತಹ ಘಟನೆ ಇದು. ನಮಗೆ ತಿಳಿದವರು ಒಬ್ಬರು ವಯಸ್ಸಾದ ಮೇಲೆ ಅವರನ್ನು ಅವರ ಮಗ ನೋಡಿಕೊಳ್ಳಲಿಲ್ಲ ಬೇಸರಗೊಂಡು ಅವರು ವೃದ್ಧಾಶ್ರಮವನ್ನು ಸೇರಿಕೊಂಡರು.
ಹಾಗೂ ಕೊನೆಯ ಸಮಯದಲ್ಲಿ ವೃದ್ಧಾಶ್ರಮದವರಿಗೆ ನನ್ನ ದೇಹವನ್ನು ದಯವಿಟ್ಟು ದಾನ ಮಾಡಿ. ನನ್ನ ಮಗ ಬಂದು ಕೇಳಿದರೆ ಕೊಡಬೇಡಿ ಎಂದು ಹೇಳಿದ್ದರು. ಆದರೆ ಈಗಿನ ಸಂಪ್ರದಾಯವಾದಿಗಳು ಎಂದು ಕರೆಸಿಕೊಳ್ಳುವ ಜನ ಅವರ ಮಗನಿಗೆ ಇಲ್ಲ ಸಲ್ಲದ್ದೆಲ್ಲ ಹೇಳಿ ತಂದೆಯ ದೇಹವನ್ನು ತಂದು ಅಂತ್ಯಸಂಸ್ಕಾರ ಮಾಡುವಂತೆ ಮಾಡಿದರು. ಅಲ್ಲ, ಇರುವಾಗ ಒಂದು ತುತ್ತು ಊಟ ಹಾಕದ ಮಗ ಸತ್ತಾಗ ತಂದೆ ದೇಹ ದಾನ ಮಾಡು ಎಂದು ಹೇಳಿದ್ದಾಗಲೂ ಕೂಡ ದೇಹ ತಂದು ಅಂತ್ಯ ಸಂಸ್ಕಾರ ಮಾಡಿ ತಿಥಿ ಕಾರ್ಯವನ್ನು ಮಾಡುವುದು ಎಷ್ಟರಮಟ್ಟಿಗೆ ಸರಿ ಒಮ್ಮೆ ಯೋಚನೆ ಮಾಡಿ. ನಮ್ಮ ದೇಹದ ಮೇಲೆ ನಮಗೆ ಮೊದಲು ಅಧಿಕಾರವಿರುತ್ತದೆ. ಹಾಗಾಗಿ ನಮ್ಮ ದೇಹವನ್ನು ನಾವು ಸತ್ತ ಮೇಲೆ ಏನು ಮಾಡಬೇಕು ಎಂದುನಾವು ಮೊದಲೇ ತೀರ್ಮಾನಿಸಿ ಮನೆಯವರೆಲ್ಲರ ಮುಂದೆ ಅದನ್ನು ಹೇಳುವುದು ನಿಜಕ್ಕೂ ಒಳ್ಳೆಯದು.
ಕಾರಣ ಎಲ್ಲವೂ ಸಹ ಸಂಪ್ರದಾಯವಾಗಿಯೇ ಹಿಂದಿನ ಹಾಗೆ ನಡೆಯಬೇಕು ಎಂದು ಖಂಡಿತವಾಗಿಯೂ ಏನೂ ಇಲ್ಲ. ನಾಲ್ಕು ಜನರಿಗೆ ನಮ್ಮ ದೇಹ ಉಪಯೋಗಕ್ಕೆ ಬರುತ್ತದೆ ಎಂದರೆ ಏಕೆ ಮಾಡಬಾರದು. ನಮ್ಮ ದೇಹವನ್ನು ನಾವು ದಾನ ಮಾಡಿದ್ದೇವೆ ಎಂದರೆ ನಾನು ಈಗಲೇ ಸಾಯಲು ಸಿದ್ಧ ಎಂದು ಅರ್ಥವಲ್ಲ. ನಾನು ಸತ್ತ ನಂತರ ನನ್ನ ದೇಹವನ್ನು ಏನು ಮಾಡಬೇಕು ಎನ್ನುವ ಒಂದು ಸಣ್ಣ ಚಿಂತನೆ ಅಷ್ಟೇ.
ನೀವೇನಾದರೂ ದೇಹ ದಾನ, ಅಂಗಾಂಗ ದಾನ ಹಾಗೂ ನೇತ್ರದಾನಗಳನ್ನು ಮಾಡಿದರೆ ನಾಲ್ಕು ಜನರಿಗೆ ಅದನ್ನು ಹೇಳಿ ಹಾಗೂ ಅವರು ಕೊಡುವ ಒಂದು ಪ್ರಮಾಣ ಪತ್ರವನ್ನು ನಿಮ್ಮ ಹಾಲಿನಲ್ಲಿ ಹಾಕಿ ಕಾರಣ ಅದನ್ನು ನೋಡಿ ನಾಲ್ಕು ಜನ ಹೌದು ಇವರು ದೇಹವನ್ನು ದಾನ ಮಾಡಿದ್ದಾರೆ. ನಾವು ಸಂಬಂಧ ಪಟ್ಟವರಿಗೆ ಫೋನ್ ಮಾಡಬೇಕು ಎಂದು ತಿಳಿಯುತ್ತದೆ.
ವರನಟ ಡಾ. ರಾಜ್‌ಕುಮಾರ್ ಅವರೇ ಈ ನೇತ್ರದಾನದ ಪ್ರೇರಕರು ಅಂದರೆ ಖಂಡಿತವಾಗಿಯೂ ತಪ್ಪಾಗುವುದಿಲ್ಲ ಇದರಿಂದ ಎಷ್ಟೋ ಜನರಿಗೆ ದೃಷ್ಟಿ ಮತ್ತೆ ಮರಳಿದೆ ಇದಕ್ಕಿಂತ ಉತ್ತಮ ಕಾರ್ಯ ಇರಲು ಹೇಗೆ ಸಾಧ್ಯ? ಹಾಗಾಗಿ ಎಲ್ಲರೂ ಇದರ ಬಗ್ಗೆ ಒಮ್ಮೆ ಯೋಚಿಸಿ.
– ಸೌಮ್ಯ ಕೋಠಿ, ಮೈಸೂರು
ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಕೋಳಿಮೊಟ್ಟೆ ವಿತರಣೆಗಾಗಿ ನೀಡಲಾಗುವ ಅನುದಾನ ಕಳೆದ ೬ತಿಂಗಳಿಂದ…
ಗುತ್ತಲು ಕೆರೆ, ಕಾಳೇನಹಳ್ಳಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ಮಂಡ್ಯ: ನಗರದ ಗುತ್ತಲು ಕೆರೆಗೆ ತ್ಯಾಜ್ಯ…
ಪ್ರಶಾಂತ್ ಎಸ್. ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ…
ಗಿರೀಶ್ ಹುಣಸೂರು ಹೊಸ ವರ್ಷಾಚರಣೆ, ಕ್ರಿಸ್‌ಮಸ್ ರಜೆ ನಿರೀಕ್ಷೆಯಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಮೈಸೂರು: ೨೦೨೫ನೇ ವರ್ಷಕ್ಕೆ ವಿದಾಯ ಹೇಳಿ, ೨೦೨೬ರ…
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…