ಎಡಿಟೋರಿಯಲ್

ಬೆಳಕು ಕೊಡುವ ಡಿಸ್ಕಾಮ್‌ಗಳ ತಳದಲ್ಲಿ ಕತ್ತಲೆ?

ಪ್ರೊ.ಆರ್.ಎಂ.ಚಿಂತಾಮಣಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಒಂದು ಖಡಕ್ ಆದೇಶ ಹೊರಡಿಸಿ ರಾಜ್ಯ ಸರ್ಕಾರಗಳು ಕಷ್ಟಗಳ ಸುಳಿಯಲ್ಲಿ ಇರುವ ತಮ್ಮ ವಿದ್ಯುತ್ ವಿತರಣಾ ಕಂಪನಿಗಳಿಗೆ  ೨.೫ ಲಕ್ಷ ಕೋಟಿ ರೂ.ಗಳನ್ನು ಕೂಡಲೇ ಒದಗಿಸಬೇಕೆಂದು ತಿಳಿಸಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದಕರಿಗೆ ಕೊಡಬೇಕಾಗಿರುವ ಬಾಕಿ ಮೊತ್ತ ೧,೧೨,೭೩೭ ಕೋಟಿ ಮತ್ತು ಆಯಾ ಸರ್ಕಾರಗಳು ವಿವಿಧ ಕಾರಣಗಳಿಗಾಗಿ ತಮ್ಮ ಎಸ್ಕಾಮ್‌ಗಳಿಗೆ ಕೊಡಬೇಕಿರುವ ಬಾಕಿ ಮೊತ್ತ ೬೨,೯೩೧ ಕೋಟಿ ಅಲ್ಲದೆ ರಾಜ್ಯ ಸರ್ಕಾರಗಳಿಂದ ಘೋಷಿತ ವಿದ್ಯುತ್ ಸಬ್ಸಿಡಿ ಬಾಕಿ ಮೊತ್ತ ೭೬,೩೩೭ ಕೋಟಿ ರೂ.ಸೇರಿವೆ. ಇದು ಅವುಗಳು ತಮ್ಮ ತುರ್ತು ಹಣಕಾಸು ಸಮಸ್ಯೆಗಳನ್ನು ನೀಗಿಸಿಕೊಳ್ಳಲು ಉಪಯೋಗವಾಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ರೋಗ ಉಲ್ಬಣವಾಗದಂತೆ ತಡೆಯಲು ತಾತ್ಕಾಲಿಕ ಚಿಕಿತ್ಸೆ ಇದಾದೀತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಈ ಎಸ್ಕಾಂಗಳದ್ದು ಬಹಳ ಹಳೆಯ ಸಮಸ್ಯೆ. ಪರಿಹಾರಕ್ಕಾಗಿ ಮೇಲಿಂದ ಮೇಲೆ ಯೋಜನೆಗಳನ್ನು ರೂಪಿಸಲಾಗುತ್ತದೆ. ಆದರೆ, ಅನುಷ್ಠಾನದಲ್ಲಿನ ಲೋಪದೋಷಗಳಿಂದ ಮತ್ತು ಆಡಳಿತಗಾರರ ನಿರ್ಲಕ್ಷ್ಯದಿಂದ ನಿಧಾನವಾಗಿ ಹಳ್ಳ ಹಿಡಿದಿರುತ್ತದೆ. ಉದ್ದೇಶ ಈಡೇರಲಿಲ್ಲ.

೨೦೧೮ರಲ್ಲೇ ಪ್ರಧಾನಿ ಕೆಂಪುಕೋಟೆಯ ಭಾಷಣದಲ್ಲೇ ‘ಪಿಎಂ ಕುಸುಮ್’ (ಪ್ರಧಾನಿ ಮಂತ್ರಿ ಕಿಸಾನ್ ಉರ್ಜಾ ಸುರಕ್ಷತಾ ಏವಂ ಉತ್ಥಾನ್ ಮಹಾಭಿಯಾನ) ಯೋಜನೆಯನ್ನು ಪ್ರಕಟಿಸಿದ್ದರು. ಇದು ರೈತರು ತಮ್ಮ ಬೀಳು ಭೂಮಿಯನ್ನು ಬಳಸಿಕೊಂಡು ಸೋಲಾರ್ ವಿದ್ಯುತ್ ಉತ್ಪಾದಿಸುವುದನ್ನು ಉತ್ತೇಜಿಸುವುದಾಗಿತ್ತು. ಅವರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಹೆಚ್ಚುವರಿ ವಿದ್ಯುತ್ತನ್ನು ಸಮೀಪದ ಗ್ರಿಡ್‌ಗೆ ಮಾರಾಟ ಮಾಡುವ ಅವಕಾಶವೂ ಇತ್ತು. ಇದಕ್ಕಾಗಿ ಅವಶ್ಯವಿರುವ ತಂತ್ರಜ್ಞಾನ ಮತ್ತು ದೀರ್ಘಾವಧಿ ಬಂಡವಾಳ ಒದಗಿಸುವ ಮತ್ತು ಮುಂದೆ ಸರಳ ಕಂತುಗಳಲ್ಲಿ ಮರು ಪಾವತಿಸುವ ವ್ಯವಸ್ಥೆ ಇತ್ತು. ಇದರ ಉದ್ದೇಶ ಎಸ್ಕಾಮ್‌ಗಳನ್ನು ಮತ್ತು ರಾಜ್ಯ ಸರ್ಕಾರಗಳನ್ನು ಕೃಷಿ ಸಬ್ಸಿಡಿಗಳ ಭಾರದಿಂದ ಮುಕ್ತ ಮಾಡುವುದಲ್ಲದೆ ರೈತರು ತಮ್ಮ ವಿದ್ಯುತ್ ಪೂರೈಕೆಯಲ್ಲಿ ಸ್ವಾವಲಂಬಿಗಳಾಗಿ ಹೆಚ್ಚುವರಿ ಆದಾಯ ಗಳಿಸುವಂತೆಯೂ ಮಾಡುವುದಾಗಿತ್ತು. ಆದರೆ, ನಾನಾ ರಾಜ್ಯಗಳಲ್ಲಿ ನಾನಾ ರೀತಿಯಾಗಿ ತಿರುಚಲ್ಪಟ್ಟ ಯೋಜನೆ ರೈತರ ಭೂಮಿಯವರೆಗೆ ತಲುಪಲೇ ಇಲ್ಲ.

ಈಗಿನ ಕೇಂದ್ರ ವಿದ್ಯುತ್ ಸಚಿವರು ಯೋಜನೆಯಲ್ಲಿ ಮಾರ್ಪಾಡುಗಳನ್ನು ಮಾಡಿ ಜಾರಿಗೊಳಿಸಲು ಕಳೆದ ವರ್ಷದಿಂದಲೇ ಪ್ರಯತ್ನಿಸುತ್ತಿದ್ದಾರೆ. ಇವು ನಾಲ್ಕೈದು ವರ್ಷಗಳಲ್ಲಿ ಪರಿಣಾಮ ಬೀರುತ್ತವೆಂಬುದು ಅವರ ನಿರೀಕ್ಷೆ. ಸೋಲಾರ್ ವಿದ್ಯುತ್ ಸಂಗ್ರಹಿಸಿಡುವ ತಂತ್ರಜ್ಞಾನ ಬಳಸುವ ಅವಕಾಶವೂ ಇದೆ. ರೈತರು ಇದರ ಕಡೆಗೆ ಮುಖ ಮಾಡಿದರೆ ಅವರಿಗೂ ಒಳ್ಳೆಯದು. ಎಸ್ಕಾಮ್‌ಗಳ ಭಾರವೂ ಕಡಿಮೆಯಾಗುತ್ತದೆ. ಆದರೆ ಶೇ.೮೬ಕ್ಕೂ ಹೆಚ್ಚಾಗಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನಿಲುಕುವ ಹಣ್ಣು ಇದಲ್ಲ ಎಂಬ ಭಾವನೆ ರೈತರಲ್ಲಿದೆ. ಈ ಭಯವನ್ನು ಸರ್ಕಾರ ಹೋಗಲಾಡಿಸಬೇಕು.

ಕದೆರೆಡು ವರ್ಷಗಳ ಬಜೆಟ್‌ನಲ್ಲಿ ಕೇಂದ್ರ ಅರ್ಥ ಮಂತ್ರಿಗಳು ಎಸ್ಕಾಮ್‌ಗಳಿಗೆ ಹೆಚ್ಚುವರಿ ಬಂಡವಾಳ ಒದಗಿಸುವ ಯತ್ನ ಮಾಡುತ್ತಲೇ ಇದ್ದಾರೆ. ಆದರೂ ಎಸ್ಕಾಮ್‌ಗಳ ಸಾಲದ ಭಾರ ಹೆಚ್ಚುತ್ತಲೇ ಇದೆ. ಒಂದು ವರದಿಯಂತೆ ಈಗ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಸ್ಕಾಮ್‌ಗಳ ಒಟ್ಟು ಸಾಲದ ಭಾರ ಎರಡು ಲಕ್ಷ ಕೋಟಿ ರೂ.ಗಳಾಗಿದೆ ( ೨೫ ಬಿಲಿಯನ್ ಇದನ್ನು ಸರಿಪಡಿಸಲು ಸರ್ಕಾರ ಪರ್ಯಾಯಗಳನ್ನು ಚಿಂತಿಸುತ್ತಲೇ ಇದೆ.

ಖಾಸಗೀಕರಣದತ್ತ ವಿದ್ಯುತ್ ವಿತರಣೆ?
ಒಂದು ಪರಿಹಾರವಾಗಿ ಸರ್ಕಾರ ವಿದ್ಯುತ್ ವಿತರಣೆಯಲ್ಲಿ ಮೊದಲ ಬಾರಿಗೆ ಖಾಸಗಿಯವರಿಗೆ ಅವಕಾಶ ಕೊಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಇದಕ್ಕಾಗಿ ವಿದ್ಯುತ್ ಕಾಯ್ದೆಯಲ್ಲಿ ಸಮಗ್ರ ತಿದ್ದುಪಡಿ ತರುವ ಕರಡು ತಿದ್ದುಪಡಿ ಮಸೂದೆಗೆ ಕಳೆದ ವಾರ ಸಚಿವ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ಸಂಸತ್ತಿನಲ್ಲಿ ಮಂಡಿಸುವುದಷ್ಟೇ ಬಾಕಿ. ಅದರಂತೆ ವಲಯಗಳ ಮಿತಿಯಲ್ಲಿ ಸೀಮಿತ ಪ್ರಮಾಣದಲ್ಲಿ ಖಾಸಗಿಯವರು ಇರುವ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ವ್ಯವಹರಿಸಲು ಅವಕಾಶ ಕೊಡಲಾಗುವುದು. ಸೇವಾ ದರಗಳನ್ನು ಕೇಂದ್ರ ವಿದ್ಯುತ್ ದರ ನಿಗದಿ ಪ್ರಾಧಿಕಾರ ನಿರ್ಧರಿಸುವುದು ಎಂದು ತಿಳಿದು ಬಂದಿದೆ. ಇದರಿಂದ ಸ್ಪರ್ಧೆಗೆ ಅವಕಾಶವಾಗಿ ಎಸ್ಕಾಮ್‌ಗಳ ಸೇವಾ ಗುಣಮಟ್ಟವೂ ಹೆಚ್ಚಾಗಲಿದೆ. ಜತೆಗೆ ಎಸ್ಕಾಮ್‌ಗಳ ಭಾರವೂ ಕಡಿಮೆಯಾಗಲಿದೆ ಎನ್ನುವುದು ಸರ್ಕಾರದ ಅಂಬೋಣ.

ಆದರೆ ಖಾಸಗೀಕರಣವೊಂದೇ ಸಮಸ್ಯೆಗೆ ಮದ್ದಲ್ಲ. ಅದರಲ್ಲಿಯೂ ಸಮಾಜದ ಅನಿವಾರ್ಯ ಅವಶ್ಯಕತೆಗಳಲ್ಲಿ  ಒಂದಾದ ವಿದ್ಯುತ್ ಸರಬರಾಜು ಕ್ಷೇತ್ರದಲ್ಲಿ ಖಾಸಗಿಯವರ ಪಾತ್ರ ಬೇಕೆ ಎಂದು ಅನೇಕ ತಜ್ಞರು ಕೇಳುತ್ತಿದ್ದಾರೆ. ಅಷ್ಟಾಗಿಯೂ ಎಸ್ಕಾಮ್‌ಗಳ ಆರ್ಥಿಕ ಆರೋಗ್ಯ ಸುಧಾರಿಸುವುದೆಂಬುದಕ್ಕೆ ಏನು ಗ್ಯಾರಂಟಿ? ಒಂದಿಷ್ಟು ವಾಣಿಜ್ಯಕ ಲೇಪವಿರುವ ಸಂವಹನ (ಟೆಲಿಕಾಂ) ವಲಯದಲ್ಲಿ ಖಾಸಗಿಯವರು ಬಂದ ಮೇಲೂ ಭಾರತ ಸಂಚಾರ ನಿಗಮ (ಬಿಎಸ್‌ಎನ್‌ಎಲ್) ಸುಧಾರಿಸದೇ ಇರುವ ಉದಾಹರಣೆ ಕಣ್ಣ ಮುಂದೆಯೇ ಇದೆ.

ವಿದ್ಯುತ್ ಮತ್ತು ನೀರು ಸರಬರಾಜಿನಂತಹ ಸಾರ್ವಜನಿಕ ಅವಶ್ಯಕ ಸೇವೆಗಳು ಸರ್ಕಾರದ ಅಥವಾ ಸಾರ್ವಜನಿಕ ವಲಯದ ವಶದಲ್ಲಿರುವುದೇ ಮೇಲು ಎನ್ನುವುದು ಅನೇಕರ ಅಭಿಪ್ರಾಯ. ಇಂಥ ವಲಯಗಳಲ್ಲಿ ಖಾಸಗಿಯವರ ಪ್ರಭಾವ ಹೆಚ್ಚುತ್ತ ಹೋದರೆ ಕೊನೆಗೆ ಒಂದು ದಿನ ಅವರ ಏಕಸ್ವಾಮ್ಯವಾಗಿ ಇಡೀ ಸಮಾಜ ಅವರ ಮರ್ಜಿಯಲ್ಲಿ ಇರಬೇಕಾಗುತ್ತದೆ. ಅವರು ಲಾಭದಾಯಕ ವಿಭಾಗಗಳಿಗೆ ಹೆಚ್ಚು ಗಮನಹರಿಸಿ ಇತರ ಲಾಭದಾಯಕವಲ್ಲದ ಆದರೆ ಸಮಾಜದ ಅವಿಭಾಜ್ಯ ಅಂಗವಾಗಿರುವ ವಿಭಾಗಗಳನ್ನು ನಿರ್ಲಕ್ಷಿಸಬಹುದು. ಅದು ಸಾಮಾಜಿಕ ನ್ಯಾಯಕ್ಕೆ ಧಕ್ಕೆಯನ್ನುಂಟು ಮಾಡುವ ಆತಂಕವಿದೆ.
ಈಗಿರುವ ವ್ಯವಸ್ಥೆಯಲ್ಲಿ ತೊಂದರೆಗಳಿರುವುದೂ ನಿಜ. ತಪ್ಪುಗಳಾಗಿರುವುದೂ ನಿಜ. ಅವುಗಳ ಮೂಲದವರೆಗೆ ಅಧ್ಯಯನ ಮಾಡಿ ತಕ್ಕ ಪರಿಹಾರಗಳನ್ನು ಕಂಡುಕೊಳ್ಳವುದು ಒಳ್ಳೆಯದು. ತಪ್ಪಿತಸ್ಥರನ್ನು ಕೂಡಲೇ ಶಿಕ್ಷಿಸಬೇಕು. ಅದು ಇತರರಿಗೆ ತಿಳಿದು ಉಳಿದವರೂ ಎಚ್ಚೆತ್ತುಕೊಳ್ಳುವಂತಾಗಬೇಕು.
ಸರ್ಕಾರ ಈಗ ಏನೇ ಪ್ರಯೋಗ ಮಾಡಿದರೂ ಎಸ್ಕಾಮ್‌ಗಳನ್ನು ಬಲಪಡಿಸುವ ಯತ್ನಗಳನ್ನು ಮುಂದುವರಿಸಬೇಕು. ರಾಜ್ಯ ಸರ್ಕಾರಗಳೂ ಸಹಕರಿಸಬೇಕು ಒಕ್ಕೂಟ ವ್ಯವಸ್ಥೆಯಲ್ಲಿ ಇದು ಮುಖ್ಯ.

ಎಸ್ಕಾಮ್‌ಗಳಲ್ಲಿ ಮೊದಲು ತಂತ್ರಜ್ಞಾನ ಉನ್ನತೀಕರಣ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯ ಹೆಚ್ಚಿಸುವಲ್ಲಿ ಹೆಚ್ಚಿನ ಹೂಡಿಕೆಗಳಾಗಬೇಕು. ವಿದ್ಯುತ್ ಅಪವ್ಯಯ ಮತ್ತು ಸೋರಿಕೆ ತಡೆಯಬೇಕು. ನಮ್ಮ ದೇಶದಲ್ಲಿ ವಿದ್ಯುತ್ ಪ್ರಸರಣ ನಷ್ಟ ಇತರ ದೇಶಗಳಿಗಿಂತ ಅತಿ ಹೆಚ್ಚು. ಅದನ್ನು ಕನಿಷ್ಠ ಮಟ್ಟಕ್ಕಿಳಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹಸ್ತಕ್ಷೇಪಗಳಿಲ್ಲದ ವೃತ್ತಿಪರ ಆಡಳಿತ ನಮ್ಮ ಗುರಿಯಾಗಬೇಕು.

ಒಂದು ಮಾತು: ರಾಜ್ಯ ಸರಕಾರಗಳ ಸಬ್ಸಿಡಿ ಮತ್ತು ಉಚಿತ ವಿದ್ಯುತ್ ಯೋಜನೆಗಳೇ ಎಸ್ಕಾಮ್‌ಗಳ ನಷ್ಟಕ್ಕೆ ಕಾರಣ ಎಂದು ಹೇಳುವುದು ಅರ್ಧ ಸತ್ಯವಾಗುತ್ತದೆ. ಅವುಗಳೆಲ್ಲ ಸಾಮಾಜಿಕ ನ್ಯಾಯ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯ ಅವಿಭಾಜ್ಯ ಅಂಗ. ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಮತ್ತು ಲಾಭ ಎಲ್ಲರಿಗೂ ದೊರೆಯಬೇಕು.

andolana

Recent Posts

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

12 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

1 hour ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

2 hours ago

ಪಶ್ಚಿಮಘಟ್ಟ: 16114 ಚ.ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ಮಿತಿ ಸೂಕ್ತ :ಈಶ್ವರ ಖಂಡ್ರೆ

ಪಶ್ಚಿಮಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ಬಗ್ಗೆ ಬಾಧ್ಯಸ್ಥರ ಸಭೆ ಬೆಂಗಳೂರು: ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ…

2 hours ago