ಎಡಿಟೋರಿಯಲ್

ಕುಲಾಂತರಿ ಸಾಸಿವೆ ಎಷ್ಟು ಅಪಾಯಕಾರಿ?

ಡಾ.ಎಚ್. ಮಂಜುನಾಥ್,

ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಯಲ್ಲಿ ಸಾಸಿವೆಗೆ ಬಹುಮುಖ್ಯ ಪಾತ್ರವಿದೆ. ಅಷ್ಟೇ ಅಲ್ಲ ಸಾಸಿವೆಯಲ್ಲಿ ಭರಪೂರ ಆರೋಗ್ಯಕರ ಅಂಶಗಳೂ ಅಡಕವಾಗಿವೆ. ರಕ್ತದಲ್ಲಿ ಕೊಲೆಸ್ಟರಾಲ್ ಅಂಶವನ್ನು ತಗ್ಗಿಸುವಲ್ಲಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯುವಲ್ಲಿ ಸಾಸಿವೆ ಕೆಲಸ ಮಾಡುತ್ತದೆ. ಇದರ ಹೊರತಾಗಿಯೂ ಅದರಲ್ಲಿರುವ ಔಷಧೀಯ ಮೌಲ್ಯಗಳು ಅನೇಕ. ಅದು ದೇಹದ ಚರ್ಮವನ್ನು ತಿಳಿಗೊಳಿಸುವಲ್ಲಿ, ಕೂದಲಿನ ಆರೋಗ್ಯ ಕಾಪಾಡುವಲ್ಲಿ ಮತ್ತು ಮಧುಮೇಹವನ್ನು ನಿಗ್ರಹಿಸುವಲ್ಲಿಯೂ ಕೆಲಸ ಮಾಡುತ್ತದೆ.

ಭಾರತದಲ್ಲಿ ಮಳೆಯಾಶ್ರಿತ ಕೃಷಿಭೂಮಿ ಗರಿಷ್ಠಪ್ರಮಾಣದಲ್ಲಿದ್ದು ಬಹುತೇಕ 70% ರಷ್ಟು ಕೃಷಿ ಉತ್ಪಾದನೆ ಈ ಮಳೆಯಾಶ್ರಿತ ವರ್ಗದ ಭೂಮಿಯಿಂದಲೇ ಆಗುತ್ತಿದೆ. ಸಾಸಿವೆ ಬೆಳೆಯನ್ನು ಟ್ರಾಪ್ ಕ್ರಾಪ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಕಡು ಹಳದಿ ಬಣ್ಣದ ಹೂವುಗಳು ಬೇರೆ ಮುಖ್ಯಬೆಳೆಗಳಿಗೆ ಆಕ್ರಮಣ ಮಾಡುವ ಕೀಟಗಳನ್ನು ತನ್ನತ್ತ ಆಕರ್ಷಿಸಿ ಬಲೆಗೆ ಬೀಳಿಸುತ್ತದೆ. ಇಷ್ಟೇ ಅಲ್ಲ, ಕೃಷಿಬೆಳೆಗಳಲ್ಲಿ ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಜೇನ್ನೊಣಗಳನ್ನು ಕೂಡ ಆಕರ್ಷಿಸಿ ಮುಖ್ಯ ಕೃಷಿಬೆಳೆಗಳಲ್ಲಿ 12% ರಷ್ಟು ಹೆಚ್ಚಿನ ಇಳುವರಿ ಬರುವಂತೆ ಮಾಡುವಲ್ಲಿ ಕೂಡ ಸಾಸಿವೆಯ ಪಾತ್ರ ಅಪಾರವಾಗಿದೆ.

ಸಾಸಿವೆ ಸಸಿಯ ಬೇರುಗಳು ಇಸೋಥಿಯೋಸೈನೇಟ್ ಎಂಬ ರಸಸಂಯೋಜನೆಯನ್ನು ಬಿಡುಗಡೆ ಮಾಡುವ ಮೂಲಕ ಮಣ್ಣಿನಲ್ಲಿರುವ ಹಲವಾರು ಕ್ರಿಮಿಗಳನ್ನು, ಅದರಲ್ಲೂ ವಿಶೇಷವಾಗಿ ಬೇರುಗಳ ಗಂಟುಗಳಲ್ಲಿ ಸಂಗ್ರಹವಾಗುವ ನೆಮಟೋಡ್ ಗಳನ್ನು ನಾಶ ಮಾಡುತ್ತದೆ. ಮಣ್ಣನ್ನು ರೋಗಕಾರಕ ಮುಕ್ತವಾಗಿಟ್ಟುಕೊಳ್ಳುವಲ್ಲಿ ನಮ್ಮ ದೇಸೀ ಸಾಸಿವೆ ತಳಿ ಅತ್ಯುತ್ತಮ ವಾಗಿದ್ದು, ಅದನ್ನು ಒಡನಾಡಿ ಬೆಳೆಯಾಗಿ, ಆವರ್ತನೀಯ ಬೆಳೆಯಾಗಿ ಪರಿಗಣಿಸಲಾಗಿದೆ. ಸಾಸಿವೆಯಿಂದ ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿ ಕೂಡ ಬಳಕೆಗೆ ಬರುತ್ತದೆ, ಏಕೆಂದರೆ ಅದರಲ್ಲಿ ಸೂಕ್ಷ್ಮ ಪೋಷಕತತ್ವಗಳು ಹೇರಳವಾಗಿರುತ್ತವೆ ಮತ್ತು ಕೀಟ ನಿಯಂತ್ರಣ ವ್ಯವಸ್ಥೆಯಲ್ಲಿ ಬಹುಮುಖ್ಯ ಕೆಲಸವನ್ನದು ಮಾಡುತ್ತದೆ.

ಜೇನುತುಪ್ಪದ ರಫ್ತು ವಿಚಾರಕ್ಕೆ ಬರುವುದಾದರೆ ಭಾರತ ವಿಶ್ವನಕಾಶೆಯಲ್ಲಿ ಐದನೇ ಸ್ಥಾನದಲ್ಲಿದೆ. ನಮ್ಮ ದೇಶದ ವಾರ್ಷಿಕ ಜೇನು ತುಪ್ಪದ ಉತ್ಪಾದನೆ ಸರಿಸುಮಾರು 38000 ಮೆರಿಕ್ ಟನ್ ಆಗಿದೆ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಉದ್ಯಮ ನಮ್ಮ ದೇಶದ ಐದುಲಕ್ಷ ಜೇನು ಸಂಗ್ರಹಣೆಕಾರರಿಗೆ ಮತ್ತು ಸರಿಸುಮಾರು ಹತ್ತು ಲಕ್ಷ ಮಂದಿ ಕೆಲಸಗಾರರಿಗೆ ಉದ್ಯೋಗಾವಕಾಶವನ್ನು ಒದಗಿಸಿಕೊಟ್ಟಿದೆ. ಜೇನು ಸಾಕಾಣಿಕೆ ಅಭಿವೃದ್ಧಿ ಸಮಿತಿ ಹೊರಡಿಸಿರುವ ಪ್ರಕಟಣೆಯ ಪುಟ-13 ರಲ್ಲಿರುವ ಮಾಹಿತಿಯ ಪ್ರಕಾರ ಪ್ರಸ್ತುತ ನಮ್ಮ ದೇಶದಲ್ಲಿ 34 ಲಕ್ಷ ಜೇನುಕುಟುಂಬಗಳಿದ್ದು, ಅವುಗಳನ್ನು 20 ಕೋಟಿಗೆ ಹೆಚ್ಚಿಸುವಷ್ಟು ಕ್ಷಮತೆ ಮತ್ತು ಸಾಮರ್ಥ್ಯ ನಮ್ಮಲ್ಲಿದೆ. ಈಗ ಇರುವ 34 ಲಕ್ಷ ಜೇನುಕುಟುಂಬಗಳ ಪೈಕಿ 27.2 ಲಕ್ಷ ಕುಟುಂಬಗಳು (80%) ನಿರ್ವಹಣೆಯಾಗುತ್ತಿರುವುದು ಸಾಸಿವೆ ಕೃಷಿಯ ಮೂಲದಿಂದ. ಒಂದುವೇಳೆ ಸಾಸಿವೆಯ ಕುಲಾಂತರಿ ತಳಿ ವ್ಯಾಪಕವಾಗಿ ಎಲ್ಲೆಡೆ ಹರಡಿಕೊಂಡರೆ ಜೇನುಸಾಕಾಣಿಕೆ ಸಂಪೂರ್ಣವಾಗಿ ಕುಸಿಯುವುದು ನಿಶ್ಚಿತ. ಇತಿಹಾಸದ ಪುಟಗಳಲ್ಲಿ ನಾವು ನೋಡುವ ಹಂಪಿ ದೇಗುಲದ ಭಗ್ನಾವಶೇಷಗಳ ಚರಿತ್ರೆಯಂತೆ, ಜೇನುಸಾಕಾಣಿಕೆಯ ಮಾಹಿತಿ ಕೇವಲ ಲಿಖಿತಪುಸ್ತಕಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಕಥೆಯಾಗಿ ಉಳಿಯಬಹುದಾದ ಅಪಾಯವಿದೆ.

ಸಾಸಿವೆ ಗಿಡ ಹೊರಸೂಸುವ ಅಲೆಲೋಪಥಿಕ್ ಅಂಶÀ ಹಲವು ಕಳೆಗಳನ್ನು ಸಹಜವಾಗಿ ನಿಯಂತ್ರಿಸುವ ಕ್ಷಮತೆಯನ್ನು ಹೊಂದಿದ್ದು, ವಿಶೇಷವಾಗಿ ಮಳೆಯಾಶ್ರಿತ ಕೃಷಿಭೂಮಿಯಲ್ಲಿ ಕಳೆನಿಯಂತ್ರಣ ಮಾಡುವ ವಿಚಾರದಲ್ಲಿ ಸಾಸಿವೆಯನ್ನು ವಿಶೇಷಬೆಳೆಯಾಗಿ ಪರಿಗಣಿಸಲಾಗುತ್ತದೆ.

ಅತಿವೃಷ್ಠಿ ಮತ್ತು ಅನಾವೃಷ್ಠಿ ಇದ್ದಾಗಲೂ ಸಾಸಿವೆ ಉತ್ತಮ ಇಳುವರಿ ಕೊಡುವಲ್ಲಿ ಸಶಕ್ತವಾಗಿದೆ. ಹಾಗಾಗಿ ಹವಾಮಾನ ವೈಪರೀತ್ಯ ಇದ್ದಾಗ್ಯೂ ಉತ್ತಮ ಇಳುವರಿಕೊಡುವಲ್ಲ ಸಾಸಿವೆ ಯಶಸ್ವಿಯಾಗುತ್ತದೆ ಎಂಬ ಅಂಶ ಗಮನಾರ್ಹವಾಗಿದ್ದು ಭಾರತದ ಸಣ್ಣ ಮತ್ತು ಮಧ್ಯಮಗಾತ್ರದ ಕೃಷಿಕರಿಗೆ ಇದು ವರದಾನವಾಗಿದೆ.

ಆದರೆ ದುರದೃಷ್ಟದ ಸಂಗತಿಯೆಂದರೆ ಭಾರತ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜೆನೆಟಿಕ್ ಇಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯಲ್ಲಿ 18-10-2022 ರಂದು ಕುಲಾಂತರಿ ಸಾಸಿವೆ ತಳಿಗೆ ಅಂಕಿತವನ್ನು ಕೊಟ್ಟಿದೆ. ಹೀಗೆ ಅಂಕಿತ ನೀಡುವ ಮುನ್ನ ಯಾವುದೇ ಶಾಸನಬದ್ಧ ಪ್ರಯೋಗಗಳನ್ನು ಮಾಡಲಾಗಿಲ್ಲ ಮತ್ತು ಇದು ಜೀವವೈವಿಧ್ಯತಾ ಕಾಯಿದೆಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಕುಲಾಂತರಿ ಸಾಸಿವೆಯಲ್ಲಿ ದೇಸೀ ತಂತ್ರಜ್ಞಾನವನ್ನು ಬಳಸಲಾಗಿದೆ ಎಂಬ ಅಸತ್ಯ ಸಂಗತಿಯನ್ನು ಹರಿಯಬಿಡಲಾಗಿದೆ. ಸಾರ್ವಜನಿಕರ ಗಮನಕ್ಕೆ ಈ ಮೂಲಕ ತರಬಯಸುವುದೇನೆಂದರೆ ಸದ್ರಿ ಉತ್ಪಾದನೆಯು ಬೇಯರ್ ಕಂಪನಿಯ ಪೇಟೆಂಟ್ ಅಡಿಯಲ್ಲಿದೆ. ಈ ಕುಲಾಂತರಿ ತಳಿಯಲ್ಲಿ ಬರ್ನೇಸ್ ಮತ್ತು ಬಸ್ತಾರ್ ಎಂಬ ಎರಡು ವಂಶವಾಹಿಗಳನ್ನು ಮಣ್ಣಿನಲ್ಲಿ ಅಡಕವಿರುವ ಬ್ಯಾಕ್ಟಿರಿಯಾ ಆದ ಬಾಸಿಲಸ್ ಅಮೈಲೋಲಿಕ್ವಿಫೇಸಿಯನ್ಸ್ ಎಂಬುದರಿಂದ ಪಡೆದುಕೊಳ್ಳಲಾಗಿದೆ.

ಇವೆರಡೂ ವಂಶವಾಹಿಗಳು ಬೇಯರ್ ಆಗ್ರೋ ಸೈನ್ಸ್ ನವರ ಪೇಟೆಂಟ್ ಆಗಿದ್ದು ಅವುಗಳನ್ನು ದೇಸೀ ತಂತ್ರಜ್ಞಾನ ಎಂಬ ಸುಳ್ಳು ಪ್ರಚಾರದೊಂದಿಗೆ ಮುನ್ನೆಲೆಗೆ ತರಲಾಗುತ್ತಿದೆ. ಈಗ ನಮ್ಮ ಮುಂದಿರುವ ಪ್ರಶ್ನೆಗಳೆಂದರೆ ಬೇಯರ್ ಕಂಪನಿ ಯಾರ ಮಾಲೀಕತ್ವದಲ್ಲಿದೆ? ಅದು ಯಾವ ಮೂಲತಃ ಯಾವ ದೇಶದ್ದು? ಅದರ ತಾಂತ್ರಿಕತೆಯಿಂದ ಯಾರಿಗೆ ಲಾಭವಾಗುತ್ತಿದೆ?

GM-Ht Mustard ಕುಲಾಂತರಿ ಸಾಸಿವೆ ತಳಿಯು ನಮ್ಮ ಆಯ್ದ ದೇಸೀ ತಳಿಗಳಿಗಿಂತ 23% ಹೆಚ್ಚಿನ ಇಳುವರಿ ಕೊಡುತ್ತವೆ ಎಂದು ಹೇಳಲಾಗುತ್ತಿದೆ. ಇದು ಕೂಡ ಅಸತ್ಯ ಮಾಹಿತಿ. ಅಂತಹ ಯಾವುದೇ ಸಂಗತಿಗಳು ನಮ್ಮ ಕೃಷಿಕರ ಮಟ್ಟದಲ್ಲಿ ಪ್ರಮಾಣೀಕೃತವಾಗಿಲ್ಲ ಮತ್ತು ಅದಕ್ಕೆ ಪೂರಕವಾದ ವೈಜ್ಞಾನಿಕ ದತ್ತಾಂಶಗಳೂ ಕೂಡ ಲಭ್ಯವಿಲ್ಲ. ಇದು ಕೇವಲ ಸಮರ್ಥನೆಗಾಗಿ ಮಾಡಿರುವ ಹುಸಿ ಹೇಳಿಕೆ.

GM-Ht ಎಂದರೇನು? ಅದರ ಪೂರ್ಣಪಾಠ “ಜೆನೆಟಿಕಲ್ಲಿ ಮಾಡಿಫೈಡ್ ಹರ್ಬಿಸೈಡ್ ಟಾಲರೆನ್ಸ್” ಎಂಬುದಾಗಿದೆ. ಅಂತರ್ಗತವಾಗಿ ಇದರ ಅರ್ಥವೇನೆಂದರೆ, ಈ ಕುಲಾಂತರಿ ಬೀಜಗಳು ಕಳೆನಾಶಕ-ಸಹಿಷ್ಣುವಾಗಿದ್ದು, ಮಳೆಯಾಶ್ರಿತ ಕೃಷಿಭೂಮಿಯಲ್ಲಿ ಕಳೆನಾಶಕದ ರೂಪದಲ್ಲಿ ಬಳಸಬಹುದಾಗಿದೆ.

ದುರಾದೃಷ್ಟವಶಾತ್ ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಿರುವ ಸಂಗತಿಯೆಂದರೆ ಈ ಕಳೆನಾಶಕಗಳು ಕ್ಯಾನ್ಸರ್ ಕಾರಕ ಅಂಶಗಳನ್ನು ಹೊಂದಿದ್ದು, ಮಾನವನ ಮತ್ತು ಪ್ರಾಣಿಗಳ ದೇಹದಲ್ಲಿರುವ ಕೋಶಕ್ಕೆ ಅಪಾಯಕಾರಿಯಾಗಿವೆ., ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಅದರ ಬಳಕೆಯನ್ನು ನಿಷೇಧಿಸಲಾಗಿದೆ.

ಯು.ಎಸ್.ಎ. ಸೇರಿದಂತೆ ಅನೇಕ ರಾಷ್ಟ್ರಗಳ ನ್ಯಾಯಾಂಗ ವ್ಯವಸ್ಥೆ ಈ ಬಗ್ಗೆ ಕೋಟ್ಯಂತರ ರೂಪಾಯಿಗಳ ಜುಲ್ಮಾನೆಯನ್ನು ಕೂಡ ವಿಧಿಸಿದೆ. ಆದರೆ ಇದೀಗ ಕಳೆನಾಶಕ-ಸಹಿಷ್ಣು ಬೆಳೆಗಳು ಎಂಬ ಸೂತ್ರದಡಿಯಲ್ಲಿ ಸದ್ರಿ ಕಳೆನಾಶಕಗಳು ಮತ್ತೆ ಭಾರತದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಜ್ಜಾಗಿ ಕುಳಿತಿವೆ.

ಈ ತಂತ್ರಜ್ಞಾನದಿಂದ ಮಾನವನ ಆರೋಗ್ಯಕ್ಕೆ ಮಾರಕವಾಗುವ ಎಲ್ಲ ಅಪಾಯಗಳಿರುವುದು ಮಾತ್ರವಲ್ಲ ಪರಿಸರ ಮತ್ತು ಒಟ್ಟಾರೆ ಜೈವಿಕ ವ್ಯವಸ್ಥೆಯ ಆರೋಗ್ಯಕ್ಕೂ ಇದು ಹಾನಿಕಾರಕವಾಗಿದೆ. ಒಮ್ಮೆ ಇಂತಹ ಕುಲಾಂತರಿ ತಳಿಗಳನ್ನು ಪರಿಸರಕ್ಕೆ ವ್ಯಾಪಿಸಿದರೆ ಅದರಿಂದಾಗುವ ಹಾನಿಯನ್ನು ಮತ್ತೆ ಸರಿಪಡಿಸಲಾಗದು, ಅವುಗಳನ್ನು ಹಿಂಪಡೆಯುವುದೂ ಅಸಾಧ್ಯ. ಇತರೆ ತಳಿಗಳಲ್ಲೂ ಇದರ ವಿಷಕಾರಿ ಅಂಶಗಳು ಸೇರ್ಪಡೆಯಾಗುತ್ತವೆ ಮತ್ತು ಅದರಿಂದಲೂ ಹಲವು ರೋಗಕಾರಕಗಳ ಬಿಡುಗಡೆಯಾಗಿ ಅವುಗಳ ಪ್ರಮಾಣವನ್ನು ಲೆಕ್ಕಹಾಕುವುದಾಗಲೀ, ಅಥವಾ ಸರಿಪಡಿಸುವುದಾಗಲೀ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಈ ವಿನಾಶಕಾರಿ ತಂತ್ರಜ್ಞಾನ ವಿಷಕಾರಿ ಕಳೆನಾಶಕವನ್ನು ಮುನ್ನೆಲೆಗೆ ತರುವ ಮೂಲಕ ದೇಶದಲ್ಲಿ ವಿಶೇಷ ತರಹೆಯ ಕಳೆಯನ್ನು ಸೃಷ್ಟಿಸುವ ಮತ್ತು ವಿಷಕಾರಿ ಶೇಷಾಂಶಗಳು ಮಣ್ಣು ಮತ್ತು ನೀರಿಗೆ ಸೇರ್ಪಡೆಯಾಗುವ ಮೂಲಕ ಕಾರ್ಮಿಕರ ಮತ್ತು ವಿಶೇಷತಃ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಮೇಲೆ ದುಷ್ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ. ಅಷ್ಟೇ ಅಲ್ಲ ಈ ವಿಷಕಾರಿ ಶೇಷಾಂಶ ನಾವು ಸೇವಿಸುವ ಆಹಾರವನ್ನು ಮತ್ತು ಒಟ್ಟಾರೆ ಪರಿಸರವನ್ನು ಆವರಿಸಿಕೊಳ್ಳುವ ಅಪಾಯವಿದೆ. ಇದರ ದೀರ್ಘಾವಧಿ ಪರಿಣಾಮವೆಂದರೆ, ನಮ್ಮ ಗ್ರಾಮೀಣ ಭಾಗದ ಕಾರ್ಮಿಕರು ಅನಾರೋಗ್ಯಗಳಿಗೆ ತುತ್ತಾಗಿ, ಹಳ್ಳಿಗಳಿಂದ ನಗರಗಳತ್ತ ವಲಸೆ ಹೋಗುವ ಸಾಧ್ಯತೆಗಳಿದ್ದು, ನಗರಕೇಂದ್ರಿತ ಕೊಳೆಗೇರಿಗಳ ನಿರ್ಮಾಣವಾಗಿ ಉಳ್ಳವರ ಮತ್ತು ಬಡವರ ನಡುವಿನ ಸಾಮಾಜಿಕ-ರಾಜಕೀಯ ಸಂಘರ್ಷಗಳಿಗೂ ಇದು ಕಾರಣವಾಗುವ ಎಲ್ಲ ಸಾಧ್ಯತೆಗಳಿವೆ.

ಈ ವಿನಾಶಕಾರಿ ವಿಜ್ಞಾನ ಪೇಟೆಂಟ್‍ಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕು ಕಾಯಿದೆಯ ಭಾಗವಾಗಿದ್ದು, ಬೇಯರ್ ನಂತಹ ಕಾರ್ಪೊರೇಟ್ ಕಂಪನಿಗಳು, ಈ ಭೂಮಿಯ ಮೇಲೆ ತಮ್ಮ ಪಾರಮ್ಯವನ್ನು ಸಾಧಿಸಲು, ಆಹಾರ ವ್ಯವಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಇಂತಹ ಕುಲಾಂತರಿ ತಳಿ ಬೀಜಗಳ ಮೂಲಕ ಕೃಷಿಕವಿರೋಧಿ ನಡವಳಿಕೆಗೆ ಮುಂದಾಗಿವೆ ಮತ್ತು ಇದು ಸಂವಿಧಾನ ವಿರೋಧಿ, ಸಮಾಜವಿರೋಧಿ, ಸಂಸ್ಕøತಿ ವಿರೋಧಿ ಮತ್ತು ಪರಿಸರ ವಿರೋಧಿ ಕೃತ್ಯವಾಗಿರುತ್ತದೆ. ಇದು ಜೈವಿಕ ವ್ಯವಸ್ಥೆಯ ಉಲ್ಲಂಘನೆ ಮಾತ್ರವಲ್ಲ ಇದರಿಂದ ಮಾನವ ಹಕ್ಕುಗಳ, ಪರಿಸರದ ಹಕ್ಕುಗಳ, ಪಂಚಾಯತ್ ಹಕ್ಕುಗಳ ಮತ್ತು ನಮ್ಮ ರೈತರ ಸಾರ್ವಭೌಮತ್ವದ ಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ. ಹಾಗಾಗಿ ಕುಲಾಂತರಿ ತಳಿಬೀಜಗಳು ಮತ್ತು ಆಹಾರೋತ್ಪಾದನೆಗಳ ಮೂಲಕ ನಮ್ಮ ದೇಶದಲ್ಲ್ಲಿ ವಸಾಹತು ಸ್ಥಾಪನೆ ಮಾಡಲು ಬೇಯರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಡುತ್ತಿರುವ ಭಾರತ ಸರಕಾರದ ನಿರ್ಧಾರವನ್ನು ರೈತವಿರೋಧಿಯಾಗಿದೆ.

andolanait

Recent Posts

ಮುಡಾ ಪ್ರಕರಣ: ಮುಡಾ ಕಚೇರಿಗಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕ ಫೈಲ್‌: ಶ್ರೀವತ್ಸ

ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಲ್‌ಗಳು ಮುಡಾ ಕಚೇರಿಯಲ್ಲಿರುವುದಕ್ಕಿಂತ ಸಚಿವ ಭೈರತಿ ಸುರೇಶ್‌ ಮನೆಯಲ್ಲೇ ಅಧಿಕವಾಗಿವೆ ಎಂದು ಶಾಸಕ ಟಿ.ಎಸ್‌.ಶ್ರೀವತ್ಸ…

1 hour ago

ಮುಡಾ ಕಚೇರಿ ಮೇಲೆ ಇಡಿ ದಾಳಿ: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಮಂಡ್ಯ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ಭೂಮಿಯನ್ನು ಲಪಾಟಾಯಿಸಿದ್ದಾರೆ, ಅದಕ್ಕೆ ಆ ನಿವೇಶನಗಳನ್ನು ವಾಪಾಸ್ಸು ಮಾಡಿದ್ದಾರೆ ಎಂದು ಕೇಂದ್ರ…

2 hours ago

ಮುಡಾ ಕಚೇರಿಯ ಮೇಲೆ ಇಡಿ ದಾಳಿ ದುರುದ್ದೇಶಪೂರ್ವಕ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಇಂದು (ಅಕ್ಟೋಬರ್‌.18) ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ದಾಳಿಯು ಸಂಪೂರ್ಣವಾಗಿ…

3 hours ago

ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ಮುಡಾ ಕೇಸ್‌ ಮುಚ್ಚಿ ಹಾಕುವಲ್ಲಿ ಸರ್ಕಾರಕ್ಕೆ ಲೋಕಾಯುಕ್ತ ಸಹಾಯ ಮಾಡುತ್ತದೆ ಎಂಬ ಶಂಕೆ ಇದೆ. ಹೀಗಾಗಿ ಮುಡಾ ಪ್ರಕರಣವನ್ನು…

3 hours ago

ಭವಾನಿ ರೇವಣ್ಣಗೆ ಬಿಗ್‌ ರಿಲೀಫ್:‌ ಹೈಕೋರ್ಟ್‌ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಹೊಸದಿಲ್ಲಿ: ಆತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ…

3 hours ago

ಮುಡಾ ಪ್ರಕರಣ: ಮುಡಾ ಕಚೇರಿಯ ಮೇಲೆ ಇ.ಡಿ ದಾಳಿ

ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್‌ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ…

4 hours ago