ಎಡಿಟೋರಿಯಲ್

ಕೋವಿಡ್: ಬೂಸ್ಟರ್ ಡೋಸ್ ಅಭಿಯಾನ ನಿರ್ಲಕ್ಷಿಸಬಾರದಿತ್ತು


ಮಂಜುಕೋಟೆ

ಕೊರೊನಾದಿಂದ ತತ್ತರಿಸಿದ್ದ ದೇಶಕ್ಕೆ ಇದೀಗ ಮತ್ತೆ ಕೊರೊನಾ ೪ನೇ ಅಲೆಯ ಆತಂಕ ಎದುರಾಗಿದ್ದು, ಸರ್ಕಾರ ತರಾತುರಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಹಾಗೂ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಆರಂಭಿಸಿದೆ. ಕೋವಿಡ್ ಸಾಂಕ್ರಾಮಿಕ ದೇಶಕ್ಕೆ ಕಾಲಿಟ್ಟ ವರ್ಷದ ಬಳಿಕ ದೇಶದಲ್ಲಿ ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳು ಆರಂಭಗೊಂಡವು ಬಳಿಕ ಹಂತ ಹಂತವಾಗಿ ಸಾಮಾನ್ಯ ಜನರವರೆಗೂ ಲಸಿಕೆ ಪೂರೈಕೆಯಾಗುವಂತೆ ಕ್ರಮವಹಿಸಲಾಯಿತು. ಈ ವೇಳೆ ಲಸಿಕೆ ತೆಗೆದುಕೊಂಡ ಕೆಲವರಲ್ಲಿಯೂ ಮತ್ತೆ ಸೋಂಕು ಪತ್ತೆಯಾದ್ದರಿಂದ ಕೇಂದ್ರ ಸರ್ಕಾರ ಕೋವಿಡ್ ವಿರುದ್ಧ ೨೦೨೨ರ ಏಪ್ರಿಲ್‌ನಲ್ಲಿ ಬೂಸ್ಟರ್ ಡೋಸ್ ವಿತರಣೆಗೆ ಮುಂದಾಯಿತು.

ಮುಖ್ಯವಾಹಿನಿಯಲ್ಲಿ ನಿಂತು ಶ್ರಮಿಸುವ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡಿ ಬಳಿಕ ಸಾರ್ವಜನಿಕರಿಗೂ ಬೂಸ್ಟರ್ ಡೋಸ್ ನೀಡುವ ಪ್ರಯತ್ನ ಮಾಡಿದ್ದರು. ಅದನ್ನು ಶೇ.೧೦೦ ಗುರಿ ಸಾಽಸುವವರೆಗೂ ಮುಂದುವರಿಸಬೇಕಿತ್ತು. ಅದರಿಂದ ಇಂದು ಕೋವಿಡ್ ೪ನೇ ಅಲೆ ಕುರಿತು ಇಷ್ಟೊಂದು ಆತಂಕಪಡಬೇಕಿರಲಿಲ್ಲ. ನಡುವೆ ತರಾತುರಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭ ಸರ್ಕಾರಕ್ಕೆ ಎದುರಾಗುತ್ತಿರಲಿಲ್ಲವೇನೋ.

ಈಗ ಪ್ರತಿ ತಾಲ್ಲೂಕು ಕೇಂದ್ರಗಳು, ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಬೂಸ್ಟರ್ ಡೋಸ್‌ನ್ನು ಕಡ್ಡಾಯವಾಗಿ ವಿತರಿಸಲು ಮುಂದಾಗಿ. ಅಭಿಯಾನ ಚುರುಕುಗೊಂಡಷ್ಟೇ ವೇಗವಾಗಿ ಇದರ ವಿತರಣೆ ಮತ್ತು ಪೂರೈಕೆ ಚುರುಕಾಗಬೇಕಿದೆ. ನಮ್ಮ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಭಾಗಗಳಲ್ಲಿಯೂ ಬೂಸ್ಟರ್ ಡೋಸ್ ಪಡೆದಿರುವವರ ಸಂಖ್ಯೆ ತೀರಾ ಕಡಿಮೆ. ಈ ಬಗ್ಗೆ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ಕೋವಿಡ್ ಲಸಿಕೆ ಪಡೆಯದ ಹಾಗೂ ಪಡೆದಿರುವವರ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ.

ಬೂಸ್ಟರ್ ಡೋಸ್ ಅಭಿಯಾನದಲ್ಲಿ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಯೂ ಶೇ.೫೦ರಷ್ಟು ಸಫಲತೆಯನ್ನೂ ಕೂಡ ಕಾಣಲೇ ಇಲ್ಲ. ಈಗಾಗಲೇ ತಯಾರಾಗಿರುವ ಲಸಿಕೆಗಳ ಬಳಕೆಯ ಅವಽ ಮುಗಿಯುವ ಹಂತಕ್ಕೆ ಬಂದು ವ್ಯರ್ಥವಾಗುವ ಸಾಧ್ಯತೆಗಳಿವೆ. ಇದರಿಂದ ದೇಶದ ಆರ್ಥಿಕತೆಗೂ ಕೂಡ ಹೊಡೆತ ಬೀಳುವ ಸಾಧ್ಯತೆಗಳಿವೆ. ಆದ್ದರಿಂದ ತಯಾರಾದ ಆರಂಭದಲ್ಲಿಯೇ ಸರ್ಕಾರ ಬೂಸ್ಟರ್ ಡೋಸ್ ಅನ್ನು ಕೂಡ ಶೇ.೧೦೦ ರಷ್ಟು ಪೂರ್ಣಗೊಳಿಸಿದ್ದರೆ. ಇಂದು ದೇಶ ಒತ್ತಡದಲ್ಲಿ ತೀರ್ಮಾನಗಳನ್ನು ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ.

ಸರ್ಕಾರ ಮಾಸ್ಕ್ ಕಡ್ಡಾಯದ ಜೊತೆಗೆ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಿದ್ದು, ಈ ನಡುವೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಇಂಟ್ರಾನೇಸಲ್ ಲಸಿಕೆಯ ವಿತರಣೆ ಬಗ್ಗೆ ಸರ್ಕಾರ ಅನುಮತಿ ನೀಡಿದ್ದು, ಆರೋಗ್ಯ ಇಲಾಖೆಯವರು ಈ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಬೇಕಾದ ಅಗತ್ಯವಿದೆ.

ಇದೊಂದು ಇಂಜೆಕ್ಷನ್ ಮಾದರಿಯಲ್ಲದೆ. ಮೂಗಿನ ಮೂಲಕ ನೀಡಬಹುದಾದ ಹೊಸ ಮಾದರಿಯ ಲಸಿಕೆಯಾಗಿದ್ದು, ಜನ ಸಾಮಾನ್ಯರಿಗೂ ಇದು ಹೊಸದಾಗಿದೆ. ಅದರಲ್ಲಿಯೂ ಗ್ರಾಮಾಂತರ ಭಾಗಗಳಲ್ಲಿ, ಕೃಷಿಕರಲ್ಲಿ ಹಾಗೂ ರೈತರಲ್ಲಿ ಈ ಲಸಿಕೆಯ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಆತಂಕ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಆದ್ದರಿಂದ ಬಳಕೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯ ಅಽಕಾರಿಗಳು, ಜಿಲ್ಲಾ ಆಡಳಿತ ಸೂಕ್ತ ಕ್ರಮವಹಿಸಿ ಈ ಲಸಿಕೆಯ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.

ಕೋವಿಡ್, ಓಮಿಕ್ರಾನ್‌ನ ಉಪತಳಿಯಾಗಿರುವ ಬಿಎಫ್.೭ ಎಂಬ ಹೊಸ ವೈರಸ್‌ಗೆ ನೇಸಲ್ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಹೇಳಲಾಗಿದ್ದು, ಇದರ ಬಗ್ಗೆ ಮೊದಲು ಜಾಗೃತಿಯ ಮೂಡಿಸುವ ಅವಶ್ಯಕತೆ ಇದೆ. ಸರ್ಕಾರ ಆ ಬಗ್ಗೆ ಗಮನ ನೀಡಿ ನಂತರ ಲಸಿಕೆ ವಿತರಣೆ ಮಾಡಬೇಕಿದೆ.

ಗ್ರಾಮೀಣ ಭಾಗದಲ್ಲಿ ಇನ್ನೂ ಮೊದಲ ಲಸಿಕೆಯನ್ನು ಸಹ ಪಡೆಯದವರಿದ್ದಾರೆ. ಅವರನ್ನೂ ಸಹ ಗುರುತಿಸಿ ೧೮ ವರ್ಷ ಮೇಲ್ಪಟ್ಟ ಯುವಕ ಯುವತಿಯರಿಗೆ ಲಸಿಕೆಗಳನ್ನು ಪೂರೈಕೆ ಮಾಡಬೇಕಿದೆ. ಮತ್ತೆ ದೇಶದಲ್ಲಿ ಸೋಂಕಿನ ಸಂಖ್ಯೆ ಹೆಚ್ಚಾಗದಂತೆ ಕೂಡಲೇ ಮುಂಜಾಗ್ರತಾಕ್ರಮ ಕೈಗೊಂಡು ಲಸಿಕೆಗಳ ವಿತರಣೆಯನ್ನು ತೀವ್ರ ಪ್ರಮಾಣದಲ್ಲಿ ಚುರುಕುಗೊಳಿಸಬೇಕಿದೆ.

andolanait

Share
Published by
andolanait

Recent Posts

ಗಣೇಶೋತ್ಸವದ ವೇಳೆ ಪ್ರಸಾದಕ್ಕೆ ಪರವಾನಗಿ ಕಡ್ಡಾಯ ಆದೇಶಕ್ಕೆ ಪ್ರಹ್ಲಾದ್‌ ಜೋಶಿ ಆಕ್ರೋಶ

ಹುಬ್ಬಳ್ಳಿ: ಗಣೇಶೋತ್ಸವ ಆಚರಣೆ ವೇಳೆ ಪೆಂಡಾಲ್‌ಗಳಲ್ಲಿ ಪ್ರಸಾದ ಸಿದ್ಧಪಡಿಸಲು ಆಹಾರ ಸುರಕ್ಷತಾ ಇಲಾಖೆ ಪರವಾನಗಿ ಪಡೆಯಬೇಕು ಎಂಬ ರಾಜ್ಯ ಸರ್ಕಾರದ…

6 mins ago

ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ ಸಾಂಸ್ಕೃತಿಕ ನಗರಿ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ದಸರಾ ಕೆಲಸಗಳು ಭರದಿಂದ ಸಾಗುತ್ತಿವೆ. ನಾಡಹಬ್ಬ…

21 mins ago

ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನಿಸುತ್ತಿದೆ: ಅಮಿತ್‌ ಶಾ ಗಂಭೀರ ಆರೋಪ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಸ್ಥಾಪಿಸಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌…

38 mins ago

ಏತ ನೀರಾವರಿ ಪುನಶ್ಚೇತನ ಕಾಮಗಾರಿಗೆ ಪರೀಕ್ಷಾರ್ಥ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್‌

ರಾಮನಗರ: ಕನಕಪುರ ತಾಲ್ಲೂಕಿನ ಮೂಲೆಗುಂದಿ ಗ್ರಾಮದಲ್ಲಿ ಅರ್ಕಾವತಿ ಬಲದಂಡೆಯ ಏತ ನೀರಾವರಿ ಯೋಜನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಪರೀಕ್ಷಾರ್ಥ ಚಾಲನೆ…

51 mins ago

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

9 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

9 hours ago