ಎಂ.ಆರ್.ಮಂಜುನಾಥ್
ಘಂಟೆ ಎಂದರೇನು? ಪ್ರಪಂಚದ ಪರಿವೇ ಇಲ್ಲದವರನ್ನು ಎಚ್ಚರಿಸುವ ಸಾಧನವೇ? ಯಾರೂ ಮುಟ್ಟದ ಹೊರತು ಶಬ್ದ ಮಾಡದ ಸೋಮಾರಿಯೇ? ಒಮ್ಮೆ ಕ್ರೈಸ್ತ ದೇವಾಲಯಗಳ ಘಂಟೆಯನ್ನು ನೋಡಿ. ಅದೆಷ್ಟು ಬಗೆ ಬಗೆಯ ಘಂಟೆಗಳು ಮೈಸೂರು ಮಹಾರಾಜರ ಕೊಡುಗೆಗಳಾಗಿವೆ.
ಶತ ಶತಮಾನಗಳಿಂದ ಸಂಕೇತವಾಗಿ ನಿಂತಿರುವ ಚರ್ಚ್‌ನ ಆ ಘಂಟೆಗಳು, ಕ್ರಿಸ್ತನೆಂಬ ಮಹಾತ್ಮ ಹುಟ್ಟಿದ ಗಳಿಗೆಯನ್ನು ಹೇಳುವ ಹೊತ್ತು ಬಂದಿದೆ, ಏಸು ಹುಟ್ಟಿದನೆಂದು ಸಂಭ್ರಮಿಸುವ ಕ್ರಿಸ್‌ಮಸ್ ಹಬ್ಬದ ಹಿಂದಿನ ದಿನ ನಡುರಾತ್ರಿ 12ಗಂಟೆಗೆ ಇದೇ ಕಾರಣಕ್ಕೆ ಘಂಟೆಯ ನಾದ ಮೊಳಗುತ್ತದೆ. ಈಗಿನ ಗಡಿಯಾರವೇ ೧೨ ಸಾರಿ ಬಾರಿಸುತ್ತದೆಯಲ್ಲಾ… ಎಂದು ನೀವು ಕೇಳಬಹುದು. ಹೌದು.. ಇದರ ಜೊತೆಗೆ ನಡುರಾತ್ರಿ ಚರ್ಚಿನ ಘಂಟೆಯೂ ಜೊತೆಯಾಗುತ್ತದೆ ಕ್ರಿಸ್ತ ಹುಟ್ಟಿದ ಸಂಭ್ರಮಕ್ಕೆ. ಚರ್ಚ್‌ನ ಘಂಟೆಗಳ ಬಗ್ಗೆ ರೋಚಕ ಮಾಹಿತಿ ಇದೆ. ಶತಮಾನಗಳನ್ನು ಕಂಡಿರುವ ಕ್ರೈಸ್ತ ದೇವಾಲಯದ ಘಂಟೆಗಳು ತಮ್ಮ ಆತ್ಮ ಕಥೆಯನ್ನು ತೆರೆದಿಡುತ್ತವೆ.
ಶ್ರೀರಂಗ ಪಟ್ಟಣದ ಅಬ್ಬೆದುಬ್ವಾರ್ ದೇವಾಲಯ
ಇದನ್ನು ಸುಮಾರು ಕ್ರಿ.ಶ.೧೮೦೦ರಲ್ಲಿ ನಿರ್ಮಿಸಲಾಯಿತು. ಅಬ್ಬೆದುಬ್ವಾರ್ ಎಂಬ ಫ್ರೆಂಚ್ ಧರ್ಮಪ್ರಚಾರಕ ಕಟ್ಟಿಸಿದ. ಮೈಸೂರಿನ ಸುತ್ತಮುತ್ತ ಆಗ ಚರ್ಚ್‌ಗಳು ಇರಲಿಲ್ಲ. ಈತ ಮೊದಲ ಬಾರಿಗೆ ಈ ದೇವಾಲಯವನ್ನು ಕಟ್ಟಿಸಿದ ಎಂದು ಹೇಳಲಾಗಿದೆ. ಈ ದೇವಾಲಯದ ಘಂಟೆಗೋಪುರದ ಬಳಿ ಕೆತ್ತಿರುವ ಇಸವಿ ಇದೆ. ಇಲ್ಲಿರುವ ಕಂಚಿನ ಘಂಟೆಗೆ ೨೧೮ ವರ್ಷಗಳು ತುಂಬಿವೆ. ಇದು ಫ್ರಾನ್ಸ್ ದೇಶದಲ್ಲಿ ತಯಾರಾಗಿದ್ದು, ಸುಮಾರು ೬ ಅಡಿ ಎತ್ತರವಿದ್ದು ೨೦೦ ಕೆ.ಜಿಗೂ ಹೆಚ್ಚು ತೂಕವಿದೆ.
ಮೈಸೂರಿನ ಸೇಂಟ್ ಬಾರ್ತೊಲೋಮಿಯೊ ದೇವಾಲಯ
17ನೇ ಶತಮಾನದಲ್ಲಿ ಫ್ರೆಂಚ್ ರಾಕ್ ಸೈನಿಕರಿಂದ ಪಾಂಡವಪುರದಲ್ಲಿ ಸ್ಥಾಪಿತವಾದ ಘಂಟೆ ಇದು. ಆಂಗ್ಲರ ಆಳ್ವ್ವಿಕೆಯಲ್ಲಿ 1799ರಲ್ಲಿ ಇರ್ವಿನ್ ನಾಲೆ(ಇಂದು ವಿಶ್ವೇಶ್ವರಯ್ಯ ನಾಲೆ) ನಿರ್ಮಿಸುವಾಗ ಅಲ್ಲಿದ್ದ ಘಂಟೆಯನ್ನು ಮೈಸೂರಿಗೆ ತಂದು ರೆವರೆಂಡ್ ಜಿ.ಎ. ರೈಟ್‌ರವರಿಗೆ ಹಸ್ತಾಂತರಿಸ ಲಾಯಿತು. ಮಹಾರಾಜ ಕೃಷ್ಣರಾಜ ಒಡೆಯರ್ ಚರ್ಚ್‌ನಿರ್ಮಿಸಲು ಮೈಸೂರು – ನಂಜನಗೂಡು ರಸ್ತೆಯಲ್ಲಿ ಜಾಗವನ್ನು ಬಳುವಳಿಯಾಗಿ ನೀಡಿದರು. ಸೇಂಟ್ ಬಾರ್ತೊಲೋಮಿಯೊ ಚರ್ಚ್ 1830ರಲ್ಲಿ ಸ್ಥಾಪನೆಗೊಂಡಿತು. 17ನೇ ಶತಮಾನದ ಘಂಟೆಯನ್ನು ಈ ಚರ್ಚ್‌ನಲ್ಲಿ ಸ್ಥಾಪಿಸಿದರು. ಇದು ಸುಮಾರು 1799ನೇ ಇಸವಿಯದು, ಸುಮಾರು 4 ಅಡಿ ಎತ್ತರವಿದ್ದು, 3ರಿಂದ 4ಟನ್ ಕಂಚಿನಿಂದ ತಯಾರಾಗಿದೆ. ಇದು ಫ್ರಾನ್ಸ್ ದೇಶದ್ದಾಗಿದೆ ಎಂದು ಪಾದ್ರಿ ರೆವೆಡೆಂಡ್ ಡ್ಯಾನಿಯಲ್ ಕೌಂಡಿನ್ಯ ತಿಳಿಯಪಡಿಸುತ್ತಾರೆ.
ಮೈಸೂರಿನ 2 ನೇ ಸಿ.ಎಸ್.ಐ. ವೆಸ್ಲಿ ಚರ್ಚ್
ಮೈಸೂರಿಗೆ ಹಳೆಯಾದ 2ನೇ ಸಿ.ಎಸ್.ಐ ವೆಸ್ಲಿ ಚರ್ಚ್‌ನ ಘಂಟೆಯು ೧೮೫೯ರಲ್ಲಿ ಸ್ಥಾಪನೆಗೊಂಡಿತು. ಈ ಸಣ್ಣ ದೇವಾಲಯವು ನಂತರ ೨-೧೨-೧೮೭೧ರಲ್ಲಿ ದೊಡ್ಡದಾಗಿ ಸ್ಥಾಪಿತಗೊಂಡು ಶತ ಶತಮಾನ ಕಳೆದಿರುವ ಘಂಟೆ ಇದು ಎಂದು ಪಾದ್ರಿ ರೆವರೆಂಡ್ ಗ್ರೇಟ್ ಫುಲ್ ಜಯಶೇಖರ್‌ತಿಳಿಸುತ್ತಾರೆ.
ಮೈಸೂರಿನ ಸೇಂಟ್ ಫಿಲೋಮಿನಾ ಚರ್ಚ್
ಸೇಂಟ್ ಫಿಲೋಮಿನಾ ಚರ್ಚ್ ಘಂಟೆಯ ವಿಶೇಷತೆ ಎಂದರೆ ಇದು ಮಹಾರಾಜ ಜಯಚಾಮರಾಜ ಒಡೆಯರ್‌ರವರ ಕೊಡುಗೆ. ೧೯೪೬ರಲ್ಲಿ ಚರ್ಚ್‌ಗೆ ಕಂಚಿನಿಂದ ತಯಾರಾದ ಸುಮಾರು ೫ ಅಡಿ ಎತ್ತರದ ಬೃಹತ್‌ಗಾತ್ರದ ಘಂಟೆಯನ್ನು ಕೊಡುಗೆಯಾಗಿ ನೀಡಿದ್ದಾರೆ ಇದರ ಸಾಕ್ಷಿಯಾಗಿ ಘಂಟೆಯ ಮೇಲೆ ಅವರ ಹೆಸರನ್ನು ಕೆತ್ತಲಾಗಿದೆ. ಜಾತಿ, ಮತ,ಭೇದವಿಲ್ಲದೆ ಎಲ್ಲರೂ ಸಮಾನರೆಂದು ಸಾರುವ ಸಂಕೇತವಾಗಿ ಉಳಿದಿದೆ ಈ ಚರ್ಚ್‌ನ ಘಂಟೆ.ಇದರ ಜೊತೆಗೆ ಇನ್ನೂ ೨ ಬೃಹತ್ ಗಂಟೆಗಳು ಇಲ್ಲಿವೆ.
ಹಳೆಯ ಸೇಂಟ್ ಫಿಲೋಮಿನ ಸಣ್ಣ ಚರ್ಚ್‌ನಲ್ಲಿ ೧೮೪೪ರಲ್ಲಿದ್ದ ಮೊದಲ ಘಂಟೆಯು ಆರ್.ಟಿ. ರೆವರೆಂಡ್ ಎಂ.ಎಸ್.ಎ.ಆರ್. ಇಟಿನ ಲೂಯಿಸ್ ಚಾರ್‌ಬೋನಕ್ಸ್‌ರಿಂದ ಸ್ಥಾಪನೆಯಾಯಿತು. ಈಗ ಈ ಘಂಟೆಯನ್ನು ಸೇಂಟ್‌ಫಿಲೋಮಿನಾ ಚರ್ಚ್‌ನಲ್ಲಿ ಕಾಣಬಹುದು. ಇದರ ಜೊತೆಗೆ ೧೯೪೬ರರಲ್ಲಿ ಮೋಸ್ಟ್ ರೆವರೆಂಡ್ ಡಾ. ರೆಂಜನ್ ಫೀಯುಗ್‌ರವರು ಬೃಹತ್ ಘಂಟೆಯನ್ನು ಸ್ಥಾಪಿಸಿದ್ದಾರೆ. ಈ ಎಲ್ಲ ಘಂಟೆಗಳು ಪಂಚ ಲೋಹದಿಂದ ತಯಾರಾಗಿವೆ. ಇದು ಸುಮಾರು ೬ ಅಡಿ ಎತ್ತರವಿದ್ದು, ೪ ಟನ್‌ತೂಕವಿದೆ. ಈ ಎಲ್ಲ ಘಂಟೆಗಳು ಫ್ರಾನ್ಸ್‌ನಲ್ಲಿ ತಯಾರಾದವು. ಇಂದು ಜಗತ್‌ಪ್ರಸಿದ್ಧಿ ಪಡೆದಿರುವ ಸೇಂಟ್ ಫಿಲೋಮಿನಾ ಚರ್ಚ್ ನಿರ್ಮಾಣಕ್ಕೆ ೧೮೪೩ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಭೂಮಿಪೂಜೆ ನೆರವೇರಿಸಿದರು.ಈ ಚರ್ಚ್‌ಗೆ ರಾಜ ಮಹಾರಾಜರ ಕೊಡುಗೆ ಅಪಾರ ಎಂದು ಪಾದ್ರಿ ಸ್ಟ್ಯಾನಿ ಅಲ್ಮೇಡ ರವರು ಹೇಳುತ್ತಾರೆ.
ಘಂಟೆಗಳ ನಾದದ ಹಿನ್ನೆಲೆ…..
ಕ್ರಿಸ್‌ಮಸ್ ಹಿಂದಿನ ದಿನ ಮಧ್ಯರಾತ್ರಿ ೧೨ಕ್ಕೆ ಘಂಟೆ ನಾದಕ್ಕೆ ಅದರದೇ ಹಿನ್ನೆಲೆ ಇದೆ. ಚರ್ಚ್‌ನ ಘಂಟೆಗಳು ನಿತ್ಯವೂ ೩ ಬಾರಿ ನಾದ ಮೊಳಗಿಸುತ್ತವೆ. ನಿತ್ಯ ದೇವರ ಸ್ತುತಿಗಾಗಿ ಚರ್ಚ್‌ಗಳ ಘಂಟೆಯು ಭಕ್ತರು ಇದ್ದ ಸ್ಥಳದಲ್ಲಿಯೇ ಪ್ರಾರ್ಥನೆ ಮಾಡಲೆಂದು ಮೊಳಗುತ್ತವೆ.
ಸೂರ್ಯಾಸ್ತದ ನಂತರ ಘಂಟೆ ಬಾರಿಸಿದರೆ ಅಪಾಯದ ಸಂಕೇತ ವೆಂದೇ ಅರ್ಥ, ಉದಾಹರಣೆಗೆ ಒಂದು-ಎರಡು-ಮೂರು, ಒಂದು- ಎರಡು-ಮೂರು, ಎಂದು ಬಾರಿಸಿದಾಗ ಒಂಬತ್ತು ನಾದಗಳು ಹೊರ ಹೊಮ್ಮಬೇಕು. ಆಗ ಯಾರೋ ವ್ಯಕ್ತಿ ಸತ್ತಿದ್ದಾನೆ ಎಂದು ಅರ್ಥ. ಸಂತೋಷದ ವಿಷಯವಾದರೆ ಘಂಟೆಯ ನಾದ ನಿರಂತರವಾಗಿರುತ್ತದೆ. ಪ್ರಾರ್ಥನೆ ಸಮಯದ ಘಂಟೆ ಒಂದು-ಎರಡು-ಮೂರು ಎಂದು ಬಾರಿಸಿ ಮಧ್ಯದಲ್ಲಿ ೧೦ ಸೆಕೆಂಡು ವಿರಮಿಸಿ, ಮತ್ತೆ ಒಂದು-ಎರಡು-ಮೂರು ಬಾರಿ ಬಾರಿಸುತ್ತದೆ. ಹೀಗೆ ೩ ಬಾರಿ ಮೊಳಗಿದರೆ ಅದು ಪ್ರಾರ್ಥನೆಯ ಘಂಟೆಯಾಗಿರುತ್ತದೆ ಎಂದು ಚರ್ಚ್ ಫಾದರ್ ಮಾಹಿತಿ ನೀಡಿದರು.
ಐತಿಹಾಸಿಕ ಘಂಟೆಗಳು ಪ್ರವಾಸಿಗರ ವೀಕ್ಷಣೆಗೆ ಲಭ್ಯವಿವೆ. ಶತ ಮಾನಗಳ ಇತಿಹಾಸ ಹುದುಗಿಸಿಕೊಂಡಿರುವ ಚರ್ಚ್‌ಗಳ ಘಂಟೆಗಳು ಸೌಹಾರ್ದದ ಸಂಕೇತವೂ ಆಗಿವೆ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…