ಚಿರಂಜೀವಿ ಸಿ.ಹುಲ್ಲಹಳ್ಳಿ
ಕುವೆಂಪು ಕರ್ನಾಟಕದಲ್ಲಿ ವೈಚಾರಿಕ ಅರಿವು ಮೂಡಿಸಿದವರು. ವಿದ್ವತ್ ವಲಯದ ಮೇಲೆ ಕುವೆಂಪು ಅವರ ಬರಹಗಳು, ಚಿಂತನೆಗಳು, ವಿಮರ್ಶೆಯ ನೋಟಗಳು ಬೀರಿರುವ ಪ್ರಭಾವವೂ ದೊಡ್ಡದೇ. ಕರ್ನಾಟಕ ಕಂಡ ಅದ್ಭುತ ಮತ್ತು ಚಿರಸ್ಮರಣೀಯ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಇಂದು ಎನ್ನುವಾಗಲೇ ಸಿಕ್ಕಿದ್ದು ‘ಕ್ಯಾಮರಾ q/o ಕುವೆಂಪು’ ಚಿತ್ರಪಟ ಸಂಪುಟ.
ಇಲ್ಲಿ ಮಹಾಕವಿ ಕುವೆಂಪು ಅವರ ವ್ಯಕ್ತಿತ್ವವನ್ನು ದೃಶ್ಯಭಾಷೆಯಲ್ಲಿ ಅನಾವರಣ ಗೊಳಿಸಲಾಗಿದೆ. ಇಲ್ಲಿ ಉದಯರವಿಯ ಕವಿ ಕುವೆಂಪು ನೆರಳಿನಂತೆ, ಬೆಳಕಿನಕೋಲಿನಂತೆ ಓಡಾಡುವ, ಕುಳಿತುಕೊಳ್ಳುತ್ತಿರುವ, ಓದುವ ಭಂಗಿಗಳ ಸೌಮ್ಯ ಭಾವನೆಗಳು, ಅವರೆಡೆಗೆ ಪ್ರಾಂಜಲ ಗೌರವವನ್ನು ಮೂಡಿಸುತ್ತವೆ. ಅಷ್ಟೇ ಅಲ್ಲದೇ, ಬುಟ್ಟಿಯಲ್ಲಿ ಹಣ್ಣು ತರುವ ಹಣ್ಣಮ್ಮ, ಹೇರ್ ಕಟಿಂಗ್ ಕಲಾವಿದ ಅಶ್ವಥ್ ಇಲ್ಲಿzರೆ. ಕುವೆಂಪು ಪ್ರಕೃತಿಯ ಚಲನೆ-ನಿಶ್ಚಲದಂತೆ ಕಾಣಿಸುತ್ತಾರೆ. ಅವರ ಕುರ್ಚಿ, ಊರುಗೋಲು, ಗಡಿಯಾರ, ಬೂದುಕಗನ್ನಡಿ, ಕಿಟಕಿಗಳು, ಬಾಗಿಲು, ಪತ್ರಿಕೆಗಳಿಗೂ ಇಲ್ಲಿ ಜೀವವಿದೆ. ಮೇಜಿನ ಹಿಂದೆ ಇಣುಕುವ ಪಿಳಿಪಿಳಿ ಕಣ್ಣುಗಳ ಕವಿ, ಕ್ಷೌರಕ್ಕೆ ಒಪ್ಪಿಸಿಕೊಂಡ ಕವಿ. ಉದಯ ರವಿಯ ಅಂಗಳದ ಮರಗಳು ಸಂಪುಟದ ಓದುಗರೊಂದಿಗೆ ಪಿಸುಮಾತಾಡಲು ಆರಂಭಿಸುತ್ತವೆ.
ಇಂತಹದೊಂದು ವಿಶಿಷ್ಟ ಚಿತ್ರಪಟ ಸಂಪುಟವನ್ನು ರೂಪಿಸಿದ ರೂವಾರಿಗಳೆಂದರೆ ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ. ೧೯೮೯ರಲ್ಲಿ ನಡೆದ ನೆರಳುಬೆಳಕಿನ ಅನುಸಂಧಾನ, ಮೂರು ದಶಕಗಳ ನಂತರ ಕೃತಿರೂಪದಲ್ಲಿ ಬೆಳಕು ಕಂಡಿದೆ. ಆಧುನಿಕ ಕರ್ನಾಟಕದ ಮಹಾಕಾವ್ಯ ಪ್ರತಿಭೆಯ ದೈನಿಕ ಚಿತ್ರಗಳನ್ನು ದಾಖಲಿಸುವ ಶುದ್ಧ ಪ್ರಯತ್ನವೇ ‘ಕ್ಯಾಮರಾ q/o ಕುವೆಂಪು’ ಚಿತ್ರಪಟ ಸಂಪುಟ.
ಇನ್ನು ಈ ಚಿತ್ರಪಟ ಸಂಪುಟದ ಕರ್ತೃಗಳಲ್ಲಿ ಒಬ್ಬರಾದ ಕೃಪಾಕರ್ ಅವರು ಹೇಳುವಂತೆ ‘ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಸಿನಿಮಾ ಮಾಡಬೇಕೆನ್ನುವುದು ನಮ್ಮ ಮೊದಲ ಉದ್ದೇಶವಾಗಿತ್ತು. ಹಾಗಾಗಿ, ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ತೆಗೆದುಕೊಂಡು ಸಂಗ್ರಹಿಸಿದ್ದೆವು. ಆದರೆ, ಕೆಲವು ಕಾರಣಗಳಿಂದ ಸಿನಿಮಾ ಸಾಧ್ಯವಾಗಲಿಲ್ಲ. ಹಾಗಾಗಿ, ಒಂದು ವಿಶಿಷ್ಟ ಮತ್ತು ಸೊಗಸಾದ ಪುಸ್ತಕ ತರುವ ಆಲೋಚನೆಗೆ ಬಂದೆವು. ಕಳೆದ ಐದಾರು ತಿಂಗಳುಗಳಲ್ಲಿ ವಿಶಿಷ್ಟ ಬಗೆಯ ಪುಸ್ತಕ ತರಲು ನಿರ್ಧರಿಸಿದೆವು. ಈ ತೀರ್ಮಾನದ -ಲವೇ ‘ಕ್ಯಾಮರಾ q/o ಕುವೆಂಪು’ ಚಿತ್ರಪಟ ಸಂಪುಟ. ಇದು ಸಾಮಾನ್ಯ ಆಲ್ಬಂ ಅಲ್ಲ. ಪ್ರೈಜರ್ ಮತ್ತು ಉನ್ನತ ಗುಣಮಟ್ಟದ ಸಂಪುಟವಾಗಿದೆ ಎನ್ನಬಹುದು. ಕುವೆಂಪು ಅವರೊಂದಿಗೆ ನಾನು ಮತ್ತು ಸೇನಾನಿ ಹೊಂದಿದ್ದ ಒಂದು ವರ್ಷದ ಒಡನಾಟದಲ್ಲಿ ಇಲ್ಲಿನ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ’
‘ಚಿತ್ರಸಂಪುಟದಲ್ಲಿರುವ ಒಂದೇ ಒಂದು -ಟೋ ಅನ್ನು ಸುಖಾಸುಮ್ಮನೆ ಹಾಕಿಲ್ಲ. ಪ್ರತಿಯೊಂದು ಚಿತ್ರಕ್ಕೂ ಬಹಳಷ್ಟು ಅರ್ಥವಿದೆ. ಕುವೆಂಪು ಅವರ ಖಾಸಗಿ ಬದುಕಿನ ಚಿತ್ರಗಳು ಮತ್ತು ಪೂರಕವಾಗಿ ಬರಹವನ್ನು ದಾಖಲಿಸುವ ಕೆಲಸ ಇಲ್ಲಿ ಅಗಿದೆ. ಇದರಲ್ಲಿ ವಾಣಿಜ್ಯ ಉದ್ದೇಶವಿಲ್ಲ. ಬದಲಾಗಿ, ಕುವೆಂಪು ಅವರನ್ನು ಈ ಮೂಲಕ ಎಲ್ಲ ಸಾಹಿತ್ಯಾಸಕ್ತರಿಗೂ ಹತ್ತಿರವಾಗಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ’
‘ಸತತ ೩೦ ವರ್ಷಗಳ ಪ್ರಯತ್ನದ -ಲವಾಗಿ ಈ ಚಿತ್ರಸಂಪುಟ ಹೊರ ಬಂದಿದೆ. ವಿಶ್ವದಲ್ಲಿಯೇ ಒಬ್ಬರು ಸಾಹಿತಿಯ ಕುರಿತು ಎಲ್ಲೂ ಕೂಡ ಈ ರೀತಿಯ ಚಿತ್ರಪಟ ಸಂಪುಟ ಹೊರ ತಂದಿಲ್ಲ. ವಿಶಿಷ್ಟ ಬಗೆಯ ಹೊಸ ಪ್ರಯೋಗದ ಕೃತಿ ಇದಾಗಿದ್ದು, ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಹಾಗಾಗಿ, ನಮಗೆ ಹೆಮ್ಮೆ ಎನ್ನಿಸಿದೆ. ಸಾಹಿತ್ಯ ಪ್ರೇಮಿಗಳು, ಓದುಗರ ಈ ಸಂಪುಟವನ್ನು ಕಂಡು ಅಚ್ಚರಿಯಾಗಿದ್ದಾರೆ’ ಎನ್ನುತ್ತಾರೆ.
ಪುಸ್ತಕದಲ್ಲಿ ದಾಖಲಾಗಿರುವ ಒಂದು ಬರಹ
ಮಂಗಳವಾರ…ಅದು ಮಂಗಳಕರ ದಿನವಲ್ಲ. ಆ ದಿನ ಏನೆಲ್ಲಾ ಮಾಡಬಾರದೆಂಬುದನ್ನು ತಿಳಿದುಕೊಳ್ಳುವ ವೇಳೆಗೆ ಬುಧವಾರ ಆಗಮಿಸಿರುತ್ತದೆ.
ಕುವೆಂಪು ಅವರ ಹೇರ್ ಕಟಿಂಗ್, ಶೇವಿಂಗ್ ಕಾರ್ಯಕ್ರಮಗಳು ಜರುಗುತ್ತಿದ್ದುದೇ ಮಂಗಳವಾರಗಳಂದು. ಆದರೆ ಅದು ಮೂಢನಂಬಿಕೆಗಳನ್ನು ಽಕ್ಕರಿಸಿ ಪ್ರಗತಿಪರ ಧೋರಣೆಯನ್ನು ಅನುಸರಿಸಲೇಬೇಕೆಂಬ ಉದ್ದೇಶದಿಂದೇನಲ್ಲ. ‘ಮಂಗಳವಾರ’ದ ಇಕ್ಕಟ್ಟಿನಿಂದಾಗಿ, ವ್ಯಾಪಾರವಿಲ್ಲದೆ ಅನಿವಾರ್ಯವಾಗಿ ಅಂಗಡಿ ಮುಚ್ಚಲೇಬೇಕಿದ್ದ ಅಶ್ವಥ್‌ಗೂ ಸಹ ಬಿಡುವಿರುತ್ತದೆ ಎಂಬ ಕಾರಣದಿಂದಷ್ಟೆ.
ಅಶ್ವಥ್ ಸೌಮ್ಯ ಸ್ವಭಾವದ ವ್ಯಕ್ತಿ. ೮೦ರ ದಶಕದಲ್ಲಿ ಮೈಸೂರಿನ ಒಂಟಿ ಕೊಪ್ಪಲಿನಲ್ಲಿ ‘ಎಲಿಟ್ ಹೇರ್ ಡ್ರೆಸರ್ಸ್’ ಎಂಬ ಸುಸಜ್ಜಿತ ಅಂಗಡಿ ಹೊಂದಿದ್ದ ಆತ ಮೈಸೂರಿನಲ್ಲಿ ಎಲ್ಲರಿಗೂ ಚಿರಪರಿಚಿತ. ರಾಜೇಶ್ ಖನ್ನಾ, ಅಮಿತಾಭ್‌ಬಚ್ಚನ್‌ರನ್ನು ಯಥಾವತ್ತಾಗಿ ಅನುಕರಿಸಿ ಅಶ್ವಥ್ ಕೇಶವಿನ್ಯಾಸ ಮಾಡಬಲ್ಲವರಾಗಿದ್ದರಿಂದ ಯುವಕರ ದಂಡು ಅವರ ಅಂಗಡಿಯಲ್ಲಿ ಗಂಟೆಗಟ್ಟಲೇ ಕಾದು ಕುಳಿತು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಜೊತೆಗೆ ಮೈಸೂರಿನ ಎಷ್ಟೋ ಶ್ರೀಮಂತರಿಗೆ ಅಶ್ವಥ್ ಬಳಿ ಹೋಗುತ್ತೇವೆ ಎನ್ನುವುದೇ ಪ್ರತಿಷ್ಠೆಯ ವಿಷಯವಾಗಿತ್ತು.
ಆದರೆ ಇಷ್ಟು ಬೇಡಿಕೆಯಲ್ಲಿದ್ದ ಅಶ್ವಥ್, ಕುವೆಂಪು ಮನೆಗೆ ಬಂದು ಕಾದು ಕುಳಿತು ಹೇರ್ ಕಟಿಂಗ್ ಮಾಡಲು ಇದ್ದಿರಬಹುದಾದ ಅಭಿಮಾನಕ್ಕೆ ಕಾರಣವೇನೆಂಬುದು ನಮಗೆ ತಿಳಿದಿರಲಿಲ್ಲ. ಮಂಗಳವಾರ ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಉದಯರವಿಯಲ್ಲಿ ಅಶ್ವಥ್ ಹಾಜರಿರುತ್ತಿದ್ದರು. ಶಸ ಚಿಕಿತ್ಸೆ ಮಾಡುವ ವೈದ್ಯರಂತೆ, ಬಿಳಿಬಟ್ಟೆ ಧರಿಸಿ, ಮೂಗುಬಾಯಿಯನ್ನು ಬಿಳಿಯ ಶುಭ್ರ ವಸದಿಂದ ಬಿಗಿಯಾಗಿ ಕಟ್ಟಿಕೊಂಡು ಹೇರ್ ಕಟಿಂಗ್ ಆರಂಭಿಸುತ್ತಿದ್ದರು. ಕುವೆಂಪು ಸಹ ತಮ್ಮ ಎಂದಿನ ಬಿಳಿ ಸಮವಸದ ಮೇಲೊಂದು ಬಿಳಿಯ ಹೊದಿಕೆಯನ್ನು ಹೊದ್ದು ಕುಳಿತಿರುತ್ತಿದ್ದರು.
ಅಂದು ಕುವೆಂಪು ಅವರ ಹೇರ್ ಕಟಿಂಗ್ ಕಾರ್ಯಕ್ರಮವನ್ನು ನಾವು -ಟೋ ತೆಗೆಯುತ್ತಿದ್ದುದು ಅಶ್ವಥ್‌ಗೆ ಬಹಳ ಖುಷಿಯಾದಂತೆ ಕಂಡಿತು. ತನ್ನನ್ನು, ತನ್ನ ಕೌಶಲವನ್ನು ತನ್ನ ವೃತ್ತಿ ಪ್ರಾಮುಖ್ಯತೆಯನ್ನು ಗುರುತಿಸಿ ಗೌರವಿಸುತ್ತಿರುವರೆಂಬ ತೃಪ್ತಿಯ ಮಂದಹಾಸ ಅವರ ಮೊಗದಲ್ಲಿತ್ತು.
ಒಂದು ದಿನ ಕೆಲಸ ಮುಗಿಸಿ ಹೊರ ನಡೆದಿದ್ದ ಅಶ್ವಥ್‌ರೊಂದಿಗೆ ಮಾತನಾಡಲು ಆರಂಭಿಸಿದ್ದೆವು. ಪ್ರಾರಂಭದಲ್ಲಿ ‘ಕುವೆಂಪು ಜೊತೆಗೆ ಒಂದು ಒಳ್ಳೆ -ಟೋ ತೆಗೆದುಕೊಡಬೇಕು’ ಎಂದು ಅಶ್ವಥ್ ವಿನಂತಿಸಿದರು. ಅದಕ್ಕೇನಂತೆ ಪುಸ್ತಕ ಮಾಡುತ್ತಿದ್ದೇವೆ. ಅದರ ಪ್ರತಿಯನ್ನೇ ನೀಡುವುದಾಗಿ ಹೇಳಿದಾಗ ಅವರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಒಮ್ಮೆಲೆ ಏನನ್ನೋ ನೆನಪಿಸಿಕೊಂಡಂತೆ ‘ಅಯ್ಯೋ ನೀವು -ಟೋ ತೆಗೆಯುವಾಗ ಬಾಯಿಗೆ ಕಟ್ಟಿದ ವಸವನ್ನು ತೆಗೆಯಬೇಕೆಂದಿದ್ದೆ. ಅದ್ಯಾಕೋ ಧೈರ್ಯ ಬರಲಿಲ್ಲ’ ಎಂದರು. ‘ಹೌದಲ್ಲ… ಬಾಯಿಗೆ ಏಕೆ ಬಟ್ಟೆ ಕಟ್ಟುವುದು? ಎಂದರೆ, ‘ಕುವೆಂಪು ಅವರಿಗೆ ಬೀಡಿ ವಾಸನೆ ಗೊತ್ತಾಗಿ ಬಿಡುತ್ತದಲ್ಲಾ’ ಎಂಬ ಉತ್ತರ ಬಂತು. ನಂತರ ಮುಂದಿನ ಬಾರಿ -ಟೋ ಸೆಷನ್‌ಗಾಗಿ ಆ ಶಿಷ್ಟಾಚಾರಕ್ಕೆ ಬಿಡುವು ಕೊಡುವುದೆಂದು ಇತ್ಯರ್ಥವಾಯಿತು.
ನಾವು -ಟೋ ಕೊಡುವುದನ್ನು, ಪುಸ್ತಕ ಮಾಡುವುದನ್ನು ಮರೆತೇ ಬಿಟ್ಟಿದ್ದೆವು. ಈಗ ಪುಸ್ತಕ ಸಿದ್ಧವಾಗಿದೆ. ಆದರೆ ಅಶ್ವಥ್ ಇಲ್ಲ. ಪುಸ್ತಕದಲ್ಲಿ ಮಾತ್ರ ಇದ್ದಾರೆ. (ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಇಂದು (ಡಿ.೨೯), ತನ್ನಿಮಿತ್ತ ಈ ಲೇಖನ)
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…