ಎಡಿಟೋರಿಯಲ್

ಕ್ಯಾಮರಾ ‘ದೃಷ್ಟಿಕೋನ’ದಲ್ಲಿ ಯುಗ ಪ್ರವರ್ತಕ ಕುವೆಂಪು

ಆ ದಿನ, ಯಾವುದೋ ಒಳ ಸಂಚಿನಂತೆ ಇಡೀ ಸನ್ನಿವೇಶ ನಮ್ಮ ಪರವಾಗಿ ನಿರ್ಮಾಣ ಗೊಂಡಿತ್ತು. ಬೆಳಕು ಬೇಗನೆ ಮಾಯವಾಗ ಬಹುದೆಂಬ ಆತಂಕದಿಂದ, ಇಬ್ಬರೂ ಸ್ವಲ್ಪ ಚುರುಕಾಗಿ ವಿಭಿನ್ನ ಕೋನಗಳಿಂದ ಫೋಟೋ ತೆಗೆಯಲು ಆರಂಭಿಸಿ ದೆವು. ಎಲ್ಲವನ್ನೂ ಗಮನಿಸುತ್ತಿದ್ದ ಕುವೆಂಪು ‘ಅಣ್ಣಾ …ಇವತ್ತು ನಿಮ್ಮ ಫಿಲ್ಮ್ ಮುಗಿಯುತ್ತೋ, ಇಲ್ಲ ನನ್ನ ತಾಳ್ಮೆ ಮುಗಿಯುತ್ತೋ’ ಎಂದು ಕುಳಿತಿದ್ದ ಭಂಗಿಯನ್ನು ಕ್ಯಾಮರಾಗೆ ಪೋಸ್ ಕೊಡುವಂತೆ ಸರಿಪಡಿಸಿಕೊಂಡು, ‘ನೋಡೇ ಬಿಡೋಣ’ ಎಂದು ಮತ್ತೆ ಕುರ್ಚಿಗೆ ಒರಗಿದರು.

ಬ್ಯಾಗಿನಲ್ಲಿ ಇನ್ನೂ ನಾಲ್ಕುನೂರು ಫೋಟೋಗಳನ್ನು ತೆಗೆಯುವಷ್ಟು ಫಿಲ್ಮ್ ಇದೆ. ಇದರಿಂದ ಈ ಬಾರಿ ಗೆಲುವು ನಮ್ಮದೇ ಎಂಬ ಆತ್ಮವಿಶ್ವಾಸ ನಮ್ಮದಾಗಿತ್ತು. ಹೇಗಿದ್ದರೂ ಪಂಥಕ್ಕೆ ಆಹ್ವಾನಿಸಿದ್ದ ಕುವೆಂಪು ಅವರು ಬಹಳ ಹೊತ್ತು ಕುಳಿತುಕೊಳ್ಳಲೇ ಬೇಕೆಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಹಾಗಾಗಿ ನಮ್ಮ ಕೆಲಸವನ್ನು ಸಾವಧಾನದಿಂದ ಮುಂದು ವರಿಸಿದೆವು. ಸ್ವಲ್ಪ ಸಮಯದ ನಂತರ ಕುವೆಂಪು ಕುಳಿತಲ್ಲೇ ಧ್ಯಾನಕ್ಕೋ, ನಿದ್ರೆಗೋ ಜಾರಿಕೊಂಡರು. ಕುವೆಂಪು ಎಚ್ಚರ ಗೊಳ್ಳಲಿ ಎಂದು ನಾವು ಕುಳಿತೆವು….ಕಾಯುತ್ತಲೇ ಇದ್ದೆವು.

ಅಷ್ಟರಲ್ಲಿ ಅಲ್ಲಿಗೆ ಬಂದ ತಾರಿಣಿ ‘ಊಟಕ್ಕೆ ಸಮಯ ವಾಯಿತು’ ಎಂದು ಕುವೆಂಪು ಅವರನ್ನು ಕರೆದೊಯ್ದರು. ಬ್ಯಾಗಿನಲ್ಲಿದ್ದ ಫಿಲ್ಮ್ ಸ್ಟಾಕ್ ಹಾಗೆಯೇ ಇತ್ತು. ನಾವು ಸೋಲಲಿಲ್ಲವೆಂಬುದು ನಮ್ಮ ತೀರ್ಮಾನವಾಗಿತ್ತು. ಕುವೆಂಪು ತಾಳ್ಮೆ ಮುಗಿದಿತ್ತೋ ಇಲ್ಲವೋ ನಮಗೆ ಕಡೆಗೂ ತಿಳಿಯಲಿಲ್ಲ. ಪಂದ್ಯ ಡ್ರಾ ಆಗಿರಬಹುದೆಂದು ನಮಗೆ ನಾವೇ ತೀರ್ಮಾನಿಸಿದೆವು….

ಸಂವೇದನಾ ಶೀಲ ವನ್ಯಜೀವಿ ಛಾಯಾಗ್ರಾಹಕರು, ಲೇಖಕರಾದ ಕೃಪಾಕರ – ಸೇನಾನಿ ಅವರು ಇಂಥ ಹತ್ತು ಹಲವು ಚಿತ್ರ- ಕಥನಗಳನ್ನು ತಮ್ಮ ’ಕ್ಯಾಮರಾ v/s ಕುವೆಂಪು’ ಚಿತ್ರ ಸಂಪುಟದಲ್ಲಿ ದಾಖಲಿಸಿದ್ದಾರೆ. 1989ರಲ್ಲಿ ಕುವೆಂಪು ಕುರಿತು ಸಾಕ್ಷ್ಯಚಿತ್ರ ಮಾಡಬೇಕೆಂಬ ಅದಮ್ಯ ಬಯಕೆ ಹೊಂದಿದ್ದ ಈ ಜೋಡಿ, ತಮ್ಮ ವಯಸ್ಸು, ತಿಳಿವಳಿಕೆ, ಅರಿವಿನ ಸಾಮರ್ಥ್ಯಕ್ಕೆ ಕುವೆಂಪು ಅವರ ಬೌದ್ಧಿಕ ಆಲೋಚನೆಗಳನ್ನಾಗಲಿ, ಚಿಂತನೆಗಳ ಒಳನೋಟಗಳನ್ನಾಗಲಿ ಗ್ರಹಿಸುವ ಪ್ರೌಢಿಮೆ ಇಲ್ಲ ಎನ್ನುವ ಕಾರಣಕ್ಕೆ ಚಿತ್ರ ಸಂಪುಟ ಮಾಡಬಹುದೆಂದು ಯೋಚಿಸಿದರಂತೆ. ಅದಕ್ಕೆ ಕುವೆಂಪು ಅವರ ಅನುಮತಿ ಸುಲಭದಲ್ಲಿ ದೊರಕಿದೆ.

ಬಳಿಕ ಕಾರ್ಯಪ್ರವೃತ್ತರಾದ ಅವರಿಗೆ ಹಲವು ಸವಾಲುಗಳು ಎದುರಾದವು. ‘ಯಾವುದಕ್ಕೂ ಧೃತಿಗೆಡದೆ ಕೆಲಸದಲ್ಲಿ ಮಗ್ನರಾದೆವು. ದಿನಗಳು ಕಳೆದಂತೆ ಎಲ್ಲವೂ ತಿಳಿಯಾಗತೊಡಗಿತು. ಮೆದುವಾಗಿ,ಮೆಲುವಾಗಿ ಕಾಡು ಹಕ್ಕಿಯೊಂದನ್ನು ಸಮೀಪಿಸಿದಂತೆ ನಮ್ಮ ಪ್ರಯತ್ನ ಸಾಗಿತ್ತು…ಕ್ರಮೇಣ , ಆ ಮೇರು ವ್ಯಕ್ತಿತ್ವದ ಕಡೆ ದಿನಗಳ ಸೂಕ್ಷ್ಮತೆಗಳು ಕಂಡೂ ಕಾಣದಂತೆ ಚಿತ್ರಗಳಲ್ಲಿ ಮೂಡಲಾರಂಭಿಸಿದವು. ಅಂತಿಮವಾಗಿ, ವಿರಾಟ ಮನಸ್ಸೊಂದನ್ನು ಚಿತ್ರದಲ್ಲಿ ಹಿಡಿದಿಡುವ ಪ್ರಯತ್ನದಲ್ಲಿದ್ದ ತಮಗೆ, ಆ ಚಿತ್ರಗಳಲ್ಲಿ ತಮ್ಮ ಗ್ರಹಿಕೆಯ ಪ್ರತಿಬಿಂಬವನ್ನಷ್ಟೆ ಹಿಡಿದಿಡಲು ಸಾಧ್ಯವಾಯಿತು,’ ಎನ್ನುತ್ತಾರೆ.

ಅದು ಸಾಹಿತ್ಯಲೋಕದ ಧಿಶಕ್ತಿಯ ಜೊತೆ ಕ್ಯಾಮರಾ ಮೂಲಕ ಸಂವಾದಿಸಿದ ಅವರ ವಿನಮ್ರತೆ. ಆದರೆ, ಅವರ ಕ್ಯಾಮರಾದ ಬೆರಗುಗಣ್ಣು ಯುಗಪ್ರವರ್ತಕ ಕವಿಯ ಭಾವಲೋಕವನ್ನು ಸಮರ್ಥವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅದರ ಫಲವಾದ ಈ ಕಪ್ಪು- ಬಿಳುಪು ಚಿತ್ರ ಸಂಪುಟ ಓದುಗ ಮತ್ತು ನೋಡುಗನಲ್ಲಿ ಹಲವು ವರ್ಣಗಳನ್ನು ಮೂಡಿಸುತ್ತದೆ. 1980-90ರ ದಶಕದಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಮತ್ತು ಅದರ ಹಿಂದಿರುವ ಕಥನ ಗಳನ್ನು ಮೂರು ದಶಕದ ಬಳಿಕ ಅವರು ಪ್ರಕಟ ಪಡಿಸಿದ್ದಾರೆ. ಕಪ್ಪು ಬಿಳುಪಿನ ಚಿತ್ರಗಳು ಅವೇ ಇದ್ದರೂ, ಅವುಗಳ ಜೊತೆ ಬೆಸೆದಿರುವ ಕಥನಗಳು ಈ ಸುದೀರ್ಘ ಅವಽಯಲ್ಲಿ ಮಾಗಿವೆ.

ಕೃತಿಯ ಬೆನ್ನುಡಿಯಲ್ಲಿ ಡಾ.ಕೆ.ವೈ.ನಾರಾಯಣ ಸ್ವಾಮಿ ಅವರು ಹೇಳಿರುವಂತೆ, ‘ಕ್ಯಾಮರಾ ಮತ್ತು ಕುವೆಂಪು ಅವರ ಭಾವಲೋಕಗಳ ನಡುವಣ ನಿರ್ಲಿಪ್ತ ಸ್ಪರ್ಧೆ ಯೊಂದು ಏರ್ಪಟ್ಟ ಹಾಗೆ ಇಲ್ಲಿನ ಚಿತ್ರಗಳನ್ನು ನೋಡು ತ್ತಿರುವಂತೆ ಚಲನಶೀಲವಾಗುವ ಪವಾಡ ಸಂಭವಿಸು ವಂತೆ ಕಾಣುತ್ತದೆ. ಕುವೆಂಪು ಅವರನ್ನು ಅರಿಯುವ- ತಿಳಿ ಯುವ ಹಲವು ಮಾದರಿಗಳಿಗೆ ಈಗ ಕ್ಯಾಮರಾ ಎನ್ನುವ ದೃಷ್ಟಿಕೋನವು ಸೇರ್ಪಡೆಗೊಂಡಿದೆ. ಕೃಪಾಕರ -ಸೇನಾನಿ ಯವರ ಈ ಪ್ರಯತ್ನವು ಕುವೆಂಪು ಅವರ ಬದುಕನ್ನು ನಮಗೆ ಮತ್ತಷ್ಟು ಬೆಡುಗಾಗಿಯೇ ತೋರಿಸುತ್ತದೆ.’

‘ಈ ರೀತಿಯೂ ಒಬ್ಬ ಲೇಖಕರನ್ನು ತಿಳಿಯ ಬಹುದೆಂಬುದು ಆಶ್ಚರ್ಯ ಉಂಟುಮಾಡುತ್ತದೆ. ಈ ಮಂತ್ರದ್ರಷ್ಟಾರನನ್ನು ಅರಿಯಲು ಇದೊಂದು ಅನನ್ಯ ಪ್ರಯತ್ನ, ಕನ್ನಡದ ಮಟ್ಟಿಗೆ ಏಕೈಕ’ ಎನ್ನುವುದು ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್. ಶ್ರೀರಾಮ್ ಅವರ ಅಭಿಪ್ರಾಯ.

ಕುವೆಂಪು ವ್ಯಕ್ತಿತ್ವ, ಸಾಹಿತ್ಯದ ತಿಳಿವಿಗಷ್ಟೆ ಅಲ್ಲ, ಕ್ಯಾಮರಾ ಜಗತ್ತು ಎಲ್ಲರ ಅಂಗೈಯಲ್ಲಿ ಆಟಿಕೆಯ ವಸ್ತುವಿನಂತೆ ವಿರಾಜಿಸಿರುವ ಮತ್ತು ಹಲವು ಸಾಧ್ಯತೆ ಗಳನ್ನು ಒಳಗೊಂಡು ದುಬಾರಿ ಎನಿಸಿರುವ ಎರಡು ಅತಿಗಳ ಮೇಲಾಟ ನಡೆದಿರುವ ಈ ಹೊತ್ತಿನಲ್ಲಿ ಕಪ್ಪು-ಬಿಳುಪು ಚಿತ್ರ, ಕ್ಯಾಮೆರಾ,ಫಿಲ್ಮ್, ಸೆರೆ ಹಿಡಿಯುವ , ಪ್ರಿಂಟ್ ಹಾಕುವ, ಬೆಳಕಿಗಾಗಿ ಕಾಯ್ದು ಕೂರುವ ಸವಾಲುಗಳು ಛಾಯಾಗ್ರಹಣ ಕಲಿಯುವ ಆಸಕ್ತರಿಗೆ ಉತ್ತಮ ಆಕರ ಆಗಬಹುದಾದ ಕೃತಿ ಕೂಡ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

8 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

36 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago