ಎಡಿಟೋರಿಯಲ್

ಜಿ20ರೊಳಗೊಂದು ಬಿಜಿನೆಸ್ 20!

– ಪ್ರೊ.ಆರ್.ಎಂ.ಚಿಂತಾಮಣಿ

ಈ ತಿಂಗಳು ಮತ್ತು ಮುಂದಿನ ತಿಂಗಳ ಮಧ್ಯದವರೆಗೆ ‘ಗ್ರೂಪ್ ಆಫ್ ಟ್ವೆಂಟಿ’ ದೇಶಗಳದ್ದೇ ಮಾತು. ಸೆಪ್ಟೆಂಬರ್ 8ರಿಂದ 10ರವರೆಗೆ ಮೂರು ದಿನಗಳು ಸದಸ್ಯ ದೇಶಗಳ ಆಡಳಿತ ಮುಖ್ಯಸ್ಥರ 18ನೇ ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ, ನಮ್ಮ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಡೆಯಲಿದೆ. ಇದೊಂದು ಐತಿಹಾಸಿಕ ಮಹತ್ವದ ಘಟನೆ. ಇದಕ್ಕೆ ಪೂರ್ವಭಾವಿಯಾಗಿ ಈ ದೇಶಗಳ ವಿವಿಧ ಆರ್ಥಿಕ ಮತ್ತು ಆಡಳಿತ ವಲಯಗಳ ಪ್ರತಿನಿಧಿಗಳು, ಆಹ್ವಾನಿತ ಇತರೆ ದೇಶಗಳ ಪ್ರತಿನಿಧಿಗಳು ಮತ್ತು ವಿಶೇಷ ತಜ್ಞರು ಗೋಷ್ಠಿಗಳಲ್ಲಿ ನಮ್ಮ ದೇಶದ ಬೇರೆ ಬೇರೆ ನಗರಗಳಲ್ಲಿ ಸೇರಿಕೊಂಡು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ರಂಗಗಳಲ್ಲಿ ಅಂತಾರಾಷ್ಟ್ರೀಯ, ವಿಶೇಷವಾಗಿ ಸದಸ್ಯ ದೇಶಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸುತ್ತಿದ್ದಾರೆ. ಈ ಎಲ್ಲ ಗೋಷ್ಠಿಗಳ ನಿರ್ಣಯಗಳು ಶೃಂಗಸಭೆಯ ಕಾರ್ಯಸೂಚಿಗೆ ಮೂಲ ವಸ್ತುಗಳಾಗುತ್ತವೆ.

ಗುಂಪಿನ ಇಪ್ಪತ್ತರಲ್ಲಿ ಅರ್ಜೆಂಟೈನ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಟಲಿ, ಭಾರತ, ಇಂಡೋನೇಷಿಯಾ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಬ್ರಿಟನ್ ಮತ್ತು ಯುಎಸ್‌ಎ (ಅಮೆರಿಕ) ದೇಶಗಳಿದ್ದು, ಯುರೋಪಿ ಯನ್ ಯೂನಿಯನ್ (ಇ.ಯು.) ಸದಸ್ಯತ್ವ ಹೊಂದಿದೆ. ಜಗತ್ತಿನ ಒಟ್ಟಾದಾಯದ (ಜಿಡಿಪಿ) ಶೇ.೮೫ರಷ್ಟು ಜಿ20 ಹೊಂದಿದೆ. ಜಾಗತಿಕ ಒಟ್ಟು ವ್ಯಾಪಾರದ ಶೇ.೭೫ರಷ್ಟನ್ನು ಗುಂಪು ನಿಯಂತ್ರಿಸುತ್ತದೆ. ವಿಶ್ವದ ಮೂರನೇ ಎರಡು ಭಾಗದಷ್ಟು ಜನಸಂಖ್ಯೆ ಈ ಗುಂಪಿನಲ್ಲಿದೆ. ಅತಿ ಹೆಚ್ಚು ಜನಸಂಖ್ಯೆಯ ಎರಡು ದೇಶಗಳೂ ಇಲ್ಲಿವೆ. ಹೀಗಾಗಿ ಸ್ವಾಭಾವಿಕವಾಗಿಯೇ ಜಿ20 ಪ್ರಭಾವಶಾಲಿಯಾಗುವ ಸಾಧ್ಯತೆ ಇದೆ.

ಈ ವರ್ಷದ ವಿಸ್ತ ತ ಕಾರ್ಯಕ್ರಮಗಳ ಅಂಗವಾಗಿ ಭಾರತ ಕೈಗಾರಿಕಾ ಸಂಘಟನೆ ಸಿ.ಐ.ಐ. ಸಹಯೋಗದಲ್ಲಿ ಜಿ20 ದೇಶಗಳ ಉದ್ಯಮಿಗಳು ಮತ್ತು ವಾಣಿಜ್ಯ ವ್ಯವಹಾರಗಳಲ್ಲಿರುವವರು ಹಾಗೂ ಅಧಿಕಾರಿಗಳಿಲ್ಲದೆ ಇತರೆ ದೇಶಗಳ ಆಹ್ವಾನಿತರೊಡನೆ ಗೋಷ್ಠಿಯೊಂದನ್ನು ಕಳೆದ ವಾರ ದೆಹಲಿಯಲ್ಲಿ ಆಯೋಜಿಸಲಾಗಿತ್ತು. ಇದನ್ನೇ ಬಿಸಿನೆಸ್ 20 (ಜಿ20) ಎಂದು ಕರೆಯಲಾಗುತ್ತಿದೆ. ಇಲ್ಲಿ ವಿವರವಾದ ಚರ್ಚೆಗಳೂ ನಡೆದವು.

ವಿಚಾರಮಂಥನದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಭಾರತದ ಉದಯ ಕೊಟಕ್ (ಕೊಟಕ್ ಮಹೀಂದ್ರಾ ಬ್ಯಾಂಕ್) ಮತ್ತು ಎನ್.ಚಂದ್ರಶೇಖರನ್ (ಟಾಟಾ ಗುಂಪು) ಮುಂತಾದ ಉದ್ಯಮ ರಂಗದ ಪ್ರಮುಖರು ಮಾತನಾಡಿ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಅಂತರರಾಷ್ಟ್ರೀಯ ಸಹಕಾರದ ಅವಶ್ಯಕತೆಯ ಬಗ್ಗೆ ವಿವರಿಸಿದರು. ವಿಶೇಷವಾಗಿ ಪರಿಸರ ರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಆಡಳಿತ ವಿಷಯಗಳಲ್ಲಿ ಸಹಕಾರದ ಬಗ್ಗೆ ಒತ್ತು ಕೊಟ್ಟು ಹೇಳಿದರು. ಹಲವು ವಿದೇಶಿ ಪ್ರತಿನಿಧಿಗಳೂ ಇದೇ ವಿಷಯವನ್ನು ಇನ್ನಷ್ಟು ವಿವರವಾಗಿ ಚರ್ಚಿಸಿದರು.

ಎಲ್ಲರ ಗಮನ ಭಾರತದತ್ತ

ಭಾರತದ ಆಧಾರ್ ಕಾರ್ಡ್ ವ್ಯವಸ್ಥೆಯನ್ನು ಹಲವರು ಮೆಚ್ಚಿಕೊಂಡರೆ ಅನೇಕರು ತಂತ್ರಜ್ಞಾನದಲ್ಲಿಯ ಸಾಧನೆಯನ್ನು ಹೊಗಳಿದರು. ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.) ಪ್ರತಿನಿಧಿ ಜಾಗತಿಕ ಮೌಲ್ಯವೃದ್ಧಿ ಮತ್ತು ವರ್ಗಾವಣೆ ಸರಪಳಿ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುವ ಅವಶ್ಯಕತೆ ಇದೆ ಎಂದು ಹೇಳಿ, ಭಾರತ ಇದರಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಒತ್ತಾ ಯಿಸಿದರು. ಭಾರತ ಸೇವೆ ಮತ್ತು ಸರಕುಗಳೆರಡರಲ್ಲಿಯೂ ರಫ್ತು ಕೇಂದ್ರ ವಾಗಬೇಕು ಎಂದು ಸಲಹೆ ನೀಡಿದರು. ಹೀಗೆ ಎಲ್ಲರೂ ಭಾರತ ಜಾಗತಿಕ ಕಾರ್ಖಾನೆಯಾಗಬೇಕು ಎನ್ನುವವರೇ.

ಇನ್ಛೋಸಿಸ್ ಅಧ್ಯಕ್ಷ ಮತ್ತು ಆಧಾರ್ ಜಾರಿ ಪ್ರಾಧಿಕಾರದ ಅಂದಿನ ಅಧ್ಯಕ್ಷ ನಂದನ್ ನಿಲೇಕಣಿ ಭರವಸೆಯ ಮಾತುಗಳನ್ನಾಡಿ, ನಮ್ಮ ಡಿಜಿಟಲ್ ಪಬ್ಲಿಕ್ ಇನ್ಛ್ರಾಸ್ಟ್ರಕ್ಚರ್ ತಂತ್ರಜ್ಞಾನವನ್ನು ವಿಶ್ವ ಬ್ಯಾಂಕು, ಐಎಂಎಫ್ ಮತ್ತು ಇತರ ಬಹುರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಗಳ ಸಹಕಾರದೊಂದಿಗೆ ಮುಂದಿನ ಐದು ವರ್ಷಗಳಲ್ಲಿ 50 ದೇಶಗಳಿಗೆ ತಲುಪಿಸಲಾಗುವುದು ಎಂದು ಹೇಳಿದರು. ಡಿಜಿ ಟಲ್ ಮೂಲ ಸೌಲಭ್ಯಗಳು ಎಲ್ಲ ವರ್ಗದ ಜನರಿಗೂ ಉಪಯುಕ್ತವಾಗಿದ್ದು, ಬೆಳೆಯುತ್ತಿರುವ ದೇಶಗಳ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಇದನ್ನು ಜಿ20 ಶೃಂಗಸಭೆ ಗಂಭೀರವಾಗಿ ಪರಿಗಣಿಸಿ ಸಕಾರಾತ್ಮಕವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲರ ಹಿತವೂ ಇದರಲ್ಲಡಗಿದೆ.

ಬೆಳೆಯುತ್ತಿರುವ ದೇಶಗಳಲ್ಲಿಯ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳ ಬಗ್ಗೆ ಕಾಳಜಿ ಹೊಂದಿರುವ ನಮ್ಮ ಐಟಿಸಿ ಮುಖ್ಯಸ್ಥ ಸಂಜೀವ ಪುರಿಯವರು ಇವುಗಳಿಗೆ ಇಎಸ್‌ಜಿ ವೆಚ್ಚಗಳು ಹೆಚ್ಚು ಭಾರವಾಗುತ್ತಿದ್ದು, ಬೆಳವಣಿಗೆಗೆ ಅಡ್ಡಿಯಾಗುತ್ತಿವೆ ಎಂದು ಹೇಳಿ ವೆಚ್ಚ ತಗ್ಗಿಸುವ ವಿಧಾನಗಳು ಮತ್ತು ತಂತ್ರಜ್ಞಾನಗಳನ್ನು ಕಂಡುಹಿಡಿಯಬೇಕಾಗಿದೆ ಎಂದು ಸಲಹೆ ನೀಡಿದರು. ಶ್ರೀಮಂತ, ಬಡ ದೇಶಗಳು ಮತ್ತು ದೊಡ್ಡ ಕಂಪೆನಿಗಳಲ್ಲದೆ ಅತಿ ಸಣ್ಣ ವ್ಯವಹಾರಸ್ಥರು ಅಳವಡಿಸಿಕೊಳ್ಳಲು ಸೂಕ್ತವಾದ ಕಡಿಮೆ ವೆಚ್ಚದ ಸರಳವಾದ ಪರಿಸರ ರಕ್ಷಣೆ ಮತ್ತು ಸಾಮಾಜಿಕ ಜವಾಬ್ದಾರಿ ಮಾದರಿಯನ್ನು ಹುಡುಕಬೇಕಿದೆ.

ಜಿ20 ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನಮ್ಮ ಪ್ರಧಾನಿ ಮೋದಿಯವರು ಭಾರತ ಸಮರ್ಥ ಪೂರೈಕೆ ಸರಪಳಿಯನ್ನು ಜಾಗತಿಕ ಮಟ್ಟದಲ್ಲಿ ಒದಗಿಸಲಿದೆ ಎಂದು ಭರವಸೆ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲರ ಅಭಿವೃದ್ಧಿಗೆ ಪೂರಕವಾದ ಜಾಗತಿಕ ಆರ್ಥಿಕ ವ್ಯವಸ್ಥೆ ನಿರ್ಮಿಸಲು ಜಿ20 ಸಭೆ ಉಪಯುಕ್ತ ಸಲಹೆಗಳನ್ನು ಕೊಡುವಂತಾಗಬೇಕು ಎಂದು ಹಾರೈಸಿದರು.

ಜಿ20 ಶೃಂಗಸಭೆ ಗಮನಕ್ಕೆ

ಜಿ20 ಇಂದಿನ ಎರಡು ಅತಿ ಮಹತ್ವದ ವಿಷಯಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸಿತ್ತು. ಒಂದು: ಪರಿಸರ ರಕ್ಷಣೆ, ಸಾಮಾಜಿಕ ಜವಾಬ್ದಾರಿ ಮತ್ತು ಕಂಪೆನಿ ನೈತಿಕ ಆಡಳಿತ. ಇನ್ನೊಂದು ಜಾಗತಿಕ ಮೌಲ್ಯ ಸರಪಳಿಗೆ ಸಂಬಂಧಿಸಿದ್ದು. ಮೊದಲನೆಯದು ಈ ಶತಮಾನದ ಅಭಿವೃದ್ಧಿ ಗುರಿಗಳಲ್ಲಿ ಒಂದಾಗಿದ್ದು, ಈಗಾಗಲೇ ತಕ್ಕಮಟ್ಟಿಗೆ ಸಾಧನೆಗಳೂ ಕಂಡುಬಂದಿದ್ದು, ಇನ್ನೂ ಸಾಽಸಬೇಕಾದದ್ದು ಬಹಳ ಇದೆ ಎನ್ನುವುದೂ ಅಷ್ಟೇ ಸತ್ಯ. ಜಿ20 ಈ ಕುರಿತು ಖಚಿತ ನಿರ್ಧಾರ ತೆಗೆದುಕೊಳ್ಳಬೇಕು. ಪರಿಸರ ಹಾನಿಕಾರಕ ಆರ್ಥಿಕ ಚಟುವಟಿಕೆಗಳನ್ನು ಸಮಯ ಬದ್ಧವಾಗಿ ಕಡಿಮೆ ಮಾಡುತ್ತಾ ಪರ್ಯಾಯಗಳನ್ನು ಹುಡುಕಬೇಕಾಗಿದೆ. ಈ ನಿಟ್ಟಿನಲ್ಲಿ ಜಿ20 ಶೃಂಗಸಭೆ ಖಚಿತ ನಿರ್ಣಯ ಕೈಗೊಳ್ಳಬೇಕು.

ಎರಡನೆಯದು ಜಾಗತಿಕ ಮುಕ್ತ ವ್ಯಾಪಾರ ಮತ್ತು ಎಲ್ಲ ದೇಶಗಳ ಅಭಿವೃ ದ್ಧಿಗೆ ಸಂಬಂಧಿಸಿದ್ದು. ಕೆಲವು ದೇಶಗಳ ರಕ್ಷಣಾತ್ಮಕ ನಿಲುವುಗಳು ಮೊದಲು ನಿಲ್ಲಬೇಕು. ಮೌಲ್ಯ ಸರಪಳಿಗಳು ತಡೆರಹಿತ ಚಲಿಸುವ ವಾತಾವರಣ ಎಲ್ಲ ಕಡೆ ನಿರ್ಮಾಣವಾಗಬೇಕು. ಉದಾಹರಣೆಗೆ ಶಕ್ತಿ ಮತ್ತು ಸೆಮಿ ಕಂಡಕ್ಟರ್ ವಲಯಗಳಲ್ಲಿ ಬಹಳಷ್ಟು ತೊಡಕುಗಳಿವೆ. ಮೌಲ್ಯವರ್ಧನೆಗಳು ಎಲ್ಲೋ ಒಂದು ಕಡೆ ಕೇಂದ್ರೀಕೃತವಾಗಿದ್ದು, ಇವುಗಳ ಉತ್ಪಾದನೆ, ಖರೀದಿ, ಮಾರಾಟ ಮುಕ್ತವಾಗಿ ನಡೆಯಬೇಕಿದೆ. ದೇಶಗಳ ವೈಮನಸ್ಯಗಳೂ ಇವುಗಳ ಮುಕ್ತ ಆರ್ಥಿಕ ಚಲನೆಗೆ ಅಡ್ಡಿಯಾಗುತ್ತವೆ. ಇದು ಬಡ ಮತ್ತು ಬೆಳೆಯುತ್ತಿರುವ ದೇಶಗಳಿಗೆ ಹೆಚ್ಚು ತೊಂದರೆ. ಹೆಚ್ಚು ಶ್ರಮ ಆಧಾರಿತ ಉದ್ದಿಮೆಗಳು (ಉದಾಹರಣೆಗೆ ಉಡುಪು ಮತ್ತು ಬಟ್ಟೆ ಉದ್ದಿಮೆ) ಎಲ್ಲ ಕಡೆ ಇದ್ದರೂ ಪ್ರಕೃತಿ ವಿಕೋಪಗಳು ಇವುಗಳಿಗೆ ದೊಡ್ಡ ಪೆಟ್ಟು ಕೊಡುತ್ತವೆ. ಇದನ್ನು ತಪ್ಪಿಸಲು ಹವಾಮಾನ ಮತ್ತು ನೈಸರ್ಗಿಕ ವೈಪರೀತ್ಯಗಳು ಕಡಿಮೆಯಾಗಬೇಕು.

ಇವೆಲ್ಲವನ್ನೂ ಜಿ20 ಶೃಂಗಸಭೆ ಗಮನಿಸುವುದೇ?

lokesh

Share
Published by
lokesh

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago