ಎಡಿಟೋರಿಯಲ್

ಬ್ರಿಕ್ಸ್ ಶೃಂಗಸಭೆ: ಡಾಲರ್‌ಗೆ ಪರ್ಯಾಯ ಇನ್ನೂ ದೂರ

 ಡಾಲರ್‌ಗೆ ಪರ್ಯಾಯ ಕರೆನ್ಸಿಯನ್ನು (ಚಲಾವಣಾ ಹಣರೂಪಿಸುವ ಬ್ರಿಕ್ಸ್ ಸಂಘಟನೆಯ (ಬ್ರೆಜಿಲ್ರಷ್ಯಾಇಂಡಿಯಾಚೀನಾದಕ್ಷಿಣ ಆಫ್ರಿಕಾಪ್ರಯತ್ನಗಳು ಸದ್ಯಕ್ಕೆ ಯಶಸ್ಸು ಪಡೆದಿಲ್ಲದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇದೀಗ ತಾನೆ ಅಂತ್ಯವಾಗಿರುವ ಈ ದೇಶಗಳ ಶೃಂಗಸಭೆಯ ನಿರ್ಣಯಗಳನ್ನು ನೋಡಿದರೆ ಪ್ರತ್ಯೇಕ ಬ್ರಿಕ್ಸ್ ಕರೆನ್ಸಿ ಜಾರಿಗೆ ತರುವ ವಿಚಾರ ಇನ್ನೂ ದೂರ ಇದ್ದಂತೆ ಕಾಣುತ್ತಿದೆಇಂಥ ಉದ್ದೇಶ ಈ ಶೃಂಗಸಭೆಗೆ ಇರಲೇ ಇಲ್ಲ ಎಂದು ದಕ್ಷಿಣ ಆಫ್ರಿಕಾ ಹೇಳಿರುವುದು ಪರಿಸ್ಥಿತಿಗೆ ಕನ್ನಡಿ ಹಿಡಿದಂತಾಗಿದೆಮೂಲಭೂತವಾಗಿ ಆ ಕುರಿತಂತೆ ವಿವಿಧ ಬ್ರಿಕ್ಸ್ ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯಗಳೇ ಪ್ರತ್ಯೇಕ ಕರೆನ್ಸಿ ವಿಚಾರ ತೀರ್ಮಾನವಾಗದಿರಲು ಕಾರಣ.

ಹಾಗೆ ನೋಡಿದರೆ ಡಾಲರ್ ಕೈಬಿಟ್ಟು ತನ್ನದೇ ಸ್ವತಂತ್ರ ಕರೆನ್ಸಿ ಚಲಾವಣೆಗೆ ತರುವ ಯೋಚನೆ ಬ್ರಿಕ್ಸ್ ನಾಯಕರಿಗೆ ಮೊದಲಿನಿಂದಲೂ ಇದೆಆದರೆ ಈ ವಿಚಾರದಲ್ಲಿ ಒಮ್ಮತ ಮೂಡುತ್ತಿಲ್ಲ ಅಷ್ಟೆಡಾಲರ್‌ಗೆ ಪರ್ಯಾಯ ಹಣ ರೂಪಿಸುವ ದಿನ ದೂರವಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೇ ಹೇಳುತ್ತಿದ್ದಾರೆಂದರೆ ಅದು ಇಂದಲ್ಲ ನಾಳೆ ರೂಪಿತವಾಗುವುದು ಖಚಿತಆದರೆ ಈ ಪ್ರಯತ್ನದ ಹಿಂದೆ ರಷ್ಯಾ ಇರುವುದು ಅಂತಾರಾಷ್ಟ್ರೀಯ ವಾಗಿ ಮುಸುಕಿನ ಯುದ್ಧದ ನೆರಳು ಕಾಣುವಂತಾಗಿದೆಇದೊಂದು ರೀತಿಯಲ್ಲಿ ಅಮೆರಿಕ ಮತ್ತು ಯೂರೋಪಿನ ಶಕ್ತಿ ರಾಜಕಾರಣಕ್ಕೆ ಸವಾಲೆಸೆಯುವ ಪ್ರಯತ್ನ ಎಂದು ಅರ್ಥೈಸಲಾಗುತ್ತಿದೆಬ್ರಿಕ್ಸ್ ಸಂಘಟನೆಯನ್ನು ಬಲಗೊಳಿಸುವ ಪ್ರಯತ್ನಗಳ ಹಿಂದೆ ಇಂಥದೊಂದು ಅಂಶ ಇರಬಹುದುಆದರೆ ವಿವಿಧ ವಸಾಹತುಗಳ ಭಾಗಗಳಾಗಿದ್ದ ದೇಶಗಳು ಎದುರಿಸುತ್ತಿರುವ ಅಭಿವೃದ್ಧಿ ಸಮಸ್ಯೆಗಳ ಹಿನ್ನೆಲೆಯಲ್ಲಿ ಬ್ರಿಕ್ಸ್ ಬಲಪಡಿಸುವ ಅಗತ್ಯ ಇದೆ ಎನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಜೋಹಾನ್ಸ್‌ಬರ್ಗ್ ಶೃಂಗಸಭೆಯಲ್ಲಿ ಬ್ರೆಜಿಲ್‌ನ ಅಧ್ಯಕ್ಷ ಲೂಲಾ ಡ ಸಿಲ್ವಾ ಈ ಪ್ರಶ್ನೆಯನ್ನು ಎತ್ತಿ ಡಾಲರ್‌ಗೆ ಪರ್ಯಾಯ ಕರೆನ್ಸಿ ಘೋಷಿಸದೆ ಹೋದರೆ ವಾಣಿಜ್ಯ ವಹಿವಾಟು ಮತ್ತು ಆರ್ಥಿಕ ವಲಯದಲ್ಲಿ ಗೊಂದಲಗಳು ಏಳುತ್ತವೆ ಎಂದು ಎಚ್ಚರಿಕೆ ನೀಡಿದರುಎರಡು ದೇಶಗಳ ವಾಣಿಜ್ಯ ವಹಿವಾಟನ್ನು ಮೂರನೆಯ ದೇಶದ ಕರೆನ್ಸಿ ಡಾಲರ್‌ನಲ್ಲಿ ಏಕೆ ನಡೆಸಬೇಕುಎಂದು ಅವರು ಪ್ರಶ್ನಿಸಿದರುಬಹಳ ದೇಶಗಳ ಅಭಿಪ್ರಾಯವೂ ಇದೇ ಆಗಿದ್ದರೂ ಕೆಲವು ಸಮಸ್ಯೆಗಳಿಂದ ಅದು ಸಾಧ್ಯವಾಗುತ್ತಿಲ್ಲದಿರುವುದು ವಾಸ್ತವ ಸಂಗತಿಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್ ಅವರ ಮನಸ್ಸಿನಲ್ಲಿ ತಮ್ಮ ದೇಶದ ಕರೆನ್ಸಿ ಹುವಾನ್ ಹಣವೇ ಪರ್ಯಾಯವಾಗಲಿ ಎಂಬ ಆಸೆ ಇದೆಇದರಿಂದಾಗಿಯೇ ಅವರು ಬ್ರಿಕ್ಸ್ ಸಂಘಟನೆಗೆ ಮತ್ತಷ್ಟು ದೇಶಗಳನ್ನು ಬೇಗ ಸದಸ್ಯರನ್ನಾಗಿ ಮಾಡ ಬೇಕೆಂದು ಒತ್ತಾಯಿಸುತ್ತಾ ಬಂದಿದ್ದಾರೆ.

ಈಗಾಗಲೇ ನೂರಾರು ದೇಶಗಳು ಚೀನಾದ ಜೊತೆ ವಹಿವಾಟಿಗೆ ಹುವಾನ್ ಕರೆನ್ಸಿಯನ್ನೇ ಬಳಸುತ್ತಿವೆಆ ದೇಶಗಳಿಗೆ ಸದಸ್ಯತ್ವ ಕೊಡಿಸಿದರೆ ಸಹಜವಾ ಗಿಯೇ ಹುವಾನ್ ಬ್ರಿಕ್ಸ್ ದೇಶಗಳ ಕರೆನ್ಸಿ ಆಗುತ್ತದೆ ಎನ್ನುವುದು ಕ್ಸಿಜಿನ್‌ಪಿಂಗ್ ಅವರ ಲೆಕ್ಕಾಚಾರಆದರೆ ಕರೆನ್ಸಿ ವಿಚಾರದಲ್ಲಿ ಚೀನಾದ ಪ್ರಾಬಲ್ಯವನ್ನು ಒಪ್ಪಲು ಭಾರತ ಸಿದ್ಧವಿಲ್ಲಭಾರತ ಮತ್ತು ಚೀನಾ ಸಾಂಪ್ರದಾಯಿಕವಾಗಿ ಪರಸ್ಪರ ದ್ವೇಷಿಸುವ ದೇಶಗಳುಚೀನಾ ಜೊತೆ ಭಾರತ ಉತ್ತಮ ವಾಣಿಜ್ಯ ಬಾಂಧವ್ಯ ಹೊಂದಿರುವುದು ನಿಜವಾದರೂ ಅಮೆರಿಕದ ಪ್ರಾಬಲ್ಯ ಹೋಗಿ ಚೀನಾ ಪ್ರಾಬಲ್ಯದ ಕೆಳಗೆ ಸಿಕ್ಕಿಕೊಳ್ಳುವುದು ಭಾರತಕ್ಕೆ ಇಷ್ಟವಿಲ್ಲ.

ಪ್ರತ್ಯೇಕ ಬ್ರಿಕ್ಸ್ ಕರೆನ್ಸಿ ಚಲಾವಣೆಗೆ ತರುವುದಕ್ಕೆ ಭಾರತಕ್ಕೆ ವಿರೋಧ ಇಲ್ಲಆದರೆ ಚೀನಾ ಕರೆನ್ಸಿ ಹುವಾನ್ ಅನ್ನು ಬ್ರಿಕ್ಸ್ ಕರೆನ್ಸಿ ಮಾಡುವುದಕ್ಕೆ ಮಾತ್ರ ವಿರೋಧಹೀಗಾಗಿಯೇ ಹಿಂದೆಮುಂದೆ ನೋಡದೆ ಎಲ್ಲ ದೇಶಗಳನ್ನೂ ಬ್ರಿಕ್ಸ್ ಸದಸ್ಯರನ್ನಾಗಿ ಮಾಡಿಕೊಳ್ಳುವುದು ಅಪಾಯಕಾರಿ ಎಂದು ಭಾರತ ಹೇಳುತ್ತಾ ಬಂದಿದೆ.

ಕೆಲವು ನಿರ್ದಿಷ್ಟ ಮಾನದಂಡಗಳನ್ನು ಆಧರಿಸಿ ಸದಸ್ಯತ್ವ ನೀಡಬೇಕೆಂಬ ಭಾರತದ ವಾದಕ್ಕೆ ಹೆಚ್ಚು ಒಲವು ಸಿಕ್ಕಿದ್ದರಿಂದ ಚೀನಾದ ಅಧ್ಯಕ್ಷ ಕ್ಷಿ ಅವರು ನಿರಾಶೆಗೊಂಡು ಸುಮ್ಮನಾದರು ಎಂದು ಹೇಳಲಾಗಿದೆಬಹುಶಃ ಇದೇ ಕಾರಣಕ್ಕೆ ಕ್ಷಿ ಅವರು ಶೃಂಗಸಭೆಯ ಭಾಗವಾಗಿ ನಡೆದ ವಾಣಿಜ್ಯ ವಹಿವಾಟು ಸಭೆಗೆ ಗೈರುಹಾಜರಾದರು ಎನ್ನುವ ವದಂತಿ ಇದೆಹಾಗೆ ನೋಡಿದರೆ ಬ್ರಿಕ್ಸ್ ವಹಿವಾಟು ತನ್ನ ಕರೆನ್ಸಿ ರೂಬೆಲ್‌ನಲ್ಲಿ ನಡೆಯಬೇಕೆಂಬುದು ರಷ್ಯಾದ ಆಸೆಯಾಗಿತ್ತುಡಾಲರ್‌ಗೆ ರೂಬೆಲ್ ಪರ್ಯಾಯ ಮಾಡಿದರೆ ಅಮೆರಿಕ್ಕೆ ಪಾಠ ಕಲಿಸಿದಂತಾಗುತ್ತದೆ ಎಂದು ರಷ್ಯಾ ಭಾವಿಸಿತ್ತುಆದರೆ ಅಂತಾರಾಷ್ಟ್ರೀಯವಾಗಿ ರೂಬೆಲ್ ಅಷ್ಟು ಚಲಾವಣೆಯಲ್ಲಿ ಇಲ್ಲಉಕ್ರೇನ್ ಮೇಲೆ ರಷ್ಯಾ ದಾಳಿ ಹಿನ್ನೆಲೆಯಲ್ಲಿ ರಷ್ಯಾದ ಮೇಲೆ ಕಠಿಣ ಆರ್ಥಿಕ ವಾಣಿಜ್ಯ ನಿರ್ಬಂಧಗಳು ಜಾರಿಯಲ್ಲಿವೆಹೀಗಾಗಿ ಮಾರುಕಟ್ಟೆಯಲ್ಲಿ ರೂಬೆಲ್ ಪ್ರಾಬಲ್ಯ ಮತ್ತು ಬೆಲೆ ಕಡಿಮೆಈ ಹಿನ್ನೆಲೆಯಲ್ಲಿ ಚೀನಾದ ಕರೆನ್ಸಿ ಹುವಾನ್ ಬ್ರಿಕ್ಸ್‌ನ ಕರೆನ್ಸಿಯಾದರೆ ತನ್ನ ಅಭ್ಯಂತರವೇನೂ ಇಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹಿಂದೆಯೇ ಹೇಳಿದ್ದರು.

ವಿಶ್ವದಲ್ಲಿ ಚೀನಾ ಈಗ ಪ್ರಮುಖ ವಾಣಿಜ್ಯ ವಹಿವಾಟು ದೇಶವಾಗಿರುವುದರಿಂದ ಡಾಲರ್‌ಗೆ ಸವಾಲೆಸೆಯುವುದು ಸುಲಭ ಎಂದು ಕೂಡ ಹಲವು ಬ್ರಿಕ್ಸ್ ದೇಶಗಳು ಅಭಿಪ್ರಾಯಪಟ್ಟಿದ್ದವುಆದರೆ ಚೀನಾದ ಕರೆನ್ಸಿಯನ್ನು ಬ್ರಿಕ್ಸ್ ಕರೆನ್ಸಿಯಾಗಿ ಚಲಾವಣೆಗೆ ತರುವುದಕ್ಕೆ ಭಾರತದ ವಿರೋಧವಿತ್ತುಬಹಿರಂಗವಾಗಿ ವಿರೋಧ ವ್ಯಕ್ತಮಾಡದಿದ್ದರೂ ಹುವಾನ್ ಕರೆನ್ಸಿ ಮಾಡುವ ವಿಚಾರ ಬ್ರಿಕ್ಸ್ ಸಭೆಗಳಲ್ಲಿ ಚರ್ಚೆಗೆ ಬರದಂತೆ ನೋಡಿಕೊಂಡಿತುಕರೆನ್ಸಿಯಾಗಿ ಹುವಾನ್ ಬಳಸಲಾರಂಭಿಸಿದರೆ ಚೀನಾದ ಪ್ರಾಬಲ್ಯ ಹೆಚ್ಚಿ ತನ್ನನ್ನು ಆರ್ಥಿಕವಾಗಿ ತುಳಿಯಲು ಚೀನಾ ಪ್ರಯತ್ನಿಸಬಹುದು ಎನ್ನುವುದು ಭಾರತದ ಆತಂಕಹೀಗಾಗಿಯೇ ಕರೆನ್ಸಿ ವಿಚಾರ ಅಂತಿಮ ಹಂತಕ್ಕೆ ಬರದಂತೆ ಭಾರತ ನೋಡಿಕೊಂಡಂತೆ ಕಾಣುತ್ತಿದೆಇದೇನೇ ಇದ್ದರೂ ಬ್ರಿಕ್ಸ್ ಮುಂಬರುವ ದಿನಗಳಲ್ಲಿ ಪ್ರಬಲ ಗುಂಪಾಗಿ ಪ್ರವರ್ಧಮಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲಒಂದಲ್ಲ ಒಂದು ದಿನ ಬ್ರಿಕ್ಸ್ ತನ್ನದೇ ಆದ ಕರೆನ್ಸಿಯನ್ನು ಜಾರಿಗೆ ತರಬೇಕಾಗುತ್ತದೆಸದ್ಯಕ್ಕೆ ಆಯಾ ದೇಶಗಳ ಕರೆನ್ಸಿಯಲ್ಲಿಯೇ ವಾಣಿಜ್ಯ ವಹಿವಾಟು ಮತ್ತು ಹಣದ ಚಲಾವಣೆ ಮಾಡಲು ನಿರ್ಧರಿಸಲಾಗಿದೆ.

ಇದರಲ್ಲಿಯೂ ಸಮಸ್ಯೆಗಳಿವೆಈ ಒಂದು ವಿಚಾರದಲ್ಲಿ ಮಾತ್ರ ಜೋಹಾನ್ಸ್ ಬರ್ಗ್ ಶೃಂಗಸಭೆ ಹಿನ್ನಡೆ ಅನುಭವಿಸಿದೆಆದರೆ ಬ್ರಿಕ್ಸ್ ಸಂಘಟನೆಯ ವಿಸ್ತರಣೆ ವಿಚಾರದಲ್ಲಿ ಮಹತ್ವದ ಹೆಜ್ಜೆ ಇರಿಸಿದೆಬ್ರಿಕ್ಸ್ ಸೇರಲು 40 ದೇಶಗಳು ಮುಂದೆ ಬಂದಿವೆ ಎಂದು ಹೇಳಲಾಗಿದ್ದರೂ ಅಽಕೃತವಾಗಿ ಅರ್ಜಿ ಸಲ್ಲಿಸಿದ ದೇಶಗಳು 19 ಅಥವಾ 20ಫ್ರಾನ್ಸ್ ಅರ್ಜಿಯನ್ನು ತಿರಸ್ಕರಿಸ ಲಾಗಿದೆಅರ್ಜಿ ಹಾಕಿಕೊಂಡ 19 ದೇಶಗಳ ಪೈಕಿ ಬಹುಪಾಲು ದೇಶಗಳನ್ನು ಸಂಘಟನೆಗೆ ಸೇರಿಸಿಕೊಳ್ಳಬಹುದೆಂದು ಚೀನಾ ವಾದಿಸಿತುಬ್ರಿಕ್ಸ್ ವಿಸ್ತರಣೆಗೆ ತನ್ನ ವಿರೋಧ ಇಲ್ಲಆದರೆ ಅಳೆದು ತೂಗಿ ಕೆಲವು ಮಾನದಂಡಗಳನ್ನು ಅನುಸರಿಸಿ ಸದಸ್ಯತ್ವ ನೀಡಬೇಕೆಂಬ ಭಾರತದ ನಿಲುವಿಗೆ ಹೆಚ್ಚು ಬೆಂಬಲ ಸಿಕ್ಕಿದ್ದರಿಂದ ಮೊದಲ ಹಂತದಲ್ಲಿ ಇಥಿಯೋಪಿಯಾಸೌದಿ ಅರೇಬಿಯಾಯುಎಇಈಜಿಪ್ಟ್ಅರ್ಜೆಂಟೀನಾ ಮತ್ತು ಇರಾನ್ ಈ ಆರು ದೇಶಗಳಿಗೆ ಸದಸ್ಯತ್ವ ನೀಡಲು ನಿರ್ಧರಿಸಲಾಗಿದೆಈ ದೇಶಗಳು ಮುಂದಿನ ವರ್ಷದ ಜನವರಿ ಒಂದರಿಂದ ಅಽಕೃತವಾಗಿ ಸದಸ್ಯ ರಾಷ್ಟ್ರ್ರಗಳಾಗಲಿವೆ.

ಈ ೬ ದೇಶಗಳಿಗೆ ಸದಸ್ಯತ್ವ ಸಿಕ್ಕಿದ್ದರಿಂದ ಬ್ರಿಕ್ಸ್ ಎಷ್ಟು ಬಲಿಷ್ಠವಾಯಿತೆಂದರೆ ಅಮೆರಿಕ ನೇತೃತ್ವದ ದೇಶಗಳ ಕೂಟಗಳಿಗೆ ನಡುಕ ಹುಟ್ಟಿದೆ ಎನ್ನುವ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲಜಗತ್ತಿನ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ)ಯಲ್ಲಿ ಶೇ.36 ಭಾಗ ಈಗ ಬ್ರಿಕ್ಸ್ ದೇಶಗಳದ್ದಾಗುತ್ತದೆವಿಶ್ವದ ಒಟ್ಟು ತೈಲ ಉತ್ಪಾದನೆಯಲ್ಲಿ ಶೇ.80 ಭಾಗ ಬ್ರಿಕ್ಸ್ ದೇಶಗಳದ್ದೇ ಆಗುತ್ತದೆವಿಶ್ವದ ಜನಸಂಖ್ಯೆಯಲ್ಲಿ ಶೇ.೪೬ ಭಾಗ ಈ ಬ್ರಿಕ್ಸ್ ವ್ಯಾಪ್ತಿಗೆ ಬರುತ್ತದೆಬಹುಶಃ ಶ್ರೀಮಂತ ದೇಶಗಳ ಸಂಘಟನೆ ಗಳಾದ ಜಿ-7 ಮತ್ತು ಜಿ-20ಗೆ ಸವಾಲೆಸೆಯುವ ಸ್ಥಾನದಲ್ಲಿ ಈಗ ಬ್ರಿಕ್ಸ್ ಇದ್ದಂತಾಗಿದೆಆದರೆ ಈ ಅಂಕಿ ಅಂಶಗಳಿಂದಷ್ಟೇ ಬ್ರಿಕ್ಸ್ ಬಲಿಷ್ಠವಾಗದುಬ್ರಿಕ್ಸ್ ಬ್ಯಾಂಕ್ ಮತ್ತಷ್ಟು ಬಲಿಷ್ಠವಾಗಬೇಕುಈವರೆಗೆ ಬ್ರಿಕ್ಸ್ ಬ್ಯಾಂಕ್ ತನ್ನ ಸದಸ್ಯ ದೇಶಗಳಿಗೆ ಕೊಟ್ಟಿರುವ ಸಾಲದ ನೆರವು ಸುಮಾರು ೩೫ ಬಿಲಿಯನ್ ಡಾಲರ್‌ಗಳಷ್ಟೆವಿಶ್ವಬ್ಯಾಂಕ್ ಒಂದೇ ವರ್ಷದಲ್ಲಿ 95 ಬಿಲಿಯನ್ ಡಾಲರ್ ಸಾಲದ ನೆರವು ನೀಡುತ್ತಿದೆಈ ಪ್ರಮಾಣವನ್ನು ಮೀರಿ ಬ್ರಿಕ್ಸ್ ಬ್ಯಾಂಕ್ ತನ್ನ ಸದಸ್ಯ ದೇಶಗಳಿಗೆ ನೆರವಾಗುವಂತಾಗಬೇಕುಇದುವರೆಗೆ ಈ ಬ್ಯಾಂಕ್‌ಗೆ ಹಣಕಾಸು ಮುಗ್ಗಟ್ಟು ಇತ್ತುಆದರೆ ಬಹುಶಃ ಮುಂದೆ ಹೀಗಾಗಲಾರದುಏಕೆಂದರೆ ಶ್ರೀಮಂತ ದೇಶಗಳಾದ ಸೌದಿ ಅರೇಬಿಯಾಯುಎಇ ಈಗ ಬ್ರಿಕ್ಸ್ ಬ್ಯಾಂಕ್‌ನಲ್ಲಿ ಹಣ ಹೂಡಲಿವೆವಿವಿಧ ದೇಶಗಳ ಅಭಿವೃದ್ಧಿ ಯೋಜನೆಗಳಲ್ಲಿ ಹಣ ಹೂಡಲಿವೆಸಂಘಟನೆ ಎಷ್ಟು ಬಲಿಷ್ಠವಾಗಿ ಬೆಳೆಯುತ್ತದೆಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಹೇಗೆ ಅಭಿವೃದ್ಧಿಗೆ ಗಮನ ನೀಡುತ್ತದೆ ಎನ್ನುವುದರ ಮೇಲೆ ಅದರ ಯಶಸ್ಸು ಅಡಗಿದೆ.

ಶ್ರೀಮಂತ ದೇಶಗಳ ಸಂಘಟನೆಗಳಾದ ಜಿ7ಜಿ-20 ಮತ್ತು ಅವುಗಳ ಆರ್ಥಿಕ ಸಂಸ್ಥೆಗಳಾದ ಐಎಂಎಫ್ ಮತ್ತು ವಿಶ್ವಬ್ಯಾಂಕ್ಬಡದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳ ಪ್ರಗತಿಗೆ ಅಗತ್ಯವಾದಷ್ಟು ನೆರವಾಗುತ್ತಿಲ್ಲ ಎನ್ನುವ ಆರೋಪಗಳಿವೆಬ್ರಿಕ್ಸ್ ಸಂಘಟನೆ ಆರಂಭವಾಗಲು ಇದೂ ಒಂದು ಮುಖ್ಯ ಕಾರಣಈಗ ಬ್ರಿಕ್ಸ್ ಬಲವಾಗಿದ್ದು ಶ್ರೀಮಂತ ದೇಶಗಳ ಸಂಸ್ಥೆಗಳು ಮಾಡಿದ ತಪ್ಪನ್ನೇ ಮಾಡಬಾರದುಯಾವುದೇ ಒಂದು ದೇಶದ ಪ್ರಾಬಲ್ಯಕ್ಕೆ ಇಂಥ ಸಂಸ್ಥೆಗಳು ಒಳಗಾಗದಂತೆ ನೋಡಿಕೊಳ್ಳುವುದು ಬ್ರಿಕ್ಸ್ ನಾಯಕರ ಗುರಿಯಾಗಬೇಕು.

andolanait

Share
Published by
andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

12 mins ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

50 mins ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

1 hour ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

1 hour ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

2 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

2 hours ago