ಎಡಿಟೋರಿಯಲ್

‘ಕಾಡು ಬಾ ಎನ್ನುವ, ನಾಡು ಹೋಗೆನ್ನುವ ಹಕ್ಕಿಪಿಕ್ಕಿಗಳು’

 

    ಸುಡಾನ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ 800ಕ್ಕೂ ಹೆಚ್ಚು ಭಾರತೀಯರು ಸಿಕ್ಕಿ ಹಾಕಿಕೊಂಡಿದ್ದುಅವರಲ್ಲಿ 31 ಜನ ಕರ್ನಾಟಕದ ಹಕ್ಕಿಪಿಕ್ಕಿ ಎಂಬ ಬುಡಕಟ್ಟು ಜನಾಂಗದವರು ಎಂಬ ಸುದ್ದಿ ಆತಂಕಕ್ಕೂಕುತೂಹಲಕ್ಕೂ ಕಾರಣವಾಗಿದೆಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಕರ್ನಾಟಕದ ಒಂದು ಬುಡಕಟ್ಟಿನ ಇಷ್ಟೊಂದು ಜನ ವಿದೇಶಕ್ಕೆ ಏಕೆ ಹೋದರುಹೇಗೆ ಹೋದರು ಮತ್ತು ಅಲ್ಲಿ ಏನು ಮಾಡುತ್ತಿದ್ದಾರೆಂಬುದು ಸಹಜವಾಗಿಯೇ ಹಲವರಲ್ಲಿ ಕುತೂಹಲ ಹುಟ್ಟಿಸಿದೆ.

ಹಕ್ಕಿಪಿಕ್ಕಿ ಜನಾಂಗ ಕಾಡುಗಳಲ್ಲಿ ಹಕ್ಕಿಪ್ರಾಣಿಗಳನ್ನು ಬೇಟೆಯಾಡುವುದುಬೇಟೆಯಾಡಿದ ಪ್ರಾಣಿಪಕ್ಷಿಗಳ ಉಗುರುಹಲ್ಲುಮೂಳೆರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮಾರುವುದುಕಾಡುತ್ಪನ್ನಗಳನ್ನು ಸಂಗ್ರಹಿಸಿ ಮಾರುವುದನ್ನು ತನ್ನ ಜೀವನೋಪಾಯ ಮಾಡಿಕೊಂಡಿತ್ತುಹಕ್ಕಿಪಿಕ್ಕಿಗಳು ಜೀವನೋಪಾಯಕ್ಕೆ ಕಂಡುಕೊಂಡ ಇನ್ನೊಂದು ದಾರಿಯೆಂದರೆ ಗಿಡಮೂಲಿಕೆ ಔಷಧಿಗಳ ಮಾರಾಟಸದ್ಯ ಸುಡಾನಿನಲ್ಲಿ ಸಿಕ್ಕಿಹಾಕಿಕೊಂಡಿರುವ 31 ಜನ ಹಕ್ಕಿಪಿಕ್ಕಿಗಳು ಅಲ್ಲಿಗೆ ಹೋಗಿರುವುದು ಈ ಗಿಡಮೂಲಿಕೆ ಔಷಧಿಗಳನ್ನು ಮಾರಲುಕಡು ಬಡದೇಶಗಳಲ್ಲೊಂದಾದ ಸುಡಾನಿನ ಸಾಮಾನ್ಯ ಜನರಿಗೆ ಆಧುನಿಕ ಔಷಧಿಗಳು ಗಗನ ಕುಸುಮಹಕ್ಕಿಪಿಕ್ಕಿಗಳು ಇದನ್ನೇ ತಮ್ಮ ಗಿಡಮೂಲಿಕೆಗಳ ಮಾರುಕಟ್ಟೆಗೆ ಅವಕಾಶವನ್ನಾಗಿಸಿಕೊಂಡು ಅಲ್ಲಿಗೆ ಹೋದರು. 31 ಜನರಲ್ಲಿ ಗಂಡಸರು ಹೆಂಗಸರು ಸೇರಿದ್ದಾರೆಆದರೆಹೆಚ್ಚೂ ಕಡಿಮೆ ಅನಕ್ಷರಸ್ಥ ಸಮುದಾಯವಾದ ಹಕ್ಕಿಪಿಕ್ಕಿಗಳು ಅಷ್ಟು ದೂರದ ಸುಡಾನಿನ ಈ ವಿಚಾರವನ್ನು ಹೇಗೆ ತಿಳಿದುಕೊಂಡರು ಮತ್ತು ಹೇಗೆ ಆ ದೇಶಕ್ಕೆ ಹೋದರು ಎಂಬುದು ಇನ್ನಷ್ಟೇ ತಿಳಿಯಬೇಕು.

ಕಾಡನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದ ಹಕ್ಕಿಪಿಕ್ಕಿಗಳನ್ನು 1950-60ರ ದಶಕದಲ್ಲಿ ಜಾರಿಗೆ ಬಂದ ಬೇಟೆಅರಣ್ಯಗಳಿಗೆ ಸಂಬಂಧಿತ ಕಾನೂನುಗಳು ಕಾಡಿನಿಂದ ನಗರಪ್ರದೇಶಗಳಿಗೆ ಒಕ್ಕಲೆಬ್ಬಿಸಿದವುಕಾಡಿನಿಂದ ಹೊರಬಂದ ಹಕ್ಕಿಪಿಕ್ಕಿಗಳು ಬೆಂಗಳೂರುಮೈಸೂರುಮಂಡ್ಯಹಾಸನರಾಮನಗರಶಿವಮೊಗ್ಗಚಿಕ್ಕಮಗಳೂರುತುಮಕೂರುದೊಡ್ಡಬಳ್ಳಾಪುರ ಮತ್ತು ತಮಿಳುನಾಡು ಮತ್ತು ಆಂಧ್ರಪ್ರದೇಶ ಗಡಿಗಳ ತನಕ ಚದುರಿ ಹೋಗಿದ್ದಾರೆಹಕ್ಕಿಪಿಕ್ಕಿಗಳು ಹೀಗೆ ನೆಲೆ ಕಂಡುಕೊಂಡ ಹೊಸ ಪ್ರದೇಶಗಳಲ್ಲಿ ಭದ್ರಾಪುರ ಮುಖ್ಯವಾದುದುಕರ್ನಾಟಕದಲ್ಲಿ ಇವರ ಸಂಖ್ಯೆ ಸುಮಾರು 15,000 ಎನ್ನಲಾಗುತ್ತದೆಸಂಖ್ಯೆಯ ದೃಷ್ಟಿಯಲ್ಲಿ ಹಕ್ಕಿಪಿಕ್ಕಿಗಳು ಅಳಿವಿನ ಅಂಚಿನಲ್ಲಿರುವ ಜನಾಂಗವಾಗಿದ್ದಾರೆಅರಣ್ಯಗಳಿಂದ ಹೊರಹಾಕಲ್ಪಟ್ಟ ಹಕ್ಕಿಪಿಕ್ಕಿಗಳು ಅತ್ತ ಕಾಡಿನ ಆಸರೆ ತಪ್ಪಿ ಇತ್ತ ನಗರ ವಾತಾವರಣಕ್ಕೆ ಹೊಂದಿಕೊಳ್ಳಲಾರದೆ ಅತಂತ್ರರಾದರುಸರ್ಕಾರ ಅವರಿಗೆ ಜೀವಿಸಲು ಪರ್ಯಾಯ ಜಮೀನು ನೀಡಿದರೂ ಜೀವನೋಪಾಯಕ್ಕೆ ಯಾವುದೇ ದಾರಿಯಿಲ್ಲದ ಕಾರಣ ಅನೇಕ ಹಕ್ಕಿಪಿಕ್ಕಿಗಳು ಅನಿವಾರ್ಯವಾಗಿ ಭಿಕ್ಷಾಟನೆಗೆ ಇಳಿದರು.

ಹಕ್ಕಿಪಿಕ್ಕಿಗಳು ಮೂಲತಃ ಗುಜರಾತಿನ ಒಂದು ಯೋಧ ಜನಾಂಗದವರೆಂದು ಹೇಳಲಾಗುತ್ತದೆಪ್ರತಾಪ ಸಿಂಹ ರಾಣಾ ವಂಶಿಗರು ಎಂದು ಹೇಳಿಕೊಳ್ಳುವ ಹಕ್ಕಿಪಿಕ್ಕಿ ಜನಾಂಗದವರು ಮೊಘಲರ ಆಳ್ವಿಕೆ ಕಾಲದಲ್ಲಿ ದಕ್ಷಿಣ ಭಾರತಕ್ಕೆ ವಲಸೆ ಬಂದುಇಲ್ಲಿನ ಕಾಡುಗಳಲ್ಲಿ ನೆಲೆ ಕಂಡುಕೊಂಡಿದ್ದರು ಎನ್ನುತ್ತಾರೆಗುಜರಾತಲ್ಲಿ ಇವರನ್ನು ವಾಗ್ರಿತಮಿಳುನಾಡಿನಲ್ಲಿ ನರಿ ಕುರವರ್ ಎಂದು ಕರೆಯುತ್ತಾರೆಸೈನಿಕ ವೃತ್ತಿ ಕಳೆದುಕೊಂಡ ನಂತರ ಹಕ್ಕಿಪಿಕ್ಕಿಗಳು ಕಾಡುಗಳಲ್ಲಿ ಹಕ್ಕಿಪ್ರಾಣಿಗಳ ಬೇಟೆಬೇಟೆಯಾಡಿದ ಪ್ರಾಣಿಪಕ್ಷಿಗಳ ಉಗುರುಹಲ್ಲುಮೂಳೆರೆಕ್ಕೆಪುಕ್ಕಗಳಿಂದ ಮಾಡಿದ ಅಲಂಕಾರಿಕ ವಸ್ತುಗಳ ಮಾರಾಟಕಾಡುತ್ಪನ್ನಗಳ ಮಾರಾಟ ಮತ್ತು ಗಿಡಮೂಲಿಕೆ ಔಷಧಿಗಳ ಮಾರಾಟದಿಂದ ಜೀವನೋಪಾಯ ನಡೆಸುತ್ತಿದ್ದರುಆದರೆಅರಣ್ಯ ಕಾನೂನಿನ ಹೆಸರಲ್ಲಿ ಸರ್ಕಾರಗಳು ಇವರನ್ನು ಬಲವಂತವಾಗಿ ಕಾಡಿನಿಂದ ಒಕ್ಕಲೆಬ್ಬಿಸಿನಗರ ಪ್ರದೇಶಗಳಲ್ಲಿ ಭಿಕ್ಷಾಟನೆಯ ಮೂಲಕ ಜೀವಿಸಬೇಕಾದ ಹೀನಾಯ ಸ್ಥಿತಿಗೆ ತಳ್ಳಿದವುಇದರ ಜೊತೆಯಲ್ಲಿಕಾಡುಗಳಲ್ಲಿ ಹಕ್ಕಿಗಳಂತೆ ಸ್ವಚ್ಛಂದವಾಗಿ ಬದುಕಿದ್ದ ಹಕ್ಕಿಪಿಕ್ಕಿಗಳ ಜೀವನಕ್ರಮವೂ ಸಂಪೂರ್ಣವಾಗಿ ನೆಲೆ ತಪ್ಪಿತು.

ಗುಜರಾತಿಯಂತೆ ಕೇಳಿಸುವ ವಾಗ್ರಿಬೋಲಿ ಎಂಬುದು ಹಕ್ಕಿಪಿಕ್ಕಿಗಳ ಮೂಲ ಭಾಷೆಇದರ ಜೊತೆಯಲ್ಲಿ ಅವರು ಕನ್ನಡತೆಲುಗುತಮಿಳುಮಲಯಾಳಂ ಮೊದಲಾಗಿ 14 ಭಾಷೆಗಳನ್ನು ಆಡಬಲ್ಲರುಇಷ್ಟೊಂದು ಭಾಷೆಗಳನ್ನು ಮಾತಾಡುವುದರಿಂದ ಸಹಜವಾಗೇ ಇವರ ಭಾಷೆ ಹತ್ತಾರು ಭಾಷೆಗಳ ಒಂದು ಮಿಶ್ರಣದಂತೆ ಕೇಳಿಸುತ್ತದೆಅವರ ಸಾಮಾಜಿಕ ರೀತಿರಿವಾಜುಗಳೂ ಭಿನ್ನಅವರಲ್ಲಿ ವರದಕ್ಷಿಣೆ ಬದಲಿಗೆ ಮದುವೆ ಸಮಯದಲ್ಲಿ ಗಂಡೇ ಹೆಣ್ಣಿಗೆ ವಧುದಕ್ಷಿಣೆ ಕೊಡಬೇಕುಮದುವೆ ನಡೆಯುವುದು ರಾತ್ರಿ ಹೊತ್ತಲ್ಲಿವಿವಾಹ ವಿಚ್ಛೇದನೆ ಸಮಯದಲ್ಲಿ ಹೆಂಡತಿಯು ಮದುವೆ ಸಮಯದಲ್ಲಿ ತನಗೆ ಕೊಡಲ್ಪಟ್ಟ ವಧುದಕ್ಷಿಣೆಯಲ್ಲಿ ಅರ್ಧಾಂಶವನ್ನು ಗಂಡಿಗೆ ಹಿಂತಿರುಗಿಸಬೇಕು.

ಇವೆಲ್ಲಕ್ಕೂ ಹೆಚ್ಚು ಸ್ವಾರಸ್ಯಕರವಾದುದು ಹಕ್ಕಿಪಿಕ್ಕಿಗಳ ಹೆಸರುಗಳುಬಸ್ಸುಟ್ರೈನ್ವಿಮಾನಕಾಂಪೌಂಡ್ಆಧಾರ್ ಕಾರ್ಡ್ಪಾಸ್ ಪೋರ್ಟ್ಪಿಸ್ತೂಲ್ವೋಟರ್ ಐಡಿ ಮೊದಲಾದವು ವಸ್ತುಗಳ ಹೆಸರು ಅನ್ನುವುದು ಎಲ್ಲರಿಗೂ ತಿಳಿದ ವಿಚಾರಹೈಕೋರ್ಟ್ಸುಪ್ರೀಂ ಕೋರ್ಟ್ಹೋಟೆಲ್ ಮೊದಲಾದವು ಕಟ್ಟಡಗಳ ಹೆಸರೆಂದು ಯಾರೂ ಹೇಳಬಹುದುಮೈಸೂರ್ ಪಾಕ್ಕಾಫಿಗ್ಲುಕೋಸ್ ಮೊದಲಾದವು ತಿಂಡಿಪಾನೀಯಗಳ ಹೆಸರೆನ್ನುವುದು ಯಾರಿಗೆ ತಿಳಿಯದುಹಾಗೆಯೇ ಕಾಂಗ್ರೆಸ್ಜನತಾಬಿಜೆಪಿ ಅನ್ನುವುದು ರಾಜಕೀಯ ಪಕ್ಷಗಳ ಹೆಸರೆನ್ನುವುದು ಮಕ್ಕಳಿಗೂ ಗೊತ್ತಿರುವ ವಿಚಾರಆದರೆಇವುಗಳೆಲ್ಲವೂ ಹಕ್ಕಿಪಿಕ್ಕಿ ವ್ಯಕ್ತಿಗಳ ಹೆಸರುಗಳು ಅಂದರೆ ನಂಬಲಾಗದಿದ್ದರೂ ನಂಬಲೇಬೇಕು!

ಹಕ್ಕಿಪಿಕ್ಕಿಗಳ ಹೆಸರುಗಳು ಮೇಲುನೋಟಕ್ಕೆ ತಮಾಷೆಯಾಗಿ ಕಂಡರೂ ವಾಸ್ತವದಲ್ಲಿ ಅವುಗಳು ಈ ಜನಾಂಗದ ದುರಂತಮಯ ಬದುಕಿನ ಸ್ಥಿತಿಯನ್ನು ಹೇಳುತ್ತವೆಕಾಡುಗಳಲ್ಲಿ ವಾಸಿಸುತ್ತಿದ್ದಾಗ ಹಕ್ಕಿಪಿಕ್ಕಿಗಳು ತಮ್ಮ ಮಕ್ಕಳಿಗೆ ತಾವು ಪೂಜಿಸುವ ಬೆಟ್ಟಗುಡ್ಡನದಿತೊರೆಗಳ ಹೆಸರಿಡುತ್ತಿದ್ದರುಕಾಡಿನಿಂದ ಹೊರದಬ್ಬಲ್ಪಟ್ಟು ತಮ್ಮದಲ್ಲದ ನೆಲೆಗಳಲ್ಲಿ ವಾಸಿಸಲು ಶುರುಮಾಡಿದಂದಿನಿಂದ ಅವರ ಸಾಮಾನ್ಯ ಜೀವನದೊಂದಿಗೆ ಅವರು ತಮ್ಮ ಮಕ್ಕಳಿಗೆ ಹೆಸರಿಡುವ ಕ್ರಮವೂ ಬದಲಾಯಿತುನದಿ ತೊರೆ ಬೆಟ್ಟಗುಡ್ಡಗಳ ಬದಲಿಗೆ ನಗರ ಪ್ರದೇಶಗಳಲ್ಲಿ ಕಾಣಸಿಗುವ ವಸ್ತುಗಳುಸಿನಿಮಾಗಳಲ್ಲಿ ಕಾಣಿಸುವ ಹೀರೋ ಹೀರೋಯಿನ್‌ಗಳುಚುನಾವಣೆ ಸಮಯದಲ್ಲಿ ಮನೆ ಮನೆಗೆ ಓಡಾಡುವ ರಾಜಕಾರಣಿಗಳು ಮೊದಲಾದವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಇಡಲು ಶುರು ಮಾಡಿದರುನಗರವಾಸಿಗಳ ಬಾಯಲ್ಲಿ ಆಗಾಗ್ಗೆ ಉಚ್ಚರಿಸಲ್ಪಡುವ ಗೂಗಲ್ಇಂಗ್ಲಿಷ್ಒನ್ ಬೈ ಟೂ ಮೊದಲಾದ ಶಬ್ದಗಳೂ ಅವರ ಮಕ್ಕಳ ಹೆಸರಾದವುಶಾರುಖ್ ಖಾನ್ಸೋನಿಯಾ ಗಾಂಧಿಅಮಿತಾಭ್ ಬಚ್ಚನ್ಅನಿಲ್ ಕಪೂರ್ಜಿತೇಂದ್ರಎಲಿಜಬೆತ್ ಮೊದಲಾದ ಹೆಸರಿನ ಹಕ್ಕಿಪಿಕ್ಕಿಗಳೂ ಇದ್ದಾರೆಕಲೆಕ್ಟರ್ಮಿಲಿಟರಿಡಾಲರ್ಡಿವಿಸನ್ಬ್ರಿಟಿಷ್ಅಮೆರಿಕ ಎಂದು ಕರೆಯಲ್ಪಡುವ ಹಕ್ಕಿಪಿಕ್ಕಿಗಳೂ ಇದ್ದಾರೆ.

 

ಹೆಸರಿನಲ್ಲೇನಿದೆ?‘ ಎಂದು ಕೇಳಿದ್ದ ಶೇಕ್ಸ್‌ಪಿಯರ್ ಈಗೇನಾದರೂ ಇದ್ದು ಈ ಹಕ್ಕಿಪಿಕ್ಕಿಗಳನ್ನು ನೋಡಿದ್ದರೆ ಏನನ್ನುತ್ತಿದ್ದನೋಏನೇ ಇರಲಿದೂರದ ಯುದ್ಧಗ್ರಸ್ತ ಸುಡಾನಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಈ ಬಡಪಾಯಿಗಳು ಸುರಕ್ಷಿತವಾಗಿ ವಾಪಸ್ ಬರುವಂತಾಗಲಿ ಎಂದು ಹಾರೈಸೋಣಕಾಡುಗಳಿಂದ ಹಕ್ಕಿಪಿಕ್ಕಿಗಳನ್ನು ಹೊರ ಹಾಕಿದ ಸರ್ಕಾರ ಇನ್ನಾದರೂ ನಾಡಿನಲ್ಲಿ ಇವರು ಇತರರಂತೆ ಗೌರವಯುತ ಬದುಕು ನಡೆಸಲು ಬೇಕಾದುದನ್ನು ಒದಗಿಸಲಿ ಎಂದು ಒತ್ತಾಯಿಸೋಣ.

andolanait

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

5 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

6 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

7 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

7 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

13 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

13 hours ago