ಎಡಿಟೋರಿಯಲ್

ಕರ ವಿಧಿಸುವ ಮುನ್ನ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲಿ

ಕೆ.ಬಿ.ರಮೇಶನಾಯಕ

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛತಾ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಹೆಮ್ಮೆಯಿಂದ ಬೀಗಿದ್ದು ಉಂಟು. ಆದರೂ, ಘನತ್ಯಾಜ್ಯ ನಿರ್ವಹಣೆಯಲ್ಲಿ ಮತ್ತಷ್ಟು ವೈಜ್ಞಾನಿಕ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಲ್ಲದೆ, ಎಲ್ಲೆಂದರಲ್ಲಿ ಘನತ್ಯಾಜ್ಯ ಬೀಸಾಡುವವರಿಗೆ ದಂಡ ವಿಧಿಸುವ ಮುನ್ನ ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಬೇಕಾಗಿದೆ. ಒಂದು ಕಾಲದಲ್ಲಿ ತ್ಯಾಜ್ಯಗಳಿಂದ ಗಬ್ಬೆದ್ದು ನಾರುತ್ತಿದ್ದ ವಾರಣಾಸಿ ಇಂದು ಉತ್ತರಪ್ರದೇಶದಲ್ಲೇ ಮಾದರಿ ನಗರವೆಂದು ಪ್ರಸಿದ್ಧಿ ಪಡೆದಿರುವುದು ಗಮನಾರ್ಹ.

ಈ ನಿಟ್ಟಿನಲ್ಲಿ ಮೈಸೂರು ಮತ್ತೊಂದು ಪ್ರಯೋಗ ಮಾಡಬೇಕೇ ಹೊರತು ಸಾರ್ವಜನಿಕರಿಗೆ ದಂಡ ವಿಧಿಸು ವುದರಿಂದ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಹಲವು ಧರ್ಮ, ಜಾತಿ, ಭಾಷಿಕರಿಂದ ತುಂಬಿರುವ ಮೈಸೂರಿನ ಬಹುತೇಕ ಪ್ರದೇಶಗಳು ಇಂದಿಗೂ ಹಳ್ಳಿಯ ವಾತಾವರಣ ದಂತೆಯೇ ಇವೆ. ಮೊದಲು ಒಂದಿಷ್ಟು ತಿಂಗಳ ಕಾಲ ಸ್ವಚ್ಛತೆಯ ಪಾಠ ಮಾಡಿದರೆ ಮಾತ್ರ ಮೈಸೂರು ನಗರಪಾಲಿಕೆ ಕಂಡಿರುವ ಕನಸು ನನಸಾಗಲು ಸಾಧ್ಯವಿದೆ.

ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಂದಾಜು ೩ ಲಕ್ಷ ಟನ್ ತ್ಯಾಜ್ಯ ಕೊಳೆಯುತ್ತಿದೆ. ಪ್ರತಿನಿತ್ಯ ಮೈಸೂರಿನಲ್ಲಿ 550ರಿಂದ 600ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದ್ದರೆ, ಅದರಿಂದ 200 ಟನ್‌ಗಳಷ್ಟು ಮಾತ್ರ ಗೊಬ್ಬರ ತಯಾರಿಸಲಾಗುತ್ತಿದೆ. ಉಳಿದಂತೆ ಪ್ರತಿನಿತ್ಯ 400 ಟನ್‌ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದರ ರಾಶಿ ಬೆಟ್ಟದಂತಾಗಿದೆ. ಅದರಿಂದ ಹತ್ತಿರದ ಬಡಾವಣೆಗಳ ಜನರು ದುರ್ವಾಸನೆ ತಾಳಲಾರದೆ ಅಸ್ತಮಾ, ಕೆಮ್ಮು, ಜ್ವರ ಮೊದಲಾದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಹಿಡಿಯಬೇಕು ಎಂಬ ಒತ್ತಡ ಬಂದಾಗಲೆಲ್ಲಾ ಈ ಕೆಟ್ಟವಾಸನೆಯನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಇದರ ನಡುವೆ ಮೈಸೂರಿನ ಹಳೆ ಕೆಸರೆ ಮತ್ತು ರಾಯನಕೆರೆಯ ಬಳಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಪ್ರಾರಂಭಿಸಲು ಹಲವಾರು ವರ್ಷಗಳಿಂದ ನಡೆಸಿದ್ದ ಪ್ರಯತ್ನ ಈಗ ಕೈಗೂಡುವ ಲಕ್ಷಣಗಳಿವೆ.

ಹಳೆ ಕೆಸರೆಯಲ್ಲಿ ಶೀಘ್ರದಲ್ಲೇ 250 ಟನ್ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕ ಆರಂಭ ಆಗಲಿ ರುವುದು ಸಮಾಧಾನ ಮೂಡಿಸಿದೆ. ಮುಂದಿನ ದಿನಗಳಲ್ಲಿ ರಾಯನಕೆರೆಯಲ್ಲಿ ಮತ್ತೊಂದು ಘಟಕ ಆರಂಭವಾದರೆ ವಿದ್ಯಾರಣ್ಯಪುರಂನಲ್ಲಿರುವ ಘಟಕದ ಮೇಲಿನ ಒತ್ತಡ ಕಡಿಮೆಯಾಗುವುದು ಗ್ಯಾರಂಟಿಯಾಗಿದೆ. ಈಗ ಮೈಸೂರು ಮಹಾನಗರಪಾಲಿಕೆಯು ಎಲ್ಲೆಂದರಲ್ಲಿ ಕಸ ಬೀಸಾಡುವುದಕ್ಕೆ ಕಡಿವಾಣ ಹಾಕುವ ಜತೆಗೆ, ಘನತ್ಯಾಜ್ಯ ನಿರ್ವಹಣೆಗೆ ಸಹಕರಿಸದೆ ಇರುವ ಸಾರ್ವಜನಿಕರು, ಉದ್ದಿಮೆದಾರರಿಗೆ ದಂಡ ವಿಽಸುವ ಕಾರ್ಯಕ್ಕೆ ಮುಂದಾಗಿದೆ.

ಪ್ಲಾಸ್ಟಿಕ್ ಮೇಲೆ ನಿಗಾ: ಯಾವುದೇ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ -ಕ್ಸ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್, ಥರ್ಮಾಕೋಲ್, ಪ್ಲಾಸ್ಟಿಕ್ ಮೈಕ್ರೋಬೀಡ್‌ನಿಂದ ತಯಾರಾಗುವ ಇತರೆ ವಸ್ತುಗಳನ್ನು ತಯಾರಿಸುವ, ಸರಬರಾಜು, ಸಂಗ್ರಹಣೆ, ಮಾರಾಟ, ವಿತರಣೆ ಮಾಡುವವರಿಗೆ ದಂಡ ಹಾಕುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಹಲವಾರು ವರ್ಷಗಳಿಂದ ಹಸಿ-ಒಣಕಸವನ್ನು ಬೇರ್ಪಡಿಸಿ ಪೌರಕಾರ್ಮಿಕರಿಗೆ ನೀಡುವಂತೆ ಪಾಲಿಕೆ ಆಗಿಂದಾಗ್ಗೆ ಕರಪತ್ರಗಳನ್ನು ಹಂಚಿ ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡಿದರೂ, ಇಂದಿಗೂ ಅನೇಕ ಬಡಾವಣೆಗಳಲ್ಲಿ ಜನರು ಎಲ್ಲ ರೀತಿಯ ಕಸವನ್ನು ಒಟ್ಟಿಗೆ ತಂದು ಹಾಕುತ್ತಿರುವುದು ಸಾರ್ವಜನಿಕರ ಬೇಜವಾಬ್ದಾರಿತನವಾಗಿದೆ.

ಅದೇ ರೀತಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಿ ಬಟ್ಟೆ ಬ್ಯಾಗ್‌ಗಳನ್ನು ಬಳಸುವಂತೆ ತಿಳಿಹೇಳಿದರೂ ಶೇ.೫೦ರಷ್ಟು ಮಂದಿ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವಾಗ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇಂತಹದರಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವ ಪ್ರಯೋಗವನ್ನು ಪಾಲಿಕೆ ಮಾಡಿದರೆ ಅದು ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ, ನಗರಪಾಲಿಕೆಯು ದಂಡ ವಿಧಿಸುವ ಮುನ್ನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಚಿಂತನೆ, ಕಾರ್ಯಕ್ರಮ ರೂಪಿಸುವುದು ಒಳಿತಾಗಿದೆ.

andolanait

Recent Posts

ಮಂಡ್ಯ ನೆಲದಲ್ಲಿ ಕನ್ನಡ ಕಹಳೆ

ಮಂಡ್ಯ: ಸಕ್ಕರೆ ನಗರಿಯಲ್ಲಿ ಶುಕ್ರವಾರ ಆಕ್ಷರಶಃ ದೊಡ್ಡ ಜಾತ್ರೆಯ ಸೊಬಗು ಮನೆ ಮಾಡಿತ್ತು. ಎಲ್ಲಿ ನೋಡಿದರಲ್ಲಿ ಜನವೋ ಜನ; ಅದು…

50 seconds ago

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

10 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago