ಎಡಿಟೋರಿಯಲ್

ಭಿಲಾರ್ ಎಂಬ ಭಾರತದ ಪ್ರಪ್ರಥಮ ‘ಪುಸ್ತಕದ ಊರು!

ಇಂದಿನ ಡಿಜಿಟಲ್ ಯುಗದಲ್ಲಿ ಜನರಲ್ಲಿ ಪುಸ್ತಕಪತ್ರಿಕೆ ಓದುವ ಅಭ್ಯಾಸ ತೀವ್ರವಾಗಿ ಕ್ಷೀಣಿಸುತ್ತಿರುವುದು ಎಲ್ಲೆಡೆ ಕಂಡು ಬರುವ ಒಂದು ವಿದ್ಯಮಾನಹಿಂದೆನಗರ ಹಳ್ಳಿಗಳೆಂಬ ಭೇದವಿಲ್ಲದೆ ಸರ್ಕಾರಿ ಮತ್ತು ಖಾಸಗಿ ಗ್ರಂಥಾಲಯಗಳು ಕಾಣಬರುತ್ತಿದ್ದವುಕುಗ್ರಾಮಗಳ ಪಂಚಾಯಿತಿ ಕಚೇರಿಗಳಲ್ಲೂ ಸಾರ್ವಜನಿಕ ಗ್ರಂಥಾಲಯಗಳು ಇರುತ್ತಿದ್ದವು. 2011ರ ಜನಗಣತಿಯ ಪ್ರಕಾರ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 70,817 ಮತ್ತು ನಗರಪ್ರದೇಶಗಳಲ್ಲಿ 4,580 ಸರ್ಕಾರಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದವುಈಗ ಹುಡುಕುತ್ತ ಹೋದರೆ ಅಲ್ಲೊಂದು ಇಲ್ಲೊಂದು ಸರ್ಕಾರಿ ಗ್ರಂಥಾಲಯಗಳು ತೆರೆದಿರುವುದನ್ನು ಹೊರತುಪಡಿಸಿದರೆ ಖಾಸಗಿ ಗ್ರಂಥಾಲಯಗಳು ಕಾಣಸಿಗುವುದು ತೀರಾ ಅಪರೂಪಅಂತಹದರಲ್ಲಿಮಹಾರಾಷ್ಟ್ರದ ಒಂದು ಹಳ್ಳಿಯ ಮನೆಮನೆಗಳಲ್ಲಿಯೂ ಗ್ರಂಥಾಲಯಗಳಿವೆ ಎಂದರೆ ನಂಬಲಾದೀತೇಮಹಾರಾಷ್ಟ್ರದ ಸತಾರಾ ಜಿಲ್ಲೆಯ ಭಿಲಾರ್ ಎಂಬ ಪುಟ್ಟ ಹಳ್ಳಿಗೆ ಬಂದರೆ ಇದನ್ನು ಕಣ್ಣಾರೆ ಕಂಡು ನಂಬಬಹುದುಈ ಗ್ರಂಥಾಲಯಗಳ ಕಾರಣಕ್ಕಾಗಿಯೇ ಭಿಲಾರನ್ನು ಭಾರತದ ಪ್ರಪ್ರಥಮ ‘ಪುಸ್ತಕದ ಊರು (ಪುಸ್ತಕಾಂಚೆ ಗಾಂವ್)’ ಎಂದು ಕರೆಯುತ್ತಾರೆ.

ಮಹಾಬಲೇಶ್ವರ ಮತ್ತು ಪಂಚಗನಿ ಮಹಾರಾಷ್ಟ್ರದ ಎರಡು ಪ್ರಮುಖ ಹಿಲ್ ಸ್ಟೇಷನ್‌ಗಳುಸತಾರಾ ಜಿಲ್ಲೆಯಲ್ಲಿರುವ ಈ ತಂಪು ಪ್ರದೇಶಗಳಿಗೆ ವರ್ಷವಿಡೀ ಪ್ರವಾಸಿಗರು ಬರುತ್ತಾರೆಈ ಎರಡೂ ಹಿಲ್ ಸ್ಟೇಷನ್‌ಗಳ ನಡುವೆ ಇರುವುದೇ ಭಿಲಾರ್ಭಿಲಾರ್ ಪ್ರೇಕ್ಷಣೀಯ ತಾಣವೆಂಬುದರ ಜೊತೆಗೆ ಸ್ಟ್ರಾಬೆರಿ ಹಣ್ಣಿನ ಬೆಳೆಗೂ ಹೆಸರುವಾಸಿಯಾಗಿದೆಬೆಂಗಳೂರಲ್ಲಿ ಕಡ್ಲೆಕಾಯಿ ಪರಿಷೆ ನಡೆಯುವಂತೆ ಇಲ್ಲಿ ಸ್ಟ್ರಾಬೆರಿ ಮೇಳ ನಡೆಯುತ್ತದೆಸುಮಾರು 3000 ಜನ ಸಂಖ್ಯೆಯ ಈ ಊರಲ್ಲಿ ಈಗ 35ಕ್ಕೂ ಹೆಚ್ಚು ಮನೆಗಳು ಸಾರ್ವಜನಿಕ ಗ್ರಂಥಾಲಯಗಳಾಗಿ ಪ್ರವಾಸಿಗರಿಗೆ ಆಕರ್ಷಣೆಯ ಜೊತೆಯಲ್ಲಿ ಕುತೂಹಲದ ತಾಣವಾಗಿಯೂ ಮಾರ್ಪಟ್ಟಿವೆ.

ಪುಸ್ತಕದ ಊರು’ ಎಂಬುದು ಮೂಲತಃ ಲಂಡನ್ನಿನ ‘ಹೇಆನ್ವೈ’ ಎಂಬ ಒಂದು ಗ್ರಾಮದ ಮಾದರಿಅಲ್ಲಿ ಕಳೆದ 36 ವರ್ಷಗಳಿಂದ ಪ್ರತಿವರ್ಷ ಮೇ 25ರಂದು ನಡೆಯುವ 10 ದಿನಗಳ ಸಾಹಿತ್ಯ ಜಾತ್ರೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆಮಹಾರಾಷ್ಟ್ರದ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯಾಗಿದ್ದ ವಿನೋದ್ ತಾವ್ಡೆ ಅನ್ನುವವರು ಲಂಡನ್ನಿಗೆ ಭೇಟಿ ಕೊಟ್ಟಾಗ, –ಹೇಆನ್ವೈ ಗ್ರಾಮದಲ್ಲಿನ ಪ್ರತಿ ಮನೆಯಲ್ಲೂ ಸಾರ್ವಜನಿಕ ಗ್ರಂಥಾಲಯಗಳಿರುವುದನ್ನು ಕಂಡುಇದೇ ಮಾದರಿಯನ್ನು ಮಹಾರಾಷ್ಟ್ರದಲ್ಲೇಕೆ ರೂಪಿಸಲು ಪ್ರಯತ್ನಿಸಬಾರದು ಎಂದು ಯೋಚಿಸಿಸರ್ಕಾರ ಮತ್ತು ಸ್ಥಳೀಯರ ಸಹಕಾರ ಪಡೆದು ಭಿಲಾರ್‌ನಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಿದರು. 2017ರ ಮೇ ತಿಂಗಳಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನಾವಿಸ್ ಈ ಯೋಜನೆಯನ್ನು ಉದ್ಘಾಟಿಸಿದರು.

ಪ್ರಾರಂಭದಲ್ಲಿ ಭಿಲಾರಿನ ಮನೆಗಳುಸಾರ್ವಜನಿಕ ಸ್ಥಳಗಳುಮಂದಿರಗಳುಶಾಲೆಗಳು ಮೊದಲಾಗಿ 25 ಸ್ಥಳಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಯಿತುಮುಂದೆ ಈ ಸಂಖ್ಯೆ 35ಕ್ಕೆ ಏರಿತುಇನ್ನೂ ಹಲವು ಮನೆಗಳು ವೈಟಿಂಗ್ ಲಿಸ್ಟ್‌ನಲ್ಲಿದ್ದವುಸರ್ಕಾರ ಸ್ಥಳೀಯಾಡಳಿತದ ಮೂಲಕ ಪುಸ್ತಕದ ಮನೆಗಳಿಗೆ ಬೇಕಾಗುವ ಪುಸ್ತಕಕುರ್ಚಿಮೇಜುಕಪಾಟು ಮೊದಲಾದವುಗಳನ್ನು ಒದಗಿಸುತ್ತದೆಆಸಕ್ತ ಸ್ಥಳೀಯರು ತಮ್ಮ ಮನೆಯ ಯಾವುದಾದರೂ ಮೂಲೆವರಾಂಡಕೋಣೆ ಅಥವಾ ಮಾಳಿಗೆಯನ್ನು ಬಿಟ್ಟು ಕೊಟ್ಟುಗ್ರಂಥಾಲಯವನ್ನು ನಿರ್ಮಿಸಲಾಗುತ್ತದೆಈ 35 ಪುಸ್ತಕದ ಮನೆಗಳಲ್ಲಿ ಕನಿಷ್ಠವೆಂದರೆ 35 ಸಾವಿರ ಪುಸ್ತಗಳಿವೆಇವೆಲ್ಲವನ್ನೂ ತಜ್ಞರು ವಿವಿಧ ವಿಷಯಗಳನುಸಾರವಾಗಿ ವಿಭಾಗಿಸಿದ್ದುಪ್ರತಿಯೊಂದು ಪುಸ್ತಕದ ಮನೆಯಲ್ಲೂ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ಇವೆಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಬಗ್ಗೆ ಪುಸ್ತಕಗಳು ಲಭ್ಯ ಅನ್ನುವುದನ್ನು ಗೋಡೆ ಚಿತ್ರಫಲಕಗಳಲ್ಲಿ ಸುಂದರವಾಗಿ ಬರೆಯಲಾಗಿದೆಹಾಗೆಯೇಭಿಲಾರೆಯ ಯಾವ ಪ್ರದೇಶದಲ್ಲಿ ಪುಸ್ತಕದ ಮನೆಗಳಿವೆ ಮತ್ತು ಯಾವ ಪುಸ್ತಕದ ಮನೆಯಲ್ಲಿ ಯಾವ ವಿಷಯದ ಪುಸ್ತಕಗಳು ಲಭ್ಯವಿವೆ ಎಂದು ತೋರಿಸುವ ನಕ್ಷೆಯೂ ಇದೆ.

ಪ್ರವಾಸಿಗರು ದಿನದ ಯಾವ ಹೊತ್ತಿನಲ್ಲಾದರೂ ಈ ಪುಸ್ತಕದ ಮನೆಗಳಿಗೆ ಭೇಟಿ ಕೊಟ್ಟುಉಚಿತವಾಗಿ ತಮ್ಮ ಇಷ್ಟದ ಪುಸ್ತಕಗಳನ್ನು ಓದಬಹುದುಪುಸ್ತಕದ ಮನೆಯವರು ಇಂತಹ ಓದುಗಪ್ರವಾಸಿಗರನ್ನು ಆದರದಿಂದ ಬರ ಮಾಡಿಕೊಂಡು ಅದು ಅವರ ಮನೆಯೇ ಎಂಬಂತಹ ವಾತಾವರಣವನ್ನು ನಿರ್ಮಿಸಿಕೊಡುತ್ತಾರೆಪುಸ್ತಕದ ಮನೆಗಳನ್ನು ಹುಡುಕಿಕೊಂಡು ಬರುವ ಪ್ರವಾಸಿಗರಿಗೆ ಊರವರು ಸಂತೋಷದಿಂದ ದಾರಿ ತೋರಿಸುತ್ತಾರೆಮಹಾಬಲೇಶ್ವರ ಮತ್ತು ಪಂಚಗನಿ ಎರಡೂ ಅತ್ಯಂತ ಹೆಚ್ಚು ಪ್ರಮಾಣದ ಮಳೆ ಬೀಳುವ ಪ್ರದೇಶಗಳಾದುದರಿಂದ ಮಳೆಗಾಲದ ಹೊರತಾಗಿ ಉಳಿದ ಸಮಯದಲ್ಲಿ ತೆರೆದ ಜಾಗದಲ್ಲಿ ಕುಳಿತುಸುತ್ತಲ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತ ಪುಸ್ತಕಗಳನ್ನು ಓದಬಹುದುಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅತೀ ಹೆಚ್ಚು ಸಂಖ್ಯೆಯ ಪ್ರವಾಸಿಗರು ಬರುತ್ತಾರೆಪುಸ್ತಕದ ಮನೆಯವರು ಪ್ರವಾಸಿಗರಿಂದ ತಮ್ಮ ದಿನನಿತ್ಯದ ಬದುಕಿಗೆ ಮತ್ತು ತಮ್ಮ ದಿನನಿತ್ಯದ ಕೆಲಸಗಳಿಂದ ಪ್ರವಾಸಿಗರಿಗೆ ಯಾವುದೇ ಅಡಚಣೆಯಾಗದಂತೆ ನಗುಮೊಗದಿಂದ ಉಪಚರಿಸುತ್ತಾರೆ.

ಪುಸ್ತಕದ ಮನೆಗಳ ಮಾಲೀಕರಿಗೆ ಸರ್ಕಾರ ಯಾವುದೇ ರೀತಿಯ ಆರ್ಥಿಕ ಲಾಭವನ್ನು ಕೊಡುವುದಿಲ್ಲಆದರೆಪುಸ್ತಕದ ಮನೆಗಳಿಂದಾಗಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿರುವುದರ ಜೊತೆ ಭಿಲಾರೆ ಗ್ರಾಮದ ಅಭಿವೃದ್ಧಿಯೂ ನಡೆದಿದೆಸರ್ಕಾರ ಅಚ್ಚುಕಟ್ಟಾದ ರಸ್ತೆಸೂಕ್ತ ರೀತಿಯ ಚರಂಡಿ ವ್ಯವಸ್ಥೆಬೀದಿ ದೀಪಶಾಲೆಗಳ ನವೀಕರಣ ಮೊದಲಾದವುಗಳನ್ನು ಮಾಡುವುದರ ಜೊತೆಗೆ ಒಂದು ಆಂಪಿ ಥಿಯೇಟರನ್ನೂ ನಿರ್ಮಿಸಿದೆಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಭಿಲಾರೆಯಂತಹ ಗ್ರಾಮದಲ್ಲೂ ಅಲ್ಲಲ್ಲಿ ‘ಸ್ಟೇ ಹೋಮ್’ ತಲೆ ಎತ್ತಿಹೊಸ ಉದ್ಯೋಗಾವಕಾಶಗಳೂ ಹುಟ್ಟಿಕೊಂಡಿವೆದೀಪಾವಳಿಕ್ರಿಸ್ಮಸ್ ಮತ್ತಿತರ ರಜಾದಿನಗಳಂದು ಮರಾಠಿ ಭಾಷೆ ಹಾಗೂ ಮಹಾರಾಷ್ಟ್ರ ಸಂಸ್ಕ ತಿಗೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು ನಡೆಯುವುದರಿಂದ ಚಿಕ್ಕಪುಟ್ಟ ವ್ಯಾಪಾರಿಗಳ ಆದಾಯವೂ ಹೆಚ್ಚಿದೆವಿವಿಧ ಊರುವಿವಿಧ ಹಿನ್ನೆಲೆಯ ಪ್ರವಾಸಿಗರು ಬರುವುದರಿಂದ ಪುಸ್ತಕದ ಮನೆಗಳ ಜನರಿಗೆಮುಖ್ಯವಾಗಿ ಮಹಿಳೆಯರಿಗೆತಾವು ಇದ್ದಲ್ಲೇ ಹೊರ ಪ್ರಪಂಚದ ನೇರ ಅನುಭವ ಪಡೆಯುವ ಅವಕಾಶ ನಿರ್ಮಾಣವಾಗಿದೆಪುಸ್ತಕದ ಮನೆಗಳಿಂದಾಗಿ ಭಿಲಾರೆ ಗ್ರಾಮದ ಜನರಲ್ಲೂ ಪುಸ್ತಕ ಓದುವ ಅಭ್ಯಾಸ ಬೆಳೆಯುತ್ತಿರುವುದು ಪುಸ್ತಕದ ಮನೆಗಳು ತಂದ ಬಹುಮುಖ್ಯ ಬದಲಾವಣೆ ಅನ್ನಬಹುದು.

 

ಭಿಲಾರೆಯ ಪುಸ್ತಕದ ಮನೆ ಯೋಜನೆಯ ಯಶಸ್ಸಿನಿಂದ ಉತ್ತೇಜಿತ ವಾಗಿರುವ ಮಹಾರಾಷ್ಟ್ರ ಸರ್ಕಾರ ಸಾಂಗ್ಲಿ ಜಿಲ್ಲೆಯ ಅಂಖಲ್ಕೋಪ್ಸಿಂಧುದುರ್ಗದ ಪೊಂಬುರ್ಲೆಔರಂಗಾಬಾದಿನ (ಎಲ್ಲೋರಾ ಖ್ಯಾತಿಯವೆರೂಲ್ ಮತ್ತು ಗೊಂಡಿಯಾ ಜಿಲ್ಲೆಯ ನಾವೇಗಾಂವ್ ಬಂಧ್ ಎಂಬ ಇನ್ನೂ ನಾಲ್ಕು ಹಳ್ಳಿಗಳಲ್ಲಿ ಪುಸ್ತಕದ ಮನೆಗಳನ್ನು ತೆರೆಯಲು ಯೋಜಿಸಿದೆಭಿಲಾರೆಯಿಂದ ಸ್ಛೂರ್ತಿ ಪಡೆದ ಕೇರಳದಲ್ಲೂ ಈಗ ಕೊಲ್ಲಂ ಹತ್ತಿರದ ಪೆರುಂಕುಲಂ ಎಂಬ ಊರು ಪುಸ್ತಕದ ಊರಾಗುತ್ತಿದೆತಮಿಳುನಾಡಿನಲ್ಲಿ ಶಿವಶಂಕರ್ ಮತ್ತು ಆಸೈತಂಬಿ ರೆಪ್ಲೊಂಗ್ ಎಂಬ ಇಬ್ಬರು ನಿವೃತ್ತ ಪ್ರೊಫೆಸರ್‌ಗಳು ಭಿಲಾರ್ ಮಾದರಿಯಲ್ಲೇ ತಮಿಳುನಾಡಿನಾದ್ಯಂತ ದಲಿತರ ಮನೆಗಳನ್ನು ‘ಪುಸ್ತಕದ ಮನೆ’ಗಳನ್ನಾಗಿ ಮಾರ್ಪಡಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

andolanait

Recent Posts

ಓದುಗರ ಪತ್ರ: ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಿ

ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…

5 hours ago

ಓದುಗರ ಪತ್ರ: ಸಚಿವರುಗಳೇ ಮುಖ್ಯಮಂತ್ರಿಗಳ ಮಾತನ್ನು ಕಾರ್ಯರೂಪಕ್ಕೆ ತನ್ನಿ

ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…

5 hours ago

ಓದುಗರ ಪತ್ರ: ಡಿಜಿಟಲ್ ಸಮೀಕ್ಷೆ ರೈತರಿಗೆ ಕಂಟಕ?

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…

6 hours ago

ಆತ್ಮಹತ್ಯೆ ತಡೆಗೆ ಇರಲಿ ಮಾನವೀಯ ಸುರಕ್ಷಾ ಜಾಲ

ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…

6 hours ago

ಕೆರೆ ನೀರಿಗಾಗಿ ಎರಡು ಗ್ರಾಮಸ್ಥರ ತಿಕ್ಕಾಟ!

ಎಸ್.ಎಸ್.ಭಟ್ ಕೃಷ್ಣಾಪುರ-ದೊಡ್ಡಹುಂಡಿ ಗ್ರಾಮಗಳ ನಡುವೆ ವಿವಾದ  ನಂಜನಗೂಡು: ಕೆರೆ ನೀರಿನ ವಿಚಾರವಾಗಿ ನಂಜನಗೂಡು ತಾಲ್ಲೂಕಿನ ಕೃಷ್ಣಾಪುರ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ…

6 hours ago

ಅಪಾಯಕಾರಿ ರೈಲ್ವೆ ಅಂಡರ್‌ಪಾಸ್ ಫುಟ್‌ಪಾತ್

ಹೇಮಂತ್‌ಕುಮಾರ್ ಎಚ್ಚರ ತಪ್ಪಿದರೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಖಚಿತ ಮಂಡ್ಯ: ನಗರದ ಜಯಚಾಮರಾಜ ವೃತ್ತ(ಸಂಜಯ ಸರ್ಕಲ್)ದಿಂದ ಹೊಳಲು ವೃತ್ತ, ಪೇಟೆ…

6 hours ago