ಸಿದ್ದೇಶ್ವರ ಸ್ವಾಮೀಜಿ
ಸುಮ್ಮನೆ ಒಂದು ಸುಂದರ ಕಥೆ ಇದು. ಒಬ್ಬ ತಾಯಿ ಮಗ ಇದ್ರು, ತಂದೆ ತೀರಿಕೊಂಡಿದ್ದ. ಆವಾಗ ತಾಯಿ ಮಗನನ್ನು ಬೆಳೆಸಿದ್ಲು. ಆದರೆ, ಮಗ ಒಂದೂ ಚಲೋ ಕೆಲಸ ಮಾಡ್ಲಿಲ್ಲ, ಏನೇನು ಮಾಡಬಾರದು ಅಂತ ತಾಯಿ ಹೇಳ್ತಿದ್ಲೊ ಅದನ್ನ ಮಾಡ್ತಾ ಇದ್ದ. ಒಂದು ದಿವಸ ಇಬ್ಬರು ಒಂದೇ ಸಲ ಪ್ರಾಣ ಬಿಟ್ರು. ಅಲ್ಲಿಂದ ಇಬ್ರು ಹೋದರು ಆ ಕಡೆ ಸ್ವರ್ಗದ ಬಾಗಿಲು, ಈ ಕಡೆ ನರಕದ ಬಾಗಿಲು. ಸ್ವರ್ಗದ ಬಾಗಿಲ ತಟ್ಟಿದ್ಲು ತಾಯಿ. ಆಗ ದೇವದೂತ ಬಾಗಿಲ ತೆಗೆದ ಹುಡುಗ, ಹುಡಗನ ತಾಯಿ ಇಬ್ಬರನ್ನೂ ನೋಡ್ದ. ಆಗ ಅವನಿಗೆ ಗೊತ್ತಾಯಿತು ‘ಒಬ್ರು ಶುದ್ಧ, ಇನ್ನೊಬ್ಬರು ಅಶುದ್ಧ’. ಅವಾಗ ಆತ ಹೇಳ್ದ, ‘ತಾಯಿಯೇ ನಿನಗ ಬಾಗಿಲ ತೆರೆದದ ನಿನ್ನ ಮಗನಿಗಲ್ಲ’. ಆಗ ತಾಯಿ ಹೇಳಿದ್ಲು, ‘ನನಗೆ ಯಾಕ ತೆರೆದದೆ ಹೇಳು’ ಅಂದ್ಲು. ಅವ ಹೇಳ್ದ, ‘ನೀನು ಬಹಳ ಸ್ವಚ್ಛ’ ಆದ್ದರಿಂದ ತೆರೆದದೆ. ಆಗಿತ್ತು ಅಂದ್ರ, ‘ನಾನು ಯಾವುದನ್ನು ಅನುಭವಿಸಬೇಕೋ ಅದನ್ನು ಮಗನಿಗೆ ಕೊಡು, ಆತ ಏನನ್ನು ಅನುಭವಿಸಬೇಕೋ ನಾನು ಸ್ವೀಕರಿಸುತ್ತೇನೆ. ನಾನು ನರಕಕ್ಕೆ ಹೋಗ್ತೀನಿ’ ಅಂದ್ಲು. ಎಚ್ಚರ ಆಯ್ತು. ನೋಡಿದ್ರ ಕನಸಿದು. ಇದು ತಾಯಿಗೆ ಬಿದ್ದ ಕನಸಲ್ಲ ಹುಡುಗನಿಗೆ ಬಿದ್ದ ಕನಸು.
ಜೀವನ ಬದಲಾಯಿತು. ಹುಡುಗನಿಗೆ ಕಣ್ಣಲ್ಲಿ ನೀರು ಬಂತು. ತಾಯಿಯ ಪ್ರೇಮ ಎಂಬ ಅದ್ಭುತ ಅಂದ. ನಾನು ಆಕಿಯ ಒಂದೂ ಮಾತು ಕೇಳಲಿಲ್ಲ, ಜೀವನ ಹಾಳ ಮಾಡಕೊಂಡೆ. ಆಕೆ ಸ್ವರ್ಗವನ್ನೇ ನನಗಾಗಿ ಬಿಟ್ಟು, ನರಕಕ್ಕೆ ಹೊರಟಿದ್ಲು, ನಾನು ಆಕೆ ತೋರಿದ ಮಾರ್ಗಬಿಟ್ಟು ನರಕ ಕಟ್ಟಿಕೊಂಡೆ ಜೀವನದಲ್ಲಿ. ಎಂಥ ಅಪ್ರತಿಮಾ ಪ್ರೇಮ. ಮಿಶ್ರಣ ಇಲ್ಲ. ‘ಸ್ವಚ್ಛ ಕೊಡೋದೆ, ವಿನಃ ಬೇಡೋದಲ್ಲ’. ಅಂಥ ಶುದ್ಧ ಹೃದಯ ಅಲ್ಲಿ ತ್ಯಾಗ, ಭಕ್ತಿ ಎರಡೂ ಕೂಡಿ ಹೋಗ್ತಾವ. ತ್ಯಾಗ ಪರಮಪ್ರೇಮ ಎರಡು ಕೂಡಿ ಹೋಗ್ತಾವಾ. ಇದೇ ಹುಡುಗ ಮುಂದೆ ಒಬ್ಬ ಶ್ರೇಷ್ಠ ಸಂತನಾದ. ಬರೀ ಒಂದು ಕನಸಿನಿಂದ ಮನಸ್ಸು ಬದಲಾಗಿತ್ತು ಜೀವನ. ಕಲಿಸಿಕೊಟ್ಟಿತ್ತು ಏನು? ಪವಿತ್ರ ಪ್ರೇಮ. ಎಂಥ ಜೀವನ ಇದನ್ನು ಪರಿಶುದ್ಧಗೊಳಿಸಬೇಕು ಅಂತ ಹೊರಟ. ಆತನ ಮಾತುಗಳೆಲ್ಲ ಹರುವ್ಯಾವ ಐರೋಪ್ಯ ದೇಶದೊಳಗ ಆ ಮಾತುಗಳ ಮಧ್ಯದಲೆಲ್ಲ ‘ಲವ್ ಡಿವೈನ್’.
ಪ್ರೇಮ ಸುಮ್ಮನೆ ಹಿಂಗ ಹರವುಬೇಕು. ‘ತ್ಯಾಗ, ಪ್ರೇಮ ಎರಡರ ಮಿಶ್ರಣ ಅದೇ ಭಕ್ತಿ ಮಾರ್ಗ’. ಎಂಥ ಸುಂದರವಾದ ಮಾರ್ಗ ಇದು. ‘ಎಲ್ಲಿ ತ್ಯಾಗ ಇರ್ತದೆ, ಎಲ್ಲಿ ಭಕ್ತಿ ಇರ್ತದ, ಅಲ್ಲಿ ಸಂತೋಷ ಇರ್ತದೆ’. ‘ಎಲ್ಲಿ ಪ್ರೇಮದ ಕೊರತೆ ಇರ್ತದೆ, ಎಲ್ಲಿ ತ್ಯಾಗದ ಕೊರತೆ ಇರ್ತದ, ಅಲ್ಲಿ ಅಸಂತೋಷ ಹರವಿಕೊಂಡಿರುತ್ತದೆ’. ನಾವು ಇಷ್ಟೇಕೇ ಅಸಂತೋಷಿಗಳಾಗುತ್ತಿದ್ದೇವೆ? ನಮ್ಮಲ್ಲಿ ಎರಡರ ಕೊರತೆ, ಒಂದು ‘ಬೇಕು ಅನ್ನೊದು ಕಡಿಮೆಯಾಗ್ತಿಲ್ಲ, ಪ್ರೇಮ ಇದು ಹರುವುತಾಯಿಲ್ಲ’ ಅಷ್ಟೆ.
ಪ್ರತಿಯೊಂದು ವಸ್ತುವಿಗೆ ನಾವು ಬೆಲೆ ಕಟ್ಟೋಕೆ ಶುರು ಮಾಡೀವಿ. ಮನಿಗೆ ಯಾರಾದರೂ ಬಂದು ಒಂದು ಕಪ್ಪು ನೀರ ಕೊಡಿ ಅಂತ ಕೇಳಿದ್ದರ, ನಮ್ಮ ಮನಸ್ಸಿನಲ್ಲಿ ಒಂದು ಕಪ್ಪಂದರೆ ಎಷ್ಟು? ಒಂದು ಬಾಟಲಿ. ಬಾಟಲಿ ಕಿಮ್ಮತ್ತು ಎಷ್ಟು? ೧೫ ರೂ. ಈ ಮನುಷ್ಯನಿಗೆ ಒಂದು ಬಾಟಲು ನೀರು ಕೊಟ್ರೇ ೧೫ ರೂ. ಖರ್ಚಾಗ್ತದ. ಹಿಂಗಾ, ಆಲೋಚನಿ. ಆದರೆ, ಆಕಾಶದಿಂದ ಧಾರಾಕಾರವಾಗಿ ಜಗತ್ತು ನೀರಾ ಕಂಡಿತ್ತು. ಮೇಘ ಏನಾರ ಬಿಲ್ ಕಳುಹಿಸಿದರೇ ಮನುಷ್ಯನ ಗತಿ ಏನು? ಮನುಷ್ಯ ಬದುಕಲು ಸಾಧ್ಯವೇ? ಹತ್ತು ನಿಮಿಷದಾಗ ನೀರು ಜಗತ್ತಿನಾದ್ಯಂತ. ಆದರೆ ಅದು ಒಂದು ದಿವಸ ಇಂಥವರ ಮನಿಗೆ ನೀರಾ ಕೊಟ್ಟಿನೀ ಅಂತ ಅಂದಿಲ್ಲ. ಸುಮ್ಮನೆ ಸುರುಸ್ತ ಹೋಗ್ತದೆ. ‘ಭೂಮಿ ಬೆಳೆದು ಹಸಿರಾಗ್ತದೆ. ಮನುಷ್ಯ ಉಸಿರಾಡುತ್ತಾನೆ’. ಅದೇ ನೀರು ತಕೊಂಡು ಭಿಕ್ಷಾ ಬೇಡ್ತಾನೆ ಅಂದ್ರ ನಮ್ಮ ಮನಸ್ಸು ಎಷ್ಟು ಸಣ್ಣದಾಗಿ ಅದೆ. ಮನಸ್ಸೇ ಹಂಗ ಹಾಗ್ತದೆ ಏನು ಮಾಡಕ ಆಗ್ತದೆ. ಒಂದು ಕಪ್ ನೀರು ಕೊಟ್ರೇ, ಕರ್ಮಷಿಯಲ್ ಚಿಂತನೆ ಶುರುವಾಗ್ತದಲ್ಲ ಇದೆಂತಹ ಯೋಚನೆ. ಪ್ರತಿಯೊಂದಕ್ಕೂ ಬೆಲೆ. ಒಂದು ಮಗುವನ್ನು ನೋಡಿಕೊಳ್ಳೊಕೆ ಒಂದು ತಾಯಿ ಹತ್ರ ಕೊಟ್ರೇ ಒಂದು ತಾಸಿಗೆ ೩೦ ರೂಪಾಯಿ. ಪರದೇಶದಾಗ ಈ ಪರಿಸ್ಥಿತಿ ಇದೆ.
ಎಂಥ ಸುಂದರ ಜಗತ್ತು ಇತ್ತು. ಆದರೆ ಮನಸ್ಸುಗಳು ಎಷ್ಟು ಬದಲಾಗಿಬಿಟ್ಟೂ, ಸುರಿಯುವ ನೀರ ಇನ್ನಾ ಸುರಿಸ್ತಾದ, ಹರಿಯುವ ನದಿಗಳು ಇನ್ನಾ ಹರೀತಾವೆ. ಆದರೆ ನಮ್ಮ ಮನಸ್ಸುಗಳು ಹೊಲಸಾಗವೆ. ಅಷ್ಟೆ ಯಾಕೆ? ಹೊಲಸು ಅಂದರೇನು? ಶುದ್ಧವಾದ ಪ್ರೇಮದ ಕೊರತೆ, ಆ ಬಳಿಕ ಭಿಕ್ಷಾವೃತ್ತಿ. ಭಗವಂತನೇ ಇಷ್ಟದಲ್ಲ ಸಾಕು ಅಂತ ಒಂದು ಸಲ ಒಬ್ಬರೇ ವರ? ಈಗ ವರನೇ ಹೆಣ್ಣು ಮಕ್ಕಳ ಎದುರ ಬೀಕ್ಷಾ ಬೇಡಕತ್ತಿದ್ರಾ ವರ ಹೆಂಗ ಆಗ್ತಾನೆ? ಅವ. ಸುಮ್ಮನೆ ವಿಚಾರ ಮಾಡ್ರೀ, ಯಾರು ಯಾರ ಎದರು ಬೇಡಬೇಕು? ಯಾರು ಪುರುಷರು, ಸಮರ್ಥರೋ ಅವರು ಕೊಡಬೇಕು, ಆದರೆ ಅವರೇ ಬೇಡಾಕ ನಿಂತರೇ ಗತಿ ಏನು? ಬೇಡೋ ಗುಣ ಅದಲ್ಲ, ಇದು ಬಳ ವಿಚಿತ್ರ. ಅದ ನಮ್ಮನ್ನ ಸಣ್ಣವರನ್ನಾಗಿ ಮಾಡ್ತದಾ. ಮನುಷ್ಯ ಯಾಕೆ ಸಣ್ಣವ ಆದಾ ಅಂದ್ರ ‘ಎದಿ ಕಡಿಮೆಯಾಗ್ತ ಬಂತು. ತಲಿ ಬೆಲೆ ಕಟ್ಟಿತ್ತು’. ಎದಿ ಬಾಡಿ ಹೋಯ್ತು.
ಗುಂಡ್ಲುಪೇಟೆ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕರ್ನಾಟಕ ರಾಜ್ಯ…
ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರಿರುವ ಹೆಚ್ಚುವರಿ ಸಾಮೂಹಿಕ ಸುಂಕಗಳನ್ನು ಅಮೆರಿಕ…
ಹನೂರು : ಮುಂದಿನ ದಿನಗಳಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಯಶಸ್ವಿಯಾಗಿ ನಡೆಸಲು ಕರ್ನಾಟಕ ಪೊಲೀಸರು ಹಾಗೂ ಅಬಕಾರಿ ಇಲಾಖೆ…
ಕೆ.ಆರ್.ಪೇಟೆ : ಪಟ್ಟಣದ ಪಿ.ಎಲ್.ಡಿ ಬ್ಯಾಂಕ್ ಮುಂಭಾಗದಲ್ಲಿ ಶಫಿಉಲ್ಲಾ ಅವರು ನಡೆಸುತ್ತಿದ್ದ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ಅಂಗಡಿಯು ವಿದ್ಯುತ್ ಶಾರ್ಟ್…
ಬೆಂಗಳೂರು : ಬೆಂಗಳೂರು ನಗರ ಮಾತ್ರವಲ್ಲದೆ ಇಡೀ ಕರ್ನಾಟಕ ಎಲೆಕ್ಟ್ರಿಕ್ ವಾಹನ ಉದ್ಯಮದ ಹಬ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಅದಕ್ಕೆ…
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…