ಎಡಿಟೋರಿಯಲ್

ಬೆಂಗಳೂರು ಡೈರಿ: ಕಾಂಗ್ರೆಸ್: ಉತ್ತರ ಸಿಗುವ ಕಾಲ ಸನ್ನಿಹಿತ

ರಾಜ್ಯ ಕಾಂಗ್ರೆಸ್‌ನಲ್ಲಿ ಬಗೆಹರಿಯದೆ ಉಳಿದಿರುವ ಒಂದು ಪ್ರಶ್ನೆಗೆ ಉತ್ತರ ಸಿಗುವ ಕಾಲ ಹತ್ತಿರವಾದಂತಿದೆಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಯಾರು ಮುಖ್ಯಮಂತ್ರಿಯಾಗಬೇಕುಎಂಬುದು ಆ ಪ್ರಶ್ನೆಮತ್ತು ಇದೇ ಪ್ರಶ್ನೆಯನ್ನು sಹಿಡಿದುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಗ್ಗಾಟ ನಡೆಸುತ್ತಾ ಬಂದಿದ್ದರು.

ಒಕ್ಕಲಿಗ ನಾಯಕರ ಸಭೆಗಳಲ್ಲಿ ಡಿ.ಕೆ.ಶಿವಕುಮಾರ್ ತಮ್ಮ ಪಟ್ಟು ಹಾಕಿದರೆ ಸಿದ್ದರಾಮೋತ್ಸವದ ಮೂಲಕ ಮತ್ತು ತಮ್ಮ ಬೆಂಬಲಿಗರ ಮೂಲಕ ಸಿದ್ದರಾಮಯ್ಯ ಪ್ರತಿಪಟ್ಟು ಹಾಕುತ್ತಿದ್ದರುಹೀಗಾಗಿ ದಿನಕಳೆದಂತೆ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರುಎಂಬುದೇ ರಾಷ್ಟ್ರೀಯ ವಿವಾದದಂತೆ ಕಾಣಿಸತೊಡಗಿತ್ತು.

ಈ ಮಧ್ಯೆ ಇದಕ್ಕೆ ಉಪ್ಪುಖಾರ ಸುರಿಯುವ ಬೆಳವಣಿಗೆಗಳೂ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಾ ಹೋದವುಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರವಂತೂಸಿದ್ದರಾಮಯ್ಯ ಅವರಿಂದಾದ ಹಳೆಯ ಗಾಯಗಳನ್ನು ಖರ್ಗೆ ಮರೆಯಲು ಸಾಧ್ಯವೇಹೀಗಾಗಿ ಸಂದರ್ಭ ಬಂದರೆ ಅವರು ಸಿದ್ದರಾಮಯ್ಯ ಅವರ ಬದಲಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪರ ನಿಲ್ಲುತ್ತಾರೆಇಲ್ಲವೇ ಡಾ.ಜಿ.ಪರಮೇಶ್ವರ್ ಅವರ ಪರ ಬ್ಯಾಟಿಂಗ್ ಮಾಡುತ್ತಾರೆ ಎಂಬ ಪ್ರಚಾರ ಅದ್ಧೂರಿಯಾಗಿ ನಡೆಯಿತು.

ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಮನಸ್ಸಿರಲಿಲ್ಲಬದಲಿಗೆ ರಾಜ್ಯ ರಾಜಕಾರಣದಲ್ಲೇ ಉಳಿದು ಒಮ್ಮೆ ಮುಖ್ಯಮಂತ್ರಿಯಾಗುವ ಆಸೆ ಇತ್ತುಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರಕ್ಕೆ ಬಂದರೆ ವರಿಷ್ಠರು ಸಿದ್ದರಾಮಯ್ಯ ಇಲ್ಲವೇ ಡಿಕೆಶಿ ಬದಲಿಗೆ ಖರ್ಗೆ ಅವರಿಗೇ ಒಂದು ಅವಕಾಶ ನೀಡಬಹುದು ಎಂಬ ವದಂತಿಗಳು ಹಬ್ಬಿದವು.

ಆದರೆ ಕಳೆದ ವಾರ ದಿಲ್ಲಿಯ ಕಾಂಗ್ರೆಸ್ ಪಾಳೆಯದಿಂದ ಹರಿದು ಬಂದ ಸಂದೇಶದ ಪ್ರಕಾರಮುಂದಿನ ವಿಧಾನಸಭಾ ಚುನಾವಣೆಯ ರಣಾಂಗಣದಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬಲ ತುಂಬಲು ಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆಕಾರಣ ನಾಯಕತ್ವದ ಪ್ರಶ್ನೆ ಬಗೆಹರಿಯದೆ ಉಳಿದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟ ಎಂಬುದು ಖರ್ಗೆ ಅವರಿಗೆ ಮನವರಿಕೆ ಆಗಿದೆ.

ಎಷ್ಟೇ ಆದರೂ ಐವತ್ತು ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಗಮನಿಸುತ್ತಾ ಬಂದವರು ಮಲ್ಲಿಕಾರ್ಜುನ ಖರ್ಗೆಹೀಗಾಗಿ ಅವರಿಗೆ ಇಲ್ಲಿನ ಜಾತಿ ಸೂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತು ಮತ್ತು ಈ ಜಾತಿ ಸೂತ್ರದ ಪ್ರಕಾರ ರಾಜ್ಯದಲ್ಲಿ ಕೈ ಪಾಳೆಯದ ಸಾರಥ್ಯ ಯಾರ ಕೈಗೆ ಹೋಗಬೇಕು ಎಂಬುದೂ ಗೊತ್ತುಅದರ ಪ್ರಕಾರ ಸಿದ್ದರಾಮಯ್ಯ ಅವರ ನಾಯಕತ್ವಕ್ಕೆ ಬೆಂಬಲ ನೀಡಿ ರಣಾಂಗಣಕ್ಕಿಳಿದರೆ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತಗಳಿಸಿ ಅಧಿಕಾರಕ್ಕೆ ಬರುತ್ತದೆ ಎಂಬುದು ಖರ್ಗೆ ಅವರಿಗಿರುವ ಮಾಹಿತಿ.

ಅಂದಹಾಗೆ ಖರ್ಗೆಯವರು ಪ್ರಾಕ್ಟಿಕಲ್ ನಾಯಕತಮಗಾದ ನೋವುಅವಮಾನಗಳನ್ನು ನೆನಪಿಸಿಕೊಳ್ಳುತ್ತಾ ಕೂತರೆ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೇ ಹೊರತು ಬೇರೇನಲ್ಲ ಎಂಬುದು ಅವರ ಲೆಕ್ಕಾಚಾರಅದೇ ರೀತಿ ಎಐಸಿಸಿ ಅಧ್ಯಕ್ಷರಾಗಿ ಕುಳಿತಿರುವ ಈ ಸಂದರ್ಭದಲ್ಲಿ ಹಳೆಯ ಗಾಯಗಳನ್ನು ನೆನಪಿಸಿಕೊಳ್ಳುವುದೆಂದರೆ ತವರು ರಾಜ್ಯದಲ್ಲಿ ತಾವೇ ಪಕ್ಷದ ಸೋಲು ಬಯಸಿದಂತೆ ಎಂಬುದು ಅವರಿಗೆ ಗೊತ್ತುಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳನ್ನೂ ಕಣ್ಣ ಮುಂದಿಟ್ಟುಕೊಂಡ ಖರ್ಗೆಯವರಿಗೆಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲು ಸಿದ್ದರಾಮಯ್ಯ ಅವರ ಶಕ್ತಿ ಅನಿವಾರ್ಯ ಎಂಬುದು ಮನವರಿಕೆಯಾಗಿದೆ.

ಸಿದ್ದರಾಮಯ್ಯ ಅವರ ಶಕ್ತಿ ಇಲ್ಲದೆ ಗೆಲ್ಲುವುದು ಕಷ್ಟ ಅಂತ ಬಹುತೇಕ ಕ್ಷೇತ್ರಗಳಿಂದ ಅವರಿಂದ ಫೀಡ್ ಬ್ಯಾಕೂ ಸಿಕ್ಕಿದೆಹೀಗಾಗಿ ಕಳೆದ ವಾರ ಪಕ್ಷದ ವರಿಷ್ಠರ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆಮುಂದಿನ ಚುನಾವಣೆಯಲ್ಲಿ ಎಲ್ಲರೂ ಸೇರಿ ಸಿದ್ದರಾಮಯ್ಯ ಅವರ ಭುಜಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದ್ದಾರಂತೆಅವರು ಹಾಗೆ ಹೇಳಿದ್ದಾರೆ ಎಂಬ ವರ್ತಮಾನ ರಾಜ್ಯ ಕಾಂಗ್ರೆಸ್‌ನ ಪಡಸಾಲೆಯಲ್ಲಿ ಮೆಲ್ಲಗೆ ಹರಡತೊಡಗಿದ್ದೇ ತಡಹಲ ನಾಯಕರ ನಿದ್ದೆ ಹಾರಿ ಹೋಗಿದೆಆದರೆ ನಿದ್ದೆ ಹಾರಿ ಹೋದರೂ ಈ ನಾಯಕರು ಏನೂ ಮಾಡುವ ಸ್ಥಿತಿಯಲ್ಲಿಲ್ಲಯಾಕೆಂದರೆ ಖುದ್ದು ಎಐಸಿಸಿ ಅಧ್ಯಕ್ಷರೇ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಲಕ್ಷಣ ಕಾಣಿಸಿರುವುದರಿಂದ ಇವರು ನಿರಾಶರಾಗಬಹುದೇ ಹೊರತು ಬಂಡಾಯ ಏಳಲು ಸಾಧ್ಯವಿಲ್ಲ.

ಇನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದರಿಂದ ನಿರಾಸೆಯಾಗುವುದು ನಿಶ್ಚಿತವಾದರೂ ಅವರು ಪಕ್ಷಕ್ಕೆ ನಿಷ್ಠರಾಗಿರುವವರುಹೀಗಾಗಿ ಚುನಾವಣೆ ಮುಗಿಯುವ ತನಕ ತಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನೂ ಅವರು ಮಾಡುತ್ತಾರೆಕೊನೆಗೆ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯವನ್ನು ಒಪ್ಪಿಕೊಳ್ಳುತ್ತಾರೆ ಎಂಬುದು ಕೈ ಪಾಳೆಯದ ಲೇಟೆಸ್ಟು ಚರ್ಚೆ.

ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆಯವರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆಯೇ ಇಂತಹ ಬೆಳವಣಿಗೆಗೆ ಬೇರೆ ಕಾರಣವಿರಬಹುದೇಎಂಬ ಗುಸು ಗುಸು ಕೈ ಪಾಳೆಯದಲ್ಲಿ ಶುರುವಾಗಿದೆಅದರ ಪ್ರಕಾರಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವ ಆಸೆ ಇರುವುದು ನಿಜವಾದರೂ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಸಿಎಂ ಆಗಲು ಹಪಹಪಿಸುವುದು ಕಷ್ಟಹೀಗಾಗಿ ಅವರು ತಮ್ಮ ಆಸೆಯನ್ನು ತೊರೆದು ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಭವಿಷ್ಯದ ಉಪಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ಬಯಸಿದ್ದಾರಂತೆಇದು ಸಾಧ್ಯವಾಗಬೇಕು ಎಂದರೆ ಪಕ್ಷ ಅಧಿಕಾರಕ್ಕೆ ಬರಬೇಕುಅದು ಅಧಿಕಾರಕ್ಕೆ ಬರಬೇಕು ಎಂದರೆ ಭವಿಷ್ಯದ ಮುಖ್ಯಮಂತ್ರಿ ಯಾರುಎಂಬುದು ಸ್ಪಷ್ಟವಾಗಬೇಕುಹೀಗಾಗಿಯೇ ಸಿದ್ದರಾಮಯ್ಯ ಅವರಿಗೆ ಶಕ್ತಿ ತುಂಬಲುಮಲ್ಲಿಕಾರ್ಜುನ ಖರ್ಗೆ ನಿರ್ಧರಿಸಿದ್ದಾರೆ ಅಂತ ಕೆಲವರು ಪಿಸುಗುಟ್ಟುತ್ತಿದ್ದಾರೆ. ಇದು ಎಷ್ಟು ನಿಜವೋ ಗೊತ್ತಿಲ್ಲಆದರೆ ಇತ್ತೀಚೆಗೆ ಕೈ ಪಾಳೆಯದ ಕೆಲ ನಾಯಕರು ವ್ಯಕ್ತಪಡಿಸಿದ

ಅಸಮಾಧಾನದ ಹಿಂದೆ ಈ ವರ್ತಮಾನವೂ ಕೆಲಸ ಮಾಡಿರುವಂತೆ ಕಾಣುತ್ತಿದೆ.

andolanait

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

4 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

4 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

4 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

4 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

4 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

5 hours ago