ಎಡಿಟೋರಿಯಲ್

ಸೂರರೈಪೋಟ್ರು ಪ್ರಶಸ್ತಿಗಳ ಹಿಂದೆ ಹಿತಾಸಕ್ತಿಗಳ ಸಂಘರ್ಷ!

ಸೂರರೈಪೋಟ್ರು ಪ್ರಶಸ್ತಿಗಳ ಹಿಂದೆ ಹಿತಾಸಕ್ತಿಗಳ ಸಂಘರ್ಷ!

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ೬೮ ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಲನಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗೆ ದೇಶ ಅತ್ಯುನ್ನತ ಗೌರವವಾಗಿ ನೀಡುವ ಪಾಲ್ಕೆ ಪ್ರಶಸ್ತಿಗೆ ಈ ಬಾರಿ ನಟಿ ಆಶಾ ಪರೇಖ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ೨೦೨೦ರ ಸಾಲಿನ ಪ್ರಶಸ್ತಿ. ಕನ್ನಡ ಚಿತ್ರಗಳಲ್ಲಿ ಸಂಚಾರಿ ವಿಜಯ್ ಅಭಿನಯದ ಕೊನೆಯ ಚಿತ್ರ ಪ್ರವೀಣ್ ಕೃಪಾಕರ್ ನಿರ್ದೇಶನದ ‘ತಲೆದಂಡ’ ಅತ್ಯುತ್ತಮ ಪರಿಸರ ಕಾಳಜಿಯ ಚಿತ್ರಕ್ಕಿರುವ ಪ್ರಶಸ್ತಿಗೆ ಭಾಜನವಾಗಿದೆ. ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಅತ್ಯುತ್ತಮ ಕನ್ನಡ ಚಿತ್ರ ಹಾಗೂ ಸಂತೋಶ್ ಮಾಡ ನಿರ್ದೇಶನದ ‘ಜೀಟಿಗೆ’ ಅತ್ಯುತ್ತಮ ತುಳು ಚಿತ್ರಕ್ಕಿರುವ ಪ್ರಶಸ್ತಿ ಪಡೆದರೆ ‘ಡೊಳ್ಳು’ ಚಿತ್ರಕ್ಕೆ ಲೊಕೇಶನ್ ಧ್ವನಿಗ್ರಾಹಕನಿಗಿರುವ ಪ್ರಶಸ್ತಿಯೂ ಸಂದಿತ್ತು.
ಪ್ರಶಸ್ತಿ ಪ್ರಕಟವಾಗುತ್ತಲೇ, ಜುಲೈ ೨೯ರ ಸಂಚಿಕೆಯ ಈ ಅಂಕಣದಲ್ಲಿ ‘ಡೊಳ್ಳು’ ಚಿತ್ರದ ಶಬ್ದಗ್ರಹಣಕ್ಕೆ ಸಂದ ಪ್ರಶಸ್ತಿಗೆ ಬಾರಿಸಿದ ಅಪಸ್ವರ’ ಶೀರ್ಷಿಕೆಯಲ್ಲಿ ಈ ಕುರಿತಂತೆ ವಿವರವಾಗಿ ಹೇಳಲಾಗಿತ್ತು. ಮೊದಲೇ ಹೇಳಿದ ಹಾಗೆ, ಯಾವುದೇ ಪ್ರಶಸ್ತಿಗಳ ಆಯ್ಕೆ ವಿವಾದಾತೀತ ಆಗಿರುವುದಿಲ್ಲ ಎನ್ನುವ ಮಾತೇನೋ ನಿಜ. ಆದರೆ ತೀರ್ಪುಗಾರರಿಗೆ ಪ್ರಶಸ್ತಿಯ ಮಾನದಂಡಗಳ ಪ್ರಾಥಮಿಕ ಅರಿವೂ ಇಲ್ಲ ಎಂದಾದರೆ? ತೀರ್ಪುಗಾರರಲ್ಲಿ ಒಬ್ಬರು ಆಡಿದರೆನ್ನಲಾದ ಮಾತು ಇದಕ್ಕೆ ಪೂರಕ ಆಗುತ್ತದೆ. ‘
ನಾವು ಸರ್ವಾನುಮತದ ನಿರ್ಧಾರದೊಂದಿಗೆ ಲೊಕೇಶನ್ ಧ್ವನಿಗ್ರಾಹಕನಿಗಿರುವ ಪ್ರಶಸ್ತಿಯನ್ನು ನೀಡಿದ್ದೇವೆ. ಅವರ ಡೊಳ್ಳು ಬಡಿತವನ್ನು ನಾವು ಪ್ರಶಂಸಿಸಿದ್ದೇವೆ. ನಾವು ಡೊಳ್ಳು ಬಾರಿಸಿದ್ದಕ್ಕಾಗಿ ಮಾತ್ರ ಈ ಪ್ರಶಸ್ತಿ, ಸಂಭಾಷಣೆ ಮತ್ತು ಧ್ವನಿಗಳಿಗಾಗಿ ಅಲ್ಲ ಎಂದು ಕೊಂಡೆವು’ ಎಂದು ಅವರು ಹೇಳಿದ್ದು ವರದಿಯಾಗಿದೆ!
ಇತ್ತೀಚಿನ ವರ್ಷಗಳಲ್ಲಿ ಧ್ವನಿಗ್ರಹಣ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಅವು ಅತ್ಯುತ್ತಮಧ್ವನಿ ವಿನ್ಯಾಸಕ, ಲೊಕೇಶನ್ ಧ್ವನಿಗ್ರಾಹಕ ಮತ್ತು ಅಂತಿಮಧ್ವನಿ ಮಿಶ್ರಣಕಾರ ಪ್ರಶಸ್ತಿಗಳು. ಅತ್ಯುತ್ತಮ ಲೊಕೇಶನ್ ಧ್ವನಿಗ್ರಹಣ ಪ್ರಶಸ್ತಿ ‘ಡೊಳ್ಳು’ ಚಿತ್ರಕ್ಕೆ ಪ್ರಕಟವಾಗುತ್ತಲೇ ಅದರ ಧ್ವನಿಗ್ರಾಹಕರೇ, ಸ್ಟುಡಿಯೊದಲ್ಲಿ ಡಬ್‌ಮಾಡಿದ ಚಿತ್ರಕ್ಕೆ ಲೊಕೇಶನ್ ಧ್ವನಿಗ್ರಾಹಕ ಪ್ರಶಸ್ತಿ ನೀಡಲಾಗಿದೆ ಎಂದು ಟ್ವೀಟಿಸಿದರು! ಅದಕ್ಕೆ ತಕ್ಷಣದ ಪ್ರತಿಕ್ರಿಯೆ ಅಂತಾರಾಷ್ಟ್ರೀಯ ಖ್ಯಾತಿಯ ಧ್ವನಿ ತಂತ್ರಜ್ಞ ರಸೂಲ್ ಪೂಕುಟ್ಟಿಯವರಿಂದ ಬಂತು.
ಯಾವುದಾದರೂ ವಿವಾದಗಳು ಇದ್ದಾಗ, ಅದನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು, ಅವರ ನಿರ್ಣಯವೇ ಅಂತಿಮ ಎಂದು ರಾಷ್ಟ್ರೀಯ ಪ್ರಶಸ್ತಿ ನಿಯಮಾವಳಿಗಳಲ್ಲಿ ಹೇಳಿದೆ. ಈ ಕುರಿತಂತೆ ಅದಾಗಲೇ ಕಾರ್ಯದರ್ಶಿಗಳ ಗಮನಕ್ಕೆ ತಂದರೂ ಅದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಈ ವಿಷಯ ನ್ಯಾಯಾಲಯದ ಮೆಟ್ಟಲೇರಿತು. ಸಂಬಂಧಪಟ್ಟವರಿಗೆ ನೋಟಿಸ್ ಜಾರಿಯಾಗುತ್ತಲೇ ‘ಲೊಕೇಶನ್ ಧ್ವನಿಗ್ರಾಹಕ ಪ್ರಶಸ್ತಿ’ಯನ್ನು ಈ ಬಾರಿ ರದ್ದು ಮಾಡಿದ್ದಾಗಿ ಅಧಿಕೃತವಾಗಿ ಹೇಳಲಾಯಿತು.
‘ಸೂರರೈ ಪೋಟ್ರು’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಮಾತ್ರವಲ್ಲದೆ ಅದರ ನಟ, ನಟಿ, ಚಿತ್ರಕಥಾ ಲೇಖಕ ಮತ್ತು ಸಂಗೀತ ಸಂಯೋಜಕರಿಗೆ ಪ್ರಶಸ್ತಿ ತಂದುಕೊಟ್ಟಿರುವುದು ಕೂಡ ವಿವಾದಕ್ಕೆ ಎಡೆಯಾಗಿ ಕಟಕಟೆಗೆ ಬಂದಿದೆ. ತೀರ್ಪುಗಾರರಲ್ಲಿ ಒಬ್ಬರಾಗಿದ್ದ ತಂಗದೊರೈ, ಚಿತ್ರದ ನಿರ್ಮಾಪಕ, ನಟ ಸೂರ್ಯಅವರ ಮ್ಯಾನೇಜರ್ ಆಗಿರುವುದರಿಂದ ಈ ವಿವಾದ ಮತ್ತು ಕೇಸ್ ಆಗಿದೆ. ಪ್ರಶಸ್ತಿ ಪ್ರದಾನಕ್ಕೆ ತಡೆ ನೀಡುವಂತೆ ಕೋರಿ ಬಂದ ದೂರಿಗೆ, ಪ್ರತಿವಾದಿಗಳ ಸಮಜಾಯಿಷಿ ಬರುವವರೆಗೆ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದ್ದಾಗಿ ತಿಳಿದು ಬಂದಿದೆ.
ಹ್ಞಾಂ, ಫಾಲ್ಕೆ ಪ್ರಶಸ್ತಿಗೆ ಈ ಬಾರಿ ಆಶಾ ಪರೇಖ್ ಅವರನ್ನು ಆರಿಸಲಾಗಿದೆ. ಈ ಪ್ರಶಸ್ತಿಯಲ್ಲಿ ದಕ್ಷಿಣದವರಿಗೆ ಸೂಕ್ತ ಗೌರವ ಸಂದಿಲ್ಲ. ಆದರಲ್ಲೂ ಕರ್ನಾಟಕಕ್ಕೆ. ಈ ತನಕ ೫೧ ಮಂದಿಗೆ ಫಾಲ್ಕೆ ಪ್ರಶಸ್ತಿ ನೀಡಲಾಗಿದ್ದು, ಇಂದಿನದು ೫೨ನೆಯದು. ಇದರಲ್ಲಿ ಹಿಂದಿ ಚಿತ್ರರಂಗದ ೩೦ ಮಂದಿ ಈ ಗೌರವ ಪಡೆದರೆ. ಬಂಗಾಲಿ ಚಿತ್ರರಂಗಕ್ಕೆ ೧೧ ಸಂದಿದೆ. ತೆಲುಗು ೫, ತಮಿಳು ೩, ಕನ್ನಡ, ಮಲಯಾಳಂ ಮತ್ತು ಅಸ್ಸಾಮಿ ಚಿತ್ರರಂಗಕ್ಕೆ ತಲಾ ಒಂದು ಪ್ರಶಸ್ತಿ ಸಂದಿದೆ. ಈ ತನಕ ದಕ್ಷಿಣ ಭಾರತಕ್ಕೆ ಸಂದಿರುವುದು ಕೇವಲ ಹತ್ತು ಪ್ರಶಸ್ತಿಗಳು. ಕನ್ನಡಕ್ಕೆ ಕೇವಲ ಒಂದು! ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರಲ್ಲಿ ಒಬ್ಬರಾದ ನಿರ್ದೇಶಕ ನಾಗಾಭರಣ ಅವರ ಪ್ರಕಾರ, ಕರ್ನಾಟಕದಿಂದ ಯಾರ ಹೆಸರನ್ನೂ ಇಲ್ಲಿನ ಸಿನಿಮಾ ಸಂಘಟನೆಗಳು ಸೂಚಿಸಿಲ್ಲ. ಆಯ್ಕೆ ಸಮಿತಿಯಲ್ಲಿದ್ದ ಇತರರು ಆಶಾ ಭೋಂಸ್ಲೆ, ಹೇಮಾಮಾಲಿನಿ, ಪೂನಂ ಧಿಲ್ಹೊನ್ ಮತ್ತು ಉದಿತ್ ನಾರಾಯಣ್, ಕನ್ನಡಚಿತ್ರರಂಗದಿಂದ ಹಿರಿಯತಾರೆಯರಾದ ಸರೋಜಾದೇವಿ, ಲೀಲಾವತಿ, ಎಸ್.ಜಾನಕಿ ಮುಂತಾದ ಹಿರಿಯರಿದ್ದರು. ಕನ್ನಡಚಿತ್ರರಂಗದ ಮೂಲಕ ಭಾರತೀಯ ಚಿತ್ರರಂಗದ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದವರ ಸಾಲಿನ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇದ್ದರು. ಹಿತ್ತಿಲ ಗಿಡ ಮದ್ದಲ್ಲವಲ್ಲ!
ಹ್ಞಾಂ. ಈ ಬಾರಿಯ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಆಶಾ ಪರೇಖ್ ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದಾರೆ. ಅದು ೧೯೮೯ರಲ್ಲಿ ತಯಾರಾದ ‘ಶರವೇಗದ ಸರದಾರ’ ಚಿತ್ರ. ಕೆ.ವಿ.ಜಯರಾಂ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕುಮಾರ್ ಬಂಗಾರಪ್ಪ ಅವರಿದ್ದು, ಆಶಾ ಪರೇಖ್, ಶ್ರೀನಾಥ್, ಸಿ.ಆರ್.ಸಿಂಹ, ದತ್ತಣ್ಣ ಪಂಡರೀಬಾಯಿ ಮುಂತಾದವರಿದ್ದರು. ಚಿತ್ರನಟನಾಗಬೇಕು ಎಂದು ಬಯಸಿದ್ದ ಶ್ರೀನಾಥ್ ಅವರು, ಬಾಲ್ಯದಲ್ಲಿ ಮುಂಬೈಗೆ ತೆರಳಿ, ಆಶಾ ಪರೇಖ್ ಅವರನ್ನು ಭೇಟಿಯಾಗಲು ಬಯಸಿ ಹೋದದ್ದನ್ನು ಆಗಾಗ ನೆನಪಿಸಿಕೊಂಡು, ಕೊನೆಗೆ ಅವರೊಂದಿಗೆ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂಭ್ರಮಿಸಿದ್ದರು.
ಅಕಾಡೆಮಿ(ಆಸ್ಕರ್) ಆಯ್ಕೆಯ ಪ್ರಕ್ರಿಯೆಯೂ ಆರಂಭವಾಗಿದೆ. ವಿವಿಧ ವಿಭಾಗಗಳಲ್ಲದೆ, ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಪ್ರತಿ ದೇಶಗಳಿಂದ ತಲಾ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಭಾರತದಿಂದ ಈ ಆಯ್ಕೆಯನ್ನು ಭಾರತೀಯ ಚಲನಚಿತ್ರಒಕ್ಕೂಟ ಮಾಡುತ್ತದೆ. ಈ ಬಾರಿ ಅದರ ಆಯ್ಕೆ ಗುಜರಾಥಿ ಭಾಷೆಯ ‘ಚೆಲ್ಲೊಶೋ’. ಈ ಆಯ್ಕೆ ಪ್ರಕಟವಾಗುತ್ತಲೇ ಇದು ೧೯೮೮ ರಲ್ಲಿ ಇದೇ ಪ್ರಶಸ್ತಿ ಪಡೆದ ಇಟಲಿಯ ‘ಸಿನಿಮಾ ಪಾರಡಿಸೊ’ದ ನಕಲು ಎನ್ನುವ ಪ್ರತಿಕ್ರಿಯೆ ಮತ್ತು ಚರ್ಚೆ ಆರಂಭವಾಗಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ, ಇದು ನಿರ್ದೇಶಕ ಪಾನ್ ನಳಿನ್ ಅವರ ಅನುಭವ ಕಥನ ಎಂದು ಅವರೇ ಹೇಳಿದ್ದಾರೆ, ಎನ್ನುತ್ತಾರೆ ತೀರ್ಪುಗಾರರಲ್ಲಿ ಒಬ್ಬರು.
ಸಿನಿಮಾದಿಂದ ಆಕರ್ಷಿತನಾದ ಒಂಬತ್ತು ವರ್ಷದ ಬಾಲಕನೊಬ್ಬ ಚಿತ್ರಮಂದಿರದ ಪ್ರೆಜೆಕ್ಷನ್ ಜೊತೆ ಸ್ನೇಹ ಬೆಳೆಸುವ ಮೂಲ ಎಳೆ ಎರಡರಲ್ಲೂ ಇದ್ದಂತಿದ್ದು, ಉಳಿದಂತೆ ಹೊರಾವರಣ ಬದಲಿದ್ದರೂ ಇರಬಹುದು. ಆದರೆ ಚಿತ್ರಗಳ ಪ್ರಚಾರ ವಿನ್ಯಾಸದ ಹೋಲಿಕೆಯನ್ನು ಅಲ್ಲಗಳೆಯಲಾಗದು. ಇಂತಹ ಚಿತ್ರಗಳನ್ನು ಕಳುಹಿಸುವುದರಿಂದ ನಮ್ಮ ಚಿತ್ರರಂಗ, ಇಲ್ಲಿನ ಆಯ್ಕೆಯ ರೀತಿ, ತೀರ್ಪುಗಾರರ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀರಾ ಲಘು ಅಭಿಪ್ರಾಯ ಮೂಡಲು ಕಾರಣವಾಗುತ್ತದೆ ಎನ್ನುತ್ತಾರೆ ಚಿತ್ರರಂಗದ ಕುರಿತಂತೆ ಕಾಳಜಿಯುಳ್ಳ ಹಿರಿಯರು.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

7 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

9 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

9 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

10 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

11 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

11 hours ago