ಅಂಕಣ

ಗಾಲಿ ಕಳಚಿದ ಹಿರಿಯ ಬಂಡಿಗಳು

ಜಿ. ಎಂ. ಪ್ರಸಾದ್

ಎರಡು ವರ್ಷಗಳ ನಂತರ ಪ್ರಕಾಶನಿಗೆ ಸುನಂದಮ್ಮ ಅವರ ಕರೆ ಬಂತು. ಎರಡು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೇ ಕೊನೆ. ಅದಕ್ಕೂ ಹಿಂದೆ ಭೇಟಿಯಾಗಿ ಹತ್ತು ವರ್ಷಗಳಾಗಿದ್ದವು. ಹೀಗಾಗಿ ಸುನಂದಮ್ಮನವರ ಕರೆ ಸಹಜವಾಗಿ ಅಚ್ಚರಿಗೆ ಕಾರಣವಾಗಿತ್ತು. ಅಂದ ಹಾಗೆ ಸುನಂದಮ್ಮ-ನಾಗೇಂದ್ರಪ್ಪ ದಂಪತಿ ಇದ್ದ ಸ್ವಲ್ಪ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದರು. ಅವರಿಗೆ ಮೂವರು ಮಕ್ಕಳು. ಕೃಷಿಯಿಂದ ಜೀವನ ಚೆನ್ನಾಗಿಯೇ ನಡೆಯುತ್ತಿತ್ತು. ಎಲ್ಲವೂ ಚೆನ್ನಾಗಿದೆ ಅನ್ನುವಾಗಲೇ ಮಗನ ಸಾವು ಬರಸಿಡಿಲಿನಂತೆ ಅಪ್ಪಳಿಸಿತು. ಬೆಳೆದು ನಿಂತ ಮಗನನ್ನು ಕಳೆದುಕೊಂಡು ಕುಟುಂಬ ಜರ್ಜರಿತವಾಯಿತು. ಉಳಿದ ಇಬ್ಬರು ಹೆಣ್ಣುಮಕ್ಕಳು ಓದುತ್ತಿದ್ದಾರೆ. ಮಗನ ಸಾವಿನ ನೋವಿನಲ್ಲಿಯೇ ದಿನ ದೂಡುತ್ತಿದ್ದ ದಂಪತಿ ಹೆಣ್ಣು ಮಕ್ಕಳಿಬ್ಬರ ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ವಲಸೆ ಹೋಗಿದ್ದರು.

ಬೆಂಗಳೂರಿನಲ್ಲಿ ನಾಗೇಂದ್ರಪ್ಪ ಅವರು ಭದ್ರತಾ ಸಿಬ್ಬಂದಿಯಾಗಿ, ಸುನಂದಮ್ಮ ಅವರು ಗಾರ್ಮೆಂಟ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಒಂದಿಷ್ಟು ಹಣ ಸೇರಿಸಿ ವಾಸಕ್ಕೊಂದು ಮನೆ ಮಾಡಿಕೊಂಡು, ಜೀವನ ಆರಂಭಿಸಿದರು. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಬೆಂಗಳೂರಿನಲ್ಲಿಯೇ ಮುಂದುವರಿಯಿತು. ಇಬ್ಬರಿಗೂ ಕೆಲಸ ಸಿಕ್ಕಿತು. ಬರುವ ಸಂಬಳದಲ್ಲಿ ಜೀವನ ನಿರ್ವಹಣೆ, ಉಳಿತಾಯ ಹೀಗೆ ಜೀವನ ಸಾಗಿಸುತ್ತಿದ್ದರು.

ಹಿರಿಯ ಮಗಳು ದಿವ್ಯಶ್ರೀ ಪದವಿ ಮುಗಿಸಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಆರಂಭದಲ್ಲಿ ಸಂಬಳವನ್ನು ತಾಯಿಗೆ ಕೊಡುತ್ತಿದ್ದರಿಂದ ಸುನಂದಮ್ಮ ಅವರು ತಾವು ಮಾಡುತ್ತಿದ್ದ ಗಾರ್ಮೆಂಟ್ ಕೆಲಸವನ್ನು ಬಿಟ್ಟು, ಮನೆ ನಿರ್ವಹಣೆ ಮಾಡಿಕೊಂಡು, ಮನೆಯಲ್ಲಿರುತ್ತಿದ್ದರು. ಎಲ್ಲವೂ ಚೆನ್ನಾಗಿ ಸಾಗುತ್ತಿದೆ ಎಂದುಕೊಳ್ಳು ವಾಗಲೇ ದಂಪತಿಗೆ ಬದುಕಿನ ನೈಜ ಚಿತ್ರಣ ಅನಾವರಣಗೊಳ್ಳುತ್ತಾ ಹೋಯಿತು. ದಿನ ಕಳೆದಂತೆ ದಿವ್ಯಶ್ರೀ ತಾಯಿಗೆ ಕೊಡುತ್ತಿದ್ದ ಸಂಬಳವನ್ನು ಏಕಾಏಕಿ ನಿಲ್ಲಿಸಿಬಿಟ್ಟಳು. ಅದಾಗಲೇ ಜೀವನದಲ್ಲಿ ಬೇರೂರಿದ್ದ ಮಗಳೊಂದಿಗೆ ಸುನಂದಮ್ಮ ಏನೂ ಮಾತನಾಡುವ ಹಾಗಿರಲಿಲ್ಲ. ಕೆಲ ತಿಂಗಳು ಕುಟುಂಬ ನಿರ್ವಹಣೆ ಕಷ್ಟವಾಯಿತು. ಸುನಂದಮ್ಮ ಅನಿವಾರ್ಯವಾಗಿ ಬೇಕರಿಯೊಂದಕ್ಕೆ ಕೆಲಸಕ್ಕೆ ಸೇರಿದರು. ಕಿರಿಯ ಮಗಳ ವಿದ್ಯಾಭ್ಯಾಸದ ಖರ್ಚು ಸರಿದೂಗಿಸಲು ಸುನಂದಮ್ಮ ಅವರಿಗೆ ಕೆಲಸಕ್ಕೆ ಹೋಗದೆ ಬೇರೆ ಮಾರ್ಗವಿರಲಿಲ್ಲ.

ಕಿರಿಯ ಮಗಳು ಮೇಘನಾ ಕೂಡ ಪದವಿ ವ್ಯಾಸಂಗ ಮುಗಿಸಿದಳು. ತನ್ನ ಶಿಕ್ಷಣಕ್ಕಾಗಿ ಮಾಡಿದ ಸಾಲವನ್ನೂ ನೀವೇ ತೀರಿಸಬೇಕು ಎಂದು ಹಿರಿಯ ತಂದೆ-ತಾಯಿಯ ದುಂಬಾಲು ಬಿದ್ದಳು. ಮಗಳ ಮಾತಿನಂತೆಯೇ ನಾಗೇಂದ್ರಪ್ಪ, ಉಳಿಸಿಟ್ಟಿದ್ದ ಹಣದ ಜೊತೆ ಇನ್ನೊಂದಿಷ್ಟು ಹಣ ಸೇರಿಸಿ ಸಾಲವನ್ನು ತೀರಿಸಿದರು. ನಂತರ ಮೇಘನಾ ಕೂಡ ವೃತ್ತಿ ಬದುಕು ಆರಂಭಿಸಿದಳು. ಇತ್ತ ನಾಗೇಂದ್ರಪ್ಪ ಮತ್ತು ಸುನಂದಮ್ಮ ಅವರಿಗೆ ವಯಸ್ಸಾಗುತ್ತಿತ್ತು. ಅತ್ತ ವೃತ್ತಿ ಬದುಕು ಆರಂಭಿಸಿದ ಮೇಘನಾ ಳಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಒದಗಿಬಂತು. ಮೊದಲಿಗೆ ವಿರೋಧ ವ್ಯಕ್ತಪಡಿ ಸಿದ ಆ ಹಿರಿಯ ಜೀವಗಳು ಕೊನೆಗೆ ಆಕೆಯ ನಿರ್ಧಾರಕ್ಕೆ ತಲೆಬಾಗಲೇಬೇಕಾಯಿತು. ಮೇಘನಾಳಿಗೆ ಅಮೆರಿಕದ ಕಂಪೆನಿಯೊಂದ ರಲ್ಲಿ ಕೆಲಸ ಸಿಕ್ಕಿತು. ವಿಪರ್ಯಾಸ ಎಂಬಂತೆ ಮೇಘನಾಳೊಂದಿಗೆ ಹಿರಿಯ ಮಗಳು ದಿವ್ಯಶ್ರೀ ಕೂಡ ಸಾಗರದಾಚೆ ಬದುಕು ಕಟ್ಟಿಕೊಳ್ಳಲು ಹೋಗಿಬಿಟ್ಟಳು. ಹೆಣ್ಣುಮಕ್ಕಳ ಈ ನಿರ್ಧಾರ, ಹಿರಿಯ ಜೀವಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಯಾವ ಕಾರಣಕ್ಕಾಗಿ ತಾವು ಬೆಂಗಳೂರಿಗೆ ವಲಸೆ ಬಂದೆವೋ ಆ ಉದ್ದೇಶ ಅಕ್ಷರಶಃ ಮಣ್ಣುಪಾಲಾಯಿತು ಎಂದು ಕೊರಗಿದರು.

ಆರು ತಿಂಗಳಾಯಿತು, ಅತ್ತ ಕಡೆಯಿಂದ ಆರೇ ಆರು ಫೋನು ಕರೆ ಕೂಡ ಇಲ್ಲ. ಇತ್ತ ವಯಸ್ಸಾಗುತ್ತಿದ್ದ ನಾಗೇಂದ್ರಪ್ಪ ಮತ್ತು ಸುನಂದಮ್ಮ ಅವರ ಕೆಲಸಕ್ಕೆ ಕುತ್ತು ಬರಲಾರಂಭಿಸಿತು. ಶಿಕ್ಷಣ ಪಡೆದ ಹೆಣ್ಣು ಮಕ್ಕಳು ತಮ್ಮ ಪೋಷಕರ ಸಂಧ್ಯಾಕಾಲದಲ್ಲಿ ಜೊತೆಗಿರಬೇಕಿತ್ತು. ತಮ್ಮ ಬದುಕಿಗಾಗಿ ದುಡಿದ ಆ ಹಿರಿಯ ಜೀವಗಳನ್ನು ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಒಂಟಿ ಮಾಡಿ ತಮ್ಮ ಜೀವನವನ್ನಷ್ಟೇ ನೋಡಿಕೊಂಡ ಅವರಿಬ್ಬರು ಅಮೆರಿಕಾಗೆ ಹೋಗಿ ಸಾಧಿಸಿದ್ದಾದರೂ ಏನನ್ನು? ಬದುಕು ಕಟ್ಟಿಕೊಳ್ಳಲು ಉತ್ತಮ ಉದ್ಯೋಗಗಳನ್ನು ಪಡೆಯಬೇಕು ನಿಜ. ಎಲ್ಲಿಯಾದರೂ ದುಡಿಯಬೇಕು. ಆದರೆ ಹೆತ್ತವರನ್ನು ಮರೆಯುವಷ್ಟು ಇರಬಾರದು.

ಎಲ್ಲಿದ್ದರೆ ಏನು ತಮ್ಮನ್ನು ಸಾಕಿ ಸಲಹಿ ವಿದ್ಯಾಭ್ಯಾಸ ಕೊಡಿಸಿದ ತಂದೆ-ತಾಯಿಗಳನ್ನು ಇಳಿವಯಸ್ಸಿನಲ್ಲಿ ನೋಡಿಕೊಳ್ಳದ ಮೇಲೆ ಆ ಯಶಸ್ಸಿಗೆ ಅರ್ಥವಾದರೂ ಇರಲಿದಿಯೇ? ಇಂತಹದೊಂದು ನಿಜ ಸನ್ನಿವೇಶವನ್ನು ಕೇಳಿ ನನಗೂ ಬೇಸರವಾಗಿದ್ದಂತು ನಿಜ. ಕುಟುಂಬ ನಿರ್ವಹಣೆ ಮಕ್ಕಳ ಮೊದಲ ಜವಾಬ್ದಾರಿ ಯಾದಗಲೇ ಅವರ ಬದುಕಿಗೆ ಅರ್ಥ. ಕೊನೆಯದಾಗಿ ಅನಿಸಿದ್ದು, ಆ ಹಿರಿಯ ಜೀವ ಗಳು ಜೀವನದ ಬಂಡಿಯನ್ನು ಇನ್ನೂ ಎಷ್ಟು ದೂರ ಸಾಗಿಸಬೇಕೋ ತಿಳಿಯುವವರು ಯಾರು? (ಹೆಸರುಗಳನ್ನು ಬದಲಾಯಿಸಲಾಗಿದೆ)

ಆಂದೋಲನ ಡೆಸ್ಕ್

Recent Posts

ಮಹಿಳೆಯನ್ನು ದುರ್ಬಲ ಎಂದು ನೋಡುವ ಕಾಲ ಮುಗಿದಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಪಿರಿಯಾಪಟ್ಟಣ: ಮಹಿಳೆಯರು ಇವತ್ತು ಕಟ್ಟುಪಾಡುಗಳನ್ನು ಒಡೆದು ಮುಂದೆ ಸಾಗುತ್ತಿದ್ದಾರೆ. ಸ್ವಾಭಿಮಾನದ ಜೀವನ ಕಂಡುಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…

21 mins ago

ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿದೀಪ: ಎಂಎಲ್‌ಸಿ ಸಿ.ಎನ್.ಮಂಜೇಗೌಡ

ಮೈಸೂರು: ಸಮಾಜದ ನೈತಿಕ ಬೆಳವಣಿಗೆಗೆ ಮಹನೀಯರ ಆದರ್ಶಗಳೇ ದಾರಿ ದೀಪ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.…

47 mins ago

ಒಂದೇ ವಾರದಲ್ಲಿ 1000 ಕೋಟಿ ಕ್ಲಬ್‌ ಸೇರಿದ ಧುರಂಧರ್-‌2

ಆದಿತ್ಯ ಧರ್‌ ನಿರ್ದೇಶನದ ರಣವೀರ್‌ ಸಿಂಗ್‌ ಅಭಿನಯದ ಧುರಂಧರ್‌ 2 ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ…

58 mins ago

ಮೈಸೂರು | ನೂತನ ಬಸ್‌ ನಿಲ್ದಾಣ ಕಾಮಗಾರಿ ಪರಿಶೀಲಿಸಿದ ಸಚಿವ ಮಹದೇವಪ್ಪ

ಮೈಸೂರು : ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:ಹೆಚ್.ಸಿ ಮಹದೇವಪ್ಪ ಅವರು ಇಂದು(ಮಾರ್ಚ್‌.28) 120 ಕೋಟಿ ರೂ…

1 hour ago

ಮೈಸೂರು | ವರ್ತುಲ ರಸ್ತೆ ಇಕ್ಕೆಲಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೈಸೂರು : ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆ ಕೊರತೆ…

1 hour ago

ನನಗೆ ಐಪಿಎಲ್‌ ಟಿಕೆಟ್‌ ಬೇಡ ಎಂದ ಸುರೇಶ್‌ ಕುಮಾರ್‌

ಬೆಂಗಳೂರು: ಐಪಿಎಲ್‌ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್‌ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌…

1 hour ago