ತೆಲಂಗಾಣದ ವಾರಂಗಲ್‌ನ ರವೀಂದರ್ 2009ರಲ್ಲಿ ಆಗಷ್ಟೇ ಎಂಬಿಬಿಎಸ್ ಮುಗಿಸಿದ್ದರು. ಅದೇ ಹೊತ್ತಿಗೆ ಅವರ ತಂದೆಯ ಶ್ವಾಸ ಕೋಶದ ಕ್ಯಾನ್ಸರ್ ಉಲ್ಬಣಿಸಿ, ಕೀಮೋಥೆರಪಿ ಮಾಡಬೇಕಾಗಿ ಬಂದಿತು. ಆಗ ಒಂದು ಕೀಮೋ ಥೆರಪಿಗೆ 25 ಸಾವಿರ ರೂಪಾಯಿ, ಜೀವ ಉಳಿಸುವ ಒಂದು ಚಿಕ್ಕ ಔಷಧಿಯ ಒಂದು ಸಿಪ್ಪಿಗೆ 15 ಸಾವಿರ ರೂಪಾಯಿ, ಬಡತನದ ಹಿನ್ನೆಲೆ ಯಿಂದ ಬಂದ ಹಾಗೂ ಆಗಷ್ಟೇ ತನ್ನ ವೈದ್ಯಕೀಯ ಬದುಕು ಪ್ರಾರಂಭಿಸಿದ ಡಾ.ರವೀಂದರ್ ತಂದೆಯ ದುಬಾರಿ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ತನ್ನ ಸಹೋದ್ಯೋಗಿಗಳ ಸಹಾಯ ಯಾಚಿಸಬೇಕಾಗಿ ಬಂದಿತು. ಅವರುಗಳು ನೀಡಿದ ಆರ್ಥಿಕ ಸಹಾಯದಿಂದ ತಂದೆಗೆ ಬೇಕಾದ ವೈದ್ಯಕೀಯ ಆರೈಕೆ ಕೊಡಿಸಲಾಗಿ, ಅವರು ಮೂರು ವರ್ಷಗಳ ಕಾಲ ಬದುಕಿದರು.
ಆದರೆ, ಆ ಘಟನೆ ರವೀಂದರ್ ಮೇಲೆ ಅಗಾಧ ಪರಿಣಾಮ ಬೀರಿತು. ವೈದ್ಯನಾದ ತನಗೇ ತನ್ನ ತಂದೆಯ ವೈದ್ಯಕೀಯ ಚಿಕಿತ್ಸೆ ಭರಿಸಲು ಇಷ್ಟು ಕಷ್ಟವಾದರೆ ಇನ್ನು ಇಂತಹ ಗಂಭೀರ ರೂಪದ ಕಾಯಿಲೆಗಳಿಂದ ಬಳಲುವ ಸಾಮಾನ್ಯ ಬಡವರ ಪಾಡೇನು? ಎಂಬ ಚಿಂತೆ ಹಲವು ದಿನಗಳ ಕಾಲ ಅವರನ್ನು ನಿರಂತರ ಕಾಡಿತು. ಕೊನೆಗೆ, ಕೆಲವರಿಗಾದರೂ ಅಂತಹ ದುಬಾರಿ ವೈದ್ಯಕೀಯ ಸೇವೆಗಳು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ತಾನೇ ಏನಾದರೂ ಮಾಡಬೇಕೆಂದು ಆಲೋಚಿಸಿದ ಅವರು ತನ್ನ ಆಲೋಚನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾದರು. ಅವರು ತೆಲಂಗಾಣದ ವಾರಂಗಲ್ಲಿನ ತುರ್ಪುತಾಂಡಾ ಎಂಬಲ್ಲಿ ‘ಸುಶ್ರುತಾ ಫೌಂಡೇಶನ್’ ಎಂಬ ಒಂದು ಸಾಮಾಜಿಕ ಸಂಸ್ಥೆಯನ್ನು ಹುಟ್ಟು ಹಾಕಿ, ಅದರಡಿ ‘ಸುಶ್ರುತಾ ಆಸ್ಪತ್ರೆ’ಯನ್ನು ನಡೆಸತೊಡಗಿದರು.
ತುರ್ಪುತಾಂಡಾ ತೆಲಂಗಾಣದ ಒಂದು ಬುಡಕಟ್ಟು ಪ್ರದೇಶ. ಅಲ್ಲಿನ ಒಂದು ಬಡಕುಟುಂಬದಲ್ಲಿ ಹುಟ್ಟಿದ ರವೀಂದರ್‌ರ ಬಾಲ್ಯದ ದಿನಗಳು ಕಷ್ಟಕರವಾಗಿದ್ದವು. ದಿನಗೂಲಿ ಮಾಡುವ ತಂದೆಯ ಚಿಕ್ಕ ಸಂಪಾದನೆಯಲ್ಲಿ ಕುಟುಂಬ ನಡೆಯಬೇಕಿತ್ತು. ಆದರೆ, ತಾನು ಕಾರ್ಮಿಕನಾದರೂ ಆತ ಬಹಳ ಶ್ರಮಪಟ್ಟು ತಮ್ಮ ಇಬ್ಬರು ಗಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ರವೀಂದರ್ ಶಾಲೆಗೆ ಹೋಗಲು ಪ್ರತಿದಿನ ಎಂಟು ಕಿ.ಮೀ. ದೂರ ನಡೆಯಬೇಕಿತ್ತು. ಮಳೆ, ಗಾಳಿ, ಬಿಸಿಲು ಏನೇ ಇದ್ದರೂ ಶಾಲೆಗೆ ನಡೆದುಕೊಂಡೇ ಹೋಗಬೇಕಿತ್ತು. ಅವನ ಮನೆ ಇದ್ದುದು ನಕ್ಸಲ್ ಚಟುವಟಿಕೆ ಯಿದ್ದ ಪ್ರದೇಶದಲ್ಲಿ. ರವೀಂದರ್ ಕಲಿಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ ಯಾವುದೇ ಸವಲತ್ತುಗಳಿರಲಿಲ್ಲ. ಇಡೀ ಶಾಲೆಗೆ ಒಬ್ಬರೇ ಶಿಕ್ಷಕರು. ತರಗತಿ ಯಲ್ಲಿ ಬೆಂಚು, ಡೆಸ್ತುಗಳಿರಲಿಲ್ಲ. ಮರದ ಕೆಳಗೆ ಪಾಠ ನಡೆಯುತ್ತಿತ್ತು.
ಅಷ್ಟೆಲ್ಲ ಅನನುಕೂಲತೆಗಳಿದ್ದರೂ ರವೀಂದರ್ ಚೆನ್ನಾಗಿ ಕಲಿತರು. ಗುರುತು ಪರಿಚಯವಿಲ್ಲದ ಅನೇಕ ಸಹೃದಯಿಗಳು ಅವರಿಗೆ ಪುಸ್ತಕ, ಚೀಲ, ಹಣ ನೀಡಿ ಪ್ರೋತ್ಸಾಹಿಸಿದರು. ಅವರುಗಳು ನೀಡಿದ ಸಹಾಯದಿಂದ ಗಂಗಾರಾಮ್ ಎಂಬ ಹಳ್ಳಿಯಲ್ಲಿ ಇಂಟರ್‌ಮೀಡಿಯೇಟ್ ಮುಗಿಸಿದರು. ಮುಂದೆ ಹೈದರಾ ಬಾದಿನ ಓಸ್ಥಾನಿಯಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು. ನಂತರ, ವಾರಂಗಲ್ಲಿನ ಕಾಕತಿಯಾ ಮೆಡಿಕಲ್ ಕಾಲೇಜಿನಲ್ಲಿ ಜನರಲ್ ಸರ್ಜರಿ ವಿಷಯದಲ್ಲಿ ಎಂಎಸ್ ಮಾಡಿದರು. ವೈದ್ಯಕೀಯ ಶಿಕ್ಷಣ ವನ್ನು ಮುಗಿಸಿದ ನಂತರ ರವೀಂದರ್ ಮೆಹಬೂಬಬಾದ್‌ನಲ್ಲಿ ಸಹಾಯಕ ಪ್ರೊಫೆಸರ್ ಆಗಿ ತನ್ನ ಔದ್ಯೋಗಿಕ ಬದುಕನ್ನು ಪ್ರಾರಂಭಿಸಿದರು.
ಅಲ್ಲಿ ಅವರು ಸಮಾಜದ ವಿವಿಧ ಸ್ತರಗಳ ಜನ ವೈದ್ಯಕೀಯ ಆರೈಕೆಗಾಗಿ ದಿನಗಟ್ಟಲೆ ಕ್ಯೂಗಳಲ್ಲಿ ನಿಂತು ಬಸವಳಿಯುವುದನ್ನು ಕಾಣುತ್ತಿದ್ದರು. ಒಬ್ಬ ಕೃಷಿಕೂಲಿ ಕಾರ್ಮಿಕ 60 ಕಿ.ಮೀ. ದೂರದ ಊರಿನಿಂದ ಬರುತ್ತಿದ್ದ. ಒಮ್ಮೆ ಅವನು ಆಸ್ಪತ್ರೆಗೆ ಬರಲು ತನ್ನ ಒಂದು ದಿನದ ಕೂಲಿ ಸಂಪಾದನೆಯನ್ನು ಕಳೆದುಕೊಳ್ಳಬೇಕಾಗುತ್ತಿತ್ತು. ಮೊದಲ ದಿನ ಒಪಿಡಿಗೆ ಬಂದಾಗ ಆ ದಿನದ ಕೂಲಿ ಸಂಪಾದನೆ ಕಳೆದುಕೊಂಡ. ಮುಂದೆ, ಸರ್ಜರಿಗಾಗಿ ಬಂದಾಗ ಆತನ ಕೂಲಿ ಸಂಪಾದನೆ ಕಳೆದುಕೊಂಡ. ಮುಂದೆ, ಸರ್ಜರಿಗಾಗಿ ಬಂದಾಗ ಆತನ 3-4 ದಿನಗಳ ಸಂಪಾದನೆಗೆ ಖೋತಾ ಬಿತ್ತು. ಪ್ರತಿ ದಿನ ಇಂತಹ ಬಡಪಾಯಿ ಗಳನ್ನು ನೋಡಿದ ರವೀಂದರ್ ಅವರಿಗಾಗಿ ತಾನು ಏನಾದರೂ ಮಾಡಲೇಬೇಕು ಎಂದುಕೊಳ್ಳುತ್ತಿದ್ದರು. ಅದೆಲ್ಲವನ್ನು ನೋಡುತ್ತಿದ್ದ ರವೀಂದರ್‌ಗೆ ಯಾರೋ ಅಪರಿಚಿತರು ನೀಡಿದ ಸಹಾಯದಿಂದ ತಾನು ಶಿಕ್ಷಣ ಪಡೆದುದು, ತಂದೆಯ ಶ್ವಾಸಕೋಶದ ಕ್ಯಾನ್ಸರಿಗೆ ದುಬಾರಿ ಚಿಕಿತ್ಸೆಗೆ ಹಣಹೊಂದಿಸಲಾಗದೆ ತನ್ನ ಸಹೋದ್ಯೋಗಿಗಳಿಂದ ಸಹಾಯ ಪಡೆದುದು ಎಲ್ಲವೂ ನೆನಪಾಗುತ್ತಿತ್ತು. ಆ ಋಣ ತೀರಿಸಲು ಅವರು 2006ರಲ್ಲಿ ‘ಸುಶ್ರುತಾ ಫೌಂಡೇಷನ್’ ಪ್ರಾರಂಭಿ ಸಿದರು. ಆದರೆ, ತನ್ನಂತೆಯೇ ನಿಸ್ವಾರ್ಥಿಯಾದ ಇತರ ಐದು ಜನ ವೈದ್ಯರು ಅವರೊಂದಿಗೆ ಕೈ ಜೋಡಿಸಿದ ನಂತರ 2016ರಲ್ಲಿ ಅದನ್ನು ರಿಜಿಸಿಗೊಳಿಸಿದರು. ಸುಶ್ರುತಾ ಫೌಂಡೇಶನ್ ಹುಟ್ಟು ಹಾಕಿದಾಗ ರವೀಂದರ್ ತನ್ನ ಹೆಸರನ್ನು ‘ರವೀಂದರ್ ಚೌಕಿದಾರ್’ ಎಂದು ಬದಲಾಯಿಸಿ ಕೊಂಡರು. ಚೌಕಿದಾ ಅಂದರೆ ಇತರರನ್ನು ಕಾಯುವವನು ಎಂಬರ್ಥದಲ್ಲಿ ಅವರು ಅದನ್ನು ತನ್ನ ಎರಡನೇ ಹೆಸರನ್ನಾಗಿ ಮಾಡಿಕೊಂಡರು.
ಡಾ.ರವೀಂದರ್ ಚೌಕಿದಾರ್ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡಿದ ಬಳಿಕ ಸುಶ್ರುತಾ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಸುಶ್ರುತಾ ಆಸ್ಪತ್ರೆಯಲ್ಲಿ ಡಾ.ರವೀಂದರ್ ಚೌಕಿದಾರ್ ರೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ರಿಯಾಯಿತಿ ದರದಲ್ಲಿ ಅಥವಾ ಸಂಪೂರ್ಣ ಉಚಿತವಾಗಿ ಸರ್ಜರಿಗಳನ್ನು ಮಾಡುತ್ತಾರೆ. ಬೇರೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚಾಗುವ ಸರ್ಜರಿಗಳು ಸುಶ್ರುತಾದಲ್ಲಿ ಅದರ ಕಾಲು ಭಾಗಕ್ಕಿಂತಲೂ ಕಡಿಮೆ ದರದಲ್ಲಿ ಮಾಡುತ್ತಾರೆ. ಸುಶ್ರುತಾದಲ್ಲಿ ನಡೆಯುವ ಸರ್ಜರಿ ಮತ್ತು ವೈದ್ಯಕೀಯ ಆರೈಕೆಗಳ ಗುಣಮಟ್ಟದಲ್ಲಿ ಯಾವುದೇ ಕೊರತೆಯಿರುವುದಿಲ್ಲ. ರುಕ್ಕಿಣಮ್ಮ ಎಂಬ ಒಬ್ಬರು ವಯಸ್ಕ ಮಹಿಳೆಗೆ ಹೊಟ್ಟೆಯಲ್ಲಿ 12 ಕೆ.ಜಿ. ಗೆಡ್ಡೆ ಬೆಳೆದಿತ್ತು. ಆಕೆಯ ಕುಟುಂಬದವರು ಹೈದರಾಬಾದಿನ ಎಲ್ಲ ಆಸ್ಪತ್ರೆಗಳಿಗೆ ತಡಕಾಡಿದರೂ ಅದನ್ನು ತೆಗೆಸಲು ಸಾಧ್ಯವಾಗಲಿಲ್ಲ. ಏಕೆಂದರೆ, ಸರ್ಜರಿಗೆ ಬೇಕಾದ ಏಳು ಲಕ್ಷ ರೂಪಾಯಿಗಳನ್ನು ಹೊಂದಿಸಲು ಆಕೆಯ ಬಡ ಕುಟುಂಬಕ್ಕೆ ಸಾಧ್ಯವಿರಲಿಲ್ಲ. ಆಗ ಆಕೆ ಸುಶ್ರುತಾಕ್ಕೆ ಬಂದು, ಅಲ್ಲಿ ಐಸಿಯೂ ಮತ್ತು ಔಷಧಿಗೆ ಖರ್ಚಾಗಿ ಕೇವಲ 70 ಸಾವಿರ ರೂ. ಕೊಟ್ಟು ಸರ್ಜರಿ ಮಾಡಿಸಿಕೊಂಡು ಗುಣವಾದರು.
ಡಾ.ರವೀಂದರ್ ಚೌಕಿದಾರ್‌ರ ತಂದೆಗೆ ತಂಬಾಕು ಜಗಿಯುವ ಚಟವಿತ್ತು. ಹಳ್ಳಿಗಳಲ್ಲಿ ತಂಬಾಕು ಜಗಿಯುವ ಚಟ ಹವ್ಯಾಹತವಾಗಿರುವುದನ್ನು ತಿಳಿದಿದ್ದ ಅವರು ಪ್ರತಿ ವಾರಾಂತ್ಯ ಹಳ್ಳಿಗಳಲ್ಲಿ ವೈದ್ಯಕೀಯ ಕ್ಯಾಂಪ್ ಹಾಗೂ ಜಾಗೃತಿ ಕ್ಯಾಂಪ್‌ಗಳನ್ನು ನಡೆಸಿ ಜನರಿಗೆ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಸುಶ್ರುತಾ ಫೌಂಡೇಶನ್ ಬಡಬಗ್ಗರಿಗೆ ವೈದ್ಯಕೀಯ ನೆರವು ನೀಡುವುದರ ಜೊತೆಗೆ ವೈದ್ಯಕೀಯ ಶಿಕ್ಷಣ ಪಡೆಯುವ ಬಡ ಕುಟುಂಬಗಳ ಮಕ್ಕಳಿಗೆ ಧನ ಸಹಾಯವನ್ನೂ ಮಾಡುತ್ತದೆ. ಹಣವಿಲ್ಲ ಎಂಬ ಕಾರಣಕ್ಕೆ ಯಾರೂ ಕಾಯಿಲೆಗಳಿಂದ ಸಾಯಬಾರದು ಎನ್ನುವ 41 ವರ್ಷ ಪ್ರಾಯದ ಡಾ.ರವೀಂದರ್ ಚೌಕಿದಾರ್ ಕಳೆದ ಹದಿನೈದು ವರ್ಷಗಳಲ್ಲಿ ಸಾವಿರಾರು ಬಡರೋಗಿಗಳಿಗೆ ರಿಯಾಯಿತಿ ದರದಲ್ಲಿ ಹಾಗೂ ಸಂಪೂರ್ಣ ಉಚಿತವಾಗಿ ಸರ್ಜರಿಗಳನ್ನು ನಡೆಸಿದ್ದಾರೆ.
ಸುಶ್ರುತಾ ಫೌಂಡೇಶನ್ ತನ್ನ ಸಾಮಾಜಿಕ ಚಟುವಟಿಕೆಗಳಿಗೆ ಈವರೆಗೂ ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸಿಲ್ಲ. ಅದರ ಎಲ್ಲ ಖರ್ಚು ವೆಚ್ಚಗಳು ಡಾ.ರವೀಂದರ್ ಹಾಗೂ ಅವರ ಜೊತೆಗಿರುವ ಇತರ ಐದು ಜನರು ತಿಂಗಳ ಸಂಬಳದಲ್ಲಿ ತೆಗೆದಿಡುವ ಶೇ.20 ಹಣದಿಂದ ನಡೆಯುತ್ತದೆ.
ತುಪುತಾಂಡಾ ತೆಲಂಗಾಣದ ಒಂದು ಬುಡಕಟ್ಟು ಪ್ರದೇಶ. ಅಲ್ಲಿನ ಒಂದು ಬಡಕುಟುಂಬದಲ್ಲಿ ಹುಟ್ಟಿದ ರವೀಂದರ್‌ರ ಬಾಲ್ಯದ ದಿನಗಳು ಕಷ್ಟಕರವಾಗಿದ್ದವು. ದಿನಗೂಲಿ ಮಾಡುವ ತಂದೆಯ ಚಿಕ್ಕ ಸಂಪಾದನೆಯಲ್ಲಿ ಕುಟುಂಬ ನಡೆಯಬೇಕಿತ್ತು. ಆದರೆ, ತಾನು ಕಾರ್ಮಿಕನಾದರೂ ಆತ ಬಹಳ ಶ್ರಮಪಟ್ಟು ತಮ್ಮ ಇಬ್ಬರು ಗಂಡು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗುವಂತೆ ನೋಡಿಕೊಂಡರು. ರವೀಂದರ್ ಶಾಲೆಗೆ ಹೋಗಲು ಪ್ರತಿದಿನ ಎಂಟು ಕಿ.ಮೀ. ದೂರ ನಡೆಯಬೇಕಿತ್ತು. ಮಳೆ, ಗಾಳಿ, ಬಿಸಿಲು ಏನೇ ಇದ್ದರೂ ಶಾಲೆಗೆ ನಡೆದುಕೊಂಡೇ ಹೋಗಬೇಕಿತ್ತು.
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…
ಬೆಳಗಾವಿ: ಸುವರ್ಣ ಸೌಧದಲ್ಲಿ ಗುರುವಾರ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ…
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ…
ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ…
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…