ಎಡಿಟೋರಿಯಲ್

ವಾರೆನೋಟ – ಮೊಟ್ಟೆಯೊಂದಿಗೆ ರಾಷ್ಟ್ರಧ್ವಜ ಮುಖಾಮುಖಿ!

‘ಏಯ್ ರಾಷ್ಟ್ರಧ್ವಜ ಅಲ್ವಾ ನೀನು? ಯಾಕೋ ಹೀಗಾಗಿದ್ದೀಯಾ? ಮೊನ್ ಮೊನ್ನೆ ಅದೇನ್ ಕಲರ್‌ಫುಲ್ಲಾಗಿದ್ದೆ? ಅದೆಷ್ಟು ಪ್ರಜ್ವಲಿಸುತ್ತಿದ್ದೆ. ಎಲ್ಲೆಲ್ಲೂ ನಿಂದೇ ಹವಾ ಇತ್ತಲ್ಲೋ? ಯಾಕೋ ಹಿಂಗಾದೆ? ಹಿಂದೆಂದೂ ನಿನ್ನ ಈ ಸ್ಥಿತೀಲಿ ನೋಡಿರಲಿಲ್ಲ ಕಣೋ! ನನ್ ಸ್ಥಿತಿಗೂ ನಿನ್ ಸ್ಥಿತಿಗೂ ಏನೂ ವ್ಯತ್ಯಾಸಾನೇ ಇಲ್ಲದಂಗಾಗೋಗಿದೆಯಲ್ಲೋ?’ ಎಂದು ಸಾಂತ್ವನಭರಿತ ದನಿಯಲ್ಲಿ ಕೇಳಿತು ಮೊಟ್ಟೆ.

ರಾಷ್ಟ್ರಧ್ವಜಕ್ಕೆ ಶಾನೆ ಬೇಜಾರಾಯ್ತು! ತಾನು ಈ ಸ್ಥಿತಿಲೀ ಇದ್ದೀನಲ್ಲಾ ಎಂಬ ಕಾರಣ ರಾಷ್ಟ್ರದ್ವಜಕ್ಕೆ ಬೇಜಾರಾಗಲಿಲ್ಲ, ಮೊಟ್ಟೆಯಂತಾ ಮೊಟ್ಟೆ ಕೂಡಾ ನನ್ ಬಗ್ಗೆ ಮಾತಾಡುವಂತಾಯಿಲ್ಲ ಆಂತಾ ಬೇಜಾರಾಯ್ತು! ಆದರೂ ಸುಧಾರಿಸಿಕೊಂಡ ರಾಷ್ಟ್ರಧ್ವಜ,
‘ ಏನ್ ಮಾಡೋದಪ್ಪಾ ಮೊಟ್ಟೆ, ಕಾಲ ಬದಲಾದಂಗೆ ನಾವೂ ಬದಲಾಗಬೇಕು… ಬದಲಾಗದಿದ್ದರೆ ನಮಗೆ ಗೌರವಾನೇ ಇರಲ್ಲಾ ನೋಡು, ಮೊದಲೆಲ್ಲಾ ನನ್ನುನ್ನಾ ಯಾರ್‌ಬೇಕು ಅಂದ್ರೆ ಅವ್ರೆಲ್ಲಾ ಮುಟ್ಟಂಗಿರಲಿಲ್ಲ, ಕಟ್ಟಂಗಿರಲಿಲ್ಲ.. ಅದಕ್ಕೂ ಒಂದು ರೀತಿ ನೀತಿ ರಿವಾಜು ಅಂತಾ ಇತ್ತು. ಇವತ್ತುಂದಿನಾ ನನ್ನುನ್ನಾ ಎಲ್ರೂ ಕಟ್ಟಬಹುದು, ಎಲ್ರೂ ಹಾರಿಸಬಹುದು ಅಂತಾ ಕಾನೂನೇ ಮಾಡಿಬಿಟ್ಟವ್ರೆ, ಏನ್ ಮಾಡೋಕೆ ಆಗುತ್ತಪ್ಪಾ ?’ಅಂತಾ ಹೇಳಿತು.

ರಾಷ್ಟ್ರದ್ವಜಕ್ಕೆ ನಿಜಕ್ಕೂ ಬೇಜಾರಾಗಿದೆ ಅಂತಾ ಮೊಟ್ಟೆಗೆ ಸಂಕಟವಾಯ್ತು. ‘ನೋಡು ರಾಷ್ಟ್ರದ್ವಜಾ.. ಒಂದು ದಿನ ನಿನ್ನ ಹಾರಿಸಿ ಮೆರೆಸಿದವರು ಮಾರನೇ ದಿನಾ ನಿನ್ನನ್ನ ಅಷ್ಟೇಗೌರವಯುತವಾಗಿ ಇಳಿಸಿ ಮೆರೆಸಬೇಕಿತ್ತು. ಆದರೆ, ಇಳಿಸಿದ ನಂತರ ನಿನ್ನನ್ನ ಎಲ್ಲಿ ಹೇಗೆ ವಿಲೇವಾರಿ ಮಾಡುವುದು ಅನ್ನೋದೇ ಗೊತ್ತಾಗದೇ ಈ ಪರಿಸ್ಥಿತಿ ಬಂದಿದೆ ಅನಿಸುತೆ’್ತ ಅಂತಾ ಮೊಟ್ಟೆ ವಿಶ್ಲೇಷಿಸಿತು.

‘ನೀನ್ ಹೇಳೋದೇನೋ ನಿಜಾನಪ್ಪಾ.. ಇವತ್ತುಂದಿನಾ ಪರಿಸರ ಕೂಡ ನನ್ನ ಬಗ್ಗೆ ಏನೇನೋ ಮಾತನಾಡುತ್ತೆ.. ಮೊದಲೆಲ್ಲ ನನ್ನಿಂದ ಪ್ರಾಬ್ಲಮ್ಮೆ ಇರಲಿಲ್ವಂತೆ. ಅದೂ ನಿಜಾ ಅನ್ನು.. ಮೊದಲೆಲ್ಲ ನನ್ನುನ್ನು ಹತ್ತಿ ಬಟ್ಟೇಲೇ ಚಕರದಲ್ಲೇ ನೇಯಬೇಕು ಅಂತಾ ಕಾನೂನು ಇತ್ತು. ಗೌರವಯುತವಾಗಿ ನೇಯಬೇಕು, ಗೌರವಯುತವಾಗಿ ಮಡಿಸಬೇಕು, ಗೌರವಯುತವಾಗಿ ಹಾರಿಸಬೇಕು ಅಂತಾ ಇತ್ತು. ಇವತ್ತುಂದಿನಾ ಹತ್ತಿ ಗಿತ್ತಿ ಅಂತೇನೂ ಇಲ್ಲಾ.. ಪಾಲಿಸ್ಟರೂ ಒಕೆ ಪ್ಲಾಸ್ಟಿಕ್ಕೂ ಓಕೆ ಆಗಿಬಿಟ್ಟಿದೆ. ಅದುಕ್ಕೆ ಪರಿಸರ ಕೂಡಾ ನನ್ನ ಬಗ್ಗೆ ತಕರಾರು ತಗೀತಿದೆ..’ ಅಂತಾ ರಾಷ್ಟ್ರದ್ವಜ ತನ್ನ ಸಂಕಟ ಹೇಳಿತು.

ಮೊಟ್ಟೆಗೆ ಆಶ್ಚರ್ಯ. ಅಲ್ಲಾ ಮಾರಾಯ ನಿನ್ ಪಾಲಿಸ್ಟರ್ ಅದ್ರೇನು, ಪಾಲಿಥೀನ್ ಆದ್ರೆನು? ಪರಿಸರ ಯಾಕೆ ತಕರಾರು ಮಾಡಬೇಕು? ಅಂತ ಪ್ರಶ್ನಿಸಿತು.
‘ಅಯ್ಯೋ ಅದೊಂದು ದೊಡ್ಡ ಕಥೆ. ಮೊದಲೆಲ್ಲಾ ನನ್ನ ಬರೀ ಹತ್ತೀಲೀ ಮಾಡ್ತಾ ಇದ್ರಲ್ವಾ ? ಹತ್ತಿ ಡಿಗ್ರೇಡಬಲ್, ಅಂದರೆ ಮಣ್ಣಿನಲ್ಲಿ ತ್ವರಿತವಾಗಿ ಕರಗುವ ವಸ್ತು. ಪರಿಸರಕ್ಕೆ ಮಣ್ಣಿನಲ್ಲಿ ಕರಗುವ ವಸ್ತುಗಳೆಲ್ಲಾ ಅದರ ಕಣ್ಮಣಿಗಳೇ ಆದರೆ, ಈ ಪಾಲಿಸ್ಟರ್, ಪಾಲಿಥೀನ್ ಎಲ್ಲಾ ಮಣ್ಣಿನಲ್ಲಿ ಕರಗೋದಿಲ್ಲವಲ್ಲಾ.. ಅದುಕ್ಕೆ ಪರಿಸರದ್ದು ತರಕಾರು..’ ಅಂತಾ ವಿವರಿಸಿತು.

‘ಹೌದೇನೋ ರಾಷ್ಟ್ರದ್ವಜ. ನಂಗೆ ಈ ವಿಷ್ಯಾ ಗೊತ್ತೇ ಇರಲಿಲ್ಲ. ಹಿಂದಿನವರಿಗೆ ಬುದ್ಧಿ ಇತ್ತು. ಅದುಕ್ಕೆ ಬರೀ ಹತ್ತಿ ಬಟ್ಟೇಲೇ ನಿನ್ನ ತಯಾರಿಸ್ತಾ ಇದ್ರು. ಜತೆಗೆ ನಿನ್ ಗೌರವ ಅಂದ್ರೆನು ಕಮ್ಮೀನಾ? ನಿನ್ನ ಹೆಸ್ರಲ್ಲೇ ರಾಷ್ಟ್ರಾನೂ ಇದೆ, ಅಂದ್ರೆ ಒಂದು ಹಿಡಿ ಹೆಚ್ಚು ಗೌರವ ಇದ್ದೆ ಇರುತ್ತಲ್ವಾ? ಆದ್ರೂ ಯಾಕೆ ನಿನ್ನನ್ನ ಎಲ್ರೂ ಬಳ್ಸೊಥರಾ ಮಾಡಿದ್ರು?’ ಅಂತಾ ಕೇಳಿತು ಮೊಟ್ಟೆ!

‘ಅದುನ್ನ ‘ಫ್ಲ್ಯಾಗ್‌ಫ್ಲೋಮಸಿ’ ಅಂತಾರೆ.. ಇವತ್ತುಂದಿನಾ ದೇಶದಲ್ಲಿ ಏನೇನೋ ಪ್ರಾಬ್ಲಂ ಇದೆ ಅಂತಾ ಜನಾ ಮಾತಾಡ್ಕೊತಾ ಇರ್ತಾರೆ ಅನ್ಕೋ.. ಅವರುನ್ನಾ ಪ್ರಾಬ್ಲಮ್ ಗಳ ಬಗ್ಗೆ ಮಾತಾಡದಂತೆ ಡೈವರ್ಟ್ ಮಾಡಬೇಕು ಅನ್ಕೋ. ಆಗ ಸಾಮಾನ್ಯ ವಿಷ್ಯ ಹೇಳಿದ್ರೆ ಆಗೊಲ್ಲ.. ಸೆಂಟಿಮೆಂಟಲ್ ವಿಷ್ಯ ತರ್ಬೇಕು.. ನೋಡು ನಾನು ಅಂದ್ರೆ ನ್ಯಾಷನಲ್ ಫ್ಲ್ಯಾಗು.. ಅಂದ್ರೆ ಸೆಂಟಿಮೆಂಟಿನ ವಿಷ್ಯ.. ಎಲ್ರೂ ನಿಮ್ಮ್ ನಿಮ್ಮ್ ಮನೇಲೀ ಹಾರಿಸಿ ಅಂದರೆ, ಜನರು ಏನೋ ಹೊಸದಾಗಿ ಇದೆಯಲ್ಲಪ್ಪಾ.. ಸ್ಕೂಲಲ್ಲಿ ಆಫೀಸಲ್ಲಿ, ವಿಧಾನಸೌಧದಲ್ಲಿ, ಕೋರ್ಟಲ್ಲಿ, ಪಾರ್ಲಿಮೆಂಟಲ್ಲಿ ಹಾರಿಸುತ್ತಿದ್ದುದನ್ನಾ ನಾವು ಹಾರಿಸ್‌ಬಹುದು ಅಂತಾ ಜನಾ ಖುಷಿ ಆಗ್ತಾರೆ.. ಒರಿಜಿನಲ್ ಪ್ರಾಬ್ಲಮ್ ಮರೀತಾರೆ… ಡಿಪ್ಲೊಮಸಿ ಥರಾ ಇದುನ್ನೇ ‘ಫ್ಲ್ಯಾಗ್‌ಫ್ಲೋಮಸಿ’ ಅಂತಾರೆ’ ಅಂತಾ ವಿವರಿಸಿತು ರಾಷ್ಟ್ರಧ್ವಜ.

‘ಏನೋಪಾ ಜನಾ ಹಿಂಗೆಲ್ಲಾ ಮಾಡ್ತಾರೆ ಅಂತಾ ನಂಗೆ ಗೊತ್ತೆ ಇರಲಿಲ್ಲ’ ಅಂತಾ ಮೊಟ್ಟೆ ಮುಗ್ದವಾಗಿ ಹೇಳಿತು.

‘ಲೇ ಮೊಟ್ಟೆ ನಿಂಗೆ ಗೊತ್ತಿಲ್ದೇ ಇರೋ ವಿಷ್ಯಾ ಏನಿದೆಯೋ? ರಿಯಲ್ ಇಷ್ಯೂ ಡೈವರ್ಟ್ ಮಾಡಬೇಕು ಅಂದ್ರೆ ನಾನೇ ಬೇಕಾಗಿಲ್ಲಪ್ಪಾ.. ನೀನೇ ಸಾಕು’ ಅಂದಿತು ರಾಷ್ಟ್ರದ್ವಜ.
ಮೊಟ್ಟೆಗೆ ಮತ್ತೆ ಅಚ್ಚರಿ! ‘ಅರೇ ನನ್ನೂ ಇಷ್ಯೂ ಡೈವರ್ಟ್ ಮಾಡೋಕೆ ಬಳುಸ್ತಾರಾ? ವಾಹ್ಹ್ !ನಂದೂ ಹೆಚ್ಚುಕಮ್ಮಿ ಈ ವಿಷಯದಲ್ಲಿ ನಿಂದೇ ಲೆವೆಲ್ಲು ಅನೂ’್ನ ಅಂತಾ ಖುಷಿ ಪಟ್ಟಿತು ಮೊಟ್ಟೆ.

‘ಲೆವೆಲ್ಲ್ ಗಿವೆಲ್ಲು ಗೊತ್ತಿಲ್ಲಪಾ.. ಆದ್ರೆ, ನಿನ್ನನ್ನ ಎಸೆದ್ರೆ ಸಾಕು ಇಷ್ಯೂ ಡೈವರ್ಟ್ ಆಗಿಬಿಡುತ್ತೆ.. ನೀನ್ ಬಿದ್ ಕಡೆ ಎಲ್ಲಾ ಗಲೀಜಾಗುತ್ತದೆ. ಒರಿಜಿನಲ್ ಇಷ್ಯೂ ಹೋಗಿ.. ಈ ಗಲೀಜಿನ ಇಷ್ಯುನೇ ಡಿಸ್ಕಸ್ ಆಗುತ್ತೆ’ ಅಂತಾ ರಾಷ್ಟ್ರದ್ವಜ ವಿವರಿಸಿತು.

ಆದ್ರೂ ಮೊಟ್ಟೆಗೆ ಖುಷಿಯೋ ಖುಷಿ!
‘ಏನೇ ಹೇಳು ರಾಷ್ಟ್ರಧ್ವಜ, ನಿನ್ನುನ್ನಾ ಇನ್ನೂ ಚನ್ನಾಗಿ ನೋಡ್ಕೊಬಹುದಿತ್ತಪಾ.. ನಿನ್ನ ಪರಿಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ.. ನನ್ನ ಥರಾನೇ ಆಗಿಬಿಟ್ಟಿದ್ದಿಯಾ’ ಅಂದಿತು.

‘ಇಲ್ಲಪ್ಪಾ ..ಇದೆಲ್ಲಾ ಬಿಗಿನಿಂಗು.. ಮುಂದೆ ಬರ್ತಾ ಬರ್ತಾ ನನ್ನುನ್ನೂ ಜನಾ ಏರಿಸಿ ಹಾರಿಸುವಾಗ ಕೊಡೋ ಗೌರವಾನಾ ಇಳಿಸಿದಾಗಲೂ ಕೊಡ್ತಾರೆ. ಅದುಕ್ಕೆಲ್ಲಾ ಕಾಲ ಕೂಡ್ ಬರಬೇಕು’ ಅಂತಾ ತನಗೇ ತಾನೇ ಸಮಾಧಾನ ಮಾಡಿಕೊಂಡಿತು ರಾಷ್ಟ್ರಧ್ವಜ.

ಮೊಟ್ಟೆ ಮಾತ್ರ ಮುಸಿ ಮುಸಿ ನಗ್ತಾನೇ ಇತ್ತು!

-‘ಅಷ್ಟಾವಕ್ರಾ’

andolanait

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago